ಗೂಡ್ಸ್ ಕ್ಯಾರಿಂಗ್ ವೆಹಿಕಲ್ ಇನ್ಶೂರೆನ್ಸ್

ಸರಕು ಸಾಗಿಸುವ ವಾಹನಗಳಿಗಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

Third-party premium has changed from 1st June. Renew now

ಹೆಸರೇ ಸೂಚಿಸುವಂತೆ, ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್ ಇನ್ಶೂರೆನ್ಸ್ ಎನ್ನುವುದು ಒಂದು ರೀತಿಯ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಆಗಿದೆ. ಈ ಇನ್ಶೂರೆನ್ಸ್ ಅನ್ನು ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಉದ್ದೇಶಕ್ಕಾಗಿ ಬಳಸುವ ಕಮರ್ಷಿಯಲ್ ವೆಹಿಕಲ್'ಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಇತರ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು ಹೆಚ್ಚಿನ ಅಪಾಯಗಳಿಗೆ ಗುರಿಯಾಗುತ್ತವೆ. ಆದ್ದರಿಂದ ಅಪಘಾತಗಳು, ಘರ್ಷಣೆಗಳು, ಕಳ್ಳತನಗಳು, ನೈಸರ್ಗಿಕ ವಿಕೋಪಗಳು ಮತ್ತು ಬೆಂಕಿಯಂತಹ ಅನಿಶ್ಚಿತ ಸಂದರ್ಭಗಳಿಂದ ವಾಹನಕ್ಕೆ ಉಂಟಾಗುವ ನಷ್ಟ ಮತ್ತು ಹಾನಿಗಳನ್ನು 'ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್ ಇನ್ಶೂರೆನ್ಸ್' ಕವರ್ ಮಾಡುತ್ತದೆ.

ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್'ನ ವಿಧಗಳು

ಭಾರತದಲ್ಲಿ, ವಿವಿಧ ವ್ಯವಹಾರಗಳ ಸ್ವರೂಪವನ್ನು ಆಧರಿಸಿ, ವಿವಿಧ ರೀತಿಯ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗಳು ಇವೆ. ಗೂಡ್ಸ್ ಕ್ಯಾರಿಯಿಂಗ್  ವೆಹಿಕಲ್'ನ ಕೆಲವು ಸಾಮಾನ್ಯ ಉದಾಹರಣೆಗಳು ಹೀಗಿವೆ:

  • ಟ್ರಕ್‌ಗಳು- ಟ್ರಕ್‌ಗಳು ವಿಭಿನ್ನ ಆಕಾರ ಮತ್ತು ಗಾತ್ರಗಳಲ್ಲಿ ಇರುತ್ತವೆ. ದೈನಂದಿನ ಅಗತ್ಯ ವಸ್ತುಗಳನ್ನು ತಲುಪಿಸಲು ಬಳಸುವ ಸಣ್ಣ ಟ್ರಕ್‌ಗಳಿಂದ ಹಿಡಿದು, ಪೀಠೋಪಕರಣಗಳು ಮತ್ತು ಉಪಕರಣಗಳಂತಹ ಸರಕುಗಳನ್ನು ಸಾಗಿಸಲು ಬಳಸುವ ದೊಡ್ಡ ಟ್ರಕ್‌ಗಳು ಲಭ್ಯ ಇವೆ. ಎಲ್ಲ ವಿಧದ ಗೂಡ್ಸ್ ಕ್ಯಾರಿಯಿಂಗ್ ಟ್ರಕ್‌ಗಳು, ಕಮರ್ಷಿಯಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ.
  • ಟೆಂಪೋಗಳು- ತುಲನಾತ್ಮಕವಾಗಿ ನೋಡಿದರೆ ಟೆಂಪೋಗಳು ಟ್ರಕ್‌ಗಳಿಗಿಂತ ಚಿಕ್ಕವಾಗಿವೆ. ಮತ್ತು ಟೆಂಪೋಗಳನ್ನು ನಗರದೊಳಗೆ ಸರಕುಗಳ ಸಾಗಣೆ ಮತ್ತು ವಿತರಣೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಟೆಂಪೋಗಳನ್ನು ಸಹ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. 
  • ತ್ರಿ-ವೀಲ್ ವೆಹಿಕಲ್ಸ್ - ಸಾಮಾನ್ಯವಾಗಿ ಕಾರ್ಗೋ ಆಟೋಗಳು ಅಥವಾ ತ್ರಿ-ವೀಲ್ ವೆಹಿಕಲ್'ಗಳನ್ನು ನಗರದೊಳಗೆ ಸಣ್ಣ ಸರಕುಗಳನ್ನು ತಲುಪಿಸಲು  ಬಳಸುತ್ತೇವೆ. ಅವು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ, ಟ್ರಕ್‌ಗಳು ಮತ್ತು ಟ್ರೇಲರ್‌ಗಳಿಗೆ ಹೋಲಿಸಿದರೆ ಅವುಗಳು ಕಡಿಮೆ ಅಪಾಯಗಳಿಗೆ ಗುರಿಯಾಗುತ್ತವೆ. ಆದಾಗ್ಯೂ, ಇವುಗಳು ಗರಿಷ್ಠ ರಕ್ಷಣೆ ಮತ್ತು ಕನಿಷ್ಠ ವ್ಯಾಪಾರ ನಷ್ಟಗಳ ವಿರುದ್ಧ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತವೆ.
  • ಟ್ರೇಲರ್‌ಗಳು- ಟ್ರೇಲರ್‌ಗಳು ದೊಡ್ಡ ಸರಕುಗಳನ್ನು ಸಾಗಿಸುವ ವಾಹನಗಳಾಗಿವೆ; ಭಾರೀ ಸರಕುಗಳ ಸಾಗಣೆಗೆ ಹೆಚ್ಚಾಗಿ ದೇಶಾದ್ಯಂತ ಬಳಸಲಾಗುತ್ತದೆ. ಅವುಗಳಿಗೆ ಸಂಬಂಧಿಸಿದ ಅಪಾಯವನ್ನು ಗಮನಿಸಿದರೆ, ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ ಪಾಲಿಸಿಯ ಅಡಿಯಲ್ಲಿ ಟ್ರೇಲರ್‌ಗಳನ್ನು ಕವರ್ ಮಾಡುವುದು ಬಹುತೇಕ ಖಡ್ಡಾಯವಾಗಿದೆ.
  • ಟಿಪ್ಪರ್‌ಗಳು- ಟಿಪ್ಪರ್‌ಗಳು ಭಾರೀ ವಾಹನ ಮತ್ತು ಸರಕು ಸಾಗಿಸುವ ವಾಹನಗಳ ಒಂದು ವಿಧವಾಗಿದೆ; ಇವುಗಳನ್ನು ಸಾಮಾನ್ಯವಾಗಿ ಕನ್ಸ್ಟ್ರಕ್ಷನ್ ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ. ಸಂಭವಿಸಬಹುದಾದ ಅಪಾಯಗಳಿಂದ ಇವನ್ನು ರಕ್ಷಿಸಲು, ಡಿಜಿಟ್‌ ನ ಕಮರ್ಷಿಯಲ್ ಇನ್ಶೂರೆನ್ಸ್  ಪಾಲಿಸಿಯ ಅಡಿಯಲ್ಲಿ ಇದನ್ನು ಕವರ್ ಮಾಡಬಹುದು.

ಡಿಜಿಟ್ ಮೂಲಕ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ ಅನ್ನು ಏಕೆ ಆರಿಸಬೇಕು?

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ ಏನನ್ನು ಒಳಗೊಂಡಿದೆ?

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ  ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ನಿಮ್ಮ ಕಮರ್ಷಿಯಲ್ ವೆಹಿಕಲ್'ಗಾಗಿ ನೀವು ಥರ್ಡ್ ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ಅನ್ನು ಆಯ್ದುಕೊಂಡರೆ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಪಾಲಿಸಿಯಲ್ಲಿ ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ಇನ್ಶೂರೆನ್ಸ್ ಮಾಡಲಾದ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ನ ಮಾಲೀಕರು-ಚಾಲಕರು, ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕವರ್ ಆಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯಗಳು

ಕೊಡುಗೆಯ ನಿರ್ಲಕ್ಷ್ಯದಿಂದಾಗಿ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ. (ಉದಾಹರಣೆಗೆ ಪ್ರವಾಹ ಇರುವಾಗ ಚಾಲನೆ ಮಾಡುವುದು)

ಪರಿಣಾಮದ ಹಾನಿಗಳು

ಅಪಘಾತ/ನೈಸರ್ಗಿಕ ವಿಕೋಪ ಅಥವಾ ಬೆಂಕಿ ಇತ್ಯಾದಿಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ.

ಡಿಜಿಟ್ ನ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು ಡಿಜಿಟ್ ಪ್ರಯೋಜನಗಳು
ಕ್ಲೇಮ್ ಪ್ರಕ್ರಿಯೆ ಕಾಗದರಹಿತ ಕ್ಲೇಮ್ಸ್
ಗ್ರಾಹಕರ ಬೆಂಬಲ 24x7 ಬೆಂಬಲ
ಹೆಚ್ಚುವರಿ ಕವರೇಜ್ ಪಿಎ (PA) ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು (Special Exclusions) ಖಡ್ಡಾಯ ಕಡಿತಗಳು
ಥರ್ಡ್ ಪಾರ್ಟಿಗೆ ಆಗುವ ಹಾನಿಗಳು ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ (Unlimited Liability), ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯ ವಿಧಗಳು

ನಿಮ್ಮ ಹೆವಿ-ಡ್ಯೂಟಿ ವಾಹನದ ಪ್ರಕಾರ ಮತ್ತು ನೀವು ಇನ್ಶೂರೆನ್ಸ್ ಮಾಡಲು ಬಯಸುವ ವಾಹನಗಳ ಸಂಖ್ಯೆಯನ್ನು ಆಧರಿಸಿ, ನಾವು ನಿಮಗೆ ಎರಡು ಪ್ರಾಥಮಿಕ ಯೋಜನೆಗಳನ್ನು ನೀಡುತ್ತೇವೆ.

ಹೊಣೆಗಾರಿಕೆ ಮಾತ್ರ ಪ್ರಮಾಣಿತ ಪ್ಯಾಕೇಜ್

ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ, ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ನಿಂದ ಉಂಟಾಗುವ ಹಾನಿಗಳು.

×

ಇನ್ಶೂರೆನ್ಸ್ ಮಾಡಲಾದ ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ನಿಂದ, ವೆಹಿಕಲ್ ಟೋಯಿಂಗ್ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾಗುವ ಹಾನಿಗಳು.

×

ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ನಷ್ಟ ಅಥವಾ ಹಾನಿಗಳು.ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಉಂಟಾಗುವ ನಷ್ಟ ಅಥವಾ ಹಾನಿಗಳು.

×

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ನ ಮಾಲೀಕ-ಚಾಲಕನ ಗಾಯ/ಮರಣ

If the owner-driver doesn’t already have a Personal Accident Cover from before

×
Get Quote Get Quote

ಕ್ಲೈಮ್ ಮಾಡುವುದು ಹೇಗೆ?

1800-258-5956 ನಲ್ಲಿ ನಮಗೆ ಕಾಲ್ ಮಾಡಿ ಅಥವಾ hello@godigit.com ಗೆ ಇ-ಮೇಲ್ ಕಳಿಸಿ 

ನಮ್ಮ ಪ್ರಕ್ರಿಯೆಯನ್ನು ಸರಳವಾಗಿಸಲು ನಿಮ್ಮ ಪಾಲಿಸಿ ಸಂಖ್ಯೆ,ಅಪಘಾತದ ಸ್ಥಳ, ಅಪಘಾತ ನಡೆದ ದಿನಾಂಕ ಹಾಗೂ ಸಮಯ ಹಾಗೂ ಇನ್ಶೂರ್ಡ್ ವ್ಯಕ್ತಿಯ/ಕರೆಮಾಡುವವರ ಸಂಪರ್ಕ ಸಂಖ್ಯೆಯಂತಹ ವಿವರಗಳನ್ನು ಸಿದ್ಧವಾಗಿಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಎಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಲಾಗುವುದು? ನೀವು ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಇದು ನಿಮ್ಮ ಮನಸ್ಸಿನಲ್ಲಿ ಮೂಡಬೇಕಾದ ಮೊದಲನೇ ಪ್ರಶ್ನೆ ಆಗಿರಬೇಕು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿ

ನಾನು ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

  • ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಇನ್ಶೂರೆನ್ಸ್  ಪಡೆಯುವುದರಿಂದ ಅದು ನಿಮ್ಮ ವ್ಯಾಪಾರದ ಅಪಾಯವನ್ನು ಕಡಿಮೆಗೊಳಿಸುತ್ತದೆ. ಹಾಗೂ ಈ ಪಾಲಿಸಿಯು ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಘರ್ಷಣೆಗಳು, ಬೆಂಕಿ ಮತ್ತು ಕಳ್ಳತನಗಳಂತಹ ಅನಿರೀಕ್ಷಿತ ಸಂದರ್ಭಗಳಿಂದ ಉಂಟಾಗಬಹುದಾದ ನಷ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗಳು ಸೇರಿದಂತೆ ಎಲ್ಲ ವಾಹನಗಳು ಕನಿಷ್ಠ 'ಥರ್ಡ್ ಪಾರ್ಟಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್' ಅನ್ನು ಹೊಂದುವುದು ಖಡ್ಡಾಯವಾಗಿದೆ. ಇದು ಸಂಭವಿಸಬಹುದಾದ ಯಾವುದೇ ಥರ್ಡ್ ಪಾರ್ಟಿ ಹಾನಿ ಮತ್ತು ನಷ್ಟಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ.
  • ಭಾರಿ ವಾಹನಗಳು ಅಂದರೆ ಹೆವಿ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗಳು ಬಹಳಷ್ಟು ಅಪಾಯಗಳಿಗೆ ಗುರಿಯಾಗುತ್ತವೆ; ಇದಕ್ಕೆ ವಾಹನದ ಗಾತ್ರ ಮತ್ತು ಕಮರ್ಷಿಯಲ್ ಉದ್ದೇಶಗಳು ಕಾರಣವಾಗುತ್ತವೆ. ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಇದು ಬೆಂಕಿ, ಅಪಘಾತ, ನೈಸರ್ಗಿಕ ವಿಪತ್ತು ಮತ್ತು ಕಳ್ಳತನಗಳಂತಹ ಸಂಭಾವ್ಯ ಅಪಾಯಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಭಾರತದಲ್ಲಿ, ಆನ್‌ಲೈನ್‌ನಲ್ಲಿ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್, ಚಾಲಕನಿಗೂ ಸಹ ರಕ್ಷಣೆ ನೀಡುತ್ತದೆಯೇ?

ಹೌದು, ಈ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ನ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಮಾಲೀಕರು-ಚಾಲಕರಿಗೂ ಸಹ ರಕ್ಷಣೆ ನೀಡುತ್ತದೆ.

ಹೆವಿ ಡ್ಯೂಟಿ ವೆಹಿಕಲ್'ಗೆ ಇನ್ಶೂರೆನ್ಸ್ ಪಡೆಯುವುದು ಖಡ್ಡಾಯವೇ?

ಹೌದು, ಮೋಟಾರ್ ಇನ್ಶೂರೆನ್ಸ್ ಆಕ್ಟ್ ಪ್ರಕಾರ, ನಿಮ್ಮ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಓಡಾಡಲು, ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಖಡ್ಡಾಯವಾಗಿದೆ

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸಿನ ಅಡಿಯಲ್ಲಿ, ಸರಕುಗಳು (goods) ಸಹ ಕವರ್ ಆಗುತ್ತವೆಯೇ?

ಇಲ್ಲ, ಸರಕುಗಳು ಕವರ್ ಆಗುವುದಿಲ್ಲ. ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್, ಕೇವಲ ವಾಹನದ ಹಾನಿ/ನಷ್ಟಗಳನ್ನು ಹಾಗೂ ಮಾಲೀಕ-ಚಾಲಕನಿಗೆ ಆಗುವ ಯಾವುದೇ ದೈಹಿಕ ಗಾಯಗಳನ್ನು ಮಾತ್ರ ಕವರ್ ಮಾಡುತ್ತವೆ.

ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ಗೆ ಕಮರ್ಷಿಯಲ್ ಇನ್ಶೂರೆನ್ಸಿಗೆ ಎಷ್ಟು ವೆಚ್ಚವಾಗುತ್ತದೆ?

ಇದು ನೀವು ಇನ್ಶೂರೆನ್ಸ್ ಮಾಡಲು ಬಯಸುವ ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್'ನ ವಿಧ ಮತ್ತು ಅದನ್ನು ನಿರ್ವಹಿಸುವ ಪ್ರಾಥಮಿಕ ನಗರವನ್ನು ಅವಲಂಬಿಸಿರುತ್ತದೆ. ನಿಮ್ಮ ಗೂಡ್ಸ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೀವು ಇಲ್ಲಿ ಪರಿಶೀಲಿಸಬಹುದು.