ಹೆಲ್ತ್ ಇನ್ಶೂರೆನ್ಸ್ ನಲ್ಲಿ ಬಳಸುವ ಎಲ್ಲಾ ಸಂಕೀರ್ಣ ಪದಗಳು ಮತ್ತು ಪರಿಭಾಷೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತಿದೆಯೇ? ಚಿಂತಿಸಬೇಡಿ, ನೀವು ಒಬ್ಬರೇ ಅಲ್ಲ. ಅಂದಾಜು 50 ಪುಟಗಳ ಇನ್ಶೂರೆನ್ಸ್ ಡಾಕ್ಯುಮೆಂಟುಗಳನ್ನು ಓದಲು ನೀವು ಪ್ರಯತ್ನಿಸುತ್ತಿರಬಹುದೆಂದು ನಾವು ಅರ್ಥಮಾಡಿಕೊಂಡಿದ್ದೇವೆ.
ಆದರೆ ಚಿಂತಿಸಬೇಡಿ, ನಿಮಗಾಗಿ ಇನ್ಶೂರೆನ್ಸ್ ಅನ್ನು ಸರಳಗೊಳಿಸಲು ನಾವಿದ್ದೇವೆ. ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ಕೆಲವು ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳುವ ಮೂಲಕ ಸರ್ವಸನ್ನದ್ಧರಾಗಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಮತ್ತು ನೀವು ತಿಳಿದಿರಬೇಕಾದ ಒಂದು ಪ್ರಮುಖ ಪದವೆಂದರೆ ಸಮ್ ಇನ್ಶೂರ್ಡ್.
ಸಮ್ ಇನ್ಶೂರ್ಡ್ ಎಂದರೇನು?
ಸಮ್ ಇನ್ಶೂರ್ಡ್ (SI) ಎನ್ನುವುದು ವೈದ್ಯಕೀಯ ತುರ್ತುಸ್ಥಿತಿ, ಅನಾರೋಗ್ಯದ ಚಿಕಿತ್ಸೆ ಇತ್ಯಾದಿಗಳಿಗಾಗಿ ನೀವು ಕ್ಲೈಮ್ ಮಾಡಿದ ಸಂದರ್ಭದಲ್ಲಿ ನಿಮಗೆ (ಇನ್ಶೂರ್ಡ್) ಒದಗಿಸಲಾಗುವ ಗರಿಷ್ಠ ಮೊತ್ತವಾಗಿದೆ. ಇದು ನೇರವಾಗಿ ನಷ್ಟ ಪರಿಹಾರ ಪರಿಕಲ್ಪನೆಯನ್ನು ಆಧರಿಸಿದೆ. ಆದ್ದರಿಂದ, ನೀವು ಕ್ಲೈಮ್ ಮಾಡಿದಾಗ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡಿದ ವೆಚ್ಚಗಳ ರಿಇಂಬರ್ಸ್ ಮೆಂಟ್ ಅನ್ನು ನೀವು ಪಡೆಯುತ್ತೀರಿ.
ಚಿಕಿತ್ಸೆಯ ವೆಚ್ಚವು ಸಮ್ ಇನ್ಶೂರ್ಡ್ ಗಿಂತ ಕಡಿಮೆ ಅಥವಾ ಅದಕ್ಕೆ ಸಮಾನವಾಗಿದ್ದರೆ ಸಂಪೂರ್ಣ ಬಿಲ್ನ ಅಮೌಂಟ್ ಅನ್ನು ಇನ್ಶೂರೆನ್ಸ್ ಕಂಪನಿಯು ಕವರ್ ಮಾಡುತ್ತವೆ.
ಆದರೆ, ಚಿಕಿತ್ಸೆ ಅಥವಾ ಆಸ್ಪತ್ರೆಗೆ ದಾಖಲಾದ ವೆಚ್ಚಗಳು ಸಮ್ ಇನ್ಶೂರ್ಡ್ ಅನ್ನು ಮೀರಿದರೆ ಸಮ್ ಇನ್ಶೂರ್ಡ್ ಗಿಂತ ಹೆಚ್ಚಿನ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಮ್ ಇನ್ಶೂರ್ಡ್ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯೊಂದಿಗೆ ನೀವು ಕ್ಲೈಮ್ ಮಾಡಿದಾಗ ನೀವು ಪಡೆಯಬಹುದಾದ ನಷ್ಟ ಪರಿಹಾರ ಆಧಾರಿತ ರಿಇಂಬರ್ಸ್ ಮೆಂಟ್ ಆಗಿದೆ.
ಹೆಲ್ತ್ ಇನ್ಶೂರೆನ್ಸ್, ಹೋಮ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್ ಮುಂತಾದ ಎಲ್ಲಾ ನಾನ್-ಲೈಫ್ ಇನ್ಶೂರೆನ್ಸ್ಗಳು ಈ ಸಮ್ ಇನ್ಶೂರ್ಡ್ ಅನ್ನು ಒದಗಿಸುತ್ತವೆ.