ಕಾರ್ಪೊರೇಟ್ ವೃತ್ತಿಪರರಿಗೆ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್

Zero Paperwork. Quick Process.

ನೀವು ಈಗಾಗಲೇ ನಿಮ್ಮ ಉದ್ಯೋಗದಾತರಿಂದ ಕವರ್ ಆಗಿರುವಾಗ ಮತ್ತೇಕೆ ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಬೇಕು?

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಡಿಜಿಟ್‌ನೊಂದಿಗೆ ಅಗ್ರಸ್ಥಾನದಲ್ಲಿ ಇರಿಸುವಲ್ಲಿ ಯಾವ ಅಂಶಗಳು ಉತ್ತಮವಾಗಿದೆ?

ಸಾಂಕ್ರಾಮಿಕ ರೋಗಗಳನ್ನು ಕವರ್ ಮಾಡುತ್ತದೆ : ಕೋವಿಡ್-19 ನಮ್ಮ ಜೀವನದಲ್ಲಿ ಸಾಕಷ್ಟು ಅನಿಶ್ಚಿತತೆಯನ್ನು ತಂದಿತು ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇತರ ಕಾಯಿಲೆಗಳ ಹೊರತಾಗಿ, ಇದು ಸಾಂಕ್ರಾಮಿಕವಾಗಿದ್ದರೂ ಸಹ, ಈ ಯೋಜನೆಯು ಕೋವಿಡ್-19 ಅನ್ನು ಸಹ ಕವರ್ ಮಾಡುತ್ತದೆ.

ಒಂದು ಸೂಪರ್ ಟಾಪ್-ಅಪ್ ಯೋಜನೆಯನ್ನು ಡಿಜಿಟ್ ನೀಡುತ್ತದೆ : ಪಾಲಿಸಿ ವರ್ಷದಲ್ಲಿ ಒಂದೇ ಕ್ಲೈಮ್, ಡಿಡಕ್ಟಿಬಲ್ ಮೊತ್ತವನ್ನು ಮೀರಿದಾಗ ಮಾತ್ರ ನಿಮ್ಮನ್ನು ಕವರ್ ಮಾಡುವ ಇತರ ಸ್ಟ್ಯಾಂಡರ್ಡ್ ಟಾಪ್-ಅಪ್ ಯೋಜನೆಗಿಂತ ವಿಭಿನ್ನವಾಗಿ, ಸೂಪರ್-ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು, ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕ್ಲೈಮ್‌ಗಳು ಡಿಡಕ್ಟಿಬಲ್ ಮೊತ್ತವನ್ನು ಮೀರಿದಾಲೂ ಸಹ ಆ ವೆಚ್ಚವನ್ನು ಭರಿಸುತ್ತದೆ.

ಹೆಲ್ತ್ ಕೇರ್ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಸೂಪರ್ ಟಾಪ್-ಅಪ್ ಪಾಲಿಸಿಯನ್ನು ಕಸ್ಟಮೈಸ್ ಮಾಡಿ : ನೀವು 1, 2, 3 ಮತ್ತು 5 ಲಕ್ಷಗಳ ಕಡಿತಗಳಿಂದ ಆಯ್ಕೆ ಮಾಡಬಹುದು ಮತ್ತು ನಿಮ್ಮ ಇನ್ಶೂರೆನ್ಸ್ ಮೊತ್ತವಾಗಿ ₹10 ಲಕ್ಷದಿಂದ 20 ಲಕ್ಷಗಳ ನಡುವೆ ಆಯ್ಕೆ ಮಾಡಬಹುದು.

ಕೊಠಡಿ ಬಾಡಿಗೆಗೆ ಯಾವುದೇ ನಿರ್ಬಂಧವಿಲ್ಲ : ಪ್ರತಿಯೊಬ್ಬರೂ ವಿಭಿನ್ನ ಆದ್ಯತೆಗಳನ್ನು ಹೊಂದಿದ್ದಾರೆ ಮತ್ತು ನಾವದನ್ನು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ, ನಾವು ಯಾವುದೇ ಕೊಠಡಿ ಬಾಡಿಗೆ ನಿರ್ಬಂಧಗಳನ್ನು ಹೊಂದಿಲ್ಲ! ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ಕೊಠಡಿಯನ್ನು ಆಯ್ಕೆ ಮಾಡಿಕೊಳ್ಳಿ.

ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ : ಕ್ಯಾಶ್‌ಲೆಸ್ ಕ್ಲೈಮ್‌ಗಳಿಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದನ್ನು ಆಯ್ಕೆಮಾಡಿ ಅಥವಾ ನೀವು ರಿಇಂಬರ್ಸ್‌ಮೆಂಟ್‌ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು.

ಸುಲಭವಾದ ಆನ್‌ಲೈನ್ ಪ್ರಕ್ರಿಯೆಗಳು : ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ನೀವು ಕ್ಲೈಮ್ ಮಾಡುವವರೆಗಿನ ಎಲ್ಲಾ ಪ್ರಕ್ರಿಯೆಗಳು ಕಾಗದರಹಿತ, ಸುಲಭ, ತ್ವರಿತ ಮತ್ತು ತೊಂದರೆ ಮುಕ್ತವಾಗಿರುತ್ತವೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ!

ಒಂದು ಉದಾಹರಣೆಯೊಂದಿಗೆ ಸೂಪರ್ ಟಾಪ್-ಅಪ್ ಅನ್ನು ಅರ್ಥಮಾಡಿಕೊಳ್ಳಿ

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ (ಡಿಜಿಟ್ ಹೆಲ್ತ್ ಕೇರ್ ಪ್ಲಸ್) ಇತರೆ ಟಾಪ್-ಅಪ್ ಯೋಜನೆಗಳು
ಆಯ್ಕೆ ಮಾಡಿದ ಡಿಡಕ್ಟಿಬಲ್ 2 ಲಕ್ಷಗಳು 2 ಲಕ್ಷಗಳು
ಆಯ್ಕೆ ಮಾಡಿದ ಇನ್ಶೂರೆನ್ಸ್ ಮೊತ್ತ 10 ಲಕ್ಷಗಳು 10 ಲಕ್ಷಗಳು
ವರ್ಷದ 1ನೇ ಕ್ಲೈಮ್ 4 ಲಕ್ಷಗಳು 4 ಲಕ್ಷಗಳು
ನೀವು ಪಾವತಿಸುವುದು 2 ಲಕ್ಷಗಳು 2 ಲಕ್ಷಗಳು
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು 2 ಲಕ್ಷಗಳು 2 ಲಕ್ಷಗಳು
ವರ್ಷದ 2ನೇ ಕ್ಲೈಮ್ 6 ಲಕ್ಷಗಳು 6 ಲಕ್ಷಗಳು
ನೀವು ಪಾವತಿಸುವುದು ಏನನ್ನೂ ಪಾವತಿಸುವುದಿಲ್ಲ! 😊 2 ಲಕ್ಷಗಳು (ಆಯ್ಕೆ ಮಾಡಿದ ಡಿಡಕ್ಟಿಬಲ್)
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು 6 ಲಕ್ಷಗಳು 4 ಲಕ್ಷಗಳು
ವರ್ಷದ 3ನೇ ಕ್ಲೈಮ್ 1 ಲಕ್ಷ 1 ಲಕ್ಷ
ನೀವು ಪಾವತಿಸುವುದು ಏನನ್ನೂ ಪಾವತಿಸುವುದಿಲ್ಲ! 😊 1 ಲಕ್ಷ
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುವುದು 1 ಲಕ್ಷ ಏನನ್ನೂ ಪಾವತಿಸುವುದಿಲ್ಲ ☹

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಪ್ರಯೋಜನಗಳು

ಸೂಪರ್ ಟಾಪ್-ಅಪ್

ಇದು ಡಿಡಕ್ಟಿಬಲ್ ಮೊತ್ತವನ್ನು ಮೀರಿದ ನಂತರ ಒಂದು ಪಾಲಿಸಿ ವರ್ಷದೊಳಗೆ ಸಂಚಿತ ವೈದ್ಯಕೀಯ ವೆಚ್ಚಗಳಿಗೆ ಕ್ಲೈಮ್‌ಗಳನ್ನು ಪಾವತಿಸುತ್ತದೆ. ಮತ್ತು ರೆಗ್ಯುಲರ್ ಟಾಪ್-ಅಪ್ ಇನ್ಶೂರೆನ್ಸ್ ಪಾಲಿಸಿಯ ಮಿತಿಗಿಂತ ಹೆಚ್ಚಿನ ಒಂದೇ ಕ್ಲೈಮ್ ಅನ್ನು ಮಾತ್ರ ಕವರ್ ಮಾಡುತ್ತದೆ.

ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ- ಡಿಜಿಟ್ ವಿಶೇಷ

ಎಲ್ಲಾ ಹಾಸ್ಪಿಟಲೈಸೇಷನ್

ಇದು ಅನಾರೋಗ್ಯ, ಅಪಘಾತ ಅಥವಾ ತೀವ್ರ ಅನಾರೋಗ್ಯದ ಚಿಕಿತ್ಸಾ ವೆಚ್ಚಗಳನ್ನು ಕವರ್ ಮಾಡುತ್ತದೆ. ನಿಮ್ಮ ಡಿಡಕ್ಟಿಬಲ್ ಮಿತಿಯನ್ನು ದಾಟಿದ ನಂತರ, ಒಟ್ಟು ವೆಚ್ಚಗಳು ನಿಮ್ಮ ಇನ್ಶೂರೆನ್ಸ್ ಮೊತ್ತದವರೆಗೆ ಇರುವವರೆಗೆ, ಅನೇಕ ಚಿಕಿತ್ಸೆಗಳನ್ನು ಕವರ್ ಮಾಡಲು ಇದನ್ನು ಬಳಸಬಹುದು.

ಡೇಕೇರ್ ಪ್ರಕ್ರಿಯೆಗಳು

ಹೆಲ್ತ್ ಇನ್ಶೂರೆನ್ಸ್, 24 ಗಂಟೆಗಳನ್ನು ಮೀರುವ ಚಿಕಿತ್ಸೆಗಳಿಗೆ ಮಾತ್ರ ಮೆಡಿಕಲ್ ವೆಚ್ಚವನ್ನು ಕವರ್ ಮಾಡುತ್ತದೆ. ಡೇಕೇರ್ ಪ್ರಕ್ರಿಯೆಗಳು ಎನ್ನುವುದು ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಳನ್ನು ಸೂಚಿಸುತ್ತವೆ. ತಂತ್ರಜ್ಞಾನದ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಸಮಯ ಬೇಕಾಗುತ್ತದೆ.

ಮೊದಲೇ ಅಸ್ತಿತ್ವದಲ್ಲಿರುವ/ನಿರ್ದಿಷ್ಟ ಅನಾರೋಗ್ಯದ ವೇಟಿಂಗ್ ಪೀರಿಯಡ್

ನೀವು ಮೊದಲೇ ಅಸ್ತಿತ್ವದಲ್ಲಿರುವ ಅಥವಾ ನಿರ್ದಿಷ್ಟವಾದ ಅನಾರೋಗ್ಯಕ್ಕೆ ಕ್ಲೈಮ್ ಪಡೆಯುವವರೆಗೆ ನೀವು ಕಾಯಬೇಕಾದ ಸಮಯ ಇದಾಗಿದೆ.

4 ವರ್ಷಗಳು / 2 ವರ್ಷಗಳು

ರೂಮ್ ರೆಂಟ್ ಕ್ಯಾಪಿಂಗ್

ವಿವಿಧ ವರ್ಗದ ಕೊಠಡಿಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿವೆ. ಹೋಟೆಲ್ ಕೊಠಡಿಗಳು ಹೇಗೆ ವಿಭಿನ್ನ ದರವನ್ನು ಹೊಂದಿರುತ್ತವೆಯೋ ಹಾಗೆ. ಡಿಜಿಟ್‌ನಲ್ಲಿ, ಕೊಠಡಿ ಬಾಡಿಗೆ ಮಿತಿಯು ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆ ಇರುವವರೆಗೆ ಯಾವುದೇ ರೂಮ್ ರೆಂಟ್ ಕ್ಯಾಪಿಂಗ್ ಹೊಂದಿರದ ಪ್ರಯೋಜನವನ್ನು ಕೆಲವು ಪಾಲಿಸಿಗಳು ನೀಡುತ್ತವೆ.

ನೋ ರೂಮ್ ರೆಂಟ್ ಕ್ಯಾಪಿಂಗ್ - ಡಿಜಿಟ್ ವಿಶೇಷ

ಐಸಿಯು ಕೊಠಡಿ ಬಾಡಿಗೆ

ಐಸಿಯು (ತೀವ್ರ ನಿಗಾ ಘಟಕಗಳು) ಗಂಭೀರ ರೋಗಿಗಳಿಗೆ ಮೀಸಲಾಗಿದೆ. ಐಸಿಯುಗಳಲ್ಲಿ ಆರೈಕೆಯ ಮಟ್ಟವು ಹೆಚ್ಚಾಗಿರುತ್ತದೆ, ಅದಕ್ಕಾಗಿಯೇ ಬಾಡಿಗೆಯೂ ಹೆಚ್ಚು. ಬಾಡಿಗೆಯು ನಿಮ್ಮ ಸಮ್ ಇನ್ಶೂರ್ಡ್ ಗಿಂತ ಕಡಿಮೆ ಇರುವವರೆಗೆ, ಡಿಜಿಟ್ ನಿಮಗೆ ಯಾವುದೇ ಮಿತಿಯನ್ನು ಹಾಕುವುದಿಲ್ಲ.

ಮಿತಿ ಇಲ್ಲ

ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳು

ಆಂಬ್ಯುಲೆನ್ಸ್ ಸೇವೆಗಳು ಅತ್ಯಂತ ಅವಶ್ಯಕವಾದ ವೈದ್ಯಕೀಯ ಸೇವೆಗಳಲ್ಲಿ ಒಂದಾಗಿದೆ. ಏಕೆಂದರೆ ಅವು ಕೇವಲ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವುದಷ್ಟೇ ಅಲ್ಲದೇ ಅದರೊಂದಿಗೆ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಅದರ ವೆಚ್ಚವನ್ನು ಈ ಸೂಪರ್ ಟಾಪ್-ಅಪ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.

ಕಾಂಪ್ಲಿಮೆಂಟರಿ ವಾರ್ಷಿಕ ಹೆಲ್ತ್ ಚೆಕಪ್

ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನೀವು ತಿಳಿದಿರುವುದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ವಾರ್ಷಿಕ ಹೆಲ್ತ್ ಚೆಕಪ್‌ಗಳು ತುಂಬಾ ಮುಖ್ಯವಾಗಿವೆ. ಇದು ನವೀಕರಣ ಪ್ರಯೋಜನವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ವಾರ್ಷಿಕ ವೈದ್ಯಕೀಯ ಪರೀಕ್ಷೆಗಳು ಮತ್ತು ಹೆಲ್ತ್ ಚೆಕಪ್‌ಗಳಿಗೆ ನಿಮ್ಮ ಖರ್ಚುಗಳನ್ನು ರಿಇಂಬರ್ಸ್‌ಮೆಂಟ್‌ಸಲು ನಿಮಗೆ ಅನುಮತಿಸುತ್ತದೆ.

ಹಾಸ್ಪಿಟಲೈಸೇಷನ್ ಪೂರ್ವ/ನಂತರ

ಡಯಾಗ್ನೋಸಿಸ್, ಪರೀಕ್ಷೆಗಳು ಮತ್ತು ಚೇತರಿಕೆಯಾಗುವಂತಹ ಹಾಸ್ಪಿಟಲೈಸೇಷನ್ ಪೂರ್ವ/ನಂತರದ ಎಲ್ಲಾ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ.

ಹಾಸ್ಪಿಟಲೈಸೇಷನ್ ನಂತರದ ಒಟ್ಟು ಮೊತ್ತ - ಡಿಜಿಟ್ ವಿಶೇಷ

ಆಸ್ಪತ್ರೆಗೆ ದಾಖಲಾದ ನಂತರ, ಡಿಸ್ಚಾರ್ಜ್ ಆಗುವ ಸಮಯದಲ್ಲಿ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ನೀವು ಬಳಸಬಹುದಾದ ಪ್ರಯೋಜನ ಇದಾಗಿದೆ. ಯಾವುದೇ ಬಿಲ್‌ಗಳ ಅಗತ್ಯವಿಲ್ಲ. ರಿಇಂಬರ್ಸ್ ಮೆಂಟ್ ಪ್ರಕ್ರಿಯೆಯ ಮೂಲಕ ನೀವು, ಈ ಪ್ರಯೋಜನವನ್ನು ಬಳಸಲು ಅಥವಾ ಪ್ರಮಾಣಿತ ಹಾಸ್ಪಿಟಲೈಸೇಷನ್ ನಂತರದ ಪ್ರಯೋಜನವನ್ನು ಬಳಸಲು ಆಯ್ಕೆ ಮಾಡಬಹುದು.

ಸೈಕ್ರಿಯಾಟ್ರಿಕ್ ಇಲ್ ನೆಸ್ ಕವರ್

ಆಘಾತದ ಕಾರಣ, ವ್ಯಕ್ತಿಯೊಬ್ಬರನ್ನು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾದರೆ, ಅದು ಈ ಪ್ರಯೋಜನದ ಅಡಿಯಲ್ಲಿ ಕವರ್ ಆಗುತ್ತದೆ. ಆದಾಗ್ಯೂ, ಒಪಿಡಿ ಸಮಾಲೋಚನೆಗಳು ಇದರ ಅಡಿಯಲ್ಲಿ ಕವರ್ ಆಗುವುದಿಲ್ಲ.

ಬ್ಯಾರಿಯಾಟ್ರಿಕ್ ಸರ್ಜರಿ

ಸ್ಥೂಲಕಾಯತೆ (BMI > 35) ಕಾರಣದಿಂದಾಗಿ ಅಂಗಾಂಗ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಕವರೇಜ್ ಇದೆ. ಆದಾಗ್ಯೂ, ಸ್ಥೂಲಕಾಯತೆಯು ತಿನ್ನುವ ಅಸ್ವಸ್ಥತೆಗಳು, ಹಾರ್ಮೋನುಗಳು ಅಥವಾ ಯಾವುದೇ ಇತರ ಚಿಕಿತ್ಸೆಗೊಳಪಡುವ ಪರಿಸ್ಥಿತಿಗಳಿಂದಾಗಿ ಬಂದಿದ್ದರೆ, ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡಲಾಗುವುದಿಲ್ಲ.

Get Quote

ಏನೆಲ್ಲಾ ಕವರ್ ಮಾಡುವುದಿಲ್ಲ?

ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ನೀವು ಖಾಲಿ ಮಾಡುವವರೆಗೆ ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲ

ಅಸ್ತಿತ್ವದಲ್ಲಿರುವ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಕ್ಲೈಮ್ ಮೊತ್ತವನ್ನು ನೀವು ಈಗಾಗಲೇ ಮುಗಿಸಿದ್ದರೆ ಆಗಷ್ಟೇ ನೀವು ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಮಾಡಬಹುದು. ಅಥವಾ ನೀವು ಈಗಾಗಲೇ ನಿಮ್ಮ ಜೇಬಿನಿಂದ ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಖರ್ಚು ಮಾಡಿದ್ದರೆ, ಆಗ ಮಾತ್ರ ನಿಮ್ಮ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಕ್ಲೈಮ್ ಮಾಡಬಹುದು. ಹಾಗಿದ್ದರೂ, ಖುಷಿಯ ವಿಷಯವೇನೆಂದರೆ, ನೀವು ಒಮ್ಮೆ ಮಾತ್ರ ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಪಾವತಿಸುತ್ತೀರಿ.

ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು

ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯ ಸಂದರ್ಭದಲ್ಲಿ, ವೇಟಿಂಗ್ ಪೀರಿಯಡ್ ಮುಗಿಯದ ಹೊರತು, ಆ ಕಾಯಿಲೆ ಅಥವಾ ಅನಾರೋಗ್ಯದ ಬಗ್ಗೆ ಕ್ಲೈಮ್ ಮಾಡಲು ಸಾಧ್ಯವಿಲ್ಲ.

ವೈದ್ಯರ ಶಿಫಾರಸು ಇಲ್ಲದೆ ಆಸ್ಪತ್ರೆಗೆ ದಾಖಲು

ನೀವು ಆಸ್ಪತ್ರೆಗೆ ದಾಖಲಾದ ಯಾವುದೇ ಸ್ಥಿತಿಯು, ವೈದ್ಯರ ಪ್ರಿಸ್ಕ್ರಿಪ್ಷನ್‌ಗೆ ಹೊಂದಿಕೆಯಾಗದೇ ಇದ್ದರೆ, ಅದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಪ್ರೀ-ನೇಟಲ್ ಮತ್ತು ಪೋಸ್ಟ್ ನೇಟಲ್ ವೆಚ್ಚಗಳು

ಆಸ್ಪತ್ರೆಗೆ ದಾಖಲಾಗದ ಹೊರತು, ಪ್ರೀ-ನೇಟಲ್ ಮತ್ತು ಪೋಸ್ಟ್ ನೇಟಲ್ ಮೆಡಿಕಲ್ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಕ್ಲೈಮ್ ಸಲ್ಲಿಸುವುದು ಹೇಗೆ?

ರಿಇಂಬರ್ಸ್‌ಮೆಂಟ್‌ ಕ್ಲೈಮ್‌ಗಳು - ಆಸ್ಪತ್ರೆಗೆ ದಾಖಲಾದ ಎರಡು ದಿನಗಳಲ್ಲಿ 1800-258-4242 ಸಂಖ್ಯೆಗೆ ಕರೆ ಮಾಡಿ ನಮಗೆ ವಿಷಯ ತಿಳಿಸಿ ಅಥವಾ healthclaims@godigit.com ಗೆ ಇಮೇಲ್ ಮಾಡಿ ನಮಗೆ ಮಾಹಿತಿ ನೀಡಿ. ನಾವು ನಿಮಗೊಂದು ಲಿಂಕ್ ಕಳುಹಿಸುತ್ತೇವೆ. ಆ ಲಿಂಕ್‌ನಲ್ಲಿ ನಿಮ್ಮ ಆಸ್ಪತ್ರೆಯ ಬಿಲ್‌ಗಳನ್ನು ಹಾಗೂ ಸಂಬಂಧಿತ ಎಲ್ಲ ಡಾಕ್ಯುಮೆಂಟುಗಳನ್ನು ರಿಇಂಬರ್ಸ್‌ಮೆಂಟ್‌ ಪ್ರಕ್ರಿಯೆಗಾಗಿ ನೀವು ಅಪ್‌ಲೋಡ್ ಮಾಡಬಹುದು. 

ಕ್ಯಾಶ್‌ಲೆಸ್ ಕ್ಲೈಮ್‌ಗಳು - ನೆಟ್‌ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ನೆಟ್‌ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿಯನ್ನು ನೀವಿಲ್ಲಿ ಕಾಣಬಹುದು. ಆಸ್ಪತ್ರೆಯ ಹೆಲ್ಪ್‌ಡೆಸ್ಕಿಗೆ ಇ-ಹೆಲ್ತ್ ಕಾರ್ಡ್ ಅನ್ನು ತೋರಿಸಿ ಮತ್ತು ಕ್ಯಾಶ್‌ಲೆಸ್ ರಿಕ್ವೆಸ್ಟ್ ಫಾರ್ಮ್ ಅನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅನ್ನು ಆಗಲೇ ಮತ್ತು ಅಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.

ನೀವು ಕೊರೋನಾವೈರಸ್‌ಗಾಗಿ ಕ್ಲೈಮ್ ಮಾಡಿದ್ದರೆ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ - ಐಸಿಎಂಆರ್‌ನ ಅಧಿಕೃತ ಕೇಂದ್ರದಿಂದ ನೀವು ಪಾಸಿಟಿವ್ ರಿಪೋರ್ಟ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಲು ನಾನು ಕಾರ್ಪೊರೇಟ್ ಯೋಜನೆಯನ್ನು ಹೊಂದಬೇಕೇ?

ಇಲ್ಲ, ನೀವು ಕಾರ್ಪೊರೇಟ್ ಯೋಜನೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಬಹುದು.

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್‌ನಲ್ಲಿ ಪ್ರಯೋಜನಗಳು ಯಾವುವು?

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಪ್ರಮುಖ ಪ್ರಯೋಜನವೆಂದರೆ ಅದು ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್‌ಗಿಂತ ತುಲನಾತ್ಮಕವಾಗಿ ಅಗ್ಗವಾಗಿದೆ. ಎರಡನೆಯದಾಗಿ, ಇದು ಹೆಚ್ಚಿನ ಸಮ್ ಇನ್ಶೂರ್ಡ್, ಟ್ಯಾಕ್ಸ್ ಉಳಿತಾಯ, ಮುಂತಾದ ಇತರ ಅನೇಕ ಪ್ರಯೋಜನಗಳೊಂದಿಗೆ ಬರುತ್ತದೆ. 

ಕೆಲಸದ ಮಾಡುವ ಕಂಪನಿಯವರು ತಮ್ಮ ಉದ್ಯೋಗಿಗಳಿಗೆ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಒದಗಿಸುತ್ತಾರೆಯೇ?

ಇಲ್ಲ, ಕಂಪನಿಯವರು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಒದಗಿಸುವುದಿಲ್ಲ. ನಿಮಗಾಗಿ ಮತ್ತು/ಅಥವಾ ನಿಮ್ಮ ಕುಟುಂಬಕ್ಕಾಗಿ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ನೀವೇ ಖರೀದಿಸಬಹುದು.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನ ಮಿತಿಗಳು ಯಾವುವು?

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್‌ನ ಏಕೈಕ ಮಿತಿಯೆಂದರೆ, ನಿಮ್ಮ ಆರೋಗ್ಯ ವೆಚ್ಚಗಳು ನಿರ್ಧರಿಸಿದ ಡಿಡಕ್ಟಿಬಲ್ ಮೊತ್ತವನ್ನು ಮೀರಿದರೆ ಮಾತ್ರ ಅದು ನಿಮಗೆ ರಕ್ಷಣೆ ನೀಡುತ್ತದೆ.