ನಮ್ಮ ಮಾನಸಿಕ ಆರೋಗ್ಯವು ನಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ ಮತ್ತು ಅದಕ್ಕಾಗಿಯೇ, ನಮ್ಮ ಹಿರಿಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಒಳಗೊಂಡಿರುವ ಮನೋವೈದ್ಯಕೀಯ ಪ್ರಯೋಜನವು, ಹಿರಿಯ ನಾಗರಿಕರಿಗೆ ಅಗತ್ಯವಿರುವ ಯಾವುದೇ ಮನೋವೈದ್ಯಕೀಯ ಬೆಂಬಲಕ್ಕಾಗಿ ರಕ್ಷಣೆ ನೀಡುತ್ತದೆ.
ವೃದ್ಧಾಪ್ಯದಲ್ಲಿ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಲಹೆಗಳು.
1. ಚಟುವಟಿಕೆಯಿಂದಿರಿ - ಅನೇಕ ಜನರು ವಯಸ್ಸಾದಂತೆ ನಿಲ್ಲಿಸುವ ಒಂದು ಕೆಲಸವೆಂದರೆ, ವ್ಯಾಯಾಮ ಮಾಡುವುದು! ಪ್ರಾಮಾಣಿಕವಾಗಿ, ಇದು ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಿರಬಹುದು. ನೀವು ಇದನ್ನು ನಿಮಗಾಗಿ ಓದುತ್ತಿರಲಿ ಅಥವಾ ನಿಮ್ಮ ಪೋಷಕರಿಗಾಗಿ ಓದುತ್ತಿರಲಿ - ವ್ಯಾಯಾಮ ತುಂಬಾ ಮುಖ್ಯ. ಇದು ವಾಕಿಂಗ್ ಅಥವಾ ಯೋಗದಂತಹ ಸರಳವಾದ ಸಂಗತಿಯಾಗಿದ್ದರೂ ಕೂಡ ಮುಖ್ಯವಾಗಿದೆ.. ಪ್ರತಿದಿನ ಕನಿಷ್ಠ 15-20 ನಿಮಿಷಗಳ ವ್ಯಾಯಾಮವು ಮನುಷ್ಯನೊಬ್ಬನ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದಲ್ಲಿ ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತದೆ.
2. ಆರೋಗ್ಯಕರವಾದುದನ್ನು ತಿನ್ನಿರಿ - ನಮ್ಮ ಆಹಾರವು ನಮ್ಮ ಆರೋಗ್ಯದ 70% ರಷ್ಟು ಕೊಡುಗೆ ನೀಡುತ್ತವೆ. ನೀವು ಮತ್ತು ನಿಮ್ಮ ಪೋಷಕರು ಸಮತೋಲಿತ ಆಹಾರವನ್ನು ಸೇವಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ವಿಶೇಷವಾಗಿ ಬಹಳಷ್ಟು ಕ್ಯಾಲ್ಸಿಯಂ ಮತ್ತು ಫೈಬರ್ ಹೊಂದಿರುವ ಆಹಾರ ಸೇವಿಸಿ. ಆದಷ್ಟು ಎಣ್ಣೆಯುಕ್ತ ಆಹಾರ, ಕರಿದ ಪದಾರ್ಥಗಳು ಮತ್ತು ಹೆಚ್ಚಿನ ಡೈರಿ ಉತ್ಪನ್ನಗಳನ್ನು ತಪ್ಪಿಸಿ.
3. ತಡೆಗಟ್ಟುವಿಕೆಯ ಮೇಲೆ ಕೇಂದ್ರೀಕರಿಸಿ - ನಮಗೆ ತಿಳಿದಿದೆ, ಚಿಕಿತ್ಸೆಗಿಂತ, ತಡೆಗಟ್ಟುವಿಕೆ ಯಾವಾಗಲೂ ಉತ್ತಮವಾಗಿದೆ 😊 ಆದ್ದರಿಂದ, ವಾರ್ಷಿಕ ಆರೋಗ್ಯ ತಪಾಸಣೆಗೆ ಹೋಗಿ ಮತ್ತು ಯಾವಾಗಲೂ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಮೊದಲೇ ತಿಳಿದಿರುವುದು ನಿಮಗೆ ಹಲವಾರು ಆರೋಗ್ಯ ಅಪಾಯಗಳನ್ನು ಮತ್ತು ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ
4. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ - 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರಲ್ಲಿ, 50% ಕ್ಕಿಂತ ಹೆಚ್ಚು ಜನರು ಕೆಲವು ರೀತಿಯ ಮಾನಸಿಕ ಅಸ್ವಸ್ಥತೆ ಅಥವಾ ಇತರ ಖಾಯಿಲೆಗಳಿಗೆ ಒಳಗಾಗುತ್ತಾರೆ. ಸಕಾರಾತ್ಮಕ ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸರಳ ಕ್ರಮಗಳನ್ನು ತೆಗೆದುಕೊಳ್ಳಿ. ನಿಯಮಿತ ವ್ಯಾಯಾಮ, ಧ್ಯಾನ, ತೋಟಗಾರಿಕೆ, ಹವ್ಯಾಸದಲ್ಲಿ ಪಾಲ್ಗೊಳ್ಳುವುದು ಇತ್ಯಾದಿಗಳ ಮೂಲಕ ಇದನ್ನು ಮಾಡಬಹುದು. ಮೇಲಾಗಿ, ನಿಮ್ಮ ಹಿರಿಯ ಪೋಷಕರು ಖಿನ್ನತೆ, ಆತಂಕ ಅಥವಾ ಇತರ ಯಾವುದೇ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದರೆ, ಸರಿಯಾದ ಚಿಕಿತ್ಸೆ ಅಥವಾ ಸಮಾಲೋಚನೆಗಾಗಿ ಮನಃಶ್ಶಾಸ್ತ್ರಜ್ಞರನ್ನು ಭೇಟಿ ಮಾಡಿ.
5. ಹಲ್ಲುಗಳ ಚಿಕಿತ್ಸೆ ಪಡೆಯಿರಿ- ಹಿರಿಯ ನಾಗರಿಕರು ತಮ್ಮ ಮೌಖಿಕ ಆರೋಗ್ಯದಲ್ಲಿ ಆಗಾಗ ಸಮಸ್ಯೆಗಳನ್ನು ಹೊಂದುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಡೆಂಟಲ್ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಿ ಮತ್ತು ನಿಯಮಿತವಾಗಿ ಡೆಂಟಲ್ ಚೆಕಪ್ ಮಾಡಿಸಿ.
6. ಜನರೊಂದಿಗೆ ಸಂಪರ್ಕದಲ್ಲಿರಿ - ಹಲವು ಹಿರಿಯ ನಾಗರಿಕರು ಒಂಟಿತನ ಅನುಭವಿಸುವುದರಲ್ಲಿ ಆಶ್ಚರ್ಯವೇನಿಲ್ಲ. ದಿನದ ಅಂತ್ಯಕ್ಕೆ , ಮನುಷ್ಯ ಒಬ್ಬ ಸಾಮಾಜಿಕ ಪ್ರಾಣಿ. ವಾಸ್ತವವಾಗಿ, ಎಲ್ಲಕ್ಕಿಂತ ಹೆಚ್ಚಾಗಿ, ಮನುಷ್ಯ ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ ಮತ್ತು ಅವನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಸಂಘದಲ್ಲಿರುವುದು ಅವನಿಗೆ ಮುಖ್ಯವಾಗಿದೆ. ಆರೋಗ್ಯಕರ ಸಂಬಂಧಗಳನ್ನು ಸರಳವಾಗಿ ಇಟ್ಟುಕೊಂಡಷ್ಟು, ಸಂಬಂಧಗಳು ಬಹುದಿನ ಬಾಳುತ್ತವೆ. ಇದು ಒಬ್ಬರ ಸಂಪೂರ್ಣ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನವಾಗುತ್ತದೆ.
7. ಉತ್ತಮವಾಗಿ ವಿಶ್ರಮಿಸಿ - ಗುಣಮಟ್ಟದ ನಿದ್ರೆಯು ಒಬ್ಬರ ಚಿತ್ತವನ್ನು ಬೂಸ್ಟ್ ಮಾಡಬಹುದು. ನೀವು ಅಥವಾ ನಿಮ್ಮ ಪೋಷಕರು ಪ್ರತಿದಿನ ಕನಿಷ್ಠ ಎಂಟು ಗಂಟೆಗಳಷ್ಟು ಉತ್ತಮ ನಿದ್ರೆಯನ್ನು ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
8. ಧೂಮಪಾನವನ್ನು ತ್ಯಜಿಸಿ - ನೀವು ಅಥವಾ ನಿಮ್ಮ ಪೋಷಕರು ಧೂಮಪಾನ ಮಾಡುತ್ತಿದ್ದರೆ, ಅದನ್ನು ನಿಲ್ಲಿಸಲು ಇದು ಸರಿಯಾದ ಸಮಯ. ಧೂಮಪಾನವು ಯಾರ ಜೀವನದಲ್ಲೂ, ಯಾವುದೇ ಹಂತದಲ್ಲೂ ಯಾರಿಗೂ ಪ್ರಯೋಜನಕಾರಿ ಎಂದು ಸಾಬೀತಾಗಿಲ್ಲ. ಆದಾಗ್ಯೂ, ನಮಗೆ ವಯಸ್ಸಾದಂತೆ, ಅದರ ಪರಿಣಾಮಗಳು ನಮ್ಮ ದೇಹಕ್ಕೆ ಹೆಚ್ಚು ಹಾನಿಕಾರಕವಾಗುತ್ತವೆ.
9. ಓದಿ- ನಮಗೆ ವಯಸ್ಸಾದಂತೆ, ನಮ್ಮ ನೆನಪುಗಳು ದುರ್ಬಲಗೊಳ್ಳುತ್ತವೆ ಎಂದು ಹೇಳುವ ಕಟ್ಟುಕಥೆಯಿದೆ. ಆದಾಗ್ಯೂ, ಇದು ಕೇವಲ ಕಟ್ಟುಕಥೆಯಾಗಿದೆ ಮತ್ತು ಇದು ನೀವು, ನಿಮ್ಮ ಮೆದುಳಿಗೆ ಎಷ್ಟು ವ್ಯಾಯಾಮವನ್ನು ನೀಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಓದುವಿಕೆಯು ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ (Alzheimer) ಅಂತಹ ಕಾಯಿಲೆಗಳನ್ನು ತಪ್ಪಿಸಲು ಒಂದು ಸಾಬೀತಾದ ಮಾರ್ಗವಾಗಿದೆ. ಏಕೆಂದರೆ ಇದು ಕೇವಲ ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವುದಷ್ಟೇ ಅಲ್ಲದೇ, ಅದರ ಜೊತೆಗೆ ಅರಿಯಲು ಸಹಾಯ ಮಾಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಧನಾತ್ಮಕ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕೂಡ ಹೆಚ್ಚಿಸುತ್ತದೆ.
10. ಹೈಡ್ರೇಟೆಡ್ ಆಗಿರಿ - ನೀರು! ನಮ್ಮ ಜೀವನದ ಪ್ರಮುಖ ಪಾನೀಯ. ನಮ್ಮ ದೇಹದ ಟಾಕ್ಸಿನ್ಗಳನ್ನು ಹೊರಹಾಕಲು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಉತ್ತಮ ಮಾರ್ಗವಾಗಿದೆ. ನಾವು ತಮಾಷೆ ಮಾಡುತ್ತಿಲ್ಲ, ನಿಮ್ಮನ್ನು ಸಂತೋಷವಾಗಿಡಲು ನೀರು ಸೂಕ್ತ ಮಾರ್ಗವಾಗಿದೆ! ನೀವು ಮತ್ತು ನಿಮ್ಮ ಪೋಷಕರು ಪ್ರತಿದಿನ ಕನಿಷ್ಠ ಎಂಟು ಲೋಟ ನೀರು ಕುಡಿಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೀರು ಹೆಚ್ಚು ಕುಡಿದಷ್ಟು, ಸಂತೋಷವೂ ಹೆಚ್ಚು !