1. ಚಿಕ್ಕ ವಯಸ್ಸಿನಲ್ಲೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ
ಚಿಕ್ಕ ವಯಸ್ಸಿನಲ್ಲೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಒಂದು ಖಚಿತ ವಿಧಾನಗಳಲ್ಲಿ ಒಂದಾಗಿದೆ.
ಬಹುತೇಕ ಇನ್ಶೂರೆನ್ಸ್ ಪ್ರೊವೈಡರ್ ಗಳು ನಿಮ್ಮ ವಯಸ್ಸು, ವೈದ್ಯಕೀಯ ಇತಿಹಾಸಗಳಂತಹ ಅಂಶಗಳನ್ನು ಪರಿಗಣಿಸಿ ನೀವು ಕವರ್ ಗಾಗಿ ಅರ್ಹರೇ ಅಲ್ಲವೇ ಎಂದು ನಿರ್ಧರಿಸುತ್ತಾರೆ. ಆದ್ದರಿಂದ, ಸಮಸ್ಯೆ ಏನೆಂದರೆ, ನಿಮಗೆ ವಯಸ್ಸಾಗುತ್ತಿದ್ದ ಹಾಗೇ ಕವರ್ ಅನ್ನು ಪಡೆಯುವುದು ಹೆಚ್ಚು ಕಷ್ಟವಾಗುತ್ತದೆ.
ಸಾಮಾನ್ಯ ವಯಸ್ಸು ಸಂಬಂಧಿತ ಕಾಯಿಲೆಗಳಾದ ಡಯಾಬಿಟೀಸ್, ಹೃದಯ ಸಂಬಂಧೀ ಕಾಯಿಲೆಗಳು, ರಕ್ತದೊತ್ತಡದ ಸಮಸ್ಯೆಗಳು ನಿಮ್ಮ ವೈದ್ಯಕೀಯ ಇತಿಹಾಸವನ್ನು ಸೇರಿಕೊಳ್ಳುವುದರಿಂದ, ಇನ್ಶೂರೆನ್ಸ್ ಪ್ರೊವೈಡರ್ ಗಳು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಪಾವತಿಗಳನ್ನು ಹೆಚ್ಚಿಸುತ್ತಾರೆ.
ಆದ್ದರಿಂದಲೇ, ಕಡಿಮೆ ಪ್ರೀಮಿಯಂ ಪವತಿಗಳಿರುವ ಪಾಲಿಸಿಯನ್ನು ಪಡೆಯಲು, ನೀವು ಉತ್ತಮ ಆರೋಗ್ಯ ಸ್ಥಿತಿಯಲ್ಲಿರುವಾಗಲೇ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಉತ್ತಮ ವಿಚಾರವಾಗಿದೆ. ಹೀಗೆ, ನಿಮ ಹಿರಿ ವಯಸ್ಸಿನಲ್ಲಿ ಪಾವತಿಸುವ ಪ್ರೀಮಿಯಂ ಗೆ ಹೋಲಿಸಿದರೆ, ನಿಮ್ಮ ಪ್ರೀಮಿಯಂ ತುಂಬಾ ಕಡಿಮೆಯಿರುತ್ತದೆ.
ಇನ್ನಷ್ಟು ತಿಳಿಯಿರಿ
2. ಕಡಿಮೆ ಇನ್ಶೂರ್ಡ್ ಮೊತ್ತವಿರುವ ಪಾಲಿಸಿಯನ್ನು ಆಯ್ಕೆ ಮಾಡಿ
ನೀವು ನಿಮ್ಮ ಪಾಲಿಸಿ ಅಡಿಯಲ್ಲಿ ಕಡಿಮೆ ಇನ್ಶೂರ್ಡ್ ಮೊತ್ತವನ್ನು ಆಯ್ಕೆ ಮಾಡಿದಾಗ, ನೀವದನ್ನು ಕಡಿಮೆ ಪ್ರೀಮಿಯಂ ನಲ್ಲಿ ಪಡೆಯಬಹುದಾಗಿದೆ.
ಪಾಲಿಸಿಯ ಪ್ರಾರಂಭದಲ್ಲಿ, ನೀವು ಕಡಿಮೆ ಇನ್ಶೂರ್ಡ್ ಮೊತ್ತವನ್ನು ಪಡೆದು ಸಮಯ ಕಳೆದಂತೆ ಮೊತ್ತವನ್ನು ಹೆಚ್ಚಿಸುತ್ತಾ ಹೋಗಬಹುದು. ಈ ರೀತಿ, ನೀವು ನಿಮ್ಮ ಪಾಲಿಸಿಯನ್ನು ಚೆನ್ನಾಗಿ ನಿಭಾಯಿಸಬಹುದು.
3. ಸಹಪಾವತಿ ಹಾಗೂ ಡಿಡಕ್ಟಿಬಲ್ ಗಳ ಆಯ್ಕೆಯನ್ನು ಮಾಡಿ
ಕೆಲ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು, ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ, ನಿಮಗೆ ಸ್ವಂತವಾಗಿ ಡಿಡಕ್ಟಿಬಲ್ ಆಯ್ಕೆ ಮಾಡುವ ಹಾಗೂ ಸಹಪಾವತಿ ನಿಯಮಗಳನ್ನು ಆಯ್ಕೆ ಮಾಡುವ ಅನುಮತಿಯನ್ನು ನೀಡುತ್ತವೆ.
ಆದರೆ ಅದನ್ನು ಆಯ್ದುಕೊಳ್ಳುವ ಮೊದಲು, ಈ ಅಂಶಗಳು ಏನನ್ನು ಸೂಚಿಸುತ್ತವೆ ಎಂದು ನೀವು ತಿಳಿಯುವ ಅಗತ್ಯವಿದೆ: