ಡಿಜಿಟ್ ಪಾರ್ಟ್ನರ್ ಆಗಿ
35,000ಕ್ಕೂ ಅಧಿಕ ಪಾಲುದಾರರು ಡಿಜಿಟ್‌ನೊಂದಿಗೆ 674 ಕೋಟಿಗೂ ಹೆಚ್ಚು ಗಳಿಸಿದ್ದಾರೆ.

ಭಾರತದಲ್ಲಿ ಆನ್‌ಲೈನ್‌ ಮೂಲಕ ಹಣ ಗಳಿಸುವುದು ಹೇಗೆ?

Source: Forbes

ಇಂದು, ಸಾಕಷ್ಟು ಜನರು ಆನ್‌ಲೈನ್‌ನಲ್ಲಿ ಹಣ ಗಳಿಸುವುದು ಹೇಗೆ ಎಂದು ಎದುರು ನೋಡುತ್ತಿದ್ದಾರೆ. ಆದರೆ, ದುರದೃಷ್ಟವಶಾತ್, ಇಂಟರ್ನೆಟ್ ನಲ್ಲಿ ಅನೇಕ ನಕಲಿ ಏಜೆನ್ಸಿಗಳು, ಸ್ಕ್ಯಾಮ್ ಗಳು ಮತ್ತು ಫ್ರಾಡ್ ಗಳು ಇರುವುದರಿಂದ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ನಿಯತ್ತಿನ ಮಾರ್ಗಗಳನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ.

ಆದರೂ, ನೀವು ಜಾಗರೂಕರಾಗಿದ್ದರೆ ಮತ್ತು ನೀವು ಸೈನ್ ಅಪ್ ಮಾಡುವ ಸೈಟ್‌ಗಳನ್ನು ಸಂಶೋಧಿಸಿದರೆ, ನೀವು ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವ ಹಲವಾರು ಮಾರ್ಗಗಳನ್ನು ಕಾಣಬಹುದು ಮತ್ತು ಅನೇಕ ಸೈಟ್ ಗಳಲ್ಲಿ ಯಾವುದೇ ಹೂಡಿಕೆ ಸಹ ಇರುವುದಿಲ್ಲ.

ಆನ್‌ಲೈನ್‌ನಲ್ಲಿ ಹಣ ಗಳಿಕೆಗೆ 12 ಮಾರ್ಗಗಳು

1. ಒಬ್ಬ ಇನ್ಶೂರೆನ್ಸ್ ಪಿಒಎಸ್‌ಪಿ(POSP) ಆಗಿ ಕೆಲಸ ಮಾಡಿ

ಆನ್‌ಲೈನ್‌ ಮೂಲಕ ಹಣ ಸಂಪಾದಿಸಲು ಉತ್ತಮ ಮಾರ್ಗವೆಂದರೆ ಪಿಒಎಸ್‌ಪಿ (ಪಾಯಿಂಟ್ ಆಫ್ ಸೇಲ್ಸ್‌ ಪರ್ಸನ್) ಆಗುವುದು. ಇದು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುವ ಮತ್ತು ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡುವ ಒಂದು ರೀತಿಯ ಇನ್ಶೂರೆನ್ಸ್ ಏಜೆಂಟ್. ಈ ಕೆಲಸಕ್ಕಾಗಿ ನಿಮಗೆ ಬೇಕಾಗಿರುವುದು ಒಂದು ಸ್ಮಾರ್ಟ್‌ಫೋನ್ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕ, ಮತ್ತು ಇದನ್ನು ಮನೆಯಿಂದಲೇ ಆನ್‌ಲೈನ್‌ನಲ್ಲಿ ಮಾಡಬಹುದು.

ಇನ್ಶೂರೆನ್ಸ್ ಪಿಒಎಸ್‌ಪಿ ಆಗಿ ಅರ್ಹತೆ ಪಡೆಯಲು, ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯ ಪದವೀಧರರಾಗಿರಬೇಕು, ನಂತರ ನೀವು ಐಆರ್‌ಡಿ‌ಎ‌ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬೇಕು. ನಿಮ್ಮ ಆದಾಯವು ಕಮಿಷನ್ ಆಧಾರದ ಮೇಲೆ ಇರುತ್ತದೆ ಮತ್ತು ನೀವು ಹೆಚ್ಚು ಪಾಲಿಸಿಗಳನ್ನು ಮಾರಾಟ ಮಾಡಿದರೆ, ನೀವು ಹೆಚ್ಚು ಗಳಿಸಬಹುದು. ಪಿಒಎಸ್‌ಪಿ ಏಜೆಂಟ್ ಆಗುವ ಹಂತಗಳು, ಅವಶ್ಯಕತೆಗಳು ಮತ್ತು ನಿಯಮಗಳ ಕುರಿತಾದ ವಿಚಾರಗಳನ್ನು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.

2. ಫ್ರೀಲ್ಯಾನ್ಸಿಂಗ್ ಕೆಲಸ ನೋಡುವುದು

ಆನ್‌ಲೈನ್‌ನಲ್ಲಿ ಹಣ ಗಳಿಸಲು ಇನ್ನೊಂದು ಜನಪ್ರಿಯ ಮಾರ್ಗ ಎಂದರೆ ಅದು ಫ್ರೀಲ್ಯಾನ್ಸ್ ಕೆಲಸದ ಮೂಲಕ. ಪ್ರೋಗ್ರಾಮಿಂಗ್, ಎಡಿಟಿಂಗ್, ರೈಟಿಂಗ್, ಡಿಸೈನಿಂಗ್ ಮತ್ತು ಹೆಚ್ಚಿನವುಗಳಲ್ಲಿ ಉತ್ತಮವಾಗಿರುವವರು ಅಪ್‌ವರ್ಕ್, ಪೀಪಲ್‌ಪರ್‌ಹೌರ್, ಕೂಲ್ ಕನ್ಯಾ, ಫಿವರ್ರ್ ಅಥವಾ ಟ್ರೂಲ್ಯಾನ್ಸರ್ ನಂತಹ ಪೋರ್ಟಲ್‌ಗಳನ್ನು ನೋಡಬಹುದು ಮತ್ತು ಫ್ರೀಲ್ಯಾನ್ಸರ್ ಗಳಿಗಾಗಿ ಹುಡುಕುವ ಬಿಸಿನೆಸ್ ಗಳೊಂದಿಗೆ ಕೆಲಸ ಹುಡುಕಬಹುದು. ನೀವು ಈ ಒಂದು ಅಥವಾ ಹೆಚ್ಚಿನ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳಬೇಕು (ಒಂದು ಸಣ್ಣ ಶುಲ್ಕ ಇರುತ್ತದೆ), ಮತ್ತು ನೀವು ನೀಡುವ ಕೆಲಸದ ಆಧಾರದ ಮೇಲೆ, ನೀವು ಫ್ರೀಲ್ಯಾನ್ಸರ್ ಆಗಿ ಹೆಚ್ಚು-ಪಾವತಿಸುವ ಗಿಗ್‌ಗಳ ಕಡೆಗೆ ಕ್ರಮೇಣವಾಗಿ ದಾರಿ ಕಂಡುಕೊಳ್ಳಬಹುದು.

3. ಕಂಟೆಂಟ್ ರೈಟಿಂಗ್ ಕೆಲಸಗಳನ್ನು ಪ್ರಯತ್ನಿಸಿ

ನಿಮಗೆ ಬರವಣಿಗೆಯಲ್ಲಿ ಆಸಕ್ತಿ ಇದ್ದರೆ, ಕಂಟೆಂಟ್ ರೈಟಿಂಗ್ ಕೆಲಸದ ಮೂಲಕ ಆನ್‌ಲೈನ್‌ನಲ್ಲಿ ಹಣ ಗಳಿಸಲು ನೋಡಬಹುದು. ಇತ್ತೀಚಿಗಿನ ದಿನಗಳಲ್ಲಿ ತುಂಬಾ ಕಂಪನಿಗಳು ತಮ್ಮ ಕಂಟೆಂಟ್ ವರ್ಕ್ ಅನ್ನು ಔಟ್ಸೋರ್ಸ್ ಮಾಡುತ್ತಿವೆ. ಇಂಟರ್ನ್‌ಶಾಲಾ, ಫ್ರೀಲ್ಯಾನ್ಸರ್, ಅಪ್‌ವರ್ಕ್ ಮತ್ತು ಗುರು ತರಹದ ಈ ಆನ್‌ಲೈನ್ ಕೆಲಸವನ್ನು ಒದಗಿಸುವ ವೆಬ್‌ಸೈಟ್‌ಗಳಲ್ಲಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬಹುದು. ಅಲ್ಲಿ, ನೀವು ಬರಹಗಾರರಾಗಿ ನಿಮ್ಮ ಆದ್ಯತೆಗಳನ್ನು ಹೊಂದಿಸಬಹುದು ಮತ್ತು ನಂತರ ಬ್ರಾಂಡ್‌ಗಳು, ಆಹಾರ, ಪ್ರಯಾಣ ಮತ್ತು ಇತರ ವಿಷಯಗಳ ಬಗ್ಗೆ ಬರೆಯಲು ಅಥವಾ ಅಸ್ತಿತ್ವದಲ್ಲಿರುವ ಲೇಖನಗಳನ್ನು ಸರಿಪಡಿಸಲು ಕಂಪನಿಗಳಿಂದ ಪಾವತಿಸಿದ ಕೆಲಸವನ್ನು ಪಡೆಯಲು ಪ್ರಾರಂಭಿಸಬಹುದು.

4. ಬ್ಲಾಗಿಂಗ್ ಶುರು ಮಾಡಿ

ನಿಮಗೆ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಇದ್ದು, ಒಬ್ಬರ ಕೈ ಕೆಳಗೆ ಕಂಟೆಂಟ್ ರೈಟರ್ ಆಗಿ ದುಡಿಯಲು ನಿಮಗೆ ಇಷ್ಟವಿಲ್ಲದಿದ್ದರೆ, ನೀವು ನಿಮ್ಮದೇ ಆದ ಸ್ವಂತ ಬ್ಲಾಗ್ ಶುರು ಮಾಡಬಹುದು. ಬ್ಲಾಗಿಂಗ್ ಸೈಟ್ ಗಳಾದ ವರ್ಡ್ ಪ್ರೆಸ್, ಮೀಡಿಯಂ, ವೀಬ್ಲೀ, ಅಥವಾ ಬ್ಲಾಗರ್,ಉಚಿತ ಹಾಗು ಪಾವತಿ ಸೇವೆ ಎರಡನ್ನೂ ಒದಗಿಸುತ್ತಿವೆ. ಪುಸ್ತಕ ವಿಮರ್ಶೆಗಳು, ಅಡುಗೆ ಮಾಡುವ ವಿಧಾನಗಳು, ಪ್ರಯಾಣ, ಕಲೆ ಮತ್ತು ಕರಕುಶಲ ಇತ್ಯಾದಿಗಳಂತಹ ನಿಮ್ಮ ಆಸಕ್ತಿಯ ಕ್ಷೇತ್ರಗಳನ್ನು ನೀವು ತಿಳಿದುಕೊಂಡಿದ್ದರೆ, ನೀವು ಅದರ ಬಗ್ಗೆ ಬರೆಯಲು ಪ್ರಾರಂಭಿಸಬಹುದು.

ಒಮ್ಮೆ ನಿಮ್ಮ ಸೈಟ್ ಗೆ ಜನರು ಭೇಟಿ ಕೊಡಲು ಪ್ರಾರಂಭಿಸಿದರೆಂದರೆ, ನೀವು ಜಾಹಿರಾತುಗಳ ಮೂಲಕ ಹಣ ಸಂಪಾದಿಸಬಹುದು. ನಿಮ್ಮ ಸೈಟ್‌ಗೆ ಉಂಟಾಗುವ ಟ್ರಾಫಿಕ್ ಮತ್ತು ನೀವು ಎಷ್ಟು ಓದುಗರನ್ನು ಹೊಂದಿದ್ದೀರಿ ಎಂಬುದನ್ನು ಅವಲಂಬಿಸಿ, ನಿಮ್ಮ ಜಾಹೀರಾತು ಸ್ಥಳಕ್ಕಾಗಿ ನೀವು ತಿಂಗಳಿಗೆ ₹2,000-15,000 ವರೆಗೆ ಗಳಿಸಬಹುದು.

5. ನಿಮ್ಮ ಡಿಜಿಟಲ್ ಉತ್ಪನ್ನಗಳನ್ನು ಮಾರಾಟ ಮಾಡಿ

ನಿಮ್ಮ ಬ್ಲಾಗ್ ಅಥವಾ ವೆಬ್‌ಸೈಟ್‌ನಲ್ಲಿ, ಅಡುಗೆ ಮಾಡುವ ವಿಧಾನಗಳು ಅಥವಾ ಕರಕುಶಲ ವಸ್ತುಗಳ ತಯಾರಿ ಸೂಚನೆಗಳ ತರಹದ ನಿಮ್ಮ ಆಸಕ್ತಿಯ ವಸ್ತುಗಳ ಡಿಜಿಟಲ್ ಉತ್ಪನ್ನಗಳನ್ನು ಸಹ ನೀವು ಮಾರಾಟ ಮಾಡಬಹುದು. ಇದು ಆಡಿಯೋ ಅಥವಾ ವಿಡಿಯೋ ಕೋರ್ಸ್‌ಗಳು, ಇ-ಪುಸ್ತಕಗಳು, ವಿನ್ಯಾಸ ಟೆಂಪ್ಲೇಟ್‌ಗಳು, ಪ್ಲಗ್-ಇನ್‌ಗಳು, ಪಿಡಿಎಫ್ ಗಳು, ಪ್ರಿಂಟಬಲ್‌ಗಳು ಅಥವಾ ಯುಎಕ್ಸ್ ಕಿಟ್‌ಗಳನ್ನು ಒಳಗೊಂಡಿರುತ್ತವೆ.

ಅಮೆಜಾನ್, ಯುಡಿಮಿ, ಸ್ಕಿಲ್ ಶೇರ್, ಅಥವಾ ಕೋರ್ಸೆರಾ ನಂತಹ ಸೈಟ್‌ಗಳ ಮೂಲಕ ನೀವು ಈ ರೀತಿಯ ಡೌನ್‌ಲೋಡ್ ಅಥವಾ ಸ್ಟ್ರೀಮ್ ಮಾಡಬಹುದಾದ ಮಾಧ್ಯಮವನ್ನು ವಿತರಣೆ ಮತ್ತು ಮಾರಾಟ ಮಾಡಬಹುದು. ನಿಮ್ಮ ಉತ್ಪನ್ನವನ್ನು ನೀವು ಕೇವಲ ಒಂದು ಬಾರಿ ಮಾತ್ರ ತಯಾರು ಮಾಡಿ ನಿಮಗೆ ಬೇಕಾದಷ್ಟು ಬಾರಿ ಅದನ್ನು ಮಾರಾಟ ಮಾಡಬಹುದು, ಉತ್ತಮವಾದ ಮತ್ತು ವಿಶಿಷ್ಟವಾದ ಉತ್ಪನ್ನಕ್ಕಾಗಿ ನೀವು ಹೆಚ್ಚಿನ ಲಾಭಾಂಶವನ್ನು ಹೊಂದಬಹುದು.

6. ಆನ್‌ಲೈನ್‌ನಲ್ಲಿ ಟ್ರಾನ್ಸ್ಲೇಷನ್ ಅಂದರೆ ಭಾಷಾಂತರ ಕೆಲಸಗಳನ್ನು ಹುಡುಕಿ

ಒಂದು ವೇಳೆ ನಿಮಗೆ ಬೇರೆ ಬೇರೆ ಭಾಷೆಗಳಲ್ಲಿ ಚೆನ್ನಾಗಿ ಹಿಡಿತವಿದ್ದರೆ, ಒಬ್ಬ ಅನುವಾದಕರಾಗಿ ಆನ್‌ಲೈನ್‌ನಲ್ಲಿ ಹಣ ಗಳಿಸಬಹುದು. ಈ ಜಾಗತಿಕ ಯುಗದಲ್ಲಿ, ಜನರಿಗೆ ಡಾಕ್ಯುಮೆಂಟ್‌ಗಳಿಂದ ಹಿಡಿದು ವಾಯ್ಸ್ ಮೇಲ್‌ಗಳು, ಪೇಪರ್‌ಗಳು, ಸಬ್ ಟೈಟಲ್ ಮತ್ತು ಇನ್ನೂ ಹೆಚ್ಚಿನದನ್ನು ಅನುವಾದಿಸಲು ಸಾಕಷ್ಟು ಬೇಡಿಕೆಯಿದೆ. ವಿಶೇಷ ಟ್ರಾನ್ಸ್ಲೇಷನ್ ಏಜೆನ್ಸಿಗಳೊಂದಿಗೆ ಅಥವಾ ಫ್ರೀಲ್ಯಾನ್ಸ್ ಇಂಡಿಯಾ, ಅಪ್‌ವರ್ಕ್ ಅಥವಾ ಟ್ರೂಲಾನ್ಸರ್‌ ತರಹ ಸ್ವತಂತ್ರ ಪೋರ್ಟಲ್‌ಗಳ ಮೂಲಕ ನೀವು ಅಂತಹ ಕೆಲಸವನ್ನು ಕಾಣಬಹುದು.

ನಿಮ್ಮ ಆದಾಯವು ನಿಮಗೆ ತಿಳಿದಿರುವ ಭಾಷೆಗಳ ಸಂಖ್ಯೆಯನ್ನು ಆಧರಿಸಿರುತ್ತದೆ ಮತ್ತು ನೀವು ಕೇವಲ ಭಾರತೀಯ ಭಾಷೆಗಳ ಮೂಲಕವೇ ಸಾಕಷ್ಟು ಹಣವನ್ನು ಗಳಿಸಬಹುದು. ಒಂದು ವೇಳೆ ನೀವು ವಿದೇಶಿ ಭಾಷೆ (ಫ್ರೆಂಚ್, ರಷ್ಯನ್, ಸ್ಪ್ಯಾನಿಷ್, ಅಥವಾ ಜಪಾನೀಸ್ ನಂತಹ) ತಿಳಿದಿದ್ದರೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿದ್ದರೆ, ನೀವು ಮತ್ತಷ್ಟು ಹೆಚ್ಚು ಹಣ ಗಳಿಸಬಹುದು. ಸಾಮಾನ್ಯವಾಗಿ, ನಿಮಗೆ ಒಂದು ಪದಕ್ಕೆ ಇಷ್ಟು ಹಣ ಎಂದು ಪಾವತಿಸಲಾಗುತ್ತದೆ, ಮತ್ತು ನೀವು ಭಾಷೆಯ ಆಧಾರದ ಮೇಲೆ ಒಂದು ಪದಕ್ಕೆ ₹1 ರಿಂದ ₹4 ರವರೆಗೆ ಗಳಿಸಬಹುದು.

7. ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳ ಬಿಡುಗಡೆಗೂ ಮುಂಚೆ ಬೀಟಾ ಟೆಸ್ಟ್ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿಯಲ್ಲಿಯೂ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಇದ್ದೇ ಇರುತ್ತದೆ. ಹಾಗಾಗಿ ಅಪ್ಲಿಕೇಶನ್ ಗಳನ್ನು ಮತ್ತು ವೆಬ್ ಸೈಟ್ ಗಳನ್ನು ಟೆಸ್ಟ್ ಮಾಡುವ ಕೆಲಸದಿಂದ ಬಹಳ ಸುಲಭವಾಗಿ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಬಹುದು. ಕಂಪನಿಗಳು ಮತ್ತು ಅಪ್ಲಿಕೇಶನ್ ಡೆವಲಪರ್‌ಗಳು ಬಳಕೆದಾರರು ತಮ್ಮ ಹೊಸ ಉತ್ಪನ್ನಗಳಿಂದ ಗೊಂದಲಕ್ಕೊಳಗಾಗಲು ಬಯಸುವುದಿಲ್ಲ. ಆದ್ದರಿಂದ, ಅವರು 'ಬೀಟಾ ಟೆಸ್ಟಿಂಗ್' ಎಂಬ ವಿಧಾನವನ್ನು ಅನುಸರಿಸಲು ಬಳಕೆದಾರರನ್ನು ನೇಮಿಸಿಕೊಳ್ಳುತ್ತಾರೆ. ಬೀಟಾಟೆಸ್ಟಿಂಗ್, ಟೆಸ್ಟರ್ ವರ್ಕ್, ಟೆಸ್ಟ್.ಐಒ, ಅಥವಾ ಟ್ರೈಮೈಯುಐ ನಂತಹ ಸೈಟ್‌ಗಳು ಅಂತಹ ಉದ್ಯೋಗಗಳನ್ನು ನೀಡುತ್ತವೆ.

ನೀವು ಈ ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಬೇಕು ಮತ್ತು ನಂತರ ನೀವೊಬ್ಬ ಬಳಕೆದಾರರಾಗಿ ಪಡೆದ ಅನುಭವವನ್ನು ವರದಿ ಮಾಡಬೇಕು ಅಥವಾ ಸಾರ್ವಜನಿಕರಿಗೆ ಲೈವ್ ಹೋಗುವ ಮೊದಲು ಅವುಗಳಲ್ಲಿನ ಯಾವುದೇ ದೋಷಗಳನ್ನು ಗುರುತಿಸಬೇಕು. ಬೀಟಾ ಟೆಸ್ಟ್ ಗೆ ಒಳಪಡುವ ಉತ್ಪನ್ನ ಮತ್ತು ಈ ಒಂದು ಪ್ರಕ್ರಿಯೆಯಲ್ಲಿ ನಿಮ್ಮ ಅನುಭವದ ಆಧಾರದ ಮೇಲೆ, ನೀವು ಪ್ರತಿ ಬಾರಿ ₹1000 ರಿಂದ ₹3000 ವರೆಗೆ ಗಳಿಸಬಹುದು.

8. ಒಬ್ಬ ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡಿ

ಟ್ರಾವೆಲ್ ಏಜೆಂಟ್ ಅಥವಾ ಟ್ರಾವೆಲ್ ಪ್ಲಾನರ್ ಆಗಿ ಕೆಲಸವನ್ನು ಹುಡುಕುವುದು ನೀವು ಆನ್‌ಲೈನ್‌ನಲ್ಲಿ ಮಾಡಬಹುದಾದ ಒಂದು ಕಡಿಮೆ ಮೌಲ್ಯಮಾಪನದ ಸುಲಭವಾದ ಕೆಲಸ. ಇಂದಿನ ದಿನಗಳಲ್ಲಿ ಪ್ರಯಾಣದ ಬುಕಿಂಗ್ ಅನ್ನು ಆನ್‌ಲೈನ್‌ನಲ್ಲಿ ಮಾಡಬಹುದಾದರೂ, ಕೆಲಸದಲ್ಲಿ ನಿರತರಾಗಿರುವವರಿಗೆ ಅಥವಾ ಇಂಟರ್ನೆಟ್‌ನಲ್ಲಿ ಪರಿಚಯವಿಲ್ಲದವರಿಗೆ ಇದು ಸಾಕಷ್ಟು ಕಷ್ಟಕರವಾಗಿದೆ. ಹೀಗಾಗಿ, ಅನೇಕ ಜನರು ಈ ಪ್ರಕ್ರಿಯೆಯ ಮೂಲಕ ತಮಗೆ ಸಹಾಯ ಮಾಡಲು ಟ್ರಾವೆಲ್ ಏಜೆಂಟ್‌ಗಳನ್ನು ಹುಡುಕುತ್ತಾರೆ.

ನೀವು ಅಪ್ವರ್ಕ್, ಅವಾಂತ್ ಸ್ಟೇ, ಅಥವಾ ಹಾಪೆರ್ ನಂತಹ ಸೈಟ್‌ಗಳೊಂದಿಗೆ ಕೆಲಸ ಮಾಡಬಹುದು ಅಥವಾ ಸ್ವಯಂ ಉದ್ಯೋಗಿ ಟ್ರಾವೆಲ್ ಏಜೆಂಟ್ ಆಗಿ ಕೂಡ ಕೆಲಸ ಮಾಡಬಹುದು. ಎರಡೂ ಸಂದರ್ಭಗಳಲ್ಲಿ, ನಿಮ್ಮ ಸಂಪಾದನೆಯು ನಿಮ್ಮ ಗ್ರಾಹಕರು ಮತ್ತು ನೀವು ಕೆಲಸ ಮಾಡುವ ಕಂಪನಿಯ ಮೇಲೆ ಅವಲಂಬಿತವಾಗಿರುತ್ತದೆ.

9. ಡೇಟಾ ಎಂಟ್ರಿ ಕೆಲಸಗಳನ್ನು ಹುಡುಕಿ

ಮನೆಯಿಂದಲೇ ಹಣ ಗಳಿಸುವ ಇನ್ನೊಂದು ಆಯ್ಕೆಯೆಂದರೆ ಡೇಟಾ ಎಂಟ್ರಿ ಉದ್ಯೋಗಗಳ ಮೂಲಕ. ಈ ರೀತಿಯ ಕೆಲಸಗಳನ್ನು ಕೇವಲ ಕಂಪ್ಯೂಟರ್, ಎಕ್ಸೆಲ್ ಮತ್ತು ಇತರ ಮೈಕ್ರೋಸಾಫ್ಟ್ ಟೂಲ್ಸ್ ಜ್ಞಾನದೊಂದಿಗೆ ಆನ್‌ಲೈನ್‌ನಲ್ಲಿ ಮಾಡಬಹುದು. ಮೊದಲಿಗೆ ನೀವು ಆಕ್ಸಿಯಾನ್ ಡೇಟಾ ಎಂಟ್ರಿ ಸರ್ವಿಸಸ್, ಡೇಟಾ ಪ್ಲಸ್, ಫ್ರೀಲ್ಯಾನ್ಸರ್ ಅಥವಾ ಗುರು ನಂತಹ ವಿಶ್ವಾಸಾರ್ಹ ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ನೀವು ಪ್ರಪಂಚದಾದ್ಯಂತದ ಕಂಪನಿಗಳಿಂದ ಡೇಟಾ ಎಂಟ್ರಿ ಉದ್ಯೋಗಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಅವರು ನಿಮಗೆ ಇಮೇಲ್ ಅಥವಾ ಡೇಟಾ ಮೂಲಕ್ಕೆ ಲಿಂಕ್ ಅನ್ನು ಕಳುಹಿಸುತ್ತಾರೆ ಮತ್ತು ಏನು ಮಾಡಬೇಕೆಂಬುದರ ಕುರಿತು ಸೂಚನೆಗಳನ್ನು ಸಹ ಕಳುಹಿಸುತ್ತಾರೆ. ಈ ಉದ್ಯೋಗಗಳೊಂದಿಗೆ, ನೀವು ಪ್ರತಿ ಗಂಟೆಗೆ ₹300 ರಿಂದ ₹1,500 ಗಳಿಸಬಹುದು (ನಿಮ್ಮ ವಿವರಗಳನ್ನು ವರ್ಗಾಯಿಸುವ ಮೊದಲು ಅವರ ಕಾನೂನುಬದ್ಧತೆಯನ್ನು ಪರೀಕ್ಷಿಸುವುದನ್ನು ಮರೆಯಬೇಡಿ).

10. ಆನ್‌ಲೈನ್ ಪಾಠ ಮಾಡುವುದನ್ನು ಆಯ್ಕೆಮಾಡಿ

ಯಾವುದಾದರೂ ನಿರ್ದಿಷ್ಟ ವಿಷಯದ ಕುರಿತು ನಿಮಗೆ ಸಾಕಷ್ಟು ಜ್ಞಾನ ಇದ್ದರೆ ಅಥವಾ ನೀವು ಪ್ರಸ್ತುತ ಕಾಲೇಜು ವಿದ್ಯಾರ್ಥಿ ಆಗಿದ್ದರೆ, ಆನ್‌ಲೈನ್‌ನಲ್ಲಿ ಹಣ ಗಳಿಸಲು ಒಂದು ಉತ್ತಮ ಆಯ್ಕೆ ಎಂದರೆ ಅದು ಆನ್‌ಲೈನ್ ನಲ್ಲಿ ಪಾಠ ಮಾಡುವುದು. ಪ್ರತಿ ಹಂತದಲ್ಲಿರುವ ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ, ವಿಜ್ಞಾನ, ಇತಿಹಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಮಾಡಲು ಎಲ್ಲದರಲ್ಲೂ ಪಾಠಗಳನ್ನು ಹುಡುಕುತ್ತಿದ್ದಾರೆ. ಮತ್ತು ನೀವು ಕಲಿಸುವ ವಿಷಯಗಳ ಆಧಾರದ ಮೇಲೆ, ನಿಮ್ಮ ಪರಿಣತಿಯ ಆಧಾರದ ಮೇಲೆ ನೀವು ಗಂಟೆಯ ದರವನ್ನು ನಿಗದಿ ಪಡಿಸಬಹುದು ಮತ್ತು ನೀವು ಗಂಟೆಗೆ ₹200–500 ವರೆಗೆ ಗಳಿಸಬಹುದು. 

ಯುಡೆಮಿ, ಅಥವಾ ಕೋರ್ಸೆರಾ ನಂತಹ ಆನ್‌ಲೈನ್ ಟ್ಯೂಟರಿಂಗ್ ಪ್ಲಾಟ್‌ಫಾರ್ಮ್‌ನೊಂದಿಗೆ ಸೈನ್ ಅಪ್ ಮಾಡಬಹುದು ಅಥವಾ ನಿಮ್ಮ ಸಾಮಾಜಿಕ ವಲಯಗಳಲ್ಲಿ ಬೋಧನಾ ತರಗತಿಗಳ ಅಗತ್ಯವಿರುವ ಜನರನ್ನು ನೀವು ಹುಡುಕಿ ತಲುಪಬಹುದು.

11. ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿ

ಬಹಳಷ್ಟು ಜನರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಚತುರರಾಗಿರುತ್ತಾರೆ. ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಇದು ಕೂಡ ಉತ್ತಮ ಮಾರ್ಗವಾಗಿದೆ. ನೀವು ಷೇರುಗಳಲ್ಲಿ ಹೂಡಿಕೆ ಮಾಡಿದಾಗ, ನೀವು ಕೇವಲ ಕಂಪನಿಯ ಷೇರುಗಳನ್ನು ಖರೀದಿಸುತ್ತೀರಿ ಮತ್ತು ಆ ಕಂಪನಿಯ ಷೇರುಗಳ ಮೌಲ್ಯ ಹೆಚ್ಚಾದಾಗ, ನೀವು ಕಂಪನಿಯಿಂದ "ಲಾಭಾಂಶಗಳನ್ನು" ಪಡೆಯುತ್ತೀರಿ.

ಸ್ಟಾಕ್‌ಗಳು ನಿಜವಾಗಿಯೂ ಅಪಾಯಕಾರಿಯಾಗಬಹುದು (ಅಂದರೆ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ನಿಮ್ಮ ಷೇರುಗಳ ಮೌಲ್ಯವು ಕುಸಿಯಬಹುದು), ಆದರೆ ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸುವ ಮೂಲಕ ನೀವು ಈ ಅಪಾಯವನ್ನು ಕಡಿಮೆ ಮಾಡಬಹುದು. ಹಲವಾರು ಲಾಭದಾಯಕ ಷೇರುಗಳೊಂದಿಗೆ, ನೀವು ಕೇವಲ ಆನ್‌ಲೈನ್‌ನಲ್ಲಿ ಕೆಲಸ ಮಾಡುವ ಮೂಲಕ ಹೆಚ್ಚಿನ ಲಾಭಾಂಶವನ್ನು ಗಳಿಸಬಹುದು.

12. ಅಫಿಲಿಯೇಟ್ ಮಾರ್ಕೆಟಿಂಗ್ ನಿಮಗೆ ಸರಿಹೊಂದುತ್ತದೆಯೇ ಎಂದು ನೋಡಿ

ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಇರುವ ಮತ್ತೊಂದು ಉತ್ತಮ ಮಾರ್ಗವೆಂದರೆ ಅದು ಅಫಿಲಿಯೇಟ್ ಮಾರ್ಕೆಟಿಂಗ್. ಈ ವಿಧಾನವು ಯಾವಾಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರೆ ನಿಮಗೆ ದೊಡ್ಡ ಸಾಮಾಜಿಕ ಮಾಧ್ಯಮ ಫಾಲೊವೆರ್ಸ್ ಇದ್ದರೆ, ವೆಬ್‌ಸೈಟ್, ಬ್ಲಾಗ್ ಅಥವಾ ದೊಡ್ಡ ಮೇಲಿಂಗ್ ಲಿಸ್ಟ್ ಹೊಂದಿದ್ದರೆ, ಯಾವುದೇ ಹೂಡಿಕೆಯಿಲ್ಲದೆ ಆನ್‌ಲೈನ್‌ನಲ್ಲಿ ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ.

ಅಫಿಲಿಯೇಟ್ ಮಾರ್ಕೆಟಿಂಗ್‌ನೊಂದಿಗೆ, ನೀವು ಬ್ರ್ಯಾಂಡ್ ಅಥವಾ ಅಮೆಜಾನ್ ನಂತಹ ಕಂಪನಿಗೆ ಅಫಿಲಿಯೇಟ್ ಆಗುತ್ತೀರಿ ಮತ್ತು ನಿಮ್ಮ ಸೈಟ್‌ನಲ್ಲಿ ಲಿಂಕ್ ಹಾಕುವ ಮೂಲಕ ನಿಮ್ಮ ಫಾಲೊವೆರ್ ಗಳು ಅಥವಾ ಓದುಗರಿಗೆ ನೀವು ಅವರ ಉತ್ಪನ್ನಗಳನ್ನು ಪ್ರಚಾರ ಮಾಡುತ್ತೀರಿ. ನಂತರ, ನೀವು ಕಮಿಷನ್ ಆಧಾರದ ಮೇಲೆ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಹೀಗಾಗಿ, ನಿಮ್ಮ ಲಿಂಕ್ ಬಳಸಿ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಹೆಚ್ಚಿನ ಜನರು ಖರೀದಿಸಿದರೆ, ನೀವು ಹೆಚ್ಚು ಗಳಿಸುವಿರಿ.

ಕಳೆದ ಕೆಲವು ವರ್ಷಗಳು ನಮ್ಮ ಅನೇಕ ಜನಸಾಮಾನ್ಯರ ಜೀವನವನ್ನು ಅಡ್ಡಿಪಡಿಸಿವೆ, ಆದರೆ ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಆನ್‌ಲೈನ್‌ನಲ್ಲಿ ಹಣ ಗಳಿಸುವ ಮಾರ್ಗಗಳಾಗಿ ಪರಿವರ್ತಿಸಲು ಸಾಕಷ್ಟು ಮಾರ್ಗಗಳಿವೆ ಎಂದು ನೀವು ನೋಡಬಹುದು. 

ಆನ್‌ಲೈನ್ ಉದ್ಯೋಗಗಳಿಂದ ಹಣ ಗಳಿಸುವುದು ಹೇಗೆ ಎಂದು ಹುಡುಕುತ್ತಿರುವ ಯಾರಿಗೇ ಆದರೂ ಸಾಕಷ್ಟು ಬಗೆಯ ಆಯ್ಕೆಗಳಿವೆ. ನಿಮ್ಮ ಆಸಕ್ತಿಗಳು ಮತ್ತು ಹೆಚ್ಚು ತಿಳಿದುಕೊಂಡಿರುವ ಕ್ಷೇತ್ರಗಳಲ್ಲಿ ಸೂಕ್ತವಾದ ಯಾವುದನ್ನಾದರೂ ನೀವು ಸುಲಭವಾಗಿ ಕಂಡುಕೊಂಡು ನಿಮ್ಮ ಉಚಿತ ಸಮಯವನ್ನು ಬದಿಯಲ್ಲಿ ಹಣವನ್ನು ಗಳಿಸುವ ಮಾರ್ಗವನ್ನಾಗಿ ಪರಿವರ್ತಿಸಬಹುದು. ವಿದ್ಯಾರ್ಥಿಗಳು, ಗೃಹಿಣಿಯರು, ನಿವೃತ್ತರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರಿಗೂ ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಇವು ಅತ್ಯುತ್ತಮವಾಗಿವೆ.

ಮೋಸದ ವೆಬ್‌ಸೈಟ್‌ಗಳು ಮತ್ತು ಕಂಪನಿಗಳ ಮೇಲೆ ಒಂದು ಕಣ್ಣಿಡಿ.

  • ನೀವು ಯಾವುದೇ ಸೈಟ್ ಅನ್ನು ಸಂಪೂರ್ಣವಾಗಿ ಸಂಶೋಧಿಸಬಹುದು ಮತ್ತು ನೀವು ರಿಜಿಸ್ಟರ್ ಆಗುವ ಮೊದಲು ಅದರ ವಿಮರ್ಶೆಗಳು ಮತ್ತು ಕಾಮೆಂಟ್‌ಗಳನ್ನು ಓದಬಹುದು.

  • ವೆಬ್‌ಸೈಟ್ ದೀರ್ಘ ಕೆಲಸದ ಸಮಯವನ್ನು ನೀಡಿ, ನಿಮಗೆ ಪರಿಹಾರವಾಗಿ ಹೆಚ್ಚು ಪಾವತಿಸದಿದ್ದರೆ, ಅದನ್ನು ತಪ್ಪಿಸಲು ಪ್ರಯತ್ನಿಸಿ.

  • ಆನ್‌ಲೈನ್‌ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಶೇರ್ ಮಾಡುವಾಗ, ಸದಾ ಎಚ್ಚರದಿಂದಿರಿ

  • ಮತ್ತು, ಸಹಿ ಮಾಡುವ ಮುಂಚೆ ನಿಮಗೆ ನೀಡಲಾದ ಯಾವುದೇ ಒಪ್ಪಂದವನ್ನು ಪೂರ್ತಿಯಾಗಿ ಓದಬೇಕು ಎಂಬುದನ್ನು ನೆನಪಿಡಿ