ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್

Digit

No Capping

on Room Rent

Affordable

Premium

24/7

Customer Support

Zero Paperwork. Quick Process.
Your Name
Mobile Number

No Capping

on Room Rent

Affordable

Premium

24/7

Customer Support

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?

ಸೂಪರ್ ಟಾಪ್-ಅಪ್ ಅನ್ನು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್(ಡಿಜಿಟ್ಹೆಲ್ತ್ ಕೇರ್ ಪ್ಲಸ್) ಇತರ ಟಾಪ್-ಅಪ್ ಯೋಜನೆಗಳು
ಆಯ್ಕೆ ಮಾಡಿರುವ ಡಿಡಕ್ಟಿಬಲ್ 2 ಲಕ್ಷ 2 ಲಕ್ಷ
ಆಯ್ಕೆ ಮಾಡಿರುವ ಇನ್ಶೂರ್ಡ್ ಮೊತ್ತ 10 ಲಕ್ಷ 10 ಲಕ್ಷ
ವರ್ಷದ 1ನೇ ಕ್ಲೈಮ್ 4 ಲಕ್ಷ 4 ಲಕ್ಷ
ನೀವು ಪಾವತಿಸುತ್ತೀರಿ 2 ಲಕ್ಷ 2 ಲಕ್ಷ
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುತ್ತಾರೆ 2 ಲಕ್ಷ 2 ಲಕ್ಷ
ವರ್ಷದ 2ನೇ ಕ್ಲೈಮ್ 6 ಲಕ್ಷ 6 ಲಕ್ಷ
ನೀವು ಪಾವತಿಸುತ್ತೀರಿ ಏನೂ ಇಲ್ಲ!😊 2 ಲಕ್ಷ (ಡಿಡಕ್ಟಿಬಲ್ ಆಯ್ಕೆ ಮಾಡಲಾಗಿದೆ)
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುತ್ತಾರೆ 6 ಲಕ್ಷ 4 ಲಕ್ಷ
ವರ್ಷದ 3ನೇ ಕ್ಲೈಮ್ 1 ಲಕ್ಷ 1 ಲಕ್ಷ
ನೀವು ಪಾವತಿಸುತ್ತೀರಿ ಏನೂ ಇಲ್ಲ! 😊 1 ಲಕ್ಷ
ನಿಮ್ಮ ಟಾಪ್ ಅಪ್ ಇನ್ಶೂರರ್ ಪಾವತಿಸುತ್ತಾರೆ 1 ಲಕ್ಷ ಏನೂ ಇಲ್ಲ☹

ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನ ಲಾಭಗಳೇನು?

 • ಸಾಂಕ್ರಾಮಿಕಗಳನ್ನು ಕವರ್ ಮಾಡುತ್ತದೆ - ಕೋವಿಡ್ - 19 ನಮ್ಮ ಬದುಕಿನಲ್ಲಿ ಬಹಳ ಅನಿಶ್ಚಿತತೆಯನ್ನು ಮೂಡಿಸಿದೆ ಎಂದು ನಾವು ಅರಿತಿದ್ದೇವೆ. ಇತರ ಅನಾರೋಗ್ಯಗಳ ಜೊತೆಯಲ್ಲಿ, ಕೋವಿಡ್ - 19 ಅನ್ನೂ ಕವರ್ ಮಾಡಲಾಗಿದೆ, ಅದು ಒಂದು ಪಿಡುಗು ಆಗಿದ್ದರೂ ಸಹ.

  .

 • ನಿಮ್ಮ ಡಿಡಕ್ಟಿಬಲ್ ಗಳನ್ನು ಕೇವಲ ಒಂದು ಬಾರಿ ಪಾವತಿಸಿ  - ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನೊಂದಿಗೆ, ನೀವು ನಿಮ್ಮ ಡಿಡಕ್ಟಿಬಲ್ ಗಳನ್ನು ಕೇವಲ ಒಂದು ಬಾರಿ ಪಾವತಿಸಿ ಒಂದು ವರ್ಷದಲ್ಲಿ ಹಲವು ಬಾರಿ ಕ್ಲೈಮ್ ಮಾಡಬಹುದು. ನಿಜವಾದ ಡಿಜಿಟ್ ವಿಶೇಷತೆ! 😊

 • ನಿಮ್ಮ ಟಾಪ್-ಅಪ್ ಪಾಲಿಸಿಯನ್ನು ಆರೋಗ್ಯದ ಅವಶ್ಯಕತೆಗಳ ಅನುಸಾರ ಕಸ್ಟಮೈಜ್ ಮಾಡಿ - ನೀವು 1, 2, 3, ಮತ್ತು 5 ಲಕ್ಷದ ಡಿಡಕ್ಟಿಬಲ್ ಗಳಿಂದ ಆಯ್ಕೆ ಮಾಡಬಹುದು ಹಾಗೂ 10 ಲಕ್ಷದಿಂದ 20 ಲಕ್ಷದ ವರೆಗಿನ ಮೊತ್ತವನ್ನು ನಿಮ್ಮ ಇನ್ಶೂರ್ಡ್ ಮೊತ್ತವಾಗಿ ಆಯ್ಕೆ ಮಾಡಬಹುದು.

 • ರೂಂ ಬಾಡಿಗೆ ಪ್ರತಿಬಂಧವಿಲ್ಲ - ಪ್ರತಿಯೊಬ್ಬರ ಆದ್ಯತೆಗಳೂ ಬೇರೆಬೇರೆಯಾಗಿರುತ್ತದೆ ಎಂದು ನಮಗೆ ಅರ್ಥವಾಗುತ್ತದೆ. ಆದ್ದರಿಂದಲೇ, ನಮ್ಮ ಬಳಿ ರೂಂ ಬಾಡಿಗೆ ಪ್ರತಿಬಂಧವಿಲ್ಲ! ನೀವು ಬಯಸಿದ ಆಸ್ಪತ್ರೆ ರೂಂ ಅನ್ನು ಆಯ್ಕೆ ಮಾಡಿ. 😊

 • ನೀವು ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ- ನಗದುರಹಿತ ಕ್ಲೈಮ್ ಗಳಿಗಾಗಿ ಭಾರತದಲ್ಲಿರುವ ನಮ್ಮ 16400+ ನೆಟ್ವರ್ಕ್ ಆಸ್ಪತ್ರೆಗಳಿಂದ ಆಯ್ಕೆ ಮಾಡಿ. ನೀವು ಮರುಪಾವತಿಯ ಆಯ್ಕೆಯನ್ನೂ ಮಾಡಬಹುದು.
 • ಸರಳ ಆನ್ಲೈನ್ ಪ್ರಕ್ರಿಯೆ - ಸೂಪರ್ ಟಾಪ್-ಅಪ್ ಹೆಲ್ತ್  ಇನ್ಶೂರೆನ್ಸ್ ನಲ್ಲಿ, ಖರೀದಿಸುವುದರಿಂದ ಹಿಡಿದು ಕ್ಲೈಮ್ ಮಾಡುವವರೆಗೆ ಎಲ್ಲವೂ ಕಾಗದರಹಿತ, ಸುಲಭ ಹಾಗೂ ಗೊಂದಲರಹಿತವಾಗಿದೆ! ಯಾವುದೇ ಹಾರ್ಡ್ ಕಾಪಿಗಳಿಲ್ಲ, ಕ್ಲೈಮ್ ಗಳಿಗೆ ಕೂಡಾ!

ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಪಡೆಯಬೇಕು?

Increasing medical costs

ಏರುತ್ತಿರುವ ವೈದ್ಯಕೀಯ ವೆಚ್ಚ

ಮನಿ ಕಂಟ್ರೋಲ್ ನ ಪ್ರಕಾರ, ಭಾರತದಲ್ಲಿಹೆಲ್ತ್ ಕೇರ್ ದರಗಳು ಹಣದುಬ್ಬರದ ದರಕ್ಕಿಂತ ದುಪ್ಪಟ್ಟು ವೇಗದಲ್ಲಿ ಏರುತ್ತಿವೆ! ಸರಳ ಅರ್ಥದಲ್ಲಿ, ನಿಮಗೆ ನಿಮ್ಮ ಕಾರ್ಪೋರೇಟ್ ಯೋಜನೆಗಳು ಕವರ್ ಮಾಡುವ ಮೊತ್ತಕಿಂತ ಹೆಚ್ಚು ಇನ್ಶೂರ್ಡ್ ಮೊತ್ತದ ಅಗತ್ಯವಿದೆ, ಹಾಗೂ ಸೂಪರ್-ಟಾಪ್ ಅಪ್ ಈ ನಿಟ್ಟಿನಲ್ಲಿ ನಿಮಗೆ ಪುಷ್ಟಿ ನೀಡುತ್ತದೆ!

Higher Sum Insured

ಹೆಚ್ಚಿನ ಇನ್ಶೂರ್ಡ್ ಮೊತ್ತ

ನಿಜ ಹೇಳಬೇಕೆಂದರೆ, ಹೆಚ್ಚಿನ ಇನ್ಶೂರ್ಡ್ ಮೊತ್ತದ ಅಗತ್ಯವಿಲ್ಲದೇ ಇರುತ್ತಿದ್ದರೆ, ಸೂಪರ್ ಟಾಪ್-ಅಪ್ ಪಾಲಿಸಿಗಳು ಅಸ್ಥಿತ್ವದಲ್ಲೇ ಇರುತ್ತಿರಲಿಲ್ಲ. ಒಂದು ಸೂಪರ್ ಟಾಪ್-ಅಪ್ ಯೋಜನೆಯು ನಿಮಗೆ ನಿಮ್ಮ ಕಾರ್ಪರೇಟ್ ಯೋಜನೆಗಿಂತ ಹೆಚ್ಚಿನ ಕವರೇಜ್ ಪಡೆಯುವಲ್ಲಿ ಸಹಾಯ ಮಾಡುತ್ತದೆ, ಅದೂ ಅತೀ ಕಡಿಮೆ ಪ್ರೀಮಿಯಂ ಜೊತೆ, ನಿಮಗೆ ಯಾವುದೇ ರೀತಿಯ ಕೊರತೆಯಾಗದ ಹಾಗೆ!

Greater coverage for seniors & parents

ಹಿರಿಯರಿಗೆ ಹಾಗೂ ಹೆತ್ತವರಿಗೆ ಹೆಚ್ಚಿನ ಕವರೇಜ್

ಹಿರಿಯರಿಗಾಗಿ ಇರುವ ಹೆಲ್ತ್ ಕೇರ್ ವೆಚ್ಚಗಳು ಅಧಿಕವಾಗಿರುವುದರಿಂದ, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಗಳೂ ಸಾಮಾನ್ಯವಾಗಿ ಹೆಚ್ಚಿರುತ್ತವೆ. ಆದರೆ, ಸೂಪರ್ ಟಾಪ್-ಅಪ್ ಯೋಜನೆಯಿಂದ ನೀವು ನಿಮ್ಮ ಹೆತ್ತವರಿಗಾಗಿ ಗರಿಷ್ಠ ಕವರೇಜ್ ಪಡೆಯಬಹುದು, ಅತೀ ಕಡಿಮೆ ದರದಲ್ಲಿ!

Savior for the rainy day!

ಅಗತ್ಯದ ದಿನಗಳ ಆಪ್ತರಕ್ಷಕ!

2020 ಹಾಗೂ ಕೋವಿಡ್-19 ಇಲ್ಲಿಯವರೆಗೆ ನಮಗೆ ಏನನ್ನಾದರೂ ಕಲಿಸಿದ್ದರೆ, ಅದು ಯಾವುದೂ ಖಚಿತವಲ್ಲ ಎಂದು! ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಒಂದು ಉಳಿತಾಯದ ಆಯ್ಕೆಯಾಗಿದ್ದು ನೀವು ನಿಮ್ಮ ಜೀವನದ ಅನಿಶ್ಚಿತ ದಿನಗಳಲ್ಲೂ ಕವರ್ ಆಗಿರುವುದನ್ನು ಖಚಿತಪಡಿಸುತ್ತದೆ.

Lack of benefits in existing plan

ಈಗಾಗಲೇ ಇರುವ ಯೋಜನೆಯಲ್ಲಿ ಲಾಭಗಳ ಕೊರೆತೆ

ಹೆಚ್ಚಿನ ಕಾರ್ಪೋರೇಟ್ ಯೋಜನೆಗಳು ನಿಮಗೆ ಗಂಭೀರ ಖಾಯಿಲೆ ಅಥವಾ ಆಯುಶ್ ಗಾಗಿ ಬೇಕಿರುವ ಹೆಚ್ಚಿನ ಕವರೇಜ್ ಲಾಭಗಳನ್ನು ನೀಡದೇ ಇರಬಹುದು ಆದರೆ ನಿಮ್ಮ ಸೂಪರ್ ಟಾಪ್-ಅಪ್ ಇದನ್ನು ನಿಮಗೆ ನೀಡುತ್ತದೆ.

Additional Tax Saving

ಹೆಚ್ಚುವರಿ ತೆರಿಗೆ ಉಳಿತಾಯ

ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಹಾಗೆಯೇ, ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಕೂಡಾ ರೂ. 25,000 ದಿಂದ ರೂ. 75,000 ವರೆಗಿನ ತೆರಿಗೆ ಉಳಿತಾಯ ಲಾಭಗಳನ್ನು ನೀಡುತ್ತದೆ!

ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

Corporate hotshots

ಕಾರ್ಪರೇಟ್ ಸಾಮರ್ಥ್ಯಗಳು

ನಿಮ್ಮ ಬಳಿ ನಿಮ್ಮ ಉದ್ಯೋಗದಾತರು ನೀಡಿರುವ ಕಾರ್ಪೋರೇಟ್ ಯೋಜನೆ ಇರಬಹುದು ಆದರೆ ಅದರ ಇನ್ಶೂರ್ಡ್ ಮೊತ್ತ ನಿಮಗೆ ಸಾಕಾಗದೇ ಇರಬಹುದು. ಸೂಪರ್ ಟಾಪ್-ಅಪ್ ಯೋಜನೆ ನಿಮ್ಮ ಇನ್ಶೂರ್ಡ್ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಅದೂ ಕೂಡಾ ಒಂದು ಸ್ಟಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಗಿಂತ ಕಡಿಮೆ ದರದಲ್ಲಿ!

Senior citizens & parents

ಹಿರಿಯ ನಾಗರಿಕರು ಹಾಗೂ ಹೆತ್ತವರು

ಒಬ್ಬ ವ್ಯಕ್ತಿಯ ವಯಸ್ಸು ಎಷ್ಟು ಹೆಚ್ಚಿರುತ್ತದೆಯೋ,ಅವರ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕೂಡಾ ಅಷ್ಟೇ ಹೆಚ್ಚಿರುತ್ತದೆ. ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದರಿಂದ ಈ ಪ್ರೀಮಿಯಂ ಮೊತ್ತವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು. ಇದರ ಅನಾನುಕೂಲತೆಯೇನೆಂದರೆ, ನೀವು ನಿಮ್ಮ ಪ್ರಸ್ತುತ ಆರೋಗ್ಯ ಅಥವಾ ಕಾರ್ಪೋರೇಟ್ ಇನ್ಶೂರರ್ ನಿಂದ ಅಥವಾ ನಿಮ್ಮ ಸ್ವಂತ ಜೇಬಿನಿಂದ ಡಿಡಕ್ಟೆಬಲ್ ಮೊತ್ತವನ್ನು ಮೊದಲೇ ಪಾವತಿಸಬೇಕಾಗುತ್ತದೆ.

Limited sum insured plan holders

ಮಿತಿಯಿರುವ ಇನ್ಶೂರ್ಡ್ ಮೊತ್ತ ಯೋಜನೆಯ ಪಾಲಿಸಿದಾರರು

ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ನ ಇನ್ಶೂರ್ಡ್ ಮೊತ್ತ ಕಡಿಮೆ ಇದ್ದು ಅದರ ಲಾಭಗಳಿಗೂ ಮಿತಿಯಿದೆ ಎಂದು ನಿಮಗೆ ಅರಿವಾಗಿದ್ದರೆ, ಪಾಲಿಸಿಯ ವರ್ಗಾವಣೆ ಅಥವಾ ಹೊಸ ಸಮಗ್ರ ಪಾಲಿಸಿ ಖರೀದಿಸುವ ಚಿಂತೆ ಮಾಡದೆಯೇ, ನೀವು ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನಿಂದ ನಿಮ್ಮ ಇನ್ಶೂರ್ಡ್ ಮೊತ್ತವನ್ನು ಹೆಚ್ಚಿಸಬಹುದು.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ - ಡಿಜಿಟ್ ಸ್ಪೆಷಲ್
4 ವರ್ಷಗಳು / 2 ವರ್ಷಗಳು
ರೂಮ್ ಬಾಡಿಗೆಗೆ ಮಿತಿ ಇಲ್ಲ - ಡಿಜಿಟ್ ಸ್ಪೆಷಲ್
ಮಿತಿ ಇಲ್ಲ

ಏನೆಲ್ಲಾ ಕವರ್ ಆಗಿರುವುದಿಲ್ಲ?

ನಿಮ್ಮ ಡಿಡಕ್ಟಿಬಲ್ ಗಳು ಮುಗಿಯುವ ತನಕ ನಿಮಗೆ ಕ್ಲೈಮ್ ಮಾಡಲು ಆಗುವುದಿಲ್ಲ

ನಿಮ್ಮ ಪ್ರಸ್ತುತ ಹೆಲ್ತ್  ಇನ್ಶೂರೆನ್ಸ್ ನ ಕ್ಲೈಮ್ ಮೊತ್ತ ಈಗಾಗಲೇ ಮುಗಿದು ಹೋಗಿದ್ದರೆ, ಅಥವಾ ಹೇಳಲಾದ 

ಡಿಡಕ್ಟಿಬಲ್ ಅನ್ನು ನೀವು ಸಂಪೂರ್ಣವಾಗಿ ನಿಮ್ಮ ಜೇಬಿನಿಂದಲೇ ಖರ್ಚು ಮಾಡಿದ್ದರೆ ಮಾತ್ರ ನಿಮ್ಮ ಟಾಪ್-ಅಪ್ 

ಹೆಲ್ತ್  ಇನ್ಶೂರೆನ್ಸ್ ಮೇಲೆ ನೀವು ಕ್ಲೈಮ್ ಮಾಡಬಹುದು. ಆದರೆ, ಒಳ್ಳೆಯ ಸುದ್ದಿಯೇನೆಂದರೆ, ನೀವು ನಿಮ್ಮ 

ಡಿಡಕ್ಟಿಬಲ್ ಅನ್ನು ಕೇವಲ ಒಂದೇ ಬಾರಿ ಪಾವತಿಸಬೇಕಾಗುವುದು.

ಮೊದಲೇ ಇರುವ ಖಾಯಿಲೆಗಳು

ಮೊದಲೇ ಇರುವ ಖಾಯಿಲೆಗಳು ಇದ್ದ ಸಂದರ್ಭದಲ್ಲಿ, ಕಾಯುವಿಕೆಯ ಅವಧಿ ಮುಗಿಯದೇ ಇದ್ದರೆ, ಆ ಖಾಯಿಲೆ ಅಥವಾ ಅನಾರೋಗ್ಯಕ್ಕಾಗಿ ಕ್ಲೈಮ್ ಮಾಡಲು ಆಗುವುದಿಲ್ಲ.

ವೈದ್ಯರ ಶಿಫಾರಸು ಇಲ್ಲದೆಯೇ ಆಸ್ಪತ್ರೆ ದಾಖಲಾತಿ

ನೀವು ಯಾವುದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೂ, ಇದು ನಿಮ್ಮ ವೈದ್ಯರ ಸೂಚಿಗೆ ಸರಿಹೊಂದದಿದ್ದರೆ ಅದನ್ನು ಕವರ್ ಮಾಡಲಾಗುವುದಿಲ್ಲ. 

ಪ್ರಸವ-ಪೂರ್ವ ಹಾಗೂ ಪ್ರಸವ ನಂತರದ ವೆಚ್ಚಗಳು

ಪ್ರಸವ-ಪೂರ್ವ ಹಾಗೂ ಪ್ರಸವ ನಂತರದ ವೆಚ್ಚಗಳು, ಅವುಗಳು ಆಸ್ಪತ್ರೆ ದಾಖಲಾತಿಗೆ ಕಾರಣವಾಗದಿದ್ದರೆ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

 • ಮರುಪಾವತಿ ಕ್ಲೈಮ್ ಗಳು - ಆಸ್ಪತ್ರೆಗೆ ದಾಖಲಾದ ಎರಡು ದಿನಗಳೊಳಗೆ ನಮಗೆ 1800-258-4242 ಗೆ ಕರೆ ಮಾಡಿ ಅಥವಾ healthclaims@godigit.com ಗೆ ಇ-ಮೇಲ್ ಮಾಡಿ ತಿಳಿಸಿ. ನಿಮ್ಮ ಮರುಪಾವತಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನಾವು ಕಳಿಸಿದ ಲಿಂಕ್ ನಲ್ಲಿ ನಿಮ್ಮ ಆಸ್ಪತ್ರೆ ಬಿಲ್ ಗಳು ಹಾಗೂ ಇತರ ಎಲ್ಲಾ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಿ.

 • ನಗದುರಹಿತ ಕ್ಲೈಮ್ ಗಳು - ನೆಟ್ವರ್ಕ್ ಆಸ್ಪತ್ರೆಯನ್ನು ಆಯ್ಕೆ ಮಾಡಿ. ಇಲ್ಲಿ ನಿಮಗೆ ನೆಟ್ವರ್ಕ್ ಆಸ್ಪತ್ರೆಗಳ ಸಂಪೂರ್ಣ ಪಟ್ಟಿ ದೊರೆಯುತ್ತದೆ. ಆಸ್ಪತ್ರೆಯ ಸಹಾಯ ಡೆಸ್ಕ್ ನಲ್ಲಿ ನಿಮ್ಮ ಇ-ಹೆಲ್ಥ್ ಕಾರ್ಡ್ ಅನ್ನು ತೋರಿಸಿ, ನಗದುರಹಿತ ಮನವಿ ಪತ್ರವನ್ನು ಕೇಳಿ. ಎಲ್ಲವೂ ಸರಿಯಾಗಿದ್ದರೆ, ನಿಮ್ಮ ಕ್ಲೈಮ್ ಅನ್ನು ಆ ಕ್ಷಣವೇ ಪರಿಷ್ಕರಿಸಲಾಗುವುದು.

 • ನೀವು ಕೊರೋನಾ ವೈರಸ್ ಗಾಗಿ ಕ್ಲೈಮ್ ಮಾಡಿದ್ದರೆ, ನಿಮ್ಮ ಬಳಿ, ಐಸಿಎಂಆರ್ - ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆಯ, ಅಧಿಕೃತ ಕೇಂದ್ರದಿಂದ ಪಡೆದ ಪಾಸಿಟಿವ್ ತಪಾಸಣಾ ವರದಿ ಇರುವುದನ್ನು ಖಚಿತಪಡಿಸಿಕೊಳ್ಳಿ.

ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಲಾಭಗಳು

ಡಿಡಕ್ಟಿಬಲ್

ಒಂದೇ ಬಾರಿ ಪಾವತಿಸಿ!

ಸಹಪಾವತಿ

ವಯಸ್ಸು ಆಧಾರಿತ ಸಹಪಾವತಿ ಇಲ್ಲ

ನಗದುರಹಿತ ಆಸ್ಪತ್ರೆ

ಭಾರತದಾದ್ಯಂತ 16400+ ನೆಟ್ವರ್ಕ್ ಆಸ್ಪತ್ರೆಗಳು

ರೂಂ ಬಾಡಿಗೆ ಮಿತಿ

ರೂಂ ಬಾಡಿಗೆ ಮಿತಿ ಇಲ್ಲ. ನೀವು ಬಯಸಿದ ರೂಂ ಅನ್ನು ಆಯ್ಕೆ ಮಾಡಿ.

ಕ್ಲೈಮ್ ಪ್ರಕ್ರಿಯೆ

ಡಿಜಿಟಲ್ ಸ್ನೇಹಿ. ಹಾರ್ಡ್ ಕಾಪಿಗಳ ಅಗತ್ಯವಿಲ್ಲ!

ಕೋವಿಡ್-19 ಚಿಕಿತ್ಸೆ

ಕವರ್ ಆಗಿದೆ

ಭಾರತದಲ್ಲಿ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು