ಟ್ರ್ಯಾಕ್ಟರ್ ಇನ್ಶೂರೆನ್ಸ್

ಕಮರ್ಷಿಯಲ್ ವಾಹನ ಇನ್ಶೂರೆನ್ಸ್ ಕೃಷಿ/ತೋಟದ ಟ್ರ್ಯಾಕ್ಟರ್ಸ್ ಗಳಿಗಾಗಿ

Third-party premium has changed from 1st June. Renew now

ಟ್ರ್ಯಾಕ್ಟರ್ ಇನ್ಶೂರೆನ್ಸ್ ಒಂದು ರೀತಿಯ ಕಮರ್ಷಿಯಲ್  ವಾಹನ  ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ನಿಮ್ಮ ಟ್ರ್ಯಾಕ್ಟರ್ ಗೆ  ಅಪಘಾತ, ಢಿಕ್ಕಿ, ನೈಸರ್ಗಿಕ ವಿಪತ್ತುಗಳು, ಬೆಂಕಿ ಅಥವಾ ಕಳವುಗಳಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ  ಹಾನಿ ಮತ್ತು ನಷ್ಟಗಳಿಂದ  ಸಂರಕ್ಷಿಸಲು ರಚಿಸಲಾಗಿದೆ.

ಟ್ರ್ಯಾಕ್ಟರ್ ಗಳ  ಥರ್ಡ್ ಪಾರ್ಟಿ ಭಾದ್ಯತಾ ಪಾಲಿಸಿ ಕೇವಲ ಮೂರನೇ ಪಾರ್ಟಿ ಗಳ ನಷ್ಟವನ್ನು ಭರಿಸುತ್ತದೆ, ಆದರೆ ಟ್ರ್ಯಾಕ್ಟರ್ ನ ವಿಸ್ತಾರವಾದ(ಕಾಂಪ್ರೆಹೆನ್ಸಿವ್) ಇನ್ಶೂರೆನ್ಸ್ ಸ್ವಂತ ಹಾನಿ ಮತ್ತು ನಷ್ಟಗಳಿಗೆ ಕವರೇಜ್ ನೀಡುತ್ತದೆ ಇದರಿಂದ ಇದು ನಿಮ್ಮ ಟ್ರ್ಯಾಕ್ಟರ್ ಗಳಿಗೆ ನಿಮಗೆ ಹಾಗೂ ನಿಮ್ಮ ವ್ಯವಸಾಯಕ್ಕೆ ಸೂಕ್ತವಾದ ಕವರೇಜ್ ಅನ್ನು ನೀಡುತ್ತದೆ.

ನಾನು ಟ್ರ್ಯಾಕ್ಟರ್ ಇನ್ಶೂರೆನ್ಸ್ ಏಕೆ ತೆಗೆದುಕೊಳ್ಳಬೇಕು?

  • ನೀವು ಅಥವಾ ನಿಮ್ಮ ಸಂಸ್ಥೆ ನಿಮ್ಮ ದಿನನಿತ್ಯದ ವ್ಯವಹಾರಗಳಿಗೆ ಒಂದು ಅಥವಾ ಹಲವು ಟ್ರ್ಯಾಕ್ಟರ್ ಗಳನ್ನು ಉಪಯೋಗಿಸುತ್ತಿದ್ದರೆ, ಮೋಟರ್ ವೆಹಿಕಲ್ ಆಕ್ಟ್ ಪ್ರಕಾರ ಕನಿಷ್ಠ ಮೂರನೇ ಪಾರ್ಟಿ ಭಾದ್ಯತಾ ಟ್ರ್ಯಾಕ್ಟರ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಾಗುತ್ತದೆ. ಇದರಿಂದ ನಿಮ್ಮ ವ್ಯವಸಾಯಕ್ಕೆ ಬಳಸಿದ ಟ್ರ್ಯಾಕ್ಟರ್ ನಿಂದ ಮೂರನೇ ಪಾರ್ಟಿ ಗೆ ಯಾವುದೇ ರೀತಿಯ ಹಾನಿ ಅಥವಾ ನಷ್ಟ ಸಂಭವಿಸಿದರೆ ನಿಮಗೆ ಆರ್ಥಿಕವಾದ ಕವರೇಜ್ ಸಿಗುತ್ತದೆ.
  • ಎಲ್ಲಾ ವ್ಯವಹಾರಗಳು ಚಿಕ್ಕ ಅಥವಾ ದೊಡ್ಡ ಅಪಾಯಗಳಿಗೆ ತುತ್ತಾಗಬಹುದು. ಆದರೆ ನೀವು ಭಾರೀ ಆಸ್ತಿಯನ್ನು ಒಳಗೊಂಡ ಹಾಗೂ ಹಲವು ಟ್ರ್ಯಾಕ್ಟರ್ ಗಳನ್ನು ಬಳಸುವ ದೊಡ್ಡ ವ್ಯವಹಾರ ನಡೆಸುತ್ತಿದ್ದರೆ, ನೀವು ನಿಮ್ಮ ಟ್ರ್ಯಾಕ್ಟರ್ ಗಳನ್ನು ಮತ್ತು ಚಾಲಕ - ಮಾಲಕನನ್ನು ಸ್ವಯಂ ಡ್ಯಾಮೇಜ್ ಮತ್ತು ಹಾನಿಯಿಂದ ತಪ್ಪಿಸಲು ಕನಿಷ್ಠ ಪಕ್ಷ ಟ್ರ್ಯಾಕ್ಟರ್ ಇನ್ಶೂರೆನ್ಸ್ ಅನ್ನಾದರೂ ಮಾಡಲೇ ಬೇಕು.
  • ಟ್ರ್ಯಾಕ್ಟರ್ ಅನ್ನು ಇನ್ಶೂರ್ ಮಾಡುವುದರ ಮೂಲಕ ನೀವು ಅನಿರೀಕ್ಷಿತ, ಭಾರೀ ನಷ್ಟಗಳಿಂದ ತಮ್ಮನ್ನು ತಾವು ಸಂರಕ್ಷಿಸುತ್ತೀರಿ ಹಾಗೂ ಇದರಿಂದ ನೈಸರ್ಗಿಕ ವಿಪತ್ತು ಅಥವಾ ಬೆಂಕಿ ಇಂದಾಗುವ ಬಿಸ್ನೆಸ್ ಡೌನ್  ಟೈಮ್ ಅನ್ನು ತಪ್ಪಿಸಬಹುದು.

ಡಿಜಿಟ್ ನ ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ಅನ್ನು ಯಾಕೆ ಆಯ್ಕೆ ಮಾಡಬೇಕು?

ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?

ಯಾವುದು ಕವರ್ ಆಗುವುದಿಲ್ಲ?

ನಿಮ್ಮ ಕಮರ್ಷಿಯಲ್  ಟ್ರ್ಯಾಕ್ಟರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಅಗಿರುವುದಿಲ್ಲ ಎಂದು ತಿಳಿಯುವುದು ತುಂಬಾ ಮುಖ್ಯ, ಯಾಕೆಂದರೆ ಕ್ಲೈಮ್ ಸಂದರ್ಭದಲ್ಲಿ ನೀವು ಆಶ್ಚರ್ಯಪಡಬಾರದು. ಇಲ್ಲಿ ಇಂತಹ ಕೆಲವು ಸನ್ನಿವೇಶಗಳಿವೆ:

ಥರ್ಡ್ ಪಾರ್ಟಿ ಪಾಲಿಸಿ ಹೋಲ್ಡರ್ ಗೆ ಆದ ಸ್ವಂತ ಹಾನಿ

ನೀವು ನಿಮ್ಮ ಟ್ರ್ಯಾಕ್ಟರ್ ಗಾಗಿ ಕೇವಲ ಥರ್ಡ್ ಪಾರ್ಟಿ ಕಮರ್ಷಿಯಲ್  ಇನ್ಶೂರೆನ್ಸ್ ಮಾಡಿಸುವುದಾದರೆ, ಸ್ವಂತ ಹಾನಿ ಮತ್ತು ನಷ್ಟಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಲಾಯಿಸುವುದು ಮತ್ತು ಮಾನ್ಯ ಪ್ರವಾನಿಗೆ ಇಲ್ಲದೆ ವಾಹನ ಚಲಾವಣೆ

ಕ್ಲೈಮ್ ನ ಸಮಯದಲ್ಲಿ, ಚಾಲಕ ಮಾಲಕ, ಮಾನ್ಯ ಪರವಾನಿಗೆ ಇಲ್ಲದೆ ಟ್ರ್ಯಾಕ್ಟರ್ ಚಲಾಯಿಸುವುದು ಅಥವಾ ಕುಡಿದು ಚಲಾಯಿಸುವುದು ಕಂಡು ಬಂದರೆ ಕ್ಲೈಮ್ ಒಪ್ಪಿಗೆ ಆಗುವುದಿಲ್ಲ.

ಸಹಾಯಕ ನಿರ್ಲಕ್ಷ್ಯ

ನಿಮ್ಮ ಸಹಾಯಕ ನಿರ್ಲ್ಯಕ್ಷದಿಂದಾಗಿ ಟ್ರ್ಯಾಕ್ಟರ್ ಗೆ ಯಾವುದೇ ಹಾನಿ ಅಥವಾ ನಷ್ಟ ಸಂಭವಿಸಿದರೆ ಅದನ್ನು ಕವರ್ ಮಾಡಲಾಗುವುದಿಲ್ಲ. ಉದಾಹರಣೆಗೆ,  ನಗರದಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಟ್ರ್ಯಾಕ್ಟರ್ ಅನ್ನು ಹೊರಗೆ ತೆಗೆದುಕೊಂಡು ಹೋಗುವುದು.

ತತ್ಪರಿಣಾಮದ ಹಾನಿ

ಅಪಘಾತ, ನೈಸರ್ಗಿಕ ವಿಕೋಪ, ಬೆಂಕಿಯ ನೇರ ಪರಿಣಾಮವಲ್ಲದ ಹಾನಿ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್ ನ ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನ ಮುಖ್ಯ ವೈಶಿಷ್ಠ್ಯ ಗಳು

ಮುಖ್ಯ ವೈಶಿಷ್ಠ್ಯ ಗಳು ಡಿಜಿಟ್ ಲಾಭಗಳು
ಕ್ಲೈಮ್ ಕ್ರಿಯೆ ಕಾಗದ ರಹಿತ ಕ್ಲೈಮ್
ಗ್ರಾಹಕ ಬೆಂಬಲ 24*7 ಬೆಂಬಲ
ಹೆಚ್ಚುವರಿ ಕವರೇಜ್ ಪಿಎ ಕವರ್, ಕಾನೂನು ಬಾಧ್ಯತಾ ಕವರ್, ವಿಶೇಷ ಅಳವಡಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ
ಥರ್ಡ್ ಪಾರ್ಟಿಗೆ ಹಾನಿ ಪರ್ಸನಲ್ ಹಾನಿಗೆ ಅನಿಯಮಿತ ಬಾಧ್ಯತೆ, , ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ

ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ನಿಮ್ಮ ಟ್ರ್ಯಾಕ್ಟರ್ ಮಾದರಿಯನ್ನು ಇನ್ಶೂರ್ ಮಾಡಬೇಕಾದ ಟ್ರ್ಯಾಕ್ಟರ್ ಗಳ ಸಂಖ್ಯೆಯನ್ನು ಆಧರಿಸಿ ನಿಮಗೆ ಆಯ್ಕೆ ಮಾಡಲು ಎರಡು ಪ್ರಾಥಮಿಕ ಯೋಜನೆಗಳನ್ನು ನಾವು ನೀಡುತ್ತಿದ್ದೇವೆ:

ಬಾಧ್ಯತೆ ಮಾತ್ರ ಸ್ಟಾಂಡರ್ಡ್ ಪ್ಯಾಕೇಜ್

ನಿಮ್ಮ ಟ್ರ್ಯಾಕ್ಟರ್ ನಿಂದ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಪ್ರಾಪರ್ಟಿ ಗೆ ಆದ ನಷ್ಟ.

×

ನಿಮ್ಮ ಟ್ರ್ಯಾಕ್ಟರ್ ನಿಂದ ಯಾವುದೇ ಥರ್ಡ್ ಪಾರ್ಟಿ ವಾಹನಕ್ಕೆ ಆದ ನಷ್ಟ

×

ನೈಸರ್ಗಿಕ ವಿಕೋಪ,ಅಪಘಾತ,ಕಳವು ಅಥವಾ ಬೆಂಕಿ ಇಂದಾದ ಹಾನಿ ಮತ್ತು ನಷ್ಟ

×

ಟ್ರ್ಯಾಕ್ಟರ್ ಚಾಲಕ - ಮಾಲಕನ ಜಖಂ/ಸಾವು

If the owner-driver doesn’t already have a Personal Accident Cover from before

×
Get Quote Get Quote

ಕ್ಲೈಮ್ ಪಡೆಯುವುದು ಹೇಗೆ?

1800-258-5956 ಗೆ ಕಾಲ್ ಮಾಡಿ ಅಥವಾ hello@godigit.com ಗೆ ಇ ಮೇಲ್ ಮಾಡಿ

ನಮ್ಮ ಕಾರ್ಯವನ್ನು ಸುಲಭವಾಗಿಸಲು ನಿಮ್ಮ ವಿವರಗಳಾದ ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ, ಇನ್ಶೂರ್ಡ್/ ಕಾಲರ್ ನ ಸಂಪರ್ಕ ಸಂಖ್ಯೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ಸ್ ಎಷ್ಟು ಬೇಗ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೊದಲು ಬರಬಹುದು. ಒಳ್ಳೆಯದು! ಡಿಜಿಟ್ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಭಾರತದಲ್ಲಿ ಆನ್ಲೈನ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಟ್ರ್ಯಾಕ್ಟರ್ ಇನ್ಶೂರೆನ್ಸ್ ಚಾಲಕನಿಗೂ ಕವರ್ ನೀಡುತ್ತದೆಯೇ?

ಹೌದು, ಟ್ರ್ಯಾಕ್ಟರ್ ಇನ್ಶೂರೆನ್ಸ್ ಟ್ರ್ಯಾಕ್ಟರ್ ಚಾಲಕ - ಮಾಲಕ, ಇಬ್ಬರಿಗೂ ಕವರ್ ನೀಡುತ್ತದೆ.

ನಾನು ನನ್ನ ಎಲ್ಲಾ ಟ್ಯಾಕ್ಟರ್ ಗಳನ್ನು ಒಂದೇ ಪಾಲಿಸಿ ಅಡಿಯಲ್ಲಿ ಇನ್ಶೂರ್ ಮಾಡಬಹುದೇ?

ಇಲ್ಲ, ಪ್ರತೀ ಟ್ರ್ಯಾಕ್ಟರಿಗೂ ಪ್ರತ್ಯೇಕವಾದ ಪಾಲಿಸಿ ಇರಬೇಕು.  ಆದರೆ, ನಿಮ್ಮ ಎಲ್ಲಾ ಟ್ರ್ಯಾಕ್ಟರ್ ಗಳಿಗೂ ಕೈಗೆಟಕುವ ಪ್ರೀಮಿಯಮ್ ದರದಲ್ಲಿ ಕಸ್ಟಮೈಸ್ಡ್ ಕೋಟ್ ಪಡೆಯಲು ನಮ್ಮನ್ನು ಸಂಪರ್ಕಿಸಿ.

ಟ್ರ್ಯಾಕ್ಟರ್ ಗಳನ್ನು ಇನ್ಶೂರ್ ಮಾಡುವುದು ಕಡ್ಡಾಯವೇ?

ಹೌದು, ಮೋಟರ್ ವೆಹಿಕಲ್ ಆಕ್ಟ್ ಪ್ರಕಾರ ನಿಮ್ಮ ಟ್ರ್ಯಾಕ್ಟರ್ ಕಾನೂನಾತ್ಮಕವಾಗಿ ಭಾರತದ ರಸ್ತೆಗಳಲ್ಲಿ ಓಡಾಡಲು ಅವುಗಳಿಗೆ ಕನಿಷ್ಠ ಪಕ್ಷ ಒಂದು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಇರುವುದು ಕಡ್ಡಾಯವಾಗಿದೆ ಹಾಗೂ ಟ್ರ್ಯಾಕ್ಟರ್ ಗಳಿಗೆ ಸಂಬಂಧಪಟ್ಟಂತೆ ಅಪಾಯ ಹೆಚ್ಚಿರುವುದರಿಂದ ಅವುಗಳಿಗೆ ಹೆಚ್ಚಿನ ರಕ್ಷಣೆ ನೀಡುವುದು ಸೂಕ್ತ.

ಥರ್ಡ್ ಪಾರ್ಟಿ ಟ್ರ್ಯಾಕ್ಟರ್ ಇನ್ಶೂರೆನ್ಸ್ ಮತ್ತು ಕಾಂಪ್ರೆಹೆನ್ಸಿವ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ಪಾಲಿಸಿ ಯಲ್ಲಿ ವ್ಯತ್ಯಾಸವೇನು?

ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಿಮಗೆ ಕೇವಲ ಥರ್ಡ್ ಪಾರ್ಟಿಗೆ ಆದ ಹಾನಿ ಮತ್ತು ನಷ್ಟ(ಪ್ರಾಪರ್ಟಿ, ವಾಹನ ಅಥವಾ ವ್ಯಕ್ತಿ) ಆದರೆ ಕಾಂಪ್ರೆಹೆನ್ಸಿವ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ಪಾಲಿಸಿ ಥರ್ಡ್ ಪಾರ್ಟಿಗಾದ ಹಾನಿ ಜೊತೆ ನಿಮ್ಮ ವಾಹನಕ್ಕಾದ ಹಾನಿಗೂ ಕವರ್ ನೀಡುತ್ತದೆ. ಅಂದರೆ ನೈಸರ್ಗಿಕ ವಿಪತ್ತು, ಅಪಘಾತ, ಬೆಂಕಿ ಹಾಗೂ ಕಳವು ಇಂತಹದ್ದಕ್ಕಾಗಿ.

ಒಂದು ಟ್ರ್ಯಾಕ್ಟರ್ ಇನ್ಶೂರೆನ್ಸ್ ನ ಬೆಲೆ ಎಷ್ಟು?

ಇದು ಪ್ರಾಥಮಿಕವಾಗಿ ನಿಮ್ಮ ಟ್ರ್ಯಾಕ್ಟರ್ ನ ಮಾದರಿ ನೀವು ಅದನ್ನು ಚಲಾಯಿಸುತ್ತಿರುವ ನಗರ ಇದರ ಮೇಲೆ ಆಧರಿಸಿದೆ. ನಿಮ್ಮ ಟ್ರ್ಯಾಕ್ಟರ್ ಇನ್ಶೂರೆನ್ಸ್ ಪ್ರೀಮಿಯಮ್ ಅನ್ನು ನೀವು ಇಲ್ಲಿ ಸುಲಭವಾಗಿ ಕ್ಯಾಲ್ಕುಲೇಟ್ ಮಾಡಬಹುದು.