1. ರೂಮ್ ಬಾಡಿಗೆ ಮನ್ನಾ
ಸ್ಟಾಂಡರ್ಡ್ ಹೆಲ್ತ್ಇನ್ಶೂರೆನ್ಸ್ ಪಾಲಿಸಿಯಲ್ಲಿ, ಆಸ್ಪತ್ರೆ ರೂಮ್ ಬಾಡಿಗೆಯನ್ನು ಒಂದು ನಿರ್ದಿಷ್ಟ ಮೊತ್ತಕ್ಕೆ ಮಿತಗೊಳಿಸಲಾಗುತ್ತದೆ (ಕ್ಯಾಪ್). ನೀವು ಇಂತಹ ಇನ್ಶೂರೆನ್ಸ್ ಪಾಲಿಸಿ ಮೇಲೆ ರೂಮ್ ಬಾಡಿಗೆ ಮನ್ನಾ ಆಡ್ - ಆನ್ಸ್ ಅನ್ನು ಸೇರಿಸಿದರೆ, ಇದರ ಮಿತಿ ಹೆಚ್ಚುತ್ತದೆ, ಅಥವಾ ಮಿತಿಯೇ ಇರದಂತೆ ಮಾಡುತ್ತದೆ.
ನೋ ಕ್ಯಾಪ್ ಸಂದರ್ಭದಲ್ಲಿ, ರೂಮ್ ಬಾಡಿಗೆಯನ್ನು, ಇನ್ಶೂರ್ಡ್ ಮೊತ್ತದ ಮಟ್ಟಿಗೆ ಅನುಮತಿಸಲಾಗುತ್ತದೆ. ನೀವು ಒಂದು ಮಹಾನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಈ ಹೆಲ್ತ್ ಇನ್ಶೂರೆನ್ಸ್ ಆಡ್ - ಆನ್ ತುಂಬಾ ಆವಶ್ಯಕವಾಗುತ್ತದೆ, ಯಾಕೆಂದರೆ ಅಲ್ಲಿ ರೂಮ್ ವೆಚ್ಚದಲ್ಲಿ ಗಣನೀಯ ಏರಿಕೆ ಇರುತ್ತದೆ.
ಉದಾಹರಣೆಗೆ, ನಿಮ್ಮ ಸ್ಟಾಂಡರ್ಡ್ ಹೆಲ್ತ್ಇನ್ಶೂರೆನ್ಸ್ ಪಾಲಿಸಿ ನಿಮ್ಮ ರೂಮ್ ಬಾಡಿಗೆ ಮಿತಿಯನ್ನು ರೂ.1500 ಪ್ರತೀ ರಾತ್ರಿಗೆ ಕ್ಯಾಪ್ ಮಾಡಲಾಗುತ್ತದೆ. ಇದು ನೀವು ದಾಖಲಾಗಲು ಇಚ್ಛಿಸುವ ಆಸ್ಪತ್ರೆಯ ರೂಮ್ ಬಾಡಿಗೆಯ ವೆಚ್ಚ ಭರಿಸಲು ಸಾಕಾಗುವುದಿಲ್ಲ. ಆದ್ದರಿಂದ, ನೀವು ರೂಮ್ ಬಾಡಿಗೆ ಮನ್ನಾ ಆಡ್ - ಆನ್ ಅನ್ನು ತೆಗೆದುಕೊಂಡರೆ ಇಂತಹ ಉಪ - ಮಿತಿಯನ್ನು ರೂ. 4000 ಪ್ರತೀ ರಾತ್ರಿಗೆ ಹೆಚ್ಚಿಸಬಹುದು.
2. ಹೆರಿಗೆ ಕವರ್
ಹೆರಿಗೆ ಕವರ್ ನಲ್ಲಿ, ಗರ್ಭಾವಸ್ಥೆ ಹಾಗೂ ಜನನಕ್ಕೆ ಸಂಬಂಧಿತ ಎಲ್ಲಾ ವೆಚ್ಚಗಳ ಕವರೇಜ್ ನಿಮಗೆ ನೀಡಲಾಗುತ್ತದೆ. ಕೆಲವು ಇನ್ಶೂರೆನ್ಸ್ ಕಂಪನಿಗಳು ನಿಮಗೆ ಪಾಲಿಸಿಯ ಮೆಚುರಿಟಿ ಅವಧಿ ಅಥವಾ ಹೆರಿಗೆ ಕವರ್ ಅಡಿಯಲ್ಲಿ ಆದ ನಿಮ್ಮ ಮಗುವಿನ ಜನನದ 3 ತಿಂಗಳ ವರೆಗೆ ಮಗುವಿನ ವೆಚ್ಚವನ್ನು ಭರಿಸುತ್ತವೆ.
3. ಆಸ್ಪತ್ರೆ ನಗದು ಕವರ್
ಈ ಹೆಲ್ತ್ ಇನ್ಶೂರೆನ್ಸ್ ರೈಡರ್ ಆಡಿಯಲ್ಲಿ, ನೀವು ಆಸ್ಪತ್ರೆಗೆ ದಾಖಲಾದ ಅವಧಿಯಲ್ಲಿ ನಿಮ್ಮ ಇನ್ಶೂರರ್ ನಿಮಗೆ ಪ್ರತಿದಿನ ನಗದು ಭತ್ಯೆ ನೀಡುತ್ತಾರೆ. ಈ ಭತ್ಯೆಯನ್ನು ಪಡೆಯಲು ಇನ್ಶೂರ್ ಆಗಿರುವ ವ್ಯಕ್ತಿ 24 ಘಂಟೆಗಳು ಅಥವಾ 1 ದಿನಕ್ಕಿಂತ ಹೆಚ್ಚು ಸಮಯಕ್ಕೆ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು.
ಇದು ನಿಮಗೆ ಆಸ್ಪತ್ರೆಯಲ್ಲಿ ದಾಖಲಾದ ಸಮಯದಲ್ಲಿ ಆಗುವ ವೇತನದ ನಷ್ಟವನ್ನು ಸರಿದೂಗಿಸಿ ನಿಮ್ಮ ಅಗತ್ಯದ ಖರ್ಚುಗಳಾದ ವಾಹನ, ಆಹಾರ ಮುಂತಾದ ವೆಚ್ಚಗಳನ್ನು ಭರಿಸಲು ಸಹಾಯಕವಾಗುತ್ತದೆ.
4. ಗಂಭೀರ ಖಾಯಿಲೆಗಳ ಕವರ್
ಈ ಆಡ್ - ಆನ್ ನ ಅಡಿಯಲ್ಲಿ, ಇನ್ಶೂರ್ಡ್ ವ್ಯಕ್ತಿ ಗಂಭೀರ ಖಾಯಿಲೆಗೆ ತುತ್ತಾದರೆ ಇನ್ಶೂರೆನ್ಸ್ ಪ್ರೊವೈಡರ್, ಅವರ ಒಟ್ಟು ಚಿಕಿತ್ಸೆಯ ವೆಚ್ಚವನ್ನು ಪರಿಗಣಿಸದೆಯೇ, ಅವರಿಗೆ ಒಂದು ದೊಡ್ಡ ಮೊತ್ತವನ್ನು ನೀಡುತ್ತಾರೆ.
ನೀವು 5 ಲಕ್ಷ ಇನ್ಶೂರ್ಡ್ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದೀರಿ ಎಂದು ಭಾವಿಸಿ. ನೀವು ರೂ. 15 ಲಕ್ಷ ವರೆಗಿನ ಖಚಿತ ಮೊತ್ತ ನೀಡುವ, ಗಂಭೀರ ಖಾಯಿಲೆ ಕವರ್ ಆಡ್ - ಆನ್ ಅನ್ನೂ ತೆಗೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ.
ನಿಮ್ಮಲ್ಲಿ ಒಂದು ವೇಳೆ ಕ್ಯಾನ್ಸರ್ ಪತ್ತೆಯಾದರೆ, ಹಾಗೂ ನೀವು ಇನ್ಶೂರೆನ್ಸ್ ಕಂಪನಿಯಲ್ಲಿ ಕ್ಲೈಮ್ ರೈಸ್ ಮಾಡಿದರೆ, ನಿಮ್ಮ ಚಿಕಿತ್ಸೆಯ ಒಟ್ಟು ಮೊತ್ತ 9.5 ಲಕ್ಷವಾಗಿದ್ದರೂ ಅದು ನಿಮಗೆ ತಕ್ಷಣ ರೂ 15 ಲಕ್ಷದ ದೊಡ್ಡ ಮೊತ್ತವನ್ನು ಒದಗಿಸುತ್ತದೆ.
5. ಪರ್ಸನಲ್ ಅಪಘಾತ ಕವರ್
ಈ ಆಡ್ - ಆನ್ ಇನ್ಶೂರ್ಡ್ ವ್ಯಕ್ತಿಗೆ ಅಪಘಾತ ಸಂಬಂಧಿತ ಹಾನಿಗಳಿಂದಾದ ವೆಚ್ಚಗಳನ್ನು ಭರಿಸಲು ಆರ್ಥಿಕ ಕವರೇಜ್ ನೀಡುತ್ತದೆ. ಇದು ಭಾಗಶಃ ಅಂಗವೈಕಲ್ಯ, ಆಜೀವನ ಅಂಗವೈಕಲ್ಯ, ಸಾವು ಮುಂತಾದದ್ದನ್ನು ಒಳಗೊಂಡಿರುತ್ತದೆ.
6. ಝೋನ್ ಅಪ್ ಗ್ರೇಡ್
ಝೋನ್ ಅಪ್ ಗ್ರೇಡ್ ನಲ್ಲಿ, ವಿವಿಧ ನಗರ ವಲಯಗಳಲ್ಲಿ ಚಿಕಿತ್ಸೆಗಾಗಿ ಹೆಚ್ಚಿನ ಆರ್ಥಿಕ ಕವರೇಜ್ ಅನ್ನು ಪಡೆಯಬಹುದು. ನಗರದ ಮೆಡಿಕಲ್ ವೆಚ್ಚದ ಆಧಾರದಲ್ಲಿ ಝೋನ್ ಗಳನ್ನು ವರ್ಗೀಕರಣ ಮಾಡಾಲಾಗಿದೆ. ಒಂದು ನಿರ್ದಿಷ್ಟ ಪ್ರದೇಶದ ಮೆಡಿಕಲ್ ವೆಚ್ಚ ಹೆಚ್ಚಿದ್ದರೆ, ಅದನ್ನು ಇಂತಹ ವರ್ಗೀಕರಣದಲ್ಲಿ ಮೊದಲು ಇರಿಸಲಾಗುತ್ತದೆ.
ಈ ಆಡ್ - ಆನ್ ಗಳಿಂದ ಸ್ವಲ್ಪ ಹೆಚ್ಚು ಪ್ರೀಮಿಯಮ್ ನಲ್ಲಿ ವಿವಿಧ ಝೋನ್ ಅಥವಾ ಪ್ರದೇಶಗಳಲ್ಲಿ ಆಗುವ ಚಿಕಿತ್ಸಾ ವೆಚ್ಚದಲ್ಲಿಯ ಅಂತರವನ್ನು ಭರಿಸಲು ಅನುಮತಿ ನೀಡುತ್ತದೆ. ಆದರೆ ಕೊನೆಯಲ್ಲಿ, ಇದು ನಿಮ್ಮ ಒಟ್ಟು ಪ್ರೀಮಿಯಮ್ ನಲ್ಲಿ 10% - 20% ವರೆಗೆ ಉಳಿತಾಯ ನೀಡುತ್ತದೆ.
ಭಾರತದ ವಿವಿಧ ವಲಯ (ಝೋನ್) ಗಳು:
- ಝೋನ್ ಎ : ದೆಹೆಲಿ/ಎನ್ ಸಿ ಆರ್, ಮುಂಬಯಿ(ನವಿ ಮುಂಬಯಿ, ಥಾನೆ, ಕಲ್ಯಾಣ್ ಅನ್ನೂ ಸೇರಿ).
- ಝೋನ್ ಬಿ : ಹೈದರಾಬಾದ್, ಸೆಕುಂದರಾಬಾದ್, ಕೋಲ್ಕತ್ತಾ, ಅಹ್ಮದಾಬಾದ್, ವಡೋದರಾ, ಚೆನ್ನೈ, ಪುಣೆ ಮತ್ತು ಸೂರತ್.
- ಝೋನ್ ಸಿ : ಎ ಮತ್ತು ಬಿ ಹೊರತುಪಡಿಸಿ ಎಲ್ಲಾ ವಲಯಗಳು ಝೋನ್ ಸಿ ಗೆ ಸೇರುತ್ತವೆ.
ಪ್ರಸ್ತುತ, ಡಿಜಿಟ್ನಲ್ಲಿ, ನಾವು ಎರಡು ಝೋನ್ ಅನ್ನು ಹೊಂದಿದ್ದೇವೆ: ಝೋನ್ ಎ (ಗ್ರೇಟರ್ ಹೈದರಾಬಾದ್, ದೆಹಲಿ ಎನ್ಸಿಆರ್ , ಗ್ರೇಟರ್ ಮುಂಬೈ) ಮತ್ತು ಝೋನ್ ಬಿ (ಎಲ್ಲಾ ಇತರ ಸ್ಥಳಗಳು). ನೀವು ಝೋನ್ ಬಿ ಯಲ್ಲಿ ನೆಲೆಗೊಂಡಿದ್ದರೆ ನೀವು ಪ್ರೀಮಿಯಂನಲ್ಲಿ ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆಯುತ್ತೀರಿ. ಅಷ್ಟೇ ಅಲ್ಲದೆ , ನಾವು ಯಾವುದೇ ಝೋನ್-ಆಧಾರಿತ ಸಹ-ಪಾವತಿಯನ್ನು ಹೊಂದಿಲ್ಲ.