ಫ್ಯಾಮಿಲಿ ಫ್ಲೋಟರ್ ಮತ್ತು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನಡುವೆ ಏನು ವ್ಯತ್ಯಾಸಗಳಿವೆ?
ಒಂದು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸುವ ಸಂದರ್ಭದಲ್ಲಿ ನೀವು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನಡುವೆ ಆಯ್ಕೆಯನ್ನು ಮಾಡಬೇಕಾಗುತ್ತದೆ.
ಈ ಎರಡರ ನಡುವೆ ಇರುವ ಪ್ರಮುಖ ವ್ಯತ್ಯಾಸಗಳನ್ನು ಈ ರೀತಿ ಪಟ್ಟಿ ಮಾಡಬಹುದು: ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್, ಕುಟುಂಬದ ಎಲ್ಲ ಸದಸ್ಯರೂ ಒಂದೇ ಪ್ಲಾನ್ ಅಡಿಯಲ್ಲಿ ಇನ್ಶೂರೆನ್ಸ್ ರಕ್ಷಣೆಯನ್ನು ಪಡೆಯುತ್ತಾರೆ; ಇದರರ್ಥ ಪ್ರೀಮಿಯಂ ಮತ್ತು ಒಟ್ಟು ಸಮ್ ಇನ್ಶೂರ್ಡ್ ಅನ್ನು ಕುಟುಂಬದ ಎಲ್ಲ ಸದಸ್ಯರು ಹಂಚಿಕೊಳ್ಳುತ್ತಾರೆ; ಆದರೆ ಇಂಡಿವಿಜುವಲ್ ಹೆಲ್ತ್ ವಿಮಾ ಯೋಜನೆ ಒಬ್ಬ ವ್ಯಕ್ತಿಗೆ ಸಮರ್ಪಿತವಾಗಿದೆ, ಇದರಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಮ್ ಇನ್ಶೂರ್ಡ್ ಒಬ್ಬ ವ್ಯಕ್ತಿಗೆ ಮೀಸಲಾಗಿರುತ್ತದೆ.
"ಹೆಲ್ತ್ ಈಸ್ ವೆಲ್ತ್" ಎಂದು ಹೇಳುವುದನ್ನು ನಾವು ಆಗಾಗ ಕೇಳಿರುತ್ತೇವೆ. ಬಹುಶಃ ಚಿಕ್ಕವರಾಗಿದ್ದಾಗ ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಸಮಯ ಕಳೆದಂತೆ, ನಮಗೆ ವಯಸ್ಸಾದಂತೆ ಮತ್ತು ಕಳೆದು ಹೋಗುತ್ತಿರುವ ಪ್ರತಿಯೊಂದು ವರ್ಷದಲ್ಲೂ ಇಡೀ ಜಗತ್ತು ನಮಗಿಂತ ಮುಂದೆ ಸಾಗುತ್ತಿರುವಾಗ ಈ ಮಾತಿನ ಸತ್ಯ ಮತ್ತು ಮಹತ್ವವು ನಮ್ಮ ಅರಿವಿಗೆ ಬರುತ್ತದೆ.
ಅಷ್ಟಲ್ಲದೆ, ಹೆಲ್ತ್ ಗೆ ಸಂಬಂಧಿಸಿದ ವೆಚ್ಚಗಳೂ ಹೆಚ್ಚಾಗುತ್ತಲೇ ಇವೆ. ನಮ್ಮ ಹೆಲ್ತ್ ಅನ್ನು ಕಾಪಾಡಿಕೊಳ್ಳಲು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳ ಹಲವು ಆಯ್ಕೆಗಳು ನಮ್ಮ ಮುಂದಿರುವುದೂ ಬಹುಶಃ ಒಂದು ಕಾರಣವಾಗಿದೆ; ಇದು ನಮ್ಮ ಹೆಲ್ತ್ ಮತ್ತು ಯೋಗಕ್ಷೇಮವನ್ನು ಭದ್ರಪಡಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಸುರಕ್ಷಿತವಾಗಿರಲು ನಮಗೆ ಅವಕಾಶ ನೀಡುತ್ತದೆ.
ಹೆಲ್ತ್ ಇನ್ಶೂರೆನ್ಸ್ ಅನೇಕ ಆಯ್ಕೆಗಳು ಇಂದು ನಮ್ಮ ಮುಂದೆ ಇರುವ ಕಾರಣ, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆಮಾಡುವ ಸಂದರ್ಭದಲ್ಲಿ ಜನರಲ್ಲಿ ಒಂದು ಅನುಮಾನ ಸಾಮಾನ್ಯವಾಗಿ ಇರುವುದನ್ನು ನಾವು ಗಮನಿಸಿದ್ದೇವೆ: ಅದೆಂದರೆ, ತಮಗೆ ಅತ್ಯಂತ ಸೂಕ್ತವಾದ ರೀತಿಯ ಪ್ಲಾನ್ ಅನ್ನು ಆರಿಸುವುದು.
ಸ್ಥೂಲವಾಗಿ ಹೇಳುವುದಾದರೆ, ಹೆಲ್ತ್ ಇನ್ಶೂರೆನ್ಸ್ ವಿಷಯಕ್ಕೆ ಬಂದಾಗ, ಆಯ್ದುಕೊಳ್ಳಲು ನಿಮ್ಮ ಮುಂದೆ ಎರಡು ಬಗೆಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಲಭ್ಯವಿವೆ: ಅಂದರೆ, ಒಂದು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇನ್ನೊಂದು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್. ಇನ್ಶೂರೆನ್ಸ್ ವಿಚಾರಕ್ಕೆ ಬಂದಾಗ ಪಾರದರ್ಶಕತೆಯ ಮೇಲೆ ನಾವು ನಂಬಿಕೆ ಇರಿಸುತ್ತೇವೆ.
ಎಲ್ಲಕ್ಕಿಂತ ಹೆಚ್ಚಾಗಿ, ಇದು ನಿರ್ಣಾಯಕ ಆರ್ಥಿಕ ನಿರ್ಧಾರವಾಗಿರುವುದರಿಂದ, ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಲು ನಿಮಗೆ ನೆರವಾಗುವ ಉದ್ದೇಶ ನಮ್ಮದು. ಆದ್ದರಿಂದ, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನೀವು ತಿಳಿದುಕೊಳ್ಳಬೇಕಾದ ಎಲ್ಲ ಸಂಗತಿಗಳನ್ನು ನಾವು ಇಲ್ಲಿ ನೀಡಿದ್ದೇವೆ.