ದೇಶಾದ್ಯಂತ ಇನ್ಶೂರೆನ್ಸ್ ಪೂರೈಕೆದಾರರು ವಿವಿಧ ಪ್ರಯೋಜನಗಳನ್ನು ಒದಗಿಸುತ್ತಾರೆ. ಅದು ನಿಮ್ಮ ಪೋಷಕರಿಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಪಡೆಯಲು ಇರುವ ಆರ್ಥಿಕ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದಕ್ಕಾಗಿ, ನಿಮಗೆ ಸಮಗ್ರ ಕವರೇಜ್ ಪಡೆಯಲು ಅನುವು ಮಾಡಿಕೊಡುತ್ತದೆ.
ನಿಮ್ಮ ಹೆಲ್ತ್ಕೇರ್ ಯೋಜನೆಯಿಂದ ನಿಮ್ಮ ಪ್ರಯೋಜನಗಳನ್ನು ನೀವು ಗರಿಷ್ಠಗೊಳಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು, ಅದು ಈ ಕೆಳಗಿನ ವೆಚ್ಚಗಳನ್ನು ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸುವುದು ನಿಮಗೆ ಮುಖ್ಯವಾಗಿದೆ.
1. ವ್ಯಾಪ್ತಿ
- ಅಪಘಾತ ಮತ್ತು ಅನಾರೋಗ್ಯದ ಚಿಕಿತ್ಸಾ ವೆಚ್ಚಗಳು ( Accidental & illness Hospitalization Expenses) -
ಅಪಘಾತಗಳು ಅಥವಾ ಅನಾರೋಗ್ಯಗಳು ಅನಿರೀಕ್ಷಿತ ಘಟನೆಗಳಾಗಿದ್ದು, ನೀವು ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿಲ್ಲದಿದ್ದರೆ ಇಂತಹ ಘಟನೆಗಳು ದೊಡ್ಡ ಹಣಕಾಸಿನ ಹೊಣೆಗಾರಿಕೆಗಳೊಂದಿಗೆ ಬರಬಹುದು. ಅಪಘಾತ ಅಥವಾ ಅನಾರೋಗ್ಯದ ಪರಿಣಾಮವಾಗಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವ ಇನ್ಶೂರೆನ್ಸ್ ಪೂರೈಕೆದಾರರನ್ನು ನೋಡಿ.
- ಚಿಕಿತ್ಸಾ ಪೂರ್ವ ಮತ್ತು ನಂತರದ ವೆಚ್ಚಗಳು - ನಿಮ್ಮ ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ವೆಚ್ಚಗಳ ಜೊತೆಗೆ, ಆಸ್ಪತ್ರೆಗೆ ಸೇರಿಸುವ ಪೂರ್ವದ ಮತ್ತು ನಂತರದ ವೆಚ್ಚಗಳನ್ನು ಒಳಗೊಳ್ಳುವ ಪಾಲಿಸಿಯನ್ನು ನೋಡಿ.
ಉದಾಹರಣೆಗೆ, ಡೈಗ್ನೋಸ್ಟಿಕ್ ಪರೀಕ್ಷೆಗಳು, ವೈದ್ಯರ ಶುಲ್ಕಗಳು, ಶಸ್ತ್ರಚಿಕಿತ್ಸಾ ಅನುಸರಣೆಗಳು, ಒಪಿಡಿ(OPD) ಭೇಟಿಗಳು ಇತ್ಯಾದಿಗಳಿಗೆ ತಗಲುವ ವೆಚ್ಚಗಳನ್ನು ಸಮಗ್ರ ಪಾಲಿಸಿಯು ಒಳಗೊಂಡಿರಬೇಕು.
- ವಾರ್ಷಿಕ ಆರೋಗ್ಯ ತಪಾಸಣಾ ವೆಚ್ಚಗಳು -ವಯಸ್ಸಾದವರ ವಾರ್ಷಿಕ ಆರೋಗ್ಯ ತಪಾಸಣೆಗಳು, ಆದರ್ಶ ಆರೋಗ್ಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾಗಿವೆ. ಏಕೆಂದರೆ ಇದು ಮಾರಣಾಂತಿಕ ಅಸ್ವಸ್ಥತೆಯೊಂದಿಗೆ ರೋಗನಿರ್ಣಯ ಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿ ಭರಿಸಲಾದ ಎಲ್ಲಾ ವೆಚ್ಚಗಳನ್ನು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಬಹುದೇ ಎಂದು ಪರಿಶೀಲಿಸಿ.
- ಪ್ರಮುಖ ಶಸ್ತ್ರಚಿಕಿತ್ಸೆಗಳು -ಬ್ಯಾರಿಯಾಟ್ರಿಕ್ ಆಪರೇಷನ್ ಸೇರಿದಂತೆ ಯಾವುದೇ ಪ್ರಮುಖ ಶಸ್ತ್ರಚಿಕಿತ್ಸೆಗಳು ಹೆಚ್ಚಿನ ಮೌಲ್ಯದ ವೆಚ್ಚಗಳನ್ನು ಹೊಂದಿವೆ. ಅಂತಹ ಶುಲ್ಕಗಳು ನಿಮ್ಮ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೂಲಕ ಕವರ್ ಆಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಅಂತಹ ಚಿಕಿತ್ಸೆಗೆ ಬಂದಾಗ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ನೀವು ನಿಮ್ಮ ಪೋಷಕರನ್ನು ದೇಶದ ಪ್ರೀಮಿಯಂ ಆಸ್ಪತ್ರೆಗಳಲ್ಲಿ ಸೇರಿಸಬಹುದು ಮತ್ತು ಪ್ರಖ್ಯಾತ ಶಸ್ತ್ರಚಿಕಿತ್ಸಕರು ಕೇಸನ್ನು ನಿಭಾಯಿಸಬಹುದು.
- ಮನೋವೈದ್ಯಕೀಯ ಖಾಯಿಲೆಯ ಚಿಕಿತ್ಸೆ- ಮನೋವೈದ್ಯಕೀಯ ಚಿಕಿತ್ಸೆಯು ನಿಧಾನವಾಗಿ ಸಾಮಾಜಿಕ ಕಳಂಕಗಳನ್ನು ನಿವಾರಿಸುತ್ತಿದೆ ಮತ್ತು ದೇಶದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಹಾಗೂ ಪ್ರಮುಖ ಇನ್ಶೂರೆನ್ಸ್ ಕಂಪನಿಗಳು ತಮ್ಮ ಪಾಲಿಸಿಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿವೆ. ಆದ್ದರಿಂದ, ನೀವು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ ವೆಚ್ಚವನ್ನು ಕವರ್ ಮಾಡುವ ಪಾಲಿಸಿಯನ್ನು ಆಯ್ದುಕೊಳ್ಳಿ.
- ರೂಮ್ ಬಾಡಿಗೆಗೆ ಮಿತಿ ಇಲ್ಲ - ದೇಶಾದ್ಯಂತ ಪ್ರೀಮಿಯಂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕೆಂದು ಬಯಸಿದರೆ, ಕೊಠಡಿ ಬಾಡಿಗೆಯು ಚಿಂತೆಗೆ ಕಾರಣವಾಗಬಹುದು. ಕೊಠಡಿ ಬಾಡಿಗೆಗೆ ಯಾವುದೇ ಮಿತಿಯಿಲ್ಲದಿದ್ದರೆ, ನಿಮ್ಮ ಪೋಷಕರು ದೀರ್ಘಾವಧಿಯವರೆಗೆ ಆಸ್ಪತ್ರೆಗೆ ದಾಖಲಾಗಬೇಕಾದರೆ ನೀವು ಸುಲಭವಾಗಿ ಖಾಸಗಿ ಕೊಠಡಿಯನ್ನು ಖರೀದಿಸಬಹುದು. ಆದ್ದರಿಂದ, ಆಸ್ಪತ್ರೆಯ ಕೊಠಡಿ ಬಾಡಿಗೆಗೆ ಮಿತಿಯಿಲ್ಲದ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಪಡೆದುಕೊಳ್ಳುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
2. ಗಂಭೀರ ಅನಾರೋಗ್ಯದ ಪ್ರಯೋಜನಗಳು
ತೀವ್ರತರದ ಹೃದಯದ ತೊಂದರೆಗಳು, ಕ್ಯಾನ್ಸರ್, ಕೊನೆಯ ಹಂತದ ಲಂಗ್ಸ್ ಮತ್ತು ಲಿವರ್ ವೈಫಲ್ಯ, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿಗಳು ಗಂಭೀರ ಖಾಯಿಲೆಗಳೆಂದು ಪರಿಗಣಿಸಲ್ಪಟ್ಟಿವೆ. ಅಂತಹ ವೈದ್ಯಕೀಯ ಪರಿಸ್ಥಿತಿಗಳ, ಚಿಕಿತ್ಸೆಯು ಸರಾಸರಿ 1 ಲಕ್ಷ ರೂಗಳಿಂದ ಪ್ರಾರಂಭವಾಗುತ್ತದೆ ಮತ್ತು 10 ಲಕ್ಷ ರೂಗಳು ಅಥವಾ ಇನ್ನೂ ಹೆಚ್ಚು ಹಣ ಬೇಕಾಗುತ್ತದೆ.
ಹೆಚ್ಚಿನ ಇನ್ಶೂರೆನ್ಸ್ ಮೊತ್ತದ ಖಾತರಿಯೊಂದಿಗೆ ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ವಿಸ್ತರಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗಂಭೀರ ಅನಾರೋಗ್ಯದ ಕವರ್ ಅನ್ನು ಆರಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಇಂತಹ ಸನ್ನಿವೇಶಗಳಲ್ಲಿ ಆಸ್ಪತ್ರೆಯ ಎಲ್ಲ ವೆಚ್ಚಗಳು ಮತ್ತು ಬಿಡುಗಡೆಯ ನಂತರದ ವೆಚ್ಚಗಳು ಶಸ್ತ್ರಚಿಕಿತ್ಸಾ ಶುಲ್ಕಗಳೊಂದಿಗೆ ಕವರ್ ಆಗುತ್ತವೆ.
ಇಂತಹ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ 30 ದಿನಗಳ ಲಾಕ್-ಇನ್ ಅವಧಿಯು ಆಕ್ಟಿವೇಶನ್'ಗೆ ಸಂಬಂಧಿಸಿದೆ. ಈ ಸಮಯದಲ್ಲಿ ಯಾವುದೇ ಕ್ಲೇಮ್ಗಳನ್ನು ಮಾಡಲಾಗುವುದಿಲ್ಲ.
3. ಕೈಗೆಟುಕುವಿಕೆ
ನಿಮ್ಮ ಪೋಷಕರಿಗಾಗಿ ನೀವು ಆಯ್ಕೆ ಮಾಡುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಪಾವತಿಸುವ ಪ್ರೀಮಿಯಂಗಳು, ಕೈಗೆಟುಕುವಂತಹವು ಮತ್ತು ನಿಮ್ಮ ಹಣಕಾಸಿನ ಮೇಲೆ ಹೊರೆಯಾಗದಂತಹವು ಎಂಬುದನ್ನು ಖಚಿತಪಡಿಸಿಕೊಳ್ಳಿ.
ವಿವಿಧ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಗಳು ನೀಡುವ ಕವರೇಜ್, ಇನ್ಶೂರೆನ್ಸ್ ಮೊತ್ತ ಮತ್ತು ಪ್ರೀಮಿಯಂ ಅನ್ನು ಹೋಲಿಕೆ ಮಾಡಿ ಮತ್ತು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಿ.
ಹೆಲ್ತ್ ಇನ್ಶೂರೆನ್ಸ್ ಹೋಲಿಕೆ ಬಗ್ಗೆ ಇನ್ನಷ್ಟು ತಿಳಿಯಿರಿ.
4. ಆದಾಯ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡಿ
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒದಗಿಸಲಾದ ಪ್ರಮುಖ ಪ್ರಯೋಜನಗಳಲ್ಲಿ, ನಗದು ರಹಿತ ಚಿಕಿತ್ಸೆಯು ಒಂದು.
ಈ ಪ್ರಯೋಜನದೊಂದಿಗೆ, ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಚಿಕಿತ್ಸಾ ಶುಲ್ಕವನ್ನು ನೇರವಾಗಿ ನಿಮ್ಮ ಪೋಷಕರು ದಾಖಲಾದ ನೆಟ್ವರ್ಕ್ ಆಸ್ಪತ್ರೆಗೆ ಪಾವತಿಸುತ್ತಾರೆ. ಆದ್ದರಿಂದ, ಯೋಜನೆಯ ಅಡಿಯಲ್ಲಿ ಗರಿಷ್ಠ ನೆಟ್ವರ್ಕ್ ಆಸ್ಪತ್ರೆಗಳನ್ನು ಹೊಂದಿರುವ ಪಾಲಿಸಿಗಾಗಿ ನೋಡಿ.
ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:
5. 0% ಸಹ-ಪಾವತಿ ಆಯ್ಕೆ
ನಿಮ್ಮ ಚಿಕಿತ್ಸೆಯ ವೆಚ್ಚದ ಶೇಕಡಾವಾರು ಮೊತ್ತವನ್ನು ನೀವು ಪಾವತಿಸುವಂತಹ ಇನ್ಶೂರೆನ್ಸ್ ಪಾಲಿಸಿಗಳು ಇವೆ. ಉಳಿದ ವೆಚ್ಚವನ್ನು ಇನ್ಶೂರೆನ್ಸ್ ಪೂರೈಕೆದಾರರು ಕವರ್ ಮಾಡುತ್ತಾರೆ. ನಿಮ್ಮ ಪೋಷಕರಿಗೆ ಮಾಡಲಾದ ಚಿಕಿತ್ಸಾ ವೆಚ್ಚಗಳು ಸಾಕಷ್ಟು ಹೆಚ್ಚಾಗಿರುವುದರಿಂದ, ಸಹ-ಪಾವತಿಯ ಷರತ್ತು ಇಲ್ಲದ ಪಾಲಿಸಿಯನ್ನು ಹುಡುಕುವುದು ಉತ್ತಮ.
0% ಸಹ-ಪಾವತಿಯೊಂದಿಗೆ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ಹುಡುಕುತ್ತಿರುವಿರಾ? ಡಿಜಿಟ್ ಇನ್ಶೂರೆನ್ಸ್ ನೀಡುವ ಯೋಜನೆಗಳನ್ನು ಪರಿಶೀಲಿಸಿ.
6. ಕ್ಲೇಮ್ ಸೆಟ್ಲ್ಮೆಂಟ್ ಅನುಪಾತ
ಕ್ಲೇಮ್ ಸೆಟ್ಲ್ಮೆಂಟ್ ಅನುಪಾತವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ಒಟ್ಟು ಕ್ಲೇಮ್ಗಳ ಸಂಖ್ಯೆಗೆ ವಿರುದ್ಧವಾಗಿ ಇತ್ಯರ್ಥಪಡಿಸಿದ ಕ್ಲೇಮ್ಗಳ ಸಂಖ್ಯೆಯನ್ನು ಸೂಚಿಸುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಕ್ಲೇಮ್ ಅನ್ನು ತಿರಸ್ಕರಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೈ ಕ್ಲೇಮ್ ಸೆಟ್ಲ್ಮೆಂಟ್ ಒಂದು ಪ್ರಮುಖ ನಿಗಾವಹಿಸುವ ಅಂಶವಾಗಿದೆ.
7. ಸಮಗ್ರ ಪೂರ್ವ ಅಸ್ತಿತ್ವದಲ್ಲಿರುವ ಅನಾರೋಗ್ಯದ ಕವರೇಜ್
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ನೀಡುವ ಹೆಚ್ಚಿನ 'ಪೂರ್ವ ಅಸ್ತಿತ್ವದಲ್ಲಿರುವ ಅನಾರೋಗ್ಯದ' ಕವರೇಜ್ ಪ್ರಯೋಜನಗಳೊಂದಿಗೆ, ನೀವು ಕ್ಲೇಮ್ ಮಾಡುವ ಮೊದಲು ನೀವು ವೇಟಿಂಗ್ ಪೀರಿಡ್ ಅನ್ನು ಪೂರೈಸಬೇಕು. ಆದ್ದರಿಂದ ಪೂರ್ವ ಅಸ್ತಿತ್ವದಲ್ಲಿರುವ ಅನಾರೋಗ್ಯದ ಕವರೇಜ್ಗಾಗಿ ಕನಿಷ್ಠ ವೇಟಿಂಗ್ ಪೀರಿಡ್ ಅನ್ನು ಹೊಂದಿರುವ ಪಾಲಿಸಿಗಳನ್ನು ಹುಡುಕುವುದು ಸೂಕ್ತವಾಗಿದೆ.
ನಿಮ್ಮ ಪಾಲಿಸಿಯು ನಿಮಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮನ್ನು ಕವರ್ ಮಾಡುವ ಖಾಯಿಲೆಗಳ ಸಂಖ್ಯೆಯನ್ನು ಸಹ ನೋಡಬೇಕು.
8. ಆಡ್-ಆನ್ ಪ್ರಯೋಜನಗಳು
- ಝೋನ್ ಅಪ್ಗ್ರೇಡ್ ಆಡ್-ಆನ್
- ಡೈಲಿ ಹಾಸ್ಪಿಟಲ್ ಕ್ಯಾಶ್ ಆಡ್-ಆನ್ ಕವರ್
- ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪತಿ ಚಿಕಿತ್ಸೆ ಇತ್ಯಾದಿಗಳಿಗೆ ತಗಲುವ ವೆಚ್ಚಗಳನ್ನು ಒಳಗೊಂಡಿರುವ ಪರ್ಯಾಯ ಚಿಕಿತ್ಸಾ ಆರೈಕೆ ಕವರ್ (ಆಯುಷ್).
ಡಿಸ್ಕ್ಲೈಮರ್: ಪ್ರಸ್ತುತ, ಡಿಜಿಟ್ನಲ್ಲಿ ನಾವು ನಮ್ಮ ಹೆಲ್ತ್ ಪ್ಲ್ಯಾನ್ ಜೊತೆ ಆಯುಷ್ ಪ್ರಯೋಜನವನ್ನು ನೀಡುತ್ತಿಲ್ಲ.
9. ಸುಲಭ ಕ್ಲೇಮ್ ಪ್ರಕ್ರಿಯೆ
ಸಾಮಾನ್ಯವಾಗಿ, ಕ್ಲೇಮ್ಗಳನ್ನು ಇತ್ಯರ್ಥಪಡಿಸಲು ಇನ್ಶೂರೆನ್ಸ್ ಪೂರೈಕೆದಾರರು ಎರಡು ಆಯ್ಕೆಗಳನ್ನು ನೀಡುತ್ತಾರೆ. ಅವುಗಳೆಂದರೆ :
- ನಗದು ರಹಿತ ಕ್ಲೇಮ್ಗಳಿಗೆ ಪರಿಹಾರ
- ಮಾಡಲಾದ ಕ್ಲೇಮ್ಗಳಿಗೆ ಮರುಪಾವತಿ
ನೀವು ಆಯ್ಕೆ ಮಾಡಿದ ಆಯ್ಕೆಗಳ ಹೊರತಾಗಿಯೂ, ಕ್ಲೇಮ್ಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯು ಕಷ್ಟಕರವಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಕ್ಲೇಮ್ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ವರ್ಗಾಯಿಸುವುದರಿಂದ, ಕ್ಲೇಮ್ ಮಾಡುವುದು ಮೊದಲಿಗಿಂತ ಹೆಚ್ಚು ಸುಲಭವಾಗಿದೆ.
10. ಕಂಪನಿಯ ಖ್ಯಾತಿಯನ್ನು ಪರಿಶೀಲಿಸಿ
ಅಂತಿಮವಾಗಿ, ನಿಮ್ಮ ಹೆಲ್ತ್ ಕೇರ್ ಯೋಜನೆಗಾಗಿ ನೀವು ಉತ್ತಮ ಸೇವೆಗಳನ್ನು ಪಡೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಸೈಟ್ಗಳು, Google ವಿಮರ್ಶೆಗಳು ಇತ್ಯಾದಿಗಳ ಮೂಲಕ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರರಿಗೆ ಬಂದಿರುವ ಗ್ರಾಹಕರ ವಿಮರ್ಶೆಗಳು ಮತ್ತು ಪ್ರಶಂಸಾಪತ್ರಗಳನ್ನು ಪರಿಶೀಲಿಸಲು ಮರೆಯಬೇಡಿ.