ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಿ
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಗಿ

I agree to the  Terms & Conditions

Port my existing Policy

ಹೆಲ್ತ್ ಇನ್ಶೂರೆನ್ಸ್ ಎಂದರೇನು - ಎಲ್ಲವನ್ನೂ ವಿವರಿಸಲಾಗಿದೆ

ನಿಮಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಏಕೆ ಬೇಕು?

1
2016 ರಂತೆ ಜೀವಿತಾವಧಿಯು, ಜನನದ ಸಮಯದಲ್ಲಿ  ಪುರುಷರಿಗೆ 68.7 ವರ್ಷಗಳು ಮತ್ತು ಮಹಿಳೆಯರಿಗೆ 70.2 ವರ್ಷಗಳು. ಜಾಗತಿಕ ಸರಾಸರಿಯು ಕ್ರಮವಾಗಿ 70 ಮತ್ತು 75 ವರ್ಷಗಳು. (1)
2
2017 ರಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು ಸಾವುಗಳಲ್ಲಿ ಸುಮಾರು 61% ರಷ್ಟು ಸಾವು, ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸಿವೆ. (2)
3
2017 ರ ಹೊತ್ತಿಗೆ ಭಾರತದಲ್ಲಿ ಸುಮಾರು 224 ಮಿಲಿಯನ್ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. (3)
4
ಸರಿಸುಮಾರು 73 ಮಿಲಿಯನ್ ಭಾರತೀಯರು ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ, ಇದು ವಿವಿಧ ವೈದ್ಯಕೀಯ ತೊಂದರೆಗಳಿಗೆ ಕಾರಣವಾಗಬಹುದು. ಈ ಸಂಖ್ಯೆಯು 2025 ರ ವೇಳೆಗೆ 134 ಮಿಲಿಯನ್‌ನಷ್ಟು ಏರಿಕೆಯಾಗಬಹುದೆಂದು  ನಿರೀಕ್ಷಿಸಲಾಗಿದೆ. (4)

ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಪ್ರಯೋಜನಗಳು ಯಾವುವು?

ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸಗಳ ವಿಧಗಳು

ಹೆಲ್ತ್ ಇನ್ಶೂರೆನ್ಸ್ ಮತ್ತು ಲೈಫ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ.

ಲೈಫ್ ಇನ್ಶೂರೆನ್ಸ್ ಪಾಲಿಸಿಯು ಅಕಾಲಿಕ ಮರಣದ ಸಂದರ್ಭದಲ್ಲಿ ಮಾತ್ರ ಪಾಲಿಸಿದಾರನ ಕುಟುಂಬದ ಅವಲಂಬಿತ ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಸುರಕ್ಷಿತಗೊಳಿಸುವ ಗುರಿಯನ್ನು ಹೊಂದಿದೆ. ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಗುಣಮಟ್ಟದ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಲು ಪ್ರಯೋಜನವನ್ನು ನೀಡುತ್ತದೆ.

ವ್ಯತ್ಯಾಸದ ಅಂಶಗಳು

ಹೆಲ್ತ್ ಇನ್ಶೂರೆನ್ಸ್

ಲೈಫ್ ಇನ್ಶೂರೆನ್ಸ್

ಗುರಿ

ಕೆಲವು ಕಾಯಿಲೆಗಳಿಗೆ ರೋಗನಿರ್ಣಯದ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಚೇತರಿಕೆಗಾಗಿ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ .

ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ತಕ್ಷಣದ ಆರ್ಥಿಕ ರಕ್ಷಣೆ.

ಪಾವತಿಸಬೇಕಾದ ಮೊತ್ತ

ಇನ್ಶೂರೆನ್ಸ್ ಮೊತ್ತದವರೆಗೆ.

ಮರಣದ ಲಾಭ (ಪಾಲಿಸಿದಾರನ ಅವಧಿ ಮುಗಿದ ನಂತರ) ಮೆಚ್ಯೂರಿಟಿಯ ಮೇಲೆ ಒಟ್ಟು ಮೊತ್ತದ ಪಾವತಿ

ತೆರಿಗೆ ಪ್ರಯೋಜನಗಳು

₹1 ಲಕ್ಷದವರೆಗಿನ ಹೆಲ್ತ್ ಇನ್ಶೂರೆನ್ಸ್ ತೆರಿಗೆ ಪ್ರಯೋಜನಗಳು. (ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D)

ವರ್ಷಕ್ಕೆ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳು (ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ)

ಹೆಲ್ತ್ ಇನ್ಶೂರೆನ್ಸಿನ ತೆರಿಗೆ ಪ್ರಯೋಜನಗಳು

ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದರೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಈ ಕೆಳಗಿನ ಟೇಬಲ್, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲಿನ ತೆರಿಗೆ ವಿನಾಯಿತಿಗಳ ಹಂಚಿಕೆಯನ್ನು ವಿವರಿಸುತ್ತದೆ:

ಅರ್ಹತೆ

ವಿನಾಯಿತಿ ಮಿತಿ

ಸ್ವತಃ ಅವರಿಗೆ ಮತ್ತು ಕುಟುಂಬಕ್ಕಾಗಿ (ಸಂಗಾತಿ, ಅವಲಂಬಿತ ಮಕ್ಕಳು)

₹25,000 ವರೆಗೆ

ಸ್ವತಃ ಅವರಿಗೆ, ಕುಟುಂಬ + ಪೋಷಕರು (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು)

(₹25,000 + ₹25,000) = ₹50,000 ರವರೆಗೆ

ಸ್ವತಃ ಅವರಿಗೆ ಮತ್ತು ಕುಟುಂಬಕ್ಕಾಗಿ (ಹಿರಿಯ ಸದಸ್ಯರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) + ಪೋಷಕರು (60 ವರ್ಷಕ್ಕಿಂತ ಮೇಲ್ಪಟ್ಟವರು)

(₹25,000 + ₹50,000) = ₹75,000 ರವರೆಗೆ

ಸ್ವತಃ ಅವರಿಗೆ ಮತ್ತು ಕುಟುಂಬಕ್ಕಾಗಿ (ಹಿರಿಯ ಸದಸ್ಯರು 60 ವರ್ಷಕ್ಕಿಂತ ಮೇಲ್ಪಟ್ಟವರು) + ಪೋಷಕರು (60 ವರ್ಷಕ್ಕಿಂತ ಮೇಲ್ಪಟ್ಟವರು)

(₹50,000 + ₹50,000) = ₹1,00,000 ರವರೆಗೆ

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವಾಗ ನೀವು ಏನನ್ನುಗಮನಿಸಬೇಕು?

ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.