ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಗಳಿಗಾಗಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

Third-party premium has changed from 1st June. Renew now

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಒಂದು ರೀತಿಯ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್  ಪಾಲಿಸಿಯಾಗಿದ್ದು, ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಉದ್ದೇಶಕ್ಕಾಗಿ ಬಳಸಲಾಗುವ  ಕಮರ್ಷಿಯಲ್ ವೆಹಿಕಲ್‌ಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಇದು, ಅನಿರೀಕ್ಷಿತ ಘಟನೆಗಳಾದ ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಬೆಂಕಿಯ ಸಂದರ್ಭದಲ್ಲಿ ಉಂಟಾಗಬಹುದಾದ ಹಾನಿಗಳು ಮತ್ತು ನಷ್ಟಗಳಿಂದ ನಿಮ್ಮ ವೆಹಿಕಲ್‌ ಅನ್ನು ರಕ್ಷಿಸುತ್ತದೆ.

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು ಒಳಗೊಂಡಿರುವ ಅತಿ ಸಾಮಾನ್ಯ ವಿಧಗಳೆಂದರೆ ಬಸ್ ಇನ್ಶೂರೆನ್ಸ್, ವ್ಯಾನ್ ಇನ್ಶೂರೆನ್ಸ್, ಟ್ಯಾಕ್ಸಿ/ಕ್ಯಾಬ್ ಇನ್ಶೂರೆನ್ಸ್  ಮತ್ತು ಆಟೋ ರಿಕ್ಷಾ ಇನ್ಶೂರೆನ್ಸ್ ಇತ್ಯಾದಿಗಳು.

ಕವರ್ ಆಗುವ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ಗಳ ವಿಧಗಳು:

  • ಬಸ್‌ಗಳು: ಸ್ಕೂಲ್ ಬಸ್‌ಗಳು, ಖಾಸಗಿ ಪ್ರವಾಸಿ ಬಸ್‌ಗಳು ಮತ್ತು ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಉದ್ದೇಶಕ್ಕಾಗಿ ಬಳಸಲಾಗುವ ಇತರ ಬಸ್‌ಗಳನ್ನು 'ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ' ಅಡಿಯಲ್ಲಿ ಕವರ್ ಮಾಡಲಾಗುತ್ತದೆ.
  • ಆಟೋ ರಿಕ್ಷಾಗಳು: ಎಲ್ಲಾ ಆಟೋ ರಿಕ್ಷಾಗಳನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ; ಜನರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದನ್ನು ಸಹ ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.
  • ಟ್ಯಾಕ್ಸಿಗಳು, ಕ್ಯಾಬ್‌ಗಳು ಮತ್ತು ಕಮರ್ಷಿಯಲ್ ಕಾರ್‌ಗಳು: ಕ್ಯಾಬ್‌ಗಳು ಮತ್ತು ನಿಮ್ಮ ದೈನಂದಿನ ಉಬರ್, ಓಲಾ ಹಾಗೂ ಕಮರ್ಷಿಯಲ್, ಸಾರ್ವಜನಿಕ ಸಾರಿಗೆಗಾಗಿ ಬಳಸುವ ಇತರ ಖಾಸಗಿ ಕಾರ್‌ಗಳಂತಹ ಕಮರ್ಷಿಯಲ್ ಕಾರ್‌ಗಳು 'ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ' ಅಡಿಯಲ್ಲಿ ಕವರ್ ಆಗುತ್ತವೆ.
  • ವ್ಯಾನ್‌ಗಳು: ಸ್ಕೂಲ್ ವ್ಯಾನ್‌ಗಳು ಮತ್ತು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸುವ ಪ್ರೈವೇಟ್ ಟೂರ್ ಮಿನಿಬಸ್‌ಗಳಂತಹ ವ್ಯಾನ್‌ಗಳು ಸಹ ಈ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ.

ನಾನು ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

  • ಅನಿರೀಕ್ಷಿತ ನಷ್ಟಗಳಿಂದ ರಕ್ಷಣೆ: ಇದು ನೈಸರ್ಗಿಕ ವಿಪತ್ತು, ಅಪಘಾತ, ಘರ್ಷಣೆ ಆಗಿರಬಹುದು ಅಥವಾ ಬೆಂಕಿಯಿಂದ ಉಂಟಾಗಿರಬಹುದು; ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಈ ಅನಿಶ್ಚಿತ ನಷ್ಟಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ನಿಮ್ಮ ವ್ಯಾಪಾರಕ್ಕೆ ಹೊಣೆಗಾರನಾಗಿ ರಕ್ಷಿಸುತ್ತದೆ.
  • ಕಾನೂನನ್ನು ಅನುಸರಿಸಿ: ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ವೆಹಿಕಲ್‌ಗಳು ಸೇರಿದಂತೆ ಎಲ್ಲಾ ವೆಹಿಕಲ್‌ಗಳಿಗೆ ಕನಿಷ್ಠ ಮೂಲಭೂತವಾದ, ಥರ್ಡ್ ಪಾರ್ಟಿ ಮೋಟಾರ್ ಇನ್ಶೂರೆನ್ಸಿನೊಂದಿಗೆ ಇನ್ಶೂರೆನ್ಸ್ ಪಡೆಯುವುದು ಖಡ್ಡಾಯವಾಗಿದೆ. ಇದು ಯಾವುದೇ ಥರ್ಡ್ ಪಾರ್ಟಿಗೆ ಉಂಟಾಗುವ ನಷ್ಟಗಳು ಮತ್ತು ಹಾನಿಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ; ಉದಾಹರಣೆಗೆ ವ್ಯಕ್ತಿ, ಆಸ್ತಿ ಅಥವಾ ವಾಹನ.
  • ಮಾಲೀಕರು-ಚಾಲಕರನ್ನು ಕವರ್‌ ಮಾಡುತ್ತದೆ: ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಜೊತೆ ನಿಮ್ಮ ಕಮರ್ಷಿಯಲ್ ವೆಹಿಕಲ್‌ಗೆ ಇನ್ಶೂರೆನ್ಸ್ ಖರೀದಿಸುವುದರಿಂದ ಅದು ನಿಮ್ಮ ವೆಹಿಕಲ್ ಅನ್ನು ರಕ್ಷಿಸುವುದು ಮಾತ್ರವಲ್ಲದೆ, ಮಾಲೀಕರು-ಚಾಲಕರಿಗೂ ಸಹ ರಕ್ಷಣೆ ನೀಡುತ್ತದೆ.
  • ಪ್ರಯಾಣಿಕರ ರಕ್ಷಣೆ: ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಖರೀದಿಸುವವರು, ತಮ್ಮ ಪ್ರಯಾಣಿಕರಿಗೂ ಸಹ ಕವರ್ ಆಯ್ದುಕೊಳ್ಳಬಹುದು; ಹೀಗಾಗಿ, ಜವಾಬ್ದಾರಿಯುತ ವ್ಯವಹಾರವಾಗಿ ಅದು ತನಗಾಗಿ ಮಾತ್ರವಲ್ಲದೆ ಅದರೊಂದಿಗೆ ಒಳಗೊಂಡಿರುವ ಎಲ್ಲಾ ಪಾಲುದಾರರ ಬಗ್ಗೆಯೂ ಕಾಳಜಿ ವಹಿಸುತ್ತದೆ

ಡಿಜಿಟ್ ನ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ. ಆದ್ದರಿಂದ ನೀವು ಕ್ಲೈಮ್ ಮಾಡುವಾಗ ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೋಲ್ಡರ್‌ಗೆ ಆದ ಸ್ವಂತ ಹಾನಿಗಳು

ನೀವು ಕೇವಲ ಥರ್ಡ್-ಪಾರ್ಟಿ ಪ್ಯಾಸೆಂಜರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಮಾತ್ರ ಖರೀದಿಸಿದ್ದರೆ, ಅದು ಸ್ವಂತ ಹಾನಿ ಮತ್ತು ನಷ್ಟಗಳನ್ನು ಕವರ್ ಮಾಡುವುದಿಲ್ಲ.

ಕುಡಿದು ವಾಹನ ಚಾಲನೆ, ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು

ಕ್ಲೈಮ್ ಸಮಯದಲ್ಲಿ, ಚಾಲಕ-ಮಾಲೀಕರು ವ್ಯಾಲಿಡ್ ಲೈಸೆನ್ಸ್ ಅನ್ನು ಹೊಂದಿಲ್ಲದಿದ್ದರೆ ಅಥವಾ ಮದ್ಯದ ಅಮಲಿನಲ್ಲಿದ್ದರೆಂದು ಕಂಡುಬಂದರೆ ಅಂತಹ ಸಂದರ್ಭದಲ್ಲಿ  ಆ ಕ್ಲೈಮ್ ಅನ್ನು ಅನುಮೋದಿಸಲಾಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯ

ಕೊಡುಗೆಯ ನಿರ್ಲಕ್ಷ್ಯದ ಕಾರಣದಿಂದ ವಾಹನಕ್ಕೆ ಉಂಟಾಗುವ ಯಾವುದೇ ಹಾನಿಗಳು ಅಥವಾ ನಷ್ಟಗಳು ಕವರ್ ಆಗುವುದಿಲ್ಲ. ಉದಾಹರಣೆಗೆ, ನಗರದಲ್ಲಿ  ಭಾರೀ ಪ್ರವಾಹವಿದ್ದಾಗ ಮತ್ತು ಅಲ್ಲಿ ವಾಹನವನ್ನು ಓಡಿಸಬಾರದೆಂದು ಶಿಫಾರಸು ಮಾಡಿದರೂ ಸಹ ಅದನ್ನು ನಿರ್ಲಕ್ಷಿಸಿ ವಾಹನ ಚಾಲನೆ ಮಾಡುವುದು.

ಪರಿಣಾಮದ ಹಾನಿಗಳು

ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಬೆಂಕಿಯಿಂದ ಸಂಭವಿಸಿದ ಯಾವುದೇ ಹಾನಿ ಅಥವಾ ನಷ್ಟಗಳು ಕವರ್ ಆಗುವುದಿಲ್ಲ.

ಡಿಜಿಟ್ ನ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು

ಪ್ರಮುಖ ಲಕ್ಷಣಗಳು ಡಿಜಿಟ್ ಪ್ರಯೋಜನಗಳು
ಕ್ಲೇಮ್ ಪ್ರಕ್ರಿಯೆ ಪೇಪರ್‌ಲೆಸ್ ಕ್ಲೈಮ್‌ಗಳು
ಕಸ್ಟಮರ್ ಸಪೋರ್ಟ್ 24x7 ಸಪೋರ್ಟ್
ಹೆಚ್ಚುವರಿ ಕವರೇಜ್ ಪಿಎ ಕವರ್, ಕಾನೂನು ಹೊಣೆಗಾರಿಕೆ ಕವರ್, ವಿಶೇಷ ಹೊರಗಿಡುವಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ.
ಥರ್ಡ್ ಪಾರ್ಟಿಗೆ ಆಗುವ ಸ್ವಂತ ಹಾನಿ ವೈಯುಕ್ತಿಕ ಹಾನಿಗಳಿಗೆ ಅನ್ ಲಿಮಿಟೆಡ್ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು.

ನಿಮ್ಮ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ನ ವಿಧವನ್ನು ಆಧರಿಸಿ; ಅಂದರೆ ಬಸ್ಸು, ರಿಕ್ಷಾ, ವ್ಯಾನ್, ಇತ್ಯಾದಿ; ನಾವು ಪ್ರಾಥಮಿಕವಾಗಿ ಆಯ್ಕೆ ಮಾಡಲು ಎರಡು ಪ್ಲ್ಯಾನ್‌ಗಳನ್ನು ಹೊಂದಿದ್ದೇವೆ.

ಲೈಬಿಲಿಟಿ ಮಾತ್ರ ಸ್ಟ್ಯಾಂಡರ್ಡ್ ಪ್ಯಾಕೇಜ್

ನಿಮ್ಮ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ನಿಂದ ಯಾವುದೇ ಥರ್ಡ್ ಪಾರ್ಟಿಗೆ ಅಥವಾ ಆಸ್ತಿಗೆ ಉಂಟಾಗುವ ಹಾನಿ.

×

ನಿಮ್ಮ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ನಿಂದ ಯಾವುದೇ ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ.

×

ನೈಸರ್ಗಿಕ ವಿಕೋಪಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದಾಗಿ ಸ್ವಂತ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ಗೆ ಆಗುವ ನಷ್ಟ ಅಥವಾ ಹಾನಿ.

×

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ನ ಮಾಲೀಕ-ಚಾಲಕನಿಗೆ ಸಂಭವಿಸುವ ಗಾಯ/ಸಾವು

(ಒಂದು ವೇಳೆ ಮಾಲೀಕ-ಚಾಲಕರು ಮೊದಲಿನಿಂದಲೂ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ)

×
Get Quote Get Quote

ಕ್ಲೇಮ್ ಮಾಡುವುದು ಹೇಗೆ?

1800-258-5956 ಸಂಖ್ಯೆಯಲ್ಲಿ ನಮಗೆ ಕರೆ ಮಾಡಿ ಅಥವಾ hello@godigit.com ಗೆ ನಮಗೆ ಇ-ಮೇಲ್ ಕಳುಹಿಸಿ

ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ನಂಬರ್, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಮತ್ತು ಇನ್ಶೂರೆನ್ಸ್ ಪಡೆದವರ/ಕರೆ ಮಾಡಿದವರ ಕಾಂಟ್ಯಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ನಮಗೆ ನೀಡಿ.

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೇಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಭಾರತದಲ್ಲಿ, ಆನ್‌ಲೈನ್‌ನಲ್ಲಿ ಪ್ಯಾಸೆಂಜರ್ಸ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.

ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪ್ಯಾಕೇಜ್ ಪಾಲಿಸಿ ನಡುವಿನ ವ್ಯತ್ಯಾಸವೇನು?

'ಥರ್ಡ್ ಪಾರ್ಟಿ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್', ನಿಮ್ಮ ವೆಹಿಕಲ್‌ನಿಂದ ಥರ್ಡ್ ಪಾರ್ಟಿ ವ್ಯಕ್ತಿಗೆ , ಆಸ್ತಿಗೆ ಅಥವಾ ವೆಹಿಕಲ್‌ಗೆ ಉಂಟಾಗುವ ನಷ್ಟಗಳು ಮತ್ತು ಹಾನಿಗಳ ವಿರುದ್ಧ ಮಾತ್ರವೇ ನಿಮ್ಮನ್ನು ರಕ್ಷಿಸುತ್ತದೆ.ಮತ್ತೊಂದೆಡೆ, 'ಕಾಂಪ್ರೆಹೆನ್ಸಿವ್ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪ್ಯಾಕೇಜ್ ಪಾಲಿಸಿಯು' ನಿಮ್ಮ ಸ್ವಂತ ವೆಹಿಕಲ್‌ಗೆ ಮತ್ತು ಮಾಲೀಕರು-ಚಾಲಕರಿಗೆ ಉಂಟಾಗುವ, ಹಾನಿ ಮತ್ತು ನಷ್ಟಗಳನ್ನು ಕವರ್ ಮಾಡುತ್ತದೆ.

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸಿನಲ್ಲಿ ಐಡಿವಿ ಎಂದರೇನು?

ಐಡಿವಿ ಎನ್ನುವುದು ಇನ್ಶೂರೆನ್ಸಿನ ಘೋಷಿತ ಮೌಲ್ಯವನ್ನು ಸೂಚಿಸುತ್ತದೆ; ಇದು ನಿಮ್ಮ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್‌ನ ಮಾರುಕಟ್ಟೆ ಮೌಲ್ಯವಾಗಿದೆ. ಇದು ಅಂತಿಮವಾಗಿ ನಿಮ್ಮ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸಲು ಮತ್ತು ಕ್ಲೇಮ್  ಸಮಯದಲ್ಲಿ ಕ್ಲೇಮ್ ಪಾವತಿಸಲು ಸಹಾಯ ಮಾಡುತ್ತದೆ.

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಕೇವಲ ವೆಹಿಕಲ್ ಅನ್ನು ಮಾತ್ರ ಕವರ್ ಮಾಡುತ್ತದೆಯೇ ಅಥವಾ ಅದರ ಪ್ರಯಾಣಿಕರನ್ನೂ ಕವರ್ ಮಾಡುತ್ತದೆಯೇ?

ಹೌದು, ನೀವು ಕಾಂಪ್ರೆಹೆನ್ಸಿವ್ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಪ್ಯಾಕೇಜ್ ಪಾಲಿಸಿಯನ್ನು ಖರೀದಿಸಿದರೆ, ನಿಮ್ಮ ಪ್ರಯಾಣಿಕರನ್ನು ರಕ್ಷಿಸಲು ನೀವು ಪ್ಯಾಸೆಂಜರ್ ಕವರ್ ಅನ್ನು ಸಹ ಆಯ್ದುಕೊಳ್ಳಬಹುದು.

ಆನ್‌ಲೈನ್‌ನಲ್ಲಿ ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸುವುದರಿಂದ ಆಗುವ ಪ್ರಯೋಜನಗಳೇನು?

ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವುದರಿಂದ ಅನೇಕ ಪ್ರಯೋಜನಗಳಿವೆ; ಇದು ನಿಮ್ಮ ಸಮಯವನ್ನು ಉಳಿಸುತ್ತದೆ (ನೀವು ಏಜೆಂಟರ ಬಳಿಗೆ ಹೋಗಬೇಕಾಗಿಲ್ಲ), ಇದು ಯಾವುದೇ ಪೇಪರ್‌ವರ್ಕ್ ಅನ್ನು ಒಳಗೊಂಡಿಲ್ಲ ಮತ್ತು ಕ್ಲೇಮ್ ಮಾಡಲು, ಪಾಲಿಸಿಯ ಖರೀದಿ ಪ್ರಕ್ರಿಯೆಯು ಸರಳವಾಗಿದೆ ಮತ್ತು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ!