ಕಮರ್ಷಿಯಲ್ ವೆಹಿಕಲ್ ಥರ್ಡ್-ಪಾರ್ಟಿ ಇನ್ಶೂರೆನ್ಸ್

ಕಮರ್ಷಿಯಲ್ ವೆಹಿಕಲ್ ಗಳಿಗೆ ಆನ್ಲೈನ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆಯಿರಿ

Third-party premium has changed from 1st June. Renew now

ಕಮರ್ಷಿಯಲ್ ವೆಹಿಕಲ್  ಥರ್ಡ್-ಪಾರ್ಟಿ ಇನ್ಶೂರೆನ್ಸ್ ಒಂದು ಕಸ್ಟಮೈಜ್ ಮಾಡಲಾದ ಮೋಟಾರ್ ಪಾಲಿಸಿಯಾಗಿದ್ದು, ಇದರ ಅಗತ್ಯ ಟ್ರಕ್ ಗಳು, ಶಾಲಾ ಬಸ್ಸುಗಳು, ಆಟೋ-ರಿಕ್ಷಾಗಳು ಹಾಗೂ ಟ್ಯಾಕ್ಸಿ ಇತ್ಯಾದಿಗಳಂತಹ ವಾಣಿಜ್ಯ ಉದ್ದೇಶಗಳಿಗೆ ಉಪಯೋಗಿಸಲ್ಪಡುವ ವಾಹನಗಳಿಗೆ ಇರುತ್ತದೆ. ಇದು ನಿಮ್ಮ ವ್ಯವಹಾರವನ್ನು ಥರ್ಡ್- ಪಾರ್ಟಿ ವಾಹನ, ಆಸ್ತಿ ಅಥವಾ ವ್ಯಕ್ತಿಗೆ ಆದ ಹಾನಿಗಳಿಂದ ಉಂಟಾಗುವ ನಷ್ಟಗಳಿಂದ ಸಂರಕ್ಷಿಸುತ್ತದೆ.

ಭಾರತದಲ್ಲಿ, ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ಕನಿಷ್ಟ ಪಕ್ಷ ಒಂದು ಥರ್ಡ್-ಪಾರ್ಟಿ ಕಮರ್ಷಿಯಲ್ ವೆಹಿಕಲ್  ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಉದಾಹರಣೆಗೆ, ನೀವು ಚಲಾಯಿಸುತ್ತಿರುವಾಗ, ನಿಮ್ಮ ಟ್ರಕ್ ರಸ್ತೆಯಲ್ಲಿದ್ದ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆದು ಹಾನಿ ಉಂಟುಮಾಡಿತು ಎಂದು ಭಾವಿಸಿ, ಇಂತಹ ಸಂದರ್ಭದಲ್ಲಿ, ನಿಮ್ಮ ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಹಾನಿಗೊಳಗಾದ ವಾಹನದ ನಷ್ಟಗಳನ್ನು ಕವರ್ ಮಾಡುತ್ತದೆ.

ಡಿಜಿಟ್ ನ ಕಮರ್ಷಿಯಲ್ ವೆಹಿಕಲ್ ಗಳಿಗಾಗಿ ಇರುವ ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?

ಏನೆಲ್ಲಾ ಕವರ್ ಆಗಿರುವುದಿಲ್ಲ?

ನಾವು ಪಾರದರ್ಶಕತೆಯ ಮೇಲೆ ನಂಬಿಕೆಯಿಟ್ಟಿದ್ದೇವೆ. ಆದ್ದರಿಂದ, ಏನೆಲ್ಲಾ ಕವರ್ ಆಗಿರುತ್ತದೆ ಎಂದು ನೀವು ತಿಳಿದಿದ್ದರೂ, ನಿಮ್ಮ ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದೂ ನೀವು ತಿಳಿದಿರಬೇಕು. ಹೀಗಿರುವಾಗ, ಕ್ಲೈಮ್ ಸಮಯದಲ್ಲಿ ನಿಮಗೆ ಆಶ್ಚರ್ಯಗಳು ಕಾದಿರುವುದಿಲ್ಲ. ಇಂತಹ ಕೆಲೆ ಸಂದರ್ಭಗಳನ್ನು ಇಲ್ಲಿ ನೀಡಲಾಗಿದೆ:

ಸ್ವಂತ ವಾಹನಗಳಿಗಾದ ಹಾನಿ

ದುರಾದೃಷ್ಟವೆಂದರೆ, ಒಂದು ಕಮರ್ಷಿಯಲ್ ಇನ್ಶೂರೆನ್ಸ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ನಿರ್ದಿಷ್ಟವಾಗಿ ಥರ್ಡ್-ಪಾರ್ಟಿಗಾಗಿ ಇರುವ ಪಾಲಿಸಿಯಾಗಿರುವ ಕಾರಣ ನಿಮ್ಮ ಸ್ವಂತ ವಾಹನಕ್ಕಾದ ಯಾವುದೇ ಹಾನಿಯನ್ನು ಕವರ್ ಮಾಡುವುದಿಲ್ಲ.

ಕುಡಿದ ಮತ್ತಿನಲ್ಲಿ, ಅಥವಾ ಮಾನ್ಯ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದು

ಕ್ಲೈಮ್ ಸಮಯದಲ್ಲಿ, ಚಾಲಕ-ಮಾಲಕ ಇನ್ಶೂರ್ ಆಗಿರುವ ವಾಹನವನ್ನು ಮಾನ್ಯವಾದ ಲೈಸನ್ಸ್ ಇಲ್ಲಎ ಅಥವಾ ಕುಡಿತದ ಮತ್ತಿನಲ್ಲಿ ಚಲಾಯಿಸುತ್ತಿದ್ದರು ಎಂದು ಗೊತ್ತಾದರೆ, ಅಂತಹ ಕ್ಲೈಮ್ ಅನ್ನು ಸ್ವೀಕರಿಸಲಾಗುವುದಿಲ್ಲ. 

ಮಾನ್ಯ ಡ್ರೈವಿಂಗ್ ಲೈಸನ್ಸ್ದಾರನ ಅನುಪಸ್ಥಿತಿಯಲ್ಲಿ ವಾಹನ ಚಲಾಯಿಸುವುದು

ನೀವು ಲರ್ನರ್ಸ್(ಕಲಿಯುವವರ) ಲೈಸನ್ಸ್ ಹೊಂದಿದ್ದು ಮುಂದಿನ ಪ್ರಯಾಣಿಕ ಸೀಟಿನಲ್ಲಿ ಮಾನ್ಯ ಡ್ರೈವಿಂಗ್ ಲೈಸನ್ಸ್ದಾರನಿಲ್ಲದೆಯೇ ವಾಹನ ಚಲಾಯಿಸುತ್ತಿದ್ದರೆ - ಅಂತಹ ಸಂದರ್ಭಗಳಲ್ಲಿ ನೀವು ಮಾಡಿದ ಕ್ಲೈಮ್ ಗಳನ್ನು ಸ್ವೀಕರಿಸಲಾಗುವುದಿಲ್ಲ. 

ಡಿಜಿಟ್ ನ ಕಮರ್ಷಿಯಲ್ ವೆಹಿಕಲ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಠ್ಯಗಳು

ಪ್ರಮುಖ ವೈಶಿಷ್ಠ್ಯಗಳು ಡಿಜಿಟ್ ಲಾಭ
ಥರ್ಡ್-ಪಾರ್ಟಿಗಾದ ವೈಯಕ್ತಿಕ ಹಾನಿ ಅನಿಯಮಿತ ಹೊಣೆಗಾರಿಕೆ
ಥರ್ಡ್-ಪಾರ್ಟಿಗಾದ ಆಸ್ತಿ ಹಾನಿ 7.5 ಲಕ್ಷಗಳವರೆಗೆ
ವೈಯಕ್ತಿಕ ಅಪಘಾತ ಕವರ್ ₹330
ಬೆಂಕಿಯ ಕವರ್ ಥರ್ಡ್-ಪಾರ್ಟಿ ಪಾಲಿಸಿಯೊಂದಿಗೆ ಎಂಡೋಸ್ಮೆಂಟ್ ರೂಪದಲ್ಲಿ ಲಭ್ಯ(20 ಟನ ಗಳಿಗಿಂತ ಹೆಚ್ಚಿನ ಟನ್ ಸಾಮರ್ಥ್ಯವನ್ನು ಹೊಂದಿರುವ ವಾಹನಗಳಿಗೆ ಮಾತ್ರ)
ಹೆಚ್ಚುವರಿ ಕವರೇಜ್ ಪಿಎ ಕವರ್ ಗಳು, ಕಾನೂನಾತ್ಮಕ ಹೊಣೆಗಾರಿಕೆಯ ಕವರ್ ಹಾಗೂ ವಿಶೇಷ ಹೊರಗಿಡುವಿಕೆಗಳು, ಇತ್ಯಾದಿ.

ಸರಕು ಸಾಗಿಸುವ ವಾಹನಗಳ ಪ್ರೀಮಿಯಂ - ಖಾಸಗಿ ಕ್ಯಾರಿಯರ್ ಗಳು (3 ಚಕ್ರ ವಹನಗಳನ್ನು ಹೊರತುಪಡಿಸಿ)

ಎಂಜಿನ್ ಸಾಮರ್ಥ್ಯ ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ)
7500 ಕೆಜಿ ಮೀರದೆ ₹16,049
7500 ಕೆಜಿಗಿಂತ ಹೆಚ್ಚು ಆದರೆ 12,000 ಕೆಜಿ ಮೀರದೆ ₹27,186
12,000 ಕೆಜಿಗಿಂತ ಹೆಚ್ಚು ಆದರೆ 20,000 ಕೆಜಿ ಮೀರದೆ ₹35,313
20,000 ಕೆಜಿಗಿಂತ ಹೆಚ್ಚು ಆದರೆ 40,000 ಕೆಜಿ ಮೀರದೆ ₹43,950
40,000 ಕೆಜಿಯನ್ನು ಮೀರಿದರೆ ₹44,242

ಕೃಷಿ ಉಪಯೋಗಿ ಟ್ರ್ಯಾಕ್ಟರ್ ಗಳ ಥರ್ಡ್-ಪಾರ್ಟಿ ಪ್ರೀಮಿಯಂ

ಎಂಜಿನ್ ಸಾಮರ್ಥ್ಯ ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ)
6 ಎಚ್ ಪಿ ₹910

ಆಟೋ-ರಿಕ್ಷಾ ಹಾಗೂ ಇ-ರಿಕ್ಷಾಗಳ ಥರ್ಡ್-ಪಾರ್ಟಿ ಪ್ರೀಮಿಯಂ

ಸೆಗ್ಮೆಂಟ್ ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ)
ಆಟೋ-ರಿಕ್ಷಾ ₹2,539
ಇ-ರಿಕ್ಷಾ ₹1,648

ಬಸ್ಸುಗಳ ಥರ್ಡ್-ಪಾರ್ಟಿ ಪ್ರೀಮಿಯಂ

ಸೆಗ್ಮೆಂಟ್ ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ)
ಶಿಕ್ಷಣ ಸಂಸ್ಥೆಯ ಬಸ್ಸುಗಳು ₹12,192
ಶಿಕ್ಷಣ ಸಂಸ್ಥೆಯ ಬಸ್ಸುಗಳಲ್ಲದಿದ್ದರೆ ₹14,343

ಥರ್ಡ್-ಪಾರ್ಟಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವುದು ಹೇಗೆ?

  • ನಿಮ್ಮ ಕಮರ್ಷಿಯಲ್ ವೆಹಿಕಲ್  ಅಪಘಾತಕ್ಕೊಳಗಾದರೆ, ಆಯಾ ಥರ್ಡ್-ಪಾರ್ಟಿಯು ಎಫ್ ಐ ಆರ್ ಅನ್ನು ದಾಖಲಿಸಿ ಚಾರ್ಜ್ ಶೀಟ್ ಅನ್ನು ಪಡೆಯತಕ್ಕದ್ದು.
  • ಯಾವುದೇ ರೀತಿಯ ಪರಿಹಾರದ ಅಗತ್ಯವಿದ್ದರೆ, ನಿಮ್ಮ ಪರವಾಗಿ ನಾವದನ್ನು ನೋಡಿಕೊಳ್ಳುತ್ತೇವೆ. ಕೇವಲ ನಮಗೆ 1800-103-4448 ರಲ್ಲಿ ಕರೆ ನೀಡಿ.
  • ಷರತ್ತುಗಳ ಉಲ್ಲಂಘನೆಯಾಗದೇ ಇರುವವರೆಗೆ, ನಾವು ನಿಮ ಪರವಾಗಿ ಹಣಕಾಸೇತರ ಇತ್ಯರ್ಥ ಮಾಡಲು ಪ್ರಯತ್ನಿಸುತ್ತೇವೆ. 
  • ಕಮರ್ಷಿಯಲ್ ವೆಹಿಕಲ್ ದ ಚಾಲಕನು ಒಳ್ಳೆಯ ನಾಗರಿಕನಾಗಿದ್ದು ತನ್ನ ಅಸಡ್ಡೆಯಿಂದಾದ ತಪ್ಪನ್ನು ಒಪ್ಪಿಕೊಂಡ ಮೇಲೂ, ನಿಮ್ಮ ಡಿಜಿಟ್ ಥರ್ಡ್-ಪಾರ್ಟಿ ಕವರ್ ಮಾನ್ಯವಾಗಿರುತ್ತದೆ.
  • ವೈಯಕ್ತಿಕ ಅಪಘಾತ-ಸಂಬಂಧಿತ ಕ್ಲೈಮ್ ಇರುವ ಸಂದರ್ಭದಲ್ಲಿ, ನೀವು ಕೇವಲ 1800-258-5956 ಗೆ ಕರೆ ಮಾಡಿ, ಉಳಿದದ್ದೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ!

ಥರ್ಡ್-ಪಾರ್ಟಿ ಕಮರ್ಷಿಯಲ್ ವೆಹಿಕಲ್ ದ ಇನ್ಶೂರೆನ್ಸ್ ಕ್ಲೈಮ್ ಮಾಡುವಾಗ ಪರಿಗಣಿಸಬೇಕಾದ ವಿಷಯಗಳು

  • ಅಪಘಾತವಾದ ಸಂದರ್ಭದಲ್ಲಿ, ಆಯಾ ಥರ್ಡ್-ಪಾರ್ಟಿಯು ಹಾನಿಯಾದ ಸಮಯದಲ್ಲಿ ಎಫ್ ಐ ಆರ್ ಅನ್ನು ದಾಖಲಿಸಬೇಕಾಗುತ್ತದೆ- ತದನಂತರ, ಇನ್ಶೂರೆನ್ಸ್ ಕಂಪನಿಗೂ ಸೂಚಿಸತಕ್ಕದ್ದು. ಇದನ್ನು ತಪ್ಪಿಸಿದರೆ, ಅಗತ್ಯ ಪರಿಹಾರಗಳನ್ನು ನೀಡಲು ಸಾಧ್ಯವಾಗುವುದಿಲ್ಲ.
  • ಅಪಘಾತದಲ್ಲಿ, ವಿರುದ್ಧ ಪಾರ್ಟಿಯ ತಪ್ಪನ್ನು ಸಾಬೀತು ಪಡಿಸಲು ಥರ್ಡ್-ಪಾರ್ಟಿಯ ಬಳಿ ಮಾನ್ಯ ಪುರಾವೆ ಇರುವುದು ಬಹಳ ಮುಖ್ಯವಾಗಿರುತ್ತದೆ.
  • ಸಣ್ಣಪುಟ್ಟ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ, ನೀವದನ್ನು ನ್ಯಾಯಾಲಯದ ಹೊರಗಡೆಯೇ ಇತ್ಯರ್ಥ ಮಾಡಿಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗುತ್ತದೆ. ಕಾರಣ, ಎಫ್ ಐ ಅರ್ ದಾಖಲಿಸುವ ಪ್ರಕ್ರಿಯೆ ಹಾಗೂ ಮೋಟಾರ್ ವಾಹನದ ನ್ಯಾಯಾಧಿಕರಣವು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ.
  • ಐ ಆರ್ ಡಿ ಎ ಐ (IRDAI) ಷರತ್ತು ಹಾಗೂ ನಿಬಂಧನೆಗಳ ಪ್ರಕಾರ, ಕ್ಲೈಮ್ ನ ಮೊತ್ತವನ್ನು ನಿರ್ಧರಿಸುವ ಹಕ್ಕನ್ನು ಸಂಪೂರ್ಣವಾಗಿ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ ಪಡೆದುಕೊಂಡಿದೆ. ಥರ್ಡ್-ಪಾರ್ಟಿಗಾದ ವೈಯಕ್ತಿಕ ಹಾನಿಯ ಮೇಲೆ ಯಾವುದೇ ಗರಿಷ್ಠ ಮಿತಿ ಇಲ್ಲದಿದ್ದರೂ, ಥರ್ಡ್-ಪಾರ್ಟಿ ವಾಹನ ಅಥವಾ ಅಸ್ತಿಗೆ ಹಾನಿಯಾದ ಸಂದರ್ಭದಲ್ಲಿ ರೂ. 7.5 ಲಕ್ಷಗಳವರೆಗಿನ ಹೊಣೆಗಾರಿಕಾ ಮಿತಿಯನ್ನು ಇರಿಸಲಾಗಿದೆ. 

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಎಷ್ಟು ಶೀಘ್ರದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ನಿಮ್ಮ ಕಮರ್ಷಿಯಲ್ ವೆಹಿಕಲ್ ದಿಂದ ಯಾವುದೇ ಥರ್ಡ್-ಪಾರ್ಟಿ ವಾಹನಕ್ಕಾದ ಹಾನಿಗಳು

×

ನಿಮ್ಮ ಕಮರ್ಷಿಯಲ್ ವೆಹಿಕಲ್ ದಿಂದ ಯಾವುದೇ ಥರ್ಡ್-ಪಾರ್ಟಿ ಆಸ್ತಿಗಾದ ಹಾನಿಗಳು

×

ನಿಮ್ಮ ಇನ್ಶೂರ್ಡ್ ಕಮರ್ಷಿಯಲ್ ವೆಹಿಕಲ್ ದಿಂದ ಟೋ ಆದ ವಾಹನದಿಂದ ಯಾವುದೇ ಥರ್ಡ್-ಪಾರ್ಟಿ ವಾಅಹನಕ್ಕಾದ ಹಾನಿ

×

ಬೆಂಕಿಯಿಂದಾಗಿ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ನಷ್ಟ ಅಥವಾ ಹಾನಿಗಳು

×

ನೈಸರ್ಗಿಕ ವಿಪತ್ತಿನಿಂದಾಗಿ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ನಷ್ಟ ಅಥವಾ ಹಾನಿಗಳು

×

ಅಪಘಾತದಿಂದಾಗಿ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ನಷ್ಟ ಅಥವಾ ಹಾನಿಗಳು

×

ನಿಮ್ಮ ಕಮರ್ಷಿಯಲ್ ವೆಹಿಕಲ್ ಕಳವಿನಿಂದಾದ ನಷ್ಟ

×

ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಸಂರಕ್ಷಣೆ

×

ಥರ್ಡ್-ಪಾರ್ಟಿ ವ್ಯಕ್ತಿಯ ದೈಹಿಕ ಹಾನಿ/ಸಾವು

×

ಚಾಲಕ-ಮಾಲಕನ ದೈಹಿಕ ಹಾನಿ/ಸಾವು

×
Get Quote Get Quote

ಕಮರ್ಷಿಯಲ್ ವೆಹಿಕಲ್ ಗಳ ಥರ್ಡ್-ಪಾರ್ಟಿ ಪಾಲಿಸಿಯ ಲಾಭಗಳು

  • ವೈಯಕ್ತಿಕ ಹಾನಿಗಳ ಸಂದರ್ಭದಲ್ಲಿ ಥರ್ಡ್-ಪಾರ್ಟಿಯನ್ನು ಕವರ್ ಮಾಡುತ್ತದೆ: ನೀವು ಅಪಘಾತಕ್ಕೀಡಾಗಿ ಒಬ್ಬರನ್ನು ದೈಹಿಕವಾಗಿ ಘಾಸಿಗೊಳಿಸಿದರೆ(ಅಥವಾ ದುರಾದೃಷ್ಟವೆಂಬಂತೆ ಸಾವಿಗೆ ಕಾರಣವಾದರೆ), ನಿಮ್ಮ ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಇಂತಹ ನಷ್ಟಗಳನ್ನು ಕವರ್ ಮಾಡುತ್ತದೆ, ಅನಿಯಮಿತ ಹೊಣೆಗಾರಿಕೆಯೊಂದಿಗೆ.
  • ಥರ್ಡ್-ಪಾರ್ಟಿ ಆಸ್ತಿ ಹಾಗೂ ವಾಹನ ಹಾನಿಗಳನ್ನೂ ಕವರ್ ಮಾಡುತ್ತದೆ: ಡ್ರೈವ್ ಮಾಡುತ್ತಿರುವಾದ ನಿಮ್ಮ ಕಮರ್ಷಿಯಲ್ ವೆಹಿಕಲ್ ವು ಆಕಸ್ಮಿಕವಾಗಿ ಇನ್ನೊಬ್ಬರ ವಾಹನ ಅಥವಾ ಆಸ್ತಿಗೆ ಹಾನಿ ಮಾಡಿದರೆ, ನಿಮ್ಮ ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಅದರ ನಷ್ಟಗಳನ್ನು ಕವರ್ ಮಾಡುತ್ತದೆ.
  • ನಿಮ್ಮನ್ನು ಅನಿರೀಕ್ಷಿತ ನಷ್ಟಗಳಿಂದ ಸಂರಕ್ಷಿಸುತ್ತದೆ: ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಹೆಚ್ಚಿರುವ ಟ್ರ್ಯಾಫಿಕ್ ನಿಂದಾಗಿ, ತಪ್ಪುಗಳು ನಡೆಯುವುದು ಸಹಜ! ಆದ್ದರಿಂದ, ನಿಮ್ಮ ಕಮರ್ಷಿಯಲ್ ವೆಹಿಕಲ್ ವು ಯಾರಿಗಾದರೂ ಅಥವಾ ಅವರ ವಾಹನ/ಆಸ್ತಿಗೆ ಹಾನಿ ಮಾಡಿದರೆ, ನೀವು ಯಾವುದೇ ರೀತಿಯ ಅನಿರೀಕ್ಷಿತ ನಷ್ಟಗಳನ್ನು ಎದುರಿಸಬೇಕಾಗಿರುವುದಿಲ್ಲ. 
  • ನೀವು ಕಾನೂನುಬದ್ಧವಾಗಿ ವಾಹನ ಚಲಾಯಿಸುವುದನ್ನು ಖಚಿತಪಡಿಸುತ್ತದೆ: ಭಾರತದ ಮೋಟಾರ್ ವಾಹನಗಳ ಅಧಿನಿಯಮದ ಪ್ರಕಾರ, ಎಲ್ಲಾ ವಾಹನಗಳು ಕನಿಷ್ಟ ಪಕ್ಷ ಒಂದು ಥರ್ಡ್-ಪಾರ್ಟಿ ಕಮರ್ಷಿಯಲ್ ವೆಹಿಕಲ್  ಇನ್ಶೂರೆನ್ಸ್ ಅನ್ನು ಹೊಂದಿರಲೇಬೇಕಾಗುತ್ತದೆ. ನೀವು ನಿಮ್ಮ ಸ್ವಂತ ವಾಹನವನ್ನೂ ಸಂರಕ್ಷಿಸಲು ಬಯಸಿದರೆ, ನೀವು ಕಾಂಪ್ರೆಹೆನ್ಸಿವ್ ಕಮರ್ಷಿಯಲ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿಯ ಆಯ್ಕೆಯನ್ನು ಮಾಡಬಹುದಾಗಿದೆ. ಇದು, ಥರ್ಡ್-ಪಾರ್ಟಿ ಹಾನಿಗಾಗಿ ಕವರೇಜ್ ಜೊತೆ ಹಾಗೂ ನಿಮ್ಮ ಸ್ವಂತ ವಾಹನಕ್ಕೂ ಕವರೇಜ್ ಅನ್ನು ಒದಗಿಸುತ್ತದೆ.
  • ಟ್ರ್ಯಾಫಿಕ್ ದಂಡ ಹಾಗೂ ಜುರ್ಮಾನೆಗಳಿಂದ ಸಂರಕ್ಷಣೆ : ನಿಮ್ಮ ವಾಹನವು ರಸ್ತೆಯಲ್ಲಿ ಒಂದು ಥರ್ಡ್-ಪಾರ್ಟಿ ವಾಹನ ಇನ್ಶೂರೆನ್ಸ್ ಕೂಡಾ ಇಲ್ಲದೆ ಪತ್ತೆಯಾದಲ್ಲಿ, ನೀವು ರೂ 2,000 ದಂಡ ಹಾಗೂ/ಅಥವಾ ಮೂರು ತಿಂಗಳವರೆಗಿನ ಜೈಲುವಾಸಕ್ಕೆ ಬಾಧ್ಯರಾಗಿರುತ್ತೀರಿ!

ಕಮರ್ಷಿಯಲ್ ವೆಹಿಕಲ್ ಗಳ ಥರ್ಡ್-ಪಾರ್ಟಿ ಪಾಲಿಸಿಗಳ ಅನಾನುಕೂಲತೆಗಳು

  • ಸ್ವಂತ ಹಾನಿಗಳನ್ನು ಕವರ್ ಮಾಡುವುದಿಲ್ಲ : ದುರಾದೃಷ್ಟವಂಬಂತೆ, ಕಮರ್ಷಿಯಲ್ ಥರ್ಡ್-ಪಾರ್ಟಿ ವಾಹನ ಇನ್ಶೂರೆನ್ಸ್ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ಹನಿ ಹಾಗೂ ನಷ್ಟಗಳನ್ನು ಕವರ್ ಮಾಡುವುದಿಲ್ಲ(ಏಕೆಂದರೆ ಈ ಪಾಲಿಸಿಯನ್ನು ನಿರ್ದಿಷ್ಟವಾಗಿ ಥರ್ಡ್-ಪಾರ್ಟಿಗಾಗಿ ಮಾಡಲಾಗಿದೆ). ನಿಮಗೆ ನಿಮ್ಮ ಸ್ವಂತ ವಾಹನ ಕವರ್ ಆಗಬೇಕೆಂದಿದ್ದರೆ, ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಆಯ್ಕೆ ಮಾಡಬೇಕು.
  • ನೈಸರ್ಗಿಕ ವಿಪತ್ತುಗಳನ್ನು ಕವರ್ ಮಾಡುವುದಿಲ್ಲ:ಭೂಕಂಪ ಅಥವಾ ಪ್ರವಾಹದಂತಹ ಯಾವುದೇ ರೀತಿಯ ನೈಸರ್ಗಿಕ ವಿಪತ್ತಿನಿಂತ ನಿಮ್ಮ ವಾಹನಕ್ಕೆ ಹಾನಿಯುಂಟಾದರೆ, ಕಮರ್ಷಿಯಲ್ ಥರ್ಡ್-ಪಾರ್ಟಿ ವಾಹನ ಇನ್ಶೂರೆನ್ಸ್ ನಿಮ್ಮ ಸ್ವಂತ ವಾಹನವನ್ನು ಕವರ್ ಮಾಡುವುದಿಲ್ಲ. ಪುನಃ, ನಿಮಗೆ ಈ ಕವರೇಜ್ ಬೇಕೆಂದೆನಿಸಿದರೆ, ನೀವು ಇದರ ಬದಲಿಗೆ ಕಾಂಪ್ರೆಹೆನ್ಸಿವ್ ಕಮರ್ಷಿಯಲ್ ವೆಹಿಕಲ್  ಪಾಲಿಸಿಯ ಆಯ್ಕೆಯನ್ನು ಮಾಡಬಹುದಾಗಿದೆ. 
  • ಯಾವುದೇ ಕಸ್ಟಮೈಜ್ ಆದ ಯೋಜನೆಗಳಿಲ್ಲ : ಒಂದು ಕಮರ್ಷಿಯಲ್ ಥರ್ಡ್-ಪಾರ್ಟಿ ವಾಹನ ಇನ್ಶೂರೆನ್ಸ್ ನೀವು ನಿಮ್ಮ ಕಮರ್ಷಿಯಲ್ ವೆಹಿಕಲ್ ಕ್ಕಾಗಿ ಪಡೆಯಬಹುದಾದ ಅತ್ಯಂತ ತಳಮಟ್ಟದ ಯೋಜನೆಯಾಗಿದೆ. ಇದನ್ನು ಕಳವು ಅಥವಾ ಬೆಂಕಿಯ ಕವರ್ ಗಳಂತಹ ಹೆಚ್ಚುವರಿ ಲಾಭಗಳೊಂದಿಗೆ ಕಸ್ಟಮೈಜ್ ಮಾಡಲು ಸಾಧ್ಯವಿಲ್ಲ. ಆದರೆ, ನೀವು ಇವೆಲ್ಲವನ್ನೂ ಒಂದು ಕಾಂಪ್ರೆಹೆನ್ಸಿವ್ ಕಮರ್ಷಿಯಲ್ ವೆಹಿಕಲ್  ಇನ್ಶೂರೆನ್ಸ್ ನಲ್ಲಿ ಪಡೆಯಬಹುದಾಗಿದೆ. 

ಕವರ್ ಮಾಡಲಾಗುವ ಕಮರ್ಷಿಯಲ್ ವೆಹಿಕಲ್ ಗಳ ವಿಧಗಳು

  • ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳು : ಒಂದು ಅಥವಾ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳಾದ ಟ್ಯಾಕ್ಸಿಗಳು, ಕ್ಯಾಬ್ ಗಳು, ಶಾಲಾ ಬಸ್ಸುಗಳು, ಖಾಸಗಿ ಬಸ್ಸುಗಳು ಇತ್ಯಾದಿಗಳಿಗೆ ನಿರ್ದಿಷ್ಟವಾಗಿ ಇರುವಂಥಹ ಇನ್ಶೂರೆನ್ಸ್.
  • ಭಾರೀ ವಾಹನಗಳು : ಭಾರೀ ವಾಹನಗಳಾದ ಬುಲ್ ಡೋಜರ್ ಗಳಿಗೆ, ಕ್ರೇನ್ ಗಳಿಗೆ, ಲಾರಿಗಳಿಗೆ, ಟ್ರೈಲರ್ ಇತ್ಯಾದಿ ಗಳಿಗೆ ಆಗುವ ಹಾನಿ ಹಾಗೂ ನಷ್ಟಗಳನ್ನು ಕವರ್ ಮಾಡುತ್ತದೆ.
  • ಸರಕು ಸಾಗಿಸುವ ವಾಹನಗಳು :ಸಾಮಾನ್ಯವಾಗಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಸರಕನ್ನು ಸಾಗಿಸುವ ವಾಹನಗಳು. ಇವುಗಳು ಪ್ರಾಥಮಿಕವಾಗಿ ಟ್ರಕ್ ಗಳನ್ನು, ಟೆಂಪೋಗಳನ್ನು ಹಾಗೂ ಲಾರಿಗಳನ್ನು ಒಳಗೊಂಡಿರುತ್ತವೆ. 
  • ಪ್ರಯಾಣಿಕರ ಬಸ್/ಶಾಲ ಬಸ್ : ಕಮರ್ಷಿಯಲ್ ಬಸ್ಸುಗಳಾದ ಶಾಲಾ ಬಸ್ಸುಗಳನ್ನು, ಸಾರ್ವಜನಿಕ ಬಸ್ಸುಗಳನ್ನು, ಖಾಸಗೀ ಅಥವಾ ಇತರ ಪ್ರಯಾಣಿಕರನ್ನು ಕರೆದೊಯ್ಯುವ ಬಸ್ಸುಗಳನ್ನು ಥರ್ಡ್-ಪಾರ್ಟಿ ಹಾನಿಗಳಿಂದ ಸರಕ್ಷಿಸುತ್ತದೆ.
  • ಟ್ರ್ಯಾಕ್ಟರ್ ಗಳು/ಕೃಷಿ ವಾಹನಗಳು: ಯಾವುದೇ ರೀತಿಯ ಅಪಘತಗಳಿಂದ, ಹಾಗೂ ಯಾವುದೇ ಥರ್ಡ್-ಪಾರ್ಟಿಗೆ ಆಗಬಲ್ಲ ಹಾನಿ ಹಾಗೂ ನಷ್ಟಗಳಿಂದ ನಿಮ್ಮ ಟ್ರ್ಯಾಕ್ಟರ್ ಹಾಗೂ ಇತರ ಕೃಷಿಗೆ ಉಪಯೋಗಿಸುವ ವಾಹನಗಳನ್ನು ಸಂರಕ್ಷಿಸಿ.
  • ಕಮರ್ಷಿಯಲ್ ವ್ಯಾನ್ : ವ್ಯವಹಾರದ ಉದ್ದೇಶಗಳಿಗೆ ಉಪಯೋಗಿಸಲಾಗುವ ವ್ಯಾನ್ ಗಳನ್ನು ಸಂರಕ್ಷಿಸುತ್ತದೆ. ಉದಾಹರಣೆಗೆ ಶಾಲಾ ವ್ಯಾನ್ ಗಳು, ಖಾಸಗಿ ವ್ಯಾನ್ ಗಳು, ಹಾಗೂ ಸರಕನ್ನು ಅಥವಾ ಪ್ರಯಾಣಿಕರನ್ನು ಕರೆದೊಯ್ಯುವ ಇತರ ವ್ಯಾನ್ ಗಳು.
  • ಇತರ ಹಾಗೂ ವಿಶೇಷ ವಾಹನಗಳು : ಕ್ಯಾಬ್, ಟ್ಯಾಕ್ಸಿ, ಟ್ರಕ್ ಹಾಗೂ ಬಸ್ಸುಗಳ ಹೊರತಾಗಿ ವ್ಯವಹಾರಕ್ಕಾಗಿ ಹಾಗೂ ವ್ಯವಹಾರದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವ ಇತರ ಹಲವು ವಾಹನಗಳಿವೆ. ಇದರಲ್ಲಿ ಕೃಷಿ, ಗಣಿಗಾರಿಕೆ ಹಾಗೂ ನಿರ್ಮಾಣ ಇತ್ಯಾದಿಗಳಲ್ಲಿ ಉಪಯೋಗಿಸಲಾಗುವ ವಿಶೇಷ ವಾಹನಗಳು ಸೇರಿವೆ.

ಕಮರ್ಷಿಯಲ್ ವೆಹಿಕಲ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಥರ್ಡ್-ಪಾರ್ಟಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಕಡ್ಡಾಯವೇ?

ಭಾರತದ ಮೋಟಾರ್ ವಾಹನಗಳ ಅಧಿನಿಯಮಗಳ ಪ್ರಕಾರ, ಎಲ್ಲಾ ವಾಹನಗಳು ಕನಿಷ್ಟ ಪಕ್ಷ ಒಂದು ಥರ್ಡ್-ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಅನ್ನಾದರೂ ಹೊಂದಿರುವುದು ಕಡ್ಡಾಯವಾಗಿದೆ, ಇದರರ್ಥ ನಿಮ್ಮ ಕಮರ್ಷಿಯಲ್ ವೆಹಿಕಲ್ ಕ್ಕೂ ಇದರ ಅಗತ್ಯವಿದೆ! ಒಂದು ವೇಳೆ ಇದು ಇಲ್ಲದೆ ಇರುವುದು ಪತ್ತೆಯಾದರೆ, ನೀವು ದಂಡ ತೆರಬೇಕಾಗಬಹುದು ಹಾಗೂ/ಅಥವಾ ಮೂರು ತಿಂಗಳವರೆಗೆ ಜೈಲುವಾಸವನ್ನು ಅನುಭವಿಸಬೇಕಾಗಬಹುದು!

ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸಿದಕ್ಕಾಗಿ ತೆರಬೇಕಾದ ದಂಡವೆಷ್ಟು?

ಥರ್ಡ್-ಪಾರ್ಟಿ ಇನ್ಶೂರೆನ್ಸ್ ಭಾರತದಲ್ಲಿ ಕಡ್ಡಾಯವಾಗಿದೆ, ಆದ್ದರಿಂದ ಇದಿಲ್ಲದೆ ನಿಮ್ಮ ವಾಹನವು ರಸ್ತೆಯಲ್ಲಿ ಪತ್ತೆಯಾದರೆ ನೀವು ರೂ.  2,000 ದಂಡವನ್ನು ತೆರಬೇಕಾಗಬಹುದು( ಕೆಲ ಪ್ರಕರಣಗಳಲ್ಲಿ ನಿಮಗೆ 3 ತಿಂಗಳವರೆಗಿನ ಜೈಲುವಾಸವೂ ಆಗಬಹುದು). ಆದ್ದರಿಂದ, ಆ ಎಲ್ಲಾ ಚಿಂತೆಗಳನ್ನು ತಪ್ಪಿಸಲು ನಿಮ್ಮ ವಾಹನವು ಸರಿಯಾದ ಇನ್ಶೂರೆನ್ಸ್ ನ್ನು ಹೊಂದಿರುವುದನ್ನು ಖಚಿತಪಡಿಸಿ. 

ಥರ್ಡ್-ಪಾರ್ಟಿ ಕವರ್ ನಲ್ಲಿ ಸೇರಿಸಲಾದ ಬೆಂಕಿಯ ಹಾನಿಗಳು ಯಾವುವು?

ನಮ್ಮ ಪ್ಯಾಕೇಜ್ ಪಾಲಿಸಿ ಅಡಿಯಲ್ಲಿರುವ ಈ ಎಂಡೋಸ್ಮೆಂಟ್, ಸ್ಫೋಟ, ಸ್ವಯಂ ದಹನ, ಅಥವಾ ಸಿಡಿಲುಗಳಿಂದ ಉಂಟಾಗ್ಗುವ ಬೆಂಕಿಯಿಂದ ಆಗಬಲ್ಲ ಹಾನಿ ಹಾಗೂ ನಷ್ಟಗಳಿಂದ ಕವರ್ ಅನ್ನು ಒದಗಿಸುತ್ತದೆ. ಆದರೆ, ಇದು ಕೇವಲ 20 ಟನ್ ಗಳಿಗಿಂತ ಹೆಚ್ಚು ಟನ್ ಸಾಮರ್ಥ್ಯವುಳ್ಳ ವಹನಗಳಿಗೆ ಮಾತ್ರ ಲಭ್ಯವಿದೆ. 

ನಾನು ನನ್ನ ವಾಹನವನ್ನು ಅಷ್ಟಾಗಿ ಬಳಸುವುದಿಲ್ಲ, ನಾನು ಯಾವ ಯೋಜನೆಯನ್ನು ಖರೀದಿಸಬೇಕು?

ಇದು ನಿಮ್ಮ ಕಮರ್ಷಿಯಲ್ ವೆಹಿಕಲ್ ದ ಉದ್ದೇಶ ಹಾಗೂ ಬಳಕೆಯನ್ನು ಅವಲಂಬಿಸಬೇಕು. ನಿಮ್ಮ ವಾಹನವು ಅಷ್ಟಾಗಿ ಬಳಕೆಯಾಗದೇ ಇದ್ದರೆ ಅಥವಾ ನೀವು ಅದನ್ನು ಕೇವಲ ಅಲ್ಪಾವಧಿಗೆ ಬಳಸಲು ಬಯಸಿದ್ದರೆ ನೀವು ಥರ್ಡ್-ಪಾರ್ಟಿ ಕವರೇಜ್ ಅನ್ನು ಪಡೆಯಬಹುದು ಏಕೆಂದರೆ ಇದು ಕಡ್ಡಾಯವೂ ಆಗಿದೆ. ವ್ಯವಹಾರದಲ್ಲಿ ಯಾವಾಗಲೂ ಎಲ್ಲಾ ವಾಹನಗಳು ಕನಿಷ್ಟ ಪಕ್ಷ ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಅನ್ನು ಹೊಂದಿರಲೇಬೇಕಾಗಿದೆ. 

ಆದರೆ, ನಿಮಗೆ ಉತ್ತಮ ದೀರ್ಘಾವಧಿ ಆಯ್ಕೆಗಳ ಜೊತೆ ಹೆಚ್ಚಿನ ಕವರೇಜ್ ಬೇಕಿದ್ದರೆ ಹಾಗೂ ತಮ್ಮ ಸ್ವಂತ ವಾಹನಕ್ಕಾಗಿ ಹ್ಚ್ಚಿನ ಸುರಕ್ಷತೆ ಬೇಕಿದ್ದರೆ, ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಅಯ್ಕೆ ಮಾಡಿ.

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಕಾಂಪ್ರೆಹೆನ್ಸಿವ್ ಹಾಗೂ ಥರ್ಡ್-ಪಾರ್ಟಿ ಪಾಲಿಸಿ ಮಧ್ಯೆ ಇರುವ ವ್ಯತ್ಯಾಸವೇನು?

ಒಂದು ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಕೇವಲ ಥರ್ಡ್-ಪಾರ್ಟಿ, ಅಂದರೆ; ಅಪಘಾತದಿಂದ ಹಾನಿಗೀಡಾದ ಇತರ  ವ್ಯಕ್ತಿ, ವಾಹನ ಹಾಗೂ ಸ್ವತ್ತುಗಳಿಗಾದ ಹಾನಿ ಹಾಗೂ ನಷ್ಟಗಳನ್ನು ಕವರ್ ಮಾಡುತ್ತದೆ. ಆದರೆ, ಕಾಂಪ್ರೆಹೆನ್ಸಿವ್ ಪಾಲಿಸಿಯು, ಥರ್ಡ್-ಪಾರ್ಟಿ ಸಂಬಂಧಿತ ಮಾತ್ರವಲ್ಲದೆ ನಿಮ್ಮ ಸ್ವಂತ ಹಾನಿ ಹಾಗೂ ನಷ್ಟಗಳನ್ನೂ ಕವರ್ ಮಾಡುತ್ತದೆ.

ಯಾವ ಯೋಜನೆಯು ಉತ್ತಮವಾಗಿದೆ, ಥರ್ಡ್-ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್?

ಇದು ಬಹುತೇಕವಾಗಿ ನೀವು ನಿಮ್ಮ ವಾಹನವನ್ನು ಎಷ್ಟು ಬಳಸುತ್ತೀರಿ ಎನ್ನುವುದನ್ನು ಅವಲಂಬಿಸುತ್ತದೆ. ಕಾನೂನಿನ ಪ್ರಕಾರ ಥರ್ಡ್-ಪಾರ್ಟಿ ಕವರೇಜ್ ಅನ್ನು ಹೊಂದುವುದು ಕಡ್ಡಾಯವಾಗಿದ್ದರೂ, ನಿಮ್ಮ ವಾಹನದ ಬಳಕೆ ಹೆಚ್ಚಾಗಿ ಆಗುತ್ತಿದ್ದರೆ ನೀವು ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಇದರ ಜೊತೆ, ನೀವು ನಿಮ್ಮ ವಾಹನದ ಬಳಕೆಯನ್ನು ವ್ಯವಹಾರದ ಉದ್ದೇಶಕ್ಕೆ ಬಳಸುತ್ತಿರುವ ಕಾರಣ, ನೀವು ಅದನ್ನು ನೈಸರ್ಗಿಕ ವಿಪತ್ತುಗಳು, ಸಣ್ಣ ಅಥವಾ ದೊಡ್ಡ ಅಪಘಾತಗಳು, ಕಳವು ಬೆಂಕಿಯಂತಹ ಹತ್ತು ಹಲವಾರು ಕಾರಣಗಳಿಂದಾಗಿ ಆಗಬಲ್ಲ ಅನಿರೀಕ್ಷಿತ ಹಾನಿಗಳಿಂದ ಸಂರಕ್ಷಿಸುವುದು ಉತ್ತಮ ಉಪಾಯವಾಗಿದೆ.