ಇ-ರಿಕ್ಷಾ ಇನ್ಶೂರೆನ್ಸ್

ನಿಮ್ಮ ಇ-ರಿಕ್ಷಾ/ ಆಟೋ ರಿಕ್ಷಾಗಳಿಗೆ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

Third-party premium has changed from 1st June. Renew now

ಇ-ರಿಕ್ಷಾ ಇನ್ಶೂರೆನ್ಸ್ ಎಂದರೇನು?

ಇ-ರಿಕ್ಷಾ ಇನ್ಶೂರೆನ್ಸ್ ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಆಗಿದ್ದು, ಇನ್ಶೂರ್ಡ್ ಮತ್ತು ಇನ್ಶೂರರ್ ಮಧ್ಯೆ ಒಪ್ಪಂದ ನಡೆದಿರುತ್ತದೆ. ಇಲ್ಲಿ ಇನ್ಶೂರರ್ ಯಾವುದೇ ಅನಿರೀಕ್ಷಿತ ಡ್ಯಾಮೇಜ್ ಅಥವಾ ನಷ್ಟಕ್ಕೆ ಕವರೇಜ್ ಒದಗಿಸುವ ಲಯಬಿಲಿಟಿ ಹೊಂದಿರುತ್ತಾರೆ. ಅಪಘಾತ, ಕಳ್ಳತನ, ನೈಸರ್ಗಿಕ ವಿಪತ್ತುಗಳು ಇತ್ಯಾದಿ ಕಾರಣಗಳಿಂದ ಡ್ಯಾಮೇಜ್ ಉಂಟಾದರೆ ಈ ಪಾಲಿಸಿ ನೆರವಿಗೆ ಬರುತ್ತದೆ. ಕೈಗೆಟುಕುವ ದರದ ಪ್ರೀಮಿಯಂ ಪಾವತಿಸುವ ಮೂಲಕ ನೀವು ಪಾಲಿಸಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಇ-ರಿಕ್ಷಾ ಇನ್ಶೂರೆನ್ಸ್ ಯಾಕೆ ಅವಶ್ಯಕ?

ಎಲೆಕ್ಟ್ರಿಕ್ ಆಟೋ ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಯಾಕೆ ಅವಶ್ಯಕ ಎಂಬ ಕಾರಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ: 

  • ಇ-ರಿಕ್ಷಾಗಳನ್ನು ಹೊಂದಿರುವ ಸಂಸ್ಥೆಗಳು ಲಯಬಿಲಿಟಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ವೆಹಿಕಲ್‌ಗೆ ಡ್ಯಾಮೇಜ್ ಉಂಟಾದರೆ ಅಥವಾ ಥರ್ಡ್ ಪಾರ್ಟಿ ವೆಹಿಕಲ್‌ಗೆ, ಸ್ವತ್ತುಗಳಿಗೆ ಅಥವಾ ವ್ಯಕ್ತಿಗೆ ಡ್ಯಾಮೇಜ್ ಮಾಡಿದರೆ ಕಾನೂನು ಪ್ರಕಾರವಾಗಿ ಈ ಪಾಲಿಸಿಯು ವ್ಯಾಪಾರಕ್ಕೆ ಆರ್ಥಿಕ ಕವರೇಜ್ ಮಾತ್ರ ನೀಡುತ್ತದೆ.

  • ಅಪಘಾತಗಳು, ಕಳ್ಳತನಗಳು, ಬೆಂಕಿ, ಭಯೋತ್ಪಾದಕ ಚಟುವಟಿಕೆಗಳು, ನೈಸರ್ಗಿಕ ವಿಪತ್ತುಗಳು, ಮತ್ತಿತರ ಅನಿರೀಕ್ಷಿತ ಸಂದರ್ಭಗಳಂತಹ ಅಂಶಗಳಿಂದ ಉಂಟಾಗುವ ಯಾವುದೇ ನಷ್ಟದಲ್ಲಿ ಬಳಲುತ್ತಿರುವ ವ್ಯಕ್ತಿಗೆ ಪಾಲಿಸಿಯು ನೆರವಾಗುತ್ತದೆ.

  •  ಯಾವುದೇ ಯೋಜಿತವಲ್ಲದ ನಷ್ಟಗಳು ಮತ್ತು ಅಲಭ್ಯತೆಯನ್ನು ಎದುರಿಸದಿರುವ ಖಚಿತತೆ ಒದಗಿಸುತ್ತದೆ. 

  •  ಇನ್ಶೂರನ್ಶ್ ಹೊಂದಿರುವುದು ನೀವು ಕೆಲಸದ ಕುರಿತು ಜವಾಬ್ದಾರಿಯುತವಾಗಿ ಮತ್ತು ಗಂಭೀರವಾಗಿ ಇದ್ದೀರಿ ಎಂಬುದನ್ನು ಸೂಚಿಸುತ್ತದೆ.

ಡಿಜಿಟ್‌ನಲ್ಲಿ ಯಾಕೆ ಇ-ರಿಕ್ಷಾ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು?

ಇ-ರಿಕ್ಷಾ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ?

ಏನೆಲ್ಲಾ ಕವರ್ ಆಗುವುದಿಲ್ಲ?

ಈ ನಿಮಗೆ ಪಾಲಿಸಿ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ ಎಂಬುದು ತಿಳಿದಿದೆ, ಈಗ ನಾವು ಡಿಜಿಟ್‌ನ ಎಲೆಕ್ಟ್ರಿಕ್ ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಏನೆಲ್ಲಾ ಕವರ್ ಆಗುವುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಕಾನ್ಸಿಕ್ವೆನ್ಷಿಯಲ್ ಡ್ಯಾಮೇಜ್‌ಗಳು

ಅಪಘಾತ ಅಥವಾ ನೈಸರ್ಗಿಕ ವಿಪತ್ತುಗಳ ನೇರ ಕಾರಣದಿಂದ ಸಂಭವಿಸಿರದ ಇ-ರಿಕ್ಷಾದ ಯಾವುದೇ ಡ್ಯಾಮೇಜನ್ನು ಪಾಲಿಸಿ ಕವರ್ ಮಾಡುವುದಿಲ್ಲ.

ಲೈಸೆನ್ಸ್ ಹೊಂದಿಲ್ಲದೆ ಅಥವಾ ಕುಡಿದು ವಾಹನ ಚಲಾಯಿಸುವುದು

ಒಂದು ವೇಳೆ ವ್ಯಕ್ತಿಯುವ ವ್ಯಾಲಿಡ್ ಲೈಸೆನ್ಸ್ ಹೊಂದಿಲ್ಲದೆ ಅಥವಾ ಕುಡಿತದ ನಶೆಯಲ್ಲಿ ವೆಹಿಕಲ್ ಚಲಾಯಿಸುವಾಗ ಇ-ರಿಕ್ಷಾಗೆ ಡ್ಯಾಮೇಜ್ ಸಂಭವಿಸಿದರೆ ಕವರ್ ಆಗುವುದಿಲ್ಲ.

ಭೌಗೋಳಿಕ ಪ್ರದೇಶದ ಹೊರಗೆ

ಭೌಗೋಳಿಕ ಪ್ರದೇಶದ ಹೊರಗೆ ಜರುಗಿದ ಅಥವಾ ಧೃಡಪಟ್ಟ / ಲಯಬಿಲಿಟಿಗೆ ಕಾರಣವಾದ ಯಾವುದೇ ನಷ್ಟ ಅಥವಾ ಡ್ಯಾಮೇಜ್.

ಕಾಂಟ್ರಾಕ್ಚುವಲ್ ಲಯಬಿಲಿಟಿ

ಕಾಂಟ್ರಾಕ್ಚುವಲ್ ಲಯಬಿಲಿಟಿಯಿಂದ ಉದ್ಭವವಾಗುವ ಯಾವುದೇ ಕ್ಲೈಮ್.

ಡಿಜಿಟ್ ಒದಗಿಸುವ ಇ-ರಿಕ್ಷಾ ಇನ್ಶೂರೆನ್ಸ್‌ನ ವೈಶಿಷ್ಟ್ಯಗಳು

ಡಿಜಿಟ್‌ನ ಎಲೆಕ್ಟ್ರಿಕ್ ಆಟೋ ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ - 

  • ಇನ್ಶೂರರ್ ಹೆಚ್ಚುವರಿ ಕವರೇಜ್‌ಗಳಾದ ಪರ್ಸನಲ್ ಆ್ಯಕ್ಸಿಡೆಂಟ್ ಕವರ್‌ಗಳು, ಲೀಗಲ್ ಲಯಬಿಲಿಟಿ ಕವರ್, ಹೊರಗಿಡುವಿಕೆ ಮತ್ತು ಕಡ್ಡಾಯ ಡಿಡಕ್ಟಿಬಲ್‌ಗಳನ್ನು ಒದಗಿಸುತ್ತಾರೆ.

  • ಥರ್ಡ್ ಪಾರ್ಟಿಗಳ ವೆಹಿಕಲ್ ಅಥವಾ ಆಸ್ತಿಗೆ ಡ್ಯಾಮೇಜ್ ಸಂಭವಿಸಿದಾಗ ರೂ.7.5 ಲಕ್ಷದವೆರೆಗಿನ ವೈಯಕ್ತಿಕ ಡ್ಯಾಮೇಜ್‌ಗಳಿಗೆ ಅನ್‌ಲಿಮಿಟೆಡ್ ಲಯಬಿಲಿಟಿಯನ್ನು ನೀವು ಕ್ಲೈಮ್ ಮಾಡಬಹುದು. 

  • ಕ್ಲೈಮ್ ಸೆಟಲ್‌ಮೆಂಟ್‌ ಪ್ರಕ್ರಿಯೆ ಪೂರ್ತಿಯಾಗಿ ಪೇಪರ್‌ಲೆಸ್ ಆಗಿರುತ್ತದೆ.

  • ಇನ್ಶೂರರ್ ದಿನವಿಡೀ ಗ್ರಾಹಕರಿಗೆ ನೆರವನ್ನು ಒದಗಿಸುತ್ತಾರೆ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕ್ಲೈಮ್ ಫೈಲ್ ಮಾಡಬೇಕೆಂದಿದ್ದರೆ ಈ ಕೆಳಗೆ ನೀಡಿರುವ ಪ್ರಕ್ರಿಯೆಗಳನ್ನು ಪಾಲಿಸುವ ಅಗತ್ಯವಿದೆ:

  • 1800 258 5956 ಈ ಸಂಖ್ಯೆಗೆ ಕಾಲ್ ಮಾಡಿ ಅಥವಾ hello@godigit.com ಗೆ ಇಮೇಲ್ ಕಳುಹಿಸಿ

  • ಪೂರ್ತಿ ಸನ್ನಿವೇಶದ ಕುರಿತು ಮಾಹಿತಿ ನೀಡಿ

  • ಗ್ರಾಹಕ ಸೇವಾ ಪ್ರತಿನಿಧಿಗೆ ಪಾಲಿಸಿ ನಂಬರ್‌ನಂತಹ ಮಾಹಿತಿಗಳನ್ನು ಒದಗಿಸಿ

  • ಒಮ್ಮೆ ಇನ್ಶೂರರ್ ಕ್ಲೈಮ್ ಪ್ರಕ್ರಿಯೆ ಆರಂಭಿಸಿದರೆ, ಡಾಕ್ಯುಮೆಂಟ್‌ಗಳನ್ನು ರೆಡಿ ಇಟ್ಟುಕೊಳ್ಳಿ

  • ಕ್ಲೈಮ್ ಸೆಟಲ್‌ಮೆಂಟ್ ಫಾರ್ಮ್ ಅನ್ನು ತುಂಬಿಸಿ, ದಿನಾಂಕ ಮತ್ತು ಸಮಯ, ಸ್ಥಳ ಇತ್ಯಾದಿ ಪ್ರಕಾರ ಅಪಘಾತದ ಮಾಹಿತಿಯನ್ನು ಒದಗಿಸಿ ಮತ್ತು ಡ್ಯಾಮೇಜ್ ಆಗಿರುವ ವೆಹಿಕಲ್‌ನ ಫೋಟೋಗಳನ್ನು ಸಬ್‌ಮಿಟ್ ಮಾಡಿ.

ಸೂಚನೆ: ಕ್ಲೈಮ್ ಸೆಟಲ್ ಅಥವಾ ರಿಜೆಕ್ಟ್ ಆಗುವ ಮೊದಲು ಡ್ಯಾಮೇಜ್ ಅನ್ನು ಪರಿಶೀಲಿಸಲು ಇನ್ಶೂರರ್ ಒಬ್ಬ ವ್ಯಕ್ತಿಯನ್ನು ಕಳುಹಿಸಿಕೊಡಬಹುದು.

ಇ-ರಿಕ್ಷಾ ಇನ್ಶೂರೆನ್ಸ್ ಪ್ಲಾನ್‌ಗಳ ವಿಧಗಳು

ನಿಮ್ಮ ತ್ರೀ ವೀಲರ್-ವೆಹಿಕಲ್ ಅಗತ್ಯತೆಗಳ ಆಧಾರದಲ್ಲಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ಒದಗಿಸುತ್ತೇವೆ. ಆದಾಗ್ಯೂ, ಯಾವುದೇ ಕಮರ್ಷಿಯಲ್ ವೆಹಿಕಲ್‌ನ ದಿನ ಬಳಕೆ ಮತ್ತು ಅಪಾಯವನ್ನು ಗಮನಿಸಿದಾಗ ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದುವುದನ್ನುಶಿಫಾರಸ್ಸು ಮಾಡಬಹುದು, ಆ ಪಾಲಿಸಿ ಮಾಲಕ-ಚಾಲಕರನ್ನೂ ಸೇರಿಸಿ ನಿಮ್ಮ ರಿಕ್ಷಾವನ್ನು ಆರ್ಥಿಕವಾಗಿ ರಕ್ಷಿಸುತ್ತದೆ.

ಲಯಬಿಲಿಟಿ ಓನ್ಲಿ ಸ್ಟಾಂಡರ್ಡ್ ಪ್ಯಾಕೇಜ್

ನಿಮ್ಮ ಆಟೋ ರಿಕ್ಷಾದಿಂದ ಯಾವುದೇ ಥರ್ಡ್-ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಡ್ಯಾಮೇಜ್‌ಗಳು

×

ನಿಮ್ಮ ಆಟೋ ರಿಕ್ಷಾದಿಂದ ಯಾವುದೇ ಥರ್ಡ್-ಪಾರ್ಟಿ ವೆಹಿಕಲ್‌ಗೆ ಆದ ಡ್ಯಾಮೇಜ್‌ಗಳು

×

ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಆಟೋ ರಿಕ್ಷಾಗಳಿಗೆ ಉಂಟಾದ ಡ್ಯಾಮೇಜ್ ಅಥವಾ ನಷ್ಟ

×

ಮಾಲಕ-ಚಾಲಕರಿಗೆ ಗಾಯ/ಮರಣ

ಒಂದು ವೇಳೆ ಮಾಲಕ-ಚಾಲಕ ಈಗಾಗಲೇ ಅವರ ಹೆಸರಿನಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಹೊಂದಿಲ್ಲದೆ ಇದ್ದಲ್ಲಿ

×
Get Quote Get Quote

ಡಿಜಿಟ್ ಒದಗಿಸುವ ಇ-ರಿಕ್ಷಾ ಇನ್ಶೂರೆನ್ಸ್ ಪ್ಲಾನ್‌ಗಳ ವಿಧಗಳು

ಎಲೆಕ್ಟ್ರಿಕ್ ರಿಕ್ಷಾಗಳಿಗೆ ಡಿಜಿಟ್ ಎರಡು ವಿಧದ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ. ಅವುಗಳೆಂದರೆ - 

  • ಸ್ಟಾಂಡರ್ಡ್ ಪಾಲಿಸಿ – ಸ್ಟಾಂಡರ್ಡ್ ಪಾಲಿಸಿಯು ಅಪಘಾತಗಳು, ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು ಇತ್ಯಾದಿ ಕಾರಣಗಳಿಂದ ವೆಹಿಕಲ್‌ಗೆ ಡ್ಯಾಮೇಜ್ ಉಂಟಾದರೆ ಕವರೇಜ್ ಒದಗಿಸುತ್ತದೆ. ಅದರೊಂದಿಗೆ, ಯಾವುದೇ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಆಸ್ತಿಗೆ ಡ್ಯಾಮೇಜ್ ಆದರೆ ಮತ್ತು ವೆಹಿಕಲ್‌ನ ಚಾಲಕ ಅಥವಾ ಮಾಲಕರಿಗೆ ಗಾಯ ಉಂಟಾದರೆ ಅಥವಾ ಮರಣ ಸಂಭವಿಸಿದರೆ ಕವರೇಜ್ ದೊರೆಯುತ್ತದೆ. 

  • ಲಯಬಿಲಿಟಿ ಓನ್ಲಿ – ಲಯಬಿಲಿಟಿ ಪಾಲಿಸಿಯು ನಿಮ್ಮ ವೆಹಿಕಲ್‌ನಿಂದ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಆಸ್ತಿಗೆ ನಷ್ಟ ಸಂಭವಿಸಿದರೆ ಮಾತ್ರ ಕವರ್ ಮಾಡುತ್ತದೆ. ವೆಹಿಕಲ್‌ನ ಮಾಲಕ/ ಚಾಲಕರ ಗಾಯ ಅಥವಾ ಮರಣ ಸಂದರ್ಭವೂ ಕವರ್ ಆಗುತ್ತದೆ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ಫಾಸ್ಟ್ ಆಗಿ ಸೆಟಲ್ ಆಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆಯೇ ಇದು. ಒಳ್ಳೆಯದು , ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್‌ ಕಾರ್ಡ್ ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ವಿಕಾಸ್ ಥಪ್ಪಾ
★★★★★

ಡಿಜಿಟ್ ಇನ್ಶೂರೆನ್ಸ್‌ನಲ್ಲಿ ನನ್ನ ವೆಹಿಕಲ್ ಇನ್ಶೂರೆನ್ಸ್ ಪ್ರೊಸೆಸ್ ಮಾಡುವಾಗ ನಾನು ಅದ್ಭುತ ಅನುಭವವನ್ನು ಪಡೆದೆ. ಇದು ಸೂಕ್ತವಾದ ತಂತ್ರಜ್ಞಾನ ಹೊಂದಿರುವ ಗ್ರಾಹಕ ಸ್ನೇಹಿ ವ್ಯವಸ್ಥೆ ಆಗಿದೆ. ವೈಯಕ್ತಿಕವಾಗಿ ಯಾವ ವ್ಯಕ್ತಿಯನ್ನೂ ಭೇಟಿ ಮಾಡದೆಯೇ 24ಗಂಟೆಗಳ ಒಳಗೆಯೇ ಕ್ಲೈಮ್ ರಿಸಾರ್ಟ್ ಆಗಿದೆ. ಕಸ್ಟಮರ್ ಸೆಂಟರ್‌ಗಳು ನನ್ನ ಕಾಲ್‌ಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದವು. ಪ್ರಕರಣವನ್ನು ಅದ್ಭುತವಾಗಿ ನಿರ್ವಹಿಸಿದ ಶ್ರೀ ರಾಮರಾಜು ಕೊಂಡಾಣ ಅವರಿಗೆ ನನ್ನ ವಿಶೇಷ ಧನ್ಯವಾದಗಳು ಸಲ್ಲುತ್ತವೆ.

ವಿಕ್ರಾಂತ್ ಪರಾಶರ್
★★★★★

ಅತಿ ಹೆಚ್ಚು ಐಡಿವಿ ಬೆಲೆ ಘೋಷಿಸಿದ ಅಸಾಧಾರಣ ಇನ್ಶೂರೆನ್ಸ್ ಕಂಪನಿ ಇದು. ಸಿಬ್ಬಂದಿಗಳು ಸೌಜನ್ಯಪೂರ್ಕವಾಗಿ ವರ್ತಿಸುತ್ತಾರೆ. ಅವರ ನಡವಳಿಕೆ ನನಗೆ ಸಂಪೂರ್ಣ ತೃಪ್ತಿ ತಂದಿದೆ. ನನಗೆ ಬೆನಿಫಿಟ್‌ಗಳು ಮತ್ತು ಆಫರ್‌ಗಳ ಕುರಿತು ಸಮಯಕ್ಕೆ ಸರಿಯಾಗಿ ಮಾಹಿತಿ ತಿಳಿಸಿ ಡಿಜಿಟ್‌ ಇನ್ಶೂರೆನ್ಸ್‌ನಿಂದ ಪಾಲಿಸಿ ಖರೀದಿಸುವಂತೆ ಮಾಡಿದ ಯುವೆಸ್ ಫಾರ್ಖುನ್ ಅವರಿಗೆ ವಿಶೇಷ ಧನ್ಯವಾದ. ವೆಚ್ಚ ಸಂಬಂಧಿತ ಮತ್ತು ಸೇವೆ ಸಂಬಂಧಿತ ಅಂಶಗಳು ನನಗೆ ಮುಖ್ಯವಾಗಿದ್ದರಿಂದ ಪ್ರಸ್ತುತ ನಾನು ಮತ್ತೊಂದು ವೆಹಿಕಲ್‌ಗೂ ಇನ್ಶೂರೆನ್ಸ್ ಖರೀದಿಸುವ ಮನಸ್ಸು ಮಾಡಿದ್ದೇನೆ.

ಸಿದ್ದಾರ್ಥ್ ಮೂರ್ತಿ
★★★★★

ಗೋ-ಡಿಜಿಟ್‌ನಿಂದ 4ನೇ ವೆಹಿಕಲ್ ಇನ್ಶೂರೆನ್ಸ್ ಖರೀದಿಸಿದ ನನ್ನ ಅನುಭವ ಅತ್ಯುತ್ತಮವಾಗಿದೆ. ಶ್ರೀಮತಿ ಪೂನಮ್ ಅವರು ಪಾಲಿಸಿಯನ್ನು ಚೆನ್ನಾಗಿ ವಿವರಿಸುತ್ತಾರೆ, ಆಕೆಗೆ ಗ್ರಾಹಕರ ನಿರೀಕ್ಷೆ ಏನು ಅನ್ನುವುದು ತಿಳಿದಿರುತ್ತದೆ ಮತ್ತು ನನ್ನ ಅಗತ್ಯಕ್ಕೆ ತಕ್ಕಂತೆ ಕೊಟೇಶನ್ ಅನ್ನು ನೀಡಿರುತ್ತಾರೆ. ಮತ್ತು ಆನ್‌ಲೈನ್‌ ಮೂಲಕ ತೊಂದರೆ ಇಲ್ಲದೆ ಪಾವತಿ ಮಾಡಬಹುದಾಗಿದೆ. ಶೀಘ್ರವಾಗಿ ಇದನ್ನು ಸಾಧ್ಯವಾಗಿಸಿದ್ದಕ್ಕೆ ಪೂನಮ್ ಅವರಿಗೆ ವಿಶೇಷ ಧನ್ಯವಾದ. ದಿನದಿಂದ ದಿನಕ್ಕೆ ಕಸ್ಟಮರ್ ರಿಲೇಷನ್‌ಶಿಪ್ ತಂಡ ಉತ್ತಮವಾಗುತ್ತದೆ ಎಂಬುದೇ ನಮ್ಮ ಭರವಸೆ!! ಚಿಯರ್ಸ್.

Show all Reviews

ರಿಕ್ಷಾ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಎಂದರೇನು?

ನೀವು ಕವರೇಜ್ ಪಡೆಯಲು ಅರ್ಹತೆ ಹೊಂದಿರುವ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಎನ್ನಲಾಗುತ್ತದೆ.

ಒಂದು ವೇಳೆ ಅವಶ್ಯಕ ಡಾಕ್ಯುಮೆಂಟ್‌ಗಳನ್ನು ಸಬ್‌ಮಿಟ್ ಮಾಡದೇ ಇದ್ದರೂ ಇನ್ಶೂರರ್ ಕ್ಲೈಮ್ ಪ್ರೊಸೆಸ್ ಮಾಡುವ ಮತ್ತು ಪರಿಹಾರ ಒದಗಿಸುವ ಪ್ರಕ್ರಿಯೆ ಮುಂದುವರಿಸುತ್ತಾರೆಯೇ?

ಕ್ಲೈಮ್ ಸೆಟಲ್ ಆಗಬೇಕಾದರೆ ನೀವು ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಬ್‌ಮಿಟ್ ಮಾಡುವುದು ಅವಶ್ಯ. ಅದು ಮುಗಿಯುವವರೆಗೆ, ಇನ್ಶೂರರ್ ಕಡೆಯಿಂದ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆ ಆರಂಭವಾಗುವುದಿಲ್ಲ.

ಸ್ಟಾಂಡರ್ಡ್ ಮತ್ತು ಲಯಬಿಲಿಟಿ ಒನ್ಲಿ ಈ ಎರಡೂ ಇ-ರಿಕ್ಷಾ ಇನ್ಶೂರೆನ್ಸ್ ಪಾಲಿಸಿಗಳು ಇ-ರಿಕ್ಷಾದ ಪ್ರಯಾಣಿಕರನ್ನು ಕವರ್ ಮಾಡುತ್ತದೆಯೇ?

ಹೌದು, ಪ್ರಯಾಣಿಕರನ್ನು ಥರ್ಡ್-ಪಾರ್ಟಿಗಳೆಂದೇ ಪರಿಗಣಿಸಲಾಗುವುದರಿಂದ ಅವರು ಕವರ್ ಆಗುತ್ತಾರೆ.

ಪಾವತಿಸಬೇಕಾದ ಪಾಲಿಸಿ ಮೇಲೆ ನೋ-ಕ್ಲೈಮ್ ಬೋನಸ್ ಪರಿಣಾಮ ಬೀರುತ್ತದೆಯೇ?

ಹೌದು, ಪ್ರೀಮಿಯಂ ಮೇಲೆ ನೋ-ಕ್ಲೈಮ್ ಬೋನಸ್ ಪರಿಣಾಮ ಬೀರುತ್ತದೆ.

ಎಲೆಕ್ಟ್ರಿಕ್ ಆಟೋ ರಿಕ್ಷಾ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?

ಹೌದು, ಮೋಟಾರ್ ವೆಹಿಕಲ್‌ಗಳ ಆ್ಯಕ್ಟ್ ಪ್ರಕಾರ ಇ-ರಿಕ್ಷಾ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯ. ನೀವು ದೇಶದಲ್ಲಿ ಇ-ರಿಕ್ಷಾ ಚಲಾಯಿಸಲು ಕನಿಷ್ಠ ಲಯಬಿಲಿಟಿ ಓನ್ಲಿ ಪಾಲಿಸಿಯನ್ನಾದರೂ ಪಡೆಯುವುದು ಅವಶ್ಯಕ.