ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಬದಲಾಯಿಸಿ
2 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಪ್ರೀಮಿಯಂ

Third-party premium has changed from 1st June. Renew now

ನಿಮ್ಮ ಕಾರ್‌ನಿಂದ ನಿಮ್ಮ ವೈಯಕ್ತಿಕ ವಸ್ತುಗಳ ಕಳ್ಳತನವನ್ನು ನಿಮ್ಮ ಕಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆಯೇ?

ನೀವು ಕಾರ್-ಮಾಲೀಕರಾಗಿದ್ದರೆ, ನಿಮ್ಮ ಕಾರ್‌ನ ಕಳ್ಳತನವು ಬಹುಶಃ ನಿಮ್ಮ ದುಃಸ್ವಪ್ನಗಳಲ್ಲಿ ಒಂದಾಗಿದೆ. ಮತ್ತು ನಿಮ್ಮ ಕಾರ್‌ನೊಂದಿಗೆ ನಿಮಗೆ ಸಂಬಂಧಿಸಿದ ಅನೇಕ ವಸ್ತುಗಳು ಕಳುವಾಗಿದ್ದರೆ, ಈ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ.  

ನೀವು ಓನ್ ಡ್ಯಾಮೇಜ್ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವಾಗ, ನಿಮ್ಮ ಇನ್ಶೂರೆನ್ಸ್ ನಿಮ್ಮ ಜೊತೆಯಿರುತ್ತದೆ ಮತ್ತು ನಿಮ್ಮ ವೆಹಿಕಲ್‌ನ ಮೌಲ್ಯವನ್ನು ಕವರ್ ಮಾಡುವ ಮೂಲಕ ನಿಮಗೆ ಸಹಾಯ ಮಾಡುವುದರಿಂದ ನೀವು ಸ್ವಲ್ಪ ಆರಾಮವಾಗಿರಬಹುದು.  

ಆದಾಗ್ಯೂ, “ಕಳುವಾದಾಗ, ಕಾರಿನಲ್ಲಿ ಉಳಿದ ನನ್ನ ಎಲ್ಲಾ ವೈಯಕ್ತಿಕ ವಸ್ತುಗಳ ಕಥೆಯೇನು? ಎಂಬುದರ ಬಗ್ಗೆ ನಿಮಗೆ ಅಚ್ಚರಿಯಾಗಬಹುದು”. ಕಳ್ಳತನದ ಸಂದರ್ಭದಲ್ಲಿ ಕಾರಿನಲ್ಲಿ ಉಳಿದಿರುವ ನಿಮ್ಮ ಬಟ್ಟೆಯ ಬ್ಯಾಗ್ ಆಗಿರಲಿ ಅಥವಾ ಪಾದರಕ್ಷೆಗಳನ್ನಾಗಿರಲಿ, ಅವುಗಳನ್ನು ನಿಮ್ಮ ಕಾರ್ ಇನ್ಶೂರೆನ್ಸ್‌ ಕವರ್ ಮಾಡುತ್ತದೆಯೇ? ಸರಿ, ಈ ಪ್ರಶ್ನೆಯನ್ನು ನಿಮ್ಮನ್ನು ನೀವೇ ಕೇಳಿಕೊಳ್ಳುತ್ತಿದ್ದರೆ, ಉತ್ತರ ಕಂಡುಹಿಡಿಯಲು ಮುಂದೆ ಓದಿ:

ನಿಮ್ಮ ಕಾರ್ ಇನ್ಶೂರೆನ್ಸ್ ಕಳ್ಳತನದ ಯಾವ ಸಂದರ್ಭದಲ್ಲಿ ಕವರ್ ಮಾಡುತ್ತದೆ?

ನೀವು ಕಾಂಪ್ರೆಹೆನ್ಸಿವ್ ಪಾಲಿಸಿ, ಸ್ಟ್ಯಾಂಡ್‌ಲೋನ್ ಓನ್ ಡ್ಯಾಮೇಜ್ ಪಾಲಿಸಿ ಅಥವಾ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೂ ಸಹ, ನೀವು ವೈಯಕ್ತಿಕ ವಸ್ತುಗಳ ನಷ್ಟದ ಆ್ಯಡ್-ಆನ್ ಕವರ್ ಅನ್ನು ಖರೀದಿಸದ ಹೊರತು, ಕಳ್ಳತನವಾದಾಗ ವೆಹಿಕಲ್‌ನಲ್ಲಿದ್ದ ವೈಯಕ್ತಿಕ ವಸ್ತುಗಳನ್ನು ಕವರ್ ಮಾಡಲಾಗುವುದಿಲ್ಲ. 

*ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ ಭಾರತದಲ್ಲಿ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ.

ಇದು ನಿಖರವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು, ಎರಡು ಸಂದರ್ಭಗಳನ್ನು ಗಮನಿಸೋಣ:

ನಿಮ್ಮ ಕಾರನ್ನು ಕಳ್ಳತನ ಮಾಡಲಾಗಿದೆ (ಅದರಲ್ಲಿದ್ದ ನಿಮ್ಮ ವೈಯಕ್ತಿಕ ವಸ್ತುಗಳೊಂದಿಗೆ)

ನೀವು ಚಲನಚಿತ್ರ ನೋಡುವುದಕ್ಕಾಗಿ ಹೊರಗೆ ಹೋಗಿರುತ್ತೀರಿ ಮತ್ತು ನಿಮ್ಮ ಕಾರ್ ಅನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದೀರಿ ಎಂದುಕೊಳ್ಳೋಣ. ಶೋ ಮುಗಿದ ನಂತರ, ನೀವು ಹೊರಬಂದು ಸುತ್ತಲೂ ನೋಡುತ್ತೀರಿ, ನಿಮ್ಮ ಕಾರ್ ಕಾಣೆಯಾಗಿದೆ ಎಂಬುದು ನಿಮಗೆ ನಂತರದಲ್ಲಿ ತಿಳಿಯುತ್ತದೆ. ವಾಸ್ತವವಾಗಿ, ನಿಮ್ಮ ಕಾರನ್ನು ಕಳ್ಳತನ ಮಾಡಲಾಗಿರುತ್ತದೆ! 😱 😱

ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ವೆಹಿಕಲ್‌ನ ಕಳ್ಳತನದ ಸಂದರ್ಭದಲ್ಲಿ ನೀವು ಕವರ್ ಆಗುತ್ತೀರಿ. ಆದಾಗ್ಯೂ ನೀವು ತಕ್ಷಣ ಪೊಲೀಸರಿಗೆ ಹಾಗೂ ನಿಮ್ಮ ಇನ್ಶೂರೆನ್ಸ್ ಕಂಪನಿಗೆ ವಿಷಯ ತಿಳಿಸಬೇಕಾಗುತ್ತದೆ. ನಿಮ್ಮ ಕಾರನ್ನು ಒಟ್ಟು ನಷ್ಟವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ, ನಿಮ್ಮ ಕಾರಿನ ಐಡಿವಿ (ಘೋಷಿತ ಇನ್ಶೂರೆನ್ಸ್ ಮೌಲ್ಯ) ಅನ್ನು ಕ್ಲೈಮ್ ಮೊತ್ತವಾಗಿ ನೀವು ಸ್ವೀಕರಿಸುತ್ತೀರಿ.  

ಆದರೆ ನಿಮ್ಮ ಕಾರಿನೊಳಗೆ ಇದ್ದ ನಿಮ್ಮ ವೈಯಕ್ತಿಕ ವಸ್ತುಗಳ ಗತಿಯೇನು? ದುರದೃಷ್ಟವಶಾತ್, ನೀವು ಬೇಸಿಕ್ ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ಹೊಂದಿದ್ದರೆ, ಅದು ನಿಮ್ಮ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವುದಿಲ್ಲ.  

ಆದಾಗ್ಯೂ, ನೀವು ವೈಯಕ್ತಿಕ ವಸ್ತುಗಳ ನಷ್ಟದ ಆ್ಯಡ್-ಆನ್ ಕವರ್ ಅನ್ನು ಆಯ್ಕೆ ಮಾಡಬಹುದು. ಇದರೊಂದಿಗೆ, ಕಳ್ಳತನದ ಸಮಯದಲ್ಲಿ ನಿಮ್ಮ ಕಾರಿನಲ್ಲಿದ್ದ ಯಾವುದೇ ವೈಯಕ್ತಿಕ ವಸ್ತುಗಳ ನಷ್ಟಕ್ಕೆ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪರಿಹಾರದೊಂದಿಗೆ ನಿಮಗೆ ಸಹಾಯ ಮಾಡುತ್ತಾರೆ.

ನಿಮ್ಮ ಕಾರಿನಿಂದ ನಿಮ್ಮ ವೈಯಕ್ತಿಕ ವಸ್ತುಗಳನ್ನು ಮಾತ್ರ ಕಳ್ಳತನ ಮಾಡಿದ್ದರೆ

ಈಗ ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ: ನೀವು ನಿಮ್ಮ ಕಾರಲ್ಲಿ ಹೊರಗಡೆ ಹೋದಾಗ, ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬಟ್ಟೆ ಮತ್ತು ಪಾದರಕ್ಷೆಗಳಂತಹ ನಿಮ್ಮ ವೈಯಕ್ತಿಕ ವಸ್ತುಗಳನ್ನು ಒಳಗೆ ಬಿಟ್ಟು ಕೆಲವು ತರಕಾರಿಗಳನ್ನು ಖರೀದಿಸಲು ಹೋಗುತ್ತೀರಿ. ಆದರೆ ನೀವು ಹಿಂತಿರುಗಿದಾಗ, ಓಹ್! ಕಾರಿಗೆ ನುಗ್ಗಿ ಯಾರೋ ನಿಮ್ಮ ವಸ್ತುಗಳನ್ನು ಕಳುವಾಗಿದೆ ಎಂದು ನೀವು ಅರ್ಥಮಾಡಿಕೊಳ್ಳುತ್ತಿರಿ! 😞 😞

ಈ ಸಂದರ್ಭದಲ್ಲಿ, ನೀವು ಬೇಸಿಕ್ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಅಥವಾ ಓನ್ ಡ್ಯಾಮೇಜ್ ಪಾಲಿಸಿಯನ್ನು ಹೊಂದಿದ್ದರೆ, ಮುರಿದ ಬಾಗಿಲುಗಳು ಅಥವಾ ಒಡೆದ ಕಿಟಕಿಗಳಂತಹ ನಿಮ್ಮ ಕಾರಿನ ಯಾವುದೇ ಹಾನಿಗಳಿಗೆ, ರಿಪೇರಿ ಮತ್ತು ರಿಪ್ಲೇಸ್‌ಮೆಂಟ್ ವೆಚ್ಚವನ್ನು ಇದು ಕವರ್ ಮಾಡುತ್ತದೆ. ಆದರೆ, ಇದು ಕಳುವಾದ ವಸ್ತುಗಳನ್ನು ಕವರ್ ಮಾಡುವುದಿಲ್ಲ. 

ಮತ್ತೊಮ್ಮೆ ಹೇಳುತ್ತಿದ್ದೇವೆ, ಇದಕ್ಕಾಗಿ ನೀವು ವೈಯಕ್ತಿಕ ವಸ್ತುಗಳ ನಷ್ಟದ ಆ್ಯಡ್-ಆನ್ ಕವರ್ ಅನ್ನು ಹೊಂದಿರಲೇಬೇಕು. 

ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:

ವೈಯಕ್ತಿಕ ವಸ್ತುಗಳ ನಷ್ಟದ ಕವರ್ ಎಂದರೇನು?

ಹಾಗಾದರೆ, ಈ ವೈಯಕ್ತಿಕ ವಸ್ತುಗಳ ಆ್ಯಡ್-ಆನ್ ಕವರ್ ಎಂದರೇನು ಎಂದು ಬಹುಶಃ ಈಗ ನೀವು ನಿಮ್ಮನ್ನು ಕೇಳಿಕೊಳ್ಳುತ್ತಿರಬಹುದು? 

ಮೂಲಭೂತವಾಗಿ, ಇದು ಆ್ಯಡ್-ಆನ್ ಕವರ್ ಆಗಿದ್ದು, ಇದು ಕಾಂಪ್ರೆಹೆನ್ಸಿವ್ ಅಥವಾ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಪಡೆಯಬಹುದಾದ ಒಂದು ರೀತಿಯ ಹೆಚ್ಚುವರಿ ರಕ್ಷಣೆಯಾಗಿದೆ. ಎಲ್ಲಾ ಇತರ ಆ್ಯಡ್-ಆನ್‌ಗಳಂತೆ ಇದು ಸಹ ಹೆಚ್ಚುವರಿ ಪ್ರೀಮಿಯಂನೊಂದಿಗೆ ಬರುತ್ತದೆ. ಆದರೆ, ಇದು ನಿಮಗೆ ಮನಃ ಶಾಂತಿಯನ್ನು ತರುವುದರಿಂದ, ಇದು ಖಂಡಿತವಾಗಿಯೂ ಪ್ರತಿ ಪೈಸೆಗೂ ಯೋಗ್ಯವಾದ ಆ್ಯಡ್-ಆನ್‌ ಆಗಿದೆ! 😊  

ಈ ಕವರೇಜ್‌ನೊಂದಿಗೆ, ಉಡುಪುಗಳು ಮತ್ತು ಪಾದರಕ್ಷೆಗಳಂತಹ ಯಾವುದೇ ವೈಯಕ್ತಿಕ ವಸ್ತುಗಳನ್ನು ಕವರ್ ಮಾಡಲಾಗುತ್ತದೆ. ಇದರರ್ಥ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಭೌತಿಕ ನಷ್ಟ ಅಥವಾ ನಿಮ್ಮ ವೈಯಕ್ತಿಕ ವಸ್ತುಗಳ ಹಾನಿಗಾಗಿ ಮರುಪಾವತಿ ಮಾಡಲು ಸಾಧ್ಯವಾಗುತ್ತದೆ (ಆ ಸಮಯದಲ್ಲಿ ಅವರು ನಿಮ್ಮ ಕಾರಿನೊಳಗೆ ಇದ್ದಾಗ)

ಈ ಕವರ್ ಅನ್ನು ಪಡೆಯುವ ಪ್ರಯೋಜನಗಳೇನು?

ವೈಯಕ್ತಿಕ ವಸ್ತುಗಳ ಕವರ್ ಸ್ವಲ್ಪ ಮಟ್ಟಿನ ಹೆಚ್ಚುವರಿ ಪ್ರೀಮಿಯಂನಲ್ಲಿ ಬರಬಹುದಾದರೂ, ಈ ಕವರ್ ಅನ್ನು ಪಡೆಯುವ ಪ್ರಯೋಜನಗಳು ಬಹಳಷ್ಟಿವೆ.

  • ನಿಮ್ಮ ವಸ್ತುಗಳನ್ನು ರಕ್ಷಿಸುತ್ತದೆ: ಭೌತಿಕ ಹಾನಿ ಮತ್ತು ಕಳ್ಳತನದ ಸಂದರ್ಭದಲ್ಲಿ ನಿಮ್ಮ ಕಾರಿನಲ್ಲಿ ನೀವು ಕೊಂಡೊಯ್ಯುವ ವೈಯಕ್ತಿಕ ವಸ್ತುಗಳಿಗೆ ರಕ್ಷಣೆ ಪಡೆಯಿರಿ

  • ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ: ಕೆಟ್ಟ ಘಟನೆ ಸಂಭವಿಸಿದಲ್ಲಿ ಮತ್ತು ನಿಮ್ಮ ವೈಯಕ್ತಿಕ ವಸ್ತುಗಳು ಕಳುವಾದಲ್ಲಿ ಅಥವಾ ಹಾನಿಗೊಳಗಾದಲ್ಲಿ, ಅದಕ್ಕಾಗಿ ನೀವು ಆರ್ಥಿಕವಾಗಿ ನಿಮ್ಮ ಜೇಬಿನಿಂದ ಹೆಚ್ಚುವರಿ ಏನನ್ನೂ ಖರ್ಚು ಮಾಡಬೇಕಿಲ್ಲ ಎಂಬುದು ನಿಮಗೆ ತಿಳಿದಿದೆ 

  • ಮನಃ ಶಾಂತಿ: ನೀವು ಈಗಾಗಲೇ ಅಹಿತಕರ ಅನುಭವವನ್ನು ಹೊಂದಿದ್ದೀರಿ ಮತ್ತು ನಿಮ್ಮ ವಸ್ತುಗಳನ್ನು ಕಳೆದುಕೊಂಡ ನಂತರವೂ ನೀವು ಸ್ವಲ್ಪ ಮನಃಶಾಂತಿಯನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು, ಈ ಆ್ಯಡ್-ಆನ್ ನಿಮಗೆ ಸಹಾಯ ಮಾಡುತ್ತದೆ  

     

ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ನಿಮ್ಮ ಆಸ್ತಿಯನ್ನು ಕವರ್ ಮಾಡಲಾಗುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು, ಉದಾಹರಣೆಗೆ: 

  • ನಿಮ್ಮ ಸ್ವಂತ ನಿರ್ಲಕ್ಷ್ಯದಿಂದ ಅವು ಕಳೆದುಹೋಗಿದ್ದರೆ (ನಿಮ್ಮ ಕಾರಿನ ಬಾಗಿಲುಗಳು ಮತ್ತು ಕಿಟಕಿಗಳನ್ನು ಲಾಕ್ ಮಾಡದಿದ್ದಲ್ಲಿ)  

  • ಘಟನೆಯ ಕುರಿತು ಪೊಲೀಸರಿಗೆ ಸಕಾಲದಲ್ಲಿ ಮಾಹಿತಿ ನೀಡದಿದ್ದಲ್ಲಿ  

  • ಕನ್ಸ್ಯೂಮೆಬಲ್ ಸ್ವಭಾವದ ವೈಯಕ್ತಿಕ ಸಾಮಾನುಗಳಿಗೆ ಯಾವುದೇ ನಷ್ಟ ಅಥವಾ ಹಾನಿಯಾದಲ್ಲಿ 

ಕಳ್ಳತನದ ಸಂದರ್ಭದಲ್ಲಿ ಕಾರ್ ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಹೇಗೆ?

ನಿಮ್ಮ ವೆಹಿಕಲ್ ಅನ್ನು ಕಳ್ಳತನವಾದ ಪರಿಸ್ಥಿತಿಯಲ್ಲಿ ನೀವು ಎಂದಾದರೂ ಸಿಲುಕಿದ್ದರೆ, ಖಂಡಿತ ನೀವು ಆಘಾತಕ್ಕೊಳಗಾಗಿರುತ್ತೀರಿ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ; ಆದರೆ ನೀವು ಸಾಧ್ಯವಾದಷ್ಟು ಬೇಗ ಕಳ್ಳತನದ ಕ್ಲೈಮ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು: 

ನೀವು ಮಾಡಬೇಕಾದದ್ದು ಇಲ್ಲಿದೆ:

  • ಹಂತ 1: ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ

  • ಹಂತ 2: ಕಳ್ಳತನದ ಬಗ್ಗೆ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ ತಿಳಿಸಿ.

  • ಹಂತ 3: ನಿಮ್ಮ ವೆಹಿಕಲ್ ಕಳ್ಳತನವಾಗಿದೆ ಎಂದು ಪ್ರಾದೇಶಿಕ ರಸ್ತೆ ಸಾರಿಗೆ ಕಚೇರಿ (ಆರ್.ಟಿ.ಓ) ಗೆ ತಿಳಿಸಿ. ಅವರು ನಿಮ್ಮ ವೆಹಿಕಲ್‌ನ ಮಾಲೀಕತ್ವವನ್ನು ವರ್ಗಾಯಿಸಬೇಕಾಗುತ್ತದೆ. 

  • ಹಂತ 4: ಎಫ್‌ಐಆರ್‌ನ ಕಾಪಿ, ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳು, ಕ್ಲೈಮ್‌ಗಳ ಫಾರ್ಮ್, ನಿಮ್ಮ ಡ್ರೈವಿಂಗ್ ಲೈಸೆನ್ಸ್, ನಿಮ್ಮ ಕಾರಿನ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್‌ಸಿ), ಮತ್ತು ಆರ್.ಟಿ.ಓ ನಿಂದ ಟ್ರಾನ್ಸಫರ್ ಪೇಪರ್‌ಗಳಂತಹ ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ನೀವು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. 

  • ಹಂತ 5: ನಿಮ್ಮ ಕಾರ್ ಈಗಲೂ ಕಾಣೆಯಾಗಿದೆ ಎನ್ನುವುದನ್ನು ತೋರಿಸಲು ಪೊಲೀಸರಿಂದ "ನೋ-ಟ್ರೇಸ್" ರಿಪೋರ್ಟ್ ಅನ್ನು ಪಡೆಯಿರಿ.

  • ಹಂತ 6: ಕಳುವಾದ ವೆಹಿಕಲ್‌ನ ಆರ್‌ಸಿ, ಕೀಗಳು ಮತ್ತು ಒರಿಜಿನಲ್ ಇನ್‌ವಾಯ್ಸ್ ಅನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಗೆ ವರ್ಗಾಯಿಸಿ. 

  • ಹಂತ 7: ಅಷ್ಟೇ, ಅಲ್ಲಿಗೆ ಮುಗಿಯಿತು! ನಿಮ್ಮ ಇನ್ಶೂರೆನ್ಸ್ ಕಂಪನಿಯು ಅನುಮೋದಿತ ಮೊತ್ತವನ್ನು ನಿಮಗೆ ಮರುಪಾವತಿ ಮಾಡುತ್ತದೆ.  

ನಿಮ್ಮ ಕಾರಿನ ಕಳ್ಳತನವಾಗಿರದೆ, ಆದರೆ ಯಾರೋ ವ್ಯಕ್ತಿಗಳು ಒಳನುಗ್ಗಿ ನಿಮ್ಮ ವಸ್ತುಗಳನ್ನು ತೆಗೆದುಕೊಂಡಿದ್ದರೆ, ನೀವು ಈಗಲೂ ಇದೇ ರೀತಿಯ ಕಾರ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. 

ಆದಾಗ್ಯೂ, ಆರ್.ಟಿ.ಓ ಅನ್ನು ಸಂಪರ್ಕಿಸುವ ಬದಲು, ನಿಮ್ಮ ವೆಹಿಕಲ್ ಮತ್ತು ನಿಮ್ಮ ವಸ್ತುಗಳ ಯಾವುದೇ ಹಾನಿಯನ್ನು ನೀವು ದಾಖಲಿಸಬೇಕಾಗುತ್ತದೆ ಮತ್ತು ಅದನ್ನು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ ಸಲ್ಲಿಸಬೇಕಾಗುತ್ತದೆ.