ಹೆಲ್ತ್ ಇನ್ಶೂರೆನ್ಸ್ ತೆರಿಗೆ ಪ್ರಯೋಜನಗಳು
I agree to the Terms & Conditions
I agree to the Terms & Conditions
ಒಂದೊಮ್ಮೆ ಯೋಚಿಸಿ ನೋಡಿ, ಕೇವಲ ಒಂದು ಕೆಲಸದಿಂದ ಎರಡು ಲಾಭಗಳು ದೊರೆತರೆ ಹೇಗೆಂದು; ಅದ್ಭುತ, ಅಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದುವುದು ಅಂತಹ ಒಂದು ಕೆಲಸವಾಗಿದೆ; ಏಕೆಂದರೆ ಇದರಿಂದ, ಒಂದು ನಿಮಗೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕ ಭದ್ರತೆ ದೊರೆಯುತ್ತದೆ, ಹಾಗೂ ಎರಡು, ತೆರಿಗೆ ಲಾಭಗಳು ಸಿಗುತ್ತವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ಹೆಲ್ತ್ ಇನ್ಶೂರೆನ್ಸ್ ಕಂತು ಪಾವತಿ ಮಾಡಿದಾಗ ತೆರಿಗೆ ಮೇಲೆ ಲಾಭಗಳು ದೊರೆಯಲಿವೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ಆರೋಗ್ಯ ವಿಮೆಯ ಕಂತು ಪಾವತಿ ಮಾಡಿದಾಗ ತೆರಿಗೆ ಮೇಲೆ ಲಾಭಗಳು ದೊರೆಯುತ್ತವೆ
ಸಂದರ್ಭ |
80D ಅಡಿಯಲ್ಲಿ ಡಿಡಕ್ಷನ್ |
ಸ್ವಯಂ ಮತ್ತು ಕುಟುಂಬ ಸದಸ್ಯರು (60 ವರ್ಷದೊಳಗಿನ ಎಲ್ಲ ಸದಸ್ಯರು) |
₹25,000 |
ಸ್ವಯಂ ಮತ್ತು ಕುಟುಂಬ ಸದಸ್ಯರು + ಪೋಷಕರು (60 ವರ್ಷದೊಳಗಿನ ಎಲ್ಲ ಸದಸ್ಯರು) |
₹25,000 + ₹25,000) = ₹50,000 |
ಸ್ವಯಂ ಮತ್ತು ಕುಟುಂಬ ಸದಸ್ಯರು (60 ವರ್ಷದೊಳಗಿನ ಎಲ್ಲ ಸದಸ್ಯರು) + ಹಿರಿಯ ನಾಗರಿಕ ಪೋಷಕರು |
₹25,000 + ₹50,000 = ₹75,000 |
ಸ್ವಯಂ ಮತ್ತು ಕುಟುಂಬ ಸದಸ್ಯರು (60 ವರ್ಷ ಮೇಲ್ಪಟ್ಟಿರುವ ಕುಟುಂಬದ ಅತಿ ಹಿರಿಯ ಸದಸ್ಯ) + ಹಿರಿಯ ನಾಗರಿಕ ಪೋಷಕರು |
₹50,000 + ₹50,000) = ₹1,00,000 |
ಸೆಕ್ಷನ್ 80D ಅಡಿಯಲ್ಲಿ ಕ್ರಮವಾಗಿ 5.20%, 20.8% ಮತ್ತು 31.2% ಗಳಷ್ಟು ತೆರಿಗೆ ಕಟ್ಟುವ ವ್ಯಕ್ತಿಗಳು ಗರಿಷ್ಠ ಉಳಿತಾಯವಾಗಿ ರೂ.1,300 ರೂ.5,200 ಹಾಗೂ ರೂ. 7,800 ಉಳಿಸಬಹುದಾಗಿದೆ. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ನೀವು ಉಳಿಸಬಹುದಾದ ಎಲ್ಲಕ್ಕಿಂತ ಹೆಚ್ಚಿನ ಮೊತ್ತವಾಗಿದೆ.
ಹೆಲ್ತ್ ಇನ್ಶೂರೆನ್ಸ್ ಕಂತುಗಳು ಹಿರಿಯ ನಾಗರಿಕರಿಗೆ ಯಾವಾಗಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೆಲವೊಮ್ಮೆ ವಯಸ್ಸಾದವರಿಗೆ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮೆಡಿಕಲ್ ಇನ್ಶೂರೆನ್ಸ್ ಅನ್ನು ಒದಗಿಸಲು ಇನ್ಶೂರೆನ್ಸ್ ಕಂಪನಿಗಳು ಒಲವು ತೋರದೆ ಇರುವ ಸಾಧ್ಯತೆಯಿರಬಹುದು.
ಆದಾಗ್ಯೂ, ಹೆಚ್ಚಿನ ವೈದ್ಯಕೀಯ ವೆಚ್ಚಗಳನ್ನು ಹೊಂದಿರುವ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಂದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಧ್ಯವಾಗದ ಅಥವಾ ಹೆಚ್ಚಿನ ವಿಮಾ ಕಂತುಗಳನ್ನು ಪಾವತಿಸಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ 2018ರ ಸಾಲಿನ ಬಜೆಟ್ ಸ್ವಲ್ಪ ಪರಿಹಾರವನ್ನು ನೀಡಿದೆ.
ಈ ಬಜೆಟ್ ನಲ್ಲಿ ಮಂಡಿಸಿರುವಂತೆ ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚಗಳಿಗೆ ಡಿಡಕ್ಷನ್ ಅನ್ನು ಅನುಮತಿಸುವ ತಿದ್ದುಪಡಿಯನ್ನು ಸೆಕ್ಷನ್ 80Dಗೆ ಮಾಡಲಾಗಿದೆ. ಈ ಕಡಿತವನ್ನು ಸ್ವತಃ ಹಿರಿಯ ನಾಗರಿಕರು ಅಥವಾ ಹಿರಿಯ ನಾಗರಿಕ ಪೋಷಕರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿರುವ ಅವರ ಮಕ್ಕಳು ಕ್ಲೈಮ್ ಮಾಡಬಹುದು.
ಈ ಕೆಳಗಿನವುಗಳ ಕುರಿತು ಇನ್ನು ಹೆಚ್ಚು ತಿಳಿಯಿರಿ
ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ನಿಮ್ಮಲ್ಲಿ ಅಗತ್ಯವಾಗಿ ಇರಬೇಕಾದ ದಾಖಲೆಗಳೆಂದರೆ ನಿಮ್ಮ ವಿಮಾಕಂತು ಪಾವತಿ ರಸೀದಿ ಮತ್ತು ನಿಮ್ಮ ಕುಟುಂಬ ಸದಸ್ಯರ ಹೆಸರು ಮತ್ತು ಅವರ ಸಂಬಂಧ ಮತ್ತು ವಯಸ್ಸನ್ನು ತೋರಿಸುವ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ನಕಲು ಪ್ರತಿ. ಪೋಷಕರ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಸಂದರ್ಭದಲ್ಲಿ, ಪ್ರತಿಪಾದಕನು ತನ್ನ ಹೆಸರಿನಲ್ಲಿ ಪಾವತಿ ವಿವರಗಳನ್ನು ಒದಗಿಸುವ ಮೂಲಕ ಇನ್ಶೂರೆನ್ಸ್ ಕಂಪನಿಯಿಂದ 80D ಪ್ರಮಾಣಪತ್ರವನ್ನು ಪಡೆಯಬೇಕಾಗಿರುತ್ತದೆ.