ಆನ್‌ಲೈನ್ ನಲ್ಲಿ ಕಾರ್ ಇನ್ಶೂರೆನ್ಸ್
Get Instant Policy in Minutes*

Third-party premium has changed from 1st June. Renew now

ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟ ಎಂದರೇನು?

ಹೊಸ ಕಾರನ್ನು ಖರೀದಿಸುವುದು ಒಂದು ರೋಮಾಂಚನಕಾರಿ ಅನುಭವ. ಆದರೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಭಯಹುಟ್ಟಿಸುವಂತೆ ತೋರಬಹುದು, ವಿಶೇಷವಾಗಿ ಇನ್ಶೂರೆನ್ಸ್‌ನ ಕೆಲವು ಪರಿಭಾಷೆ ಮತ್ತು ಟೆಕ್ನಿಕಲ್ ಶಬ್ದಗಳ ಬಗ್ಗೆ ನಿಮಗೆ ಪರಿಚಯವಿಲ್ಲದಿದ್ದರೆ ಹೀಗಾಗುವುದು ಸಹಜ; ಅಂತಹದೇ ಒಂದು ಪ್ರಮುಖ ಪದ 'ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟ' ಎನ್ನುವುದಾಗಿದೆ. ಇದು ಹಾನಿಗಳ ವಿರುದ್ಧ ನೀವು ಕ್ಲೈಮ್ ಅನ್ನು ಫೈಲ್ ಮಾಡುವಾಗ ಈ ಪದವು ಬಳಕೆಗೆ ಬರುತ್ತದೆ. ಆದ್ದರಿಂದ, ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟ ಎಂದರೇನು ಎಂಬುದನ್ನು ನಾವೀಗ ಅರ್ಥಮಾಡಿಕೊಳ್ಳೋಣ.

'ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟ'ದ ಅರ್ಥವೇನು?

ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟ ಎನ್ನುವುದು ಕಾರ್ ಹಾನಿಗೊಳಗಾದಾಗ ಉಂಟಾಗುವ ಪರಿಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಅದನ್ನು ಮತ್ತೇ ವರ್ಕಿಂಗ್ ಕಂಡೀಷನ್‌ಗೆ ತರುವ ವೆಚ್ಚವು ಅದರ ವಾಸ್ತವಿಕ ಮಾರ್ಕೆಟ್ ಮೌಲ್ಯ/ಒಟ್ಟು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಗಿಂತಲೂ ಹೆಚ್ಚಾಗಿರುತ್ತದೆ.

ಭಾರತದಲ್ಲಿನ ರೆಗ್ಯುಲೆಟರಿ ಮಾನದಂಡಗಳ ಪ್ರಕಾರ, ಒಟ್ಟು ನಷ್ಟದ ವಾಹನವೆಂದರೆ ಅದರ ರಿಪೇರಿ ವೆಚ್ಚವು ಅದರ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಗಿಂತ 75% ಮೀರಿರಬೇಕು.

ಕಾರ್ ಇನ್ಶೂರೆನ್ಸ್‌ನ ಒಟ್ಟು ನಷ್ಟದ ಪರಿಸ್ಥಿತಿಯು ಈ ಕೆಳಗಿನ ಎರಡು ಕಾರಣಗಳಿಂದ ಉಂಟಾಗಬಹುದು:

  • ಕಾರ್ ಅಪಘಾತಕ್ಕೀಡಾದರೆ ಮತ್ತು ಅದನ್ನು ರಿಪೇರಿ ಮಾಡಿಸಲಾಗದಷ್ಟು ಹಾನಿಗೊಳಗಾಗಿ ಅದನ್ನು ಮುಂದೆಂದೂ ಬಳಸಲು ಸಾಧ್ಯವಾಗದಿದ್ದರೆ
  • ಕಾರನ್ನು ಕದ್ದೊಯ್ದಿದ್ದರೆ ಮತ್ತು ಅಧಿಕಾರಿಗಳಿಂದ ಆ ಕಾರನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ.

ಗಮನಿಸಿ: ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಸೆಕ್ಷನ್ 55 ರ ಪ್ರಕಾರ, ವಾಹನವು ಬಳಸಲಾಗದ ಮಟ್ಟಿಗೆ ಹಾನಿಗೊಳಗಾಗಿದ್ದರೆ ವಾಹನದ ಮಾಲೀಕರು ಅದರ ರಿಜಿಸ್ಟ್ರೇಷನ್‌ನ ಒಟ್ಟು ನಷ್ಟ ಮತ್ತು ಕ್ಯಾನ್ಸಲೇಶನ್ ಅನ್ನು ಡಿಕ್ಲೇರ್ ಮಾಡಬೇಕು. ಅಪಘಾತದ ದಿನಾಂಕದಿಂದ 14 ದಿನಗಳೊಳಗೆ ಮಾಲೀಕರು ತಮ್ಮ ರಿಜಿಸ್ಟರ್ಡ್ ರೀಜನಲ್ ಟ್ರಾನ್ಸ್‌ಪೊರ್ಟ್ ಆಫೀಸ್ (ಆರ್‌ಟಿಒ) ಗೆ ರಿಪೋರ್ಟ್ ಮಾಡಬೇಕಾಗುತ್ತದೆ.

ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟವನ್ನು ಹೇಗೆ ಕ್ಯಾಲ್ಕುಲೇಟ್ ಮಾಡುವುದು?

ಒಟ್ಟು ನಷ್ಟದ ಸಂದರ್ಭದಲ್ಲಿ, ಪಾಲಿಸಿಹೋಲ್ಡರ್‌ಗಳು ಅಗತ್ಯವಾಗಿ ಡಿಡಕ್ಟ್ ಮಾಡಬಹುದಾದ ಮೊತ್ತವನ್ನು ಕಡಿತಗೊಳಿಸಿದ ನಂತರ, ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಅನ್ನು ಪಡೆಯುತ್ತಾರೆ. ಐಡಿವಿ ಅನ್ನು ಕ್ಯಾಲ್ಕುಲೇಟ್ ಮಾಡಲು ಇಂಡಿಯನ್ ಮೋಟಾರ್ ಟ್ಯಾರಿಫ್ ಆ್ಯಕ್ಟ್ ನಿಗದಿಪಡಿಸಿದ ಸ್ಟ್ಯಾಂಡರ್ಡ್ ಡೆಪ್ರಿಸಿಯೇಶನ್ ದರಗಳು ಈ ಕೆಳಗಿನಂತಿವೆ.

ವಾಹನದ ವಯಸ್ಸು
ಐಡಿವಿ ಅನ್ನು ಕ್ಯಾಲ್ಕುಲೇಟ್ ಮಾಡಲು ಡೆಪ್ರಿಸಿಯೇಶನ್ ದರ

ಹೊಸ ವಾಹನ

5%

6 ತಿಂಗಳ ಕೆಳಗೆ

5%

6 ತಿಂಗಳಿಂದ 1 ವರ್ಷ

15%

1 ವರ್ಷದಿಂದ 2 ವರ್ಷಗಳು

20%

2 ವರ್ಷದಿಂದ 3 ವರ್ಷಗಳು

30%

3 ವರ್ಷದಿಂದ 4 ವರ್ಷಗಳು

40%

4 ವರ್ಷದಿಂದ 5 ವರ್ಷಗಳು

50%

5 ವರ್ಷಗಳ ಮೇಲ್ಪಟ್ಟು

ಕಾರ್ ಮೌಲ್ಯಮಾಪನ ಮಾಡಿದ ನಂತರವೇ, ಆ ಕಾರಿನ ಮಾಲೀಕರು ಮತ್ತು ಇನ್ಶೂರರ್‌ಗಳ ನಡುವೆ ಪರಸ್ಪರ ನಿರ್ಧರಿಸಲಾಗುತ್ತದೆ.

ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟಕ್ಕಾಗಿ ಕ್ಲೈಮ್ ಪ್ರಕ್ರಿಯೆ ಹೇಗಿರುತ್ತದೆ?

ಒಟ್ಟು ನಷ್ಟದ ಕಾರ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಲು, ನೀವು ನಿಮ್ಮ ಇನ್ಶೂರರ್‌ ಅನ್ನು ಸಂಪರ್ಕಿಸಿ. ಸಂಪೂರ್ಣ ಪ್ರಕ್ರಿಯೆಯನ್ನು ಅವರು ನಿಮಗೆ ಹಂತ ಹಂತವಾಗಿ ಗೈಡ್ ಮಾಡುತ್ತಾರೆ. ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ನೀವು ಹೊಂದಿರುವಿರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಒಟ್ಟು ನಷ್ಟದ ಸಂದರ್ಭದಲ್ಲಿ ನಿಮ್ಮ ಕಾರಿಗೆ ಹೆಚ್ಚಿನ ಕ್ಲೈಮ್ ಮೊತ್ತವನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ನಿಮ್ಮ ಕಾರ್ ಒಟ್ಟು ನಷ್ಟವನ್ನು ಅನುಭವಿಸಿದ್ದರೆ ಮತ್ತು ನೀವು ಒಟ್ಟು ರಿಪ್ಲೇಸ್‌ಮೆಂಟ್ ವೆಚ್ಚವನ್ನು ಕವರ್ ಮಾಡಲು ಬಯಸಿದರೆ, ಕೇವಲ ಡೆಪ್ರಿಸಿಯೇಟ್ ಮೌಲ್ಯವನ್ನು ಮಾತ್ರವಲ್ಲದೇ, ರಿಟರ್ನ್-ಟು-ಇನ್‌ವಾಯ್ಸ್‌ ಆ್ಯಡ್-ಆನ್ ಇನ್ಶೂರೆನ್ಸ್ ಕವರ್ ಅನ್ನು ಮುಂಚಿತವಾಗಿ ಖರೀದಿಸಿ.

ರೋಡ್ ಟ್ಯಾಕ್ಸ್, ಇನ್ಶೂರೆನ್ಸ್ ಪಾಲಿಸಿ ವೆಚ್ಚ ಮತ್ತು ನೀವು ಪಾವತಿಸಿದ ರಿಜಿಸ್ಟ್ರೇಷನ್ ಶುಲ್ಕಗಳು ಸೇರಿದಂತೆ ನಿಮ್ಮ ಕಾರಿನ ನಿಖರವಾದ ಇನ್‌ವಾಯ್ಸ್ ಮೌಲ್ಯವನ್ನು ಸ್ವೀಕರಿಸಲು ಈ ಆ್ಯಡ್-ಆನ್ ಕವರ್ ನಿಮ್ಮನ್ನು ಅನುಮತಿಸುತ್ತದೆ. ಹೀಗಾಗಿ, ನಿಮ್ಮ ಕಾರಿನ ಕೊನೆಯ ಇನ್‌ವಾಯ್ಸ್ ಮೌಲ್ಯವನ್ನು ಆಧರಿಸಿ ನಿಮಗೆ ಪರಿಹಾರವನ್ನು ನೀಡಲಾಗುತ್ತದೆ.

ಆದಾಗ್ಯೂ, ನೀವು ರಿಟರ್ನ್-ಟು-ಇನ್‌ವಾಯ್ಸ್‌ ಕವರ್ ಅನ್ನು ನಿಮ್ಮ ಕಾರಿನ ಅಪಘಾತ ಅಥವಾ ಕಳ್ಳತನದ ನಂತರ ಖರೀದಿಸದೇ, ಪಾಲಿಸಿ ರಿನೀವಲ್‌ನ ಸಮಯದಲ್ಲಿ ಖರೀದಿಸಿದರೆ, ರಿಟರ್ನ್-ಟು-ಇನ್‌ವಾಯ್ಸ್ ಕವರ್‌ನ ಪ್ರಯೋಜನಗಳನ್ನು ಪಡೆಯಲು ನೀವು ಅರ್ಹರಾಗುತ್ತೀರಿ ಎಂಬುದನ್ನು ನೆನಪಿಡಿ.

ನಿಮ್ಮ ಕಾರನ್ನು ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟವೆಂದು ಡಿಕ್ಲೇರ್ ಮಾಡಿದಾಗ, ಅದು ಯಾವುದೇ ಪಾಲಿಸಿಹೋಲ್ಡರ್‌ಗಳಿಗೆ ಭಯಾನಕವಾಗಿರುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮನ್ನು ಮತ್ತು ನಿಮ್ಮ ವಾಹನವನ್ನು ಸಂಕಷ್ಟದಿಂದ ಸುಲಭವಾಗಿ ಹೊರತರಬಹುದು. ಅಪಘಾತದಲ್ಲಿ ಸಿಕ್ಕಿಬೀಳಬಹುದು ಅಥವಾ ಯಾರಿಗಾದರೂ ಸಂಭವಿಸಬಹುದಾದ ಕಾರ್ ಕಳ್ಳತನಕ್ಕೆ ಬಲಿಯಾಗಬಹುದು ಎಂಬ ಕಾರಣಕ್ಕಾಗಿ, ನೀವು ರಿಟರ್ನ್-ಟು-ಇನ್‌ವಾಯ್ಸ್‌ ಆ್ಯಡ್-ಆನ್ ಕವರ್ ಅನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ!

ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟದ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಕಾರ್ ಇನ್ಶೂರೆನ್ಸ್‌ನಲ್ಲಿ ಒಟ್ಟು ನಷ್ಟವನ್ನು ಹೇಗೆ ಕ್ಯಾಲ್ಕುಲೇಟ್ ಮಾಡಬೇಕು?

ಒಟ್ಟು ನಷ್ಟ ಇನ್ಶೂರೆನ್ಸ್ ಮೌಲ್ಯವನ್ನು ನಿರ್ಧರಿಸುವ ಮೊದಲು ಇನ್ಶೂರರ್‌ಗಳು ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತಾರೆ:

  • ಅವರು ಕಾರನ್ನು ರಿಪೇರಿ ಮಾಡಬಹುದೇ ಎಂಬುದನ್ನು ನಿರ್ಧರಿಸಲು ಯಾಂತ್ರಿಕ ಮತ್ತು ಭೌತಿಕ ಹಾನಿಗಾಗಿ ಪರಿಶೀಲಿಸುತ್ತಾರೆ.
  • ನಂತರ, ಆ ಪ್ರದೇಶದಲ್ಲಿನ ಕಾರಿನ ಡೆಪ್ರಿಸಿಯೇಶನ್ ಬೇಡಿಕೆಯ ಆಧಾರದ ಮೇಲೆ, ವಾಹನದ 'ಆ್ಯಕ್ಚುವಲ್ ಕ್ಯಾಶ್ ವ್ಯಾಲ್ಯೂ'ಅನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

  • ಕಾರಿನ ವಯಸ್ಸು
  • ಪ್ರಸ್ತುತ ಮೈಲೇಜ್
  • ಮೇಕ್, ಮಾಡೆಲ್ ಮತ್ತು ವೇರಿಯಂಟ್‌ನ ವಿಧ
  • ದೈಹಿಕ ಮತ್ತು ಯಾಂತ್ರಿಕ ಸ್ಥಿತಿ
  • ಕಾರಿನ ರಿಜಿಸ್ಟ್ರೇಷನ್ ದಿನಾಂಕ
  • ಎಂಜಿನ್‌ನ ಕ್ಯೂಬಿಕ್ ಕೆಪ್ಯಾಸಿಟಿ
  • ಕಾರಿನ ಎಕ್ಸ್ ಶೋ ರೂಂ ಬೆಲೆ
  • ಕಾರಿನ ವಿಧ - ಪ್ರೈವೇಟ್, ಕಮರ್ಷಿಯಲ್ ಅಥವಾ ಕಂಪನಿ-ಮಾಲೀಕತ್ವ

ಒಂದು ವೇಳೆ ನನ್ನ ಕಾರ್ ಕಳುವಾದಲ್ಲಿ ಮತ್ತು ಅದನ್ನು ಪತ್ತೆಹಚ್ಚಲು ಆಗದಿದ್ದಲ್ಲಿ, ನಾನು ಇನ್ಶೂರೆನ್ಸ್ ರಿಇಂಬರ್ಸ್‌ಮೆಂಟ್ ಅನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು?

ಒಂದು ವೇಳೆ ನಿಮ್ಮ ಕಾರ್ ಕಳುವಾಗಿದ್ದಲ್ಲಿ ಮತ್ತು ಅದನ್ನು ಪತ್ತೆ ಹಚ್ಚಲಾಗದಿದ್ದಲ್ಲಿ ಅಥವಾ ನಿಮ್ಮ ಇನ್ಶೂರರ್‌ಗಳಿಂದ ರಿಪೇರಿ ಮಾಡಿಸಲು ಸಾಧ್ಯವಾಗದಷ್ಟು ಹಾನಿಯಾದಲ್ಲಿ, ನೀವು ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಅನ್ನು ಖರೀದಿಸಬಹುದು.

ಇನ್ಶೂರೆನ್ಸ್ ಕ್ಲೈಮ್‌ನಲ್ಲಿ ಒಟ್ಟು ನಷ್ಟಕ್ಕಾಗಿ ನಾನು ಫೈಲ್ ಮಾಡಿದಾಗ ಏನಾಗುತ್ತದೆ?

ಒಟ್ಟು ನಷ್ಟದ ಸಂದರ್ಭದಲ್ಲಿ, ನಿಮ್ಮ ಇನ್ಶೂರೆನ್ಸ್ ಕಂಪನಿಯು ಐಡಿವಿ ಯನ್ನು ಮಾತ್ರ ಪಾವತಿಸಲು ಜವಾಬ್ದಾರಿಯಾಗಿರುತ್ತದೆ. ಆದಾಗ್ಯೂ, ನಿಮ್ಮ ಇನ್ಶೂರೆನ್ಸ್ ಪಾಲಿಸಿಗೆ ರಿಟರ್ನ್ ಟು ಇನ್‌ವಾಯ್ಸ್ ಆ್ಯಡ್-ಆನ್ ಕವರ್ ಅನ್ನು ನೀವು ಖರೀದಿಸಿದ್ದರೆ, ಕಾರ್ ಇನ್‌ವಾಯ್ಸ್‌ನ ಪೂರ್ಣ ಮೊತ್ತವನ್ನು ಪಾವತಿಸಲು ಕಾರ್ ಇನ್ಶೂರೆನ್ಸ್ ಕಂಪನಿಯು ಜವಾಬ್ದಾರಿಯಾಗಿರುತ್ತದೆ.