ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಹೇಗೆ ಲೆಕ್ಕ ಹಾಕುವುದು ಎಂಬುದರ ಕುರಿತು ನೀವೀಗ ಕಲಿತಿದ್ದೀರಿ. ಈಗ ನಿಮ್ಮ ಪಾವತಿ ಹೊಣೆಗಾರಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನೋಡೋಣ -
1. ಮಾರ್ಕೆಟಿಂಗ್ ಮತ್ತು ಆಡಳಿತಕ್ಕೆ ತಗಲುವ ವೆಚ್ಚಗಳು
ಇನ್ಶೂರೆನ್ಸ್ ಕಂಪನಿಗಳು ತಮ್ಮ ಉತ್ಪನ್ನಗಳ ನಿರ್ವಹಣೆ ಮತ್ತು ಮಾರಾಟದ ಅಡಿಯಲ್ಲಿ ಭಾರಿ ವೆಚ್ಚವನ್ನು ಭರಿಸುತ್ತವೆ. ಈ ವೆಚ್ಚಗಳು ಪಾಲಿಸಿದಾರರಿಗೆ ಹಿಂತಿರುಗುತ್ತವೆ ಮತ್ತು ಅವರ ಪ್ರೀಮಿಯಂ ಪಾವತಿಗಳ ಮೇಲೆ ರಿಫ್ಲೆಕ್ಟ್ ಆಗುತ್ತದೆ.
2. ನೀವು ಆಯ್ಕೆ ಮಾಡಿಕೊಳ್ಳುವ ಯೋಜನೆಯ ಪ್ರಕಾರ
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ನಿಮ್ಮ ಪ್ರೀಮಿಯಂ ಪಾವತಿಯು, ನೀವು ಪಡೆಯಲು ಆಯ್ಕೆ ಮಾಡಿಕೊಳ್ಳುವ ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ.
ಉದಾಹರಣೆಗೆ, ವೈಯುಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು, ಫ್ಯಾಮಿಲಿ ಫ್ಲೋಟರ್ ಯೋಜನೆಗಳಿಗಿಂತ ಹೆಚ್ಚು ದುಬಾರಿಯಾಗಿವೆ ಮತ್ತು ಮೊದಲಿನ ಪ್ರೀಮಿಯಂ ಪಾವತಿಗಳಲ್ಲಿ ನೀವು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:
3. ಸಹ-ಪಾವತಿಯ ಷರತ್ತುಗಳು ಮತ್ತು ಡಿಡಕ್ಟಿಬಲ್ಸ್
ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಖಡ್ಡಾಯ ಅಥವಾ ಸ್ವಯಂಪ್ರೇರಿತ ಸಹ-ಪಾವತಿ ಮತ್ತು ಡಿಡಕ್ಟಿಬಲ್ಸ್ ಷರತ್ತುಗಳೊಂದಿಗೆ ಬರುತ್ತವೆ. ಡಿಡಕ್ಟಿಬಲ್ಸ್'ಗಳೊಂದಿಗೆ, ಪಾಲಿಸಿದಾರರು ತಮ್ಮ ಇನ್ಶೂರೆನ್ಸ್ ಪಾಲಿಸಿಯು ಪ್ರಾರಂಭವಾಗುವ ಮೊದಲು, ಚಿಕಿತ್ಸಾ ವೆಚ್ಚದ ಒಂದು ಭಾಗವನ್ನು ಭರಿಸಬೇಕು.
ಸಹ-ಪಾವತಿ ಷರತ್ತಿನೊಂದಿಗೆ, ನೀವು ಒಟ್ಟು ಚಿಕಿತ್ಸಾ ವೆಚ್ಚದ ಶೇಕಡಾವಾರು ಮೊತ್ತವನ್ನು ಕವರ್ ಮಾಡಬೇಕು. ಉಳಿದ ಶೇಕಡಾವಾರು ಭಾಗವನ್ನು, ಇನ್ಶೂರೆನ್ಸ್ ಪೂರೈಕೆದಾರರು ಕವರ್ ಮಾಡುತ್ತಾರೆ. ಆದರೆ ಸಹ-ಪಾವತಿ ಮತ್ತು ಡಿಡಕ್ಟಿಬಲ್ಸ್'ಗಳೊಂದಿಗೆ, ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಪಾವತಿಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಹೀಗಾಗಿ, ಇವು ನಿಮ್ಮ ಪಾಲಿಸಿ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳಾಗಿವೆ.
ಕೋ-ಪೇ, ಕೋ-ಇನ್ಶೂರೆನ್ಸ್, ಮತ್ತು ಡಿಡಕ್ಟಿಬಲ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ
4. ಆಡ್-ಆನ್ ಕವರ್ಗಳು
ಪ್ರೀಮಿಯಂ ಮೊತ್ತವನ್ನು ಲೆಕ್ಕಾಚಾರ ಮಾಡಲು, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ನಲ್ಲಿ ನೀವು ಒದಗಿಸಬೇಕಾದ ಪ್ಯಾರಾಮೀಟರ್ಗಳಲ್ಲಿ ಆಡ್-ಆನ್ ಕವರ್ಗಳು ಸಹ ಒಂದಾಗಿವೆ.
ಏಕೆಂದರೆ, ನೀವು ಹೆಲ್ತ್ ಇನ್ಶೂರೆನ್ಸ್ ಯೋಜನೆಯಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಯೋಜನಗಳ ಮೇಲೆ ಆಡ್-ಆನ್ ಕವರ್ಗಳನ್ನು ಆರಿಸಿದಾಗ, ಪಾಲಿಸಿಗೆ ಸಂಬಂಧಿಸಿದ ನಿಮ್ಮ ಪ್ರೀಮಿಯಂ ಪಾವತಿಯು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ.
5. ಹೂಡಿಕೆ ಮತ್ತು ಉಳಿತಾಯ
ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ತಮ್ಮ ಬಂಡವಾಳವನ್ನು ವಿವಿಧ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಹೂಡಿಕೆಗಳು, ನಂತರದಲ್ಲಿ ಯಾವುದೇ ಅನುಸರಣೆಯ ಸಮಸ್ಯೆಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು IRDA ಯಿಂದ ಸೂಚಿಸಲ್ಪಟ್ಟ ಮಾರ್ಗಸೂಚಿಯನ್ನು ಅನುಸರಿಸುತ್ತವೆ.
ಇನ್ಶೂರೆನ್ಸ್ ಪಾಲಿಸಿಗಳಿಗೆ ನೀವು ಪಾವತಿಸಬೇಕಾದ ಪ್ರೀಮಿಯಂ, ಒಂದು ಹಂತದಲ್ಲಿ ಮಾರ್ಕೆಟ್ ಕ್ಯಾಪಿಟಲೈಸೇಷನ್ ಇಂದ ಇನ್ಶೂರೆನ್ಸ್ ಪೂರೈಕೆದಾರರು ಗಳಿಸಿದ ಲಾಭವನ್ನು ಅವಲಂಬಿಸಿರುತ್ತದೆ.
6. ಬ್ರೋಕರ್ ಮೂಲಕ ಇನ್ಶೂರೆನ್ಸ್ ಅನ್ನು ಖರೀದಿಸುವುದು
ಒಳ್ಳೆಯದು, ಇದು ನಿಮ್ಮ ಪ್ರೀಮಿಯಂ ಪಾವತಿಯನ್ನು ಹೆಚ್ಚಿಸದಿದ್ದರೂ ಸಹ, ಪಾಲಿಸಿಗಾಗಿ ನೀವು ಪಾವತಿಸುವ ಒಟ್ಟು ಮೊತ್ತವನ್ನು ಖಂಡಿತ ಹೆಚ್ಚಿಸುತ್ತದೆ. ಏಕೆಂದರೆ ಅವರು ಒದಗಿಸುವ ಸೇವೆಗಳಿಗೆ ಬ್ರೋಕರ್ ವಿಧಿಸುವ ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ.
7. ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆ ಕವರೇಜ್'ಗಾಗಿ
ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆಗಳನ್ನು ಕವರ್ ಮಾಡಲು ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುತ್ತಿದ್ದರೆ, ನಿಮಗೆ ಸಾಮಾನ್ಯವಾಗಿ ವೇಟಿಂಗ್ ಪಿರೀಡ್ ಅನ್ನು ಒದಗಿಸಲಾಗುತ್ತದೆ. ಅದರ ನಂತರ ನೀವು ಪಾಲಿಸಿಯ ಪ್ರಯೋಜನಗಳನ್ನು ಪಡೆಯಬಹುದು.
ಆದರೆ ಈ ವೈಟಿಂಗ್ ಪಿರೇಡಿನಲ್ಲಿ ಕೆಲಸ ಮಾಡಲು ಒಂದು ಮಾರ್ಗವಿದೆ - ಅದು ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ. ಹೀಗಾಗಿ, ನಿಮ್ಮ ಪ್ರೀಮಿಯಂನ ಪಾವತಿಯು, ನೀವು ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆ ಕವರ್ ಅನ್ನು ಪಡೆಯುತ್ತಿರುವಿರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
8. ಮರಣ ಪ್ರಮಾಣ
ಪ್ರೀಮಿಯಂ ಪಾವತಿಯು ಮರಣದ ದರವನ್ನು ಅವಲಂಬಿಸಿರುತ್ತದೆ. ಏಕೆಂದರೆ ಇದು ಯಾವುದೇ ಗ್ರಾಹಕನಿಗೆ, ಯಾವುದೇ ಘಟನೆಯ ಸಂದರ್ಭದಲ್ಲಿ ಇನ್ಶೂರೆನ್ಸ್ ಪೂರೈಕೆದಾರರು ಭರಿಸಬೇಕಾದ ವೆಚ್ಚವಾಗಿದೆ.
ಪರಿಣಾಮವಾಗಿ, ಪ್ರೀಮಿಯಂ ಪಾವತಿಯು ವಿವಿಧ ವಯೋಮಾನದವರಿಗೆ ಭಿನ್ನವಾಗಿರುತ್ತದೆ. ಇದು ಸಾಮಾನ್ಯವಾಗಿ ಹಿರಿಯ ಮತ್ತು ಅತಿ ಹಿರಿಯ ನಾಗರಿಕರಿಗೆ ಹೆಚ್ಚಾಗಿರುತ್ತದೆ.
9. ವೈದ್ಯಕೀಯ ಅಂಡರ್ರೈಟಿಂಗ್
ಪ್ರತಿಯೊಂದು ಇನ್ಶೂರೆನ್ಸ್ ಕಂಪನಿಗಳು ವೈಯಕ್ತಿಕ ಪಾಲಿಸಿಗಳು, ಗ್ರೂಪ್ ಇನ್ಶೂರೆನ್ಸ್ ಪಾಲಿಸಿಗಳು, ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳು ಮುಂತಾದ ಹಲವಾರು ರೀತಿಯ ಉತ್ಪನ್ನಗಳನ್ನು ನೀಡುತ್ತವೆ.
ಈ ಪಾಲಿಸಿಗಳಿಗೆ ಅಂಡರ್ರೈಟಿಂಗ್ಗಳನ್ನು ಎಷ್ಟೊಂದು ಸೊಗಸಾಗಿ ಮಾಡುತ್ತಾರೆ ಎಂದರೆ ಈ ಪ್ರತಿಯೊಂದು ಪಾಲಿಸಿಗಳಿಂದ ಅಪಾಯಗಳನ್ನು ಸಮತೋಲನಗೊಳಿಸಲಾಗುತ್ತದೆ ಮತ್ತು ಇನ್ಶೂರೆನ್ಸ್ ಪೂರೈಕೆದಾರರ ಹೊಣೆಗಾರಿಕೆಗಳನ್ನು ಮ್ಯಾನೇಜ್ ಮಾಡಲಾಗುತ್ತದೆ.
ಹೀಗಾಗಿ, ಇನ್ಶೂರೆನ್ಸ್ ಪಾಲಿಸಿಗಳ ಪ್ರೀಮಿಯಂಗಳು, ಒಬ್ಬ ವ್ಯಕ್ತಿಯ ವೈದ್ಯಕೀಯ ಮಾಹಿತಿಯ ಆಧಾರದ ಮೇಲೆ ಅವರು ಪಾಲಿಸಿದಾರರಾಗಿ ಎಷ್ಟು ಅಪಾಯಕಾರಿ (risky) ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
10. ಬೇಸ್ ರೇಟಿಂಗ್
ಇನ್ಶೂರೆನ್ಸ್ ಪೂರೈಕೆದಾರರು ಲಿಂಗ, ವಯಸ್ಸು, ಕುಟುಂಬದ ಗಾತ್ರ, ಭೌಗೋಳಿಕ ಪ್ರದೇಶ, ಅವರ ವೃತ್ತಿ ಇತ್ಯಾದಿಗಳಂತಹ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ನಿರ್ದಿಷ್ಟ ವ್ಯಕ್ತಿಗಳಿಗೆ ವಿಧಿಸುವ, ಮೂಲ ದರವನ್ನು ನಿಗದಿಪಡಿಸುವುದೇ ಈ ಬೇಸ್ ರೇಟ್.
ಉದಾಹರಣೆಗೆ, ಬೇಸ್ ರೇಟ್ ಅನ್ನು 40 ರಿಂದ 50 ವರ್ಷಗಳ ನಡುವಿನ ವಯಸ್ಸಿನ ವ್ಯಕ್ತಿಗಳು, 25-35 ವರ್ಷ ವಯಸ್ಸಿನವರಿಗಿಂತ ಹೆಚ್ಚಿನ ಪ್ರೀಮಿಯಂಗಳಲ್ಲಿ ಪಾವತಿಸುವಂತೆ ಹೊಂದಿಸಲಾಗಿದೆ.