ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪ್ರಿ-ರಿಟೈರೀ (ಪೂರ್ವ ನಿವೃತ್ತಿದಾರರು) ಗಳಿಗೆ ಹೆಲ್ತ್ ಇನ್ಶೂರೆನ್ಸ್‌ನ ಆಯ್ಕೆಗಳು

ಪ್ರಿ-ರಿಟೈರೀಗಳು ತಮ್ಮ ಪ್ರೊಫೆಷನಲ್ ಪ್ರಯಾಣದ ಹೊಸ್ತಿಲನ್ನು ಸಮೀಪಿಸುತ್ತಿದ್ದಂತೆ, ನಿವೃತ್ತಿಯ ಪ್ಲ್ಯಾನಿಂಗ್ ಎನ್ನುವುದು ಪ್ರಮುಖ ಹಂತವನ್ನು ತೆಗೆದುಕೊಳ್ಳುತ್ತದೆ. ಎಚ್ಚರಿಕೆಯಿಂದ ಪರಿಗಣಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಹೆಲ್ತ್ ಇನ್ಶೂರೆನ್ಸ್ ಕವರೇಜ್.

ಎಂಪ್ಲಾಯರ್-ನೀಡಿದ ಹೆಲ್ತ್ ಇನ್ಶೂರೆನ್ಸ್ ಮುಗಿಯುವುದರೊಂದಿಗೆ, ಪ್ರಿ-ರಿಟೈರೀ ವ್ಯಕ್ತಿಗಳು ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಸುರಕ್ಷಿತವಾಗಿರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇದು ಮುಂಬರುವ ಉತ್ತಮ ವರ್ಷಗಳಲ್ಲಿ ನಿಮ್ಮ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಕಾಂಪ್ರೆಹೆನ್ಸಿವ್ ಪ್ರೊಟೆಕ್ಷನ್ ಅನ್ನು ಖಚಿತಪಡಿಸುತ್ತದೆ. ಈ ಪ್ರಮುಖ ಬದಲಾವಣೆಯು ಆಯ್ಕೆಗಳು ಮತ್ತು ಅಸ್ಥಿರಗಳ ಪ್ರಪಂಚದಲ್ಲಿ ನ್ಯಾವಿಗೇಟ್ ಮಾಡುವುದನ್ನು ಒಳಗೊಂಡಿದೆ. ಇಲ್ಲಿ ತಿಳುವಳಿಕೆಯುತ ನಿರ್ಧಾರಗಳು ಪ್ರಮುಖವಾಗುತ್ತವೆ.

ಜೀವನದ ಈ ಪರಿವರ್ತನಾ ಹಂತದಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಪ್ರಿ-ರಿಟೈರೀಗಳು ಪರಿಗಣಿಸಬೇಕಾದ ಅಗತ್ಯ ಅಂಶಗಳನ್ನು ನಾವೀಗ ಚರ್ಚಿಸೋಣ.

ಪ್ರಿ-ರಿಟೈರೀ (ಪೂರ್ವ ನಿವೃತ್ತಿದಾರರು) ಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಪರಿಗಣಿಸಬೇಕಾದ 8 ಅಂಶಗಳು

ಸರಿಯಾದ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡುವುದರಿಂದ ಮನಃಶಾಂತಿ ಮತ್ತು ಆರ್ಥಿಕ ಭದ್ರತೆಯೊಂದಿಗೆ, ನಿವೃತ್ತಿಗೆ ತಡೆರಹಿತ ಪರಿವರ್ತನೆಯನ್ನು ಖಚಿತಪಡಿಸುತ್ತದೆ. ನಿವೃತ್ತಿಯ ನಂತರ ಪರ್ಸನಲ್ ಹೆಲ್ತ್ ಕವರ್ ಅನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಅಗತ್ಯ ಅಂಶಗಳನ್ನು ನೋಡೋಣ:

1. ನಿಮ್ಮ ಆರೋಗ್ಯ ಅಗತ್ಯಗಳು ಮತ್ತು ಹಣಕಾಸಿನ ಗುರಿಗಳನ್ನು ನಿರ್ಣಯಿಸಿ

ನಿವೃತ್ತಿಯ ನಂತರದ ಜೀವನಕ್ಕಾಗಿ, ನಿಮ್ಮ ಆರೋಗ್ಯ ಅಗತ್ಯತೆಗಳು ಮತ್ತು ಬಜೆಟ್ ಆದ್ಯತೆಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಪ್ರಾರಂಭಿಸಿ. ನಿಮಗೆ ಅಗತ್ಯವಿರುವ ಕವರೇಜ್ ವಿಧವನ್ನು ನಿರ್ಧರಿಸಲು ನಿಮ್ಮ ವಯಸ್ಸು, ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು, ಕುಟುಂಬದ ವೈದ್ಯಕೀಯ ಇತಿಹಾಸ ಮತ್ತು ನಿಮ್ಮ ಜೀವನಶೈಲಿಯಂತಹ ಅಂಶಗಳನ್ನು ಪರಿಗಣಿಸಿ.

ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ನೀಡುವ ಕಾಂಪ್ರೆಹೆನ್ಸಿವ್ ಪ್ರಯೋಜನಗಳು ಮತ್ತು ಕವರೇಜನ್ನು ಮೌಲ್ಯಮಾಪನ ಮಾಡಿ. ಇದರಿಂದ ಅವು ನಿಮ್ಮ ನಿರ್ದಿಷ್ಟ ಹೆಲ್ತ್ ಕೇರ್ ಅಗತ್ಯಗಳಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ನಿವೃತ್ತಿಯ ಸಮಯದಲ್ಲಿ ಇನ್ಕಮ್‌ನಲ್ಲಿನ ಬದಲಾವಣೆಗಳನ್ನು ಪರಿಗಣಿಸಿ, ಪ್ರೀಮಿಯಂಗಳ ಕೈಗೆಟುಕುವಿಕೆಯನ್ನು ಚೆಕ್ ಮಾಡಿ.

ಸ್ಪಷ್ಟವಾದ ಆರೋಗ್ಯ ಮತ್ತು ಆರ್ಥಿಕ ಗುರಿಗಳನ್ನು ಸೆಟ್ ಮಾಡುವುದು ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆಮಾಡುವಲ್ಲಿ ನಿಮಗೆ ಗೈಡ್ ಮಾಡುತ್ತದೆ.

2. ಮೊದಲೇ ಪ್ರಾರಂಭಿಸಿ ಮತ್ತು ಕವರೇಜ್‌ನಲ್ಲಿನ ಅಂತರವನ್ನು ತಪ್ಪಿಸಿ

ನಿವೃತ್ತಿಯ ಸಮಯದಲ್ಲಿ ಎಂಪ್ಲಾಯರ್‌ಗಳಿಂದ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್‌ಗೆ ಪರಿವರ್ತಿಸುವಾಗ, ಅದನ್ನು ಮುಂಚಿತವಾಗಿಯೇ ಪ್ರಾರಂಭಿಸಿ ಮತ್ತು ಕವರೇಜ್‌ನಲ್ಲಿನ ಅಂತರವನ್ನು ತಪ್ಪಿಸುವುದು ಅತಿಮುಖ್ಯವಾದ ಪರಿಗಣನೆಗಳಾಗಿವೆ.

ಪ್ರಿ-ರಿಟೈರೀಗಳಾಗಿ ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳನ್ನು ಹುಡುಕಲು ನಿಮ್ಮ ನಿವೃತ್ತಿ ದಿನಾಂಕಕ್ಕೂ ಮೊದಲಿಂದಲೇ ಉತ್ತಮವಾಗಿ ಪ್ಲ್ಯಾನಿಂಗ್ ಮಾಡಲು ಪ್ರಾರಂಭಿಸಿ. ನಿಮ್ಮ ಎಂಪ್ಲಾಯರ್-ನೀಡಿದ ಹೆಲ್ತ್ ಇನ್ಶೂರೆನ್ಸ್ ಕೊನೆಗೊಂಡಾಗ ಕವರೇಜ್‌ನಲ್ಲಿ ಯಾವುದೇ ಅಡಚಣೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಅಂತಹ ಯಾವುದೇ ಅಂತರವು ಅನಿರೀಕ್ಷಿತ ಆರ್ಥಿಕ ಹೊರೆಗಳಿಗೆ ಕಾರಣವಾಗಬಹುದು.

ಪ್ರಕ್ರಿಯೆಯನ್ನು ಮುಂಚಿತವಾಗಿಯೇ ಪ್ರಾರಂಭಿಸುವ ಮೂಲಕ ಮತ್ತು ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ನಿಮ್ಮ ನಿವೃತ್ತಿಯ ಪ್ರಯಾಣದುದ್ದಕ್ಕೂ ನಿಮ್ಮ ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮವನ್ನು ನೀವು ನಿಮಗಿಷ್ಟವಾದ ರೀತಿಯಲ್ಲಿ ಕಾಪಾಡಬಹುದು.

3. ಸರಿಯಾದ ಪ್ಲ್ಯಾನ್ ಅನ್ನು ಹೋಲಿಕೆ ಮಾಡಿ ಮತ್ತು ಆಯ್ಕೆಮಾಡಿ

ವಿವಿಧ ಇನ್ಶೂರೆನ್ಸ್ ಕಂಪನಿಗಳ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಸಂಪೂರ್ಣವಾಗಿ ರಿಸರ್ಚ್ ಮಾಡಿ ಮತ್ತು ಹೋಲಿಕೆ ಮಾಡಿ.

ಮೊದಲನೆಯದಾಗಿ, ನಿಮ್ಮ ಆರೋಗ್ಯದ ಅಗತ್ಯತೆಗಳನ್ನು ಮತ್ತು ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳನ್ನು ನಿರ್ಣಯಿಸಿ. ಈ ನಿಟ್ಟಿನಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಅಥವಾ ಯಾವುದೇ ಸಂಭಾವ್ಯ ವೈದ್ಯಕೀಯ ಅವಶ್ಯಕತೆಗಳನ್ನು ಪರಿಗಣಿಸಿರಿ. ಸೂಕ್ತವಾದ ಕವರೇಜ್, ಪ್ರಯೋಜನಗಳು ಮತ್ತು ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಅನ್ನು ಒದಗಿಸುವ ಪಾಲಿಸಿಗಳನ್ನು ಹುಡುಕಲು ವಿವಿಧ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಹೋಲಿಕೆ ಮಾಡಿ.

ಲೈಫ್‌ಟೈಮ್ ರಿನೀವಲ್, ಸೀನಿಯರ್ ಸಿಟಿಜನ್-ನಿರ್ದಿಷ್ಟ ಪ್ರಯೋಜನಗಳು ಮತ್ತು ನಿವೃತ್ತಿಗಾಗಿ ಕಸ್ಟಮೈಸ್ ಮಾಡಬಹುದಾದ ಪ್ಲ್ಯಾನ್‌ಗಳಂತಹ ಫೀಚರ್‌ಗಳನ್ನು ನೋಡಿ. ನಿವೃತ್ತಿಯ ಸಮಯದಲ್ಲಿ ಇನ್ಕಮ್‌ನಲ್ಲಿನ ಬದಲಾವಣೆಗಳನ್ನು ಸರಿಹೊಂದಿಸಲು ಅನುಕೂಲಕರ ಪ್ರೀಮಿಯಂ ಪಾವತಿ ಆಯ್ಕೆಗಳೊಂದಿಗೆ ಪಾಲಿಸಿಯು ನಿಮ್ಮ ಬಜೆಟ್‌ಗೆ ಸರಿಹೊಂದುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

4. ಕ್ರಿಟಿಕಲ್ ಇಲ್ನೆಸ್ ಕವರೇಜ್ ಅನ್ನು ಪರಿಗಣಿಸಿ

ಪ್ರಿ-ರಿಟೈರೀಗಳಾಗಿ, ಕ್ರಿಟಿಕಲ್ ಇಲ್ನೆಸ್‌ಗಳಿಗೆ ಕವರೇಜ್ ನೀಡುವ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಹುಡುಕುವುದು ಬುದ್ಧಿವಂತಿಕೆಯಾಗಿದೆ. ಅಂತಹ ಕವರೇಜ್ ತೀವ್ರ ಅನಾರೋಗ್ಯದ ಡಯಾಗ್ನೋಸಿಸ್ ಮೇಲೆ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ. ಅದು ಜೀವನದ ಸವಾಲಿನ ಸಮಯದಲ್ಲಿ ಹೆಚ್ಚುವರಿ ವೆಚ್ಚಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ಹೆಚ್ಚಿನ ಕವರೇಜ್ ಮೊತ್ತದ ಪ್ಲ್ಯಾನ್‌ಗಳನ್ನು ನೋಡಿ. ನಿವೃತ್ತಿಯ ಸಮಯದಲ್ಲಿ ನಿಮಗೆ ಸಾಕಷ್ಟು ರಕ್ಷಣೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪಾಲಿಸಿ ಸೇರ್ಪಡೆಗಳು, ಹೊರಗಿಡುವಿಕೆಗಳು ಮತ್ತು ಕಾಯುವ ಅವಧಿಗಳಿಗೆ ಗಮನ ಕೊಡಿ. ಸರಿಯಾದ ಕ್ರಿಟಿಕಲ್ ಇಲ್ನೆಸ್‌ ಕವರೇಜ್ ಅನ್ನು ಆಯ್ಕೆ ಮಾಡುವ ಮೂಲಕ, ಈ ಪ್ರಮುಖ ಜೀವನ ಪರಿವರ್ತನೆಯ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಹಣಕಾಸುಗಳನ್ನು ನೀವು ರಕ್ಷಿಸಿಕೊಳ್ಳಬಹುದು.

5. ಫ್ಯಾಮಿಲಿ ಫ್ಲೋಟರ್ ಆಯ್ಕೆಗಳಿಗಾಗಿ ನೋಡಿ

ನಿಮ್ಮ ನಿವೃತ್ತಿಯ ನಂತರವೂ ನಿಮ್ಮ ಕುಟುಂಬದ ಸದಸ್ಯರನ್ನು ಕವರ್ ಮಾಡಲು ನೀವು ಬಯಸಿದರೆ, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಪರಿಗಣಿಸಿ. ಈ ಪಾಲಿಸಿಗಳು ನಿಮ್ಮ ಸಂಗಾತಿಗೆ ಮತ್ತು ಅವಲಂಬಿತ ಮಕ್ಕಳಿಗೆ ಒಂದೇ ಪ್ರೀಮಿಯಂನ ಅಡಿಯಲ್ಲಿ ಕವರೇಜ್ ನೀಡುತ್ತವೆ. ಹಾಗೂ ವೆಚ್ಚ-ಪರಿಣಾಮಕಾರಿತ್ವ ಮತ್ತು ಅನುಕೂಲತೆಯನ್ನು ನೀಡುತ್ತದೆ.

ನಿಮ್ಮ ಕುಟುಂಬದ ನಿರ್ದಿಷ್ಟ ಹೆಲ್ತ್ ಕೇರ್ ಅಗತ್ಯಗಳನ್ನು ಮೌಲ್ಯಮಾಪನ ಮಾಡಿ ಮತ್ತು ಗರಿಷ್ಠ ಕವರೇಜ್ ಅನ್ನು ನೀಡುವ ಪಾಲಿಸಿಯನ್ನು ಆಯ್ಕೆಮಾಡಿ. ನಿಮ್ಮ ಪ್ರೀತಿಪಾತ್ರರ ಜೊತೆಗೆ ಚಿಂತಾ-ಮುಕ್ತ ನಿವೃತ್ತಿ ಜೀವನವನ್ನು ಆನಂದಿಸಲು ಸಾಕಷ್ಟು ಕವರೇಜನ್ನು ಪಡೆದುಕೊಳ್ಳುವಾಗ, ನಿಮ್ಮ ನಿವೃತ್ತಿಯ ನಂತರದ ಬಜೆಟ್‌ಗೆ ಹೊಂದಿಕೆಯಾಗುವ ಪ್ರೀಮಿಯಂಗಳನ್ನು ಮುಖ್ಯವಾಗಿ ಪರಿಗಣಿಸಿ.

6. ಸಹ-ಪಾವತಿ ಮತ್ತು ಉಪ-ಮಿತಿಗಳಿಗಾಗಿ ಚೆಕ್ ಮಾಡಿ

ಪಾಲಿಸಿಯಲ್ಲಿನ ಸಹ-ಪಾವತಿ ಮತ್ತು ಉಪ-ಮಿತಿಗಳ ಷರತ್ತುಗಳ ಬಗ್ಗೆ ತಿಳಿದಿರಲಿ.

ಸಹ-ಪಾವತಿಯು ಇನ್ಶೂರ್ಡ್ ವ್ಯಕ್ತಿಯು ತನ್ನ ಜೇಬಿನಿಂದ ಭರಿಸಬೇಕಾದ ವೈದ್ಯಕೀಯ ವೆಚ್ಚಗಳ ಭಾಗವನ್ನು ಸೂಚಿಸುತ್ತದೆ ಆದರೆ ಉಪ-ಮಿತಿಗಳು ನಿರ್ದಿಷ್ಟ ವೈದ್ಯಕೀಯ ಸೇವೆಗಳು ಅಥವಾ ಕೊಠಡಿ ಬಾಡಿಗೆಗಳ ಮೇಲೆ ಮಿತಿಯನ್ನು ವಿಧಿಸುತ್ತವೆ.

ಈ ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ರಿಟೈರೀಗಳ ಸಂಭಾವ್ಯ ವೆಚ್ಚಗಳನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ ಮತ್ತು ಮ್ಯಾನೇಜ್ ಮಾಡಬಹುದಾದ ಸಹ-ಪಾವತಿ ಮತ್ತು ಉಪ-ಮಿತಿಗಳೊಂದಿಗೆ ಪಾಲಿಸಿಯನ್ನು ಆಯ್ಕೆ ಮಾಡುತ್ತದೆ. ನಿಮ್ಮ ನಿವೃತ್ತಿಯ ವರ್ಷಗಳಲ್ಲಿ ಅನಿರೀಕ್ಷಿತ ಹಣಕಾಸಿನ ಹೊರೆಗಳಿಲ್ಲದೆ ಕಾಂಪ್ರೆಹೆನ್ಸಿವ್ ಕವರೇಜನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ಕನಿಷ್ಠ ಅಥವಾ ಯಾವುದೇ ಸಹ-ಪಾವತಿಯಿರದ ಮತ್ತು ಸಮಂಜಸವಾದ ಉಪ-ಮಿತಿಗಳೊಂದಿಗೆ ಬರುವ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳಿಗೆ ಆದ್ಯತೆ ನೀಡಿ.

7. ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಕ್ಯಾಶ್‌ಲೆಸ್ ಸೌಲಭ್ಯವನ್ನು ಮೌಲ್ಯಮಾಪನ ಮಾಡಿ

ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಆದ್ಯತೆಯ ಲೊಕೇಶನ್‌ಗಳಲ್ಲಿ ಆಸ್ಪತ್ರೆಗಳ ವಿಶಾಲ ನೆಟ್‌ವರ್ಕ್ ಅನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಜೇಬಿನ ವೆಚ್ಚಗಳನ್ನು ತಪ್ಪಿಸಲು ನಿಮ್ಮ ಆದ್ಯತೆಯ ಆಸ್ಪತ್ರೆಗಳನ್ನು ಎಂಪನೆಲ್ ಮಾಡಲಾಗಿದೆಯೇ ಎಂಬುದನ್ನು ಚೆಕ್ ಮಾಡಿ. ಹೆಚ್ಚುವರಿಯಾಗಿ, ಕ್ಯಾಶ್‌ಲೆಸ್ ಸೌಲಭ್ಯದ ದಕ್ಷತೆ ಮತ್ತು ಬಳಕೆಯ ಸುಲಭತೆಯನ್ನು ಪರಿಶೀಲಿಸಿ. ಏಕೆಂದರೆ ಇದು ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ತಕ್ಷಣದ ಪೇಮೆಂಟ್‌ಗಳ ಅಗತ್ಯವನ್ನು ನಿವಾರಿಸುತ್ತದೆ.

ತಡೆರಹಿತ ನೆಟ್‌ವರ್ಕ್ ಮತ್ತು ಕ್ಯಾಶ್‌ಲೆಸ್ ಸೌಲಭ್ಯವು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮನಃಶಾಂತಿಯನ್ನು ನೀಡುತ್ತದೆ. ಅದು ನೀವು ಹಣಕಾಸಿನ ಒತ್ತಡವಿಲ್ಲದೆ ಸಮಯೋಚಿತ ಚಿಕಿತ್ಸೆಯನ್ನು ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸುತ್ತದೆ. ಹಾಗೂ ನಿಮ್ಮ ನಿವೃತ್ತಿ ಜೀವನವನ್ನು ಆರೋಗ್ಯಕರ ಮತ್ತು ಒತ್ತಡ ಮುಕ್ತವಾಗಿಸುತ್ತದೆ.

8. ತಜ್ಞರ ಮಾರ್ಗದರ್ಶನ ಪಡೆಯಿರಿ

ವಿವಿಧ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಸರ್ಟಿಫೈಡ್ ಫೈನಾನ್ಸಿಯಲ್ ಅಡ್ವೈಸರ್ ಅಥವಾ ಇನ್ಶೂರೆನ್ಸ್ ತಜ್ಞರನ್ನು ಸಂಪರ್ಕಿಸಿ.

ಹೆಲ್ತ್ ಇನ್ಶೂರೆನ್ಸ್ ಖರೀದಿ ಪ್ರಕ್ರಿಯೆಯನ್ನು ಮಾರ್ಗದರ್ಶನ ಮಾಡಲು ಮತ್ತು ತಿಳುವಳಿಕೆಯುತ ನಿರ್ಧಾರಗಳನ್ನು ತೆಗೆದುಕೊಳ್ಳಲು ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಪಾಲಿಸಿ ಖರೀದಿಸಿ, ನಿವೃತ್ತಿ-ನಿರ್ದಿಷ್ಟ ಫೀಚರ್‌ಗಳನ್ನು ಹುಡುಕಿ ಮತ್ತು ವಿಭಿನ್ನ ವೈದ್ಯಕೀಯ ಅಗತ್ಯಗಳನ್ನು ಒತ್ತಿಹೇಳಲು ರೈಡರ್‌ಗಳೊಂದಿಗೆ ನಿಮ್ಮ ಪಾಲಿಸಿಯನ್ನು ಕಸ್ಟಮೈಸ್ ಮಾಡಿ. ಚಿಂತಾ-ಮುಕ್ತ ನಿವೃತ್ತಿ ಜೀವನಕ್ಕಾಗಿ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಅನ್ನು ಸುರಕ್ಷಿತವಾಗಿರಿಸಲು ತಜ್ಞರ ಸಲಹೆ ನಿಮಗೆ ಸಹಾಯ ಮಾಡುತ್ತದೆ.

ನಿವೃತ್ತಿ ಪೂರ್ವದ ಹಂತದಲ್ಲಿ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಭದ್ರಪಡಿಸಿಕೊಳ್ಳುವುದು ಸುರಕ್ಷಿತವಾಗಿದೆ ಮತ್ತು ನಿವೃತ್ತಿಯ ನಂತರದ ಜೀವನದೆಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.

ಎಂಪ್ಲಾಯರ್-ನೀಡಿದ ಕವರೇಜ್‌ನಿಂದ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಹಿಂತಿರುಗಲು ಮುಂಚಿತವಾಗಿ ಪ್ಲ್ಯಾನಿಂಗ್ ಮಾಡುವುದು ಮತ್ತು ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳುವುದು ಪ್ರಮುಖ ಅಂಶವಾಗಿದೆ ಎಂಬುದನ್ನು ನೆನಪಿಡಿ. ಏಕೆಂದರೆ ಅದು ನಿವೃತ್ತಿಯುದ್ದಕ್ಕೂ ನಿಮ್ಮ ಆರೋಗ್ಯ ಮತ್ತು ಹಣಕಾಸುಗಳನ್ನು ರಕ್ಷಿಸುತ್ತದೆ.

'ಪ್ರಿ-ರಿಟೈರೀ (ಪೂರ್ವ ನಿವೃತ್ತಿದಾರರು) ಗಳಿಗಾಗಿ ಹೆಲ್ತ್ ಇನ್ಶೂರೆನ್ಸ್' ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನಿವೃತ್ತಿಯ ನಂತರ ನನ್ನ ಎಂಪ್ಲಾಯರ್ ಮೂಲಕ ನಾನು ಪಡೆದಿದ್ದ ಅದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಾನು ಮುಂದುವರೆಸಬಹುದೇ?

ಇಲ್ಲ, ಎಂಪ್ಲಾಯರ್-ನೀಡಿದ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ನಿವೃತ್ತಿಯ ನಂತರ ನಿಂತು ಹೋಗುತ್ತವೆ. ಕೆಲವು ಇನ್ಶೂರೆನ್ಸ್ ಪೂರೈಕೆದಾರರು ಅದನ್ನು ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿ ಪರಿವರ್ತಿಸುವ ಆಯ್ಕೆಯನ್ನು ನೀಡುತ್ತಾರೆ, ಅದರ ಪ್ರೀಮಿಯಂ ಅನ್ನು ನೀವು ಪಾವತಿಸಬೇಕಾಗುತ್ತದೆ ಆದ್ದರಿಂದ, ನೀವು ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳನ್ನು ಹುಡುಕಬೇಕಾಗುತ್ತದೆ.

ನಿವೃತ್ತಿಯ ನಂತರ ನನ್ನ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನನ್ನ ಸಂಗಾತಿಯನ್ನು ಸೇರಿಸಬಹುದೇ?

ಹೌದು, ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ನಿಮ್ಮ ಸಂಗಾತಿಯನ್ನು ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳ ಅಡಿಯಲ್ಲಿ ಅಥವಾ ವೈಯಕ್ತಿಕ ಫಲಾನುಭವಿಗಳಾಗಿ ಸೇರಿಸಲು ನಿಮ್ಮನ್ನು ಅನುಮತಿಸುತ್ತದೆ.

ನಿವೃತ್ತಿಯಲ್ಲಿ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ನನ್ನ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ನಾನು ಕಸ್ಟಮೈಸ್ ಮಾಡಬಹುದೇ?

ಹೌದು, ಕ್ರಿಟಿಕಲ್ ಇಲ್ನೆಸ್ ಅಥವಾ ಹಾಸ್ಪಿಟಲ್ ಕ್ಯಾಶ್ ಪ್ರಯೋಜನಗಳಂತಹ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳಿಗಾಗಿ ಕವರೇಜ್ ನೀಡುವ ರೈಡರ್‌ಗಳನ್ನು ಸೇರಿಸುವ ಮೂಲಕ, ನಿಮ್ಮ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ನೀವು ಕಸ್ಟಮೈಸ್ ಮಾಡಬಹುಸು. ಹೆಚ್ಚಿನ ಹೆಲ್ತ್ ಪ್ಲ್ಯಾನ್‌ಗಳು ರೈಡರ್‌ಗಳನ್ನು ನೀಡುತ್ತವೆ.