ಮಾಸ್ಕ್ಗಳು, ಗ್ಲವ್ಸ್ ಮುಂತಾದ ಕೆಲವು ಬಿಸಾಡಬಹುದಾದ ವಸ್ತುಗಳು, ಆಸ್ಪತ್ರೆಯ ಬಿಲ್ ಅನ್ನು ಹೇಗೆ ಗಣನೀಯವಾಗಿ ಹೆಚ್ಚಿಸುತ್ತವೆ ಎಂಬುದನ್ನು ಕೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ. ಅಂದಹಾಗೆ, ನೀವು ಅಂದುಕೊಂಡಿದ್ದು ಸಂಪೂರ್ಣವಾಗಿ ತಪ್ಪಲ್ಲ. ಕನ್ಸ್ಯೂಮೇಬಲ್ಸ್ ವಸ್ತುಗಳು ಈ ಹಿಂದೆ ಆಸ್ಪತ್ರೆಯ ಬಿಲ್ನ ಸ್ವಲ್ಪ ಭಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದವು. ಹಾಗಾಗಿ ಜನರು ಸಹ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಸಾಂಕ್ರಾಮಿಕ ಸಮಯದ ನಂತರ, ಬಿಸಾಡಬಹುದಾದ ಮತ್ತು ರಕ್ಷಣಾ ಸಾಧನಗಳ ಹೆಚ್ಚಿದ ಬಳಕೆಯಿಂದ, ಇವುಗಳ ಪಾಲು ಹೆಚ್ಚಾಗಿದೆ.
ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಹೆಚ್ಚು ಆದ್ಯತೆಯ ಬಳಕೆಯ ವಸ್ತುಗಳ ಪಟ್ಟಿ ಇಲ್ಲಿದೆ:
- ಆಡಳಿತಾತ್ಮಕ ಶುಲ್ಕಗಳು : ಪೇಪರ್ವರ್ಕ್ ಮತ್ತು ಡಾಕ್ಯುಮೆಂಟುಗಳು, ಅಡ್ಮಿಷನ್ ಕಿಟ್, ವಿಸಿಟರ್ಸ್ ಪಾಸ್, ಡಿಸ್ಚಾರ್ಜ್ ಪ್ರಕ್ರಿಯೆ, ವೈದ್ಯಕೀಯ ದಾಖಲೆಗಳ ನಿರ್ವಹಣೆ ಮತ್ತಿತರ ದಾಖಲಾತಿ ವೆಚ್ಚಗಳ ಕಾರಣದಿಂದ ಉಂಟಾಗುವ ಎಲ್ಲಾ ವೆಚ್ಚಗಳು ಆಡಳಿತಾತ್ಮಕ ಶುಲ್ಕಗಳ ಅಡಿಯಲ್ಲಿ ಬರುತ್ತವೆ.
- ಹೌಸ್ ಕೀಪಿಂಗ್ : ಮಿನರಲ್ ನೀರು, ಹಲ್ಲುಜ್ಜುವ ಬ್ರಷ್, ಸಾಬೂನುಗಳು, ಸ್ಯಾನಿಟರಿ ಪ್ಯಾಡ್ಗಳು, ಚಪ್ಪಲಿಗಳು, ಬಾಚಣಿಗೆಗಳು, ಶಾಂಪೂ, ಡೈಪರ್ಗಳು ಮುಂತಾದ ದಿನ ಬಳಕೆಯ ವಸ್ತುಗಳು.
- ರೂಮ್ ವೆಚ್ಚಗಳು : ರೂಮ್ನಲ್ಲಿ ಒದಗಿಸಲಾದ ಸೌಲಭ್ಯಗಳು ಅಂದರೆ ಎಸಿ, ಟಿವಿ, ಟೆಲಿಫೋನ್, ಅಟೆಂಡೆಂಟ್ ಶುಲ್ಕಗಳು, ಐಷಾರಾಮಿ ತೆರಿಗೆ ಇತ್ಯಾದಿಗಳಿಂದ ಉಂಟಾಗುವ ವೆಚ್ಚಗಳು.
- ಶಸ್ತ್ರಚಿಕಿತ್ಸಾ ಉಪಕರಣಗಳು : ಕಾಟನ್, ರೇಜರ್, ಸೂಜಿಗಳು, ಸಿರಿಂಜ್ಗಳು, ಸರ್ಜಿಕಲ್ ಟೇಪ್ ಮತ್ತು ಇತರ ಸರ್ಜಿಕಲ್ ಡಿಸ್ಪೋಸೆಬಲ್ಗಳನ್ನು ಚಿಕಿತ್ಸಾ ವಿಧಾನದ ಭಾಗವಾಗಿ ಬಳಸಲಾಗುತ್ತದೆ.
- ಉತ್ಪನ್ನದಲ್ಲಿ ಒದಗಿಸಲಾದ ಯಾವುದೇ ಇತರ ವಸ್ತು.
ಇಲ್ಲೊಂದು ವಿಷಯವಿದೆ!
ಐ.ಆರ್.ಡಿ.ಎ.ಐ ಸೂಚಿಸಿದಂತೆ ಕನ್ಸ್ಯೂಮೇಬಲ್ಸ್ ವಸ್ತುಗಳ ಪಟ್ಟಿಯು ಉದ್ದವಾಗಿದೆ. ಆದರೆ ಇದು ಸಾಮಾನ್ಯವಾಗಿ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ಮತ್ತು ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಪಾಲಿಸಿಯಲ್ಲಿ ಯಾವುದೇ ವಸ್ತುವನ್ನು ಸೇರಿಸಲು/ಹೊರಹಾಕಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ.
ಕನ್ಸ್ಯೂಮೇಬಲ್ಸ್ ವಸ್ತುಗಳ ಪಟ್ಟಿಯು ಇದೀಗ ಅಗ್ಗವಾಗಿ ಕಾಣಿಸಬಹುದು. ಆದರೆ ಅವು ಖಚಿತವಾಗಿ ನಿಮ್ಮ ಬಿಲ್ ಅನ್ನು ಹೆಚ್ಚಿಸಬಹುದು. ನಿಮ್ಮ ಜೇಬನ್ನು ಈ ಹೊಡೆತದಿಂದ ತಪ್ಪಿಸಲು, ನಿಮ್ಮ ಹೆಲ್ತ್ ಇನ್ಶೂರೆನ್ಸ್ನಲ್ಲಿ ಕನ್ಸ್ಯೂಮೇಬಲ್ಸ್ ಕವರ್ ಪಡೆಯುವುದನ್ನು ನೀವು ಮುಖ್ಯವೆಂದು ಪರಿಗಣಿಸಬೇಕು.