ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

ಆನ್‌ಲೈನ್‌ನಲ್ಲಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ/ನವೀಕರಿಸಿ

Third-party premium has changed from 1st June. Renew now

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಎಂದರೇನು?

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಎನ್ನುವುದು ಕಸ್ಟಮೈಸ್ ಮಾಡಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಕಮರ್ಷಿಯಲ್ ವೆಹಿಕಲ್ ಹಾಗೂ ಅವುಗಳ ಮಾಲೀಕ-ಚಾಲಕರಿಂದ/ಗೆ ಉಂಟಾಗುವ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ. ಈ ಪಾಲಿಸಿಯು ಅಪಘಾತಗಳು, ಘರ್ಷಣೆಗಳು, ನೈಸರ್ಗಿಕ ವಿಪತ್ತುಗಳು, ಬೆಂಕಿ ಮುಂತಾದವುಗಳಿಂದ ಸಂಭವಿಸುವ ಹಾನಿ ಮತ್ತು ನಷ್ಟಗಳನ್ನು ಕವರ್  ಮಾಡುತ್ತದೆ. ಎಲ್ಲಾ ವ್ಯವಹಾರಗಳು ತಮ್ಮ ವೆಹಿಕಲ್‌ಗಳಿಗೆ ಅಂದರೆ ಆಟೋ-ರಿಕ್ಷಾಗಳು, ಕ್ಯಾಬ್‌ಗಳು, ಸ್ಕೂಲ್ ಬಸ್‌ಗಳು, ಟ್ರಾಕ್ಟರ್‌ಗಳು , ಕಮರ್ಷಿಯಲ್ ವ್ಯಾನ್‌ಗಳು ಮತ್ತು ಟ್ರಕ್‌ಗಳು ಮುಂತಾದವುಗಳಿಗೆ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಖಡ್ಡಾಯವಾಗಿದೆ.

ನಿಮಗೆ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಏಕೆ ಬೇಕು?

  • ನಿಮ್ಮ ವ್ಯವಹಾರವು ಒಂದು ಅಥವಾ ಹೆಚ್ಚಿನ ವೆಹಿಕಲ್‌ಗಳನ್ನು ಹೊಂದಿದ್ದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಅದು ನಿಮ್ಮ ವೆಹಿಕಲ್‌ಗೆ ಅಥವಾ ವೆಹಿಕಲ್‌ನಿಂದ (ಗಳು) ಹಾಗೂ ಅದನ್ನು ಬಳಸುವ ಜನರಿಂದ ಉಂಟಾಗುವ, ಯಾವುದೇ ನಷ್ಟ ಮತ್ತು ಹಾನಿಗಳಿಂದ ನಿಮ್ಮ ವ್ಯಾಪಾರವನ್ನು ಆರ್ಥಿಕವಾಗಿ ರಕ್ಷಿಸುತ್ತದೆ.
  • ನಿಮ್ಮ ಪ್ರಾಥಮಿಕ ವ್ಯವಹಾರವು ರೆಗ್ಯುಲರ್ ಕ್ಯಾಬ್ ಸೇವೆಯನ್ನು ಅಥವಾ ಪ್ರೈವೇಟ್ ಸ್ಕೂಲ್ ಬಸ್‌ನಂತಹ ವೆಹಿಕಲ್‌ಗಳ ಬಳಕೆಯನ್ನು ಒಳಗೊಂಡಿದ್ದರೆ, ಆಗ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಿಮ್ಮ ಪಾಲುದಾರರಿಗೆ ಮತ್ತು ಪ್ರಯಾಣಿಕರಿಗೆ ಯಾವಾಗಲೂ ರಕ್ಷಣೆ ನೀಡುತ್ತದೆ ಎಂಬ ಭರವಸೆಯನ್ನು ನೀಡುತ್ತದೆ.
  • ಕಾನೂನಿನ ಆದೇಶದಂತೆ, ನಿಮ್ಮ ಕಮರ್ಷಿಯಲ್ ವೆಹಿಕಲ್‌ನಿಂದ ಉಂಟಾಗಬಹುದಾದ ಯಾವುದೇ ಹಾನಿ ಮತ್ತು ನಷ್ಟಗಳ ವಿರುದ್ಧ ಥರ್ಡ್ ಪಾರ್ಟಿಯನ್ನು ರಕ್ಷಿಸುವ 'ಲೈಬಿಲಿಟಿ ಓನ್ಲಿ' ಪಾಲಿಸಿಯನ್ನು ಹೊಂದುವುದು ಖಡ್ಡಾಯವಾಗಿದೆ.

ಡಿಜಿಟ್ ನಲ್ಲಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆಯ್ದುಕೊಳ್ಳಬೇಕು?

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್‌ನೊಂದಿಗೆ ಲಭ್ಯವಿರುವ ಆಡ್-ಆನ್‌ಗಳು

ಕನ್ಸ್ಯೂಮೇಬಲ್ ಕವರ್

ಒಂದು ಕನ್ಸ್ಯೂಮೇಬಲ್ ಕವರ್, ನಿಮ್ಮ ಕಮರ್ಷಿಯಲ್ ವೆಹಿಕಲ್‌ಗೆ  ಸಾಮಾನ್ಯಕ್ಕಿಂತ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ಅಪಘಾತದ ಸಂದರ್ಭದಲ್ಲಿ ನಟ್‌ಗಳು ಮತ್ತು ಬೋಲ್ಟ್‌ಗಳು, ಸ್ಕ್ರೂಗಳು, ಇಂಜಿನ್ ಆಯಿಲ್ ಮತ್ತು ಗ್ರೀಸ್‌ನಂತಹ ನಿಮ್ಮ ವಾಹನದ ಬಿಟ್‌ಗಳು ಹಾಗೂ ತುಂಡುಗಳ ವೆಚ್ಚವನ್ನು ಇದು ಕವರ್ ಮಾಡುತ್ತದೆ.

ಭಾಗಗಳ ಡೆಪ್ರಿಸಿಯೇಷನ್ ರಕ್ಷಣೆ

ನಿಮ್ಮ ವೆಹಿಕಲ್ ಮತ್ತದರ ಭಾಗಗಳು ಅವುಗಳ ನಷ್ಟದಿಂದಾಗಿ, ಕಾಲಾನಂತರದಲ್ಲಿ ವೆಹಿಕಲ್‌ನ ಮೌಲ್ಯವನ್ನು ಕುಗ್ಗಿಸಬಹುದು ಮತ್ತು ಈ ಮೊತ್ತವನ್ನು ಸಾಮಾನ್ಯವಾಗಿ ಯಾವುದೇ  ಕ್ಲೇಮ್‌ನಿಂದ  ಕಡಿತಗೊಳಿಸಲಾಗುತ್ತದೆ. ಅಪಘಾತದ ಸಂದರ್ಭದಲ್ಲಿ ವೆಹಿಕಲ್‌ನ ಯಾವುದೇ ಬದಲಿ ಭಾಗಗಳ ಮೇಲೆ (ರಬ್ಬರ್ ಅಥವಾ ಫೈಬರ್‌ಗ್ಲಾಸ್ ಭಾಗಗಳಂತಹವು) ಈ ಡೆಪ್ರಿಸಿಯೇಷನ್ ಅನ್ನು  ಕವರ್ ಮಾಡುತ್ತದೆ ಎನ್ನುವುದನ್ನು ಈ ಆಡ್-ಆನ್ ಖಚಿತಪಡಿಸುತ್ತದೆ.

ಎಂಜಿನ್ ಮತ್ತು ಗೇರ್ ಬಾಕ್ಸ್ ರಕ್ಷಣೆ

ನಿಮ್ಮ ವೆಹಿಕಲ್‌ನ ಎಂಜಿನ್ ಅಥವಾ ಗೇರ್ ಬಾಕ್ಸ್ ಅಪಘಾತದಲ್ಲಿ ಹಾನಿಗೊಳಗಾಗುತ್ತದೆ ಇದಕ್ಕೆ ಕಾರಣ ವಾಟರ್ ರಿಗ್ರೇಷನ್ ಅಥವಾ ಲುಬ್ರಿಕೇಟಿಂಗ್ ಆಯಿಲ್‌ಗಳ ಸೋರಿಕೆ. ಈ ಆಡ್-ಆನ್, ಅಪಘಾತದ ನಂತರ ಉಂಟಾದ ಯಾವುದೇ ಪರಿಣಾಮಕಾರಿ ಹಾನಿಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ (ಆದರೆ ಇದರ ಕಾರಣದಿಂದಾಗಿ)  ಉದಾಹರಣೆಗೆ ಹೈಡ್ರೋಸ್ಟಾಟಿಕ್ ನಷ್ಟದಿಂದ ಆಗಿರುವ ಎಂಜಿನ್ ಹಾನಿಯನ್ನು ಇದು ಕವರ್ ಮಾಡುತ್ತದೆ ಆದರೆ ಇದು ಸ್ಟ್ಯಾಂಡರ್ಡ್ ಪಾಲಿಸಿಯಲ್ಲಿ ಕವರ್ ಆಗಿರುವುದಿಲ್ಲ.

ಬ್ರೇಕ್‌ಡೌನ್ ಅಸಿಸ್ಟೆನ್ಸ್ - ಸಾಮಾನ್ಯವಾಗಿ ರೋಡ್‌ಸೈಡ್ ಅಸಿಸ್ಟೆನ್ಸ್ ಎಂದು ಕರೆಯಲಾಗುತ್ತದೆ

ನಮಗೆಲ್ಲರಿಗೂ ಕೆಲವೊಮ್ಮೆ ಸ್ವಲ್ಪವಾದರೂ ಸಹಾಯ ಬೇಕಾಗುತ್ತದೆ! ಕೆಲವೊಮ್ಮೆ ನೀವು ಅಪಘಾತ, ಫ್ಲಾಟ್ ಟೈರ್ಗಳು, ಅಸಮರ್ಪಕವಾದ ಬ್ಯಾಟರಿ, ಅಥವಾ ಅದಕ್ಕಿಂತ ಹೆಚ್ಚಿನ ಕಾರಣದಿಂದಾಗಿ ರಸ್ತೆಯಲ್ಲಿ ಬ್ರೇಕ್‌ಡೌನ್ ಎದುರಿಸುವಾಗ  ನಮ್ಮ ಬ್ರೇಕ್‌ಡೌನ್ ಅಸಿಸ್ಟೆನ್ಸ್ ಆಡ್-ಆನ್, ನಿಮಗೆ 24x7 ಸಹಾಯ ಮಾಡಲು ಸದಾ ನಿಮ್ಮೊಂದಿಗೆ ಇರುತ್ತದೆ.

ಆದಾಯ ನಷ್ಟ

ಅನೇಕರಿಗೆ ಕೆಲಸಕ್ಕಾಗಿ ವೆಹಿಕಲ್‌ಗಳು ಅತ್ಯಗತ್ಯ. ಡ್ಯಾಮೇಜ್ ಕಾರಣಕ್ಕೆ ನಿಮ್ಮ ಕಮರ್ಷಿಯಲ್ ವೆಹಿಕಲ್ ಅನ್ನು ರಿಪೇರಿ ಮಾಡುವ ಸಂದರ್ಭದಲ್ಲಿ , ನಿಮ್ಮ ವೆಹಿಕಲ್ ಲಭ್ಯವಿಲ್ಲದಿರುವಾಗ ಸಂಭವಿಸುವ ಯಾವುದೇ ಆದಾಯದ ನಷ್ಟವನ್ನು ಸರಿದೂಗಿಸಲು ಈ ಆಡ್-ಆನ್ ಸಹಾಯ ಮಾಡುತ್ತದೆ.

ಹೆಚ್ಚುವರಿ ಟೋಯಿಂಗ್ ವೆಚ್ಚಗಳು

ನಿಮ್ಮ ವೆಹಿಕಲ್‌ ಅಪಘಾತಕ್ಕೆ ಒಳಗಾದಾಗ, ಅದನ್ನು ಸರಿಪಡಿಸಲು ಗ್ಯಾರೇಜ್‌ಗೆ ಎಳೆದುಕೊಂಡು ಹೋಗಬೇಕಾಗುತ್ತದೆ. ಈ ಆಡ್-ಆನ್ ಅಡಿಯಲ್ಲಿ, ನಿಮ್ಮ ವಾಹನವನ್ನು ಅಪಘಾತದ ಸ್ಥಳದಿಂದ ಹತ್ತಿರದ ಗ್ಯಾರೇಜ್ ಅಥವಾ ಸುರಕ್ಷತೆಯ ಸ್ಥಳಕ್ಕೆ ಸ್ಥಳಾಂತರಿಸುವಾಗ ನಿಮಗೆ ಉಂಟಾಗುವ ಹೆಚ್ಚುವರಿ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.

ಇಎಂಐ ರಕ್ಷಣೆಯ ಕವರ್

ನಿಮ್ಮ ವೆಹಿಕಲ್ ಅನ್ನು ಲೋನ್‌ ಮೇಲೆ ತೆಗೆದುಕೊಂಡಿದ್ದರೆ , ಹಾಗೂ ಅದು ಅಪಘಾತದಿಂದ ಹಾನಿಗೊಳಗಾಗಿದ್ದರೆ ಮತ್ತು ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ಕುಳಿತಿದ್ದರೆ, ಅದರಿಂದ ನಿಮ್ಮ ವ್ಯಾಪಾರಕ್ಕೆ ನಷ್ಟವಾಗಬಹುದು. ಈ ಆಡ್-ಆನ್ ಮೂಲಕ, ನಮ್ಮ ಪುಸ್ತಕಗಳಲ್ಲಿ ದಾಖಲಿಸಲಾದ ವೆಹಿಕಲ್‌ನ ಫೈನಾನ್ಷಿಯರ್‌ಗೆ ಪಾವತಿಸಲು ನಿಮಗೆ ರೆಗ್ಯುಲರ್ ಇಎಂಐ (EMI) ಗಳನ್ನು ಪಾವತಿಸಲಾಗುತ್ತದೆ.

ಹೆಚ್ಚುವರಿ ಕವರೇಜಗಳು ಸಾಮಾನ್ಯವಾಗಿ ಲಭ್ಯವಿರುವ ಎಂಡೋರ್ಸಮೆಂಟ್‌ಗಳು ಎಂದೂ ಕರೆಯುತ್ತಾರೆ .

ಕೆಲವೊಮ್ಮೆ, ಎಲ್ಲಾ ಸಂದರ್ಭಗಳನ್ನು ಕವರ್ ಮಾಡಲು ಕೇವಲ ಸ್ಟ್ಯಾಂಡರ್ಡ್ ಕವರೇಜ್ ಸಾಕಾಗುವುದಿಲ್ಲ. ಅದಕ್ಕಾಗಿಯೇ, ನಿಮ್ಮ ಕಮರ್ಷಿಯಲ್ ವೆಹಿಕಲ್ ಕವರೇಜನ್ನು ವಿಸ್ತರಿಸಲು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ, ನೀವು ಆಯ್ಕೆಮಾಡಬಹುದಾದ ಐಚ್ಛಿಕ ಕವರ್‌ಗಳನ್ನು ನಾವು ನೀಡುತ್ತೇವೆ.

ಪರ್ಸನಲ್ ಆಕ್ಸಿಡೆಂಟ್ ಕವರ್

ನೀವು ಈಗಾಗಲೇ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ, ನೀವದನ್ನು ಕಮರ್ಷಿಯಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪಡೆಯಬಹುದು. ಏಕೆಂದರೆ  ಪರ್ಸನಲ್ ಆಕ್ಸಿಡೆಂಟ್ ಕವರ್ ಹೊಂದುವುದು ಕಾನೂನಿನ ಅನ್ವಯ ಖಡ್ಡಾಯವಾಗಿದೆ. ಇದು ದುರದೃಷ್ಟಕರ ಅಪಘಾತದ ಸಂದರ್ಭದಲ್ಲಿ, ಮಾಲೀಕ-ಚಾಲಕನಿಗಾಗುವ ದೈಹಿಕ ಗಾಯ ಅಥವಾ ಸಾವಿಗೆ ಕವರೇಜ್ ನೀಡುತ್ತದೆ.

ಹೆಸರಿಸದ ಪಿ.ಎ ಕವರ್

ಇಂತಹದು ಸಂಭವಿಸದಿರಲಿ ಎಂದು ನಾವು ಭಾವಿಸುತ್ತೇವೆ, ಆದರೆ ನಿಮ್ಮೊಂದಿಗೆ ವಾಹನದಲ್ಲಿ ಕುಳಿತಿರುವ ವ್ಯಕ್ತಿಗೆ ಏನಾದರೂ ಸಂಭವಿಸಿದರೆ, ಅಂತಹ ಅನಿರೀಕ್ಷಿತ ಅಪಘಾತದಲ್ಲಿ, ಈ ಕವರ್ ಅದನ್ನು ಸರಿದೂಗಿಸುತ್ತದೆ.

ಕಾನೂನು ಹೊಣೆಗಾರಿಕೆ

ನಿಮ್ಮ ಉದ್ಯೋಗಿಗಳಿಗೆ ಅಥವಾ ನಿಮಗಾಗಿ ಕೆಲಸ ಮಾಡುವವರಿಗೆ ಉಂಟಾದ ಗಾಯದಿಂದಾಗಿ, ನಿಮ್ಮ ವಿರುದ್ಧ ಉದ್ಭವಿಸುವ ಯಾವುದೇ ಕಾನೂನು ಹೊಣೆಗಾರಿಕೆಯಿಂದ ಈ ಕವರ್ ನಿಮ್ಮನ್ನು ರಕ್ಷಿಸುತ್ತದೆ.

ಐಎಮ್ ಟಿ 23

ನಿಮ್ಮ ವೆಹಿಕಲ್ ಭಾಗಶಃ ಹಾನಿಗೊಳಗಾಗಿದ್ದರೂ ಸಹ, ದೀಪಗಳು, ಟೈರ್‌ಗಳು, ಟ್ಯೂಬ್‌ಗಳು, ಮಡ್‌ಗಾರ್ಡ್‌ಗಳು, ಬಾನೆಟ್, ಸೈಡ್‌ಪಾರ್ಟ್ ಬಂಪರ್‌ಗಳು, ಹೆಡ್‌ಲೈಟ್‌ಗಳು ಮತ್ತು ಪೇಂಟ್‌ವರ್ಕ್‌ಗಳ ನಷ್ಟ ಅಥವಾ ಹಾನಿಗಳನ್ನು ಕವರ್ ಮಾಡಲು ಇದು ಸಹಾಯ ಮಾಡುತ್ತದೆ.

ಎಲೆಕ್ಟ್ರಿಕಲ್ ಪರಿಕರಗಳು

ತಮ್ಮ ವೆಹಿಕಲ್‌ನಲ್ಲಿ ಯಾವುದೇ ಎಲೆಕ್ಟ್ರಿಕಲ್ ಪರಿಕರಗಳನ್ನು ಅಳವಡಿಸುವವರಿಗಾಗಿ ಈ ಕವರ್. ಅದು ತಯಾರಕರ ಮಾಡೆಲ್‌ನ ಭಾಗವಾಗಿಲ್ಲದಿದ್ದರೂ , ಈ ಕವರ್ ಅಂತಹ ಪರಿಕರಗಳನ್ನು ಕವರ್ ಮಾಡುತ್ತದೆ.

ನಾನ್-ಎಲೆಕ್ಟ್ರಿಕಲ್ ಪರಿಕರಗಳು

ನಿಮ್ಮ ವೆಹಿಕಲ್‌ನಲ್ಲಿ ನೀವು ತಯಾರಕರ ಮಾಡೆಲ್‌ನ ಭಾಗವಲ್ಲದ ಯಾವುದೇ ನಾನ್-ಎಲೆಕ್ಟ್ರಿಕಲ್ ಪರಿಕರಗಳನ್ನು ಅಳವಡಿಸಿದ್ದರೆ, ಈ ಕವರ್ ಅಂತಹ ಪರಿಕರಗಳನ್ನು ಕವರ್ ಮಾಡುತ್ತದೆ.

ವಿಶೇಷ ಹೊರಗಿಡುವಿಕೆಗಳು ಮತ್ತು ಖಡ್ಡಾಯ ಕಡಿತಗಳು

ಪ್ರತಿ ನಷ್ಟದ ಮೇಲೆ ನೀವು ಖಡ್ಡಾಯ ಕಡಿತವೆಂದು ನಿಮ್ಮ ಪಾಲಿನ ನಷ್ಟದ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ವೆಹಿಕಲ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಅಂತಹ ಸಂದರ್ಭದಲ್ಲಿ ಲ್ಯಾಂಪ್‌ಗಳು, ಟೈರ್‌ಗಳು, ಟ್ಯೂಬ್‌ಗಳು, ಮಡ್‌ಗಾರ್ಡ್‌ಗಳು, ಬಾನೆಟ್, ಸೈಡ್‌ಪಾರ್ಟ್ ಬಂಪರ್‌ಗಳು, ಹೆಡ್‌ಲೈಟ್‌ಗಳು ಮತ್ತು ಪೇಂಟ್‌ವರ್ಕ್‌ಗಳ ನಷ್ಟ ಅಥವಾ ಹಾನಿಯನ್ನು ಸಹ ಇದು ಕವರ್ ಮಾಡುತ್ತದೆ.

ಏನನ್ನು ಒಳಗೊಂಡಿಲ್ಲ?

ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ  ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ಥರ್ಡ್ ಪಾರ್ಟಿ ಲೈಬಿಲಿಟಿ ಓನ್ಲಿ ಪಾಲಿಸಿಯಲ್ಲಿ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು

ಇನ್ಶೂರೆನ್ಸ್ ಮಾಡಲಾದ ವ್ಯಾನಿನ ಮಾಲೀಕರು-ಚಾಲಕರು, ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕಂಡು ಬಂದಿದ್ದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಕೊಡುಗೆಯ ನಿರ್ಲಕ್ಷ್ಯದಿಂದಾಗಿ  ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉಧಾಹರಣೆಗೆ ಪ್ರವಾಹವಿದ್ದಾಗ ವಾಹನ ಚಾಲನೆ ಮಾಡುವುದು)

ಪರಿಣಾಮದ ಹಾನಿಗಳು

ಅಪಘಾತ/ನೈಸರ್ಗಿಕ ವಿಕೋಪಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ. ಪರಿಣಾಮದ ಹಾನಿಗಳೆಂದರೆ ಗಳಿಕೆಯ ನಷ್ಟ, ಮಾರುಕಟ್ಟೆಯ ನಷ್ಟ ಮುಂತಾದವುಗಳು.

ಡಿಜಿಟ್ ನ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು ಡಿಜಿಟ್ ಪ್ರಯೋಜನಗಳು
ಕ್ಲೇಮ್ ಪ್ರಕ್ರಿಯೆ ಕಾಗದರಹಿತ ಕ್ಲೇಮ್ಸ್
ಗ್ರಾಹಕರ ಬೆಂಬಲ 24x7 ಬೆಂಬಲ
ಕವರ್ ಆಗುವ ಕಮರ್ಷಿಯಲ್ ವೆಹಿಕಲ್‌ನ ವಿಧಗಳು ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳು, ಟ್ರಕ್'ಗಳು ಲಾರಿಗಳು, ಬಸ್‌ಗಳು, ಆಟೋ ರಿಕ್ಷಾಗಳು , ಸ್ಕೂಲ್ ವ್ಯಾನ್‌ಗಳು ಇತ್ಯಾದಿ.
ಪ್ರೀಮಿಯಂ ಕಮರ್ಷಿಯಲ್ ವೆಹಿಕಲ್‌ನ ಪ್ರಕಾರ ಮತ್ತು ಇನ್ಶೂರೆನ್ಸ್ ಮಾಡಬೇಕಾದ ವೆಹಿಕಲ್‌ನ ಸಂಖ್ಯೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗಿದೆ
ಹೆಚ್ಚುವರಿ ಕವರೇಜ್ ಪಿಎ ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ಖಡ್ಡಾಯ ಕಡಿತಗಳು
ಥರ್ಡ್ ಪಾರ್ಟಿಗೆ ಆಗುವ ಹಾನಿಗಳು ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಕವರ್ ಮಾಡಲಾಗುವ ಕಮರ್ಷಿಯಲ್ ವೆಹಿಕಲ್‌ಗಳ ವಿಧಗಳು

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್

  • ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಪ್ರಯಾಣಿಕರನ್ನು  ಸಾಗಿಸುವ ವೆಹಿಕಲ್‌ಗಳಾದ ಟ್ಯಾಕ್ಸಿಗಳು, ಕ್ಯಾಬ್‌ಗಳು, ಆಟೋ ರಿಕ್ಷಾ, ಶಾಲಾ ಬಸ್‌ಗಳು, ಖಾಸಗಿ ಬಸ್‌ಗಳು, ಇತ್ಯಾದಿಗಳಂತಹ ವೆಹಿಕಲ್‌ಗಳಿಗೆ ಈ ಇನ್ಶೂರೆನ್ಸ್
  • ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ಗಳು , ವಿಶೇಷವಾಗಿ ಶಾಲಾ ಬಸ್‌ಗಳು ಮತ್ತು ಸಾಮಾನ್ಯ ಕ್ಯಾಬ್‌ಗಳು ದಿನನಿತ್ಯ ಹಲವಾರು ಪ್ರಯಾಣಿಕರನ್ನು ಸಾಗಿಸುವುದರಿಂದ ಅವು ದೊಡ್ಡ ಜವಾಬ್ದಾರಿಯನ್ನು ಹೊಂದಿವೆ.
  • ಭಾರತದ ಹಲವಾರು ಜನರ ಜೀವನ ಮತ್ತು ಆದಾಯವು ಈ ವಾಹನಗಳ ಚಾಲನೆಯ ಮೇಲೆ ಅವಲಂಬಿತವಾಗಿದೆ. ಯಾವುದೇ ದುರದೃಷ್ಟಕರ ಸಂದರ್ಭಗಳಲ್ಲಿ, ಅವರನ್ನು ಯಾವಾಗಲೂ ನಷ್ಟದಿಂದ ರಕ್ಷಿಸುವುದಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಖಚಿತಪಡಿಸುತ್ತದೆ.
ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್

  • ಸಾಮಾನ್ಯವಾಗಿ ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು  ಬಳಸುವ ವೆಹಿಕಲ್‌ಗಳೇ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ಸ್. ಇವುಗಳು ಪ್ರಾಥಮಿಕವಾಗಿ ಟ್ರಕ್‌ಗಳು, ಟೆಂಪೋಗಳು ಮತ್ತು ಲಾರಿಗಳನ್ನು ಒಳಗೊಂಡಿರುತ್ತವೆ.
  • ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್‌ಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಮತ್ತು ಅದರಿಂದಾಗಿ ಅವು ಸಾಕಷ್ಟು ಅಪಾಯಕ್ಕೆ ಗುರಿಯಾಗುತ್ತವೆ. ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಇದು ಕೇವಲ ಥರ್ಡ್ ಪಾರ್ಟಿಗೆ ಉಂಟಾಗಿರುವ ಹಾನಿ ಮತ್ತು ನಷ್ಟವನ್ನು ರಕ್ಷಿಸುವುದಲ್ಲದೆ, ಅದರ ಜೊತೆಗೆ ಅಪಘಾತಗಳು, ನೈಸರ್ಗಿಕ ವಿಪತ್ತುಗಳು ಅಥವಾ ಇತರ ದುರದೃಷ್ಟಕರ ಸಂದರ್ಭಗಳಲ್ಲಿ ಉಂಟಾಗಬಹುದಾದ ನಷ್ಟಗಳಿಂದ ಮಾಲೀಕ-ಚಾಲಕ ಮತ್ತು ವೆಹಿಕಲ್ ಅನ್ನು ಸಹ ರಕ್ಷಿಸುತ್ತದೆ.
  • ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗೂಡ್ಸಗಳನ್ನು ಸಾಗಿಸಲು  ನಿಮ್ಮ ವ್ಯಾಪಾರವು ಟ್ರಕ್‌ಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದರೆ , ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಬೆಂಕಿ ಮುಂತಾದ ಸಂದರ್ಭಗಳಲ್ಲಿ ಉಂಟಾಗಬಹುದಾದ ಯಾವುದೇ ನಷ್ಟ ಅಥವಾ ಸರಕುಗಳ ಹಾನಿಯನ್ನು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ರಕ್ಷಿಸುತ್ತದೆ.
ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್

ಮಿಸಲೇನಿಯಸ್ ಮತ್ತು ವಿಶೇಷ ವೆಹಿಕಲ್ಸ್ ಇನ್ಶೂರೆನ್ಸ್.

  • ಕ್ಯಾಬ್‌ಗಳು, ಟ್ಯಾಕ್ಸಿಗಳು, ಟ್ರಕ್‌ಗಳು ಮತ್ತು ಬಸ್‌ಗಳ ಹೊರತಾಗಿಯೂ, ನಿಮ್ಮ  ವ್ಯಾಪಾರಕ್ಕಾಗಿ ಬಳಸುವ ಇನ್ನೂ ಅನೇಕ ವಾಹನಗಳಿವೆ. ಇವುಗಳಲ್ಲಿ ಕೆಲವು ಕೃಷಿ, ಗಣಿಗಾರಿಕೆ ಮತ್ತು ನಿರ್ಮಾಣಕ್ಕಾಗಿ ಬಳಸಲಾಗುವ ವಿಶೇಷ ವಾಹನಗಳು ಸೇರಿವೆ.
  • ಅದಕ್ಕಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಇದು, ವೆಹಿಕಲ್ ಹಾಗೂ ಅದರ ಮಾಲೀಕರು-ಚಾಲಕರಿಂದ (ಅಥವಾ ಮಾಲೀಕ-ಚಾಲಕರಿಗೆ) ಉಂಟಾಗುವ ಯಾವುದೇ ಹಾನಿ ಮತ್ತು ನಷ್ಟಗಳಿಂದ, ಇನ್ಶೂರೆನ್ಸ್ ಮಾಡಿಸಿದ ವೆಹಿಕಲ್ ಅನ್ನು ರಕ್ಷಿಸುತ್ತದೆ
  • ಈ ವೆಹಿಕಲ್‌ಗಳ ಹೂಡಿಕೆ ಮತ್ತು ಗಾತ್ರ ಎರಡನ್ನೂ ಗಮನಿಸಿದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸಿನೊಂದಿಗೆ ನಿಮ್ಮ ವೆಹಿಕಲ್‌ಗೆ ಇನ್ಶೂರೆನ್ಸ್ ಖರೀದಿಸುವುದು ಯಾವಾಗಲೂ ಸುರಕ್ಷಿತ ಆಯ್ಕೆಯಾಗಿದೆ. ಈ ರೀತಿಯಾಗಿ, ಒಂದು ವ್ಯವಹಾರವು ಅಥವಾ ಏಕ ಮಾಲೀಕತ್ವವು (sole proprietor) ತನ್ನ ಅಪಾಯವನ್ನು ಕಡಿಮೆ ಮಾಡಿಕೊಳ್ಳುತ್ತವೆ. ಹಾಗೂ ದುರದೃಷ್ಟಕರ ಅಪಘಾತಗಳಿಂದ ಸಂಭವಿಸಬಹುದಾದ ಯಾವುದೇ ಹಣಕಾಸಿನ ನಷ್ಟದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತದೆ.

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳು.

ನಿಮ್ಮ ಕಮರ್ಷಿಯಲ್ ವೆಹಿಕಲ್‌ನ ಅಗತ್ಯವನ್ನು ಆಧರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ನೀಡುತ್ತೇವೆ. ಆದಾಗ್ಯೂ, ಕಮರ್ಷಿಯಲ್ ವೆಹಿಕಲ್‌ನ ಅಪಾಯ ಮತ್ತು ಬಳಕೆಯನ್ನು ಪರಿಗಣಿಸಿ, ನಾವು ನಿಮಗೆ ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತೇವೆ. ಇದು ನಿಮ್ಮ ಕಮರ್ಷಿಯಲ್ ವೆಹಿಕಲ್‌ನ ಜೊತೆಗೆ ಅದರ ಮಾಲೀಕ -ಚಾಲಕನನ್ನು ಸಹ ಆರ್ಥಿಕವಾಗಿ ರಕ್ಷಿಸುತ್ತದೆ.

ಲೈಬಿಲಿಟಿ ಓನ್ಲಿ ಸ್ಟ್ಯಾಂಡರ್ಡ್ ಪ್ಯಾಕೇಜ್

ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ, ನಿಮ್ಮ ಕಮರ್ಷಿಯಲ್ ವೆಹಿಕಲ್‌ನಿಂದ ಉಂಟಾಗುವ ಹಾನಿಗಳು.

×

ಇನ್ಶೂರೆನ್ಸ್ ಮಾಡಲಾದ ನಿಮ್ಮ ಕಮರ್ಷಿಯಲ್ ವೆಹಿಕಲ್‌ನಿಂದ, ವೆಹಿಕಲ್ ಟೋಯಿಂಗ್ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾಗುವ ಹಾನಿಗಳು

×

ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಕಮರ್ಷಿಯಲ್ ವೆಹಿಕಲ್‌ಗೆ ಉಂಟಾಗುವ ನಷ್ಟ ಅಥವಾ ಹಾನಿಗಳು.

×

ಮಾಲಕ-ಚಾಲಕನಿಗೆ ಹಾನಿ/ಸಾವು

ಮಾಲಕ-ಚಾಲಕ ಮೊದಲಿನಿಂದಲೇ ವಯಕ್ತಿಕ ಅಪಘಾತ ಕವರ್ ಅನ್ನು ಹೊಂದದೇ ಇದ್ದರೆ

×
Get Quote Get Quote

ಕ್ಲೇಮ್ ಮಾಡುವುದು ಹೇಗೆ?

1800-258-5956 ಈ ಸಂಖ್ಯೆಯಲ್ಲಿ ನಮಗೆ ಕರೆ ಮಾಡಿ ಅಥವಾ hello@godigit.com ನಲ್ಲಿ ನಮಗೆ ಇಮೇಲ್ ಕಳುಹಿಸಿ

ನಮ್ಮ ಕ್ಲೇಮ್‌ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೀವು ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಹಾಗೂ ಇನ್ಶೂರೆನ್ಸ್ ಹೋಲ್ಡರ್ / ಕರೆ ಮಾಡಿದವರ ಕಾಂಟಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ನಮಗೆ ನೀಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೇಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ಅಮನ್ ಜಸ್ವಾಲ್
★★★★★

ಅತ್ಯಂತ ಸರಳವಾದ ಕ್ಲೇಮ್ ಪ್ರಕ್ರಿಯೆ. ನಿಮ್ಮ ಇನ್ಶೂರೆನ್ಸ್ ಪಾಲಿಸಿಯಲ್ಲಿನ ಸಂಖ್ಯೆಯನ್ನು ಡಯಲ್ ಮಾಡಿ. ಡಿಜಿಟ್ ಇನ್ಶೂರೆನ್ಸ್ ತಂಡಕ್ಕೆ ಕರೆಯನ್ನು ಕನೆಕ್ಟ್ ಮಾಡಲಾಯಿತು. ಹಾಗೂ ಅವರು ಕೇವಲ 5 ನಿಮಿಷಗಳಲ್ಲಿ ಕ್ಲೇಮ್ ಅನ್ನು ರಿಜಿಸ್ಟರ್ ಮಾಡಿದರು. ನಂತರ ರಿಪೇರಿಗಾಗಿ ವೆಹಿಕಲ್ ಅನ್ನು ವರ್ಕ್‌ಶಾಪ್‌ಗೆ ಕೊಂಡೊಯ್ದರು . ಅದೇ ದಿನವೇ ಸರ್ವೇ ನಡೆಯಿತು. ಅಭಿಷೇಕ್ ಸರ್ ಅವರು ನನಗೆ ಎಲ್ಲ ಪ್ರಕ್ರಿಯೆಯನ್ನು ಚೆನ್ನಾಗಿ ವಿವರಿಸಿದರು ಮತ್ತು ಕ್ಲೇಮ್ ಪಡೆಯಲು ಸಹಾಯ ಮಾಡಿದರು.

ರೋಹಿತ್ ಖೋತ್
★★★★★

ಶ್ರೀ ಸಿದ್ಧೇಶ್ ಮಗ್ದುಮ್ ಅವರು ನೀಡಿದ ಸೇವೆಯಿಂದ ನಾನು ಸಂತೋಷನಾಗಿದ್ದೇನೆ ಮತ್ತು ತೃಪ್ತಿ ಹೊಂದೆದ್ದೇನೆ. ಅವರೊಂದಿಗೆ ವ್ಯವಹರಿಸುವುದು ಉತ್ತಮ ಅನುಭವವಾಗಿತ್ತು . ಅವರಿಗೆ ಆಟೋ ಕ್ಷೇತ್ರದ ಬಗ್ಗೆ ಸಾಕಷ್ಟು ಜ್ಞಾನವಿದೆ. ಅವರು ಸ್ವಭಾವತಃ ಸಭ್ಯ ಸ್ವಭಾವದವರಾಗಿದ್ದಾರೆ ಮತ್ತು ಅವರ ಕೆಲಸದಲ್ಲಿ ಪ್ರಾಂಪ್ಟ್ ಆಗಿದ್ದಾರೆ. ನನ್ನ ಸಮಸ್ಯೆಯನ್ನು ಪರಿಹರಿಸಲು ಅವರು ನನಗೆ ತುಂಬಾ ಸಹಾಯ ಮಾಡಿದರು. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಅಂತಹ ಜ್ಞಾನ ಮತ್ತು ಅನುಭವಿ ವ್ಯಕ್ತಿಯನ್ನು ನೀಡಿದ್ದಕ್ಕಾಗಿ ನಾನು ಡಿಜಿಟ್ ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಇದನ್ನು ಮುಂದುವರಿಸಿ ಸಿದ್ಧೇಶ್ ಸರ್. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಮತ್ತು ನಿಮ್ಮ ಭವಿಷ್ಯಕ್ಕೆ ಶುಭವಾಗಲಿ.

ಜಯಂತ್ ತ್ರಿಪಾಠಿ
★★★★★

ನನ್ನ ಕೇಸ್ ಅನ್ನು ಡಿಜಿಟ್ ಇನ್ಶೂರೆನ್ಸ್ ತಂಡ ನಿರ್ವಹಿಸಿದ ರೀತಿಗೆ ನನಗೆ ತುಂಬಾ ಸಂತೋಷವಾಗಿದೆ. ಗೋ ಡಿಜಿಟ್‌ನ ಶ್ರೀ ರತ್ನ ಕುಮಾರ್ ಸರ್ ನನ್ನ ಕೇಸ್ ನಿಭಾಯಿಸಿದ ರೀತಿಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನನ್ನ ವೆಹಿಕಲ್‌ನ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಲು ಗ್ಯಾರೇಜ್ ಜನರೊಂದಿಗೆ ಪ್ರತಿ ಎರಡು ದಿನಕ್ಕೊಮ್ಮೆ ನಿರಂತರವಾಗಿ ಶ್ರಮ ಹಾಕಿದ್ದರೆ. ರತ್ನ ಕುಮಾರ್ ಅವರಂತಹ ಕೆಲಸಗಾರರ ಕೈಯಲ್ಲಿ ಡಿಜಿಟ್ ಸುರಕ್ಷಿತವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಖಂಡಿತವಾಗಿಯೂ ನನ್ನ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಿಸಲು ಇಷ್ಟಪಡುತ್ತೇನೆ ಮತ್ತು ನನ್ನ ಬೇರೆ ವೆಹಿಕಲ್ ಕ್ರೆಟಾವನ್ನು ಸಹ ಕೊಂಡೊಯ್ಯುತ್ತೇನೆ . ಡಿಜಿಟ್ ಅನ್ನು ಬಲವಾಗಿ ಶಿಫಾರಸು ಮಾಡುತ್ತೇನೆ. ಆಲ್ ದಿ ವೆರಿ ಬೆಸ್ಟ್ ಟು ಡಿಜಿಟ್.

Show all Reviews

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ನಾನು ನನ್ನ ವ್ಯವಹಾರಕ್ಕಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನೀವು ನಿಮ್ಮ ವಾಹನವನ್ನು ನಿಮ್ಮ ಪ್ರಾಥಮಿಕ ವ್ಯವಹಾರಕ್ಕೆ ಬಳಸದೇ ಇದ್ದರೂ, ಕಮರ್ಷಿಯಲ್ ಉದ್ದೇಶಗಳಿಗೆ ಬಳಸಲಾಗುವ ಎಲ್ಲಾ ವಾಹನಗಳನ್ನು ಸಂರಕ್ಷಿಸುವುದು ಆವಶ್ಯಕವಾಗಿರುತ್ತದೆ. ಹೊಣೆಗಾರಿಕೆ ಮಾತ್ರದ ಪಾಲಿಸಿಯು ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದರೂ ಕೂಡಾ, ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಇರುವುದರಿಂದ ನಿಮ್ಮ ವಾಹನ ಹಾಗೂ ಮಾಲಕ-ಚಾಲಕ, ನೈಸರ್ಗಿಕ ವಿಪತ್ತುಗಳು, ಬೆಂಕಿ,ಕಳವು ಅಪಘಾತ ಇತ್ಯಾದಿಗಳಂತಹ ಅನಿರೀಕ್ಷಿತ ಘಟನೆಗಳಿಂದ ಆರ್ಥಿಕ ಸಂರಕ್ಷಣೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬಹುದು. ನಿಮ್ಮ ವ್ಯವಹಾರವು, ಬಳಕೆಯ ವಾಹನಗಳಿಂದಾಗಿ ಭಾರೀ ಆಸ್ತಿಯದ್ದಾಗಿದ್ದರೆ, ನೀವು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿರಬೇಕು. ಇದು ಮಾಲಕ-ಚಾಲಕನನ್ನು ಸಂರಕ್ಷಿಸುವುದು ಮಾತ್ರವಲ್ಲದೆ,  ಸಂಭಾವ್ಯ ನಷ್ಟದಿಂದಲೂ ನಿಮ್ಮ ವ್ಯವಹಾರವನ್ನು ಸಂರಕ್ಷಿಸುತ್ತದೆ. ಎಷ್ಟೇ ಆದರೂ ವ್ಯವಹಾರಗಳು ಅಪಾಯಗಳಿಂದ ಕೂಡಿರುತ್ತವೆ. ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಿಮ್ಮನ್ನು ಕನಿಷ್ಟ ಒಂದು ಅಪಾಯದಿಂದಾದರೂ ಕಾಪಾಡುತ್ತದೆ. 

ನೀವು ನಿಮ್ಮ ವಾಹನವನ್ನು ನಿಮ್ಮ ಪ್ರಾಥಮಿಕ ವ್ಯವಹಾರಕ್ಕೆ ಬಳಸದೇ ಇದ್ದರೂ, ಕಮರ್ಷಿಯಲ್ ಉದ್ದೇಶಗಳಿಗೆ ಬಳಸಲಾಗುವ ಎಲ್ಲಾ ವಾಹನಗಳನ್ನು ಸಂರಕ್ಷಿಸುವುದು ಆವಶ್ಯಕವಾಗಿರುತ್ತದೆ. ಹೊಣೆಗಾರಿಕೆ ಮಾತ್ರದ ಪಾಲಿಸಿಯು ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದರೂ ಕೂಡಾ, ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಇರುವುದರಿಂದ ನಿಮ್ಮ ವಾಹನ ಹಾಗೂ ಮಾಲಕ-ಚಾಲಕ, ನೈಸರ್ಗಿಕ ವಿಪತ್ತುಗಳು, ಬೆಂಕಿ,ಕಳವು ಅಪಘಾತ ಇತ್ಯಾದಿಗಳಂತಹ ಅನಿರೀಕ್ಷಿತ ಘಟನೆಗಳಿಂದ ಆರ್ಥಿಕ ಸಂರಕ್ಷಣೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ನಿಮ್ಮ ವ್ಯವಹಾರವು, ಬಳಕೆಯ ವಾಹನಗಳಿಂದಾಗಿ ಭಾರೀ ಆಸ್ತಿಯದ್ದಾಗಿದ್ದರೆ, ನೀವು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿರಬೇಕು. ಇದು ಮಾಲಕ-ಚಾಲಕನನ್ನು ಸಂರಕ್ಷಿಸುವುದು ಮಾತ್ರವಲ್ಲದೆ,  ಸಂಭಾವ್ಯ ನಷ್ಟದಿಂದಲೂ ನಿಮ್ಮ ವ್ಯವಹಾರವನ್ನು ಸಂರಕ್ಷಿಸುತ್ತದೆ. ಎಷ್ಟೇ ಆದರೂ ವ್ಯವಹಾರಗಳು ಅಪಾಯಗಳಿಂದ ಕೂಡಿರುತ್ತವೆ. ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಿಮ್ಮನ್ನು ಕನಿಷ್ಟ ಒಂದು ಅಪಾಯದಿಂದಾದರೂ ಕಾಪಾಡುತ್ತದೆ. 

ವಾಣಿಜ್ಯ ವಾಹನ ಇನ್ಶೂರೆನ್ಸ್ ಅಗತ್ಯವೇ?

ಹೌದು, ಒಂದು ವಾಣಿಜ್ಯ ವಾಹನ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ. ಹೊಣೆಗಾರಿಕೆ ಮಾತ್ರದ ಪಾಲಿಸಿಯು ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದರೂ ಕೂಡಾ, ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಇರುವುದರಿಂದ ಸ್ವತಃ ನಿಮ್ಮನ್ನು ಹಾಗೂ ನಿಮ್ಮ ಸ್ವಂತ ವಾಹನವನ್ನು ಸಂರಕ್ಷಿಸಲು ಆವಶ್ಯಕವಾಗಿರುತ್ತದೆ. ಇದರ ಜೊತೆ ಒಂದು ವಾಣಿಜ್ಯ ವಾಹನ ಇನ್ಶೂರೆನ್ಸ್, ನೈಸರ್ಗಿಕ ವಿಪತ್ತುಗಳು, ಬೆಂಕಿ,ಕಳವು ಅಪಘಾತ ಇತ್ಯಾದಿಗಳಂತ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ವ್ಯವಹಾರವನ್ನು ಆರ್ಥಿಕವಾಗಿ ಸಂರಕ್ಷಿಸುತ್ತದೆ.

ಹೌದು, ಒಂದು ವಾಣಿಜ್ಯ ವಾಹನ ಇನ್ಶೂರೆನ್ಸ್ ಅತ್ಯಗತ್ಯವಾಗಿದೆ. ಹೊಣೆಗಾರಿಕೆ ಮಾತ್ರದ ಪಾಲಿಸಿಯು ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದರೂ ಕೂಡಾ, ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ ಇರುವುದರಿಂದ ಸ್ವತಃ ನಿಮ್ಮನ್ನು ಹಾಗೂ ನಿಮ್ಮ ಸ್ವಂತ ವಾಹನವನ್ನು ಸಂರಕ್ಷಿಸಲು ಆವಶ್ಯಕವಾಗಿರುತ್ತದೆ. ಇದರ ಜೊತೆ ಒಂದು ವಾಣಿಜ್ಯ ವಾಹನ ಇನ್ಶೂರೆನ್ಸ್, ನೈಸರ್ಗಿಕ ವಿಪತ್ತುಗಳು, ಬೆಂಕಿ,ಕಳವು ಅಪಘಾತ ಇತ್ಯಾದಿಗಳಂತ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ವ್ಯವಹಾರವನ್ನು ಆರ್ಥಿಕವಾಗಿ ಸಂರಕ್ಷಿಸುತ್ತದೆ.

ಆನ್ಲೈನ್ ಆಗಿ ಸರಿಯಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಹೇಗೆ?

ಇಂದು ಲಭ್ಯವಿರುವ ಆಯ್ಕೆಗಳ ಸಂಖ್ಯೆಯನ್ನು ಪರಿಗಣಿಸಿದರೆ, ನಿಮ್ಮನ್ನು ಹಾಗೂ ನಿಮ್ಮ ವ್ಯವಹಾರವನ್ನು ಎಲ್ಲಾ ಸಂಭಾವ್ಯ ಸನ್ನಿವೇಶಗಳಿಂದ ಸಂರಕ್ಷಿಸಿ ಕವರ್ ನೀಡುವ ಒಂದು ಸರಳ, ಕೈಗೆಟಕುವ ದರದ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಎಷ್ಟೇ ಆದರೂ, ಒಂದು ಇನ್ಶೂರೆನ್ಸ್ ನ ಅತ್ಯಂತ ಪ್ರಮುಖ ಅಂಶ ಅದೇ ಆಗಿದೆ! ನಿಮ್ಮ ವಾಹನಕ್ಕಾಗಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ: ಸರಿಯಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ) : ಐಡಿವಿ ಯು ನೀವು ಇನ್ಶೂರ್ ಮಾಡಲು ಬಯಸುವ ಕಮರ್ಷಿಯಲ್ ವಾಹನದ ತಯಾರಕರ ಮಾರಾಟ ಬೆಲೆಯಾಗಿದೆ. ನಿಮ್ಮ ಪ್ರೀಮಿಯಂ ಇದನ್ನು ಅವಲಂಬಿಸುತ್ತದೆ. ಆನ್ಲೈನ್ ಆಗಿ ಸರಿಯಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹುಡುಕುವಾಗ, ನಿಮ್ಮ ಐಡಿವಿ ಅನ್ನು ಸರಿಯಾಗಿ ಉಲ್ಲೇಖಿಸಲು ಮರೆಯಬೇಡಿ. ಸೇವಾ ಲಾಭಗಳು :ಇತರ ಸೇವೆಗಳೊಂದಿಗೆ, 24x7 ಗ್ರಾಹಕ ಬೆಂಬಲ, ನಗದುರಹಿತ ಗ್ಯಾರೇಜ್ ಗಳ ವಿಸ್ತಾರವಾದ ನೆಟ್ವರ್ಕ್ ಗಳಂತಹ ಸೇವೆಗಳನ್ನೂ ಪರಿಗಣಿಸಿ. ಅಗತ್ಯ ಬಿದ್ದಾಗ ಈ ಸೇವೆಗಳು ಪ್ರಯೋಜನಕಾರಿಯಾಗಿರುತ್ತವೆ. ಆಡ್-ಆನ್ಸ್ ಗಳನ್ನು ಪರಿಶೀಲಿಸಿ : ನಿಮ್ಮ ವಾಹನಕ್ಕಾಗಿ ಸೂಕ್ತ ಕಮರ್ಷಿಯಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ, ಗರಿಷ್ಠ ಲಾಭಗಳನ್ನು ಪಡೆದುಕೊಳ್ಳಲು ಲಭ್ಯವಿರುವ ಆಡ್-ಆನ್ ಗಳನ್ನು ಪರಿಗಣಿಸಬಹುದು.  ಕ್ಲೈಮ್ ನ ಶೀಘ್ರತೆ:  ಇದು ಯಾವುದೆ ಇನ್ಶುರೆನ್ಸ್ ನ ಅತಿ ಪ್ರಮುಖ ಅಂಶವಾಗಿದೆ. ಕ್ಲೈಮ್ ಗಳನ್ನು  ಶೀಘ್ರದಲ್ಲಿ ಇತ್ಯರ್ಥ ಮಾಡುವ ಇನ್ಶೂರೆನ್ಸ್ ಕಂಪನಿಯ ಆಯ್ಕೆ ಮಾಡಿ. ಉತ್ತಮ ಮೌಲ್ಯ : ಸೂಕ್ತ ಪ್ರೀಮಿಯಂ, ಸೇವೆಯ ನಂತರದ ಲಾಭಗಳಿಂದ ಹಿಡಿದು ಕ್ಲೈಮ್ ಇತ್ಯರ್ಥ ಹಾಗೂ ಆಡ್ ಆನ್ ಗಳ ವರೆಗೆ; ನಿಮಗೆ ಅಗತ್ಯವಿರುವ ಎಲ್ಲವನ್ನೂ ಉತ್ತಮ ಬೆಲೆಯಲ್ಲಿ ಕವರ್ ಮಾಡುತ್ತದೆ ಎಂದು ನಿಮಗನಿಸುವ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ

ಇಂದು ಲಭ್ಯವಿರುವ ಆಯ್ಕೆಗಳ ಸಂಖ್ಯೆಯನ್ನು ಪರಿಗಣಿಸಿದರೆ, ನಿಮ್ಮನ್ನು ಹಾಗೂ ನಿಮ್ಮ ವ್ಯವಹಾರವನ್ನು ಎಲ್ಲಾ ಸಂಭಾವ್ಯ ಸನ್ನಿವೇಶಗಳಿಂದ ಸಂರಕ್ಷಿಸಿ ಕವರ್ ನೀಡುವ ಒಂದು ಸರಳ, ಕೈಗೆಟಕುವ ದರದ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಎಷ್ಟೇ ಆದರೂ, ಒಂದು ಇನ್ಶೂರೆನ್ಸ್ ನ ಅತ್ಯಂತ ಪ್ರಮುಖ ಅಂಶ ಅದೇ ಆಗಿದೆ!

ನಿಮ್ಮ ವಾಹನಕ್ಕಾಗಿ ಸರಿಯಾದ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ:

ಸರಿಯಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ) : ಐಡಿವಿ ಯು ನೀವು ಇನ್ಶೂರ್ ಮಾಡಲು ಬಯಸುವ ಕಮರ್ಷಿಯಲ್ ವಾಹನದ ತಯಾರಕರ ಮಾರಾಟ ಬೆಲೆಯಾಗಿದೆ. ನಿಮ್ಮ ಪ್ರೀಮಿಯಂ ಇದನ್ನು ಅವಲಂಬಿಸುತ್ತದೆ. ಆನ್ಲೈನ್ ಆಗಿ ಸರಿಯಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹುಡುಕುವಾಗ, ನಿಮ್ಮ ಐಡಿವಿ ಅನ್ನು ಸರಿಯಾಗಿ ಉಲ್ಲೇಖಿಸಲು ಮರೆಯಬೇಡಿ.

ಸೇವಾ ಲಾಭಗಳು :ಇತರ ಸೇವೆಗಳೊಂದಿಗೆ, 24x7 ಗ್ರಾಹಕ ಬೆಂಬಲ, ನಗದುರಹಿತ ಗ್ಯಾರೇಜ್ ಗಳ ವಿಸ್ತಾರವಾದ ನೆಟ್ವರ್ಕ್ ಗಳಂತಹ ಸೇವೆಗಳನ್ನೂ ಪರಿಗಣಿಸಿ. ಅಗತ್ಯ ಬಿದ್ದಾಗ ಈ ಸೇವೆಗಳು ಪ್ರಯೋಜನಕಾರಿಯಾಗಿರುತ್ತವೆ.

ಆಡ್-ಆನ್ಸ್ ಗಳನ್ನು ಪರಿಶೀಲಿಸಿ : ನಿಮ್ಮ ವಾಹನಕ್ಕಾಗಿ ಸೂಕ್ತ ಕಮರ್ಷಿಯಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ, ಗರಿಷ್ಠ ಲಾಭಗಳನ್ನು ಪಡೆದುಕೊಳ್ಳಲು ಲಭ್ಯವಿರುವ ಆಡ್-ಆನ್ ಗಳನ್ನು ಪರಿಗಣಿಸಬಹುದು. 

ಕ್ಲೈಮ್ ನ ಶೀಘ್ರತೆ:  ಇದು ಯಾವುದೆ ಇನ್ಶುರೆನ್ಸ್ ನ ಅತಿ ಪ್ರಮುಖ ಅಂಶವಾಗಿದೆ. ಕ್ಲೈಮ್ ಗಳನ್ನು  ಶೀಘ್ರದಲ್ಲಿ ಇತ್ಯರ್ಥ ಮಾಡುವ ಇನ್ಶೂರೆನ್ಸ್ ಕಂಪನಿಯ ಆಯ್ಕೆ ಮಾಡಿ.

ಉತ್ತಮ ಮೌಲ್ಯ : ಸೂಕ್ತ ಪ್ರೀಮಿಯಂ, ಸೇವೆಯ ನಂತರದ ಲಾಭಗಳಿಂದ ಹಿಡಿದು ಕ್ಲೈಮ್ ಇತ್ಯರ್ಥ ಹಾಗೂ ಆಡ್ ಆನ್ ಗಳ ವರೆಗೆ; ನಿಮಗೆ ಅಗತ್ಯವಿರುವ ಎಲ್ಲವನ್ನೂ ಉತ್ತಮ ಬೆಲೆಯಲ್ಲಿ ಕವರ್ ಮಾಡುತ್ತದೆ ಎಂದು ನಿಮಗನಿಸುವ ಮೋಟಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ದರಗಳ ಆನ್ಲೈನ್ ಹೋಲಿಕೆ ಮಾಡುವುದು ಹೇಗೆ?

ಎಲ್ಲಕ್ಕಿಂತ ಕಡಿಮೆ ಬೆಲೆಯ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಮನಸ್ಸಾಗಬಹುದು. ಆದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ದರಗಳ ಹೋಲಿಕೆ ಮಾಡುವಾಗ, ಸೇವಾ ಲಾಭಗಳು ಹಾಗೂ ಕ್ಲೈಮ್ ಇತ್ಯರ್ಥಗಳಂತಹ ಅಂಶಗಳನ್ನು ಪರಿಗಣಿಸಿ.  ನಿಮ್ಮ ವಾಹನದ ಪ್ರಕಾರವನ್ನು ಅವಲಂಬಿಸಿ, ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ವಾಹನಗಳು ಅಪಾಯಕ್ಕೆ ತುತ್ತಾಗುವ ಸಂಭಾವನೆಗಳು ಹೆಚ್ಚಿರುತ್ತವೆ. ಆದ್ದರಿಂದ ನಿಮ್ಮ ವಾಹನ ಹಾಗೂ ವ್ಯವಹಾರವನ್ನು ಎಲ್ಲಾ ಸಂಧರ್ಭಗಳಲ್ಲಿ ಸಂರಕ್ಷಿಸಲು ಪ್ರಮುಖ ಅಂಶಗಳ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿರುತ್ತದೆ: ಸೇವಾ ಲಾಭಗಳು : ಸಮಸ್ಯೆಯ ಸಂದರ್ಭದಲ್ಲಿ ಒಂದು ಒಳ್ಳೆಯ ಸೇವೆಯು ಪ್ರಯೋಜನಕಾರಿಯಾಗಿರುತ್ತದೆ. ಪ್ರತೀ ಇನ್ಶೂರೆನ್ಸ್ ಕಂಪನಿ ನೀಡುವ ಸೇವೆಗಳನ್ನು ತೂಗಿ ಅಳೆದು ಸೂಕ್ತ ಅಯ್ಕೆಯನ್ನು ಮಾಡಿ. ಡಿಜಿಟ್ ಒದಗಿಸುವ ಕೆಲ ಸೇವೆಗಳೆಂದರೆ 24*7 ಗ್ರಾಹಕ ಸೇವೆ ಮತ್ತು 1400+ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್ಸ್ ಇತ್ಯಾದಿಗಳು. ಶೀಘ್ರ ಕ್ಲೈಮ್ ಇತ್ಯರ್ಥ : ಕ್ಲೈಮ್ ಗಳ ಇತ್ಯರ್ಥವೇ ಇನ್ಶೂರೆನ್ಸ್ ಪಡೆಯುವ ಪೂರ್ತಿ ಉದ್ದೇಶವಾಗಿದೆ! ಆದ್ದರಿಂದಲೇ, ಶೀಘ್ರ ಕ್ಲೈಮ್ ಇತ್ಯರ್ಥಗಳನ್ನು ಖಚಿತಪಡಿಸುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲು ಮರೆಯದಿರಿ. ಇದರ ಜೊತೆ ನಮ್ಮದು ಶೂನ್ಯ ಹಾರ್ಡ್ ಕಾಪಿ ನೀತಿಯಾಗಿದೆ. ಅಂದರೆ ನಾವು ಕೇವಲ ಸಾಫ್ಟ್ ಕಾಪಿಯನ್ನು ಕೇಳುತ್ತೇವೆ. ಎಲ್ಲವೂ ಕಾಗದರಹಿತ, ಶೀಘ್ರ ಹಾಗೂ ಗೊಂದಲರಹಿತವಾಗಿದೆ! ನಿಮ್ಮ ಐಡಿವಿ(IDV) ಅನ್ನು ಪರಿಶೀಲಿಸಿ: ಆನ್ಲೈನ್ ನಲ್ಲಿ ಸಿಗುವ ಹಲವು ಇನ್ಶೂರೆನ್ಸ್ ದರಗಳು ಕಡಿಮೆ ಐಡಿವಿ ಅನ್ನು ಹೊಂದಿರುತ್ತವೆ(ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅಂದರೆ ನಿಮ್ಮ ಕಮರ್ಷಿಯಲ್ ವಾಹನದ ತಯಾರಕರ ಮಾರಾಟ ಬೆಲೆ. ಐಡಿವಿ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರಿದರೂ ಕೂಡಾ, ಸೆಟ್ಲ್ಮೆಂಟ್ ಸಮಯದಲ್ಲಿ ನಿಮಗೆ ಸರಿಯಾದ ಕ್ಲೈಮ್ ದೊರೆಯುವಂತೆ ಮಾಡುತ್ತದೆ. ಕಳವು ಅಥವಾ ಹಾನಿಯ ಸಮಯದಲ್ಲಿ ನಿಮ್ಮ ಐಡಿವಿಯು ಕಡಿಮೆಯಾಗಿತ್ತು/ ತಪ್ಪು ಆಗಿತ್ತು ಎಂದು ತಿಳಿಯಲು ಯಾರಿಗೂ ಇಷ್ಟವಿರುವುದಿಲ್ಲ! ಡಿಜಿಟ್ ನಲ್ಲಿ, ನೀವು ಆನ್ಲೈನ್ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನಾವು ನಿಮಗೆ ನಿಮ್ಮ ಐಡಿವಿ ಅನ್ನು ಸೆಟ್ ಮಾಡುವ ಆಯ್ಕೆಯನ್ನು ನೀಡುತ್ತೇವೆ. ಉತ್ತಮ ಮೌಲ್ಯ: ಕೊನೆಯಲ್ಲಿ, ಈ ಎಲ್ಲದರ ಒಂದು ಉತ್ತಮ ಸಂಯೋಜನೆಯನ್ನು ನೀಡುವ ವಾಹನ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ. ಸೂಕ್ತ ಬೆಲೆ, ದರ ಹಾಗೂ ಖಂಡಿತವಾಗಿಯೂ ಶೀಘ್ರ ಕ್ಲೈಮ್ ಗಳು!

ಎಲ್ಲಕ್ಕಿಂತ ಕಡಿಮೆ ಬೆಲೆಯ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ನಿಮಗೆ ಮನಸ್ಸಾಗಬಹುದು. ಆದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ದರಗಳ ಹೋಲಿಕೆ ಮಾಡುವಾಗ, ಸೇವಾ ಲಾಭಗಳು ಹಾಗೂ ಕ್ಲೈಮ್ ಇತ್ಯರ್ಥಗಳಂತಹ ಅಂಶಗಳನ್ನು ಪರಿಗಣಿಸಿ. 

ನಿಮ್ಮ ವಾಹನದ ಪ್ರಕಾರವನ್ನು ಅವಲಂಬಿಸಿ, ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ವಾಹನಗಳು ಅಪಾಯಕ್ಕೆ ತುತ್ತಾಗುವ ಸಂಭಾವನೆಗಳು ಹೆಚ್ಚಿರುತ್ತವೆ. ಆದ್ದರಿಂದ ನಿಮ್ಮ ವಾಹನ ಹಾಗೂ ವ್ಯವಹಾರವನ್ನು ಎಲ್ಲಾ ಸಂಧರ್ಭಗಳಲ್ಲಿ ಸಂರಕ್ಷಿಸಲು ಪ್ರಮುಖ ಅಂಶಗಳ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿರುತ್ತದೆ:

ಸೇವಾ ಲಾಭಗಳು : ಸಮಸ್ಯೆಯ ಸಂದರ್ಭದಲ್ಲಿ ಒಂದು ಒಳ್ಳೆಯ ಸೇವೆಯು ಪ್ರಯೋಜನಕಾರಿಯಾಗಿರುತ್ತದೆ. ಪ್ರತೀ ಇನ್ಶೂರೆನ್ಸ್ ಕಂಪನಿ ನೀಡುವ ಸೇವೆಗಳನ್ನು ತೂಗಿ ಅಳೆದು ಸೂಕ್ತ ಅಯ್ಕೆಯನ್ನು ಮಾಡಿ.

ಡಿಜಿಟ್ ಒದಗಿಸುವ ಕೆಲ ಸೇವೆಗಳೆಂದರೆ 24*7 ಗ್ರಾಹಕ ಸೇವೆ ಮತ್ತು 1400+ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್ಸ್ ಇತ್ಯಾದಿಗಳು.

ಶೀಘ್ರ ಕ್ಲೈಮ್ ಇತ್ಯರ್ಥ : ಕ್ಲೈಮ್ ಗಳ ಇತ್ಯರ್ಥವೇ ಇನ್ಶೂರೆನ್ಸ್ ಪಡೆಯುವ ಪೂರ್ತಿ ಉದ್ದೇಶವಾಗಿದೆ! ಆದ್ದರಿಂದಲೇ, ಶೀಘ್ರ ಕ್ಲೈಮ್ ಇತ್ಯರ್ಥಗಳನ್ನು ಖಚಿತಪಡಿಸುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲು ಮರೆಯದಿರಿ.

ಇದರ ಜೊತೆ ನಮ್ಮದು ಶೂನ್ಯ ಹಾರ್ಡ್ ಕಾಪಿ ನೀತಿಯಾಗಿದೆ. ಅಂದರೆ ನಾವು ಕೇವಲ ಸಾಫ್ಟ್ ಕಾಪಿಯನ್ನು ಕೇಳುತ್ತೇವೆ. ಎಲ್ಲವೂ ಕಾಗದರಹಿತ, ಶೀಘ್ರ ಹಾಗೂ ಗೊಂದಲರಹಿತವಾಗಿದೆ!

ನಿಮ್ಮ ಐಡಿವಿ(IDV) ಅನ್ನು ಪರಿಶೀಲಿಸಿ: ಆನ್ಲೈನ್ ನಲ್ಲಿ ಸಿಗುವ ಹಲವು ಇನ್ಶೂರೆನ್ಸ್ ದರಗಳು ಕಡಿಮೆ ಐಡಿವಿ ಅನ್ನು ಹೊಂದಿರುತ್ತವೆ(ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅಂದರೆ ನಿಮ್ಮ ಕಮರ್ಷಿಯಲ್ ವಾಹನದ ತಯಾರಕರ ಮಾರಾಟ ಬೆಲೆ. ಐಡಿವಿ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರಿದರೂ ಕೂಡಾ, ಸೆಟ್ಲ್ಮೆಂಟ್ ಸಮಯದಲ್ಲಿ ನಿಮಗೆ ಸರಿಯಾದ ಕ್ಲೈಮ್ ದೊರೆಯುವಂತೆ ಮಾಡುತ್ತದೆ.

ಕಳವು ಅಥವಾ ಹಾನಿಯ ಸಮಯದಲ್ಲಿ ನಿಮ್ಮ ಐಡಿವಿಯು ಕಡಿಮೆಯಾಗಿತ್ತು/ ತಪ್ಪು ಆಗಿತ್ತು ಎಂದು ತಿಳಿಯಲು ಯಾರಿಗೂ ಇಷ್ಟವಿರುವುದಿಲ್ಲ! ಡಿಜಿಟ್ ನಲ್ಲಿ, ನೀವು ಆನ್ಲೈನ್ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನಾವು ನಿಮಗೆ ನಿಮ್ಮ ಐಡಿವಿ ಅನ್ನು ಸೆಟ್ ಮಾಡುವ ಆಯ್ಕೆಯನ್ನು ನೀಡುತ್ತೇವೆ.

ಉತ್ತಮ ಮೌಲ್ಯ: ಕೊನೆಯಲ್ಲಿ, ಈ ಎಲ್ಲದರ ಒಂದು ಉತ್ತಮ ಸಂಯೋಜನೆಯನ್ನು ನೀಡುವ ವಾಹನ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿ. ಸೂಕ್ತ ಬೆಲೆ, ದರ ಹಾಗೂ ಖಂಡಿತವಾಗಿಯೂ ಶೀಘ್ರ ಕ್ಲೈಮ್ ಗಳು!

ವಾಣಿಜ್ಯ ವಾಹನ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಈ ಕೆಳಗಿನ ಅಂಶಗಳು ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ನ ಮೇಲೆ ಪರಿಣಾಮವನ್ನು ಬೀರಬಹುದು: ವಾಹನದ ಮಾದರಿ, ತಯಾರಿ ಹಾಗೂ ಎಂಜಿನ್: ಖಂಡಿತವಾಗಿಯೂ, ನಿಮ್ಮ ವಾಹನ ಅದು ಎಷ್ಟರ ಮಟ್ಟಿಗೆ ಅಪಾಯಕ್ಕೆ ತುತ್ತಾಗಬಹುದು ಎಂಬುದು ಹೆಚ್ಚಾಗಿ ಅದರ ಪ್ರಕಾರವನ್ನು ಅವಲಂಬಿಸುತ್ತದೆ! ಒಂದು ಸಾಮಾನ್ಯ ಕ್ಯಾಬಿನ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಒಂದು ಸರಕು ಸಾಗಿಸುವ ಟ್ರಕ್ ಅಥವಾ ಶಾಲಾ ಬಸ್ಸಿಗಿಂತ ತುಂಬಾ ಕಡಿಮೆ ಇರುತ್ತದೆ, ಕಾರಣ, ಅದರ ಗಾತ್ರ ಹಾಗೂ ವಾಹನದ ಪ್ರಕಾರ. ಇದರ ಜೊತೆ, ತಯಾರಾದ ವರ್ಷ, ವಾಹನದ ಸ್ಥಿತಿ ಇತ್ಯಾದಿಗಳಂತಹ ಅಂಶಗಳೂ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ. ಸ್ಥಳ: ನಿಮ್ಮ ಕಮರ್ಷಿಯಲ್ ವಾಹನ ನೊಂದಣಿ ಎಲ್ಲಿಯಾಗಿದೆ ಹಾಗೂ ಅದನ್ನು ಯಾವ ಸ್ಥಳದಲ್ಲಿ ಬಳಾಸಲಾಗುತ್ತದೆ ಎನ್ನುವುದರ ಮೇಲೂ ನಿಮ್ಮ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ನ ದರ ಬದಲಾಗಬಹುದು. ಏಕೆಂದರೆ ಪ್ರತಿಯೊಂದೂ ಸ್ಥಳದಲ್ಲೂ ಅಪಾಯದ ಅಂಶ ಬೇರೆಬೇರೆಯಾಗಿರುತ್ತದೆ, ಉದಾಹರಣೆಗೆ, ಮುಂಬಯಿ, ಬೆಂಗಳೂರು, ಹೈದರಾಬಾದ್, ದೆಹೆಲಿಯಂತಹ ಮಹಾನಗರಗಳಲ್ಲಿ ಇದು ಹೆಚ್ಚಿರುತ್ತದೆ.  ನೋ ಕ್ಲೈಮ್ ಬೋನಸ್: ನೀವು ಈಗಾಗಲೇ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದು ಪಾಲಿಸಿ ರಿನ್ಯೂವಲ್ ಬಗ್ಗೆ ಅಥವಾ ಇನ್ಶೂರರ್ ಅನ್ನು ಬದಲಿಸಲು ಯೋಚಿಸುತ್ತಿದ್ದರೆ, ಈ ಸಂದರ್ಭದಲ್ಲಿ ನಿಮ್ಮ ಎನ್ ಸಿ ಬಿ (NCB -  ನೋ ಕ್ಲೈಮ್ ಬೋನಸ್) ಅನ್ನೂ ಪರಿಗಣಿಸಲಾಗುವುದು ಹಾಗೂ ನಿಮ್ಮ ಪ್ರೀಮಿಯಂ ನಲ್ಲಿ ನಿಮಗೆ ರಿಯಾಯಿತಿ ದೊರೆಯುವುದು! ನೋ ಕ್ಲೈಮ್ ಬೋನಸ್ ನ ಅರ್ಥ ನಿಮ್ಮ ಕಮರ್ಷಿಯಲ್ ವಾಹನಕ್ಕೆ ಹಿಂದಿನ ವರ್ಷ ಯಾವುದೇ ಕ್ಲೈಮ್ ಅನ್ನು ಮಾಡಲಾಗಲಿಲ್ಲ ಎಂದು. ಇನ್ಶೂರೆನ್ಸ್ ಯೋಜನೆಯ ವಿಧಗಳು : ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ, ಪ್ರಾಥಮಿಕವಾಗಿ ಎರಡು ರೀತಿಯ ಇನ್ಶೂರೆನ್ಸ್ ಗಳು ಲಭ ಇವೆ. ಆದ್ದರಿಂದ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಕೂಡಾ ನೀವು ಆಯ್ಕೆ ಮಾಡುವ ಯೋಜನೆಯನ್ನು ಅವಲಂಬಿಸುತ್ತದೆ. ಕಡ್ಡಾಯವಾಗಿರುವ ಹೊಣೆಗಾರಿಕೆ ಮಾತ್ರ ಯೋಜನೆಯು ಕಡಿಮೆ ಪ್ರೀಮಿಯಂ ಅನ್ನು ಹೊಂದಿದ್ದರೂ, ಇದು ಕೇವಲ ಥರ್ಡ್ ಪಾರ್ಟೀ ಹಾನಿ ಅಥವಾ ಥರ್ಡ್ ಪಾರ್ಟೀಗಾದ ನಷ್ಟ ಹಾಗೂ ಮಾಲಕನ ವಯಕ್ತಿಕ ಅಪಘಾತ(ಅವನು/ಅವಳು ಇನ್ಶೂರ್ಡ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ)ವನ್ನು ಕವರ್ ಮಾಡುತ್ತದೆ; ಆದರೆ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯ ಪ್ರೀಮಿಯಂ ಹೆಚ್ಚಿದ್ದರೂ, ಅದು ನಮ್ಮ ಸ್ವಂತ ಕಮರ್ಷಿಯಲ್ ವಾಹನಕ್ಕೆ ಹಾಗೂ ಚಾಲಕನಿಗಾದ ಹಾನಿ ಹಾಗೂ ನಷ್ಟವನ್ನು ಅನುಕ್ರಮವಾಗಿ ಕವರ್ ಮಾಡುತ್ತದೆ. ಕಮರ್ಷಿಯಲ್ ವಾಹನದ ಉದ್ದೇಶ : ಪ್ರತಿಯೊಂದು ಕಮರ್ಷಿಯಲ್ ವಾಹನವನ್ನೂ ವಿವಿಧ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ. ಕೆಲವನ್ನು ಪ್ರಯಾಣಿಕರನ್ನು ಕರೆದೊಯ್ಯಲು ಉಪಯೋಗಿಸಿದರೆ ಇನ್ನೂ ಕೆಲವನ್ನು ಸರಕು ಸಾಗಣೆ ಅಥವಾ ಕಟ್ಟಡ ನಿರ್ಮಾಣಗಳಲ್ಲಿ ಉಪಯೋಗಿಸಲಾಗುತ್ತದೆ. ಆದ್ದರಿಂದಲೇ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಗಾಗಿ ನಿಮ್ಮ ವಾಹನದ ಉದ್ದೇಶವನ್ನೂ ಪರಿಗಣಿಸಲಾಗುತ್ತದೆ.  ಸಾಮಾನ್ಯವಾಗಿ, ಒಂದು ಸಾಧಾರಣ ಆಟೋ ರಿಕ್ಷಾದ ಇನ್ಶೂರೆನ್ಸ್ ಇಂದು ಸರಕು ಸಾಗಿಸುವ ಟ್ರಕ್ ನ ಇನ್ಶೂರೆನ್ಸ್ ಗಿಂತ ಕಡಿಮೆ ಇರುತ್ತದೆ, ಕಾರಣ ಇದರ ಗಾತ್ರ ಮಾತ್ರವಲ್ಲ ಟ್ರಕ್ ಇನ್ಶೂರೆನ್ಸ್ ನಲ್ಲಿ ಅದರಲ್ಲಿ ನಿಯಮಿತವಾಗಿ ಸಾಗಿಸುವ ಸರಕುಗಳ ಪ್ರಕಾರ ಹಾಗೂ ಅದರ ಮೌಲ್ಯವೂ ಕವರ್ ಆಗಿರುತ್ತದೆ.

ಈ ಕೆಳಗಿನ ಅಂಶಗಳು ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ನ ಮೇಲೆ ಪರಿಣಾಮವನ್ನು ಬೀರಬಹುದು:

ವಾಹನದ ಮಾದರಿ, ತಯಾರಿ ಹಾಗೂ ಎಂಜಿನ್: ಖಂಡಿತವಾಗಿಯೂ, ನಿಮ್ಮ ವಾಹನ ಅದು ಎಷ್ಟರ ಮಟ್ಟಿಗೆ ಅಪಾಯಕ್ಕೆ ತುತ್ತಾಗಬಹುದು ಎಂಬುದು ಹೆಚ್ಚಾಗಿ ಅದರ ಪ್ರಕಾರವನ್ನು ಅವಲಂಬಿಸುತ್ತದೆ!

ಒಂದು ಸಾಮಾನ್ಯ ಕ್ಯಾಬಿನ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಒಂದು ಸರಕು ಸಾಗಿಸುವ ಟ್ರಕ್ ಅಥವಾ ಶಾಲಾ ಬಸ್ಸಿಗಿಂತ ತುಂಬಾ ಕಡಿಮೆ ಇರುತ್ತದೆ, ಕಾರಣ, ಅದರ ಗಾತ್ರ ಹಾಗೂ ವಾಹನದ ಪ್ರಕಾರ. ಇದರ ಜೊತೆ, ತಯಾರಾದ ವರ್ಷ, ವಾಹನದ ಸ್ಥಿತಿ ಇತ್ಯಾದಿಗಳಂತಹ ಅಂಶಗಳೂ ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ.

ಸ್ಥಳ: ನಿಮ್ಮ ಕಮರ್ಷಿಯಲ್ ವಾಹನ ನೊಂದಣಿ ಎಲ್ಲಿಯಾಗಿದೆ ಹಾಗೂ ಅದನ್ನು ಯಾವ ಸ್ಥಳದಲ್ಲಿ ಬಳಾಸಲಾಗುತ್ತದೆ ಎನ್ನುವುದರ ಮೇಲೂ ನಿಮ್ಮ ವಾಹನದ ಇನ್ಶೂರೆನ್ಸ್ ಪ್ರೀಮಿಯಂ ನ ದರ ಬದಲಾಗಬಹುದು.

ಏಕೆಂದರೆ ಪ್ರತಿಯೊಂದೂ ಸ್ಥಳದಲ್ಲೂ ಅಪಾಯದ ಅಂಶ ಬೇರೆಬೇರೆಯಾಗಿರುತ್ತದೆ, ಉದಾಹರಣೆಗೆ, ಮುಂಬಯಿ, ಬೆಂಗಳೂರು, ಹೈದರಾಬಾದ್, ದೆಹೆಲಿಯಂತಹ ಮಹಾನಗರಗಳಲ್ಲಿ ಇದು ಹೆಚ್ಚಿರುತ್ತದೆ. 

ನೋ ಕ್ಲೈಮ್ ಬೋನಸ್: ನೀವು ಈಗಾಗಲೇ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದು ಪಾಲಿಸಿ ರಿನ್ಯೂವಲ್ ಬಗ್ಗೆ ಅಥವಾ ಇನ್ಶೂರರ್ ಅನ್ನು ಬದಲಿಸಲು ಯೋಚಿಸುತ್ತಿದ್ದರೆ, ಈ ಸಂದರ್ಭದಲ್ಲಿ ನಿಮ್ಮ ಎನ್ ಸಿ ಬಿ (NCB -  ನೋ ಕ್ಲೈಮ್ ಬೋನಸ್) ಅನ್ನೂ ಪರಿಗಣಿಸಲಾಗುವುದು ಹಾಗೂ ನಿಮ್ಮ ಪ್ರೀಮಿಯಂ ನಲ್ಲಿ ನಿಮಗೆ ರಿಯಾಯಿತಿ ದೊರೆಯುವುದು!

ನೋ ಕ್ಲೈಮ್ ಬೋನಸ್ ನ ಅರ್ಥ ನಿಮ್ಮ ಕಮರ್ಷಿಯಲ್ ವಾಹನಕ್ಕೆ ಹಿಂದಿನ ವರ್ಷ ಯಾವುದೇ ಕ್ಲೈಮ್ ಅನ್ನು ಮಾಡಲಾಗಲಿಲ್ಲ ಎಂದು.

ಇನ್ಶೂರೆನ್ಸ್ ಯೋಜನೆಯ ವಿಧಗಳು : ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ, ಪ್ರಾಥಮಿಕವಾಗಿ ಎರಡು ರೀತಿಯ ಇನ್ಶೂರೆನ್ಸ್ ಗಳು ಲಭ ಇವೆ. ಆದ್ದರಿಂದ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಕೂಡಾ ನೀವು ಆಯ್ಕೆ ಮಾಡುವ ಯೋಜನೆಯನ್ನು ಅವಲಂಬಿಸುತ್ತದೆ.

ಕಡ್ಡಾಯವಾಗಿರುವ ಹೊಣೆಗಾರಿಕೆ ಮಾತ್ರ ಯೋಜನೆಯು ಕಡಿಮೆ ಪ್ರೀಮಿಯಂ ಅನ್ನು ಹೊಂದಿದ್ದರೂ, ಇದು ಕೇವಲ ಥರ್ಡ್ ಪಾರ್ಟೀ ಹಾನಿ ಅಥವಾ ಥರ್ಡ್ ಪಾರ್ಟೀಗಾದ ನಷ್ಟ ಹಾಗೂ ಮಾಲಕನ ವಯಕ್ತಿಕ ಅಪಘಾತ(ಅವನು/ಅವಳು ಇನ್ಶೂರ್ಡ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರೆ)ವನ್ನು ಕವರ್ ಮಾಡುತ್ತದೆ; ಆದರೆ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯ ಪ್ರೀಮಿಯಂ ಹೆಚ್ಚಿದ್ದರೂ, ಅದು ನಮ್ಮ ಸ್ವಂತ ಕಮರ್ಷಿಯಲ್ ವಾಹನಕ್ಕೆ ಹಾಗೂ ಚಾಲಕನಿಗಾದ ಹಾನಿ ಹಾಗೂ ನಷ್ಟವನ್ನು ಅನುಕ್ರಮವಾಗಿ ಕವರ್ ಮಾಡುತ್ತದೆ.

ಕಮರ್ಷಿಯಲ್ ವಾಹನದ ಉದ್ದೇಶ : ಪ್ರತಿಯೊಂದು ಕಮರ್ಷಿಯಲ್ ವಾಹನವನ್ನೂ ವಿವಿಧ ಉದ್ದೇಶಗಳಿಗಾಗಿ ಉಪಯೋಗಿಸಲಾಗುತ್ತದೆ. ಕೆಲವನ್ನು ಪ್ರಯಾಣಿಕರನ್ನು ಕರೆದೊಯ್ಯಲು ಉಪಯೋಗಿಸಿದರೆ ಇನ್ನೂ ಕೆಲವನ್ನು ಸರಕು ಸಾಗಣೆ ಅಥವಾ ಕಟ್ಟಡ ನಿರ್ಮಾಣಗಳಲ್ಲಿ ಉಪಯೋಗಿಸಲಾಗುತ್ತದೆ. ಆದ್ದರಿಂದಲೇ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಗಾಗಿ ನಿಮ್ಮ ವಾಹನದ ಉದ್ದೇಶವನ್ನೂ ಪರಿಗಣಿಸಲಾಗುತ್ತದೆ. 

ಸಾಮಾನ್ಯವಾಗಿ, ಒಂದು ಸಾಧಾರಣ ಆಟೋ ರಿಕ್ಷಾದ ಇನ್ಶೂರೆನ್ಸ್ ಇಂದು ಸರಕು ಸಾಗಿಸುವ ಟ್ರಕ್ ನ ಇನ್ಶೂರೆನ್ಸ್ ಗಿಂತ ಕಡಿಮೆ ಇರುತ್ತದೆ, ಕಾರಣ ಇದರ ಗಾತ್ರ ಮಾತ್ರವಲ್ಲ ಟ್ರಕ್ ಇನ್ಶೂರೆನ್ಸ್ ನಲ್ಲಿ ಅದರಲ್ಲಿ ನಿಯಮಿತವಾಗಿ ಸಾಗಿಸುವ ಸರಕುಗಳ ಪ್ರಕಾರ ಹಾಗೂ ಅದರ ಮೌಲ್ಯವೂ ಕವರ್ ಆಗಿರುತ್ತದೆ.

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಮುನ್ನ ತಿಳಿಯಬೇಕಾದ ಪ್ರಮುಖ ವಿಷಯಗಳು

ಐಡಿವಿ(IDV) ಎಂದರೇನು? ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ, ನಿಮ್ಮ ಕಾರಿನ ಕಳವು ಅಥವಾ ದುರಸ್ತಿಗೂ ಮೀರಿ ಹಾನಿಯ ಸಂದರ್ಭದಲ್ಲಿ ನಿಮ್ಮ ಇನ್ಶೂರರ್ ನಿಮಗೆ ಪಾವತಿಸಬಹುದಾದ ಗರಿಷ್ಟ ಮೊತ್ತವಾಗಿದೆ. ಈ ಮೌಲ್ಯವನ್ನು ನಿಮ್ಮ ವಾಹನದ ತಯಾರಕರ ಮಾರಾಟ ಬೆಲೆ ಹಾಗೂ ಅದರ ಡಿಪ್ರಿಸಿಯೇಷನ್ ಅನ್ನು ಸೇರಿಸಿ ಪರಿಗಣಿಸಲಾಗುತ್ತದೆ. ಎನ್ ಸಿ ಬಿ(NCB- ನೋ ಕ್ಲೈಮ್ ಬೋನಸ್) ಎಂದರೇನು?  ನೋ ಕ್ಲೈಮ್ ಬೋನಸ್(NCB) ಎಂದರೆ ಒಂದು ಕ್ಲೈಮ್ ಫ್ರೀ ಅವಧಿ ಹೊಂದಿರುವುದಕ್ಕಾಗಿ ಪಾಲಿಸಿದಾರನಿಗೆ ಸಿಗುವ ಪ್ರೀಮಿಯಂ ಮೇಲಿನ ರಿಯಾಯಿತಿಯಾಗಿದೆ. ಒಂದು ನೋ ಕ್ಲೈಮ್ ಬೋನಸ್ ನ ವ್ಯಾಪ್ತಿಯು 20-50% ಇರುತ್ತದೆ ಹಾಗೂ ಇದು ನಿಮಗೆ ಪಾಲಿಸಿ ಅವಧಿಯ ಕೊನೆಯಲ್ಲಿ ದೊರೆಯುತ್ತದೆ, ಹಾಗೂ ನೀವು ನಿಮ್ಮ ಕಮರ್ಷಿಯಲ್ ವಾಹನವು ಯಾವುದೇ ಅಪಘಾತದಲ್ಲಿ ಸಿಲುಕದೇ ಇದ್ದ ದಾಖಲೆಯನ್ನು ಹೊಂದಿದ್ದರೆ ಇದನ್ನು ಸಂಪಾದಿಸುತ್ತೀರಿ. ಡಿಡಕ್ಟಿಬಲ್ಸ್(ಕಡಿತಗಳು) ಎಂದರೇನು? ಡಿಡಕ್ಟಿಬಲ್ಸ್ ಪಾಲಿಸಿದಾರರು ಕ್ಲೈಮ್ ಸಂದರ್ಭದಲ್ಲಿ ಪಾವತಿಸಬೇಕಾದ ಮೊತ್ತವಾಗಿದೆ. ಸಾಮಾನ್ಯವಾಗಿ ಎರಡು ರೀತಿಯ ಡಿಡಕ್ಟಿಬಲ್ ಗಳಿರುತ್ತವೆ; ಒಂದು ಕಡ್ಡಾಯವಾದದ್ದು, ಹಾಗೂ ಇನ್ನೊಂದು ಸ್ವಯಂಪ್ರೇರಿತ(ವಾಲಂಟರಿ) ಕ್ಲೈಮ್ - ಇದನ್ನು ನೀವು ಆಯ್ಕೆ ಮಾಡಬಹುದು ನಿಮ್ಮ ವ್ಯವಹಾರವು ಪ್ರತೀ ಕ್ಲೈಮ್ ಗಾಗಿ ಎಷ್ಟು ಮೊತ್ತವನ್ನು ನಿಭಾಯಿಸಬಹುದು ಎಂಬ ಆಧಾರದ ಮೇಲೆ.  ನಿಮ್ಮ ವಾಲಂಟರಿ ಕ್ಲೈಮ್ ಹೆಚ್ಚಿದ್ದಷ್ಟು, ನಿಮ್ಮ ಪ್ರೀಮಿಯಂ ಕಡಿಮೆ ಇರುತ್ತದೆ. ಆದರೆ ಒಂದು ವೊಲಂಟರಿ ಡಿಡಕ್ಟಿಬಲ್ ಮೊತ್ತವನ್ನು ಆಯ್ಕೆ ಮಾಡುವಾಗ - ಈ ಮೊತ್ತವು ಕ್ಲೈಮ್ ನ ಸಂದರ್ಭದಲ್ಲಿ ನಿಮ್ಮಿಂದ ಭರಿಸಲು ಸಾಧ್ಯವೇ ಎಂದು ಅರಿಯಿರಿ. ನಗದುರಹಿತ( ಕ್ಯಾಷ್ಲೆಸ್ಸ್) ಕ್ಲೈಮ್ ಎಂದರೇನು?  ನೀವು ನಿಮ್ಮ ಕಮರ್ಷಿಯಲ್ ವಾಹನವನ್ನು ಡಿಜಿಟ್ ನ ಅಧಿಕೃತ ರಿಪೇರಿ ಕೇಂದ್ರದಲ್ಲಿ ರಿಪೇರಿ ಮಾಡಿಸಲು ಆಯ್ಕೆ ಮಾಡಿದರೆ, ನಾವು ನೇರವಾಗಿ ರಿಪೇರಿ ಕೇಂದ್ರಕ್ಕೆ ಸ್ವೀಕೃತ ಕ್ಲೈಮ್ ಮೊತ್ತದ ಪಾವತಿಯನ್ನು ಮಾಡುತ್ತೇವೆ. ಇದು ನಗದುರಹಿತ ಕ್ಲೈಮ್ ಆಗಿದೆ. ದಯವಿಟ್ಟು ಗಮನಿಸಿ, ಯಾವುದೇ ರೀತಿಯ ಡಿಡಕ್ಟಿಬಲ್ ಗಳಿದ್ದರೆ ಉದಾಹರಣೆಗೆ ಕಡ್ಡಾಯ ಹೆಚ್ಚುವರಿ/ ಡಿಡಕ್ಟಿಬಲ್, ನಿಮ್ಮ ಇನ್ಶೂರರ್ ಕವರ್ ಮಾಡದ ಯಾವುದೇ ರಿಪೇರಿ ಶುಲ್ಕಗಳು ಅಥವಾ ಯಾವುದೇ ಡಿಪ್ರಿಸಿಯೇಷನ್ ವೆಚ್ಚಗಳನ್ನು ಪಾಲಿಸಿದಾರ ತಮ್ಮ ಜೇಬಿನಿಂದಲೇ ನೀಡಬೇಕಾಗುವುದು. ಥರ್ಡ್ ಪಾರ್ಟಿ ಹೊಣೆಗಾರಿಕೆ ಎಂದರೇನು? ನಿಮ್ಮ ವಾಣಿಜ್ಯ ವಾಹನವು ಯಾವುದೇ ಥರ್ಡ್ ಪಾರ್ಟೀ ಸ್ವತ್ತು, ವ್ಯಕ್ತಿ ಅಥವಾ ವಾಹನಕ್ಕೆ ಹಾನಿ ಮಾಡಿದರೆ ಅದು ಥರ್ಡ್ ಪಾರ್ಟಿ ಹೊಣೆಗಾರಿಕೆಯಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು(ಹೊಣೆಗಾರಿಕೆ ಮಾತ್ರ/ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ) ಅದಕ್ಕೆ ಆದ ನಷ್ಟವನ್ನು ಆರ್ಥಿಕವಾಗಿ ಕವರ್ ಮಾಡಲು ಬದ್ಧವಾಗಿರುತ್ತದೆ. 

ಐಡಿವಿ(IDV) ಎಂದರೇನು?

ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ, ನಿಮ್ಮ ಕಾರಿನ ಕಳವು ಅಥವಾ ದುರಸ್ತಿಗೂ ಮೀರಿ ಹಾನಿಯ ಸಂದರ್ಭದಲ್ಲಿ ನಿಮ್ಮ ಇನ್ಶೂರರ್ ನಿಮಗೆ ಪಾವತಿಸಬಹುದಾದ ಗರಿಷ್ಟ ಮೊತ್ತವಾಗಿದೆ. ಈ ಮೌಲ್ಯವನ್ನು ನಿಮ್ಮ ವಾಹನದ ತಯಾರಕರ ಮಾರಾಟ ಬೆಲೆ ಹಾಗೂ ಅದರ ಡಿಪ್ರಿಸಿಯೇಷನ್ ಅನ್ನು ಸೇರಿಸಿ ಪರಿಗಣಿಸಲಾಗುತ್ತದೆ.

ಎನ್ ಸಿ ಬಿ(NCB- ನೋ ಕ್ಲೈಮ್ ಬೋನಸ್) ಎಂದರೇನು? 

ನೋ ಕ್ಲೈಮ್ ಬೋನಸ್(NCB) ಎಂದರೆ ಒಂದು ಕ್ಲೈಮ್ ಫ್ರೀ ಅವಧಿ ಹೊಂದಿರುವುದಕ್ಕಾಗಿ ಪಾಲಿಸಿದಾರನಿಗೆ ಸಿಗುವ ಪ್ರೀಮಿಯಂ ಮೇಲಿನ ರಿಯಾಯಿತಿಯಾಗಿದೆ. ಒಂದು ನೋ ಕ್ಲೈಮ್ ಬೋನಸ್ ನ ವ್ಯಾಪ್ತಿಯು 20-50% ಇರುತ್ತದೆ ಹಾಗೂ ಇದು ನಿಮಗೆ ಪಾಲಿಸಿ ಅವಧಿಯ ಕೊನೆಯಲ್ಲಿ ದೊರೆಯುತ್ತದೆ, ಹಾಗೂ ನೀವು ನಿಮ್ಮ ಕಮರ್ಷಿಯಲ್ ವಾಹನವು ಯಾವುದೇ ಅಪಘಾತದಲ್ಲಿ ಸಿಲುಕದೇ ಇದ್ದ ದಾಖಲೆಯನ್ನು ಹೊಂದಿದ್ದರೆ ಇದನ್ನು ಸಂಪಾದಿಸುತ್ತೀರಿ.

ಡಿಡಕ್ಟಿಬಲ್ಸ್(ಕಡಿತಗಳು) ಎಂದರೇನು?

ಡಿಡಕ್ಟಿಬಲ್ಸ್ ಪಾಲಿಸಿದಾರರು ಕ್ಲೈಮ್ ಸಂದರ್ಭದಲ್ಲಿ ಪಾವತಿಸಬೇಕಾದ ಮೊತ್ತವಾಗಿದೆ. ಸಾಮಾನ್ಯವಾಗಿ ಎರಡು ರೀತಿಯ ಡಿಡಕ್ಟಿಬಲ್ ಗಳಿರುತ್ತವೆ; ಒಂದು ಕಡ್ಡಾಯವಾದದ್ದು, ಹಾಗೂ ಇನ್ನೊಂದು ಸ್ವಯಂಪ್ರೇರಿತ(ವಾಲಂಟರಿ) ಕ್ಲೈಮ್ - ಇದನ್ನು ನೀವು ಆಯ್ಕೆ ಮಾಡಬಹುದು ನಿಮ್ಮ ವ್ಯವಹಾರವು ಪ್ರತೀ ಕ್ಲೈಮ್ ಗಾಗಿ ಎಷ್ಟು ಮೊತ್ತವನ್ನು ನಿಭಾಯಿಸಬಹುದು ಎಂಬ ಆಧಾರದ ಮೇಲೆ. 

ನಿಮ್ಮ ವಾಲಂಟರಿ ಕ್ಲೈಮ್ ಹೆಚ್ಚಿದ್ದಷ್ಟು, ನಿಮ್ಮ ಪ್ರೀಮಿಯಂ ಕಡಿಮೆ ಇರುತ್ತದೆ. ಆದರೆ ಒಂದು ವೊಲಂಟರಿ ಡಿಡಕ್ಟಿಬಲ್ ಮೊತ್ತವನ್ನು ಆಯ್ಕೆ ಮಾಡುವಾಗ - ಈ ಮೊತ್ತವು ಕ್ಲೈಮ್ ನ ಸಂದರ್ಭದಲ್ಲಿ ನಿಮ್ಮಿಂದ ಭರಿಸಲು ಸಾಧ್ಯವೇ ಎಂದು ಅರಿಯಿರಿ.

ನಗದುರಹಿತ( ಕ್ಯಾಷ್ಲೆಸ್ಸ್) ಕ್ಲೈಮ್ ಎಂದರೇನು? 

ನೀವು ನಿಮ್ಮ ಕಮರ್ಷಿಯಲ್ ವಾಹನವನ್ನು ಡಿಜಿಟ್ ನ ಅಧಿಕೃತ ರಿಪೇರಿ ಕೇಂದ್ರದಲ್ಲಿ ರಿಪೇರಿ ಮಾಡಿಸಲು ಆಯ್ಕೆ ಮಾಡಿದರೆ, ನಾವು ನೇರವಾಗಿ ರಿಪೇರಿ ಕೇಂದ್ರಕ್ಕೆ ಸ್ವೀಕೃತ ಕ್ಲೈಮ್ ಮೊತ್ತದ ಪಾವತಿಯನ್ನು ಮಾಡುತ್ತೇವೆ. ಇದು ನಗದುರಹಿತ ಕ್ಲೈಮ್ ಆಗಿದೆ.

ದಯವಿಟ್ಟು ಗಮನಿಸಿ, ಯಾವುದೇ ರೀತಿಯ ಡಿಡಕ್ಟಿಬಲ್ ಗಳಿದ್ದರೆ ಉದಾಹರಣೆಗೆ ಕಡ್ಡಾಯ ಹೆಚ್ಚುವರಿ/ ಡಿಡಕ್ಟಿಬಲ್, ನಿಮ್ಮ ಇನ್ಶೂರರ್ ಕವರ್ ಮಾಡದ ಯಾವುದೇ ರಿಪೇರಿ ಶುಲ್ಕಗಳು ಅಥವಾ ಯಾವುದೇ ಡಿಪ್ರಿಸಿಯೇಷನ್ ವೆಚ್ಚಗಳನ್ನು ಪಾಲಿಸಿದಾರ ತಮ್ಮ ಜೇಬಿನಿಂದಲೇ ನೀಡಬೇಕಾಗುವುದು.

ಥರ್ಡ್ ಪಾರ್ಟಿ ಹೊಣೆಗಾರಿಕೆ ಎಂದರೇನು?

ನಿಮ್ಮ ವಾಣಿಜ್ಯ ವಾಹನವು ಯಾವುದೇ ಥರ್ಡ್ ಪಾರ್ಟೀ ಸ್ವತ್ತು, ವ್ಯಕ್ತಿ ಅಥವಾ ವಾಹನಕ್ಕೆ ಹಾನಿ ಮಾಡಿದರೆ ಅದು ಥರ್ಡ್ ಪಾರ್ಟಿ ಹೊಣೆಗಾರಿಕೆಯಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು(ಹೊಣೆಗಾರಿಕೆ ಮಾತ್ರ/ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿ) ಅದಕ್ಕೆ ಆದ ನಷ್ಟವನ್ನು ಆರ್ಥಿಕವಾಗಿ ಕವರ್ ಮಾಡಲು ಬದ್ಧವಾಗಿರುತ್ತದೆ. 

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಸಾಧಾರಣ ಕಾರ್ ಇನ್ಶೂರೆನ್ಸ್ ಕ್ಕಿಂತ ಹೇಗೆ ಭಿನ್ನವಾಗಿದೆ?

ಒಂದು ಸಾಧಾರಣ ಕಾರಿಗೆ ಹೋಲಿಸಿದರೆ ಒಂದು ವಾಣಿಜ್ಯ ವಾಹನವು ಅಪಾಯಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿರುತ್ತದೆ. ಸರಕು ಸಾಗಿಸುವ ಉದಾಹರಣೆಯನ್ನು ನೋಡಿದರೆ, ಅಪಘಾತ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ, ಟ್ರಕ್ ನ ಗಾತ್ರ ಹಾಗೂ ಅದು ಸಾಗಿಸುತ್ತಿರುವ ಸರಕುಗಳ ಮೌಲ್ಯದಿಂದಾಗಿ ಅದಕ್ಕೆ ಅಪಾಯವೂ ಹೆಚ್ಚಿರುತ್ತದೆ. ಸರಳವಾಗಿ ಹೇಳುವುದಾದರೆ, ಒಂದು ಸಾಧಾರಣ ಕಾರ್ ಇನ್ಶೂರೆನ್ಸ್ ನ ವಿನ್ಯಾಸವು ಪ್ರಾಥಮಿಕವಾಗಿ ನೀವು ಹಾಗೂ ನಿಮ್ಮ ಕುಟುಂಬ ಬಳಸುವ ಕಾರುಗಳಿಗಾಗಿ ಮಾಡಲಾಗಿದೆ. ಆದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ನಿರ್ದಿಷ್ಟವಾಗಿ ಒಂದು ವ್ಯವಹಾರದ ಮುಖ್ಯ ಅಂಗಗಳಾಗಿರುವ ವಾಹನಗಳಿಗಾಗಿ ತಯಾರಿಸಲಾಗಿದೆ. ಈ ಎಅಡು ವಾಹನಗಳು ಎದುರಿಸುವ ಸಂದರ್ಭಗಳು ಹಾಗೂ ಅಪಾಯಗಳು ಬೇರೆಬೇರೆಯಾಗಿರುವ ಕಾರಣ ಅದರ ಪಾಲಿಸಿ ಗಳನ್ನು ಕೂಡ ಸೂಕ್ತವಾಗಿ ಕಸ್ಟಮೈಜ್ ಮಾಡಲಾಗಿದೆ.

ಒಂದು ಸಾಧಾರಣ ಕಾರಿಗೆ ಹೋಲಿಸಿದರೆ ಒಂದು ವಾಣಿಜ್ಯ ವಾಹನವು ಅಪಾಯಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿರುತ್ತದೆ. ಸರಕು ಸಾಗಿಸುವ ಉದಾಹರಣೆಯನ್ನು ನೋಡಿದರೆ, ಅಪಘಾತ ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ, ಟ್ರಕ್ ನ ಗಾತ್ರ ಹಾಗೂ ಅದು ಸಾಗಿಸುತ್ತಿರುವ ಸರಕುಗಳ ಮೌಲ್ಯದಿಂದಾಗಿ ಅದಕ್ಕೆ ಅಪಾಯವೂ ಹೆಚ್ಚಿರುತ್ತದೆ.

ಸರಳವಾಗಿ ಹೇಳುವುದಾದರೆ, ಒಂದು ಸಾಧಾರಣ ಕಾರ್ ಇನ್ಶೂರೆನ್ಸ್ ನ ವಿನ್ಯಾಸವು ಪ್ರಾಥಮಿಕವಾಗಿ ನೀವು ಹಾಗೂ ನಿಮ್ಮ ಕುಟುಂಬ ಬಳಸುವ ಕಾರುಗಳಿಗಾಗಿ ಮಾಡಲಾಗಿದೆ. ಆದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ನಿರ್ದಿಷ್ಟವಾಗಿ ಒಂದು ವ್ಯವಹಾರದ ಮುಖ್ಯ ಅಂಗಗಳಾಗಿರುವ ವಾಹನಗಳಿಗಾಗಿ ತಯಾರಿಸಲಾಗಿದೆ. ಈ ಎಅಡು ವಾಹನಗಳು ಎದುರಿಸುವ ಸಂದರ್ಭಗಳು ಹಾಗೂ ಅಪಾಯಗಳು ಬೇರೆಬೇರೆಯಾಗಿರುವ ಕಾರಣ ಅದರ ಪಾಲಿಸಿ ಗಳನ್ನು ಕೂಡ ಸೂಕ್ತವಾಗಿ ಕಸ್ಟಮೈಜ್ ಮಾಡಲಾಗಿದೆ.

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ಖರೀದಿ/ರಿನ್ಯೂವಲ್ ಏಕೆ ಅಗತ್ಯ?

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ಖರೀದಿ/ರಿನ್ಯೂವಲ್ ಏಕೆ ಅಗತ್ಯ ಎನ್ನುವುದಕ್ಕೆ ಇಲ್ಲಿ ಕೆಲವು ಕಾರಣಗಳನ್ನು ನೀಡಲಾಗಿದೆ: ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ವಯಕ್ತಿಕ ಅಥವಾ ವ್ಯವಹಾರಿಕ ಉದ್ದೇಶಗಳಿಗೆ ಬಳಸಲಾಗುವ ಯಾವುದೇ ವಾಹನವು ಕನಿಷ್ಟ ಪಕ್ಷ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ, ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಸ್ವತ್ತಿಗೆ ನಿಮ್ಮ ವಾಹನದಿಂದಾದ ಹಾನಿಯನ್ನು ಕವರ್ ಮಾಡಲು. ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯಿಂದ ನಿಮ್ಮ ಸ್ವಂತ ವಾಹನವನ್ನೂ ರಕ್ಷಿಸಿ, ಇದು ನಿಮ್ಮನ್ನು ಸ್ವಂತ ಹಾನಿ ಹಾಗೂ ಅಪಘಾತ, ಢಿಕ್ಕಿ, ನೈಸರ್ಗಿಕ ವಿಪತ್ತು ಇತ್ಯಾದಿಗಳಿಂದಾದ ಹಾನಿಗಳಿಂದಲೂ ಸಂರಕ್ಷಿಸುತ್ತದೆ. ವ್ಯವಹಾರದಲ್ಲಿ ಅನಿರೀಕ್ಷಿತ  ಹಾನಿಯನ್ನು ತಪ್ಪಿಸಿ, ಏಕೆಂದರೆ ಅಗತ್ಯದ ಸಮಯದಲ್ಲೆಲ್ಲಾ ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಇದಕ್ಕಾಗಿ ನಿಮಗೆ ಕವರ್ ನೀಡುತ್ತದೆ.

  • ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನ ಖರೀದಿ/ರಿನ್ಯೂವಲ್ ಏಕೆ ಅಗತ್ಯ ಎನ್ನುವುದಕ್ಕೆ ಇಲ್ಲಿ ಕೆಲವು ಕಾರಣಗಳನ್ನು ನೀಡಲಾಗಿದೆ:
  • ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ವಯಕ್ತಿಕ ಅಥವಾ ವ್ಯವಹಾರಿಕ ಉದ್ದೇಶಗಳಿಗೆ ಬಳಸಲಾಗುವ ಯಾವುದೇ ವಾಹನವು ಕನಿಷ್ಟ ಪಕ್ಷ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯವಾಗಿದೆ, ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಸ್ವತ್ತಿಗೆ ನಿಮ್ಮ ವಾಹನದಿಂದಾದ ಹಾನಿಯನ್ನು ಕವರ್ ಮಾಡಲು.
  • ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯಿಂದ ನಿಮ್ಮ ಸ್ವಂತ ವಾಹನವನ್ನೂ ರಕ್ಷಿಸಿ, ಇದು ನಿಮ್ಮನ್ನು ಸ್ವಂತ ಹಾನಿ ಹಾಗೂ ಅಪಘಾತ, ಢಿಕ್ಕಿ, ನೈಸರ್ಗಿಕ ವಿಪತ್ತು ಇತ್ಯಾದಿಗಳಿಂದಾದ ಹಾನಿಗಳಿಂದಲೂ ಸಂರಕ್ಷಿಸುತ್ತದೆ.
  • ವ್ಯವಹಾರದಲ್ಲಿ ಅನಿರೀಕ್ಷಿತ  ಹಾನಿಯನ್ನು ತಪ್ಪಿಸಿ, ಏಕೆಂದರೆ ಅಗತ್ಯದ ಸಮಯದಲ್ಲೆಲ್ಲಾ ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಇದಕ್ಕಾಗಿ ನಿಮಗೆ ಕವರ್ ನೀಡುತ್ತದೆ.

ಭಾರತದಲ್ಲಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಕಾಂಪ್ರೆಹೆನ್ಸಿವ್ ಹಾಗೂ ಥರ್ಡ್ ಪಾರ್ಟೀ ಪಾಲಿಸಿ ಮಧ್ಯೆ ಇರುವ ವ್ಯತ್ಯಾಸವೇನು?

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ನಲ್ಲಿ ಥರ್ಡ್ ಪಾರ್ಟೀ ಪಾಲಿಸಿಯು ಕೇವಲ ಥರ್ಡ್ ಪಾರ್ಟೀ ವಾಹನ, ವ್ಯಕ್ತಿ ಹಾಗೂ ಸ್ವತ್ತಿಗೇ ಆದ ಹಾನಿ ಹಾಗೂ ನಷ್ಟಗಳನ್ನು ಕವರ್ ಮಾಡುತ್ತದೆ ಆದರೆ ಸಮಗ್ರ ಪಾಲಿಸಿಯು ಥರ್ಡ್ ಪಾರ್ಟೀಯೊಂದಿಗೆ ಸ್ವಂತ ಹಾನಿ ಹಾಗೂ ನಷ್ಟಗಳನ್ನೂ ಕವರ್ ಮಾಡುತ್ತದೆ.

ಪ್ರಯಾಣಿಕರನ್ನು ಕರೆದೊಯ್ಯುವ ವಾಹನ ಎಂದರೇನು?

ಪ್ರಯಾಣಿಕರನ್ನು ಕರೆದೊಯ್ಯುವ ವಾಹನವು ಜನರಿಗೆ ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಲು ಸಹಾಯ ಮಾಡುವ ಕಮರ್ಷಿಯಲ್ ವಾಹನವಾಗಿದೆ. ಇದಕ್ಕೆ ಉದಾಹರಣೆ ಎಂದರೆ ಸಾರ್ವಜನಿಕ ಹಾಗೂ ಶಾಲಾ ಬಸ್ಸುಗಳು, ಕ್ಯಾಬ್ ಗಳು ಹಾಗೂ ಟ್ಯಾಕ್ಸಿಗಳು.

ಸರಕು ಸಾಗಿಸುವ ವಾಹನ ಎಂದರೇನು?

ಹೆಸರೇ ಸೂಚಿಸಿದ ಹಾಗೆ, ಒಂದು ಸರಕು ಸಾಗಿಸುವ ವಾಹನವು ಪ್ರಾಥಮಿಕವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಕುಗಳನ್ನು ಸಾಗಿಸಲು ಉಪಯೋಗಿಸಲಾಗುವ ಕಮರ್ಷಿಯಲ್ ವಾಹನವಾಗಿದೆ, ಟ್ರಕ್ ಗಳು ಹಾಗೂ ಲಾರಿಗಳಂತೆ.

ಇತರ ಹಾಗೂ ವಿಶೇಷ ವಾಹನ ವರ್ಗ ಎಂದು ಯಾವ ವಾಹನವನ್ನು ಪರಿಗಣಿಸಲಾಗುತ್ತದೆ?

ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳು ಅಥವಾ ಸರಕು ಸಾಗಿಸುವ ವಾಹನ ಈ ಎರಡೂ ವರ್ಗಕ್ಕೆ ಸೇರದೇ ಇರುವ ವಿಶೇಷ ವಾಹನವನ್ನು ವಿಶೇಷ ಅಥವಾ ಇತರ ವಾಹನ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪಿಕ್ ಅಪ್ ಟ್ರಕ್ ಗಳು, ನಿರ್ಮಾಣದ ಸಮಯದಲ್ಲಿ ಬಳಸಲಾಗುವ ವಾಹನಗಳು ಇತ್ಯಾದಿ ಸೇರಬಹುದು.

ನನ್ನ ಕಮರ್ಷಿಯಲ್ ವಾಹನವು ಅಪಘಾತಕ್ಕೆ ಒಳಗಾದರೆ ನಾನು ಏನು ಮಾಡಬೇಕು?

ನಿಮ್ಮ ಕಮರ್ಷಿಯಲ್ ವಾಹನವು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ, ತಕ್ಷಣ ನಮಗೆ 1800-103-4448 ರಲ್ಲಿ ಕರೆ ಮಾಡಿ ಹಾಗೂ ನಾವು ನಿಮ್ಮನ್ನು ತೊಂದರೆಯಿಂದ ಮುಕ್ತವಾಗಿಸುತ್ತೇವೆ!

ಹಾನಿಯ ಸಂದರ್ಭದಲ್ಲಿ ನಾನು ನನ್ನ ಕಮರ್ಷಿಯಲ್ ವಾಹನವನ್ನು ಎಲ್ಲಿ ರಿಪೇರಿ ಮಾಡಿಸಬಹುದು?

ಡಿಜಿಟ್ ನಲ್ಲಿ, ನಾವು ಭಾರತದಾದ್ಯಂತ, ಪಾರ್ಟ್ನರ್ ಗಳನ್ನು ಹೊಂದಿದ್ದೇವೆ. ನೀವು ಇವುಗಳಲ್ಲಿ ಒಂದರಲ್ಲಿ ನಿಮ್ಮ ಕಮರ್ಷಿಯಲ್ ವಾಹನದ ರಿಪೇರಿ ಮಾಡಿಸಬಹುದು ಅಥವಾ ನಿಮ್ಮ ಆಯ್ಕೆಯ ಗ್ಯಾರೇಜ್ ನಲ್ಲಿ ರಿಪೇರಿ ಮಾಡಿಸಿ ನಂತರ ಕ್ಲೈಮ್ ಮೂಲಕ ವೆಚ್ಚಗಳ ಮರುಪಾವತಿಯನ್ನು ಪಡೆಯಬಹುದು.