ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಅರ್ಥವೇನು?

ಮನೆಯಲ್ಲಿನ ಚಿಕಿತ್ಸೆ, ಇದನ್ನು ಸಾಮಾನ್ಯವಾಗಿ ಹೋಮ್ ಹಾಸ್ಪಿಟಲೈಸೇಶನ್ ಎಂದು ಕರೆಯಲಾಗುತ್ತದೆ. ನೀವು ಆಸ್ಪತ್ರೆಯ ಬದಲಿಗೆ ಮನೆಯಲ್ಲಿ ನಿರ್ದಿಷ್ಟ ಅನಾರೋಗ್ಯ ಅಥವಾ ಕಾಯಿಲೆಗೆ ಚಿಕಿತ್ಸೆ ಪಡೆಯುವುದು.

ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದಿದ್ದರೆ ಅಥವಾ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಾಗ ಈ ಚಿಕಿತ್ಸೆ ನಡೆಯುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ವೈದ್ಯಕೀಯ ವೆಚ್ಚಗಳು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯಿಂದ ಕವರ್ ಆಗುತ್ತದೆ. ಅಂದರೆ ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪ್ರಯೋಜನವಾಗಿರುವವರೆಗೆ ಅಥವಾ ನೀವು ಆ್ಯಡ್-ಆನ್ ಕವರ್ ಆಗಿ ಮನೆಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಿರುವವರೆಗೆ ಮಾತ್ರ.

ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಗಾಗಿ ಯಾವ ರೀತಿಯ ಕವರೇಜ್ ಅನ್ನು ಒಳಗೊಂಡಿದೆ?

ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಪ್ರಯೋಜನಗಳೇನು?

ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಏನೆಲ್ಲಾ ಕವರ್ ಮಾಡುತ್ತದೆ?

ಡಿಜಿಟ್‌ನಲ್ಲಿ, ಹಿರಿಯರಿಗಾಗಿ ಖರೀದಿಸುವ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಮನೆಯ ಚಿಕಿತ್ಸೆಯನ್ನು ಪ್ರಯೋಜನವಾಗಿ ಸೇರಿಸಲಾಗಿದೆ. ಇದು ನಿರ್ದಿಷ್ಟವಾಗಿ ಏನನ್ನು ಒಳಗೊಂಡಿದೆ, ಬನ್ನಿ ನೋಡೋಣ: 

  • ಮನೆಯಲ್ಲಾದ ಗಾಯ ಅಥವಾ ಅನಾರೋಗ್ಯದ ಚಿಕಿತ್ಸೆಯಿಂದಾದ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. ಇಲ್ಲದಿದ್ದರೆ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಹಾಸ್ಪಿಟಲೈಸೇಷನ್ ಅಗತ್ಯವಿರುತ್ತದೆ.

ಹಿರಿಯರಿಗಾಗಿ ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ, ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಅನ್ನು ಯಾವ ಷರತ್ತುಗಳ ಅಡಿಯಲ್ಲಿ ಪಡೆಯಬಹುದು?

ಪಾರದರ್ಶಕತೆ ಎನ್ನುವುದು ನಮ್ಮ ಜೀವನದ ಮೌಲ್ಯಗಳಲ್ಲಿ ಒಂದಾಗಿದೆ😊 ಆದ್ದರಿಂದ, ಯಾವ ಪರಿಸ್ಥಿತಿಗಳ ಅಡಿಯಲ್ಲಿ 'ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್' ಕವರ್ ಆಗುತ್ತದೆ ಎನ್ನುವುದನ್ನು ನೀವು ಮೊದಲೇ ತಿಳಿಯುವುದು ಸೂಕ್ತ:

  • ರೋಗಿಯ ಸ್ಥಿತಿಯು ಅವನನ್ನು/ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದಿದಷ್ಟು ಗಂಭೀರವಾಗಿದ್ದರೆ ಅಥವಾ ಆಸ್ಪತ್ರೆಯಲ್ಲಿ ಬೆಡ್‌ಗಳು ಲಭ್ಯವಿಲ್ಲದಿದ್ದರೆ, ಆಗ ಮನೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು.
  • ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಯು ಕನಿಷ್ಠ 3-ದಿನಗಳವರೆಗೆ ಮುಂದುವರೆದರೆ, ಆಗ ಮನೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು. 

ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಏನನ್ನು ಕವರ್ ಮಾಡುವುದಿಲ್ಲ?

ಕೆಳಗಿನ ಕಾರಣಗಳಿಂದಾಗಿ ಮನೆಯ ಚಿಕಿತ್ಸೆಗಳಿಗೆ ಕ್ಲೈಮ್‌ಗಳು ಕವರ್ ಆಗುವುದಿಲ್ಲ:

  • ಉಬ್ಬಸ (ಅಸ್ತಮಾ)
  • ಶ್ವಾಸನಾಳದ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್)
  • ಗಲಗ್ರಂಥಿಯ ಉರಿಯೂತ (ಟಾನ್ಸಿಲಿಟಿಸ್)
  • ಲಾರಿಂಜೈಟಿಸ್ ಮತ್ತು ಫಾರಂಜಿಟಿಸ್ ಸೇರಿದಂತೆ ಮೇಲ್ಭಾಗದ ಶ್ವಾಸೇಂದ್ರಿಯ ಜಾಗದ ಸೋಂಕು
  • ಕೆಮ್ಮು ಮತ್ತು ಶೀತ
  • ಮೈಕೈ ನೋವು, ನೆಗಡಿ, ಜ್ವರಗಳಿಂದ ಕೂಡಿದ ತೀವ್ರ ಸಾಂಕ್ರಾಮಿಕವಾದ ವೈರಸ್ ರೋಗ (ಇನ್ಫ್ಲುಯೆನ್ಝಾ)
  • ಸಂಧಿವಾತ (ಆರ್ಥ್ರೈಟಿಸ್)
  • ಗೌಟ್ ಮತ್ತು ರುಮೇಟಿಸಂ
  • ದೀರ್ಘಕಾಲದ ನೆಫ್ರೈಟಿಸ್ (ಕ್ರೋನಿಕ್ ನೆಫ್ರೈಟಿಸ್) 
  • ನೆಫ್ರಿಟಿಕ್ ಸಿಂಡ್ರೋಮ್
  • ಅತಿಸಾರ
  • ಗ್ಯಾಸ್ಟ್ರೋಎಂಟರೈಟಿಸ್, ಡಯಾಬಿಟಿಸ್ ಮೆಲ್ಲಿಟಸ್ ಮತ್ತು ಇನ್ಸಿಪಿಡಸ್, ಎಪಿಲೆಪ್ಸಿ, ಅಧಿಕ ರಕ್ತದೊತ್ತಡ, ಎಲ್ಲ ರೀತಿಯ ಮನೋವೈದ್ಯಕೀಯ ಅಥವಾ ಸೈಕೋಸೊಮ್ಯಾಟಿಕ್ ಕಾಯಿಲೆಗಳು, ತಿಳಿಯದ ಮೂಲದ ಪೈರೆಕ್ಸಿಯಾ ಸೇರಿದಂತೆ ಎಲ್ಲಾ ರೀತಿಯ ಡಿಸೆಂಟರಿಗಳು. 

ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಯಾರಾದರೂ ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಅನ್ನು ಆಯ್ಕೆ ಮಾಡಬಹುದೇ?

ಇದು ಮುಖ್ಯವಾಗಿ ನಿಮ್ಮ ಪಾಲಿಸಿಯ ಪ್ರಕಾರ ಮತ್ತು ನಿಮ್ಮ ಹೆಲ್ತ್ ಇನ್ಶೂರರ್ ಮೇಲೆ ಅವಲಂಬಿತವಾಗಿರುತ್ತದೆ. ಡಿಜಿಟ್‌ನಲ್ಲಿ, ಹಿರಿಯರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಮಾತ್ರ ನಾವು ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಅನ್ನು ನೀಡುತ್ತೇವೆ. ಏಕೆಂದರೆ ಅವರಿಗೆ ಈ ಪ್ರಯೋಜನದ ಅಗತ್ಯತೆ ಹೆಚ್ಚಾಗಿರುತ್ತದೆ. 

ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಯಾವ ರೀತಿಯ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ?

ಇದು ಕೂಡ ಒಂದು ಇನ್ಶೂರೆನ್ಸ್ ಕಂಪನಿಯಿಂದ ಮತ್ತೊಂದು ಇನ್ಶೂರೆನ್ಸ್ ಕಂಪನಿಯವರನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ನಿಮ್ಮ ಇನ್ಶೂರರ್ ರಿಂದ ನಿರ್ದಿಷ್ಟವಾಗಿ ತಿಳಿಸದ ಹೊರತು, ಸಾಮಾನ್ಯವಾಗಿ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಮನೆಯ ಚಿಕಿತ್ಸೆಯು ಕವರ್ ಮಾಡುತ್ತದೆ. (ಡಿಜಿಟ್‌ನ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಯಾವ್ ಚಿಕಿತ್ಸೆಗಳು ಕವರ್ ಆಗುವುದಿಲ್ಲ ಎಂಬುದನ್ನು ಪುನಃ ಪರಿಶೀಲಿಸಿ) 

ಮನೆಯ ಚಿಕಿತ್ಸೆಗೆ ವೇಟಿಂಗ್ ಪೀರಿಯಡ್ ಇದೆಯೇ?

ಇಲ್ಲ, ಮನೆಯ ಚಿಕಿತ್ಸೆಗೆ ಸಾಮಾನ್ಯವಾಗಿ ವೇಟಿಂಗ್ ಪೀರಿಯಡ್ ಇರುವುದಿಲ್ಲ.  

ನಾನು ಎಷ್ಟು ದಿನಗಳ ಕಾಲ ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಆಯ್ಕೆ ಮಾಡಬಹುದು?

ಡಿಜಿಟ್‌ನಲ್ಲಿ, ಕನಿಷ್ಠ 3-ದಿನಗಳ ಚಿಕಿತ್ಸೆಗಾಗಿ ನೀವು ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಆಯ್ಕೆ ಮಾಡಬಹುದು.  

ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್ ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆಯೇ?

ಇದು ಒಂದು ಇನ್ಶೂರೆನ್ಸ್ ಕಂಪನಿಯಿಂದ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ, ಒಂದು ಪಾಲಿಸಿಯಿಂದ ಮತ್ತೊಂದು ಪಾಲಿಸಿಗೆ ಭಿನ್ನವಾಗಿದ್ದರೂ, ಡಿಜಿಟ್ ಸೇರಿದಂತೆ ಹೆಚ್ಚಿನ ಹೆಲ್ತ್ ಇನ್ಶೂರರ್ ಇದನ್ನು ಕೇವಲ ಹಿರಿಯ ನಾಗರಿಕರ ಪಾಲಿಸಿಗೆ ಸೇರಿಸುವ ಪ್ರಯೋಜನವಾಗಿ ನೀಡುತ್ತಾರೆ.