ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ

ನಿಮ್ಮ ಪೋಷಕರಿಗಾಗಿ ಪ್ರತ್ಯೇಕವಾದ ಹೆಲ್ತ್ ಇನ್ಶೂರೆನ್ಸ್ ಏಕೆ ಬೇಕು ಎಂಬುದಕ್ಕೆ 5 ಕಾರಣಗಳು

ಭಾರತದಲ್ಲಿ, ಹೆಲ್ತ್‌ಕೇರ್ ವೆಚ್ಚಗಳು ಹೆಚ್ಚುತ್ತಿವೆ ಮತ್ತು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯು ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ ಅನ್ನು ಪಡೆದುಕೊಳ್ಳುವುದು ಅತ್ಯಗತ್ಯ.

ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಮುಖ್ಯವಾಗಿದ್ದರೂ, ಸೀನಿಯರ್ ಸಿಟಿಜನ್ ಪೋಷಕರಿಗಾಗಿ ಇದು ಇನ್ನಷ್ಟು ಮುಖ್ಯವಾಗುತ್ತದೆ. ಜನರಿಗೆ ವಯಸ್ಸಾದಂತೆ, ಅವರ ಹೆಲ್ತ್‌ಕೇರ್ ಅಗತ್ಯತೆಗಳು ಹೆಚ್ಚಾಗುತ್ತವೆ ಮತ್ತು ಅವರು ಅನಾರೋಗ್ಯ ಹಾಗೂ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ.

ನಿಮ್ಮ ಪೋಷಕರಿಗಾಗಿ ನೀವು ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು ಎಂಬುದಕ್ಕೆ 5 ಕಾರಣಗಳು

ಮೊದಲನೆಯದಾಗಿ ನಮ್ಮ ಪೋಷಕರಿಗಾಗಿ ಹೆಲ್ತ್ ಕವರೇಜ್ ಅನ್ನು ಹೊಂದುವುದು ಎಷ್ಟು ಅವಶ್ಯಕವೋ, ನಿಮ್ಮ ಸ್ವಂತ ಪಾಲಿಸಿಯೊಂದಿಗೆ ಅವರನ್ನು ಸೇರಿಸಿಕೊಳ್ಳುವ ಬದಲು ಅವರಿಗಾಗಿಯೇ ಪ್ರತ್ಯೇಕ ಪಾಲಿಸಿಯನ್ನು ಖರೀದಿಸುವುದು ಯಾವಾಗಲೂ ಉತ್ತಮವಾಗಿದೆ.

ನಿಮ್ಮ ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಉತ್ತಮ ಎಂಬುದಕ್ಕೆ 5 ಕಾರಣಗಳು ಇಲ್ಲಿವೆ.

1. ಫ್ಯಾಮಿಲಿ ಇನ್ಶೂರೆನ್ಸ್‌ನಲ್ಲಿ ಹೆಚ್ಚಿನ ಕವರೇಜ್ ಲಭ್ಯತೆ vs ಹಂಚಿಕೆಯ ಕವರೇಜ್

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ನಿಮ್ಮ ಪೋಷಕರನ್ನು ಸೇರಿಸಿದಾಗ, ಲಭ್ಯವಿರುವ ಒಟ್ಟು ಕವರೇಜ್ ಅನ್ನು ನಿಮ್ಮ ಪಾಲಿಸಿಯ ಎಲ್ಲಾ ಸದಸ್ಯರ ನಡುವೆ ಹಂಚಿಕೊಳ್ಳಲಾಗುತ್ತದೆ. ಇದರರ್ಥ ಕುಟುಂಬದ ಒಬ್ಬ ಸದಸ್ಯರು ಕ್ಲೈಮ್ ಮಾಡಿದರೆ, ಅದರಿಂದ ಇತರರಿಗೆ ಲಭ್ಯವಿರುವ ಕವರೇಜ್ ಕಡಿಮೆಯಾಗುತ್ತದೆ.

ಮತ್ತೊಂದೆಡೆ, ನೀವು ನಿಮ್ಮ ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಸಂಪೂರ್ಣ ಕವರೇಜ್ ಅವರಿಗೆ ಮೀಸಲಾಗಿರುತ್ತದೆ. ಇದರಿಂದಾಗಿ ಅವರು ವೆಚ್ಚಗಳ ಬಗ್ಗೆ ಹೆಚ್ಚು ಚಿಂತಿಸದೆ, ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.

2. ಕೈಗೆಟುಕುವ ಪ್ರೀಮಿಯಂ ದರಗಳು

ಸೀನಿಯರ್ ಸಿಟಿಜನ್‌ಗಳಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ಸಾಮಾನ್ಯವಾಗಿ ಕಿರಿಯ ವ್ಯಕ್ತಿಗಳಿಗಿಂತ ಹೆಚ್ಚಿರುತ್ತದೆ. ನೀವು ನಿಮ್ಮ ಪಾಲಿಸಿಯಲ್ಲಿ ನಿಮ್ಮ ಪೋಷಕರನ್ನು ಸೇರಿಸಿದಾಗ, ಸಂಪೂರ್ಣ ಪಾಲಿಸಿಯ ಪ್ರೀಮಿಯಂ ಹಿರಿಯ ಸದಸ್ಯರ ವಯಸ್ಸನ್ನು ಆಧರಿಸಿರುತ್ತದೆ. ಇದರರ್ಥ ನಿಮ್ಮ ಪೋಷಕರಲ್ಲಿ ಒಬ್ಬರು ಸೀನಿಯರ್ ಸಿಟಿಜನ್ ಆಗಿದ್ದರೆ, ಸಂಪೂರ್ಣ ಪಾಲಿಸಿಯ ಪ್ರೀಮಿಯಂ ಹೆಚ್ಚಾಗುತ್ತದೆ.

ಮತ್ತೊಂದೆಡೆ, ನೀವು ನಿಮ್ಮ ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಆ ಪಾಲಿಸಿಯ ಪ್ರೀಮಿಯಂ ಅವರ ವಯಸ್ಸು ಮತ್ತು ಹೆಲ್ತ್ ಕಂಡೀಷನ್ ಅನ್ನು ಆಧರಿಸಿರುತ್ತದೆ. ಇದು ನೀವು ಸಾಧ್ಯವಾದಷ್ಟು ಉತ್ತಮ ಪ್ರೀಮಿಯಂ ದರಗಳನ್ನು ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸುತ್ತದೆ.

3. ನಿಮ್ಮ ಆರೋಗ್ಯದ ಅಗತ್ಯತೆಗಳ ಪ್ರಕಾರ ನಿಮ್ಮ ಪಾಲಿಸಿಯನ್ನು ಕಸ್ಟಮೈಸ್ ಮಾಡಿ

ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಹೆಲ್ತ್‌ಕೇರ್ ಅಗತ್ಯಗಳನ್ನು ಹೊಂದಿರುತ್ತಾನೆ ಮತ್ತು ಈ ಅಗತ್ಯಗಳು ವಯಸ್ಸಿನೊಂದಿಗೆ ಭಿನ್ನವಾಗಿರುತ್ತವೆ. ನಿಮ್ಮ ಪೋಷಕರಿಗಾಗಿ ಪ್ರತ್ಯೇಕವಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಖರೀದಿಸಿದಾಗ, ಅವರ ನಿರ್ದಿಷ್ಟ ಹೆಲ್ತ್‌ಕೇರ್ ಅಗತ್ಯಗಳಿಗೆ ಸರಿಹೊಂದುವಂತೆ ನೀವು ಪಾಲಿಸಿಯನ್ನು ಕಸ್ಟಮೈಸ್ ಮಾಡಬಹುದು. ಆಸ್ಪತ್ರೆಗೆ ದಾಖಲಾಗುವಿಕೆ, ವೈದ್ಯರ ಶುಲ್ಕ, ಡಯಾಗ್ನೊಸ್ಟಿಕ್ ಟೆಸ್ಟ್‌ಗಳು ಮತ್ತು ಔಷಧೋಪಚಾರ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಅವರು ಅಗತ್ಯ ಕವರೇಜನ್ನು ಪಡೆಯುತ್ತಾರೆ ಎಂಬುದನ್ನು ಇದು ಖಚಿತಪಡಿಸುತ್ತದೆ.

4. ನೋ-ಕ್ಲೈಮ್ ಬೋನಸ್ ಅನ್ನು ಉತ್ತಮಗೊಳಿಸುವುದು

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ನಿಮ್ಮ ಪೋಷಕರನ್ನು ಸೇರಿಸಿದಾಗ, ನೋ ಕ್ಲೈಮ್ ಬೋನಸ್ ಅನ್ನು ಆ ಪಾಲಿಸಿಯ ಎಲ್ಲಾ ಸದಸ್ಯರ ನಡುವೆ ಹಂಚಲಾಗುತ್ತದೆ. ಆದಾಗ್ಯೂ, ನೀವು ನಿಮ್ಮ ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಅವರು ಪಾಲಿಸಿಯ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದರೆ, ಆಗ ಅವರು ನೋ-ಕ್ಲೈಮ್ ಬೋನಸ್ ಅನ್ನು ಪಡೆಯಬಹುದು. ಈ ಬೋನಸ್ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಮತ್ತೊಂದೆಡೆ, ವಯಸ್ಸಾದಂತೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ, ಫ್ಯಾಮಿಲಿ ಪಾಲಿಸಿಯಲ್ಲಿ ನಿಮ್ಮ ಪೋಷಕರನ್ನು ಸೇರಿಸುವುದರಿಂದ, ಅದು ನಿಮ್ಮ ಫ್ಯಾಮಿಲಿ ಪಾಲಿಸಿಯಲ್ಲಿ ಎನ್‌ಸಿಬಿ ಅನ್ನು ಕ್ಲೈಮ್ ಮಾಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಹೀಗಾಗಿ, ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ.

5. ಸೀನಿಯರ್ ಸಿಟಿಜನ್‌ಗಳಿಗಾಗಿ ಹೆಚ್ಚುವರಿ ಟ್ಯಾಕ್ಸ್ ಪ್ರಯೋಜನಗಳು

ನೀವು ನಿಮ್ಮ ಪೋಷಕರಿಗಾಗಿ ಪ್ರತ್ಯೇಕವಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80D ಅಡಿಯಲ್ಲಿ ನೀವು ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಅವರ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಾಗಿ ಪಾವತಿಸಿದ ಪ್ರೀಮಿಯಂಗೆ ನೀವು ಹೆಚ್ಚುವರಿ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬುದನ್ನು ಇದು ಖಚಿತಪಡಿಸುತ್ತದೆ.

ಕೊನೆಯದಾಗಿ ಹೇಳುವುದಾದರೆ, ನಿಮ್ಮ ಪೋಷಕರನ್ನು ನಿಮ್ಮ ಸ್ವಂತ ಪಾಲಿಸಿಯೊಂದಿಗೆ ಸೇರಿಸಿಕೊಳ್ಳುವುದಕ್ಕಿಂತಲೂ, ನಿಮ್ಮ ಪೋಷಕರಿಗಾಗಿಯೇ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚಿನ ಕವರೇಜ್, ಕಡಿಮೆ ಪ್ರೀಮಿಯಂಗಳು, ಕಸ್ಟಮೈಸೇಶನ್, ನೋ ಕ್ಲೈಮ್ ಬೋನಸ್ ಮತ್ತು ಟ್ಯಾಕ್ಸ್ ಪ್ರಯೋಜನಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೇ ನಿಮ್ಮ ಪೋಷಕರು ಖರ್ಚುಗಳ ಬಗ್ಗೆ ಹೆಚ್ಚು ಚಿಂತಿಸದೆ, ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ.

ಆದ್ದರಿಂದ, ನಿಮ್ಮ ಪೋಷಕರನ್ನು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ರಕ್ಷಿಸಲು ಅವರಿಗಾಗಿ ನೀವು ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಹೆಚ್ಚು ರೆಕಮೆಂಡ್ ಮಾಡಲಾಗಿದೆ.

ನಿಮ್ಮ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ನನ್ನ ಪ್ರತಿಯೊಬ್ಬ ಪೋಷಕರಿಗೂ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ ಅಥವಾ ನಾನು ಅವರನ್ನು ಒಂದೇ ಪಾಲಿಸಿಯಲ್ಲಿ ಸೇರಿಸಬೇಕೇ?

ನಿಮ್ಮ ಪ್ರತಿಯೊಬ್ಬ ಪೋಷಕರಿಗಾಗಿ ನೀವು ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವ ಆಯ್ಕೆಯನ್ನು ಹೊಂದಿದ್ದೀರಿ. ಅವರ ವೈಯಕ್ತಿಕ ಹೆಲ್ತ್‌ಕೇರ್ ಅಗತ್ಯಗಳಿಗೆ ಅನುಗುಣವಾಗಿ, ಕವರೇಜ್ ಮತ್ತು ಪ್ರಯೋಜನಗಳನ್ನು ಹೊಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಆದಾಗ್ಯೂ, ನಿಮ್ಮ ಅವಶ್ಯಕತೆಗಳಿಗೆ ಉತ್ತಮವಾಗಿ ಹೊಂದುವಂತಿದ್ದರೆ, ಅವರನ್ನು ಒಂದೇ ಪಾಲಿಸಿಯಲ್ಲಿ ಸೇರಿಸುವುದು ಸಹ ಸಾಧ್ಯವುದೆ.

ನಾನು ನನ್ನ ಅತ್ತೆ ಮಾವನನ್ನು ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಸೇರಿಸಬಹುದೇ?

ಹೌದು, ಅನೇಕ ಇನ್ಶೂರೆನ್ಸ್ ಪೂರೈಕೆದಾರರು ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಿಮ್ಮ ಅತ್ತೆ-ಮಾವನನ್ನು ಸೇರಿಸುವ ಆಯ್ಕೆಯನ್ನು ನೀಡುತ್ತಾರೆ. ಆದಾಗ್ಯೂ, ಇನ್ಶೂರೆನ್ಸ್ ಕಂಪನಿಗಳ ನಡುವೆ ಅರ್ಹತೆಯ ಮಾನದಂಡಗಳು ಬದಲಾಗಬಹುದಾದ ಕಾರಣಕ್ಕಾಗಿ, ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸುವುದು ಅತ್ಯಗತ್ಯ.

ನಾನು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ನನ್ನ ಪೋಷಕರನ್ನು ಪ್ರತ್ಯೇಕ ಪಾಲಿಸಿಗೆ ಬದಲಾಯಿಸಬಹುದೇ?

ಹೌದು, ನೀವು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ನಿಮ್ಮ ಪೋಷಕರನ್ನು ಪ್ರತ್ಯೇಕ ಪಾಲಿಸಿಗೆ ಬದಲಾಯಿಸಬಹುದು. ಅಂತಹ ಬದಲಾಯಿಸುವ ಪ್ರಕ್ರಿಯೆ ಮತ್ತು ಯಾವುದೇ ಅಗತ್ಯ ಡಾಕ್ಯುಮೆಂಟೇಶನ್ ಅಥವಾ ಅಂಡರ್ರೈಟಿಂಗ್ ಅಗತ್ಯತೆಗಳ ಬಗ್ಗೆ ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರನ್ನು ವಿಚಾರಿಸಿ ಮಾಹಿತಿ ಪಡೆಯಬಹುದು.

ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ಈ ಮೊದಲೇ ಅಸ್ತಿತ್ವದಲ್ಲಿರುವ ಹೆಲ್ತ್ ಕಂಡೀಷನ್‌ಗಳನ್ನು ಬಹಿರಂಗಪಡಿಸುವುದು ಅವಶ್ಯವೇ?

ಹೌದು, ಪೋಷಕರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಈ ಮೊದಲೇ ಅಸ್ತಿತ್ವದಲ್ಲಿರುವ ಹೆಲ್ತ್ ಕಂಡೀಷನ್‌ಗಳನ್ನು ಬಹಿರಂಗಪಡಿಸುವುದು ಬಹಳ ಮುಖ್ಯ. ಕವರೇಜ್ ಮತ್ತು ಪ್ರೀಮಿಯಂ ದರಗಳನ್ನು ನಿರ್ಧರಿಸಲು ಇನ್ಶೂರೆನ್ಸ್ ಕಂಪನಿಗಳಿಗೆ ಈ ಮೊದಲೇ ಅಸ್ತಿತ್ವದಲ್ಲಿರುವ ಹೆಲ್ತ್ ಕಂಡೀಷನ್‌ಗಳ ನಿಖರ ಬಹಿರಂಗಪಡಿಸುವಿಕೆಯ ಅಗತ್ಯವಿರುತ್ತದೆ. ಈ ಮೊದಲೇ ಅಸ್ತಿತ್ವದಲ್ಲಿರುವ ಹೆಲ್ತ್ ಕಂಡೀಷನ್‌ಗಳನ್ನು ಬಹಿರಂಗಪಡಿಸುವಲ್ಲಿ ವಿಫಲವಾದರೆ ಅದು ಕ್ಲೈಮ್ ರಿಜೆಕ್ಷನ್‌ಗೆ ಅಥವಾ ಪಾಲಿಸಿ ಕ್ಯಾನ್ಸಲೇಶನ್‌ಗೆ ಕಾರಣವಾಗಬಹುದು.

ನನ್ನ ಪೋಷಕರು ಈಗಾಗಲೇ ಚಾಲ್ತಿಯಲ್ಲಿರುವ ಕವರೇಜ್ ಹೊಂದಿದ್ದರೆ, ನಾನು ಅವರಿಗಾಗಿ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದೇ?

ಹೌದು, ನಿಮ್ಮ ಪೋಷಕರು ಈಗಾಗಲೇ ಚಾಲ್ತಿಯಲ್ಲಿರುವ ಕವರೇಜ್ ಹೊಂದಿದ್ದರೂ ಸಹ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಧ್ಯವಿದೆ. ಆದಾಗ್ಯೂ, ಗರಿಷ್ಠ ಪ್ರಯೋಜನಕ್ಕಾಗಿ ಅವೆರಡರ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.