ಹೆಲ್ತ್ ಇನ್ಶೂರೆನ್ಸ್ ನ ಆನ್ಲೈನ್ ಹೋಲಿಕೆ ಮಾಡಿ

ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಕೊಟೇಶನ್ ಪಡೆದು ಅದನ್ನು ಇತರರೊಂದಿಗೆ ಹೋಲಿಕೆ ಮಾಡಿ

ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಹೋಲಿಕೆ

ಹೆಲ್ತ್  ಇನ್ಶೂರೆನ್ಸ್  ನಿಮ್ಮ ತುರ್ತು ಅಗತ್ಯಗಳಿಗೆ ಆರ್ಥಿಕ ಅನುಕೂಲತೆಯನ್ನು ಒದಗಿಸಲು ಅತೀ ಆವಶ್ಯಕವಾಗಿದೆ.ಅಲ್ಲವೇ? ಆದ್ದರಿಂದಲೇ, ಹೆಲ್ತ್  ಇನ್ಶೂರೆನ್ಸ್ ಹೋಲಿಕೆಗಳು ಪ್ರಯೋಜನಕಾರಿಯಾಗಿವೆ. ಇದು ನಿಮ್ಮ ಸಮಯವನ್ನು ಉಳಿಸಿ ನಿಮಗೆ ಯಾವುದು ಮುಖ್ಯ ಎಂಬುವುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇಂದು ಹೆಲ್ತ್  ಇನ್ಶೂರೆನ್ಸ್ ಗಳು ಆನ್ಲೈನ್ ಆಗಿ ಲಭ್ಯವಿರುವ ಕಾರಣ, ಖರೀದಿಯು ಸಾಕಷ್ಟು ಸರಳವಾಗಿದೆ.

ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳ ಹೋಲಿಕೆಯನ್ನು ಏಕೆ ಮಾಡಬೇಕು?

ಅಂತಿಮವಾಗಿ ಒಂದು ಹೆಲ್ತ್  ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವ ಮೊದಲು ಹೆಲ್ತ್  ಇನ್ಶೂರೆನ್ಸ್ ಯೋಜನೆಗಳ ಹೋಲಿಕೆ ಮಾಡುವುದು ಒಂದು ಮುಖ್ಯ ಭಾಗವಾಗಿದೆ. ನೀವು ಈ ರೀತಿ ಯೋಜನೆಗಳ ಹೋಲಿಕೆಯನ್ನು ಮಾಡಬೇಕು:

ಒಂದು ಉತ್ತಮ ಹಾಗೂ ಕೈಗೆಟಕುವ ಪ್ರೀಮಿಯಂ ಅನ್ನು ಪಡೆಯಲು

ಹೆಲ್ತ್  ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಅದರ ದರದ ಬಗ್ಗೆ ನಾವು ಸಾಕಷ್ಟು ಯೋಚಿಸುತ್ತೇವೆ. ಇನ್ಶೂರೆನ್ಸ್ ಪ್ರೊವೈಡರ್ ಗಳು ವಿವಿಧ ಪ್ರೀಮಿಯಂ ವ್ಯಾಪ್ತಿಗಳಿರುವ ಹಲವು ಯೋಜನೆಗಳನ್ನು ಒದಗಿಸುತ್ತಾರೆ. ನೀವು ಈ ಯೋಜನೆಗಳನ್ನು ಹಾಗೂ ಅದರ ಪ್ರೀಮಿಯಂ ಗಳ ಹೋಲಿಕೆ ಮಾಡಿ ನಿಮ್ಮ ಕೈಗೆಟಕುವ ಸೂಕ್ತವಾದ ಯೋಜನೆ ಯಾವುದು ಎಂದು ನಿರ್ಧರಿಸಬೇಕು.

ಅಗತ್ಯದ ಪ್ರಾಕರ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವುದು

ಮಾರುಕಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಇನ್ಶೂರೆನ್ಸ್ ಕಂಪನಿಗಳಿವೆ. ಅವರು ವಿಭಿನ್ನ ವೈಶಿಷ್ಟ್ಯಗಳುಳ್ಳ ವಿವಿಧ ಉತ್ಪನ್ನಗಳನ್ನು ಒದಗಿಸುತ್ತಿರಬಹುದು. ಮೊದಲೇ ಆರೋಗ್ಯ ಯೋಜನೆಗಳ ಹೋಲಿಕೆಯನ್ನು ಮಾಡಿಟ್ಟುಕೊಳ್ಳುವುದರಿಂದ ನೀವು ನಿಮ್ಮ ಅಗತ್ಯಗಳ ಪ್ರಕಾರ ಈ ಪ್ರಸ್ತಾವನೆಗಳಿಂದ ಆಯ್ಕೆ ಮಾಡಿಕೊಳ್ಳಬಹುದು.

ಹೆಚ್ಚುವರಿ ಲಾಭಗಳನ್ನು ಪಡೆಯಿರಿ

ಹೆಲ್ತ್  ಇನ್ಶೂರೆನ್ಸ್ ಯೋಜನೆಗಳ ಹೋಲಿಕೆ ಮಾಡುವುದರಿಂದ ನೀವು ಹೆಚ್ಚುವರಿ ಲಾಭಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು. ಉದಾಹರಣೆಗೆ, ಆಂಬ್ಯುಲೆನ್ಸ್ ಸೇವಾ ಶುಲ್ಕವು ಬೇರೆಬೇರೆಯಾಗಿರಬಹುದು. ಕೆಲವು ಇನ್ಶೂರೆನ್ಸ್ ಕಂಪನಿಗಳು ಆಯುಷ್, ಪರ್ಯಾಯ ಚಿಕಿತ್ಸೆ  ಇತ್ಯಾದಿಗಳಂತಹ ಲಾಭಗಳನ್ನೂ ನೀಡಬಹುದು.

ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಮಾಡಿ

ನೀವು ಆರೋಗ್ಯ ಇನ್ಸ್ಶೂರೆನ್ಸ್ ಯೋಜನೆಗಳನ್ನು ಹೋಲಿಸುವಾಗ ನಿಮಗೆ ಆರೋಗ್ಯ ಪಾಲಿಸಿಗಳ ಹಾಗೂ ಅವುಗಳ ನಿಯಮಗಳ ಬಗ್ಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಪ್ರಮುಖ ಅಂಶಗಳಾದ ಕಾಯುವಿಕೆಯ ಅವಧಿ, ಕ್ಲೈಮ್ ಪ್ರಕ್ರಿಯೆ, ಕವರ್ ಆಗಿರದ ಕಾಯಿಲೆಗಳು ಇತ್ಯಾದಿಗಳ ಬಗ್ಗೆ ನಿಮಗೆ ಅರಿವಿದ್ದರೆ ನೀವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳನ್ನು ಖರೀದಿಸುವಾಗ ಪರಿಶೀಲಿಸಬೇಕಾದ ವಿಷಯಗಳು

ಈ ಕೆಳಗಿನ ಅಂಶಗಳ ಆಧಾರದ ಮೇಲೆ ನೀವು ಹೋಲಿಕೆಗಳನ್ನು ಮಾಡಬೇಕು:

 • ಇನ್ಶೂರೆನ್ಸ್ ಕಂಪನಿ : ಕಂಪನಿ ಹಾಗೂ ಉತ್ಪನ್ನವು ಐ ಆರ್ ಡಿ ಎ ಇಂದ ನೋಂದಾಯಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಿ. ಕಂಪನಿ ಬಗ್ಗೆ ಆನ್ಲೈನ್ ವಿಮರ್ಶೆಗಳನ್ನು ಓದಿರಿ ಹಾಗೂ ಸಾರ್ವಜನಿಕರ ಅನಿಸಿಕೆಗಾಗಿ ಕಂಪನಿಯ ಸಾಮಾಜಿಕ ಜಾಲತಾಣದ ಹ್ಯಾಂಡಲ್ ಗಳನ್ನು ಪರಿಶೀಲಿಸಿ. ಅವರ ಬಳಿ ನಿಮ್ಮ ಪ್ರಶ್ನೆಗಳಿಗಾಗಿ ಒಂದು ಸಕ್ರಿಯ ಸಹಾಯವಾಣಿ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ. ಕ್ಲೈಮ್ ಸೆಟ್ಲ್ಮೆಂಟ್ ರೇಷಿಯೋ ಅನ್ನು ಪರಿಶೀಲಿಸಿ.

 • ಹೆಲ್ತ್  ಇನ್ಶೂರೆನ್ಸ್ ಯೋಜನೆಯ ಪ್ರಕಾರಗಳು : ನಿಮಗೆ ಹೆಲ್ತ್  ಇನ್ಶೂರೆನ್ಸ್ ಯೋಜನೆಯಲ್ಲಿ ನಿಜವಾಗಿ ಏನು ಬೇಕು ಎಂದು ನಿರ್ಧರಿಸಿ. ಒಂದು ವೈಯಕ್ತಿಕ ಪಾಲಿಸಿ, ಫ್ಯಾಮಿಲಿ ಫ್ಲೋಟರ್, ಹಿರಿಯ ನಾಗರಿಕರ ಪಾಲಿಸಿ ಕೆಲವು ಆಯ್ಕೆಗಳಾಗಿವೆ. ಪ್ರತಿಯೊಂದು ಪ್ರಕಾರಕ್ಕೂ ಅದರದ್ದೇ ಆದ ಮಿತಿಗಳು ಹಾಗೂ ಲಾಭಗಳಿವೆ. ನಿಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ಪ್ರಕಾರವನ್ನು ಆಯ್ಕೆ ಮಾಡಿ. ನಂತರ ಅದನ್ನು ಮಾರುಕಟ್ಟೆಯಲ್ಲಿರುವ ಇತರ ಪಾಲಿಸಿಗಳೊಂದಿಗೆ ಹೋಲಿಕೆ ಮಾಡಿ.

 • ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ : ನೀವು ಹೆಚ್ಚಾಗಿ ಕ್ಯಾಶ್ ಲೆಸ್ಚಿಕಿತ್ಸೆಗಳಿಗಾಗಿ ಹೆಲ್ತ್  ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುತ್ತೀರಿ. ನೆಟ್ವರ್ಕ್ ಆಸ್ಪತ್ರೆಯಲ್ಲಿ ಇದು ಸರಳವಾಗಿ ದೊರೆಯುತ್ತದೆ. ಕ್ಯಾಶ್ ಲೆಸ್ಚಿಕಿತ್ಸೆಗಳ ಸೇವೆಯನ್ನು ಒದಗಿಸಲು ಇನ್ಶೂರೆನ್ಸ್ ಕಂಪನಿಯು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತದೆ. ನಿಮ್ಮ ನಗರದಲ್ಲಿ ನೆಟ್ವರ್ಕ್ ಆಸ್ಪತ್ರೇ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ.

 • ಇನ್ಶೂರ್ಡ್ ಮೊತ್ತ : ವಿವಿಧ ಇನ್ಶೂರೆನ್ಸ್ ಕಂಪನಿಗಳು ಒಂದು ವರ್ಷಕ್ಕಾಗಿ ನಿಮಗೆ ವಿವಿಧ ಇನ್ಶೂರ್ಡ್ ಮೊತ್ತದ ಕೊಡುಗೆಯನ್ನು ನೀಡುತ್ತವೆ. ಎರಡು ಬಾರಿಯ ಚಿಕಿತ್ಸಾ ವೆಚ್ಚಗಳಿಂದಾಗಿ ಇನ್ಶೂರ್ಡ್ ಮೊತ್ತವು ಮುಗಿದುಹೋಯಿತು. ಇನ್ನೇನು ಮಾಡುವುದು? ನಿಮ್ಮ ಇನ್ಶೂರೆನ್ಸ್ ಕಂಪನಿಯು ನಿಮ್ಮ ಇನ್ಶೂರ್ಡ್ ಮೊತ್ತದ ಮರು ತುಂಬಿಸುವಿಕೆ ಅಥವಾ ರಿಫಿಲ್ ಮಾಡುವುದೇ ಎಂದು ಪರಿಶೀಲಿಸಿ.

 • ಇನ್ಶೂರ್ಡ್ ಮೊತ್ತದ ರಿಫಿಲ್ ಅಥವಾ ಮರುತುಂಬುವಿಕೆ : ಕೆಲವೊಮ್ಮೆ ನೀವು ಒಂದೇ ವರ್ಷದಲ್ಲಿ ಒಂದರಿಂದ ಹೆಚ್ಚು ಅನಾರೋಗ್ಯಕ್ಕತ್ತಾಗಬಹುದು ಅಥವಾ ಆಸ್ಪತ್ರೆಗೆ ದಾಖಲಾಗಬಹುದು. ಈ ಎರಡು ಬಾರಿಯ ಚಿಕಿತ್ಸೆಯ ವೆಚ್ಚದಿಂದ ನಿಮ್ಮ ಇನ್ಶೂರ್ಡ್ ಮೊತ್ತವು ಮುಗಿದುಹೋಗಬಹುದು. ಇನ್ನೇನು ಮಾಡಬಹುದು? ನೀವು ನಿಮ್ಮ ಇನ್ಶುರೆನ್ಸ್ ಕಂಪನಿಯು ನಿಮಗೆ ಇನ್ಶೂರ್ಡ್ ಮೊತ್ತದ ಮರುತುಂಬುವಿಕೆ ನೀಡುತ್ತದಯೇ ಇಲ್ಲವೇ ಎಂದು ತಿಳಿದುಕೊಳ್ಳಿ.

 • ಆಜೀವನ ನವೀಕರಣ : ಒಂದು ಹೆಲ್ತ್  ಇನ್ಶೂರೆನ್ಸ್ ಯೋಜನೆಯು 65 ವರ್ಷಗಳ ವರೆಗೆ ಗರಿಷ್ಠ ಪ್ರವೇಶವನ್ನು ಅನುಮತಿಸುತ್ತದೆ. ಆರೋಗ್ಯ ಇನ್ಶೂರರ್ ಗಳು ನವೀಕರಣವನ್ನು ಜೀವನಪೂರ್ತಿ ಒದಗಿಸುವುದನ್ನು ಐ ಆರ್ ಡಿ ಎ ಕಡ್ಡಾಯಗೊಳಿಸಿದೆ. ನಿಮ್ಮ ಯೋಜನೆಯು ಈ ಅಂಶವನ್ನು ಪೂರೈಸುವುದನ್ನು ನೀವು ಖಚಿತಪಡಿಸಬೇಕು. ಕಾರಣ ನಿಮ್ಮ ಇಳಿವಯಸ್ಸಿನಲ್ಲಿ ಹೆಲ್ತ್  ಇನ್ಶೂರೆನ್ಸ್ ಯೋಜನೆಯು ಹೆಚ್ಚು ಮುಖ್ಯವಾಗಿರುತ್ತದೆ.

 • ಕಾಯುವಿಕೆಯ ಅವಧಿ : ನಿಮ್ಮ ಆರೋಗ್ಯ ಯೋಜನೆಯು ನಿಮ್ಮನ್ನು ಪಾಲಿಸಿಯ ಆರಂಭದ ದಿನಾಂಕದಿಂದಲೇ ಕವರ್ ಮಾಡುವುದು ಎಂದು ನೀವು ಯೋಚಿಸುತ್ತಿರಬಹುದು. ಆದರೆ, ಅದು ನಿಜವಲ್ಲ. ಪ್ರತೀ ಆರೋಗ್ಯ ಯೋಜನೆಗೂ ಒಂದು ಕಾಯುವಿಕೆ ಅವಧಿ ಇರುತ್ತದೆ. ಈ ಅವಧಿಯೊಳಗೆ ಯಾವುದೇ ಕಾಯಿಲೆಯಾದರೂ ಅದನ್ನು ಕವರ್ ಮಾಡಲಾಗುವುದಿಲ್ಲ. ಈ ಕಾಯುವಿಕೆ ಅವಧಿಯು, ಸಾಮಾನ್ಯ ಅನಾರೋಗ್ಯ, ಮೊದಲೇ ಇರುವ ಕಾಯಿಲೆಗಳು, ಮೆಟರ್ನಿಟಿ ಹಾಗೂ ಇನ್ನೂ ಕೆಲ ಕಾಯಿಲೆಗಳನ್ನು ಒಳಗೊಂಡಿರುತ್ತದೆ.

 • ಪ್ರೀಮಿಯಂ(Premium) : ನಿಮಗೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲಿಯೆಂದು ನೀವು ಹೆಲ್ತ್  ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುತ್ತೀರಿ. ಹೆಲ್ತ್  ಇನ್ಶೂರೆನ್ಸ್ ಪ್ರೀಮಿಯಂ ಇನ್ಶೂರ್ಡ್ ಮೊತ್ತ ಹಾಗೂ ಒದಗಿಸಲಾಗುವ ಇತರ ಲಾಭಗಳನ್ನು ಅವಲಂಬಿಸಬಹುದು. ಆದ್ದರಿಂದ ಸರಿಯಾಗಿ ಮೌಲ್ಯಮಾಪನ ಮಾಡಿ, ನೀವು ಒಂದು ಮೂಲಭೂತ ಕವರೇಜ್ ಗಾಗಿ ಭಾರೀ ಮೊತ್ತವನ್ನು ಪಾವತಿಸುತ್ತಿಲ್ಲ ಎಂದು ಖಚಿತಪಡಿಸಿ. ಭಾರೀ ಪ್ರೀಮಿಯಂ ಗಳು ನಿಮ್ಮ ಜೇಬಿಗೆ ಕತ್ತರಿಯನ್ನು ಹಾಕಬಾರದು.

 • ಉಪ-ಮಿತಿಗಳು : ವಿವಿಧ ಆರೋಗ್ಯ ಯೋಜನೆಗಳ ಅಡಿಯಲ್ಲಿ ಒದಗಿಸಲಾಗುವ ಕವರ್ ಗಳು ಉಪ-ಮಿತಿಗಳನ್ನು ಅವಲಂಬಿಸಿ ಬೇರೆಬೇರೆಯಾಗಿರಬಹುದು. ಉಪ-ಮಿತಿ ಕವರೇಜ್, ನಿರ್ದಿಷ್ಟ ಕಾಯಿಲೆಗಳ ಚಿಕಿತ್ಸೆ, ಆಸ್ಪತ್ರೆ ಕೋಣೆಯ ಬಾಡಿಗೆ, ಆಂಬ್ಯುಲೆನ್ಸ್ ಶುಲ್ಕಗಳು, ಇತ್ಯಾದಿಗಳ, ಪೂರ್ವನಿರ್ಧಾರಿತ ಮೀತಿಗಳನ್ನು ಉಲ್ಲೇಖಿಸುತ್ತದೆ.  ನೀವು ನಿಮಗೆ ಸಿಗಬಹುದಾದ ಅತ್ಯುತ್ತಮ ಸಂಭಾವ್ಯ ಲಾಭಗಳನ್ನು ಪಡೆಯಬೇಕು.

 • ಡೇ ಕೇರ್ ಪ್ರಕ್ರಿಯೆಗಳಿಗಾಗಿ ಕವರ್ :  ನೀವು ಹೆಲ್ತ್  ಇನ್ಶೂರೆನ್ಸ್ ಯೋಜನೆಯನ್ನು ನಿರ್ಧರಿಸುವ ಮುನ್ನ, ಆ ಪಾಲಿಸಿಯು ದಿನ-ಆರೈಕೆಯ ಪ್ರಕ್ರಿಯೆಗಳನ್ನು ಕವರ್ ಮಾಡುತ್ತಾದೆಯೋ ಇಲ್ಲವೋ ಎಂದು ನೀವು ಪರಿಶೀಲಿಸಬೇಕು. ಈ ಚಿಕಿತ್ಸೆಗಳಿಗೆ ಕಡ್ಡಾಯ 24 ಘಂಟೆಗಳ ಆಸ್ಪತ್ರೆ ದಾಖಲೀಕರಣ ಅಗತ್ಯವಿರುವುದಿಲ್ಲ.

 • ಗಂಭೀರ ಕಾಯಿಲೆ ಲಾಭಗಳಿಗಾಗಿ ಪರಿಶೀಲಿಸಿ : ಕ್ಯಾನ್ಸರ್,ಸ್ಟ್ರೋಕ್ ,ಹೃದಯಾಘಾತ, ಕಿಡ್ನಿ ವೈಫಲ್ಯ ಹಾಗೂ ಇತರವುಗಳನ್ನು ಗಂಭೀರ ಕಾಯಿಲೆ ಎಂದು ವರ್ಗೀಕರಿಸಲಾಗಿದೆ. ಇವುಗಳು ನಿಮ್ಮ ಹೆಲ್ತ್  ಇನ್ಶೂರೆನ್ಸ್ ಯೋಜನೆಯಲ್ಲಿ ಕವರ್ ಆಗಿವೆಯೋ ಇಲ್ಲವೋ ಎಂದು ಪರಿಶೀಲಿಸಿ. ಇನ್ಶೂರೆನ್ಸ್ ಪ್ರೊವೈಡರ್ ಗಳು ಗಂಭೀರ ಕಾಯಿಲೆ ಕವರ್ ಅನ್ನು ಹೆಚ್ಚುವರಿ ಲಾಭಅಥವಾ ಪ್ರತ್ಯೇಕ ಆಡ್-ಆನ್ ಕವರ್ ಆಗಿ ನೀಡುತ್ತಾರೆ.

 • ಲಭ್ಯ ಆಡ್-ಆನ್ ಗಳು : ಹೆಲ್ತ್  ಇನ್ಶೂರೆನ್ಸ್ ಕವರ್ ನೊಂದಿಗೆ ಯಾವ ಆಡ್-ಅನ್ ಗಳನ್ನು ಒದಗಿಸಲಾಗುವುದು ಎಂದು ಕಂಡುಹಿಡಿಯಿರಿ. ಮೆಟರ್ನಿಟಿ ಹಾಗೂ ಬಂಜೆತನದ ಕವರ್ ನ್ವಜಾತ ಶಿಶು ಆರೈಕೆಯೊಂದಿಗೆ, ಆಯುಷ್, ವಲಯದ ಅಪ್ಗ್ರೇಡ್, ಗಂಭೀರ ಕಾಯಿಲೆ ಕವರ್, ಇವುಗಳು ಇನ್ಶೂರರ್ ಗಳು ಒದಗಿಸುವ ಕೆಲ ಲಾಭಗಳಾಗಿವೆ.

 • 0% ಸಹ-ಪಾವತಿ(0% Co-Payments) : ನಿಮ್ಮ ಪಾಲಿಸಿಯ ಸಹ-ಪಾವತಿಯ ಷರತ್ತನ್ನು ಪರಿಶೀಲಿಸಿ. ಕ್ಲೈಮ್ ಸಮಯದಲ್ಲಿ ನಿಮಗೆ ಪಾವತಿ ಮಾಡುವ ಆವಶ್ಯಕತೆ ಇರದಹಾಗೆ  0% ಸಹಪಾವತಿ ಯೋಜನೆಯನ್ನು ಆಯ್ಕೆ ಮಾಡಿ. ಇನ್ಶೂರರ್ ಗಳು ಹೆಚ್ಚಾಗಿ ಆರೋಗ್ಯ ಯೋಜನೆಗಳೊಂದಿಗೆ ಪೂರಕ ವಾರ್ಷಿಕ ಆರೋಗ್ಯ ತಪಾಸಣೆ ಅಥವಾ ಕ್ಲೈಮ್ ರಹಿತ ವರ್ಷದಲ್ಲಿ ಫ್ರೀ ಚೆಕಪ್ ಕೊಡುಗೆಗಳನ್ನು ನೀಡುತ್ತದೆ.

 • ಪೂರಕ ಆರೋಗ್ಯ ತಪಾಸಣೆಗಳು : ನಿಮ್ಮ ಇನ್ಶೂರರ್ ನಿಮಗೆ ಪೂರಕ ಆರೋಗ್ಯ ತಪಾಸಣೆಗಳನ್ನು ನೀಡುತ್ತಾರೆಯೇ ಇಲ್ಲವೇ ಎಂದು ತಿಳಿದುಕೊಳ್ಳಿ. ಇನ್ಶೂರರ್ ಗಳು ಹೆಚ್ಚಾಗಿ ಒಂದು ಕ್ಲೈಮ್ ಫ್ರೀ ವರ್ಷಕ್ಕಾಗಿ ಉಚಿತ ಆರೋಗ್ಯತಪಾಸಣೆ ಗಳನ್ನು ನೀಡುತ್ತಾರೆ ಅಥವಾ ಆರೋಗ್ಯ ಯೋಜನೆಗಳೊಂದಿಗೆ ವಾರ್ಷಿಕ ಪೂರಕ ಆರೋಗ್ಯ ತಪಾಸಣೆ ಗಳನ್ನೂ ಒದಗಿಸುತ್ತಾರೆ.

 • ಮನೋವೈದ್ಯಕೀಯ ಕಾಯಿಲೆಗಳು ಅಥವಾ ಬ್ಯಾರಿಯಾಟ್ರಿಕ್(ಸ್ಥೂಲಕಾಯತೆ) ಶಸ್ತ್ರಚಿಕಿತ್ಸೆ ವೆಚ್ಚಗಳು : ನಿಮ್ಮ ಹೆಲ್ತ್  ಇನ್ಶೂರೆನ್ಸ್ ಯೋಜನೆಯು ಮನೋವೈದ್ಯಕೀಯ ಕಾಯಿಲೆಗಳು ಅಥವಾ ಬ್ಯಾರಿಯಾಟ್ರಿಕ್(ಸ್ಥೂಲಕಾಯತೆ) ಶಸ್ತ್ರಚಿಕಿತ್ಸೆ ಗಳ ವೆಚ್ಚಗಳನ್ನು ಕವರ್ ಮಾಡುವುದೇ ಎಂದು ಪರಿಶೀಲಿಸಿ. ಇದು ಸ್ಥೂಲಕಾಯದ ಅಥವಾ ಮನೋರೋಗಕ್ಕೆ ತುತ್ತಾಗಿರುವ ಜನರು ಮಾಡಿಸುವ ವಿಶೇಷ ಪ್ರಕ್ರಿಯೆಗಳಾಗಿವೆ.

 • ಝೋನ್ ಅಪ್ಗ್ರೇಡ್ ಆಡ್-ಆನ್ : ಹೆಲ್ತ್  ಇನ್ಶೂರೆನ್ಸ್ ನ ಪ್ರೀಮಿಯಂ ಒಂದು ವಲಯದ ಚಿಕಿತ್ಸಾ ವೆಚ್ಚಗಳ ಸೂಚಕವಾಗಿದೆ. ನೀವು ನಿಮ್ಮ ಪಾಲಿಸಿಯನ್ನು ವಲಯ ಬಿ ಅಲ್ಲಿ ಖರೀದಿಸಿದ್ದು, ವಲಯ ಎ ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ, ಕ್ಲೈಮ್ ಸಮಯದಲ್ಲಿ ನೀವು ನಿಮ್ಮ ಜೇಬಿನಿಂದ ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಇನ್ಶೂರರ್ ನಿಮಗೆಝೋನ್ ಅಪ್ಗ್ರೇಡ್ ನ ಅಡ್-ಆನ್ ನೀಡುತ್ತಾರೆಯೋ ಇಲ್ಲವೋ ಎಂದು ಪರಿಶೀಲಿಸಿ.

 • ಪ್ರತಿದಿನದ ಆಸ್ಪತ್ರೆ ಕ್ಯಾಶ್ : ಆಸ್ಪತ್ರೆಯಲ್ಲಿ ದಾಖಾಲಾದರೆ ವಚ್ಚಗಳು ಆಸ್ಪತ್ರೆ ಬಿಲ್ ಅನ್ನೂ ಮೀರಿ ಬೆಳೆಯುತ್ತವೆ. ಪ್ರತಿದಿನದ ಆಸ್ಪತ್ರೆ ಕ್ಯಾಶ್ ನಿಮಗೆ ಪ್ರತಿದಿನದ ವೆಚ್ಚಗಳಾದ ತಿಂಡಿ, ಕಾಫಿ, ಟೀ ಇತ್ಯಾದಿಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಈ ಲಾಭವು ಆಸ್ಪತ್ರೆ ದಾಖಲೀಕರಣದ 1 ದಿನದ ನಂತರದಿಂದ 30 ದಿನಗಳ ವರೆಗೆ ಅನ್ವಯಿಸುತ್ತದೆ. ಈ ಲಾಭವನ್ನು ನಿಮ್ಮ ಇನ್ಶೂರರ್ ನೀಡುತ್ತಿರುವರೇ ಎಂದು ಪರಿಶೀಲಿಸಿ.

 • ಅಂಗ ದಾನದ ವೆಚ್ಚಗಳು : ಅಂಗ ಕಸಿಯ ಸಂದರ್ಭದಲ್ಲಿ, ಒಂದು ಅಂಗ ದಾನಿಯ ಅಗತ್ಯವಿದ್ದರೆ, ಅಂಗ ದಾನಿಯ ಆಸ್ಪತ್ರೆ ದಾಖಾಲಾತಿಯ ಶುಲ್ಕಗಳು ಕವರ್ ಆಗಿರುತ್ತದೆಯೋ ಎಂದು ಪರಿಶೀಲಿಸಿ.

 • ಆದಾಯ ತೆರಿಗೆ ಲಾಭಗಳು : ನಿಮ್ಮ ಇನ್ಶೂರೆನ್ಸ್ ಕಂಪನಿಯು ನೀವು ಪಾವತಿಸುವ ಪ್ರೀಮಿಯಂ ಗಾಗಿ ನಿಮಗೆ ಆದಾಯ ತೆರಿಗೆ ವಿನಾಯಿತಿ ಸರ್ಟಿಫಿಕೇಟ್ ನೀಡುತ್ತದೆಯೋ ಎಂದು ಪರಿಶೀಲಿಸಿ. ಹೆಲ್ತ್  ಇನ್ಶೂರೆನ್ಸ್ ತೆರಿಗೆ ಲಾಭಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಆವಶ್ಯಕ:

ಹೆಲ್ತ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡುವುದು ಹೇಗೆ - ಆನ್ಲೈನ್ ಅಥವಾ ಆಫ್ಲೈನ್

ಆನ್ಲೈನ್ ಹೋಲಿಕೆ ಆಫ್ಲೈನ್ ಹೋಲಿಕೆ
ಹಂತ1 : ಹೋಲಿಕೆಯನ್ನು ಒದಗಿಸುವ ವೆಬ್ ಸಂಗ್ರಹಕರನ್ನು ಅಥವಾ ಕಂಪನಿಗಳನ್ನು ಕಂಡುಹಿಡಿಯಿರಿ. ಅಥವಾ ನೀವು ವಿವಿಧ ಇನ್ಶೂರೆನ್ಸ್ ಕಂಪನಿಗಳ ಆನ್ಲೈನ್ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿ ಸ್ವತಃ ಒಂದು ಹೋಲಿಕೆಯ ಚಾರ್ಟ್ ಅನ್ನು ತಯಾರಿಸಬಹುದು. ಹಂತ 1 : ನಿಮಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಒದಗಿಸಬಲ್ಲ ಏಜಂಟ್ ಅನ್ನು ಕಂಡುಹಿಡಿಯಿರಿ. ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮ ಅಗತ್ಯಗಳ ಬಗ್ಗೆ ವಿವರವಾಗಿ ತಿಳಿಸಿ
ಹಂತ 2 : ಪೋರ್ಟಲ್ ನಿಮ್ಮಲ್ಲಿ ಅಗತ್ಯ ಮಾಹಿತಿಗಳಾದ ನಿಮ್ಮ ನಗರ(ವಲಯ), ಜನನ ದಿನಾಂಕ, ನೀವು ಕವರ್ ಮಾಡಲು ಬಯಸುವ ಜನರ ಸಂಖ್ಯೆ, ಸಂಪರ್ಕ ವಿವರ, ಇನ್ಶೂರ್ಡ್ ಮೊತ್ತ ಇವುಗಳನ್ನು ಕೇಳುತ್ತದೆ. ಪೋರ್ಟಲ್ ಈ ಮಾಹಿತಿಯನ್ನು ಪರಿಷ್ಕರಿಸಿ ನಿಮಗೆ ದರವನ್ನು ಒದಗಿಸುತ್ತದೆ. ನಂತರ ನೀವು ಅದಕ್ಕೆ ಅನುಗುಣವಾಗಿ ಇನ್ಶೂರೆನ್ಸ್ ಕಂಪನಿ ಹಾಗೂ ಯೋಜನೆಯನ್ನು ಆಯ್ಕೆ ಮಾಡಬಹುದು. ಹಂತ 2 :ನಿಮ್ಮ ವಯಸ್ಸು, ಮೊದಲೇ ಇರುವ, ಗಂಭೀರ ಕಾಯಿಲೆ, ವೈದ್ಯಕೀಯ ಇತಿಹಾಸ, ಕೌಟುಂಬಿಕ ಇತಿಹಾಸ, ಇನ್ಶೂರ್ಡ್ ಮೊತ್ತ ಹಾಗೂ ಇತರ ಎಲ್ಲಾ ಮಾಹಿತಿಗಳನ್ನು ನಿಮ್ಮ ಏಜಂಟ್ ಗೆ ನೀಡಿ. ಈ ಎಲ್ಲಾ ಮಾಹಿತಿಗಳು ಸರಿಯಾಗಿವೆ ಎಂದು ಖಚಿತಪಡಿಸಿ.
ಹಂತ 3 : ಇನ್ಶೂರೆನ್ಸ್ ಕಂಪನಿಯು ಮೊದಲೇ ಇರುವ ಕಾಯಿಲೆ, ಸಾಮಾನ್ಯ ರೋಗಲಕ್ಷಣಗಳು, ಔಷಧಿ ಹಾಗೂ ಪೂರಕಗಳ ಬಗ್ಗೆ ಕೇಳುತ್ತದೆ. ಇವುಗಳಲ್ಲಿ ಒಂದಾದರೂ ಇದ್ದರೆ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಹಂತ 3 ಏಜಂಟ್, ವಿವಿಧ ಇನ್ಶೂರರ್ ಗಳಿಂದ ದರಗಳನ್ನು ಕೇಳಿ ನಿಮ್ಮ ಮುಂದೆ ಇಡುತ್ತಾರೆ. ಸರಿಯಾಗಿ ಓದಿ ಸೂಕ್ತ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ
ಹಂತ 4: ಇದರ ಜೊತೆ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಹೆಸರು, ವಯಸ್ಸು, ಲೀಂಗ ತೂಕಗಳನ್ನು ನೀಡಬೇಕಾಗುವುದು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಲ ವೈಯಕ್ತಿಕ ವಿವರಗಳನ್ನು ಕೇಳುತ್ತದೆ. -

ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಹೋಲಿಕೆ ಆನ್ಲೈನ್ ಅಥವಾ ಆಫ್ಲೈನ್ - ಯಾವುದು ಉತ್ತಮ

ಆನ್ಲೈನ್ ಆಫ್ಲೈನ್
ಸಮಯದ ಉಳಿತಾಯವಾಗುತ್ತದೆ ಹೆಲ್ತ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಹೋಲಿಕೆ ಮಾಡುವುದರಿಂದ ಸಾಕಷ್ಟು ಸಮಯದ ಉಳಿತಾಯವಾಗುತ್ತದೆ ಹೋಲಿಕೆಗಾಗಿ ನಿಮ್ಮ ಏಜಂಟ್ ಅನ್ನು ಕೇಳುವುದು ತುಂಬಾ ಸಮಯ ತೆಗೆದುಕೊಳ್ಳುತ್ತದೆ.
ಕಡಿಮೆ ದರ ಮಧ್ಯವರ್ತಿಗಳು ಇಲ್ಲದೇ ಇರುವ ಕಾರಣ ಆನ್ಲೈನ್ ಹೋಲಿಕೆಯ ದರವು ಕಡಿಮೆಯಿರುತ್ತದೆ. ಹಾಗೂ, ಆಡಳಿತ ವೆಚ್ಚವೂ ಕಡಿಮೆಯಾಗುತ್ತದೆ ಏಜಂಟ್ ಮಾಡುವ ಹೋಲಿಕೆಗೆ ಕಮಿಷನ್ ನೀಡಬೇಕಾಗುತ್ತದೆ. ಇನ್ಶೂರರ್ ನಿಂದ ದೊರೆಯುವ ದರಗಳಲ್ಲಿ ಆಡಳಿತ ವೆಚ್ಚಗಳು ಸೇರಿರುತ್ತವೆ.
ಪಕ್ಷಪಾತವಿಲ್ಲದ ನಿರ್ಧಾರ ಮಧ್ಯವರ್ತಿಗಳಿಲ್ಲದ ಕಾರಣ ಆನ್ಲೈನ್ ಹೋಲಿಕೆಯಲ್ಲಿ ಪಕ್ಷಪಾತ ಅಥವಾ ಪರಿಣಾಮಕ ನಿರ್ಧಾರದ ಸಂಭಾವನೆ ಸೊನ್ನೆಯಾಗಿರುತ್ತದೆ. ಆಫ್ಲೈನ್ ಹೋಲಿಕೆ ಮಾಡುವಾಗ, ಪಕ್ಷಪಾತದ ನಿರ್ಧಾರಕ್ಕೆ ಬರುವ ಸಂಭಾವನೆ ಹೆಚ್ಚಿರುತ್ತದೆ. ಏಜಂಟ್, ಹೆಚ್ಚಿನ ಕಮಿಷನ್ ಇರುವ ಆರೋಗ್ಯ ಯೋಜನೆಯನ್ನು ಶಿಫಾರಸ್ಸು ಮಾಡಬಹುದು
ಕವರ್ ನ ಬಗ್ಗೆ ಅರಿವು ಆನ್ಲೈನ್ ಹೋಲಿಕೆ ಮಾಡುವಾಗ ನೀವು ವೆಬ್ಸೈಟ್ ನಲ್ಲಿ ಯೋಜನೆಯ ಎಲ್ಲಾ ವಿವರಗಳನ್ನು ನೋಡಬಹುದು ನಿಮಗೆ ಸಂದೇಹಗಳಿದ್ದರೆ ಸಹಾಯವಾಣಿಗೂ ಕರೆ ಮಾಡಬಹುದು ಆರೋಗ್ಯ ಯೋಜನೆಯನ್ನು ಏಜಂಟ್ ಜೊತೆ ಆಫ್ಲೈನ್ ಹೋಲಿಕೆ ಮಾಡುವಾಗ, ಏಜಂಟ್ ಕೆಲವು ಪ್ರಮುಖ ಮಾಹಿತಿಗಳನ್ನು ಹಂಚಲು ಮರೆಯುವ ಸಂಭಾವನೆಗಳು ಹೆಚ್ಚಿರುತ್ತದೆ.
ಅನುಕೂಲತೆ ಆರೋಗ್ಯ ಯೋಜನೆಗಳ ದರಗಳನ್ನು ಆನ್ಲೈನ್ ಆಗಿ ಹೋಲಿಕೆ ಮಾಡುವುದು ಸಾಕಷ್ಟು ಅನುಕೂಲಕರವಾಗಿರುತ್ತದೆ. ಏಜಂಟ್ ಗೆ ದರಗಳನ್ನು ಹೋಲಿಕೆ ಮಾಡಲು ಹೇಳುವುದು ಗೊಂದಲಮಯವಾಗಿರುತ್ತದೆ.

ಹೆಲ್ತ್ ಇನ್ಶೂರೆನ್ಸ್ ಗಳ ಆನ್ಲೈನ್ ಹೋಲಿಕೆ ಏಕೆ ಮಾಡಬೇಕು?

ಆಹಾರದಿಂದ ಹಿಡಿದು ಕ್ಯಾಬ್ ವರೆಗೆ, ದಿನಸಿಯಿಂದ ಹಿಡಿದು ಪಾಲಿಸಿಗಳ ವರೆಗೆ ಎಲ್ಲವೂ ಇಂದು ಆನ್ಲೈನ್ ಆಗಿ ಲಭ್ಯವಿದೆ. ಆನ್ಲೈನ್ ಶಾಪಿಂಗ್ ಹೋಲಿಕೆಗಳನ್ನು ಅನುಕೂಲಕರವನ್ನಾಗಿಸಿದೆ. ಒಂದೇ ವೇದಿಕೆಯಲ್ಲಿ ಹಲವು ಆಯ್ಕೆಗಳನ್ನು ಅನ್ವೇಷಿಸಬಹುದಾಗಿದೆ, ನಿಮ್ಮ ಬೆರಳತುದಿಯಿಂದಲೇ. ಹಾಗೂ ಹೆಲ್ತ್  ಇನ್ಶೂರೆನ್ಸ್ ವಿಷಯ ಬಂದಾಗ, ನೀವಿದರ ಆನ್ಲೈನ್ ಹೋಲಿಕೆಯನ್ನು ಮಾಡಬೇಕು, ಏಕೆಂದರೆ:

ಶೂನ್ಯ ಹೂಡಿಕೆ

ಹೆಲ್ತ್  ಇನ್ಶೂರೆನ್ಸ್ ಯೋಜನೆಗಳ ಆನ್ಲೈನ್ ಹೋಲಿಕೆಗಳಿಗಾಗಿ ನೀವು ಶೂನ್ಯ ಹೂಡಿಕೆ ಮಾಡಬೇಕಾಗುತ್ತದೆ. ನೀವು ಕೇವಲ ಇನ್ಶೂರೆನ್ಸ್ ಪ್ರೊವೈಡರ್ ಅಥವಾ ಸಂಗ್ರಹಕ ವೆಬ್ಸೈಟ್ ಗಳನ್ನು ಬ್ರೌಸ್ ಮಾಡಿ ಬೇಕಾದಷ್ಟು ಮಾಹಿತಿಗಳನ್ನು ಪಡೆಯಬಹುದಾಗಿದೆ. ಇದು ಹೋಲಿಕೆ ಹಾಗೂ ವಿಶ್ಲೇಷಣೆಯನ್ನು ಸರಳೀಕರಿಸುತ್ತದೆ.

ಇನ್ಶೂರೆನ್ಸ್/ಏಜಂಟ್ ಕಛೇರಿಗಾಗಿ ಕಾಯಬೇಕಾಗಿಲ್ಲ

ನಿಮಗೆ ಇನ್ಶೂರೆನ್ಸ್ ಪಾಲಿಸಿ ಬೇಕಾಗಿದೆ, ಒಳ್ಳೆಯದು! ಆದರೆ ನೀವು ಎರಡು ಉತ್ಪನ್ನಗಳ ಹೋಲಿಕೆಯನ್ನು ಹೇಗೆ ಮಾಡುತ್ತೀರಿ?ಇನ್ಶೂರೆನ್ಸ್ ಕಂಪನಿ/ ಏಜಂಟ್ ಕಛೇರಿಯನ್ನು ಭೇಟಿ ಮಾಡಿ ಅಥವಾ ಆನ್ಲೈನ್ ಆಗಿ. ಆನ್ಲೈನ್ ಹೋಲಿಕೆಯು ಈಗಾಗಲೇ ಮನೆಯಿಂದ ಕಛೇರಿ ವರೆಗೆ ಪ್ರಯಾಣಿಸಿರುವ ನಿಮಗೆ ಉದ್ದದ ಸಾಲಿನಲ್ಲಿ ನಿಲ್ಲುವ ಬಾಧೆಯನ್ನು ತಪ್ಪಿಸುತ್ತದೆ.

ಗೌಪ್ಯ ಮಾಹಿತಿಯಿಲ್ಲ

ಹೆಲ್ತ್  ಇನ್ಶೂರೆನ್ಸ್ ಯೋಜನೆಗಳ ಆನ್ಲೈನ್ ಹೋಲಿಕೆಯ ಉತ್ತಮ ಭಾಗವೆಂದರೆ ಅದರ ಪಾರದರ್ಶಕತೆ. ಇಲ್ಲಿ ಗೌಪ್ಯ ಮಾಹಿತಿ ಇರುವುದಿಲ್ಲ. ಏಜಂಟ್ ಅಥವಾ ಇನ್ಶೂರೆನ್ಸ್ ಕಂಪನಿಗಳು ಕೆಲ ನೀಡಬೇಕಾದ ಅಮೂಲ್ಯ ಮಾಹಿತಿಗಳನ್ನು ಮರೆಯಬಹುದು. ಆದರೆ ಆನ್ಲೈನ್ ಹೋಲಿಕೆಯ ಸಂದರ್ಭದಲ್ಲಿ ಹೀಗಾಗಲು ಸಾಧ್ಯವಿಲ್ಲ.

ಸಮಯವನ್ನು ಉಳಿಸುತ್ತದೆ

ವೆಬ್ ಸಂಗ್ರಹಕರ ಮೂಲಕ ಆನ್ಲೈನ್ ಆಗಿ ಹೆಲ್ತ್  ಇನ್ಶೂರೆನ್ಸ್ ಹೋಲಿಕೆ ಮಾಡೂವುದರಿಂದ ನಿಮ್ಮ ಸಮಯದ ಉಳಿತಾಯವಾಗುತ್ತದೆ. ನೀವು ಯಾವುದೇ ಕಂಪನಿ ಪ್ರತಿನಿಧಿ ಅಥವಾ ಏಜಂಟ್ ನಿಮ್ಮನ್ನು ಭೇಟಿಯಾಗುವುದನ್ನು ಕಾಯಬೇಕಾಗಿಲ್ಲ. ನೀವು ಕೇವಲ ಕೆಲವು ಮಾಹಿತಿಗಳನ್ನು ಒಳ ಹಾಕಿ ಹೋಲಿಕೆಗಳ ಬಗ್ಗೆ ಓದಿಕೊಳ್ಳಬಹುದು. ಆಗ್ರಿಗೇಟರ್ ಆಲ್ಲದಿದ್ದರೆ ನೀವು ಇನ್ಶೂರೆನ್ಸ್ ಕಂಪನಿಗಳು ನೀಡುವ ಹೆಲ್ತ್  ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿ ಸ್ವತಃ ಒಂದು ಹೋಲಿಕೆಯ ಚಾರ್ಟ್ ಅನ್ನು ತಯಾರಿಸಬಹುದು.

ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡದಿದ್ದರೆ ಏನಾಗುತ್ತದೆ?

ಇದನ್ನು, ನಿಮಗೆ ನಿಮ್ಮ ಅನಾರೋಗ್ಯದ ನಿಖರವಾದ ಕಾರಣ ಗೊತ್ತಿಲ್ಲದೆ ಜನರಲ್ ಫಿಸಿಷಿಯನ್ ಬಳಿ ಹೋಗುವ ಹಾಗೆ ಎಂದು ಯೋಚಿಸಿ. ಹೆಲ್ತ್  ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡುವುದು ಅತೀ ಪ್ರಮುಖವಾಗಿದೆ. ನೀವು ಹೋಲಿಕೆಯ ವಿಶ್ಲೇಷಣೆಯನ್ನು ತಪ್ಪಿಸಿದರೆ ನೀವು:

 • ನಿಮ್ಮ ಅಗತ್ಯಕ್ಕೆ ಹೊಂದದ ಹೆಲ್ತ್  ಇನ್ಶೂರೆನ್ಸ್ ಉತ್ಪನ್ನವನ್ನು ಖರೀದಿಸಬಹುದು.ಕೊನೆಯಲ್ಲಿ, ಬಿಕ್ಕಟ್ಟಿನ ಸಂದರ್ಭ ಬಂದಾಗ, ನಿಮಗೆ ಆರ್ಥಿಕ ಭದ್ರತೆ ಇರುವುದಿಲ್ಲ.
 • ಯಾವುದೋ ಒಂದು ಪಾಲಿಸಿಯನ್ನು ಖರೀದಿಸಿ, ನೀವು ಇರಲೇಬೇಕಾದ ಕೆಲ ಪ್ರಮುಖ ವೈಶಿಷ್ಟ್ಯಗಳಿಂದ ವಂಚಿತರಾಗಬಹುದು.
 • ಮಿತವಾದ ಇನ್ಶೂರ್ಡ್ ಮೊತ್ತವಿರುವ ಉತ್ಪನ್ನವನ್ನು ಆಯ್ಕೆ ಮಾಡಬಹುದು. ಅಗತ್ಯದ ಸಮಯದಲ್ಲಿ ಇದು ನಿಮಗೆ ಒತ್ತಡ ನೀಡಬಹುದು.
 • ನೀವು ಆಯ್ಕೆ ಮಾಡುವ ಕವರ್ ಬೆಲೆಬಾಳದಿದ್ದರೆ ನೀವು ಸಾಕಷ್ಟು ಪ್ರೀಮಿಯಂ ಅನ್ನು ಕಳೆದುಕೊಳ್ಳುತ್ತೀರಿ.