ಷೆಂಗೆನ್ ವೀಸಾ ಇಂಟರ್ನ್ಯಾಷನಲ್ ಟ್ರಾವೆಲ್  ಇನ್ಶೂರೆನ್ಸ್ ಖರೀದಿಸಿ

Instant Policy, No Medical Check-ups

ವಿದೇಶಕ್ಕೆ ಟ್ರಾವೆಲ್ ಮಾಡುವುದೆಂದರೆ ನಮ್ಮಲ್ಲಿ ಅನೇಕರಿಗೆ ಖಂಡಿತವಾಗಿಯೂ ಕನಸಿನ ಮಾತಾಗಿದೆ. ಇಂಟರ್‌ನ್ಯಾಷನಲ್ ಟ್ರಾವೆಲ್ ಎಂದೂ ನೋಡದ ಅನುಭವ. ನಮ್ಮ ಮೆಚ್ಚಿನ ಸ್ಥಳಗಳಲ್ಲಿ, ಕನಿಷ್ಠ ಒಂದು ನಿಲ್ದಾಣವಾದರೂ ಷೆಂಗೆನ್ ಲಿಸ್ಟ್‌ನಲ್ಲಿರುವ ಒಂದು ದೇಶವಾಗಿರಬೇಕು. 

ಟ್ರಿಪ್ ದುಬಾರಿಯಾಗಿ ಕಾಣಿಸಬಹುದು, ನಿಮ್ಮ ಹಣಕಾಸಿನ ಚಿಂತೆಗಳನ್ನು ಕಡಿಮೆ ಮಾಡಲು ಡಿಜಿಟ್‌ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಇಲ್ಲಿದೆ. ನಿಮ್ಮ ಷೆಂಗೆನ್ ವೀಸಾವನ್ನು ಪ್ರಕ್ರಿಯೆಗೊಳಿಸಲು ನೀವು ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಸುಲಭವಾಗಿ ಪಡೆಯಬಹುದು.

ಷೆಂಗೆನ್ ವೀಸಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಎನ್ನುವುದು ಝೋನ್‌ನಲ್ಲಿರುವ ಎಲ್ಲಾ 26 ದೇಶಗಳನ್ನು ಒಳಗೊಂಡಿರುವ ಒಂದು ಪಾಲಿಸಿಯಾಗಿದೆ. ಷೆಂಗೆನ್ ವೀಸಾಗಾಗಿ ಅಪ್ಲೈ ಮಾಡುವಾಗ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಇದು ಝೋನ್‌ನಲ್ಲಿರುವ ಪ್ರತಿಯೊಂದು ದೇಶಕ್ಕೂ ಮಲ್ಟಿಪಲ್ ವೀಸಾಗಳ ಬದಲಿಗೆ ಕೇವಲ ಒಂದೇ ವೀಸಾದೊಂದಿಗೆ ಎಲ್ಲಾ 27 ಷೆಂಗೆನ್ ದೇಶಗಳಿಗೆ ಅಡಚಣೆ-ಮುಕ್ತ ಟ್ರಾವೆಲ್ ಅನ್ನು ಖಚಿತಪಡಿಸುತ್ತದೆ.

 

ಷೆಂಗೆನ್ ವೀಸಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?

ಹೌದು, ಷೆಂಗೆನ್ ವೀಸಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಏಕೆಂದರೆ, ಷೆಂಗೆನ್ ವೀಸಾದ ಅವಶ್ಯಕತೆಗಳ ಭಾಗವಾಗಿ, ಪ್ರತಿಯೊಬ್ಬ ಟೂರಿಸ್ಟ್ €30,000 ವರೆಗಿನ ಮೆಡಿಕಲ್ ಕವರ್ ಅನ್ನು ಹೊಂದಿರಲೇಬೇಕು. ಈ 26 ದೇಶಗಳಿಗೆ ವೀಸಾದ ಅವಶ್ಯಕತೆಗಳು ಪ್ರಾಯೋಗಿಕವಾಗಿ ಒಂದೇ ಆಗಿರುತ್ತವೆ. ಆದ್ದರಿಂದ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದುವುದು ನಿಮ್ಮ ಷೆಂಗೆನ್ ವೀಸಾವನ್ನು ಸುಗಮ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ. 

 

ಷೆಂಗೆನ್ ವೀಸಾಗಾಗಿ ಟ್ರಾವೆಲ್ ಇನ್ಶೂರೆನ್ಸ್‌ನ ಅವಶ್ಯಕತೆಗಳು ಯಾವುವು?

ಪ್ರತಿ ಷೆಂಗೆನ್ ದೇಶವು ಟ್ರಾವೆಲ್ ಇನ್ಶೂರೆನ್ಸ್‌ಗಾಗಿ ನಿರ್ದಿಷ್ಟ ಕಂಡೀಶನ್‌ಗಳನ್ನು ಹೊಂದಿರಬಹುದು. ನೀವು ಟ್ರಾವೆಲ್ ಮಾಡುವ ಮೊದಲು ನಿಮ್ಮ ರಿಕ್ವೈರ್‌ಮೆಂಟ್‌ಗಳಿಗಾಗಿ ಆಯಾ ದೇಶದ ಎಂಬೆಸಿ ಅಥವಾ ಕಾನ್ಸ್ಯುಲೇಟ್ ಅನ್ನು ಚೆಕ್ ಮಾಡಲು ಮರೆಯದಿರಿ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್, ಹೈಲೈಟ್ ಮಾಡಬೇಕಾದ ಕೆಲವು ಕನಿಷ್ಠ ಕಂಡೀಶನ್‌ಗಳು:

  • ಮೆಡಿಕಲ್ ಕವರೇಜ್‌ನ ಕನಿಷ್ಠ €30,000.

  • ಅನ್ವಯವಾಗುವ ಪಾಲಿಸಿಯ ಅಡಿಯಲ್ಲಿ ಷೆಂಗೆನ್ ಝೋನ್‌ನ ಸಂಪೂರ್ಣ ಕವರೇಜ್.

  • ವೈದ್ಯಕೀಯ ಕಾರಣಗಳಿಗಾಗಿ ವಾಪಸಾತಿ, ಎಮರ್ಜೆನ್ಸಿ ಹಾಸ್ಪಿಟಲ್ ಟ್ರೀಟ್‌ಮೆಂಟ್ ಅಥವಾ ಸಾವು ಇತ್ಯಾದಿ ಯಾವುದೇ ಅನಿರೀಕ್ಷಿತ ಎಕ್ಸ್‌ಪೆನ್ಸ್‌ಗಳನ್ನು ಪಾಲಿಸಿಯು ಕವರ್ ಮಾಡಬೇಕು. 

  • ಪಾಲಿಸಿಯ ವ್ಯಾಲಿಡಿಟಿಯು ವಾಸ್ತವ್ಯದ ಅವಧಿಯನ್ನು ಕವರ್ ಮಾಡಬೇಕು.

ನೀವೀಗ ಸಿದ್ಧರಾಗಿರುವಿರಿ! ಯಾವುದೇ ದೇಶಕ್ಕೆ ಅಥವಾ ಎಲ್ಲಾ ಷೆಂಗೆನ್ ದೇಶಗಳಿಗೆ ಟ್ರಾವೆಲ್ ಮಾಡುವುದು ಒಂದು ವರದಾನವಾಗಿದೆ ಮತ್ತು ಅದನ್ನು ಆನಂದಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಇಲ್ಲಿದ್ದೇವೆ. ನೀವು ವಿರಾಮ ಅಥವಾ ಕೆಲಸ, ಸೋಲೋ ಟ್ರಿಪ್ ಅಥವಾ ಫ್ಯಾಮಿಲಿ ವೆಕೇಶನ್‌ಗಾಗಿ ಟ್ರಾವೆಲ್ ಮಾಡುತ್ತಿದ್ದರೆ, ನಿಮ್ಮ ಟ್ರಾವೆಲ್ ಅನ್ನು ಸುಗಮವಾಗಿ ಮತ್ತು ತೊಂದರೆ-ಮುಕ್ತವಾಗಿಸಲು ಡಿಜಿಟ್ ಟ್ರಾವೆಲ್ ಇನ್ಶೂರೆನ್ಸ್ ಇಲ್ಲಿದೆ.

ನನ್ನ ಷೆಂಗೆನ್ ವೀಸಾಗಾಗಿ ನಾನು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

2022 ರಲ್ಲಿ, ಪ್ಯಾರಿಸ್, ಇಟಲಿ, ಸ್ಕ್ಯಾಂಡಿನೇವಿಯಾ ಮತ್ತು ಬ್ರಸೆಲ್ಸ್‌ನಲ್ಲಿ 200 ಕ್ಕೂ ಹೆಚ್ಚು ಫ್ಲೈಟ್‌ಗಳನ್ನು ಕ್ಯಾನ್ಸಲ್ ಮಾಡಲಾಯಿತು (1)

ಹೆಚ್ಚಿನ ಕಳ್ಳತನದ ಕ್ರೈಮ್ ರೇಟ್‌ಗಳನ್ನು ಹೊಂದಿರುವ ದೇಶಗಳಲ್ಲಿ ಫ್ರಾನ್ಸ್ ಮೊದಲ ಸ್ಥಾನ ಪಡೆದಿದೆ. ಬೆಲ್ಜಿಯಂ ಮತ್ತು ಸ್ವೀಡನ್ ಎರಡನೇ ಸ್ಥಾನದಲ್ಲಿವೆ. (2)

ಯುರೋಪ್‌ನಲ್ಲಿಯೇ, 7.3 ಮಿಲಿಯನ್ ಸಾಮಾನು ಸರಂಜಾಮುಗಳು ಕಳೆದುಹೋಗಿವೆ, ಮಿಸ್‌ಹ್ಯಾಂಡಲ್ ಮಾಡಲ್ಪಟ್ಟಿವೆ ಅಥವಾ ಡಿಲೇ ಆಗಿವೆ ಎಂದು ರಿಪೋರ್ಟ್ ಆಗಿದೆ.(3)

ಕೋವಿಡ್ ನಂತರದಲ್ಲಿ, ದೇಶಗಳ ರಿಓಪನಿಂಗ್ ಆದ ಮೇಲೆ, ಲೇಬರ್‌ಗಳ ಕೊರತೆಯಿಂದಾಗಿ ಫ್ಲೈಟ್‌ಗಳ ಕ್ಯಾನ್ಸಲೇಶನ್ ಮತ್ತು ಫ್ಲೈಟ್‌ಗಳ ಡೀಲೇಗಳಲ್ಲಿ ಏರಿಕೆ ಕಂಡುಬಂದಿದೆ. (4)

ಷೆಂಗೆನ್ ವೀಸಾಗಾಗಿ ಅಪ್ಲೈ ಮಾಡುವಾಗ, ನಿಮ್ಮೊಂದಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದುವುದು ಮ್ಯಾಂಡೇಟರಿ ಆಗಿದೆ.

ಷೆಂಗೆನ್ ವೀಸಾಗೆ ಅಪ್ಲೈ ಮಾಡುವಾಗ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಕನಿಷ್ಠ €30,000 ಮೆಡಿಕಲ್ ಕವರೇಜ್ ಅಗತ್ಯವಾಗಿದೆ.

ಡಿಜಿಟ್‌ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಬಗ್ಗೆ ಯಾವ ಅಂಶಗಳು ಉತ್ತಮವಾಗಿವೆ?

ಝೀರೋ ಡಿಡಕ್ಟಿಬಲ್‌ಗಳು - ನೀವು ಕ್ಲೈಮ್ ಮಾಡಿದಾಗ ನೀವು ಏನನ್ನೂ ಪಾವತಿಸಬೇಕಿಲ್ಲ - ಅದು ನಮ್ಮ ಮೇಲೆ ಇರುತ್ತದೆ. 

ಅಡ್ವೆಂಚರ್ ಸ್ಪೋರ್ಟ್ಸ್‌ಗಳನ್ನು ಕವರ್ ಮಾಡುತ್ತದೆ - ನಮ್ಮ ಕವರೇಜ್ ಸ್ಕೂಬಾ ಡೈವಿಂಗ್, ಬಂಗೀ ಜಂಪಿಂಗ್ ಮತ್ತು ಸ್ಕೈಡೈವಿಂಗ್‌ನಂತಹ ಆ್ಯಕ್ಟಿವಿಟಿಗಳನ್ನು ಒಳಗೊಂಡಿದೆ (ನೀಡುವ ಅವಧಿಯು ಒಂದು ದಿನ)

ಫ್ಲೈಟ್ ಡೀಲೇಗಳಿಗೆ ತಕ್ಷಣವೇ ಮಾನಿಟರಿ ಕಾಂಪನ್ಸೇಶನ್ - ನಿಮ್ಮ ಸಮಯವನ್ನು ಇನ್ನಷ್ಟು ವ್ಯರ್ಥ ಮಾಡಲು ನಾವು ಬಯಸುವುದಿಲ್ಲ. ಅದಕ್ಕಾಗಿಯೇ, ನಿಮ್ಮ ಫ್ಲೈಟ್ 6 ಗಂಟೆಗಳಿಗಿಂತ ಹೆಚ್ಚು ಸಮಯದವರೆಗೆ ಡಿಲೇಯಾದರೆ, ನಾವು ನಿಮಗೆ ತಕ್ಷಣ ₹500-1000 ಕಾಂಪನ್ಸೇಶನ್ ಅನ್ನು ನೀಡುತ್ತೇವೆ.

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಪ್ರಕ್ರಿಯೆಗಳು - ಯಾವುದೇ ಪೇಪರ್‌ವರ್ಕ್ ಇಲ್ಲ, ಓಡಾಟವಿಲ್ಲ. ನೀವು ಕ್ಲೈಮ್ ಮಾಡಿದಾಗ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.

ಮಿಸ್ಡ್-ಕಾಲ್ ಸೌಲಭ್ಯ - ನಮಗೆ +91-7303470000 ನಂಬರ್‌ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತೇವೆ. ಇನ್ನು ಇಂಟರ್‌ನ್ಯಾಷನಲ್ ಕಾಲಿಂಗ್ ಚಾರ್ಜ್‌ಗಳಿಲ್ಲ!

ವಿಶ್ವಾದ್ಯಂತ ಬೆಂಬಲ - ಪ್ರಪಂಚದಾದ್ಯಂತ ನಿಮ್ಮನ್ನು ಅಭೂತಪೂರ್ವವಾಗಿ ಬೆಂಬಲಿಸಲು ನಾವು ವಿಶ್ವದ ಅತಿದೊಡ್ಡ ಹೆಲ್ತ್ ಮತ್ತು ಟ್ರಾವೆಲ್ ಇನ್ಶೂರೆನ್ಸ್ ನೆಟ್‌ವರ್ಕ್ ಅಲಯನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. T&C ಅನ್ವಯಿಸುತ್ತವೆ*

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಬೇಸಿಕ್ ಆಯ್ಕೆ ಕಂಫರ್ಟ್ ಆಯ್ಕೆ

ಮೆಡಿಕಲ್ ಕವರ್

×

ತುರ್ತು ಅಪಘಾತದ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ

ಅಪಘಾತಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿ ಸಂಭವಿಸುತ್ತವೆ. ದುರದೃಷ್ಟವಶಾತ್, ನಾವು ನಿಮ್ಮನ್ನು ಅಂತಹದರಿಂದ ಉಳಿಸಲು ಸಾಧ್ಯವಿಲ್ಲ, ಆದರೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ನಾವು ಖಂಡಿತವಾಗಿಯೂ ನಿಮಗೆ ಸಹಾಯ ಮಾಡಬಹುದು. ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ನಾವು ನಿಮ್ಮನ್ನು ಆಸ್ಪತ್ರೆ ದಾಖಲಾತಿಗಾಗಿ ಕವರ್ ಮಾಡುತ್ತೇವೆ.

×

ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಸ್ಥಳಾಂತರಿಸುವಿಕೆ

ಗೊತ್ತಿರದ ದೇಶದಲ್ಲಿ ನಿಮ್ಮ ಟ್ರಿಪ್‌ನ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾದರೆ ಅದನ್ನು ದೇವರು ಮೆಚ್ಚುವುದಿಲ್ಲ, ಭಯಪಡಬೇಡಿ! ನಿಮ್ಮ ಚಿಕಿತ್ಸೆಯ ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ. ಆಸ್ಪತ್ರೆಯ ಕೊಠಡಿ ಬಾಡಿಗೆ, ಆಪರೇಷನ್ ಥಿಯೇಟರ್ ಚಾರ್ಜ್‌ಗಳು, ಇತ್ಯಾದಿ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.

×

ವೈಯಕ್ತಿಕ ಅಪಘಾತ

ನಿಮಗೆ ಎಂದಿಗೂ ಈ ಕವರ್‌ನ ಅಗತ್ಯ ಬರದಿರಲೆಂದು ನಾವು ಆಶಿಸುತ್ತೇವೆ. ಆದರೆ ಟ್ರಿಪ್ ಸಮಯದಲ್ಲಿ ಯಾವುದೇ ಅಪಘಾತ, ಸಾವು ಅಥವಾ ಅಂಗವೈಕಲ್ಯ ಉಂಟಾದರೆ, ನಿಮ್ಮ ಬೆಂಬಲಕ್ಕಾಗಿ ಈ ಪ್ರಯೋಜನವಿದೆ.

×

ದೈನಂದಿನ ನಗದು ಭತ್ಯೆ (ಪ್ರತಿ ದಿನಕ್ಕೆ/ಗರಿಷ್ಠ 5 ದಿನಗಳು)

ಟ್ರಿಪ್‌ನಲ್ಲಿರುವಾಗ, ನಿಮ್ಮ ಹಣವನ್ನು ನೀವು ಸಮರ್ಥವಾಗಿ ನಿಭಾಯಿಸುತ್ತೀರಿ. ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ನೀವು ಹೆಚ್ಚುವರಿ ಏನನ್ನೂ ಖರ್ಚು ಮಾಡಬೇಕೆಂದು ನಾವು ಬಯಸುವುದಿಲ್ಲ. ಆದ್ದರಿಂದ, ನೀವು ಆಸ್ಪತ್ರೆಗೆ ದಾಖಲಾದಾಗ, ನಿಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ನೀವು ದಿನಕ್ಕೆ ನಿಗದಿ ಪಡಿಸಿದ ದೈನಂದಿನ ನಗದು ಭತ್ಯೆಯನ್ನು ಪಡೆಯುತ್ತೀರಿ.

×

ಅಪಘಾತದಿಂದಾಗಿ ಸಾವು ಮತ್ತು ಅಂಗವೈಕಲ್ಯ

ಈ ಕವರ್ ತುರ್ತು ಅಪಘಾತ ಚಿಕಿತ್ಸೆಯ ಕವರ್‌ನಂತಹ ಎಲ್ಲವನ್ನೂ ಹೊಂದಿದ್ದರೂ, ಇದು ಒಂದು ಹೆಚ್ಚುವರಿ ರಕ್ಷಣಾ ಕವಚವನ್ನು ಹೊಂದಿದೆ. ಬೋರ್ಡಿಂಗ್, ಡಿ-ಬೋರ್ಡಿಂಗ್ ಅಥವಾ ಫ್ಲೈಟ್‌ನೊಳಗೆ ಇರುವಾಗ ಸಾವು ಮತ್ತು ಅಂಗವೈಕಲ್ಯವನ್ನು ಸಹ ಇದು ಕವರ್ ಮಾಡುತ್ತದೆ (ಟಚ್‌ವುಡ್!).

×

ತುರ್ತು ಹಲ್ಲಿನ ಚಿಕಿತ್ಸೆ

ಟ್ರಿಪ್‌ನಲ್ಲಿ ನೀವು ತೀವ್ರವಾದ ನೋವನ್ನು ಎದುರಿಸಿದರೆ ಅಥವಾ ನಿಮ್ಮ ಹಲ್ಲುಗಳಿಗೆ ಆಕಸ್ಮಿಕವಾಗಿ ಗಾಯವಾಗಿ, ಅದಕ್ಕಾಗಿ ವೈದ್ಯರು ತುರ್ತು ಹಲ್ಲಿನ ಚಿಕಿತ್ಸೆ ನೀಡುವಂತಾದರೆ, ಚಿಕಿತ್ಸೆಯಿಂದ ಉಂಟಾಗುವ ವೆಚ್ಚಗಳಿಗೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.

×

ಸ್ಮೂತ್ ಟ್ರಾನ್ಸಿಟ್ ಕವರ್‌ಗಳು

×

ಟ್ರಿಪ್ ಕ್ಯಾನ್ಸಲೇಶನ್

ದುರದೃಷ್ಟವಶಾತ್, ನಿಮ್ಮ ಟ್ರಿಪ್ ಕ್ಯಾನ್ಸಲ್ ಆದರೆ, ನಿಮ್ಮ ಟ್ರಿಪ್‌ನ ಪ್ರೀ-ಬುಕ್ಡ್, ನಾನ್-ರಿಫಂಡೇಬಲ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.

×

ಕಾಮನ್ ಕ್ಯಾರಿಯರ್ ಡಿಲೇ

ಒಂದುವೇಳೆ ನಿಮ್ಮ ಫ್ಲೈಟ್ ನಿರ್ದಿಷ್ಟ ಸಮಯದ ಸಮಯಕ್ಕಿಂತಲೂ ಹೆಚ್ಚು ಡಿಲೇ ಆದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ ಹಾಗೂ ಪ್ರತಿಯಾಗಿ ನಾವು ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಸಹ!

×

ಚೆಕ್-ಇನ್ ಬ್ಯಾಗೇಜ್ ಡಿಲೇ

ಕನ್ವೇಯರ್ ಬೆಲ್ಟ್‌ನಲ್ಲಿ ಕಾಯುವುದು ಕಿರಿಕಿರಿ ಅಲ್ವಾ, ನಮಗೆ ಗೊತ್ತು! ಆದ್ದರಿಂದ, ನಿಮ್ಮ ಚೆಕ್-ಇನ್ ಬ್ಯಾಗೇಜ್ 6 ಗಂಟೆಗಳಿಗಿಂತಲೂ ಹೆಚ್ಚು ಸಮಯ ಡಿಲೇ ಆಗಿದ್ದರೆ, ನೀವು ಪ್ರಯೋಜನದ ಮೊತ್ತವನ್ನು ಪಡೆಯುತ್ತೀರಿ, ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ!

×

ಚೆಕ್-ಇನ್ ಬ್ಯಾಗೇಜ್‌ನ ಒಟ್ಟು ನಷ್ಟ

ಟ್ರಿಪ್‌ನಲ್ಲಿ ಸಂಭವಿಸಬಹುದಾದ ಕೊನೆಯ ವಿಷಯವೆಂದರೆ ನಿಮ್ಮ ಸಾಮಾನು (ಬ್ಯಾಗೇಜ್) ಕಳೆದುಹೋಗುವುದು. ಆದರೆ ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ಶಾಶ್ವತವಾಗಿ ಕಳೆದುಹೋಗುವ ಸಂಪೂರ್ಣ ಬ್ಯಾಗೇಜ್‌ಗೆ ಪ್ರಯೋಜನದ ಮೊತ್ತವನ್ನು ನೀವು ಪಡೆಯುತ್ತೀರಿ. ಮೂರರಲ್ಲಿ ಎರಡು ಬ್ಯಾಗೇಜ್‌ಗಳು ಕಳೆದುಹೋದರೆ, ನೀವು ಅನುಪಾತದ ಲಾಭವನ್ನು ಪಡೆಯುತ್ತೀರಿ, ಅಂದರೆ ಪ್ರಯೋಜನ ಮೊತ್ತದ 2/3 ಭಾಗ.

×

ತಪ್ಪಿದ ಕನೆಕ್ಷನ್

ಫ್ಲೈಟ್ ತಪ್ಪಿಹೋಯಿತೇ? ಚಿಂತಿಸಬೇಡಿ! ಒಂದು ವೇಳೆ ನೀವು ಪ್ರೀ-ಬುಕ್ಡ್ ಫ್ಲೈಟ್ ಅನ್ನು ಡಿಲೇಯಾದ ಕಾರಣಕ್ಕೆ ಮಿಸ್ ಮಾಡಿಕೊಂಡರೆ, ನಿಮ್ಮ ಟಿಕೆಟ್/ಪ್ರಯಾಣದಲ್ಲಿ ತೋರಿಸಿರುವ ಮುಂದಿನ ಡೆಸ್ಟಿನೇಷನ್ ಅನ್ನು ತಲುಪಲು ಅಗತ್ಯವಿರುವ ಹೆಚ್ಚುವರಿ ವಸತಿ ಮತ್ತು ಟ್ರಾವೆಲ್‌ಗಾಗಿ ನಾವು ಪಾವತಿಸುತ್ತೇವೆ.

×

ಅನುಕೂಲಕರ ಟ್ರಿಪ್

×

ಪಾಸ್‌ಪೋರ್ಟ್ ಅನ್ನು ಕಳೆದುಕೊಳ್ಳುವುದು

ಗೊತ್ತಿರದ ಸ್ಥಳಗಳಲ್ಲಿ ಸಂಭವಿಸುವ ಕೆಟ್ಟ ವಿಷಯವೆಂದರೆ ನಿಮ್ಮ ಪಾಸ್‌ಪೋರ್ಟ್ ಅಥವಾ ವೀಸಾವನ್ನು ಕಳೆದುಕೊಳ್ಳುವುದು. ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ನೀವು ನಿಮ್ಮ ದೇಶದಿಂದ ಹೊರಗೆಲ್ಲೋ ಇರುವಾಗ ಅದು ನಷ್ಟವಾದರೆ, ಕಳೆದುಹೋದರೆ, ಅಥವಾ ಡ್ಯಾಮೇಜ್ ಆದರೆ ನಾವು ವೆಚ್ಚವನ್ನು ರಿಇಂಬರ್ಸ್ ಮಾಡುತ್ತೇವೆ.

×

ತುರ್ತು ಹಣ

ಕೆಟ್ಟ ದಿನದಂದು, ನಿಮ್ಮ ಎಲ್ಲಾ ಹಣವು ಕಳುವಾಗಿ ಬಿಟ್ಟರೆ ಮತ್ತು ನಿಮಗೆ ತುರ್ತು ಹಣದ ಅಗತ್ಯವಿದ್ದರೆ, ಈ ಕವರ್ ನಿಮ್ಮ ರಕ್ಷಣೆಗೆ ಬರುತ್ತದೆ.

×

ಎಮರ್ಜೆನ್ಸಿ ಟ್ರಿಪ್ ವಿಸ್ತರಣೆ

ನಮ್ಮ ವೆಕೇಶನ್‌ಗಳು ಮುಗಿಯುವುದನ್ನು ನಾವು ಬಯಸುವುದಿಲ್ಲ. ಹಾಗಂತ ನಾವು ಆಸ್ಪತ್ರೆಯಲ್ಲಿ ಉಳಿಯಲೂ ಸಹ ಬಯಸುವುದಿಲ್ಲ! ನಿಮ್ಮ ಟ್ರಿಪ್‌ನ ಸಮಯದಲ್ಲಿ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ, ನಿಮ್ಮ ವಾಸ್ತವ್ಯವನ್ನು ನೀವು ವಿಸ್ತರಿಸಬೇಕಾದಲ್ಲಿ, ನಾವು ಹೋಟೆಲ್ ವಿಸ್ತರಣೆಗಳ ವೆಚ್ಚವನ್ನು ಮತ್ತು ಫ್ಲೈಟ್ ರಿಶೆಡ್ಯೂಲಿಂಗ್ ಅನ್ನು ರಿಇಂಬರ್ಸ್ ಮಾಡುತ್ತೇವೆ. ತುರ್ತುಸ್ಥಿತಿಯೆನ್ನುವುದು ನಿಮ್ಮ ಟ್ರಾವೆಲ್ ಏರಿಯಾದಲ್ಲಿನ ನೈಸರ್ಗಿಕ ವಿಪತ್ತು ಅಥವಾ ತುರ್ತು ಆಸ್ಪತ್ರೆಗೆ ದಾಖಲಾತಿಯಾಗಿರಬಹುದು.

×

ಟ್ರಿಪ್ ತ್ಯಜಿಸುವಿಕೆ

ತುರ್ತು ಸಂದರ್ಭದಲ್ಲಿ, ನಿಮ್ಮ ಟ್ರಿಪ್‌ನಿಂದ ಬೇಗನೆ ಮನೆಗೆ ರಿಟರ್ನ್ ಆಗಬೇಕಿದ್ದರೆ, ಅದು ನಿಜವಾಗಿಯೂ ಬೇಸರ ತರಿಸುತ್ತದೆ. ನಾವದನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ ವಸತಿ, ಪ್ಲ್ಯಾನ್ಡ್ ಈವೆಂಟ್‌ಗಳು ಹಾಗೂ ವಿಹಾರ ವೆಚ್ಚಗಳಂತಹ ಪರ್ಯಾಯ ವ್ಯವಸ್ಥೆ ಮತ್ತು ನಾನ್ ರಿಫಂಡೇಬಲ್ ಟ್ರಾವೆಲ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.

×

ಪರ್ಸನಲ್ ಲಯಬಿಲಿಟಿ ಮತ್ತು ಬೇಲ್ ಬಾಂಡ್

ದುರದೃಷ್ಟಕರ ಘಟನೆಯಿಂದಾಗಿ, ನೀವು ಟ್ರಾವೆಲ್ ಮಾಡುವಾಗ ನಿಮ್ಮ ವಿರುದ್ಧ ಯಾವುದೇ ಲೀಗಲ್ ಚಾರ್ಜ್‌ಗಳಿದ್ದರೆ, ಅದನ್ನು ನಾವು ಪಾವತಿಸುತ್ತೇವೆ.

×
Get Quote Get Quote

ಮೇಲೆ ಸೂಚಿಸಿದ ಕವರೇಜ್ ಆಯ್ಕೆಯು ಕೇವಲ ಇಂಡಿಕೇಟಿವ್ ಆಗಿದೆ ಮತ್ತು ಇದು ಮಾರ್ಕೆಟ್ ಅಧ್ಯಯನ ಮತ್ತು ಅನುಭವವನ್ನು ಆಧರಿಸಿದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಯಾವುದೇ ಹೆಚ್ಚುವರಿ ಕವರೇಜ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನೀವು ಯಾವುದೇ ಇತರ ಕವರೇಜ್‌ಗಳನ್ನು ಆಯ್ಕೆ ಮಾಡಲು ಬಯಸಿದರೆ ಅಥವಾ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಬಯಸಿದರೆ ದಯವಿಟ್ಟು ನಮಗೆ 1800-258-5956 ಗೆ ಕರೆ ಮಾಡಿ.

ಪಾಲಿಸಿಯ ಬಗ್ಗೆ ವಿವರವಾಗಿ ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ನಾವು ಪಾರದರ್ಶಕತೆಯನ್ನು ನಂಬುತ್ತೇವೆ, ಅದಕ್ಕಾಗಿಯೇ ನಾವು ಕವರ್ ಮಾಡದ ಕೆಲವು ಸಂದರ್ಭಗಳ ಬಗ್ಗೆ ನೀವು ತಿಳಿದಿರಬೇಕೆಂದು ನಾವು ಬಯಸುತ್ತೇವೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ತಿಳಿಯುವುದು, ಅದು ಏನನ್ನು ಕವರ್ ಮಾಡುತ್ತದೆ ಎಂಬುದನ್ನು ತಿಳಿದುಕೊಂಡಷ್ಟೇ ಮುಖ್ಯವಾಗಿದೆ. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡದ ಕೆಲ ಅಂಶಗಳು ಈ ಕೆಳಗಿನಂತಿವೆ:
 

  • ಈಗಾಗಲೇ ಡಯಾಗ್ನೋಸ್ ಮಾಡಲಾದ ರೋಗಗಳು ಅಥವಾ ಕಾಯಿಲೆಗಳು (ಮೊದಲೇ ಅಸ್ತಿತ್ವದಲ್ಲಿರುವ ರೋಗಗಳು), ಅಥವಾ ನಿಮ್ಮ ವೈದ್ಯರು ಈಗಾಗಲೇ ಯಾವುದೇ ಟ್ರಾವೆಲ್ ಮಾಡದಂತೆ ಶಿಫಾರಸು ಮಾಡಿದ್ದರೆ.

  • 5 ದಿನಗಳವರೆಗಿನ ದೈನಂದಿನ ನಗದು ಭತ್ಯೆಯು ವಿದೇಶದಲ್ಲಿರುವಾಗ ತಮ್ಮ ರಜಾದಿನಗಳಲ್ಲಿ ಆಸ್ಪತ್ರೆಗೆ ದಾಖಲಾದವರಿಗೆ ಮಾತ್ರ ವ್ಯಾಲಿಡ್ ಆಗಿರುತ್ತದೆ.

  • ಅಪಘಾತವಾದ 365 ದಿನಗಳ ನಂತರದ ಸಾವು ಅಥವಾ ಅಂಗವೈಕಲ್ಯವನ್ನು ಕವರ್ ಮಾಡುವುದಿಲ್ಲ.

  • ಒಂದು ದಿನದ ಅಡ್ವೆಂಚರ್ ಸ್ಪೋರ್ಟ್ಸ್‌ಗಳನ್ನು ಮಾತ್ರ ಕವರ್ ಮಾಡುತ್ತದೆ. ಇದು ಒಂದೊಂದು ವಾರದ ಅವಧಿಯ ಟ್ರೆಕ್‌ಗಳು, ಪಾದಯಾತ್ರೆಗಳು ಅಥವಾ ಒಂದು ದಿನಕ್ಕಿಂತ ಹೆಚ್ಚು ಕಾಲ ನಡೆಯುವ ಪ್ರೊಫೆಷನಲ್ ಲೆವೆಲ್ ಅಡ್ವೆಂಚರ್ ಸ್ಪೋರ್ಟ್ಸ್‌ಗಳನ್ನು ಕವರ್ ಮಾಡುವುದಿಲ್ಲ. 

  • ನಿಮ್ಮ ಏರ್‌ಲೈನ್ ಸಂಸ್ಥೆಯು ಕನಿಷ್ಠ 6 ಗಂಟೆಗಳ ಮುಂಚಿತವಾಗಿಯೇ ನಿಮಗೆ ಫ್ಲೈಟ್ ಡಿಲೇ ಬಗ್ಗೆ ತಿಳಿಸಿದ್ದರೆ ಅಂತಹ ಫ್ಲೈಟ್ ಡಿಲೇಗಳನ್ನು ಕವರ್ ಮಾಡುವುದಿಲ್ಲ.

  • ಕಸ್ಟಮ್ಸ್‌ನಿಂದಾಗಿ ಡಿಲೇಯಾಗಿದ್ದರೆ ಚೆಕ್ಡ್ ಇನ್ ಲಗೇಜ್‌ನ ಡಿಲೇಯನ್ನು ಕವರ್ ಮಾಡುವುದಿಲ್ಲ.

  • ಯಾವುದೇ ತಪ್ಪಿದ ಕನೆಕ್ಷನ್‌ನಲ್ಲಿ, ಇನ್‌ಕಮಿಂಗ್ ಫ್ಲೈಟ್‌ಗಳ ಶೆಡ್ಯೂಲ್ಡ್ ಅರೈವಲ್ ಮತ್ತು ಕನೆಕ್ಟಿಂಗ್ ಫ್ಲೈಟ್‌ಗಳ ಶೆಡ್ಯೂಲ್ಡ್ ಡಿಪಾರ್ಚರ್ ಇವುಗಳ ನಡುವಿನ ಸಮಯದ ಅಂತರವು, ಅಗತ್ಯವಿರುವ ಸಮಯಕ್ಕಿಂತ ಕಡಿಮೆಯಿದ್ದರೆ ಅದನ್ನು ಕವರ್ ಮಾಡುವುದಿಲ್ಲ.

  • ಯುದ್ಧದ ಚಟುವಟಿಕೆಗಳನ್ನು ಕವರ್ ಮಾಡುವುದಿಲ್ಲ.

  • ಆಯಾ ಪೊಲೀಸರಿಗೆ 24 ಗಂಟೆಗಳ ಒಳಗೆ ಮಾಹಿತಿ ನೀಡದಿದ್ದರೆ, ಆ ಕಳ್ಳತನವನ್ನು ಕವರ್ ಮಾಡುವುದಿಲ್ಲ.

  • ಹೆರಿಗೆ ಅಥವಾ ಸಂಬಂಧಿತ ವಿಷಯಗಳ ಕಾರಣದಿಂದಾಗಿ ಟ್ರಿಪ್‌ನ ವಿಸ್ತರಣೆಗಳನ್ನು ಕವರ್ ಮಾಡಲಾಗುವುದಿಲ್ಲ.

  • ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಅಥವಾ ಹೆಲ್ತ್ ಕಂಡೀಶನ್‌ಗಳಿಂದಾಗಿ ಟ್ರಿಪ್ ಅನ್ನು ತ್ಯಜಿಸಲು ಸಾಧ್ಯವಿಲ್ಲ.

  • ವೀಸಾ ರಿಜೆಕ್ಷನ್‌ನಿಂದಾಗಿ ಆಗಿರುವ ಟ್ರಿಪ್ ಕ್ಯಾನ್ಸಲೇಶನ್ ಅನ್ನು ಕವರ್ ಮಾಡಲಾಗುವುದಿಲ್ಲ.

ನಮ್ಮೊಂದಿಗೆ, ವಿಐಪಿ ಕ್ಲೈಮ್‌ಗಳಿಗೆ ಆ್ಯಕ್ಸೆಸ್ ಪಡೆಯಿರಿ

ನೀವು ಷೆಂಗೆನ್‌ಗಾಗಿ ನಮ್ಮ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತಾ ಮುಕ್ತರಾಗಿ ಬದುಕುತ್ತೀರಿ!

ಹಂತ 1

ನಮಗೆ 1800-258-5956 ಗೆ (ಭಾರತದಲ್ಲಿದ್ದರೆ) ಕರೆ ಮಾಡಿ ಅಥವಾ +91-7303470000 ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಪುನಃ ಕರೆ ಮಾಡುತ್ತೇವೆ.

ಹಂತ 2

ಕಳುಹಿಸಿದ ಲಿಂಕ್‌ನಲ್ಲಿ ಅಗತ್ಯವಿರುವ ಡಾಕ್ಯುಮೆಂಟುಗಳನ್ನು ಮತ್ತು ನಿಮ್ಮ ಅಕೌಂಟ್ ಡೀಟೇಲ್ಸ್ ಅನ್ನು ಅಪ್‌ಲೋಡ್ ಮಾಡಿ.

ಹಂತ 3

ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ!

ಕೇಂಬ್ರಿಡ್ಜ್ ಇಂಗ್ಲಿಷ್ ಡಿಕ್ಷನರಿ ಪ್ರಕಾರ, ಷೆಂಗೆನ್ ಪದವನ್ನು "ಐರೋಪ್ಯ ಒಕ್ಕೂಟದ ಅನೇಕ ದೇಶಗಳ ನಡುವಿನ ಅಗ್ರಿಮೆಂಟ್ ಆಗಿದ್ದು, ಇದು ಪಾಸ್‌ಪೋರ್ಟ್ ಅಥವಾ ಇತರ ನಿಯಂತ್ರಣಗಳಿಲ್ಲದೆ, ಜನರು ಮತ್ತು ಸರಕುಗಳು ಪ್ರತಿ ದೇಶದ ಗಡಿಗಳಲ್ಲಿ ಮುಕ್ತವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ" ಎಂದು ವ್ಯಾಖ್ಯಾನಿಸಲಾಗಿದೆ.

ಷೆಂಗೆನ್ ಪ್ರದೇಶವು 26 ದೇಶಗಳನ್ನು ಒಳಗೊಂಡಿದ್ದು, ಇದು ಯುರೋಪ್‌ನ ಮುಖ್ಯ ಭೂಭಾಗವನ್ನು ಕವರ್ ಮಾಡುತ್ತದೆ. 1985 ರಲ್ಲಿ ಷೆಂಗೆನ್ ಅಗ್ರಿಮೆಂಟ್ ಟ್ರೀಟಿಗೆ ಸಹಿ ಹಾಕಲಾದ ಲಕ್ಸೆಂಬರ್ಗ್‌ನ ಒಂದು ಸಣ್ಣ ಪಟ್ಟಣದ ನಂತರ ಇದನ್ನು ಹೆಸರಿಸಲಾಯಿತು.

ಷೆಂಗೆನ್ ಪ್ರದೇಶದ ರಚನೆಯು ಆಂತರಿಕ ಗಡಿಗಳನ್ನು ಅಳಿಸಿಹಾಕುವ ಮೂಲಕ ಜನರ ಮುಕ್ತ ಚಲನೆಗೆ ಅವಕಾಶ ಮಾಡಿಕೊಟ್ಟಿದೆ. ಇದು ಬಾರ್ಡರ್ ಕಂಟ್ರೋಲ್ ಚೆಕ್ ಮತ್ತು ಟೀಡಿಯಸ್ ಫಾರ್ಮ್ಯಾಲಿಟಿಗಳಿಲ್ಲದೆ ಷೆಂಗೆನ್ ಝೋನ್‌ನೊಳಗಿನ ದೇಶಗಳಿಗೆ ಟ್ರಾವೆಲ್ ಮಾಡುವುದನ್ನು ಸುಲಭಗೊಳಿಸಿತು.

ಷೆಂಗೆನ್ ಪ್ರದೇಶವು ಯುರೋಪ್‌ನ ಮುಖ್ಯ ಭೂಭಾಗದಲ್ಲಿರುವ ಹೆಚ್ಚಿನ ದೇಶಗಳನ್ನು ಕವರ್ ಮಾಡುತ್ತದೆ, ಆದರೆ ಎಲ್ಲಾ ದೇಶಗಳನ್ನಲ್ಲ. ಅಂಡೋರಾ, ವ್ಯಾಟಿಕನ್ ಸಿಟಿ ಮತ್ತು ಮೊನಾಕೊ ರಾಜ್ಯಗಳನ್ನು ಷೆಂಗೆನ್ ಪ್ರದೇಶದೊಳಗೆ ವಾಸ್ತವಿಕವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳು ಗಡಿ ನಿಯಂತ್ರಣಗಳನ್ನು ಅಳವಡಿಸಿಕೊಂಡಿಲ್ಲ.

ಷೆಂಗೆನ್ ವೀಸಾವು ಷೆಂಗೆನ್ ಝೋನ್‌ನೊಳಗಿನ ಎಲ್ಲಾ 26 ದೇಶಗಳಿಗೆ ರಿಲ್ಯಾಕ್ಸ್ಡ್ ಟ್ರಾವೆಲ್‌ಗಾಗಿ ಸಹಾಯ ಮಾಡುತ್ತದೆ. ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳು ಝೋನ್‌ನಿಂದ ಆ ದೇಶಗಳನ್ನು ಪ್ರವೇಶಿಸಲು ಷೆಂಗೆನ್ ವೀಸಾವನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂಡಿಯನ್ ಪಾಸ್‌ಪೋರ್ಟ್ ಹೋಲ್ಡರ್‌ಗಳು ಷೆಂಗೆನ್ ವೀಸಾಗಾಗಿ ಅಪ್ಲಿಕೇಶನ್ ಹಾಕುವ ವಿಧಾನ ಹೀಗಿದೆ:

  • ವೀಸಾ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ: ವೀಸಾ ಅಪ್ಲಿಕೇಶನ್ ಫಾರ್ಮ್ ಗಾಗಿ ಷೆಂಗೆನ್ ಎಂಬೆಸಿಯ ವೆಬ್‌ಸೈಟ್ ಅನ್ನು ಬ್ರೌಸ್ ಮಾಡಿ. ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಸಬ್ಮಿಟ್ ಮಾಡುವ ಮೊದಲು ಎಲ್ಲ ವಿವರಗಳನ್ನು ಪೂರ್ಣಗೊಳಿಸಿ.

  • ಷೆಂಗೆನ್ ವೀಸಾ ಪ್ರಕಾರವನ್ನು ಆಯ್ಕೆಮಾಡಿ: ನಿಮಗೆ ಅಗತ್ಯವಿರುವ ಷೆಂಗೆನ್ ವೀಸಾ ಪ್ರಕಾರವನ್ನು ಆಯ್ಕೆಮಾಡಿ. ಇದು ಟ್ರಾವೆಲ್‌ನ ಉದ್ದೇಶ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟ ವೀಸಾಗಳಿಗೆ ವಿಭಿನ್ನ ನಿರ್ಬಂಧಗಳು ಅನ್ವಯಿಸುತ್ತವೆ. ಆದ್ದರಿಂದ ಟ್ರಾವೆಲ್‌ನ ಮೊದಲು ಸೂಕ್ತವಾದದನ್ನು ಆಯ್ಕೆ ಮಾಡಲು ಮರೆಯದಿರಿ.

  • ಅಗತ್ಯ ಡಾಕ್ಯುಮೆಂಟುಗಳೊಂದಿಗೆ ನಿಮ್ಮ ಷೆಂಗೆನ್ ವೀಸಾಗೆ ಅಪ್ಲೈ ಮಾಡಿ: ನಿಮ್ಮ ವೀಸಾಗಾಗಿ ಎಲ್ಲಿ ಮತ್ತು ಯಾವಾಗ ಅಪ್ಲಿಕೇಶನ್ ಹಾಕಬೇಕೆಂದು ತಿಳಿಯಿರಿ. ಭಾರತೀಯರು ಷೆಂಗೆನ್ ವೀಸಾಗಾಗಿ ಅಪ್ಲೈ ಮಾಡಬಹುದು. ಅದು ಅವರಿಗೆ 90 ದಿನಗಳವರೆಗೆ ಉಳಿಯಲು ಅನುವು ಮಾಡಿಕೊಡುತ್ತದೆ ಮತ್ತು ಆರು ತಿಂಗಳವರೆಗೆ ವ್ಯಾಲಿಡ್ ಆಗಿರುತ್ತದೆ. ಅಗತ್ಯವಿರುವ ಡಾಕ್ಯುಮೆಂಟುಗಳನ್ನು ಕಲೆಕ್ಟ್ ಮಾಡಿ ಮತ್ತು ನಿಮ್ಮ ದೇಶದಲ್ಲಿ ನೆಲೆಗೊಂಡಿರುವ ನಿಮ್ಮ ಎಂಬೆಸಿ/ಕಾನ್ಸ್ಯುಲೇಟ್ ನಲ್ಲಿ ನಿಮ್ಮ ವೀಸಾ ಅಪ್ಲಿಕೇಶನ್‌ಗಾಗಿ ಅಪಾಯಿಂಟ್‌ಮೆಂಟ್ ಮಾಡಿ.

  • ಇಂಟರ್ವ್ಯೂ ಪೂರ್ಣಗೊಳಿಸಿ ಮತ್ತು ವೀಸಾ ಶುಲ್ಕವನ್ನು ಪಾವತಿಸಿ: ಪ್ರಸ್ತುತ ಎಕ್ಸ್‌ಚೇಂಜ್ ರೇಟ್ ಪ್ರಕಾರ ವೀಸಾ ಶುಲ್ಕಗಳು ಬದಲಾವಣೆಗಳಿಗೆ ಒಳಪಟ್ಟಿರುತ್ತವೆ (ಯೂರೋದಲ್ಲಿ: ವಯಸ್ಕರಿಗೆ- 80, ಮತ್ತು 6-12 ವರ್ಷ ವಯಸ್ಸಿನ ಮಕ್ಕಳಿಗೆ- 60). ವೀಸಾ ಶುಲ್ಕವನ್ನು ಮನ್ನಾಗಾಗಿ ನೀವು ಕ್ರೈಟೀರಿಯಾಗಳನ್ನು ಸಹ ಚೆಕ್ ಮಾಡಬಹುದು.

  • ನಿಮ್ಮ ವೀಸಾಗಾಗಿ ಕಾಯಿರಿ: ನಿಮ್ಮ ವೀಸಾ ಪ್ರಕ್ರಿಯೆಯು ಸರಿಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತದೆ.

ಷೆಂಗೆನ್ ವೀಸಾಗಾಗಿ ಅಪ್ಲೈ ಮಾಡಲು ಭಾರತೀಯರಿಗೆ ಅಗತ್ಯವಿರುವ ಡಾಕ್ಯುಮೆಂಟುಗಳು

ಇನ್ವೈಟ್ ವಸತಿಗಾಗಿ ಒಂದು ಅಥವಾ ಹೆಚ್ಚಿನ ಸಪೋರ್ಟಿಂಗ್ ಡಾಕ್ಯುಮೆಂಟುಗಳೊಂದಿಗೆ ಹೋಸ್ಟ್‌ನಿಂದ ಇನ್ವಿಟೇಶನ್.
ವೀಸಾ ಅಪ್ಲಿಕೇಶನ್ ಫಾರ್ಮ್ ವೀಸಾ ಅಪ್ಲಿಕೇಶನ್ ಫಾರ್ಮ್ ಅನ್ನು ಟ್ರಾವೆಲ್ ಮಾಡುವ ಎಲ್ಲಾ ಅಪ್ಲಿಕಂಟ್‌ಗಳು ಸರಿಯಾಗಿ ಭರ್ತಿ ಮಾಡಬೇಕು ಮತ್ತು ಸಹಿ ಮಾಡಬೇಕು.
ಫೋಟೋಗಳು ಮತ್ತು ಪಾಸ್‌ಪೋರ್ಟ್ ಇತ್ತೀಚಿನ 2 ಪಾಸ್‌ಪೋರ್ಟ್ ಸೈಜಿನ ಫೋಟೋಗಳು. ಫೋಟೋಗಳ ನಿರ್ದಿಷ್ಟತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. 10 ವರ್ಷಕ್ಕಿಂತ ಹಳೆಯದಾದ ಪಾಸ್‌ಪೋರ್ಟ್ ಮತ್ತು ಕನಿಷ್ಠ ಮೂರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಬೇಕು.
ಫ್ಲೈಟ್ ಟಿಕೆಟ್‌ಗಳು ಮತ್ತು ಟ್ರಾವೆಲ್ ವಿವರ ಪ್ರತಿ ದೇಶಕ್ಕೆ ಹೋಗಲು ಮತ್ತು ಅಲ್ಲಿಂದ ಬರಲು ಫ್ಲೈಟ್ ಟಿಕೆಟ್‌ಗಳು ಮತ್ತು ನೀವು ಉಳಿದುಕೊಳ್ಳಲು ಪ್ಲ್ಯಾನ್ ಮಾಡಿರುವ ಹೋಟೆಲ್‌ಗಳು/Airbnbs ಗೆ ವಸತಿ ಪ್ರೂಫ್ ಸೇರಿದಂತೆ ಸಂಪೂರ್ಣ ಟ್ರಾವೆಲ್‌ನ ವಿವರ.
ಟ್ರಾವೆಲ್ ಇನ್ಶೂರೆನ್ಸ್ ನಿಮಗೆ €30,000 ವರೆಗೆ ಮೆಡಿಕಲ್ ಕವರೇಜನ್ನು ನೀಡುವ ಟ್ರಾವೆಲ್ ಅಥವಾ ಹೆಲ್ತ್ ಇನ್ಶೂರೆನ್ಸ್ ಮ್ಯಾಂಡೇಟರಿ ಆಗಿದೆ.
ಹಣಕಾಸಿನ ವಿಧಾನಗಳ ಪ್ರೂಫ್ ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ನಂತೆ ನಿಮಗೆ ಹಣಕಾಸಿನ ವಿಧಾನಗಳ ಪ್ರೂಫ್ ಬೇಕು. ನೀವು ಸ್ಪಾನ್ಸರ್‌ಗಳನ್ನು ಹೊಂದಿದ್ದರೆ, ಫೈನಾನ್ಸಿಯಲ್ ಸ್ಪಾನ್ಸರಿಂಗ್ ಲೆಟರ್ ತೋರಿಸಿ.
ಎಂಪ್ಲಾಯೀ/ಸ್ಟೂಡೆಂಟ್/ಸೆಲ್ಫ್ ಎಂಪ್ಲಾಯ್ಡ್ ಆಗಿದ್ದರೆ, ಅದರ ಕುರಿತಾದ ಪ್ರೂಫ್. ಎ. ಎಂಪ್ಲಾಯ್ಡ್ ಜನರು ಎಂಪ್ಲಾಯ್‌ಮೆಂಟ್ ಕಾಂಟ್ರ್ಯಾಕ್ಟ್, ರಜೆಯ ಪರ್ಮಿಷನ್ ಮತ್ತು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಸಲ್ಲಿಸಬೇಕು. ಬಿ. ಸೆಲ್ಫ್ ಎಂಪ್ಲಾಯ್ಡ್ ಜನರು ತಮ್ಮ ಬಿಸಿನೆಸ್ ಲೈಸೆನ್ಸ್, ಕಳೆದ ಆರು ತಿಂಗಳ ಕಂಪನಿಯ ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಇನ್ಕಮ್ ಟ್ಯಾಕ್ಸ್ ರಿಟರ್ನ್‌ನ ಸ್ಟೇಟ್‌ಮೆಂಟ್‌ಗಳನ್ನು ಸಲ್ಲಿಸಬೇಕು.

ಷೆಂಗೆನ್ ದೇಶಗಳಿಗಾಗಿ ಟ್ರಾವೆಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಟ್ರಿಪ್ ಕ್ಯಾನ್ಸಲ್ ಆದರೆ ನಾನು ಕವರ್ ಆಗುತ್ತೇನೆಯೇ?

ಪ್ರೀ-ಬುಕ್ಡ್, ನಾನ್ ರಿಫಂಡೆಬಲ್ ವೆಚ್ಚಗಳು ಮತ್ತು ನಿಮ್ಮ ಟ್ರಾವೆಲ್‌ನ ತುರ್ತು ತ್ಯಜಿಸುವಿಕೆಯನ್ನು ನಾವು ಕವರ್ ಮಾಡುತ್ತೇವೆ. ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಅಥವಾ ಹೆಲ್ತ್ ಕಂಡೀಶನ್‌ಗಳಿಂದಾಗಿ ಟ್ರಾವೆಲ್ ತ್ಯಜಿಸುವುದು ಮತ್ತು ವೀಸಾ ರಿಜೆಕ್ಷನ್‌ನಿಂದಾಗಿ ಟ್ರಿಪ್ ಕ್ಯಾನ್ಸಲ್ ಆಗುವುದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸಿನ ವೆಚ್ಚವನ್ನು ಯಾವ ಅಂಶಗಳು ನಿರ್ಧರಿಸುತ್ತವೆ?

ಷೆಂಗೆನ್ ಟ್ರಾವೆಲ್ ಇನ್ಸೂರೆನ್ಸಿಗೆ ಪಾವತಿಸಬೇಕಾದ ಪ್ರೀಮಿಯಂ ನಿಮ್ಮ ವಯಸ್ಸು, ಟ್ರಾವೆಲ್‌ನ ಅವಧಿ, ಹೆಲ್ತ್ ರಿಸ್ಕ್‌ಗಳು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ತೊಂದರೆ-ಮುಕ್ತ ಟ್ರಾವೆಲ್ ಅನ್ನು ಖಚಿತಪಡಿಸಿಕೊಳ್ಳಲು ಆ್ಯಡ್-ಆನ್ ಕವರ್‌ಗಳನ್ನು ಪಡೆಯುವುದು ನೀವು ಪಾವತಿಸಬೇಕಾದ ಪ್ರೀಮಿಯಂ ಮೇಲೆ ಸಹ ಪರಿಣಾಮ ಬೀರಬಹುದು.

ವಿವಿಧ ರೀತಿಯ ಷೆಂಗೆನ್ ವೀಸಾಗಳು ಯಾವುವು?

  • ನಿಮ್ಮ ಟ್ರಾವೆಲ್‌ನ ಉದ್ದೇಶವನ್ನು ಅವಲಂಬಿಸಿ ನೀವು ಇವುಗಳಿಗಾಗಿ ಅಪ್ಲೈ ಮಾಡಬಹುದು:
    • ಯೂನಿಫಾರ್ಮ್ ಷೆಂಗೆನ್ ವೀಸಾ- ಟೈಪ್ ಎ ಅಥವಾ ಟೈಪ್ ಸಿ. ಟೈಪ್ ಸಿ ಅಡಿಯಲ್ಲಿ ನೀವು ಸಿಂಗಲ್-ಎಂಟ್ರಿ ವೀಸಾ, ಡಬಲ್-ಎಂಟ್ರಿ ವೀಸಾ ಮತ್ತು ಮಲ್ಟಿಪಲ್-ಎಂಟ್ರಿ ವೀಸಾವನ್ನು ಪಡೆಯುತ್ತೀರಿ.
    • ನ್ಯಾಷನಲ್ ಷೆಂಗೆನ್ ವೀಸಾ
    • ಸೀಮಿತ ಪ್ರಾದೇಶಿಕ ವ್ಯಾಲಿಡಿಟಿ ವೀಸಾಗಳು

ಷೆಂಗೆನ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳೇನು?

ಟ್ರಾವೆಲ್ ಇನ್ಶೂರೆನ್ಸ್ ಎನ್ನುವುದು ವಿದೇಶಿ ಗಡಿಗಳಲ್ಲಿ ಸಹಾಯ ಮಾಡುವ ವಿಶ್ವಾಸಾರ್ಹ ಮೂಲವಾಗಿದೆ. ಇದು ವೈದ್ಯಕೀಯ ಸಹಾಯವನ್ನು ನೀಡುತ್ತದೆ ಮತ್ತು ಈ ಪಾಲಿಸಿಯು ಫ್ಲೈಟ್ ಕ್ಯಾನ್ಸಲೇಶನ್ ವೆಚ್ಚಗಳು, ಫ್ಲೈಟ್‌ಗಳ ಡಿಲೇ, ಬ್ಯಾಗೇಜ್/ಪಾಸ್‌ಪೋರ್ಟ್ ನಷ್ಟ ಇತ್ಯಾದಿ ಅನೇಕ ಪ್ರಯೋಜನಗಳನ್ನು ಕವರ್ ಮಾಡುತ್ತದೆ.