ಷೆಂಗೆನ್ ವೀಸಾ ಇಂಟರ್ನ್ಯಾಷನಲ್ ಟ್ರಾವೆಲ್  ಇನ್ಶೂರೆನ್ಸ್ ಖರೀದಿಸಿ
Instant Policy, No Medical Check-ups

ಭಾರತದ ಪಾಸ್‌ಪೋರ್ಟ್‌ ಹೋಲ್ಡರ್‌ಗಳಿಗೆ ಷೆಂಗೆನ್ ವೀಸಾ ಪಡೆಯುವುದು ಹೇಗೆ?

ಷೆಂಗೆನ್ ವೀಸಾ ಎಂದರೇನು?

ಷೆಂಗೆನ್ ಎಂದರೆ ಸಾಮಾನ್ಯ ವೀಸಾ ಪಾಲಿಸಿ ಅನುಸರಿಸುವ 27 ದೇಶಗಳಿಂದ ರಚಿಸಲಾಗಿರುವ ಯುರೋಪಿಯನ್ ಯೂನಿಯನ್‌ನ ಒಂದು ಝೋನ್ ಆಗಿದೆ. ಯೂನಿಯನ್‌ನಲ್ಲಿರುವ ಎಲ್ಲರೂ, ತಮ್ಮೊ‍ಳಗೆ ಪಾಸ್‌ಪೋರ್ಟ್‌ ಬಳಕೆಯನ್ನು ಅಧಿಕೃತವಾಗಿ ದುರ್ಬಲಗೊಳಿಸಿದ್ದಾರೆ. ಷೆಂಗೆನ್ ಅನ್ನು ಅದರ ಭಾಗವಾಗಿರುವ ದೇಶಗಳಿಗೆ ವಿಶ್ವದ ಅತಿ ದೊಡ್ಡ ವೀಸಾ ಫ್ರೀ ಝೋನ್ ಎಂದು ಕರೆಯಲ್ಪಡುತ್ತದೆ.

ಷೆಂಗೆನ್ ಪ್ರದೇಶವು ಪ್ರಪಂಚದ ಎಲ್ಲಾ ಕಡೆಗಳ ಸಂದರ್ಶಕರು ಮತ್ತು ಸ್ಥಳೀಯರು ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೂ ಕೆಲವು ಆಯ್ದ ದೇಶಗಳು ಯಾವುದೇ ಷೆಂಗೆನ್ ದೇಶಗಳಲ್ಲಿ ವೀಸಾ ಇಲ್ಲದೆ ಪ್ರಯಾಣಿಸಲು ಅನುಮತಿ ಹೊಂದಿರುತ್ತವೆ, ಭಾರತ ಈ ಕೆಟಗರಿ ಕೆಳಗೆ ಬರುವುದಿಲ್ಲ.

ಆನ್ ಅರೈವಲ್ ಷೆಂಗೆನ್ ವೀಸಾ ಲಭ್ಯವಿದೆಯೇ?

ಇಲ್ಲ, ಭಾರತೀಯ ನಾಗರಿಕರಿಗೆ ಆನ್ ಅರೈವಲ್ ಷೆಂಗೆನ್ ವೀಸಾ ಆಯ್ಕೆ ಲಭ್ಯ ಇರುವುದಿಲ್ಲ. 

ಭಾರತೀಯ ಪಾಸ್‌ಪೋರ್ಟ್‌ ಹೋಲ್ಡರ್‌ಗಳು ಕೆಲಸ, ಸಾರಿಗೆ, ಪ್ರಯಾಣ ಮತ್ತು ಇತರ ಕಾರಣಗಳಿಗೆ 27ರಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಷೆಂಗೆನ್ ದೇಶಗಳಲ್ಲಿ ಪ್ರಯಾಣ ಮಾಡಲು ಬಯಸಿದರೆ ಷೆಂಗೆನ್‌ ವೀಸಾಗೆ ಅಪ್ಲೈ ಮಾಡುವುದು ಅವಶ್ಯ. 

ಭಾರತೀಯರು 90 ದಿನಗಳವರೆಗಿನ ವಾಸ್ತವ್ಯಕ್ಕಾಗಿ ಷೆಂಗೆನ್ ವೀಸಾ ಪಡೆಯಬಹುದು, ಇದು 6 ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ. ಷೆಂಗೆನ್ ವೀಸಾಗಾಗಿ, ನೀವು ಒಂದು ಪ್ರವಾಸದಲ್ಲಿ ಒಂದಕ್ಕಿಂತ ಹೆಚ್ಚು ದೇಶಗಳಿಗೆ ಪ್ರಯಾಣಿಸಲು ಬಯಸಿದರೆ ನಿಮಗೆ ಮಲ್ಟಿಪಲ್ ಎಂಟ್ರಿ ವೀಸಾ ಅವಶ್ಯಕತೆ ಉಂಟಾಗಬಹುದು.

ಭಾರತೀಯ ನಾಗರಿಕರಿಗೆ ಷೆಂಗೆನ್ ವೀಸಾ ಶುಲ್ಕ

ಷೆಂಗೆನ್ ವೀಸಾ ಕೆಟಗರಿ ರೂಪಾಯಿಯಲ್ಲಿ ಶುಲ್ಕ ಯುರೋನಲ್ಲಿ ಶುಲ್ಕ
ವಯಸ್ಕರು ₹6,964 €80
6-12 ವರ್ಷಗಳ ಒಳಗಿನ ವಯಸ್ಸಿನ ಮಕ್ಕಳು ₹3,482 €40
6 ವರ್ಷಗಳಿಗಿಂತ ಕೆಳಗಿನ ವಯಸ್ಸಿನ ಮಕ್ಕಳು Free Free
*ಪ್ರಸ್ತುತ ಎಕ್ಸ್‌ಚೇಂಜ್‌ ರೇಟ್ ಪ್ರಕಾರ ಅಪ್ಲಿಕೇಬಲ್ ಆಗುವ ವೀಸಾ ಶುಲ್ಕ ₹ನಲ್ಲಿ (ಭಾರತೀಯ ರೂಪಾಯಿಗಳಲ್ಲಿ). ಇದು ಸೂಚನೆ ಇಲ್ಲದೆಯೇ ಬದಲಾಗಬಹುದು. (ಮೂಲ)

ಭಾರತದಿಂದ ಷೆಂಗೆನ್ ವೀಸಾಗೆ ಅವಶ್ಯ ಇರುವ ಡಾಕ್ಯುಮೆಂಟ್‌ಗಳು?

ನೀವು ಷೆಂಗೆನ್ ದೇಶಗಳಲ್ಲಿ ಒಂದೇ ಒಂದು ದೇಶಕ್ಕೆ ಭೇಟಿ ನೀಡಲು ಬಯಸುತ್ತಿದ್ದರೆ, ಆ ನಿರ್ದಿಷ್ಟ ದೇಶದ ವೀಸಾಗಾಗಿ ಮಾತ್ರ ಅಪ್ಲೈ ಮಾಡಬೇಕು. ಒಂದು ವೇಳೆ ಒಂದಕ್ಕಿಂತ ಜಾಸ್ತಿ ಷೆಂಗೆನ್ ದೇಶಗಳಿಗೆ ನೀವು ಭೇಟಿಯನ್ನು ನೀಡಲು ಬಯಸುವಿರಾದರೆ, ಆಗ ಷೆಂಗೆನ್ ವೀಸಾಗೆ ಅಪ್ಲೈ ಮಾಡಿ ಮತ್ತು ನಿಮ್ಮ ಪ್ರಾಥಮಿಕ ಡೆಸ್ಟಿನೇಷನ್ ಆಗಿರುವ ದೇಶವನ್ನು ತಿಳಿಸಿ.

ವೀಸಾಗಾಗಿ, ನಿಮಗೆ ಇಲ್ಲಿ ನಮೂದಿಸಿರುವ ಡಾಕ್ಯುಮೆಂಟ್‌ಗಳು ಅವಶ್ಯವಾಗಬಹುದು:

  • ವಸತಿ ವ್ಯವಸ್ಥೆಗಾಗಿ ಒಂದು ಅಥವಾ ಹೆಚ್ಚು ಸಪೋರ್ಟಿಂಗ್ ಡಾಕ್ಯುಮೆಂಟ್‌ಗಳೊಂದಿಗೆ ಹೋಸ್ಟ್‌ನ ಆಹ್ವಾನ.

  • ಕ್ರಮಬದ್ಧವಾಗಿ ತುಂಬಲಾದ ಮತ್ತು ಪ್ರಯಾಣಿಸುವ ಎಲ್ಲಾ ಅರ್ಜಿದಾರರಿಂದ ಸೈನ್ ಮಾಡಲಾಗಿರುವ ವೀಸಾ ಅಪ್ಲಿಕೇಷನ್. 

  • ಕಳೆದ 3 ತಿಂಗಳುಗಳ ಒಳಗಿ ತೆಗೆದಿರುವ 2 ಇತ್ತೀಚಿನ ಪಾಸ್‌ಪೋರ್ಟ್‌ ಸೈಜ್ ಫೋಟೋಗಳು. ಪ್ರತೀ ಫೋಟೋ ಮ್ಯಾಟ್ ಬ್ಯಾಕ್‌ಗ್ರೌಂಡ್‌ನಲ್ಲಿ 35X45 ಎಂಎಂ ಇರಬೇಕು. ಅದು 70-80% ನಿಮ್ಮ ಮುಖವನ್ನು ತೋರಿಸುವಂತಿರಬೇಕು.

  • ಪಾಸ್‌ಪೋರ್ಟ್‌ 10 ವರ್ಷಕ್ಕಿಂತ ಹಳೆಯದಾಗಿರಬಾರದು ಮತ್ತು ಕನಿಷ್ಠ 3 ತಿಂಗಳ ವ್ಯಾಲಿಡಿಟಿ ಹೊಂದಿರಬೇಕು. 

  • ಎಲ್ಲಿಂದ ಮತ್ತು ಎಲ್ಲಿಗೆ ಈ ಎರಡೂ ದೇಶಗಳ ವಿಮಾನ ಟಿಕೆಟ್‌ಗಳು.

  • ಪ್ರಯಾಣದ ಸಂಪೂರ್ಣ ವಿವರ. 

  • ನೀವು ಉಳಿಯಲು ಪ್ಲಾನ್ ಮಾಡುತ್ತಿರುವ ಹೋಟೆಲ್‌ಗಳು/ಏರ್‌ಬಿಎನ್‌ಬಿಗಳ ವಸತಿ ಪುರಾವೆ. 

  • ನಿಮಗೆ €30,000ವರೆಗಿನ ಮೆಡಿಕಲ್ ಕವರೇಜ್ ಒದಗಿಸುವ ಟ್ರಾವೆಲ್ ಅಥವಾ ಹೆಲ್ತ್ ಇನ್ಶೂರೆನ್ಸ್

  • ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ನಂತಹ ಆರ್ಥಿಕ ಪುರಾವೆ. ಒಂದು ವೇಳೆ ನಿಮಗೆ ಪ್ರಾಯೋಜಕರು ಇದ್ದರೆ, ಆರ್ಥಿಕ ಪ್ರಾಯೋಜಕತ್ವ ಪತ್ರ.

ಉದ್ಯೋಗಿ/ವಿದ್ಯಾರ್ಥಿ/ಸ್ವ-ಉದ್ಯೋಗಿ ಆಗಿದ್ದರೆ ಅದಕ್ಕೆ ಸ್ಟೇಟಸ್ ಪುರಾವೆ.

a. ಉದ್ಯೋಗಿಗಳಾಗಿದ್ದರೆ, ಎಂಪ್ಲಾಯ್‌ಮೆಂಟ್‌ ಕಾಂಟ್ರಾಕ್ಟ್, ರಜೆ ಅನುಮತಿ, ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ ಸಬ್‌ಮಿಟ್‌ ಮಾಡಬೇಕು.

b. ಸ್ವ-ಉದ್ಯೋಗಿಗಳಿಗೆ, ಬಿಸಿನೆಸ್ ಲೈಸೆನ್ಸ್ ಕಾಪಿ, ಕಂಪನಿಯ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್, ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌.

c. ವಿದ್ಯಾರ್ಥಿಗಳಿಗೆ, ಎನ್‌ರೋಲ್‌ಮೆಂಟ್‌ ಪುರಾವೆ ಮತ್ತು ಯುನಿವರ್ಸಿಟಿ ಅಥವಾ ಕಾಲೇಜಿನಿಂದ ಎನ್‌ಓಸಿ.

ಮೈನರ್‌ಗಳಿಗೆ, ಪೋಷಕರು ಸಹಿ ಮಾಡಿದ ಪತ್ರ ಸಾಕು.

ಭಾರತದಿಂದ ಷೆಂಗೆನ್ ವೀಸಾಗೆ ಅಪ್ಲೈ ಮಾಡುವುದು ಹೇಗೆ?

ಷೆಂಗೆನ್ ವೀಸಾಗೆ ಅಪ್ಲೈ ಮಾಡುವ ಪ್ರೊಸೆಸ್ ಸರಳವಾಗಿದೆ. ನೀವು ಈ ರೀತಿ ಮುಂದುವರಿಯಬಹುದು:

  • ಷೆಂಗೆನ್ ಎಂಬೆಸಿಯ ವೆಬ್‌ಸೈಟ್‌ನಲ್ಲಿ ವೀಸಾ ಅಪ್ಲಿಕೇಷನ್ ಫಾರ್ಮ್‌ಗೆ ಬ್ರೌಸ್‌ ಮಾಡಿ. ಫಾರ್ಮ್ ಅನ್ನು ಡೌನ್‌ಲೋಡ್‌ ಮಾಡಿ.

  • ಫಾರ್ಮ್‌ನಲ್ಲಿರುವ ಮಾಹಿತಿಗಳನ್ನೂ ಪೂರ್ತಿಗೊಳಿಸಿ ಮತ್ತು ಸಹಿ ಮಾಡಿದ ನಂತರ ಸಬ್‌ಮಿಟ್ ಮಾಡಿ.

  • ವೀಸಾಗೆ ಅವಶ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಿ. ವೀಸಾ ಸೆಂಟರ್‌ನಲ್ಲಿ ಅಪ್ಲಿಕೇಷನ್‌ ಫಾರ್ಮ್‌ ಜೊತೆಗೆ ಅವುಗಳನ್ನು ಸಬ್‌ಮಿಟ್‌ ಮಾಡಿ.

  • ಎ. ನೀವು ಒಂದು ದೇಶಕ್ಕೆ ಮಾತ್ರ ಭೇಟಿ ಕೊಡುತ್ತಿರುವಿರಾದರೆ, ಆ ದೇಶದ ಎಂಬೆಸಿ/ಕಾನ್ಸುಲೇಟ್‌ಗೆ ವೀಸಾ ಅಪ್ಲೈ ಮಾಡಬೇಕು.

  • ಬಿ. ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ದೇಶಗಳಿಗೆ ಭೇಟಿ ಕೊಡುತ್ತೀರಾದರೆ, ನೀವು ಹೆಚ್ಚು ದಿನ ವಾಸ ಮಾಡುವ ದೇಶದ ಕೇಂದ್ರದಲ್ಲಿ ವೀಸಾ ಸಬ್‌ಮಿಟ್‌ ಮಾಡಬೇಕು. ಮತ್ತು ಒಂದು ವೇಳೆ ಎರಡು ದೇಶಗಳಲ್ಲಿ ನೀವು ವಾಸ ಮಾಡುವ ದಿನಗಳ ಸಂಖ್ಯೆ ಒಂದೇ ಆಗಿದ್ದರೆ ನೀವು ಮೊದಲು ಪ್ರಯಾಣ ಮಾಡುವ ದೇಶದಲ್ಲಿ ವೀಸಾ ಅಪ್ಲಿಕೇಷನ್ ಸಬ್‌ಮಿಟ್‌ ಮಾಡಿ.

  • ವೀಸಾ ಪ್ರೊಸೆಸ್ ಮಾಡಲು ಅಪಾಯಿಂಟ್‌ಮೆಂಟ್‌ ಶೆಡ್ಯೂಲ್ ಮಾಡಿ.

  • ಸಂದರ್ಶನವನ್ನು ಎದುರಿಸಿ ಮತ್ತು ನಿಮ್ಮ ಪಾಸ್‌ಪೋರ್ಟ್‌ ಅನ್ನು ಕಲೆಕ್ಟ್‌ ಮಾಡಿ.

ಷೆಂಗೆನ್ ವೀಸಾ ಪ್ರೊಸೆಸಿಂಗ್ ಸಮಯ?

ಷೆಂಗೆನ್ ವೀಸಾ ಪ್ರೊಸೆಸ್ ಆಗಲು 15 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ, ನೀವು ವೀಸಾ ಅಪ್ಲೈ ಮಾಡುವ ಮೊದಲು ಈ ವಿಚಾರ ಗಮನದಲ್ಲಿಟ್ಟುಕೊಳ್ಳಿ.

ಷೆಂಗೆನ್ ವೀಸಾ ಪಡೆಯುವ ಪ್ರಯೋಜನಗಳು

ಷೆಂಗೆನ್ 27 ದೇಶಗಳ ಗ್ರೂಪ್ ಆಗಿದೆ ಮತ್ತು ಆ ವೀಸಾ ಹೊಂದುವುದರಿಂದ ಅದರದೇ ಆದ ಪ್ರಯೋಜನಗಳಿವೆ:

  • ಇದು ಪ್ರವಾಸಿಗರು ಒಂದೇ ವೀಸಾದಲ್ಲಿ ಹಲವು ದೇಶಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

  • ಇದು ಪ್ರತೀ ದೇಶಗಳಿಗೆ ಸೆಪರೇಟ್ ಆದ ವೀಸಾ ಹೊಂದುವ ಮತ್ತು ಅದಕ್ಕೆ ಪಾವತಿಸುವ ಸಮಯ ಮತ್ತು ಪ್ರಯತ್ನವನ್ನು ಉಳಿಸುತ್ತದೆ.

  • ನಿಮ್ಮ ಪಾಸ್‌ಪೋರ್ಟ್‌ಗೆ ನಿಮಗೆ ಒಂದು ಸ್ಟ್ಯಾಂಪ್‌ನ ಅವಶ್ಯ ಇರುತ್ತದೆ ಮತ್ತು ಅದರಿಂದ ಬ್ಯೂರೋಕ್ರಾಟಿಕ್‌ ಪ್ರೊಸೆಸ್‌ಗಳಲ್ಲಿ ಕಡಿಮೆ ಸಮಯ ವ್ಯಯಿಸಿದಂತಾಗುತ್ತದೆ.

ಷೆಂಗೆನ್ ವೀಸಾ ಅಪ್ಲಿಕೇಷನ್‌ಗೆ ಟ್ರಾವೆಲ್‌ ಇನ್ಶೂರೆನ್ಸ್‌ ಕಡ್ಡಾಯವೇ?

ಹೌದು, ಷೆಂಗೆನ್ ವೀಸಾ ಅಪ್ಲಿಕೇಷನ್‌ಗೆ ಟ್ರಾವೆಲ್ ಇನ್ಶೂರೆನ್ಸ್ ಬಹುತೇಕ ಕಡ್ಡಾಯವಾಗಿದೆ. ಅದು ಯಾಕೆಂದರೆ, ಷೆಂಗೆನ್ ವೀಸಾ ಅವಶ್ಯಕತೆಗಳ ಭಾಗವಾಗಿ, ಪ್ರತೀ ಪ್ರವಾಸಿಯು ಅವರನ್ನು €30,000ಗಳಷ್ಟು ಕವರ್‌ ಮಾಡಬಲ್ಲ ಹೆಲ್ತ್‌ ಇನ್ಶೂರೆನ್ಸ್ ಅಥವಾ ಮೆಡಿಕಲ್ ಪಾಲಿಸಿ ಹೊಂದಿರಲೇಬೇಕು.

ಈಗ, ಭಾರತದ ಹೊರತಾಗಿ ನಿಮ್ಮನ್ನು ಕವರ್ ಮಾಡಬಲ್ಲ ಹೆಲ್ತ್ ಪಾಲಿಸಿ ನೀವು ಹೊಂದಿಲ್ಲವಾದರೆ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡುವುದು ಒಳಿತು. ಯಾಕೆಂದರೆ ಇದು ಮೆಡಿಕಲ್ ತುರ್ತುಪರಿಸ್ಥಿತಿಗಳ ಜೊತೆಗೆ ಈ ಕೆಳಗೆ ನಮೂದಿಸಿರುವ ಇನ್ನಿತರ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿಯೂ ನಿಮ್ಮ ರಕ್ಷಣೆ ಮಾಡುತ್ತದೆ:

  • ನೀವು ಕಾಯಿಲೆಗೆ ಬಿದ್ದರೆ, ಅಪಘಾತಕ್ಕೆ ಒಳಗಾದರೆ ಅಥವಾ ಅಡ್ವೆಂಚರ್ ಸ್ಪೋರ್ಟ್ ಆ್ಯಕ್ಟಿವಿಟಿ ಬಳಿಕ ಮೆಡಿಕಲ್ ಅಸಿಸ್ಟೆನ್ಸ್ ಅವಶ್ಯಕತೆ ಬಿದ್ದರೆ, ಅದರ ಎಲ್ಲಾ ಅನಿರೀಕ್ಷಿತ ವೆಚ್ಚಗಳನ್ನು ಕವರ್ ಮಾಡಲು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ನಿಮಗಾಗಿ ಇರುತ್ತದೆ

  • ಒಂದು ವೇಳೆ ಪಾಸ್‌ಪೋರ್ಟ್‌ ನಷ್ಟವಾದರೆ, ಹೊಸತೊಂದನ್ನು ಪಡೆಯುವ ಪ್ರೊಸೆಸ್‌ನಲ್ಲಿ ನೆರವಾಗಲು ನಿಮ್ಮ ಟ್ರಾವೆಲ್‌ ಇನ್ಶೂರೆನ್ಸ್ ಪಾಲಿಸಿ ನಿಮಗಾಗಿ ಇರುತ್ತದೆ. 

  • ಚೆಕ್‌ಡ್-ಇನ್‌ ಲಗ್ಗೇಜ್‌ ವಿಳಂಬವಾದರೆ ಅಥವಾ ನಷ್ಟವಾದರೆ, ಅದರ ವಸ್ತುಗಳ ನಷ್ಟವನ್ನು ಮತ್ತು ಸಮಯದ ನಷ್ಟವನ್ನು ನಿಮ್ಮ ಟ್ರಾವೆಲ್ ಇನ್ಶೂರರ್ ಸರಿದೂಗಿಸುತ್ತಾರೆ. 

  • ಟ್ರಿಪ್ ಕ್ಯಾನ್ಸಲೇಷನ್ ಅಥವಾ ಅಬಾಂಡನ್‌ಮೆಂಟ್‌ನಂತಹ ದುರದೃಷ್ಟಕರ ಸಂದರ್ಭದಲ್ಲಿ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನೀವು ಹಣ ನಷ್ಟ ಮಾಡಿಕೊಳ್ಳದಂತೆ ಖಚಿತತೆ ಒದಗಿಸುತ್ತದೆ ಮತ್ತು ನಿಮ್ಮ ಎಲ್ಲಾ ನಾನ್‌-ರಿಫಂಡೆಬಲ್ ವೆಚ್ಚಗಳನ್ನು ಕವರ್ ಮಾಡುತ್ತದೆ. 

 

ಮೇಲೆ ನಮೂದಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಯೋಜನಗಳು ಟ್ರಾವೆಲ್‌ ಇನ್ಶೂರೆನ್ಸ್‌ನಲ್ಲಿ ಇದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಒಂದು ಸಣ್ಣ ಭೇಟಿಯ ಟ್ರಾವೆಲ್‌ ಇನ್ಶೂರೆನ್ಸ್‌ಗೆ ನಿಮಗೆ ರೂ.1000ಕ್ಕಿಂತಲೂ ಕಡಿಮೆ ವೆಚ್ಚ ಬೀಳುತ್ತದೆ, ಆದರೆ ನಿಮ್ಮ ಉಳಿತಾಯವನ್ನು ಗರಿಷ್ಠಗೊಳಿಸುವುದಷ್ಟೇ ಅಲ್ಲದೆ ಅದಕ್ಕಿಂತ ಹೆಚ್ಚಿನದನ್ನು ಕವರ್ ಮಾಡುತ್ತದೆ, ಯಾವುದೇ ಒತ್ತಡವಿಲ್ಲದೆ ಮತ್ತು ತೊಂದರೆ-ಮುಕ್ತ ರಜೆಯನ್ನು ಆನಂದಿಸಲೂ ಅನುವು ಮಾಡಿಕೊಡುತ್ತದೆ.

 

ಇನ್ನಷ್ಟು ಹೆಚ್ಚು ತಿಳಿದುಕೊಳ್ಳಿ:

ಸೂಚನೆ: ಪ್ರತೀ ದೇಶದಕ್ಕೂ ವೀಸಾ ಅವಶ್ಯಕತೆಗಳು ಬದಲಾಗುತ್ತಿರುತ್ತವೆ. ಯಾವುದೇ ಟ್ರಾವೆಲ್ ಬುಕಿಂಗ್‌ಗಳನ್ನು ಮಾಡುವ ಮೊದಲು ದಯವಿಟ್ಟು ಆಯಾ ದೇಶದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಾಸ್‌ಪೋರ್ಟ್‌ ಮತ್ತು ವೀಸಾ ಅವಶ್ಯಕತೆಗಳನ್ನು ಚೆಕ್ ಮಾಡಿ ಖಚಿತಪಡಿಸಿಕೊಳ್ಳಿ.

ಭಾರತದಿಂದ ಷೆಂಗೆನ್ ವೀಸಾ ಅಪ್ಲಿಕೇಷನ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಷೆಂಗೆನ್ ವೀಸಾಗೆ ಟ್ಯಾವೆಲ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವುದು ಅವಶ್ಯವೇ?

ಹೌದು, ಯಾರು ಷೆಂಗೆನ್ ವೀಸಾಗೆ ಅಪ್ಲೈ ಮಾಡುತ್ತಾರೆಯೋ ಅವರು ಕಡ್ಡಾಯವಾಗಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಹೊಂದಿರಲೇಬೇಕು.

ಭಾರತೀಯ ಪಾಸ್‌ಪೋರ್ಟ್‌ ಹೋಲ್ಡರ್‌ಗಳು ಈ ಝೋನ್‌ನಲ್ಲಿ ವೀಸಾ ಆನ್ ಅರೈವಲ್‌ ಪಡೆಯುವ ಅರ್ಹತೆ ಹೊಂದಿರುತ್ತಾರೆಯೇ?

ಷೆಂಗೆನ್ ಝೋನ್‌ನಲ್ಲಿ ಆನ್ ಅರೈವಲ್‌ ವೀಸಾ ಪಡೆಯುವ ನಿಬಂಧನೆಗಳನ್ನು ಹೊಂದಿದ್ದರೂ, ಭಾರತೀಯ ಪಾಸ್‌ಪೋರ್ಟ್‌ ಹೋಲ್ಡರ್‌ಗಳು ಮಾತ್ರ ಅದನ್ನು ಪಡೆಯಲಾಗುವುದಿಲ್ಲ.

ಝೋನ್‌ನ ಒಳಗೆ ಪ್ರಯಾಣ ಮಾಡುತ್ತಿರುವ ಇಂಡಿಯನ್‌ ಪಾಸ್‌ಪೋರ್ಟ್‌ ಹೋಲ್ಡರ್‌ಗಳು ಆನ್ ಅರೈವಲ್‌ ವೀಸಾ ಪಡೆಯಬಹುದೇ?

ಷೆಂಗೆನ್‌ ವೀಸಾದಲ್ಲಿ ಝೋನ್‌ ಒಳಗೆ ಪ್ರಯಾಣ ಮಾಡುತ್ತಿರುವಾಗ ಯಾರಿಗೂ ಸೆಪರೇಟ್ ವೀಸಾದ ಅವಶ್ಯಕತೆ ಇರುವುದಿಲ್ಲ. ಈ ಝೋನ್ ಏಕ ಮತ್ತು ಅವಿಭಜಿತ ಯೂನಿಯನ್ ಆಗಿ ಕಾರ್ಯನಿರ್ವಹಿಸುತ್ತದೆ.

ಮೈನರ್‌ಗಳು ಷೆಂಗೆನ್ ವೀಸಾ ಪಡೆಯಬಹುದೇ?

ಹೌದು, ಮೈನರ್‌ಗಳು ಅವರ ಪೋಷಕರು ಮತ್ತು ಲೀಗಲ್‌ ಗಾರ್ಡಿಯನ್‌ಗಳ ಲಿಖಿತ ಮತ್ತು ವ್ಯಕ್ತ ಒಪ್ಪಿಗೆಯನ್ನು ಸಲ್ಲಿಸಿದರೆ ಷೆಂಗೆನ್ ವೀಸಾ ಪಡೆಯಬಹುದು.

ಭಾರತದ ಪಾಸ್‌ಪೋರ್ಟ್‌ ಹೋಲ್ಡರ್‌ಗಳಿಗೆ 4 ನಾನ್‌-ಯುರೋಪಿಯನ್ ಯೂನಿಯನ್‌ ಷೆಂಗೆನ್‌ ಸದಸ್ಯರು ವೀಸಾ ಆನ್ ಅರೈವಲ್ ಒದಗಿಸುತ್ತಾರೆಯೇ?

ಇಲ್ಲ, ಅವರು ಒದಗಿಸುದಿಲ್ಲ. ಅವರು ಝೋನ್‌ನ ಭಾಗವಾಗಿರುತ್ತಾರೆ ಮತ್ತು ನಿಯಮಗಳಿಗೆ ಬದ್ಧರಾಗಿರುತ್ತಾರೆ.