ಸಿ ಎನ್ ಜಿ (CNG) ಕಾರ್ ಇನ್ಶೂರೆನ್ಸ್

ಇಂದೇ ನಿಮ್ಮ ಸಿ ಎನ್ ಜಿ (CNG) ವಾಹನಕ್ಕಾಗಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಡೆಯಿರಿ

Third-party premium has changed from 1st June. Renew now

ಸಿ ಎನ್ ಜಿ (CNG) ವಾಹನಗಳಿಗಾಗಿ ಕಾರ್ ಇನ್ಶೂರೆನ್ಸ್

ನೀವು ಈಗಾಗಲೇ ಸಿ ಎನ್ ಜಿ ವಾಹನವನ್ನು ಹೊಂದಿದ್ದರೆ ಅಥವಾ ಪೆಟ್ರೋಲ್ ನಿಂದ ಸಿ ಎನ್ ಜಿ ಗೆ ಬದಲಾಗಲು ಯೋಚಿಸುತ್ತಿದ್ದರೆ ಹಾಗೂ ಇದನ್ನು ಕವರ್ ಮಾಡಲು ನಿಮ್ಮ ಸಾಧಾರಣ ಕಾರ್ ಇನ್ಶೂರೆನ್ಸ್ ಸಾಕಾಗುತ್ತದೆ ಎಂದುಕೊಂಡಿದ್ದರೆ, ಮುಂದಕ್ಕೆ ಓದಿ…ಏಕೆಂದರೆ ದುರಾದೃಷ್ಟವೆಂಬಂತೆ, ಹಾಗಾಗಿರುವುದಿಲ್ಲ!

ನಿಮ್ಮ ಮೋಟಾರ್ ಇನ್ಶೂರೆನ್ಸ್ ಅನ್ನು ಅಪ್ಗ್ರೇಡ್ ಮಾಡುವಾಗ ಒಂದು ಸಿ ಎನ್ ಜಿ ವಾಹನಕ್ಕಾಗಿ ನೀವು ಅನುಸರಿಸಬೇಕಾದ ನಿರ್ದಿಷ್ಟ ನಿಯಮಗಳು ಬೇಕಾದಷ್ಟಿವೆ, ವಿಶೇಷವಾಗಿ ಒಂದು ಸಿ ಎನ್ ಜಿ ಕಿಟ್ ನಿಮ್ಮ ವಾಹನದ ಮೇಲೆ, ಅದರ ಸಾಮರ್ಥ್ಯದಿಂದ ಹಿಡಿದು ಅದರ ಇನ್ಶೂರೆನ್ಸ್ ಪ್ರೀಮಿಯಂ ವರೆಗೆ ಪರ್ಯಾವರಣದ ಮೇಲೆ ಅದರ ಪ್ರಭಾವದವರೆಗೆ ಕೂಡಾ,  ಹಲವು ರೀತಿಯಲ್ಲಿ ಪರಿಣಾಮಗಳನ್ನು ಬೀರುವ ಕಾರಣದಿಂದಾಗಿ.

ಸಿ ಎನ್ ಜಿ (CNG) ವಾಹನದ ಲಾಭಗಳೇನು?

ಇತ್ತೀಚೆಗೆ ಸಿ ಎನ್ ಜಿ ವಾಹನಗಳು ಸಾಕಷ್ಟು ಸುದ್ದಿ ಮಾಡುತ್ತಿದೆ, ಏಕೆಂದರೆ ನೀವೊಂದು ಬಾಳಿಕೆ ಬರುವ ಆರ್ಥಿಕವಾಗಿ ನಿಭಾಯಿಸಬಲ್ಲ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಇವುಗಳು ಉತ್ತಮ ಆಯ್ಕೆಯಾಗುತ್ತವೆ.

ಸಿ ಎನ್ ಜಿ(ಅಥವಾ ಕಂಪ್ರೆಸ್ಸ್ಡ್ ನ್ಯಾಚುರಲ್ ಗ್ಯಾಸ್) ನಿಮಗೆ ಅದೇ ಮೈಲೇಜ್ ಅನ್ನು ಸಾಧರಣ ಇಂಧನದ ಬೆಲೆಗೆ ನೀಡುತ್ತದೆ - ಆದ್ದರಿಂದ ನಿಮ್ಮ ಸಾಧಾರಣ ಪೆಟ್ರೋಲ್ ಅಥವಾ ಡೀಸಿಲ್ ಗೆ ಹೋಲಿಸಿದರೆ ಇದೊಂದು ಅಗ್ಗದ ಪರ್ಯಾಯವಾಗಿದೆ.

ಇದರ ಜೊತೆ, ಇದರ ಕಾರ್ಬನ್ ಎಮಿಷನ್ ಮಟ್ಟವೂ ತೀರಾ ಕಡಿಮೆಯಾಗಿದ್ದು, ಇದು ಲಭ್ಯವಿರುವ ಇಂಧನಗಳಲ್ಲಿ ಹೆಚ್ಚು ಪರಿಸರ ಸ್ನೇಹಿಯಾಗಿದೆ.

ಕಾರಿನಲ್ಲ್ ಸಿ ಎನ್ ಜಿ (CNG) ಕಿಟ್ ಅನ್ನು ಅಳವಡಿಸುವುದು ಹೇಗೆ?

ಇದೊಂದು ಸ್ಪಷ್ಟವಾದ ಪ್ರಶ್ನೆಯಂತೆ ಕಾಣಬಹುದು, ಆದರೆ ಸಿ ಎನ್ ಜಿ ಕಿಟ್ ಇರುವ ವಾಹನವನ್ನು ಪಡೆಯಲು ಎರಡು ಮುಖ್ಯ ವಿಧಗಳಿವೆ.

ಬಾಹ್ಯದಲ್ಲಿ ಅಳವಡಿಸಲಾದ ಸಿ ಎನ್ ಜಿ (CNG) ಕಿಟ್

ನಿಮ್ಮ ಪೆಟ್ರೋಲ್ ಕಾರ್ ಅನ್ನು ಸಿ ಎನ್ ಜಿ ಕಾರ್ ಆಗಿ ಮಾರ್ಪಾಡು ಮಾಡುವುದು ಸಾಧ್ಯವಿದೆ. ಇದರರ್ಥ ನಿಮ್ಮ ಹಳೆಯ ಕಾರಿನಲ್ಲಿ ಹೊಸದಾದ ಸಿ ಎನ್ ಜಿ ಕಿಟ್ ಅನ್ನು ಅಳವಡಿಸುವುದು. ಒಂದು ಒಳ್ಳೆ ಗುಣಮಟ್ಟದ ಸಿ ಎನ್ ಜಿ ಕಿಟ್ ನ ಬೆಲೆ ಸುಮಾರು ರೂ. 50,000 ಇರುತ್ತದೆ ಹಾಗೂ ಇದನ್ನು ಸಾಮಾನ್ಯವಾಗಿ ಕಾರಿನ ಡಿಕ್ಕಿಯಲ್ಲಿ ಅಳವಡಿಸಲಾಗುತ್ತದೆ.

ಆದರೆ, ಇದು ಸುಲಭವಾಗಿ ಕೆಟ್ಟುಹೋಗಬಹುದು ಎಂದರ್ಥ ಆದ್ದರಿಂದ ನೀವು ನಿಮ್ಮ ಇನ್ಶೂರರ್ ನಿಂದ ಇದನ್ನು ಪ್ರತ್ಯೇಕವಾಗಿ ಇನ್ಶೂರ್ ಮಾಡಿಸಬೇಕಾಗುವುದು

ಒಳಗಡೆಯೇ ಅಳವಡಿಸಲಾದ ಸಿ ಎನ್ ಜಿ (CNG) ಕಿಟ್

ಈ ಸಂದರ್ಭದಲ್ಲಿ, ಸಿ ಎನ್ ಜಿ ಕಿಟ್ ನಿಮ್ಮ ಕಾರಿನೊಂದಿಗೆಯೇ ಬರುತ್ತದೆ ಹಾಗೂ ಇದನ್ನು ಸ್ವತಃ ತಯಾರಕರು ಮೊದಲೇ ಅಳವಡಿಸಿರುತ್ತಾರೆ. ಇದರರ್ಥ ನೀವು ಖರೀದಿಸುವ ಯಾವುದೇ ಇನ್ಶೂರೆನ್ಸ್ ನಲ್ಲಿ ಮುಂಚಿತವಾಗಿಯೇ ಸಿ ಎನ್ ಜಿ ಆಯ್ಕೆ ಸೇರ್ಪಡೆಯಾಗಿರುತ್ತದೆ.

ಸಿ ಎನ್ ಜಿ (CNG) ಕಿಟ್ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಒಂದು ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ, ಅದರ ಇಂಧನದ ರೀತಿ ಹಾಗೂ ಅದರ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಅನ್ನೂ ಸೇರಿ. ನೀವು ನಿಮ್ಮ ವಾಹನಕ್ಕೆ ಸಿ ಎನ್ ಜಿ ಕಿಟ್ ಅನ್ನು ಅಳವಡಿಸಿದಾಗ, ಇವೆರಡರ ಮೇಲೂ ಪರಿಣಾಮ ಬೀರುತ್ತದೆ.

ಸಿ ಎನ್ ಜಿ ಕಾರುಗಳಲ್ಲಿ, ಪ್ರೀಮಿಯಂ ಮೊತ್ತವು ಸಾಧಾರಣವಾಗಿ ರೂ 60 ಆಗಿರುತ್ತದೆ, ಹಾಗೂ ಥರ್ಡ್ ಪಾರ್ಟೀ ಪಾಲಿಸಿಗಳಿಗೆ ಹೆಚ್ಚುವರಿ ತೆರಿಗೆಗಳನ್ನು ಸೇರಿಸಲಾಗುತ್ತದೆ. ಒಂದು ಸಮಗ್ರ ಪಾಲಿಸಿಯ ವಿಷಯ ಬಂದಾಗ, ನಿಮ್ಮ ಸಿ ಎನ್ ಜಿ ಕಿಟ್ ನಿಮ್ಮ ಕಾರಿನೊಂದಿಗೆಯೇ ಬಂದಿತ್ತೇ ಅಥವಾ ನಂತರ ಅಳವಡಿಸಲಾಯಿತೇ ಎಂಬುವುದರ ಮೇಲೆ ಅವಲಂಬಿಸುತ್ತದೆ.

ಬಾಹ್ಯ ಸಿ ಎನ್ ಜಿ (CNG) ಕಿಟ್ ಗಳಿಗೆ

ನೀವು ನಿಮ್ಮ ಕಾರಿನಲ್ಲಿ ಹೊಸ ಸಿ ಎನ್ ಜಿ ಕಿಟ್ ಅನ್ನು ಅಳವಡಿಸುವಾಗ, ನಿಮ್ಮ ಪಾಲಿಸಿಯನ್ನು ಅಪ್ಗ್ರೇಡ್ ಮಾಡಲು ನಿಮ್ಮ ಇನ್ಶೂರರ್ ಗೆ ತಿಳಿಸುವುದನ್ನು ಮರೆಯಬೇಡಿ. 

ಸಾಮಾನ್ಯವಾಗಿ, ಸಿ ಎನ್ ಜಿ ವಾಹನಗಳಿಗೆ ಬಹಳಷ್ಟು ನಿರ್ವಹಣೆಯ ಅಗತ್ಯವಿದ್ದು, ಅದರ ಅಳವಡಿಕೆಯ ವೆಚ್ಚವೂ ದುಬಾರಿಯಾಗಿದೆ(ಒಂದು ಒಳ್ಳೆ ಗುಣಮಟ್ಟದ ಸಿ ಎನ್ ಜಿ ಕಿಟ್ ನ ಬೆಲೆ ಸುಮಾರು ರೂ. 50,000 ಇರುತ್ತದೆ). ಇದರರ್ಥ ನಿಮ್ಮ ಪ್ರೀಮಿಯಂ, ಕಿಟ್ ನ ಮೌಲ್ಯದ 4-5% ರಷ್ಟು ಹೆಚ್ಚುತ್ತದೆ.

ವಾಹನದೊಂದಿಗೆಯೇ ಬರುವ ಸಿ ಎನ್ ಜಿ (CNG) ಕಿಟ್ ಗಳಿಗೆ

ಮೊದಲೇ ಅಳವಡಿಕೆಯಾದ ಒಂದು ಸಿ ಎನ್ ಜಿ ವಾಹನವನ್ನು ಇತರ ಯಾವುದೇ ವಾಹನವನ್ನು ಇನ್ಶೂರ್ ಮಾಡಿದ ಹಾಗೆಯೇ ಇನ್ಶೂರ್ ಮಾಡಬಹುದು.

ನೀವು ಸುಲಭವಾಗಿ ನಿಮ್ಮ ಆರ್ ಸಿ ಬೂಥ್ ಅನ್ನು ಸಿ ಎನ್ ಜಿ ಸೀಲ್ ನೊಂದಿಗೆ ಅಪ್ಡೇಟ್ ಮಾಡಬಹುದು ಹಾಗೂ ಇನ್ಶೂರೆನ್ಸ್ ಖರೀದಿ ಅಥವಾ ರಿನೀವಲ್ ವೇಳೆಯಲ್ಲಿ ಇಂಧನದ ವಿಧವನ್ನು ಹೇಳಬಹುದು.

ಆದರೆ,, ಪೆಟ್ರೋಲ್ ಅಥವಾ ಡೀಸೆಲ್ ನಿಂದ ಓಡುವ ಅದೇ ಕಾರಿನ ಇನ್ಶೂರೆನ್ಸ್ ಪ್ರೀಮಿಯಂ ಗೆ ಹೋಲಿಸಿದರೆ ನಿಮಗೆ ದೊರೆಯುವ ಪ್ರೀಮಿಯಂ ಸ್ವಲ್ಪ ಹೆಚ್ಚಿರುತ್ತದೆ ಎಂದು ನಿಮಗೆ ತಿಳಿದಿರಬೇಕು.

ಸಿ ಎನ್ ಜಿ (CNG) ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ವಾಹನದ ಸಿಸಿ ಥರ್ಡ್ ಪಾರ್ಟೀ ಪ್ರೀಮಿಯಂ(ಜಿ ಎಸ್ ಟಿ)ಅನ್ನು ಹೊರತುಪಡಿಸಿ
1000 ಸಿಸಿ ಅನ್ನು ಮೀರದೇ ಇದ್ದರೆ ₹2,094
1000 ಸಿಸಿ ಅನ್ನು ಮೀರಿದ್ದರೆ ಆದರೆ 1500 ಸಿಸಿ ಅನ್ನು ಮೀರಿದ್ದರೆ ₹3,416

ನಿಮ್ಮ ಸಿ ಎನ್ ಜಿ (CNG) ಕಾರ್ ಇನ್ಶೂರೆನ್ಸ್ ಗಾಗಿ ಡಿಜಿಟಲ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಸಿ ಎನ್ ಜಿ (CNG) ವಾಹನಗಳ ಬಗ್ಗೆ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ನಿಮ್ಮ ವಾಹನದೊಳಗೆ ಸಿ ಎನ್ ಜಿ ಕಿಟ್ ಅನ್ನು ಸೇರಿಸುವುದು ಅಥವಾ ಮೊದಲೇ ಫಿಟ್ ಆಗಿರುವ ಸಿ ಎನ್ ಜಿ ವಾಹನವನ್ನು ಖರೀದಿಸುವುದನ್ನು ಹೆಚ್ಚಾಗಿ ಏರುತ್ತಿರುವ ಇಂಧನ ಬೆಲೆಗೆ ಪರಿಹಾರ ಎಂದು ಕಾಣಲಾಗುತ್ತಿದೆ.

ಆದರೆ ಸಿ ಎನ್ ಜಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದನ್ನು ಹೊರತುಪಡಿಸಿ, ನಿಮ್ಮ ಕಾರನ್ನು ಸಿ ಎನ್ ಜಿ ಮೇಲೆ ಓಡುವಂತೆ ಮಾರ್ಪಾಡು ಮಾಡುವ ಮೊದಲು, ನಿಮಗೆ ಕೆಲವು ಮುನ್ನೆಚ್ಚರಿಕೆಯ ವಿಷಯಗಳು ತಿಳಿದಿರಬೇಕು:

ಇಂಧನದ ಲಭ್ಯತೆ

ನೀವು ಸಿ ಎನ್ ಜಿ ಗೆ ಬದಲಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು, ನಿಮ್ಮ ಪ್ರದೇಶದಲ್ಲಿ ಸಿ ಎನ್ ಜಿ ಇಂಧನದ ಲಭ್ಯತೆಯನ್ನು ಪರಿಶೀಲಿಸಲು ಮರೆಯಬೇಡಿ, ಅಂದರೆ ಹತ್ತಿರದ ಸಿ ಎನ್ ಜಿ ಸ್ಟೇಶನ್ ತಲುಪಲು ನೀವು ಎಷ್ಟು ದೂರ ಹೋಗಬೇಕಾಗುತ್ತದೆ ಎಂದು. ಮೂಲತಃ, ನಿಮ್ಮ ಇಂಧನವನ್ನು ಭರಿಸಲು ಅದಕ್ಕಿಂತಲೂ ಹೆಚ್ಚಿನ ಇಂಧನ ಬಳಕೆಯಾಗದಂತೆ ಪರಿಶೀಲಿಸಿ!

ಬೆಲೆ ವಿರುದ್ಧ ಸಾಮರ್ಥ್ಯ

ಸಿ ಎನ್ ಜಿ ವಾಹನಗಳು ಹೆಚ್ಚು ಇಂಧನ ಶಕ್ತಿಯನ್ನು ಹೊಂದಿವೆ, ಆದರೆ ವಾಸ್ತವವಾಗಿ ಪೆಟ್ರೋಲ್ ಎಂಜಿನ್ ಗೆ ಹೋಲಿಸಿದರೆ, ನಿಮ್ಮ ವಾಹನದ ಸಾಮರ್ಥ್ಯ ಕಡಿಮೆಯಾಗುತ್ತದೆ.

ಸಿ ಎನ್ ಜಿ ಯೊಂದಿಗೆ ಕಾರನ್ನು ಓಡಿಸುವುದರಿಂದ ನಿಮಗೆ ಹೆಚ್ಚಿನ ಇಂಧನ ಶಕ್ತಿ ದೊರೆಯುತ್ತದೆ, ಆದರೆ ಒಂದು ಮುಖ್ಯ ನಷ್ಟವೇನೆಂದರೆ ಕಾರಿನ ಸಾಮರ್ಥ್ಯವು ಕುಗ್ಗುತ್ತದೆ.

ನಿಮ್ಮ ಪೆಟ್ರೋಲ್ ಎಂಜಿನ್ ಗೆ ಹೋಲಿಸಿದರೆ, ಥ್ರಾಟ್ಲ್ ಪ್ರತಿಕ್ರಿಯೆ ಸ್ವಲ್ಪ ಕಡಿಮೆಯಾಗುತ್ತದೆ; ನಿಮಗೆ ಒಂದು ಸಿ ಎನ್ ಜಿ ಇರುವ ಎಂಜಿನ್ ನಿಂದ ಅದೇ ಪಂಚ್ ದೊರೆಯುವುದಿಲ್ಲ. ಹಾಗೂ, ನೀವು ನಿಮ್ಮ ಕಾರನ್ನು ಹೆಚ್ಚು ನಿಯಮಿತವಾಗಿ ಸರ್ವಿಸಿಂಗ್ ಗೆ ನೀಡಬೇಕಾಗುತ್ತದೆ.

ಇದಕ್ಕೆ ಕಾರಣ, ಇಂಧನವು ವಾಲ್ವ್ ಹಾಗೂ ಸಿಲಿಂಡರ್ ಗೆ ಲೂಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ, ಆದರೆ ಸಿ ಎನ್ ಜಿ ಹಾಗೆ ಮಾಡುವುದಿಲ್ಲ. ಇದರಿಂದ ಇದು ಬೇಗನೇ ತುಕ್ಕು ಹಿಡಿಯುತ್ತದೆ.

ಬಾಹ್ಯ ಅಥವಾ ಆಂತರಿಕ ಸಿ ಎನ್ ಜಿ (CNG) ಕಿಟ್ ಗಳು

ನಿಮ್ಮ ವಾಹನಕ್ಕೆ ಸಿ ಎನ್ ಜಿ ಅನ್ನು ಅಳವಡಿಸುವ ಎರಡು ವಿಧಾನಗಳಿವೆ - ಒಂದು ಹಳೆಯ ಕಾರಿಗೆ ಇದನ್ನು ಸೇರಿಸುವುದು ಅಥವಾ ಮೊದಲೇ ಫಿಟ್ ಆಗಿರುವ ವಾಹನವನ್ನು ಖರೀದಿಸುವುದು. ಆದರೆ ಉತ್ತಮ ಯಾವುದು? ನಿಮ್ಮ ಸ್ವಂತ ವಾಹನಕ್ಕೆ ಹೊಸ ಸಿ ಎನ್ ಜಿ ಕಿಟ್ ಅನ್ನು ಅಳವಡಿಸುವುದು ಅಗ್ಗವಾಗಿ ಕಂಡುಬಂದರೂ, ನೀವು ಹೊಂದಾಣಿಕೆಯನ್ನು ಪರಿಶೀಲಿಸಬೇಕಾಗುತ್ತದೆ. ನಮ್ಮ ಶಿಫಾರಸು ಏನೆಂದರೆ ನೀವು ಫ್ಯಾಕ್ಟರಿ ಫಿಟ್ ಆಗಿರುವ ಸಿ ಎನ್ ಜಿ ಕಿಟ್ ಅನ್ನು ಪಡೆಯಿರಿ, ಏಕೆಂದರೆ ಇವು ವಾರಂಟಿಯೊಂದಿಗೆ ಹಾಗೂ ಹೆಚ್ಚಿನ ವೆಚ್ಚಕ್ಕೆ ಕಾರಣವಾಗುವ ನಿಯಮಿತ ಸರ್ವಿಸಿಂಗ್ ನ ಆಯ್ಕೆಗಳೊಂದಿಗೆ ಬರುತ್ತದೆ.

ನಿರ್ವಹಣೆಯ ವೆಚ್ಚ

ಸಿ ಎನ್ ಜಿ ವಾಹನಗಳಿಗೆ ಸಾಕಷ್ಟು ನಿರ್ವಹಣೆಯ ಅಗತ್ಯವಿರುತ್ತದೆ, ವಿಶೇಷವಾಗಿ ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ. ಲೀಕೇಜ್, ಇನ್ಸುಲೇಷನ್ ಕಳೆದುಕೊಂಡ ವಯರ್ ಇಂತಹ ವಿಷಯಗಳನ್ನು ತಪ್ಪಿಸಲು ನೀವು ನಿಮ್ಮ ವಾಹನದ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಬೇಕಾಗುತ್ತದೆ.

ಹಾಗಾದರೆ, ನೀವು ಸಿ ಎನ್ ಜಿ (CNG) ವಾಹನವನ್ನು ಏಕೆ ಆಯ್ಕೆ ಮಾಡಬೇಕು?

ಒಂದು ಸಾಧಾರಣ ಪೆಟ್ರೋಲ್/ಡೀಸಿಲ್ ಕಾರಿಗೆ ಹೋಲಿಸಿದರೆ, ಒಂದು ಸಿ ಎನ್ ಜಿ ಫಿಟ್ ಆಗಿರುವ ಕಾರಿಗೆ ನೀವು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದರೆ, ಇದೆಲ್ಲಾ ಉಪಯುಕ್ತ ಎಂದು ಅರಿಯಿರಿ.

ಮೊದಲನೇಯದಾಗಿ, ಪೆಟ್ರೋಲ್ ಅಥವಾ ಡೀಸಿಲ್ ಗೆ ಹೋಲಿಸಿದರೆ ಸಿ ಎನ್ ಜಿ ಅಗ್ಗವಾಗಿದೆ, ಹಾಗೂ ಇದು ಹೆಚ್ಚು ಪರಿಸರ ಸ್ನೇಹಿಯೂ ಆಗಿದೆ. ಕಡಿಮೆ ಎಮಿಷನ್ ಮಟ್ಟದ ಅರ್ಥ ನಿಮ್ಮ ಕಾರಿನ ಬಾಳಿಕೆಯೂ ಉತ್ತಮವಾಗುತ್ತದೆ.

ಆದ್ದರಿಂದ, ಇದು ಪರ್ಯಾವರಣ ಹಾಗೂ ನಿಮ್ಮ ಇಂಧನದ ಬಜೆಟ್ ಎರಡಕ್ಕೂ ಇಷ್ಟು ಉತ್ತಮವಾಗಿರುವ ಕಾರಣ, ನೀವು ಆದಷ್ಟು ಬೇಗನೇ ಹೋಗಿ ನಿಮ್ಮ ಕಾರಿಗೆ ಸಿ ಎನ್ ಜಿ ಕಿಟ್ ಅನ್ನು ಏಕೆ ಅಳವಡಿಸಬಾರದು?