ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗಾಗಿ ಇ-ವೀಸಾ ದೇಶಗಳು
ವ್ಯಾಪಾರ, ಮನೋರಂಜನೆ, ಶಿಕ್ಷಣ ಹಾಗೂ ಇನ್ನಿತರೆ ಕೆಲಸಕ್ಕಾಗಿ ಪ್ರತಿ ದಿನ ಸಾವಿರಾರು ಮಂದಿ ಗಡಿಯುದ್ದಕ್ಕೂ ಪ್ರಯಾಣಿಸುತ್ತಲೇ ಇರುತ್ತಾರೆ. ನಿರ್ದಿಷ್ಠ ದೇಶ ಪ್ರವೇಶಿಸುವ ಮುನ್ನ ನಿಮ್ಮ ಬಳಿ ಇರಲೇಬೇಕಾದ ಮುಖ್ಯ ದಾಖಲೆ ಎಂದರೆ ವೀಸಾ. ಆದರೆ ವೀಸಾ ಪಡೆಯುವುದು ಒಂದು ದೀರ್ಘ ಪ್ರಕ್ರಿಯೆಯಾಗಿದೆ. ಆದರೂ ಇ-ವೀಸಾ ಪರಿಚಯದಿಂದ, ನೀವು ಸುಲಭವಾಗಿ ಹಾಗೂ ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ.
ಇ-ವೀಸಾ ಎಂದರೇನು?
ಎಲೆಕ್ಟ್ರಾನಿಕ್ ವೀಸಾ ಅಥವಾ ಇ-ವೀಸಾ ಡಿಜಿಟಲ್ ಅಂಗೀಕರಿಸಿದ ವೀಸಾ ದಾಖಲೆಯಾಗಿದ್ದು, ಆಗಮನದ ನಂತರ ಗಡಿ ನಿಯಂತ್ರಣದಲ್ಲಿ ದಾಖಲೆಯನ್ನು ಪ್ರಸ್ತುತಪಡಿಸಿದ ನಂತರ ಪ್ರಯಾಣಿಕರು ತಮ್ಮ ಗಮ್ಯಸ್ಥಾನದ ದೇಶವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇ-ವೀಸಾದೊಂದಿಗೆ ಪ್ರಯಾಣಿಕರು ಆನ್ಲೈನ್ ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಗಮ್ಯಸ್ಥಾನದ ದೇಶದ ಅಧಿಕೃತ ಸರ್ಕಾರಿ ವೆಬ್‌ಸೈಟ್ ಮೂಲಕ ವೀಸಾ ಶುಲ್ಕವನ್ನೂ ಪಾವತಿಸಬಹುದು.
ಹೆನ್ಲಿ ಅಂಡ್ ಪಾರ್ಟ್ನರ್ಸ್ ರಿಂದ ಪಾಸ್ಪೋರ್ಟ್ ಇಂಡೆಕ್ಸ್ ಪ್ರಕಾರ 2023 ಮಾರ್ಚ್ ನಂತೆ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಈ ಕೆಳಗಿನ ಪಟ್ಟಿಯ ದೇಶಗಳ ಪ್ರಯಾಣಕ್ಕಾಗಿ ಇ-ವೀಸಾ ಅರ್ಜಿಯನ್ನು ಸಲ್ಲಿಸಬಹುದು. ಪ್ರಯಾಣದ ಸ್ವಾತಂತ್ರ್ಯದ ವಿಷಯದಲ್ಲಿ ಪ್ರಸ್ತುತ ಭಾರತೀಯ ಪಾಸ್ಪೋರ್ಟ್ 84ನೇ ಸ್ಥಾನವನ್ನು ಪಡೆದುಕೊಂಡಿದೆ.
2023 ರಲ್ಲಿ ಭಾರತೀಯ ನಾಗರಿಕರಿಗಾಗಿ ಇ-ವೀಸಾ ದೇಶಗಳ ಪಟ್ಟಿ
ಮಾರ್ಚ್ 2023 ರಂತೆ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಇ-ವೀಸಾ ನೀಡುವ ದೇಶಗಳ ಪಟ್ಟಿ ಈ ಕೆಳಕಂಡಂತಿವೆ:
| 1. ಅಂಗೋಲಾ | 14. ಮಲೇಷಿಯಾ |
| 2. ಆಂಟಿಗುವಾ ಮತ್ತು ಬಾರ್ಬುಡಾ | 15. ಮೊಲ್ಡೊವಾ |
| 3. ಆಸ್ಟ್ರೇಲಿಯಾ | 16. ಮೊರಾಕೊ |
| 4. ಅಜೆರ್ಬೈಜಾನ್ | 17. ರಷ್ಯಾ |
| 5. ಬಹ್ರೇನ್ | 18. ಸಾವೊ ಟೋಮ್ ಮತ್ತು ಪ್ರಿನ್ಸಿಪಿ |
| 6.ಬೆನಿನ್ | 19. ಸಿಂಗಾಪುರ |
| 7. ಕೊಲಂಬಿಯಾ | 20. ಸುರಿನಾಮ್ |
| 8. ಜಿಬೌಟಿ | 21. ತೈವಾನ್ |
| 9. ಜಾರ್ಜಿಯ | 22. ತಜಕಿಸ್ತಾನ್ |
| 10. ಕೀನ್ಯಾ | 23. ಟರ್ಕಿ |
| 11. ಕುವೈತ್ | 24. ಉಜ್ಬೇಕಿಸ್ತಾನ್ |
| 12. ಕಿರ್ಗಿಸ್ತಾನ್ | 25. ವಿಯೆಟ್ನಾಂ |
| 13. ಲೆಸೊಥೊ | 26. ಝಾಂಬಿಯಾ |
2023 ರಲ್ಲಿ ಭಾರತೀಯ ನಾಗರಿಕರಿಗೆ ವೀಸಾ-ಆನ್-ಅರೈವಲ್ ದೇಶಗಳ ಪಟ್ಟಿ
ಅನೇಕ ದೇಶಗಳು ಆ ದೇಶಕ್ಕೆ ಪ್ರವೇಶಿಸುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ-ಆನ್-ಅರೈವಲ್ ಮತ್ತು ಇ-ವೀಸಾ ಸೌಲಭ್ಯಗಳನ್ನು ನೀಡುತ್ತವೆ. ಸಾಮಾನ್ಯವಾಗಿ, ವೀಸಾ-ಆನ್-ಅರೈವಲ್ ಪಡೆಯಲು, ವಲಸೆ ಅಧಿಕಾರಿಗಳು ಸಂದರ್ಶಕರ ಪಾಸ್‌ಪೋರ್ಟ್, ಅವರ ಬಯೋಮೆಟ್ರಿಕ್‌ಗಳನ್ನು ಪರಿಶೀಲಿಸುತ್ತಾರೆ, ನಿಗದಿತ ಪಾವತಿಗಳನ್ನು ಸಂಗ್ರಹಿಸುತ್ತಾರೆ ಮತ್ತು ಪ್ರಯಾಣಿಕ ದೇಶಕ್ಕೆ ಪ್ರವೇಶಿಸಿದ ನಂತರ ವೀಸಾ ಪರವಾನಗಿಯನ್ನು ನೀಡುತ್ತಾರೆ. ದೇಶಕ್ಕೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಆನ್-ಅರೈವಲ್ ವೀಸಾವನ್ನು ನೀಡಲಾಗುತ್ತದೆ.
ಕೆಳಗಿನ ಪಟ್ಟಿಯಲ್ಲಿ, 2023 ರಲ್ಲಿ ಭಾರತೀಯ ನಾಗರಿಕರಿಗೆ ವೀಸಾ-ಆನ್-ಅರೈವಲ್ ಒದಗಿಸುವ ದೇಶಗಳನ್ನು ಉಲ್ಲೇಖಿಸಲಾಗಿದೆ:
| 27. ಬೊಲಿವಿಯಾ | 44. ಮೊಜಾಂಬಿಕ್ |
| 28. ಬೋಟ್ಸ್ವಾನಾ | 45. ಮ್ಯಾನ್ಮಾರ್ |
| 29. ಬುರುಂಡಿ | 46. ಪಲಾವ್ ದ್ವೀಪಗಳು |
| 30. ಕಾಂಬೋಡಿಯಾ | 47. ರುವಾಂಡಾ |
| 31. ಕೇಪ್ ವರ್ಡೆ ದ್ವೀಪಗಳು | 48. ಸಮೋವಾ |
| 32. ಕೊಮೊರೊ ದ್ವೀಪಗಳು | 49. ಸೀಶೆಲ್ಸ್ |
| 33. ಇಥಿಯೋಪಿಯಾ | 50. ಸಿಯೆರಾ ಲಿಯೋನ್ |
| 34. ಗ್ಯಾಬೊನ್ | 51. ಸೊಮಾಲಿಯಾ |
| 35. ಗಿನಿ-ಬಿಸ್ಸೌ | 52. ಶ್ರೀಲಂಕಾ |
| 36. ಇಂಡೋನೇಷ್ಯಾ | 53. ಸೇಂಟ್ ಲೂಸಿಯಾ |
| 37. ಇರಾನ್ | 54. ತಾಂಜಾನಿಯಾ |
| 38. ಜೋರ್ಡಾನ್ | 55. ಥೈಲ್ಯಾಂಡ್ |
| 39. ಲಾವೋಸ್ | 56. ಟಿಮೋರ್-ಲೆಸ್ಟೆ |
| 40. ಮಡಗಾಸ್ಕರ್ | 57. ಟೋಗೋ |
| 41. ಮಾಲ್ಡೀವ್ಸ್ | 58. ತುವಾಲು |
| 42. ಮಾರ್ಷಲ್ ದ್ವೀಪಗಳು | 59. ಉಗಾಂಡಾ |
| 43. ಮೌರಿಟಾನಿಯಾ | 60. ಜಿಂಬಾಬ್ವೆ |
2023 ರಲ್ಲಿ ಭಾರತೀಯ ನಾಗರೀಕರಿಗಾಗಿ ವೀಸಾ-ಫ್ರೀ ದೇಶಗಳ ಪಟ್ಟಿ:
ವಿಸಾ ಅಗತ್ಯವಿಲ್ಲದೆಯೇ ಪರಸ್ಪರ ಒಪ್ಪಂದದ ಮೇರೆಗೆ ಪ್ರಯಾಣಿಕರಿಗೆ ಪ್ರವೇಶ ನೀಡುವ ದೇಶಗಳೇ ವೀಸಾ-ಫ್ರೀ ದೇಶಗಳು. ಆದರೆ ವೀಸಾ ಅರ್ಜಿಯ ತೊಂದರೆಯಿಲ್ಲದೆಯೇ ಪ್ರಯಾಣಿಕರು ಗುರುತಿನ ಪುರಾವೆಯನ್ನು ಒದಗಿಸಬೇಕಾಗುತ್ತದೆ.
ಭಾರತೀಯರು ವಿಸಾ ಇಲ್ಲದೆಯೇ ಪ್ರಯಾಣಿಸಬಹುದಾದ ದೇಶಗಳ ಪಟ್ಟಿ ಹೀಗಿವೆ:
| 61. ಅಲ್ಬೇನಿಯಾ | 74. ಮಾರಿಷಸ್ |
| 62. ಬಾರ್ಬಡೋಸ್ | 75. ಮೈಕ್ರೋನೇಷಿಯಾ |
| 63. ಭೂತಾನ್ | 76. ಮಾಂಟ್ಸೆರಾಟ್ |
| 64. ಬ್ರಿಟಿಷ್ ವರ್ಜಿನ್ ದ್ವೀಪಗಳು | 77. ನೇಪಾಳ |
| 65. ಕುಕ್ ದ್ವೀಪಗಳು | 78. ನಿಯು |
| 66. ಡೊಮಿನಿಕಾ | 79. ಒಮಾನ್ |
| 67. ಎಲ್ ಸಾಲ್ವಡಾರ್ | 80. ಕತಾರ್ |
| 68. ಫಿಜಿ | 81. ಸೆನೆಗಲ್ |
| 69. ಗ್ರೆನಡಾ | 82. ಸೇಂಟ್ ಕಿಟ್ಸ್ ಮತ್ತು ನೆವಿಸ್ |
| 70. ಹೈಟಿ | 83. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
| 71. ಜಮೈಕಾ | 84. ಟ್ರಿನಿಡಾಡ್ ಮತ್ತು ಟೊಬಾಗೊ |
| 72. ಕಝಾಕಿಸ್ತಾನ್ | 85. ಟುನೀಶಿಯಾ |
| 73. ಮಕಾವೊ (SAR ಚೀನಾ) | 86. ವನವಾಟು |
ಭಾರತೀಯ ಪ್ರಜೆಗಳಿಗಿರುವ ಇ-ವೀಸಾ ಅಗತ್ಯತೆಗಳು ಯಾವುವು?
ನಿಮ್ಮ ಭಾರತೀಯ ಪಾಸ್‌ಪೋರ್ಟ್ ಆ ನಿರ್ದಿಷ್ಟ ದೇಶದಲ್ಲಿ ಇ-ವೀಸಾಗೆ ಅರ್ಹವಾಗಿದ್ದರೆ ಮಾತ್ರ ನೀವು ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಕೆಲವು ದೇಶಗಳು ಹೆಚ್ಚುವರಿ ಅರ್ಹತಾ ಮಾನದಂಡಗಳನ್ನು ಸಹ ಹೊಂದಿವೆ, ಆದ್ದರಿಂದ ಆಯಾ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿ.
ಇ-ವೀಸಾ ವ್ಯವಸ್ಥೆಯು ಈಗಾಗಲೇ ಇ-ವೀಸಾವನ್ನು ಅನುಮೋದಿಸಿರುವುದರಿಂದ ಪ್ರಯಾಣಿಕರಿಗೆ ಗಡಿಗಳಲ್ಲಿ ಪ್ರಕ್ರಿಯೆಯ ಸಮಯವನ್ನು ವೇಗಗೊಳಿಸಲು ಸಹಾಯ ಮಾಡಿದೆ. ನೀವು ಅಗತ್ಯವಿರುವ ದಾಖಲೆಗಳನ್ನು ಹೊಂದಿರುವಿರಾ ಎಂಬುದನ್ನು ಪರಿಶೀಲಿಸಲು ಮತ್ತು ನಿಮ್ಮ ಪಾಸ್‌ಪೋರ್ಟ್‌ಗೆ ಮುದ್ರೆ ಹಾಕಲು ನಿಮಗೆ ವಲಸೆ ಅಧಿಕಾರಿಯ ಅಗತ್ಯವಿದೆ.
ನೀವು ಒದಗಿಸಬೇಕಾದ ಕೆಲವು ಪ್ರಮಾಣಿತ ದಾಖಲೆಗಳನ್ನು ಕೆಳಗೆ ತಿಳಿಸಲಾಗಿದೆ:
- ಡಿಜಿಟಲ್ ಛಾಯಾಚಿತ್ರ
- ವಿದೇಶಿ ದೇಶಕ್ಕೆ ಆಗಮಿಸಿದ ದಿನಾಂಕದಿಂದ ಕನಿಷ್ಠ ಆರು ತಿಂಗಳ ಮಾನ್ಯವಾದ ಪಾಸ್‌ಪೋರ್ಟ್.
- ಟ್ರಾವೆಲ್ ವ್ಯವಸ್ಥೆಗಳ ಪುರಾವೆ, ವಸತಿ, ರಿಟರ್ನ್ ಟಿಕೆಟ್, ಇತ್ಯಾದಿಗಳಂತಹ ವೈಯಕ್ತಿಕ ಮತ್ತು ಪ್ರಯಾಣದ ಮಾಹಿತಿ.
- ಇ-ವೀಸಾ ಅರ್ಜಿ ನಮೂನೆ
- ಆನ್‌ಲೈನ್ ಪಾವತಿ ರಸೀದಿ
ದೇಶಕ್ಕೆ ಅನುಗುಣವಾಗಿ ಹೆಚ್ಚುವರಿ ಮಾಹಿತಿ ಅಥವಾ ದಾಖಲೆಗಳು ಬೇಕಾಗಬಹುದು. ಆದ್ದರಿಂದ ಇ-ವೀಸಾಕ್ಕೆ ಅಧಿಕೃತ ಸರ್ಕಾರಿ ವೆಬ್ಸೈಟ್ ಮೂಲಕವೇ ಅರ್ಜಿ ಸಲ್ಲಿಸುವುದು ಒಳಿತು
ನೀವು ಅಂತರಾಷ್ಟ್ರೀಯ ಪ್ರವಾಸಗಳಿಗಾಗಿ ಏಕೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕು?
ಟ್ರಾವೆಲ್ ಇನ್ಶೂರೆನ್ಸ್ ಪರಿಚಯವಿಲ್ಲದ ಪ್ರದೇಶಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವುದಲ್ಲದೆ, ಇದು ವ್ಯಾಪಕ ಶ್ರೇಣಿಯ ವ್ಯಾಪ್ತಿಯನ್ನು ಸಹ ನೀಡುತ್ತದೆ. ಹೆಚ್ಚಿನ ಪ್ರಯಾಣಿಕರು ಕಳ್ಳತನ ಅಥವಾ ಸಾಮಾನು ಸರಂಜಾಮು ಅಥವಾ ಟ್ರಾವೆಲ್ ದಾಖಲೆಗಳ ನಷ್ಟದಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ಆರ್ಥಿಕವಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯಾಣ ವಿಮೆಯನ್ನು ಖರೀದಿಸುತ್ತಾರೆ. ನಿಮಗೆ ವಿದೇಶದಲ್ಲಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಪ್ರಯಾಣ ವಿಮೆಯು ಸಮಗ್ರ ವೈದ್ಯಕೀಯ ರಕ್ಷಣೆಯನ್ನು ಸಹ ಒದಗಿಸುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಹಲವಾರು ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ:
- ವೈದ್ಯಕೀಯ ತುರ್ತುಸ್ಥಿತಿಗಳಿಗೆ ಕವರೇಜ್- ನಿಮ್ಮ ಪ್ರವಾಸದ ಸಮಯದಲ್ಲಿ, ಆಕಸ್ಮಿಕ ಅಥವಾ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ನಿಮಗೆ ತುರ್ತು ವೈದ್ಯಕೀಯ ನೆರವು ಅಗತ್ಯವಿರುವ ಸಂದರ್ಭಗಳು ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಆಸ್ಪತ್ರೆಯ ಬಿಲ್‌ಗಳು ಮತ್ತು ನಿಮ್ಮ ಚಿಕಿತ್ಸೆಯ ವೆಚ್ಚವನ್ನು ಒಳಗೊಂಡಿರುತ್ತದೆ.
- ಪ್ರವಾಸ ರದ್ದತಿ ಅಥವಾ ಫ್ಲೈಟ್ ವಿಳಂಬಗಳು- ಫ್ಲೈಟ್ ವಿಳಂಬ, ತಪ್ಪಿದ ಸಂಪರ್ಕ, ಅಥವಾ ಎಲ್ಲಾ-ಪ್ರವಾಸ ರದ್ದತಿಗಳು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಕೆಲವು ನಿದರ್ಶನಗಳಾಗಿವೆ.
- ವಿಳಂಬ/ಸಾಮಾನುಗಳ ನಷ್ಟ– ಪ್ರವಾಸಕ್ಕೆ ಸೂಕ್ತ ಯೋಜನೆ ರೂಪಿಸಿಕೊಂಡರೂ ಕೆಲವು ಸಂದರ್ಭದಲ್ಲಿ ಚೆಕ್-ಇನ್-ಬ್ಯಾಗೇಜ್ ನಿಂದ ವಿಳಂಬವಾಗಬಹುದು. ಈ ಸಂದರ್ಭಗಳಲ್ಲಿ, ಟ್ರಾವೆಲ್ ಇನ್ಶೂರೆನ್ಸ್-ಪಾಲಿಸಿಯು ನಿಮ್ಮ ಬ್ಯಾಗೇಜ್‌ನ ವಿಳಂಬ ಅಥವಾ ನಷ್ಟಕ್ಕೆ ವಿತ್ತೀಯ ಪರಿಹಾರವನ್ನು ಒದಗಿಸುತ್ತದೆ.
- ವಾಲೆಟ್ ನಷ್ಟದ ವಿರುದ್ಧ ರಕ್ಷಣೆ– ವಿದೇಶ ಪ್ರಯಾಣದ ವೇಳ ಉಂಟಾಗುವ ಪ್ರಮುಖ ಸಮಸ್ಯೆಗಳಲ್ಲಿ ವಾಲೆಟ್ ನಷ್ಟ ಅಥವಾ ಕಳ್ಳತನವೂ ಒಂದು. ಅಂತಹ ಸಂದರ್ಭಗಳಲ್ಲಿ ಸಮಸ್ಯೆಗಗೆ ಪರಿಹಾರವಾಗಿ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್-ಪಾಲಿಸಿಯು ಹಣಕಾಸಿನ ತುರ್ತು ಹಣವನ್ನು ಒದಗಿಸುತ್ತದೆ.
- ವಿಸ್ತೃತ ಅಥವಾ ಪರಿತ್ಯಕ್ತ ಪ್ರವಾಸಕ್ಕಾಗಿ ಕವರ್ - ಮುಷ್ಕರಗಳು, ಗಲಭೆಗಳು, ನೈಸರ್ಗಿಕ ವಿಕೋಪಗಳು ಮತ್ತು ಇತರ ಅಪಾಯಕಾರಿ ಘಟನೆಗಳ ಸಂದರ್ಭದಲ್ಲಿ, ನಿಮ್ಮ ಪ್ರವಾಸದ ಅವಧಿಗೆ ಅಡಚಣೆಯಾಗಬಹುದು. ಮಿಂಚಿನಂತೆ ಬರುವ ಈ ಬಗೆಯ ಸನ್ನಿವೇಶಗಳಿಂದಾಗಿ ವಾಸ್ತವ್ಯವನ್ನು ತ್ಯಜಿಸಬೇಕಾಗುತ್ತದೆ ಅಥವಾ ವಿಸ್ತರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲೂ ವೆಚ್ಚಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ರದ್ದಾದ ಅಥವಾ ವಿಸ್ತೃತ ಪ್ರವಾಸವನ್ನು ಒಳಗೊಂಡಿರುತ್ತದೆ.
- ಬೌನ್ಸ್ ಬುಕ್ಕಿಂಗ್‌ಗಳು– ಪ್ರವಾಸ ಸ್ಥಳಕ್ಕೆ ತಲುಪುವ ಮುನ್ನ ನೀವು ಎಂದಾದರೂ ವಸತಿ ಮತ್ತು ಈವೆಂಟ್ ಬುಕಿಂಗ್ ಗಳನ್ನು ಅಂತಿಮಗೊಳಿಸಿದ್ದೀರಾ ಮತ್ತು ಹೋಟೆಲ್ ಬುಕಿಂಗ್ ಕಾಯ್ದಿರಿಸುವಿಕೆ ಮುಕ್ತಾಯಗೊಂಡು ಬುಕಿಂಗ್ ಬೌನ್ಸ್ ಆಗಿರುವ ಅನುಭವವಾಗಿದೆಯೇ? ಚಿಂತಿಸದಿರಿ ಇಂತಹ ಸಂದರ್ಭದಲ್ಲಿಯೂ “ಬೌನ್ಸ್-ಬುಕ್ಕಿಂಗ್-ಕವರ್‌ನೊಂದಿಗಿನ-ಟ್ರಾವೆಲ್ ಇನ್ಶೂರೆನ್ಸ್ ನಿಂದ ದಿನವನ್ನು ಉಳಿಸಬಹುದು!
ಆದ್ದರಿಂದ, ನಿಮ್ಮ ಪ್ರವಾಸವನ್ನು ಸುರಕ್ಷಿತವಾಗಿಸಲು ಮತ್ತು ಹಣಕಾಸಿನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಇಚ್ಛಿಸಿದರೆ ಪ್ರಾರಂಭದಲ್ಲಿಯೇ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವುದು ಉತ್ತಮ! ಮಾರುಕಟ್ಟೆಯಲ್ಲಿ ಅನೇಕ ಯೋಜನೆಗಳು ಲಭ್ಯವಿರುವುದರಿಂದ, ಪಾವತಿಯನ್ನು ಮಾಡುವ ಮೊದಲು, ಕೈಗೆಟುಕುವ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಲು ನೀವು ಟ್ರಾವೆಲ್ ಇನ್ಶೂರೆನ್ಸ್ ಯೋಜನೆಗಳ ತುಲನೆ ಮಾಡಬೇಕು.
ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಇ-ವೀಸಾ ದೇಶಗಳ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಭಾರತೀಯರು ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದೇ?
ಹೌದು, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಇ-ವೀಸಾ ಸೌಲಭ್ಯವುಳ್ಳ ದೇಶಗಳಿಗೆ ಅರ್ಜಿ ಸಲ್ಲಿಸಬಹುದು. ಆಸ್ಟ್ರೇಲಿಯಾ, ಕೊಲಂಬಿಯಾ, ಜಾರ್ಜಿಯಾ, ಕುವೈತ್, ಮೊರಾಕೊ, ಮಲೇಷ್ಯಾ, ರಷ್ಯಾ, ಸಿಂಗಾಪುರ ಮುಂತಾದ ದೇಶಗಳು ಭಾರತೀಯರಿಗೆ ಇ-ವೀಸಾ ಸೌಲಭ್ಯಗಳನ್ನು ನೀಡುತ್ತವೆ.
ಭಾರತೀಯರು ಇ-ವೀಸಾ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಇ-ವೀಸಾ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಆನ್‌ಲೈನ್‌ನಲ್ಲಿ ವೀಸಾ ಶುಲ್ಕವನ್ನು ಪಾವತಿಸಬೇಕು. ಹಂತ-ಹಂತದ ಪ್ರಕ್ರಿಯೆಯು ಪೂರ್ಣಗೊಂಡು ಅನುಮೋದನೆಗೊಂಡ ನಂತರ, ನೀವು ಒದಗಿಸಿದ ಇಮೇಲ್ ಮೂಲಕ ನಿಮ್ಮ ಅಪ್ಲಿಕೇಶನ್ ಮತ್ತು ಇ-ವೀಸಾ ದಾಖಲೆಯ ದೃಢೀಕರಣವನ್ನು ನೀವು ಸ್ವೀಕರಿಸುತ್ತೀರಿ.
ಎಷ್ಟು ದೇಶಗಳು ಭಾರತೀಯರಿಗೆ ಇ-ವೀಸಾವನ್ನು ನೀಡುತ್ತವೆ?
ಮಾರ್ಚ್ 2023 ರ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ 26 ದೇಶಗಳು ಇ-ವೀಸಾವನ್ನು ನೀಡುತ್ತವೆ.
ಭಾರತೀಯರಿಗೆ ಇ-ವೀಸಾದ ಮಾನ್ಯತೆ ಏನು?
ಇ-ವೀಸಾದ ಸಿಂಧುತ್ವವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ನೀವು 15-30 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು ಮತ್ತು ನಿಮ್ಮ ಭೇಟಿಯ ಅವಧಿಯನ್ನು ವಿಸ್ತರಿಸಬಹುದು.
ವೀಸಾ-ಆನ್-ಅರೈವಲ್ ಒದಗಿಸುವ ದೇಶಗಳು ಭಾರತೀಯರಿಗೆ ಇ-ವೀಸಾವನ್ನು ಸಹ ಒದಗಿಸುತ್ತವೆಯೇ?
ಹೌದು, ಅನೇಕ ದೇಶಗಳು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ-ಆನ್-ಅರೈವಲ್ ಮತ್ತು ಇ-ವೀಸಾ ಸೌಲಭ್ಯಗಳನ್ನು ಒದಗಿಸುತ್ತವೆ. ಉದಾಹರಣೆಗೆ, ಮಲೇಷಿಯಾ, ಇಥಿಯೋಪಿಯಾ, ಉಗಾಂಡಾ, ಕೇಪ್ ವರ್ಡೆ, ಥೈಲ್ಯಾಂಡ್, ಇತ್ಯಾದಿಗಳು ಭಾರತೀಯರಿಗೆ ವೀಸಾ-ಆನ್-ಆಗಮನ ಮತ್ತು ಇ-ವೀಸಾ ಆಯ್ಕೆಗಳನ್ನು ನೀಡುತ್ತವೆ. ನಿಮ್ಮ ಗಮ್ಯಸ್ಥಾನದ ದೇಶಕ್ಕೆ ವೀಸಾ ಆಯ್ಕೆಗಳ ಕುರಿತು ಹೆಚ್ಚಿನ ತಿಳುವಳಿಕೆಗಾಗಿ ನೀವು ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಸಂಪರ್ಕಿಸಬಹುದು.