ಎಕ್ಸ್ಕವೇಟರ್ ಇನ್ಶೂರೆನ್ಸ್ ಎಂದರೇನು?
ಎಕ್ಸ್ಕವೇಟರ್ ಇನ್ಶೂರೆನ್ಸ್ ಒಂದು ಪ್ರಮುಖ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಆಗಿದ್ದು, ಎಕ್ಸ್ಕವೇಟರ್ಗಳಂತಹ ಹೆವಿ ಮಷೀನರಿಗಳನ್ನು ಹಾನಿ ಮತ್ತು ಅಪಘಾತಗಳು, ಕಳ್ಳತನಗಳು ಅಥವಾ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟಗಳಿಂದ ರಕ್ಷಿಸುತ್ತದೆ.
ಭಾರತದಲ್ಲಿ, ಕನ್ಸ್ಟ್ರಕ್ಷನ್, ಗಣಿಗಾರಿಕೆ ಮತ್ತು ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಹೆವಿ ಮಷೀನರಿಗಳು ಮತ್ತು ಕನ್ಸ್ಟ್ರಕ್ಷನ್ ಉಪಕರಣಗಳು ಅತ್ಯಗತ್ಯವಾಗಿವೆ. ಎಕ್ಸ್ಕವೇಟರ್ ಇನ್ಶೂರೆನ್ಸ್, ಉಪಕರಣಗಳನ್ನು ಭದ್ರಪಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಇನ್ಶೂರೆನ್ಸ್ ಪಾಲಿಸಿಯು, ಎಕ್ಸ್ಕವೇಟರ್ ಮಾಲೀಕರು ರಿಪ್ಲೇಸ್ಮೆಂಟ್ಗಳ ರಿಪೇರಿಗೆ ತಗಲುವ ಹೆಚ್ಚಿನ ವೆಚ್ಚಗಳ ಬಗ್ಗೆ ಚಿಂತಿಸದೆ ತಮ್ಮ ಕೆಲಸವನ್ನು ಮುಂದುವರೆಸಬಹುದು ಎಂಬುದನ್ನು ಖಚಿತಪಡಿಸುತ್ತದೆ.
ಹೀಗಾಗಿ, ನೀವು ಕೈಗೆಟುಕುವ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಎಕ್ಸ್ಕವೇಟರ್ ಇನ್ಶೂರೆನ್ಸ್ನೊಂದಿಗೆ ಮಷೀನರಿಗಳನ್ನು ರಕ್ಷಿಸಬಹುದು. ಅಲ್ಲದೆ, ಹೆಚ್ಚಿನ ಕವರೇಜ್ ಮತ್ತು ಇತರ ಪ್ರಯೋಜನಗಳನ್ನು ಪಡೆಯಲು, ಲಭ್ಯವಿರುವ ವಿವಿಧ ಆ್ಯಡ್-ಆನ್ಗಳಿಂದ ನೀವು ಆಯ್ಕೆ ಮಾಡಬಹುದು
ಗಮನಿಸಿ: ಕಮರ್ಷಿಯಲ್ ವೆಹಿಕಲ್ಗಳಲ್ಲಿನ ಎಕ್ಸ್ಕವೇಟರ್ ಇನ್ಶೂರೆನ್ಸ್ ಅನ್ನು, 'ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ - ಮಿಸ್ಲೇನಿಯಸ್ ಮತ್ತು ವಿಶೇಷ ರೀತಿಯ ವೆಹಿಕಲ್ಗಳು' ಎಂದು ಫೈಲ್ ಮಾಡಲಾಗುತ್ತದೆ.
UIN ಸಂಖ್ಯೆ IRDAN158RP0003V01201819.