ಭಾರತದಲ್ಲಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಪಾಲಿಸಿಯನ್ನು ಏಕೆ ಆರಿಸಬೇಕು?
ಹೆಲ್ತ್ಕೇರ್ ಭಾರತದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ತುಂಬಾ ಹೊಸತನದೊಂದಿಗೆ ಸಾಗುತ್ತಿದೆ ಮತ್ತು ಇದರಲ್ಲಿ ಆಶ್ಚರ್ಯವೇನಿಲ್ಲ! ಆರೋಗ್ಯದ ವೆಚ್ಚಗಳು ಎರಡು ಪಟ್ಟು ಹೆಚ್ಚಾಗುತ್ತಿವೆ, ಅದರೊಂದಿಗೆ ಜನರು ಕೂಡ ಆರೋಗ್ಯ ಮತ್ತು ಹಣದ ಬಗ್ಗೆ ಹೆಚ್ಚು ಪ್ರಜ್ಞೆಯುಳ್ಳವರಾಗುತ್ತಿದ್ದಾರೆ.
ಇದು ಅಂತಿಮವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಜನರ ಹೆಚ್ಚಳಕ್ಕೆ ಕಾರಣವಾಗಿದೆ. ಆದಾಗ್ಯೂ, ತಂತ್ರಜ್ಞಾನ ಹಾಗೂ ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಧನ್ಯವಾದಗಳು. ಹೆಲ್ತ್ ಇನ್ಶೂರೆನ್ಸಗಳು, ಪ್ರಮುಖ ಹಾಗೂ ಗಂಭೀರ ಕಾಯಿಲೆಗಳನ್ನು ಮೀರಿದ ಆರೋಗ್ಯ ಸ್ಥಿತಿಗಳು ಮತ್ತು ಕಾಯಿಲೆಗಳನ್ನು ಕವರ್ ಮಾಡುತ್ತವೆ.
ಆದ್ದರಿಂದ, ನಿಮಗೆ ಬಂಜೆತನದ ಚಿಕಿತ್ಸೆಯ ಅಗತ್ಯವಿದೆಯೇ, ಡೇಕೇರ್ ಕಾರ್ಯವಿಧಾನದ ಅಗತ್ಯವಿದೆಯೇ ಅಥವಾ ನಿಮ್ಮ ಮೂಲಭೂತ ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ಬಯಸುತ್ತೀರಾ? ಹಾಗಿದ್ದರೆ, ಇಂದು ಹೆಲ್ತ್ ಇನ್ಶೂರೆನ್ಸಗಳು ಅಂತಹ ವಿವಿಧ ಪ್ರಯೋಜನಗಳನ್ನು ಕವರ್ ಮಾಡುತ್ತದೆ.
ಆದ್ದರಿಂದ, ಯಾವುದೇ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದಷ್ಟೇ ಮುಖ್ಯವಲ್ಲ ಅದರೊಂದಿಗೆ ಕೈಗೆಟುಕುವ ಪ್ರೀಮಿಯಂನಲ್ಲಿ ನಿಮಗೆ ಎಲ್ಲಾ ಮೌಲ್ಯಯುತ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳುವುದು ಸಹ ಮುಖ್ಯವಾಗಿದೆ; ಅದು ನಿಮ್ಮ ಆರೋಗ್ಯ ಮತ್ತು ಸಂಪತ್ತು ಎರಡನ್ನೂ ರಕ್ಷಿಸುವಂತಿರಬೇಕು.
ಮುಖ್ಯವಾದುದು : ಕೋವಿಡ್ 19 ಹೆಲ್ತ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ