ರಿನೀವಲ್ ಮಾಡುವಾಗ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಏನಾದರೂ ಬದಲಾವಣೆ ಆಗುತ್ತದೆಯೇ?

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ನೀವು ರಿನೀವ್ ಮಾಡಿದಾಗ ಏನಾಗುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ ನಿಮ್ಮ ಡಿಜಿಟ್ ಪಾಲಿಸಿಯನ್ನು ತಕ್ಷಣವೇ ರಿನೀವ್ ಮಾಡಿ.

I agree to the  Terms & Conditions

Port my existing Policy

ರಿನೀವಲ್ ಮೇಲೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಏಕೆ ಹೆಚ್ಚಾಗುತ್ತದೆ?

ರಿನೀವಲ್‌ನ ಮೇಲೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಲು ಕಾರಣಗಳು

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವಾಗ ನೀವು ಪರಿಗಣಿಸಬೇಕಾದ ವಿಷಯಗಳು

ರಿನಿವಲ್ ಸಮಯದಲ್ಲಿ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಮತ್ತು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಉಳಿಸಲು, ಕೆಲವು ಉಪಯುಕ್ತ ಸಲಹೆಗಳು

  • ಯಾವಾಗಲೂ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಮುಂಚಿತವಾಗಿಯೇ ಪರಿಶೀಲಿಸುವ ಮತ್ತು ರಿನೀವ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಮುಕ್ತಾಯ ದಿನಾಂಕದವರೆಗೆ ಕಾಯುವುದು ಯಾವಾಗಲೂ ಕೆಟ್ಟ ಉಪಾಯವಾಗಿದೆ! ಕನಿಷ್ಠ 45-ದಿನಗಳ ಮೊದಲು ಪ್ರಾರಂಭಿಸುವುದು ಅದರ ಬಗ್ಗೆ ಯೋಚಿಸುವ ಉತ್ತಮ ಮಾರ್ಗವಾಗಿದೆ! ಇದರಿಂದ, ನೀವು ಯಾವುದೇ ರಿನೀವಲ್‌ನ ಪ್ರಯೋಜನಗಳು ಅಥವಾ ಬೋನಸ್‌ಗಳನ್ನು ಕಳೆದುಕೊಳ್ಳುವುದಿಲ್ಲ  (ನಿಮ್ಮ ಪಾಲಿಸಿಯನ್ನು ಅದರ ಮುಕ್ತಾಯ ದಿನಾಂಕದ ಮೊದಲು ರಿನೀವ್ ಮಾಡದಿದ್ದರೆ, ರಿನೀವಲ್‌ನ ಪ್ರಯೋಜನಗಳು ಮತ್ತು ಯಾವುದೇ ವಿಶೇಷ ಬೋನಸ್‌ಗಳು ಅನ್ವಯಿಸುವುದಿಲ್ಲ).

  • ನಿಮ್ಮ ಕುಟುಂಬದ ಸದಸ್ಯರಿಗಾಗಿ ನೀವು ಹೊಸ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ರಿನೀವ್ ಮಾಡಿಸುತ್ತಿದ್ದರೆ ಅಥವಾ ಖರೀದಿಸುತ್ತಿದ್ದರೆ, ಎಲ್ಲರಿಗೂ ಒಂದೇ ಇನ್ಶೂರೆನ್ಸ್ ಮೊತ್ತವನ್ನು ಕುರುಡಾಗಿ ಆಯ್ಕೆ ಮಾಡಬೇಡಿ. ಆರೋಗ್ಯದ ವಿಷಯಗಳು ವಯಸ್ಸಿಗೆ ತಕ್ಕಂತೆ ಬದಲಾಗುತ್ತವೆ. ಆದ್ದರಿಂದ ನಿಮ್ಮ ಕುಟುಂಬದ ಆರೋಗ್ಯ ಸ್ಥಿತಿಗಳಿಗೆ ಅನುಗುಣವಾಗಿ ನಿಮ್ಮ ಕುಟುಂಬದ ಸದಸ್ಯರಿಗೆ ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಿ. ಉದಾಹರಣೆಗೆ: ನಿಮ್ಮ ಚಿಕ್ಕ ಮಕ್ಕಳಿಗೆ ಕನಿಷ್ಠ 1-2 ಲಕ್ಷದ ಕವರೇಜ್‌ ಸಾಕಾಗಬಹುದು ಆದರೆ ನಿಮ್ಮ ಪೋಷಕರಿಗೆ 5 ರಿಂದ 10 ಲಕ್ಷಗಳಿಗೂ ಹೆಚ್ಚಿನ ಇನ್ಶೂರೆನ್ಸ್ ಮೊತ್ತ ಬೇಕಾಗಬಹುದು. ಸರಿಯಾದ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡುವುದರಿಂದ ಅದು ನಿಮ್ಮ ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ನೀವು ಸ್ವಲ್ಪ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

  • ಪಾಲಿಸಿಯ ವರ್ಷದಲ್ಲಿ ನೀವು ಹೊಸ ಅನಾರೋಗ್ಯ ಅಥವಾ ಕಾಯಿಲೆಯಿಂದ ಬಳಲುತ್ತಿದ್ದರೆ, ರಿನೀವಲ್‌ನ ಸಮಯದಲ್ಲಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ ಈ ವಿಷಯವನ್ನು ಬಹಿರಂಗಪಡಿಸುವುದು ಉತ್ತಮವಾಗಿದೆ ಮತ್ತು ನಿಮ್ಮ ಪಾಲಿಸಿಯಲ್ಲಿ, ಆ ಕವರೇಜ್‌ನ ಬಗ್ಗೆ ಸರಿಯಾಗಿ ಪರಿಶೀಲಿಸಿ. ಇದರಿಂದ ಕ್ಲೈಮ್‌ಗಳ ಸಮಯದಲ್ಲಿ ನೀವು  ಯಾವುದೇ ಕೊನೆಯ ಕ್ಷಣದ ಆಶ್ಚರ್ಯಗಳಿಗೆ ಸಿದ್ಧರಿರಬೇಕಿಲ್ಲ!

  • ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ರಿನೀವಲ್ ಪ್ರಯೋಜನಗಳ ಕೊಡುಗೆಗಳನ್ನು ನೋಡಲು ನಿಮ್ಮ ಪಾಲಿಸಿಯನ್ನು ಪರಿಶೀಲಿಸಿ. ಇದರಿಂದ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ರಿನೀವಲ್‌ನ ಸಮಯದಲ್ಲಿ ನೀವು ಅವುಗಳನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಬಹುದು.