ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್

ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಅಪಘಾತ, ಅನಾರೋಗ್ಯ ಹಾಗೂ ಕೋವಿಡ್ - 19 ಸಂಬಂಧಿತ ಆಸ್ಪತ್ರೆ ದಾಖಲಾತಿಗಳನ್ನು ಕವರ್ ಮಾಡುತ್ತದೆ.
Happy Couple Standing Beside Car
{{healthCtrl.residentPincodeError}}
Send OTP OTP Sent {{healthCtrl.mobileNumberError}}

I agree to the  Terms & Conditions

Port my existing Policy
{{healthCtrl.residentPincodeError}}
Send OTP OTP Sent {{healthCtrl.mobileNumberError}}
{{healthCtrl.otpError}}
Didn't receive SMS? Resend OTP

I agree to the  Terms & Conditions

Port my existing Policy

YOU CAN SELECT MORE THAN ONE MEMBER

{{healthCtrl.patentSelectErrorStatus}}

 • -{{familyMember.multipleCount}}+ Max {{healthCtrl.maxChildCount}} kids
  (s)

DONE
Renew your Digit policy instantly right
Loader

Analysing your health details

Please wait moment....

ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?

ಇಂಡಿವಿಜುವಲ್  ಹೆಲ್ತ್  ಇನ್ಶೂರೆನ್ಸ್, ಯುವ ವ್ಯಕ್ತಿಗಳಿಗಾಗಿ ಕಸ್ಟಮೈಜ್ ಮಾಡಲಾದ ಒಂದು ರೀತಿಯ ಹೆಲ್ತ್  ಇನ್ಶೂರೆನ್ಸ್ ಪಾಲಿಸಿ ಆಗಿದ್ದು, ಇದು ಅವರನ್ನು ಎಲ್ಲಾ ರೀತಿಯ ಅನಾರೋಗ್ಯ, ಆಸ್ಪತ್ರೆ ದಾಖಲಾತಿ, ಮಗು ಡೆಲಿವರಿಯ ವೆಚ್ಚಗಳಿಂದ ಹಾಗೂ ಅವರ ಜೀವನಕಾಲದಲ್ಲಿ ಆಗಬಹುದಾದ ದೊಡ್ಡ ಮತ್ತು ಸಣ್ಣ ಮಟ್ಟಿನ ಆರೋಗ್ಯ ಸ್ಥಿತಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಒಂದು ಇಂಡಿವಿಜುವಲ್  ಹೆಲ್ತ್  ಇನ್ಶೂರೆನ್ಸ್ ಅನ್ನು ವಿಶೇಷವಾಗಿ ಪರಿವಾರವಿಲ್ಲದ ಯುವಕರಿಗಾಗಿ ರಚಿಸಲ್ಪಟ್ಟಿದ್ದರೂ, ನೀವು ನಿಮ್ಮ ಮೇಲೆ ಅವಲಂಬಿತರಾಗಿರುವ ನಿಮ್ಮ ಹಿರಿಯ  ಹೆತ್ತವರನ್ನು, ಸಂಗಾತಿ ಹಾಗೂ ಮಕ್ಕಳನ್ನೂ ಕವರ್ ಮಾಡುವಂತೆ ನಿಮ್ಮ ಯೋಜನೆಯನ್ನು ಕಸ್ಟಮೈಜ್ ಮಾಡಬಹುದು.

ಇಂದಿನ ಕಾಲದಲ್ಲಿ, ಹೆಚ್ಚು ಹೆಚ್ಚು ಜನರು ಇಂಡಿವಿಜುವಲ್  ಹೆಲ್ತ್  ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುತ್ತಿದ್ದಾರೆ ಕಾರಣ, ಇದರ ವೈದ್ಯಕೀಯ ಲಾಭಗಳು ಹಾಗೂ ತೆರಿಗೆ ಲಾಭಗಳು ಕೂಡಾ!

ಏಕೆಂದರೆ ನೀವು ಎಷ್ಟೇ ಓಟ್ಸ್ ಅಥವಾ ಬ್ರೌನ್ ಬ್ರೆಡ್ ತಿಂದರೂ ನಿಮ್ಮ ಆರೋಗ್ಯ ಹಾಗೂ ಐಶ್ವರ್ಯವನ್ನು ಸಂಪೂರ್ಣವಾಗಿ ಸಂರಕ್ಷಿಸಲು ಸಾಧ್ಯವಿಲ್ಲ.

ಅತೀ ಮಹತ್ವಾಕಾಂಕ್ಷಿ, ಆದರೂ ಅತೀ ಒತ್ತಡದಿಂದ ಕೂಡಿದ ಪೀಳಿಗೆಗಾಗಿ. ಯಾವುದೇ ಒಪ್ಪಂದವಿಲ್ಲದೆಯೇ, ಜಗತ್ತನ್ನು ಗೆಲ್ಲಲು ಬಯಸುವವರಿಗೆ. ಅತಿಯಾದ ಆರೋಗ್ಯ ಪ್ರಜ್ಞೆ ಹೊಂದಿದ್ದು, ತನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡರ ಮೌಲ್ಯವನ್ನೂ ಅರಿತವರಿಗೆ. ಅನುಕೂಲ ಹಾಗೂ ಹಣದ ಪ್ರತಿ ಒಲವಿದ್ದು ಎಲ್ಲವೂ ಒಂದೇ ಕ್ಲಿಕ್ಕಿನಲ್ಲಿ ಪಡೆಯಬಯಸುವವರಿಗೆ.

Read More

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇವತ್ತು ಎಂದಿಗಿಂತಲೂ ಅಗತ್ಯ ಏಕೆ?

Mental health issues
ರಾಷ್ಟ್ರೀಯ ಮಾನಸಿಕ ಆರೋಗ್ಯದ ಸರ್ವೇ ಪ್ರಕಾರ, ಭಾರತದಲ್ಲಿ ಪ್ರತೀ 6ನೇ ವ್ಯಕ್ತಿಗೆ
Breast cancer
ಮಾನಸಿಕ ಆರೋಗ್ಯ ಬೆಂಬಲದ ಅಗತ್ಯವಿದೆ
Chronic Obstructive Pulmonary disease
ಸ್ತನದ (ಬ್ರೆಸ್ಟ್) ಕ್ಯಾನ್ಸರ್ ಭಾರತದ ಯುವತಿಯರಲ್ಲಿ(ವಯಸ್ಸು<40) ಹೆಚ್ಚುತ್ತಲೇ ಇದೆ, ಜಾಗತಿಕ ಸರಾಸರಿಗಿಂತಲೂ ಹೆಚ್ಚಾಗಿ.

ಡಿಜಿಟ್ ನ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನ ವಿಶೇಷತೆ ಏನು?

 • ಡಿಜಿಟಲ್ ಸ್ನೇಹಿ ಪ್ರಕ್ರಿಯೆಗಳು - ಹೆಲ್ತ್  ಇನ್ಶೂರೆನ್ಸ್ ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್ ಮಾಡುವ ತನಕ ಎಲ್ಲವೂ ಕಾಗದರಹಿತ, ಸರಳ, ಶೀಘ್ರ ಹಾಗೂ ಗೊಂದಲರಹಿತವಾಗಿದೆ! ಕ್ಲೈಮ್ ಗಳಿಗೂ ಹಾರ್ಡ್ ಕಾಪಿಗಳಿಲ್ಲ!
 • ಹೆಚ್ಚುವರಿ ಇನ್ಶೂರ್ಡ್ ಮೊತ್ತ- ವಿಶೇಷವಾಗಿ, ಅಪಘಾತ ಸಂಬಂಧೀ ಆಸ್ಪತ್ರೆ ದಾಖಲಾತಿ ಹಾಗೂ ತೀವ್ರ ಖಾಯಿಲೆಗಳಿಗಾಗಿ, ಶೂನ್ಯ ವೆಚ್ಚದಲ್ಲಿ!
 • ಸಾಂಕ್ರಾಮಿಕಗಳನ್ನು ಕವರ್ ಮಾಡುತ್ತದೆ  - ಜನರು ಕೊರೋನಾವೈರಸ್ ನಿಂದ ಭಯಭೀತರಾಗಿದ್ದಾರೆಂದು ನಮಗೆ ಗೊತ್ತಿದೆ, ಹೀಗಾಗಿ ಇದನ್ನೂ ಕವರ್ ಮಾಡಿದ್ದೇವೆ!
 • ವಯಸ್ಸು ಆಧಾರಿತ ಸಹಪಾವತಿ ಇಲ್ಲ - ನಮ್ಮ ಯೋಜನೆಗಳಲ್ಲಿ ವಯಸ್ಸು ಆಧಾರಿತ ಸಹಪಾವತಿ ಇರುವುದಿಲ್ಲ. ಇದರರ್ಥ, ಕ್ಲೈಮ್ ಗಳ ಸಂದರ್ಭದಲ್ಲಿ- ನೀವು ನಿಮ್ಮ ಜೇಬಿನಿಂದ ಪಾವತಿ ಮಾಡಬೇಕಾಗಿರುವುದಿಲ್ಲ.
 • ರೂಂ ಬಾಡಿಗೆ ನಿರ್ಬಂಧವಿಲ್ಲ- ಎಲ್ಲರಿಗೂ ಬೇರೆಬೇರೆಯಾದ ಆದ್ಯತೆಗಳಿರುತ್ತದೆ ಎಂದು ನಮಗೆ ಅರ್ಥವಾಗುತ್ತದೆ. ಅದಕ್ಕಾಗಿಯೇ, ನಮ್ಮ ಬಳಿ ಯಾವುದೇ ರೀತಿಯ ರೂಂ ಬಾಡಿಗೆ ನಿರ್ಬಂಧವಿಲ್ಲ. ನೀವು ಬಯಸಿದ ರೂಂ ಅನ್ನು ಆಯ್ಕೆ ಮಾಡಿಕೊಌ.
 • 2X ಇನ್ಶೂರ್ಡ್ ಮೊತ್ತ - ನೀವು ನಿಮ್ಮ ಇನ್ಶೂರ್ಡ್ ಮೊತ್ತವನ್ನು ಖರ್ಚು ಮಾಡಿದ್ದು, ದುರಾದೃಷ್ಟವೆಂಬಂತೆ ಅದೇ ವರ್ಷದಲ್ಲಿ ಮತ್ತೆ ನಿಮಗೆ ಅದು ಬೇಕಾಗಿದ್ದರೆ, ನಾವು ನಿಮಗಾಗಿ ಅದನ್ನು ಪುನಃ ತುಂಬಿಸುತ್ತೇವೆ.

 • ಸಂಚಿತ ಬೋನಸ್   - ಅರೋಗ್ಯವಂತರಾಗಿ ಉಳಿದುಕೊಂಡು ಇದ್ದಿದ್ದಕ್ಕಾಗಿ ನಿಮಗೊಂದು ಬಹುಮಾನ! ವಾರ್ಷಿಕ ಸಂಚಿತ ಬೋನಸ್ ಪಡೆಯಿರಿ.
 • ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ- ನಗದುರಹಿತ ಕ್ಲೈಮ್ ಅಥವಾ ಮರುಪಾವತಿಯ ಆಯ್ಕೆಗಾಗಿ ಭಾರತದಲ್ಲಿಯ ನಮ್ಮ 6400+ ಆಸ್ಪತ್ರೆಗಳಿಂದ ಆಯ್ಕೆ ಮಾಡಿ.

ಡಿಜಿಟ್ ನ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?

Accidental Hospitalization

ಅಪಘಾತ ಸಂಬಂಧಿತ ಆಸ್ಪತ್ರೆ ದಾಖಲಾತಿ

ಅಪಘಾತದ ಕಾರಣದಿಂದಾಗುವ ಆಸ್ಪತ್ರೆ ದಾಖಲಾತಿಯ ಪೂರ್ವ ಹಾಗೂ ನಂತರದ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.

Illness Related Hospitalization

ಅನಾರೋಗ್ಯ ಸಂಬಂಧಿತ ಆಸ್ಪತ್ರೆ ದಾಖಲಾತಿ

ಕೆಲವೊಮ್ಮೆ, ಕೆಲವು ಅನಾರೋಗ್ಯಗಳಿಗೆ ಆಸ್ಪತ್ರೆ ದಾಖಲಾತಿಯ ಅಗತ್ಯವಿರುತ್ತದೆ. ಇದರಿಂದ ಉಂಟಾಗುವ ಎಲ್ಲಾ ವೆಚ್ಚಗಳನ್ನು ಈ ಲಾಭವು ಕವರ್ ಮಾಡುತ್ತದೆ.

Maternity Benefit with Newborn Baby Cover

ಮೆಟರ್ನಿಟಿ ಹಾಗೂ ಬಂಜೆತನಕ್ಕೆ ಸಂಬಂಧಿತ ಖರ್ಚುಗಳು

ಎಲ್ಲಾ ಮೆಟರ್ನಿಟಿ ಹಾಗೂ ಬಂಜೆತನಕ್ಕೆ ಸಂಬಂಧಿತ ವೆಚ್ಚಗಳನ್ನು ಕವರ್ ಮಾಡುತ್ತದೆ; ಮಗು ಡೆಲಿವರಿ, ಸಿ-ಸೆಕ್ಷನ್, ವೈದ್ಯಕೀಯವಾಗಿ ಅನಿವಾರ್ಯವಾಗಿರುವ ಗರ್ಭಪಾತಗಳು, ನವಜಾತ ಶಿಶುವಿನ ಲಸಿಕೆಗಳು ಇತ್ಯಾದಿಗಳನ್ನು ಸೇರಿ.

Pre & Post Hospitalization Expenses

ಆಸ್ಪತ್ರೆ ದಾಖಲಾತಿ ಪೂರ್ವ ಹಾಗೂ ನಂತರದ ಖರ್ಚುಗಳು

ನೀವು ಆಸ್ಪತ್ರೆಗೆ ದಾಖಲಾದ ಪಕ್ಷದಲ್ಲಿ, ಈ ಲಾಭವು ನಿಮ್ಮ ಎಲ್ಲಾ ಆಸ್ಪತ್ರೆ ದಾಖಲಾತಿ ಹಾಗೂ ಚಿಕಿತ್ಸೆಗಳ ವೆಚ್ಚವನ್ನು ಕವರ್ ಮಾಡುತ್ತದೆ.

Critical Illness Benefit

ಗಂಭೀರ ಖಾಯಿಲೆಯ ಲಾಭ

ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ, ಹೃದಯಾಘಾತ ಮತ್ತು ಪಾರ್ಶ್ವವಾಯು ಹಾಗೂ ಇತರ ಗಂಭೀರ ಖಾಯಿಲೆಗಳ ವೈದ್ಯಕೀಯ ವೆಚ್ಚಗಳಿಗಾಗಿ ಕವರ್.

Daily Hospital Cash Cover

ಪ್ರತಿದಿನದ ಆಸ್ಪತ್ರೆ ನಗದು ಕವರ್

ಹಾಗಾಗದೇ ಇರಲಿ, ಆದರೆ ನೀವು ಆಸ್ಪತ್ರೆಗೆ ದಾಖಲಾದಾಗ, ನಿಮ್ಮ ಖರ್ಚುಗಳು ಆಸ್ಪತ್ರೆ ಬಿಲ್ಲುಗಳನ್ನೂ ಮೀರಿ ಬೆಳೆಯುತ್ತವೆ ಹಾಗೂ ಈ ಲಾಭವೂ ಇವುಗಳನ್ನೇ ಕವರ್ ಮಾಡುತ್ತದೆ.

Annual Health Checkup

ವಾರ್ಷಿಕ ಆರೋಗ್ಯ ತಪಾಸಣೆ

ಉತ್ತಮ ಆರೋಗ್ಯಕ್ಕೆ ಮೊದಲ ಹೆಜ್ಜೆಯೆ ಅರಿವು. ನಿಮ್ಮ ಎರಡನೇ ವರ್ಷದಿಂದ ನಿಮ್ಮ ವಾರ್ಷಿಕ ವೈದ್ಯಕೀಯ ತಪಾಸಣೆಗಳಿಗಾಗಿ ಮರುಪಾವತಿಯನ್ನು ಪಡೆಯಿರಿ!

Psychiatric Benefit

ಮನೋವೈದ್ಯಕೀಯ ಲಾಭ

ಮಾನಸಿಕ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಆದ್ದರಿಂದ, ಈ ಲಾಭವು ಮಾನಸಿಕ ಆಘಾತ ಹಾಗೂ ಇತರ ಯಾವುದೇ ಮಾನಸಿಕ ಅನಾರೋಗ್ಯಕ್ಕೆ ಸಂಬಂಧಿಸಿದ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗಾಗಿ ಕವರ್ ನೀಡುತ್ತದೆ.

Other Benefits

ಇತರ ಲಾಭಗಳು

ಸಮಯ ಬದಲಾಗಿದೆ, ಹಾಗೂ ನಾವೂ ಅದರೊಂದಿಗೆ ಬದಲಾಗಿದ್ದೇವೆ. ನಮ್ಮ ಇತರ ಹೆಲ್ತ್ ಇನ್ಶೂರೆನ್ಸ್ ಲಾಭಗಳಲ್ಲಿ ಬ್ಯಾರಿಯಾಟ್ರಿಕ್(ಸ್ಥೂಲಕಾಯತೆಯ)ಸರ್ಜರಿ, ಅಂಗಾಂಗ ಕಸಿ, ನಿಮ್ಮ ಹಿರಿಯ ಹೆತ್ತವರಿಗಾಗಿ ಆಯುಷ್ ಚಿಕಿತ್ಸೆ, ಅಸ್ಪತ್ರೆ ದಾಖಲಾತಿ ನಂತರದ ಭಾರೀ ಮೊತ್ತಗಳೂ ಸೇರಿವೆ; ನಿಮ್ಮ ಹೆಲ್ತ್ ಇನ್ಶೂರೆನ್ಸ್ ನಿಮಗಾಗಿ ಹಿತಕರ ವೈದ್ಯಕೀಯ ಲಾಭಗಳನ್ನು ನೀಡುತ್ತಿದೆ ಎಂದು ಖಚಿತಗೊಳಿಸುವುದಕ್ಕಾಗಿ.

ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಜೊತೆಗಿನ ಹೆಚ್ಚುವರಿ ಕವರ್ ಗಳು

ಮೆಟರ್ನಿಟಿ ಲಾಭ ಬಂಜೆತನದ ಲಾಭದೊಂದಿಗೆ

ಎರಡು ಮಕ್ಕಳ ವರೆಗಿನ ಡೆಲಿವರಿ ಹಾಗೂ ಮಗುವಿನ ಜನನದ ವೆಚ್ಚಗಳನ್ನು ಕವರ್ ಮಾಡುತ್ತದೆ; ಬಂಜೆತನಕ್ಕೆ ಚಿಕಿತ್ಸೆ, ವೈದ್ಯಕೀಯವಾಗಿ ಅನಿವಾರ್ಯವಾದ ಗರ್ಭಪಾತಗಳು, ಹಾಗೂ ಅವನ/ಅವಳ ಜನನದ 90 ದಿನಗಳ ವರೆಗೆ ನವಜಾತ ಶಿಶುವಿನ ಸಂರಕ್ಷಣೆಯನ್ನು ಸೇರಿ.

ಝೋನ್ ಅಪ್ಗ್ರೇಡ್

ವಿವಿಧ ನಗರ ವಲಯಗಳಿಗೆ ಅನುಗುಣವಾಗಿ ನಾವು ನಮ್ಮ ಯೋಜನೆಗಳನ್ನು ವಿಭಾಗಿಸಿದ್ದೇವೆ. ಕಾರಣ ಪ್ರತೀ ನಗರದ ವೈದ್ಯಕೀಯ ವೆಚ್ಚಗಳು ಬೇರೆಬೇರೆಯಾಗಿರುತ್ತವೆ. ನೀವು ನಿಮ್ಮ ನಗರಕ್ಕಿಂತ ಹೆಚ್ಚು ವೈದ್ಯಕೀಯ ವೆಚ್ಚಗಳಿರುವ ನಗರದಲ್ಲಿ ಚಿಕಿತ್ಸೆ ಪಡೆಯಲು ಬಯಸಿದ ಸಂದರ್ಭದಲ್ಲಿ, ನೀವು ಈ ಅಪ್ಗ್ರೇಡ್ ಅನ್ನು ಆಯ್ಕೆ ಮಾಡಬಹುದು.

ಆಯುಷ್(ಆಯುರ್ವೇದ, ಯುನಾನಿ, ಸಿದ್ಧ ಅಥವಾ ಹೋಮಿಯೋಪಥಿ)

ನಿಮ್ಮ ಹಿರಿಯ ತಂದೆತಾಯಿಯನ್ನು ಪರ್ಯಾಯ ಚಿಕಿತ್ಸೆಗಳಾದ ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸೆಗಳಿಂದ ಉಂಟಾಗುವ ಖರ್ಚುಗಳಿಂದ ಕವರ್ ಮಾಡುತ್ತದೆ.

ಏನೆಲ್ಲಾ ಕವರ್ ಆಗಿರುವುದಿಲ್ಲ

ಪ್ರಸವ-ಪೂರ್ವ ಹಾಗೂ ಪ್ರಸವ-ನಂತರದ ವೆಚ್ಚಗಳು

ಪ್ರಸವ-ಪೂರ್ವ ಹಾಗೂ ಪ್ರಸವ-ನಂತರದ ವೆಚ್ಚಗಳು, ಆಸ್ಪತ್ರೆ ದಾಖಲಾತಿಗೆ ಕಾರಣವಾಗದೇ ಇದ್ದಲ್ಲಿ.

ಮೊದಲೇ ಇರುವ ಖಾಯಿಲೆಗಳು

ಮೊದಲೇ ಇರುವ ಖಾಯಿಲೆಗಳ ಸಂದರ್ಭದಲ್ಲಿ, ಕಾಯುವಿಕೆಯ ಅವಧಿ ಪೂರ್ಣವಾದ ಸಮಯವನ್ನು ಹೊರತುಪಡಿಸಿ, ಅಂತಹ ಅನಾರೋಗ್ಯ ಅಥವಾ ಖಾಯಿಲೆಗಳಿಗೆ ಕ್ಲೈಮ್ ಮಾಡಲು ಸಾಧ್ಯವಿಲ್ಲ

ವೈದ್ಯರ ಶಿಫಾರಸು ಇಲ್ಲದೆಯೇ ಆಸ್ಪತ್ರೆ ದಾಖಲಾತಿ

ನೀವು ಯಾವುದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೂ, ಅದು ವೈದ್ಯರ ಸೂಚಿಯಂತೆ ಇಲ್ಲದಿದ್ದರೆ ಅದನ್ನು ಕವರ್ ಮಾಡಲಾಗುವುದಿಲ್ಲ.

ಕ್ಲೈಮ್ ಫೈಲ್ ಮಾಡುವುದು ಹೇಗೆ

 • ಮರುಪಾವತಿ ಕ್ಲೈಮ್ ಗಳು- ಆಸ್ಪತ್ರೆ ದಾಖಾಲಾತಿಯ ಎರಡು ದಿನ ಮುಂಗಡವಾಗಿ ನಮಗೆ 1800-258-4242  ಗೆ ಕರೆ ಮಾಡಿ ತಿಳಿಸಿ ಅಥವಾ healthclaims@godigit.com  ಇ-ಮೇಲ್ ಕಳಿಸಿ. ಮರುಪಾವತಿಯ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು, ನಿಮ್ಮ ಆಸ್ಪತ್ರೆಯ ಬಿಲ್ ಹಾಗೂ ಇತರ ಸೂಕ್ತ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ನಾವು ಲಿಂಕ್ ಕಳಿಸುತ್ತೇವೆ.

 • (ನಗದುರಹಿತ ಕ್ಲೈಮ್ ಗಳು)-ನೆಟ್ವರ್ಕ್ ಆಸ್ಪತ್ರೆಯನ್ನು ಆಯ್ಕೆ ಮಾಡಿ. ನೆಟ್ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.  ಆಸ್ಪತ್ರೆಯ ಹೆಲ್ಪ್ ಡೆಸ್ಕ್ ನಲ್ಲಿ ನಿಮ್ಮ ಇ-ಹೆಲ್ಥ್ ಕಾರ್ಡ್ ಅನ್ನು ಪ್ರದರ್ಶಿಸಿ ಕ್ಯಾಷ್ಲೆಸ್ ರಿಕ್ವೆಸ್ಟ್ (ನಗದುರಹಿತ ಮನವಿಪತ್ರ)ವನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅನ್ನು ಅಲ್ಲೇ ಸೆಟ್ಲ್ ಮಾಡಲಾಗುವುದು.

 • ನೀವು ಕೊರೋನಾವೈರಸ್ ಗಾಗಿ ಕ್ಲೈಮ್ ಮಾಡಿದ್ದರೆ, ನಿಮ್ಮ ಬಳಿ ಐಸಿಎಂಆರ್ - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ, ಇದರ ಅಧಿಕೃತ ಕೇಂದ್ರದಿಂದ ಒಂದು ಪಾಸಿಟಿವ್ ವರದಿ ಇರುವುದನ್ನು ಖಚಿತಪಡಿಸಿಕೊಳ್ಳಿ.

ಡಿಜಿಟ್ ನ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಲಾಭಗಳು

ಸಹಪಾವತಿ

ವಯಸ್ಸು ಆಧಾರಿತ ಸಹಪಾವತಿ ಇಲ್

ನಗದುರಹಿತ ಆಸ್ಪತ್ರೆ

ಭಾರತದಾದ್ಯಂತ 6400+ ನಗದುರಹಿತ ಆಸ್ಪತ್ರೆಗಳು

ಸಂಚಿತ ಬೋನಸ್

ನಿಮ್ಮ ಮೊದಲ ಕ್ಲೈಮ್ ರಹಿತ ವರ್ಷಕ್ಕಾಗಿ 20% ಹೆಚ್ಚುವರಿ ಎಸ್ ಐ

ರೂಂ ಬಾಡಿಗೆ ಮಿತಿ

ರೂಂ ಬಾಡಿಗೆ ಮಿತಿ ಇಲ್ಲ. ನಿಮಗೆ ಬೇಕಾದ ರೂಂ ಅನ್ನು ಆಯ್ಕೆ ಮಾಡಿ

ಯುವಕರಿಗೆ ಹೆಲ್ತ್ ಇನ್ಶೂರೆನ್ಸ್ ಏಕೆ ಅಷ್ಟು ಮುಖ್ಯ?

Increase in Lifestyle Diseases Amongst Youngsters

ಯುವಕರಲ್ಲಿ ಜೀವನಶೈಲಿ ಸಂಬಂಧಿತ ರೋಗಗಳ ಹೆಚ್ಚಳ

ಜೀವನಶೈಲಿ ಸಂಬಂಧಿತ ರೋಗಗಳಾದ ಪಿಸಿಒಎಸ್, ಸ್ಥೂಲಕಾಯತೆ, ಟೈಪ್ 2 ಮಧುಮೇಹ ಇತ್ಯಾದಿಗಳು ಹೆಚ್ಚುತ್ತಿವೆ, ವಿಶೇಷವಾಗಿ ಮಿಲೆನಿಯಲ್ ಪೀಳಿಗೆಯಲ್ಲಿ. ನೀವು ಈ ಎಲ್ಲದರಿಂದ ಸಂರಕ್ಷಿತರಾಗಿರುವುದನ್ನು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಖಚಿತ ಪಡಿಸುತ್ತದ್ದೆ; ರೋಗನಿರ್ಣಯದಿಂದ ಚಿಕಿತ್ಸೆಯವರೆಗೆ.

Rise in Mental Health Issues

ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ ಹೆಚ್ಚಳ

ಭಾರತದಲ್ಲಿ, ಮಾನಸಿಕ ಆರೋಗ್ಯ ಅಸಮತೋಲನವು ಗಣನೀಯ ಏರಿಕೆಯನ್ನು ಕಂಡಿದೆ, ವಿಶೇಷವಾಗಿ, <40 ಜನರಲ್ಲಿ. ನಮ್ಮ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಮನೋವೈದ್ಯಕೀಯ ಲಾಭಗಳನ್ನೂ ಒಳಗೊಂಡಿದೆ ಏಕೆಂದರೆ ಮಾನಸಿಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ.

Maximize Savings

ಉಳಿತಾಯಗಳನ್ನು ಗರಿಷ್ಠಗೊಳಿಸಿ

ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದರ ಅರ್ಥ ನೀವು ನಿಮ್ಮ ಹೆಚ್ಚುತ್ತಿರುವ ವೈದ್ಯಕೀಯ ಖರ್ಚುವೆಚ್ಚಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ನಿಮ್ಮನ್ನು ಕವರ್ ಮಾಡುತ್ತದೆ; ಬದಲಿಗೆ ನೀವು ನಿಮ್ಮ ಉಳಿತಾಯಗಳನ್ನು ಕಾಪಾಡಿ ಇನ್ನೂ ಹೆಚ್ಚಿಸಬಹುದು.

Improve Overall Well-Being

ಒಟ್ಟಾರೆ ಯೋಗಕ್ಷೇಮವನ್ನು ಉತ್ತಮಗೊಳಿಸಿ

ಒಂದು ಹೆಲ್ತ್ ಇನ್ಶೂರೆನ್ಸ್, ವೈದ್ಯಕೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಿಮಗೆ ನೆರವಾಗಿ ಹಾಗೂ ನಿಮ್ಮ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಕವರ್ ಮಾಡಿ ನಿಮ್ಮನ್ನು ಆಗಬಹುದಾದ ಆರೋಗ್ಯ ಸ್ಥಿತಿಗಳಿಂದ ರಕ್ಷಿಸುತ್ತಾ, ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಲಾಭದಾಯಕವಾಗಿ ಪರಿಣಮಿಸುತ್ತದೆ.

Save Tax

ತೆರಿಗೆ ಉಳಿತಾಯ

ಹೆಲ್ತ್ ಇನ್ಶೂರೆನ್ಸ್ ಹೊಂದಿರುವವರಿಗೆ ಒಂದು ಉತ್ತಮ ಸುದ್ದಿ ಏನೆಂದರೆ, ನೀವು ಕಟ್ಟಿರುವ ಪ್ರೀಮಿಯಂ ಮೇಲೆ ನೀವು ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಬಹುದು.

Affordable Premiums

ಕೈಗೆಟಕುವ ಪ್ರೀಮಿಯಂ ಗಳು

ನಾವು ಯುವಕರಿಗೆ ಯಾವಾಗಲೂ ಮುಂಚಿತವಾಗಿಯೇ ಹೆಲ್ತ್ ಇನ್ಶೂರೆನ್ಸ್ ಪಡೆಯಲು ಸಲಹೆ ನೀಡುತ್ತೇವೆ. ಇದರಿಂದ ನಿಮಗೆ ಕಡಿಮೆ ದರದ ಪ್ರೀಮಿಯಂ ದೊರೆಯುವುದು ಹಾಗೂ ಯಾವುದೇ ದೊಡ್ಡ ಖಾಯಿಲೆಗೆ ಬೇಕಾದ ಕಾಯುವಿಕೆಯ ಅವಧಿಯೂ ಶೀಘ್ರವೇ ಮುಗಿಯುವುದು!

ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ

ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು