ಡಿಜಿಟ್ ಹೆಲ್ತ್ ಇನ್ಸೂರೆನ್ಸ್ ನಲ್ಲಿ ರೂಂ ಬಾಡಿಗೆಯ ಮಿತಿ ಇಲ್ಲವೇ ಇಲ್ಲ

ಅಪಘಾತ, ಅನಾರೋಗ್ಯ ಮತ್ತು ಕೋವಿಡ್ – 19 ಸಲುವಾಗಿ ಆಸ್ಪತ್ರೆ ದಾಖಲಾತಿಯ ರಕ್ಷಣೆ ನಿಮ್ಮ ಡಿಜಿಟ್ ಪಾಲಿಸಿಯನ್ನು ತಕ್ಷಣವೇ ರಿನ್ಯೂ ಮಾಡಿ
Happy Couple Standing Beside Car
Chat with an expert

I agree to the  Terms & Conditions

Port my existing Policy
Renew your Digit policy

(Incl 18% GST)

ಹೆಲ್ತ್ ಇನ್ಸೂರೆನ್ಸ್ ನಲ್ಲಿ ಮಿತಿರಹಿತ ರೂಂ ಬಾಡಿಗೆ ಎನ್ನುವುದರ ಅರ್ಥವೇನು?

ಒಂದು ವಿವರಣಾತ್ಮಕ ಉದಾಹರಣೆ ಸಹಿತ ನಿಮಗೆ ಇದನ್ನು ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇವೆ. ಏನೆಂದರೆ, ನೀವು 3 ಲಕ್ಷ ರೂಪಾಯಿಗಳ ಮೂಲ ಆರೋಗ್ಯ ವಿಮೆಯನ್ನು ಹೊಂದಿರುವಿರಿ ಎಂದುಕೊಳ್ಳೋಣ. 4 ದಿನಗಳವರೆಗೆ ಬೆಂಗಳೂರಿನಂತಹ ಬಿ ವಲಯ ನಗರದಲ್ಲಿ ನೀವು ಆಸ್ಪತ್ರೆಗೆ ದಾಖಲಾಗುತ್ತಿದ್ದೀರಿ ಮತ್ತು ನಿಮ್ಮ ಹೆಲ್ಥ್ ಇನ್ಶೂರೆನ್ಸ್ ಕಡೆಯಿಂದ ನೀವು ಇನ್ಶ್ಯೂರ್ ಮಾಡಿದ ಮೊತ್ತದ 1% ವರೆಗಿನ ರೂಮ್ ಬಾಡಿಗೆ ಮಿತಿಯನ್ನು ಒಳಗೊಂಡಿರುತ್ತದೆ, ಅಂದರೆ ಒಂದು ದಿನಕ್ಕೆ 3,000 ರೂಪಾಯಿಗಳು.

ರೂಂ ಬಾಡಿಗೆ ಮೇಲೆ ಮಿತಿ ಇಲ್ಲದ ಡಿಜಿಟ್ ಹೆಲ್ತ್ ಇನ್ಸೂರೆನ್ಸ್ ರೂಂ ಬಾಡಿಗೆ ಮೇಲೆ ಮಿತಿ ಹೊಂದಿರುವ ಇತರ ಇನ್ಸೂರೆನ್ಸ್
ಇನ್ಶ್ಯೂರ್ ಮಾಡಿದ ಮೊತ್ತ ₹3 Lacs ₹3 Lacs
ರೂಂ ಬಾಡಿಗೆ ಮಿತಿ ರೂಂ ಬಾಡಿಗೆ ಮೇಲೆ ಮಿತಿ ಇರುವುದಿಲ್ಲ ನಿಮ್ಮ ಇನ್ಶ್ಯೂರ್ ಮಾಡಿದ ಮೊತ್ತದ 1% ಅಂದರೆ 3000 ರೂಪಾಯಿಗಳು
ಆಸ್ಪತ್ರೆಗೆ ದಾಖಲಾಗುವ ದಿನಗಳು 4 4
ಪ್ರೈವೇಟ್ ವಾರ್ಡ್ ಗೆ ರೂಂ ಬಾಡಿಗೆ(ಒಂದು ದಿನಕ್ಕೆ) ₹5000 ₹5000
ಪ್ರೈವೇಟ್ ವಾರ್ಡ್ ಗೆ ರೂಂ ಬಾಡಿಗೆ(ಒಂದು ದಿನಕ್ಕೆ) ₹20000 ₹20000
ಇನ್ಸೂರೆನ್ಸ್ ಕಂಪನಿ ಕಡೆಯಿಂದ ಕವರ್ ಆಗುವ ರೂಂ ಬಾಡಿಗೆ ₹20000 ₹12000
ನೀವು ಕಟ್ಟುವುದು ₹0 ₹8000

ಇಲ್ಲಿ ನೀವು ನೋಡುವಂತೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯವರು ನಿಮ್ಮ ರೂಮ್ ಬಾಡಿಗೆ ಮೇಲೆ ಮಿತಿ ಹಾಕಿರುವುದರಿಂದ, ನೀವು ಕನಿಷ್ಟ 8,000 ರೂಪಾಯಿಗಳನ್ನು (ರೂಮ್ ಬಾಡಿಗೆ ಮಿತಿಯಿಂದಾಗಿ ಇದು ಹೆಚ್ಚುವರಿ ಮೊತ್ತ) ಹೆಚ್ಚು ಪಾವತಿಸುವಿರಿ.

ಆದರೆ, ಒಂದು ವೇಳೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯಾವುದೇ ರೂಮ್ ಬಾಡಿಗೆ ಮಿತಿ ಒಳಗೊಂಡಿರದೆ ಇದ್ದರೆ, ನೀವು ಈ ಹೆಚ್ಚುವರಿ ಮೊತ್ತವನ್ನು ಪಾವತಿ ಮಾಡಬೇಕಾದ ಅಗತ್ಯತೆ ಇಲ್ಲ, ಹೀಗಾಗಿ ನಿಮ್ಮ ಪಾಕೆಟ್ ಅನ್ನು ಈ ರೀತಿ ಹೆಚ್ಚುವರಿ ವೆಚ್ಚಗಳಿಂದ ಉಳಿಸುತ್ತದೆ!

ಭಾರತದಲ್ಲಿ ಸರಾಸರಿ ಆಸ್ಪತ್ರೆ ರೂಂ ಬಾಡಿಗೆ ಎಷ್ಟು?

ICU ರೂಮ್ ಬಾಡಿಗೆಗಳು ಸೇರಿದಂತೆ ಭಾರತದ ಆಸ್ಪತ್ರೆಗಳಲ್ಲಿ ವಿವಿಧ ರೂಮ್ಗಳಿಗೆ ಇರುವಂತಹ ಸರಾಸರಿ ರೂಮ್ ಬಾಡಿಗೆ ವೆಚ್ಚವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಆಗುವಂತೆ ಇಲ್ಲೊಂದು ಟೇಬಲ್ ಇದೆ.

ಹಾಸ್ಪಿಟಲ್ ರೂಂ ವಿಧ ಜೋನ್ ಎ ಜೋನ್ ಬಿ ಜೋನ್ ಸಿ
ಜನರಲ್ ವಾರ್ಡ್ ₹1432 ₹1235 ₹780
ಸೆಮಿ ಪ್ರೈವೇಟ್ ವಾರ್ಡ್(2 ಆಥವಾ ಅದಕ್ಕಿಂತ ಹೆಚ್ಚಿನ ಶೇರಿಂಗ್) ₹4071 ₹3097 ₹1530
ಪ್ರೈವೇಟ್ ವಾರ್ಡ್ ₹5206 ₹4879 ₹2344
ಐಸಿಯು ₹8884 ₹8442 ₹6884

ಗಮನಿಸಿ - ಇದೊಂದು ಉದಾಹರಣೆ ಅಷ್ಟೇ. ವೆಚ್ಚಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಮತ್ತು ನಗರದಿಂದ ನಗರಕ್ಕೆ ಬೇರೆಬೇರೆಯಾಗಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ.

ಡೇಟಾ ಮೂಲ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ನಲ್ಲಿ ರೂಮ್ ಬಾಡಿಗೆ ಮೇಲೆ ಮಿತಿ ಇಲ್ಲದಿದ್ದರೆ ಸಿಗುವ ಪ್ರಯೋಜನಗಳು?

Choose any hospital room you prefer

ನಿಮಗೆ ಬೇಕೆನಿಸುವ ಯಾವುದೇ ಹಾಸ್ಪಿಟಲ್ ರೂಂ ಆಯ್ಕೆ ಮಾಡಿ

ನಿಮ್ಮ ರೂಮ್ ಆಯ್ಕೆ ಮಾಡಲು ನಿಮಗೆ ಯಾವುದೇ ಗಡಿಯಿಲ್ಲ ಎಂಬ ಅಂಶವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಮಿತಿರಹಿತವಾಗಿರುವ ರೂಮ್ ಬಾಡಿಗೆ ನಿಮಗೆ ಸಿಗುವ ಬಹಳ ಮುಖ್ಯವಾದ ಪ್ರಯೋಜನವಾಗಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಬೇರೆ ಬೇರೆ ಆದ್ಯತೆಗಳನ್ನು ಹೊಂದಿರುತ್ತಾರೆ ಮತ್ತು ನೀವು ಆರಾಮದಾಯಕವಾದ ಕೋಣೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಆಸ್ಪತ್ರೆಯಲ್ಲಿ ನಿಮ್ಮ ಅನುಭವವನ್ನು ಉತ್ತಮಗೊಳಿಸಿಕೊಳ್ಳಬಹುದು. ಇನ್ನೂ ಇತರ ಇಬ್ಬರು ರೋಗಿಗಳೊಂದಿಗೆ ರೂಮ್ ಹಂಚಿಕೊಳ್ಳಲು ನೀವು ಮನಸ್ಸು ಮಾಡಬಹುದು ಅಥವಾ ಸಂಪೂರ್ಣವಾಗಿ ನಿಮಗಾಗಿ ನೀವು ಒಂದು ಖಾಸಗಿ ಕೊಠಡಿಯನ್ನು ಹೊಂದಲು ಇಷ್ಟ ಪಡಬಹುದು, ಅದರ ಆಯ್ಕೆಯು ನಿಮ್ಮದಾಗಿದೆ!

Freedom to use your health insurance the way you like

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ನೀವು ಇಷ್ಟಪಡುವ ರೀತಿಯಲ್ಲಿ ಬಳಸುವ ಸ್ವಾತಂತ್ರ್ಯ

ನೀವು ಆಲೋಚಿಸಿ ನಿಮಗಾಗಿ ಒಂದು ಬೇಸಿಕ್ ರೂಮ್ ಅಥವಾ ಡೀಲಕ್ಸ್ ರೂಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು; ನಿಮ್ಮ ಚಿಕಿತ್ಸೆ ಮತ್ತು ಆಸ್ಪತ್ರೆಯ ವೆಚ್ಚಗಳ ಒಟ್ಟು ಮೊತ್ತದ ಆಧಾರದ ಮೇಲೆ ನಿಮ್ಮ ಕ್ಲೈಮ್ ಅನ್ನು ನೋಂದಾಯಿಸಲಾಗಿದೆ. ನಿಮ್ಮ ರೂಮ್ ಬಾಡಿಗೆಯಲ್ಲಿ ಯಾವುದೇ ಮಿತಿ ಹೊಂದಿಲ್ಲದಿರುವುದರಿಂದ ನೀವು ಆಸ್ಪತ್ರೆ ವೆಚ್ಚಗಳನ್ನು ಸರಾಗವಾಗಿ ವಿಭಜಿಸಲು ಮತ್ತು ನಿಮ್ಮ ಒಟ್ಟು ಚಿಕಿತ್ಸೆಗೆ ಹೇಗೆ ಖರ್ಚು ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಲು ನಿಮಗೆ ಅನುಮತಿಸುತ್ತದೆ. ಸಹಜವಾಗಿ, ಇದು ನಿಮ್ಮ ಒಟ್ಟು ಕ್ಲೈಮ್ ಮೊತ್ತವು ನಿಮ್ಮ ಇನ್ಶೂರೆನ್ಸ್ ಮೊತ್ತದವರೆಗೆ ಇರುತ್ತದೆ.

Comfortable stay at the hospital

ಆಸ್ಪತ್ರೆಯಲ್ಲಿ ಆರಾಮವಾಗಿರುವುದು

ನೀವು ಯಾವುದಾದರೂ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ, ಸಾಧ್ಯವಾದಷ್ಟು ಆರಾಮವಾಗಿರಲು ನೀವು ಹೆಚ್ಚು ಹಂಬಲಿಸುತ್ತೀರಿ, ಅಲ್ಲವೇ? ನಿಮ್ಮ ವೈಯಕ್ತಿಕ ಆದ್ಯತೆಯ ಆಧಾರದ ಮೇಲೆ, ಯಾವುದೇ ರೂಮ್ ಬಾಡಿಗೆ ಮಿತಿ ಇಲ್ಲದಿದ್ದರೆ ಅದು ನಿಮಗೆ ಹೆಚ್ಚು ಆರಾಮದಾಯಕವಾಗಿರುವ ಕೋಣೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಆಸ್ಪತ್ರೆಯಲ್ಲಿ ನಿಮ್ಮ ವಾಸ್ತವ್ಯ ಸಹ ಆರಾಮದಾಯಕ ಎನಿಸುತ್ತದೆ.