ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಿ
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಗಿ
Happy Couple Standing Beside Car
{{healthCtrl.residentPincodeError}}
Send OTP OTP Sent {{healthCtrl.mobileNumberError}}
Chat with an expert

I agree to the  Terms & Conditions

Port my existing Policy
{{healthCtrl.residentPincodeError}}
Send OTP OTP Sent {{healthCtrl.mobileNumberError}}
{{healthCtrl.otpError}}
Didn't receive SMS? Resend OTP
Chat with an expert

I agree to the  Terms & Conditions

Port my existing Policy

YOU CAN SELECT MORE THAN ONE MEMBER

{{healthCtrl.patentSelectErrorStatus}}

  • -{{familyMember.multipleCount}}+ Max {{healthCtrl.maxChildCount}} kids
    (s)

DONE
Renew your Digit policy instantly right

ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್ ಎಂದರೇನು?

ಮೆಟರ್ನಿಟಿ ಆರೋಗ್ಯ ಇನ್ಶೂರೆನ್ಸ್ ಒಂದು ಆಡ್ - ಆನ್ ಕವರ್ ಆಗಿದೆ, ಇದನ್ನು ವೈಯಕ್ತಿಕವಾಗಿ ಅಥವಾ ಕುಟುಂಬ ಆರೋಗ್ಯ ಇನ್ಶೂರೆನ್ಸ್ ಜೊತೆ ಆಯ್ಕೆ ಮಾಡಬಹುದು ಹಾಗೂ ಇದು ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.

ಈಗಾಗಲೇ ಹೊಂದಿರುವ ಅಥವಾ ಹೊಸದಾದ ಆರೋಗ್ಯ ಇನ್ಶೂರೆನ್ಸ್ ಪ್ಲಾನ್ ಪಡೆದಿರುವ ಯಾರಾದರೂ ಇದರ ಲಾಭವನ್ನು ತಮಗೆ ಅಥವಾ ತಮ್ಮ ಸಂಗಾತಿಗೆ ಸಮಯ ಬಂದಾಗ ಪಡೆಯಬಹುದು, ನಿಮ್ಮ ಎಲ್ಲಾ ಹೆರಿಗೆ ಸಂಬಂಧಿ ವೆಚ್ಚಗಳಾದ ಮಗುವಿನ ಡೆಲಿವರಿ ಮತ್ತು/ಅಥವಾ ಹೆರಿಗೆ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಅಥವಾ ವೈದ್ಯಕೀಯವಾಗಿ ಅನಿವಾರ್ಯವಾಗಿರುವ ಗರ್ಭಪಾತ ಇವುಗಳನೆಲ್ಲಾ ಕವರ್ ಮಾಡಿ ನಾವು ನೋಡಿಕೊಳ್ಳುತ್ತೇವೆ.

ಇಷ್ಟೇ ಅಲ್ಲದೆ, ಈ ಕವರ್ ಫರ್ಟಿಲಿಟಿ ಸಮಸ್ಯೆಗಳಿಂದ ಆಗುವ ವೆಚ್ಚಗಳು ಮತ್ತು ಕೆಲವು ವೈದ್ಯಕೀಯ ತೊಡಕುಗಳಿಂದ ಆಗುವ ನವಜಾತ ಶಿಶುವಿನ ಆಸ್ಪತ್ರೆ ದಾಖಲಾತಿ ಶುಲ್ಕ, ಜನನದ ದಿನಾಂಕದಿಂದ 90 ದಿನಗಳ ವರೆಗಿನ ಲಸಿಕಾ ಶುಲ್ಕಗಳು , ಈ ಎಲ್ಲಾ ವೆಚ್ಚಗಳಿಗೆ ಪರಿಹಾರ ಒದಗಿಸುತ್ತದೆ.

ಡಿಸ್ಕ್ಲೈಮರ್ : ಪ್ರಸ್ತುತ, ಡಿಜಿಟ್‌ನಲ್ಲಿ, ನಾವು ನಮ್ಮ ಹೆಲ್ತ್  ಇನ್ಶೂರೆನ್ಸ್ ಜೊತೆಗೆ ಯಾವುದೇ ಮೆಟರ್ನಿಟಿ  ಕವರ್ ಅನ್ನು ನೀಡುತ್ತಿಲ್ಲ.

ಯಾಕೆಂದರೆ ಇಂತಹ ಮೈಲಿಗಲ್ಲುಗಳು ಪ್ರತಿದಿನ ಬರುವುದಿಲ್ಲ.

ಇದು ನಿಮ್ಮ ಮೊದಲನೇ ಬಾರಿ ಅಥವಾ ಎರಡನೆಯದೇ ಆಗಿರಲಿ, ಜೀವನದ ಮುಂದಿನ ದೊಡ್ಡ ಘಟನೆಗೆ ಯೋಜನೆ ರೂಪಿಸುವುದು; ಹೆತ್ತವರಾಗುವ ಮೊದಲ ಅನುಭವ, ದಾರಿಯಲ್ಲಿರುವ ಹೊಸ ಮಗು ನಮ್ಮ ಬದುಕಿನ ಅತ್ಯಂತ ಸಂತೋಷಕರ ಹಾಗೂ ಸವಾಲೊಡ್ಡುವ ಸಮಯವಾಗಬಲ್ಲದು. ಉತ್ಸಾಹ ಹಾಗೂ ಕಾತರತೆ, ಅನಿಶ್ಚಿತತೆ ಹಾಗೂ ಚಡಪಡಿಕೆ, ಆತಂಕ ಹಾಗೂ ತೃಪ್ತಿ.

ನೀವು ನಿಮ್ಮ ಪರಿವಾರವನ್ನು ಆರಂಭಿಸುವ ಯೋಜನೆಯಲ್ಲಿದ್ದರೆ, ಅಥವಾ ನಿಮಗೆ ಈಗಾಗಲೇ ಇರುವ ಮಗುವಿಗೆ ಸೋದರ ಬಂಧ ಒದಗಿಸಲು ಯೋಚಿಸುತ್ತಿದ್ದರೆ, ಗರ್ಭಾವಸ್ಥೆಯ ಹಂತ, ಮಗುವಿನ ಜನನ, ಹಾಗೂ ಇದರ ಜೊತೆ ಬರುವ ಎಲ್ಲವೂ ಹೆಚ್ಚಾಗಿ ನಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತದೆ ಹಾಗೂ ಈ ಸಂದರ್ಭದಲ್ಲಿ ಸಹಾಯಕ್ಕೆಂದೇ ನಾವು ನಿಮ್ಮೊಂದಿಗೆ ಇದ್ದೇವೆ. ಅದೂ ಸಮಯಕ್ಕಿಂತ ಮುಂಚೆ. ಸತ್ಯ ಏನೆಂದರೆ, ನಾವು ಮಾಡದಿರುವ ಯೋಜನೆಗಳಿಗೆ ಮಾತ್ರವಲ್ಲದೇ, ಮಾಡಿರುವ ಯೋಜನೆಗಳಿಗೂ ಯೋಜನೆ ರೂಪಿಸುವುದು ಉತ್ತಮ.

Read More

ಭಾರತದಲ್ಲಿ ಹೆರಿಗೆ ವೆಚ್ಚಗಳ ಹೆಚ್ಚಳ

Maternity Costs
ಹೆಚ್ಚಿನ ನಗರಗಳಲ್ಲಿ ಮಗುವಿನ ಡೆಲಿವರಿಯ ಸರಾಸರಿ ವೆಚ್ಚ ಕನಿಷ್ಠ  ರೂ 50,000 ರಿಂದ ರೂ 70,000 ವರೆಗೆ ಇರುತ್ತದೆ.
C Section
ಭಾರತದಲ್ಲಿ ಸಿ - ಸೆಕ್ಷನ್ ಡೆಲಿವರಿ ಗಳ ವೆಚ್ಚ ಏರುತ್ತಿದ್ದು, ಹಲವು ನಗರಗಳಲ್ಲಿ ಇದು 2 ಲಕ್ಷದ ವೆರೆಗೂ ಹೋಗುತ್ತದೆ!
Pregnancy Test
ಭಾರತದಲ್ಲಿ ಹೆಚ್ಚಿನ ದಂಪತಿಗಳು ಆರ್ಥಿಕ ಜವಾಬ್ದಾರಿಗಳಿಗೆ ಹೆದರಿ ಮಗು ಹೆರಲು ಹಿಂದೆ ಮುಂದೆ ನೋಡುತ್ತಾರೆ.

ಮೆಟರ್ನಿಟಿ ಕವರ್ ಇಂದ ಯಾರು ಲಾಭವನ್ನು ಪಡೆಯಬಹುದು?

ಈ ಕೆಳಗಿನ ಮನದಂಡಗಳನ್ನು ಪೂರೈಸುವ ವ್ಯಕ್ತಿ ಅವರ ಆರೋಗ್ಯ ಇನ್ಶೂರೆನ್ಸ್ ಯೋಜನೆಯಲ್ಲಿರುವ ಮೆಟರ್ನಿಟಿ ಆಡ್ - ಆನ್ ಕವರ್ ನಿಂದ ಲಾಭವನ್ನು ಪಡೆಯಬಹುದು;

ನೀವು ಆರೋಗ್ಯ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿಯೇ ಈ ಕವರ್ ಅನ್ನು ಆಯ್ಕೆ ಮಾಡಿದ್ದರೆ ಅಥವಾ ನಂತರದ ಹಂತಗಳಲ್ಲಿ ಅದನ್ನು ಸೇರಿಸಿದ್ದರೆ.

ನೀವು ನಿಗದಿತ ಕಾಯುವ ಅವಧಿಯನ್ನು ಪೂರ್ಣಗೊಳಿಸಿದ್ದರೆ, ಆಗ ಮಾತ್ರ ನೀವು ಈ ಮೆಟರ್ನಿಟಿ  ಕವರ್‌ನಿಂದ ಕ್ಲೈಮ್ ಮಾಡಬಹುದು ಮತ್ತು ಪ್ರಯೋಜನ ಪಡೆಯಬಹುದು.

ನೀವು ವಿವಾಹಿತರಾಗಿದ್ದು < 40 ವಯಸ್ಸಿನವರಾಗಿದ್ದರೆ.

ಈಗಾಗಲೇ ಎರಡರಿಂದ ಹೆಚ್ಚು ಮಕ್ಕಳಿಗೆ ನೀವು ಈ ಕವರ್ ಅನ್ನು ಬಳಸದೇ ಇದ್ದರೆ.

ಮೆಟರ್ನಿಟಿ ಇನ್ಶೂರೆನ್ಸ್ ಇವರಿಗೆ ಉತ್ತಮ

1
ನವವಿವಾಹಿತ ದಂಪತಿಗಳಿಗೆ, ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಕುಟುಂಬ ಆರಂಭಿಸುವ ಯೋಜನೆಯಲ್ಲಿದ್ದರೆ.
2
ಶೀಘ್ರವೇ ಮದುವೆಯಾಗಲು ಯೋಚಿಸುತ್ತಿದ್ದವರಿಗೆ ಹಾಗೂ ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಮಗುವನ್ನು ಹೊಂದಿದವರಿಗೆ.
3
ಈಗಾಗಲೇ ಒಂದು ಮಗುವಿದ್ದು, ಕನಿಷ್ಟ ಮುಂದಿನ ಎರಡು ವರ್ಷಗಳಲ್ಲಿ ಇನ್ನೊಂದು ಮಗುವಿನ ಯೋಜನೆಯಲ್ಲಿರುವವರಿಗೆ.
4
ಶೀಘ್ರದಲ್ಲಿ ಮಗುವಿನ ಯೋಜನೆ ಇಲ್ಲದಿದ್ದರೂ, ಸಂರಕ್ಷಣೆ ಬಯಸುವವರಿಗೆ.

ಯುವ ದಂಪತಿಗಳಿಗೆ ಮೆಟರ್ನಿಟಿ ಬೆನಿಫಿಟ್ ಯಾಕೆ ಮುಖ್ಯ?

ಆರ್ಥಿಕ ಭದ್ರತೆ

ಆರ್ಥಿಕ ಭದ್ರತೆ

ನಿಮ್ಮ ಜೀವನದ ಒಂದು ಪ್ರಮುಖ ಕ್ಷಣದಲ್ಲಿ ಆರ್ಥಿಕವಾಗಿ ಭದ್ರವಾಗಿರಿ. ನಿಮ್ಮ ಆರೋಗ್ಯ ಇನ್ಶೂರೆನ್ಸ್ ನಲ್ಲಿ ನೀವು ಮೆಟರ್ನಿಟಿ ಬೆನಿಫಿಟ್ ಕವರ್ ಸೇರಿಸಿದರೆ ಇದು, ನೀವು ಉಳಿತಾಯದ ಬಗ್ಗೆ ಹೆಚ್ಚು ಯೋಚನೆ ಮಾಡದೆ ಇರುವ ಹಾಗೆ ಖಚಿತಪಡಿಸಿ, ನಿಮಗೆ ಗೊಂದಲ ರಹಿತ ಡೆಲಿವರಿ ನೀಡಿ, ನಿಮ್ಮ ಪರಿವಾರ ಆರಂಭಿಸುವ ಅನುಭವವನ್ನು ಸುಗಮವಾಗಿಸುತ್ತದೆ.

ಹೆತ್ತವರಾಗಿ ಆರಾಮದಾಯಕ ಆರಂಭ

ಹೆತ್ತವರಾಗಿ ಆರಾಮದಾಯಕ ಆರಂಭ

ಮೆಟರ್ನಿಟಿ ಬೆನಿಫಿಟ್ ಕವರ್ ಡೆಲಿವರಿ ಸಮಯದ ವೆಚ್ಚಗಳನ್ನಲ್ಲದೆ, ನಿಮ್ಮ ನವಜಾತ ಶಿಶುವಿಗೆ ಅದರ ಜೀವನದ ಮೊದಲ 90 ದಿನಗಳ(ವೈದ್ಯಕೀಯ ಸಮಸ್ಯೆಗಳ ಕವರ್ ಮತ್ತು ಅಗತ್ಯ ಲಸಿಕೆಗಳು) ವರೆಗೆ ಕವರ್ ನೀಡುತ್ತದೆ. ಆದ್ದರಿಂದ ನೀವು ನಿಶ್ಚಿಂತೆಯಿಂದ ಗುಣಮುಖರಾಗಿ, ನಿಮ್ಮ ಹೊಸ ಪಯಣವನ್ನು ಆನಂದಿಸಬಹುದು.

ಬಹುಮೂಲ್ಯ ದೀರ್ಘಾವಧಿ ಲಾಭಗಳು

ಬಹುಮೂಲ್ಯ ದೀರ್ಘಾವಧಿ ಲಾಭಗಳು

ಕೆಲವು ಮೆಟರ್ನಿಟಿ ಕವರ್‌ಗಳು ನಿಮಗೆ ಎರಡನೇ ಮಗು ಆಗುವಾಗ ಇನ್ಸೂರ್ಡ್ ಮೊತ್ತದ ಮೇಲೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತವೆ.

ವೈದ್ಯಕೀಯವಾಗಿ ಅನಿವಾರ್ಯವಾದ ಗರ್ಭಪಾತಗಳಿಗೆ ಕವರ್

ವೈದ್ಯಕೀಯವಾಗಿ ಅನಿವಾರ್ಯವಾದ ಗರ್ಭಪಾತಗಳಿಗೆ ಕವರ್

ಅಗತ್ಯ ಬಿದ್ದರೆ ವೈದ್ಯಕೀಯವಾಗಿ ಗರ್ಭಪಾತ ಮಾಡಿಸುವ ಆಯ್ಕೆಯನ್ನು ಹೊಂದಿದೆ. ನಮ್ಮ ಮೆಟರ್ನಿಟಿ ಬೆನಿಫಿಟ್ ಕವರ್ ನಲ್ಲಿ ವೈದ್ಯಕೀಯವಾಗಿ ಅನಿವಾರ್ಯವಾದ ಹಾಗೂ ಕಾನೂನುಬದ್ಧ ಗರ್ಭಪಾತಗಳನ್ನು ಕವರ್ ಮಾಡಲಾಗುತ್ತದೆ.

ಮನಶಾಂತಿ

ಮನಶಾಂತಿ

ಮನಸ್ಸಿನ ಶಾಂತಿ, ನೆಮ್ಮದಿ. ನಮ್ಮ ಮಕ್ಕಳು ನಮ್ಮ ಸಂತೋಷದ ಮೂಟೆ , ಮತ್ತು ವೆಚ್ಚಗಳ ಬಗ್ಗೆ ನೀವು ಒತ್ತಡ ತೆಗೆದುಕೊಂಡು, ಸಂತೋಷವನ್ನು ನಿಮ್ಮಿಂದ ದೂರ ಮಾಡಲು ನಾವು ಬಯಸುವುದಿಲ್ಲ. ನಮ್ಮಲ್ಲಿದೆ ಮೆಟರ್ನಿಟಿ ಕವರ್ ನಿಮಗಾಗಿ!

ಮೆಟರ್ನಿಟಿ ಕವರ್ ಜೊತೆಗಿನ ಆರೋಗ್ಯ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ

ಮೆಟರ್ನಿಟಿ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪಶ್ನೆಗಳು