ಒಟ್ಟು ನಷ್ಟದ ಕಾರ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡಲು, ನೀವು ನಿಮ್ಮ ಇನ್ಶೂರರ್ ಅನ್ನು ಸಂಪರ್ಕಿಸಿ. ಸಂಪೂರ್ಣ ಪ್ರಕ್ರಿಯೆಯನ್ನು ಅವರು ನಿಮಗೆ ಹಂತ ಹಂತವಾಗಿ ಗೈಡ್ ಮಾಡುತ್ತಾರೆ. ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ಗಳನ್ನು ನೀವು ಹೊಂದಿರುವಿರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಒಟ್ಟು ನಷ್ಟದ ಸಂದರ್ಭದಲ್ಲಿ ನಿಮ್ಮ ಕಾರಿಗೆ ಹೆಚ್ಚಿನ ಕ್ಲೈಮ್ ಮೊತ್ತವನ್ನು ಖಚಿತಪಡಿಸಿಕೊಳ್ಳುವುದು ಹೇಗೆ?
ನಿಮ್ಮ ಕಾರ್ ಒಟ್ಟು ನಷ್ಟವನ್ನು ಅನುಭವಿಸಿದ್ದರೆ ಮತ್ತು ನೀವು ಒಟ್ಟು ರಿಪ್ಲೇಸ್ಮೆಂಟ್ ವೆಚ್ಚವನ್ನು ಕವರ್ ಮಾಡಲು ಬಯಸಿದರೆ, ಕೇವಲ ಡೆಪ್ರಿಸಿಯೇಟ್ ಮೌಲ್ಯವನ್ನು ಮಾತ್ರವಲ್ಲದೇ, ರಿಟರ್ನ್-ಟು-ಇನ್ವಾಯ್ಸ್ ಆ್ಯಡ್-ಆನ್ ಇನ್ಶೂರೆನ್ಸ್ ಕವರ್ ಅನ್ನು ಮುಂಚಿತವಾಗಿ ಖರೀದಿಸಿ.
ರೋಡ್ ಟ್ಯಾಕ್ಸ್, ಇನ್ಶೂರೆನ್ಸ್ ಪಾಲಿಸಿ ವೆಚ್ಚ ಮತ್ತು ನೀವು ಪಾವತಿಸಿದ ರಿಜಿಸ್ಟ್ರೇಷನ್ ಶುಲ್ಕಗಳು ಸೇರಿದಂತೆ ನಿಮ್ಮ ಕಾರಿನ ನಿಖರವಾದ ಇನ್ವಾಯ್ಸ್ ಮೌಲ್ಯವನ್ನು ಸ್ವೀಕರಿಸಲು ಈ ಆ್ಯಡ್-ಆನ್ ಕವರ್ ನಿಮ್ಮನ್ನು ಅನುಮತಿಸುತ್ತದೆ. ಹೀಗಾಗಿ, ನಿಮ್ಮ ಕಾರಿನ ಕೊನೆಯ ಇನ್ವಾಯ್ಸ್ ಮೌಲ್ಯವನ್ನು ಆಧರಿಸಿ ನಿಮಗೆ ಪರಿಹಾರವನ್ನು ನೀಡಲಾಗುತ್ತದೆ.
ಆದಾಗ್ಯೂ, ನೀವು ರಿಟರ್ನ್-ಟು-ಇನ್ವಾಯ್ಸ್ ಕವರ್ ಅನ್ನು ನಿಮ್ಮ ಕಾರಿನ ಅಪಘಾತ ಅಥವಾ ಕಳ್ಳತನದ ನಂತರ ಖರೀದಿಸದೇ, ಪಾಲಿಸಿ ರಿನೀವಲ್ನ ಸಮಯದಲ್ಲಿ ಖರೀದಿಸಿದರೆ, ರಿಟರ್ನ್-ಟು-ಇನ್ವಾಯ್ಸ್ ಕವರ್ನ ಪ್ರಯೋಜನಗಳನ್ನು ಪಡೆಯಲು ನೀವು ಅರ್ಹರಾಗುತ್ತೀರಿ ಎಂಬುದನ್ನು ನೆನಪಿಡಿ.
ನಿಮ್ಮ ಕಾರನ್ನು ಕಾರ್ ಇನ್ಶೂರೆನ್ಸ್ನಲ್ಲಿ ಒಟ್ಟು ನಷ್ಟವೆಂದು ಡಿಕ್ಲೇರ್ ಮಾಡಿದಾಗ, ಅದು ಯಾವುದೇ ಪಾಲಿಸಿಹೋಲ್ಡರ್ಗಳಿಗೆ ಭಯಾನಕವಾಗಿರುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮನ್ನು ಮತ್ತು ನಿಮ್ಮ ವಾಹನವನ್ನು ಸಂಕಷ್ಟದಿಂದ ಸುಲಭವಾಗಿ ಹೊರತರಬಹುದು. ಅಪಘಾತದಲ್ಲಿ ಸಿಕ್ಕಿಬೀಳಬಹುದು ಅಥವಾ ಯಾರಿಗಾದರೂ ಸಂಭವಿಸಬಹುದಾದ ಕಾರ್ ಕಳ್ಳತನಕ್ಕೆ ಬಲಿಯಾಗಬಹುದು ಎಂಬ ಕಾರಣಕ್ಕಾಗಿ, ನೀವು ರಿಟರ್ನ್-ಟು-ಇನ್ವಾಯ್ಸ್ ಆ್ಯಡ್-ಆನ್ ಕವರ್ ಅನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ!