ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಬದಲಾಯಿಸಿ
2 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಪ್ರೀಮಿಯಂ

Third-party premium has changed from 1st June. Renew now

ಕಾರ್ ಇನ್ಶೂರೆನ್ಸ್‌ನಲ್ಲಿ ವಾಲಂಟರಿ ಡಿಡಕ್ಟಿಬಲ್

ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ ಅನ್ನು ಆಯ್ಕೆ ಮಾಡುವುದರಲ್ಲಿ ಅರ್ಥವಿದೆಯೇ?

ನೀವು ಈಗಾಗಲೇ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಅಥವಾ ಈಗ ಖರೀದಿಸಲು ಯೋಜಿಸುತ್ತಿದ್ದರೆ, ನೀವು ಒತ್ತು ನೀಡುವ ವಿಷಯವೆಂದರೆ ಅದು ಪ್ರೀಮಿಯಂಗಳು. ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವಾಗ, ಕೈಗೆಟುಕುವ ಪ್ರೀಮಿಯಂಗೆ ನೀವು ಸಾಕಷ್ಟು ವ್ಯಾಪ್ತಿಯನ್ನು ಪಡೆಯುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.  

ಶೀರ್ಷಿಕೆಯಲ್ಲಿ "ವಾಲಂಟರಿ ಡಿಡಕ್ಟಿಬಲ್" ಎಂದು ಸ್ಪಷ್ಟವಾಗಿ ಹೇಳಿರುವಾಗ, ಮತ್ತೇಕೆ ನಾವು ಪ್ರೀಮಿಯಂಗಳ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಸುಲಭ ಮಾರ್ಗಗಳಲ್ಲಿ ವಾಲಂಟರಿ ಡಿಡಕ್ಟಿಬಲ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಸಹ ಒಂದಾಗಿದೆ. 

ಪ್ರೀಮಿಯಂನಲ್ಲಿ ಹಣ ಉಳಿಸಲು ಯಾರು ತಾನೇ ಇಷ್ಟಪಡುವುದಿಲ್ಲ? ನೀವು ಸಹ ಹಾಗೇ ಮಾಡುತ್ತೀರಿ ಎಂಬುದು ನಮಗೆ ಖಚಿತವಾಗಿ ತಿಳಿದಿದೆ. ಆದ್ದರಿಂದ, ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ಅನ್ನು ಆಯ್ಕೆ ಮಾಡಿಕೊಳ್ಳುವುದು ನಿಜವಾಗಿಯೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂದು ನೋಡೋಣ! 

ಡಿಡಕ್ಟಿಬಲ್ ಎಂದರೇನು?

ಡಿಡಕ್ಟಿಬಲ್ ಎನ್ನುವುದು ಮೂಲಭೂತವಾಗಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಉಳಿದ ಹಣವನ್ನು ಪಾವತಿಸುವ ಮೊದಲು, ಕ್ಲೈಮ್ ಅಥವಾ ಮರುಪಾವತಿಗಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ, ನಿಮ್ಮ ಸ್ವಂತ ಜೇಬಿನಿಂದ ನೀವು ಪಾವತಿಸಬೇಕಾದ ಮೊತ್ತವಾಗಿದೆ.  

ಇದನ್ನು ಈಗ ಬೇರೆ ರೀತಿಯಲ್ಲಿ ನೋಡೋಣ. ನೀವು ಮತ್ತು ನಿಮ್ಮ ಸ್ನೇಹಿತರು ಊಟಕ್ಕೆ ಹೋದಾಗ, ನೀವು ಬಿಲ್ ಅನ್ನು ಹಂಚಿಕೊಳ್ಳಲು ನಿರ್ಧರಿಸಿದ ಹಾಗೆಯೇ ಇದು. ಇದರರ್ಥ ನೀವಿಬ್ಬರೂ ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತೀರಿ, ಅಲ್ಲವೇ? 

ಡಿಡಕ್ಟಿಬಲ್ ಸಹ ಹೀಗೆ ಕೆಲಸ ಮಾಡುತ್ತದೆ. ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಅಪಾಯದ ಒಂದು ಸಣ್ಣ ಭಾಗವನ್ನು ಹಂಚಿಕೊಳ್ಳುತ್ತೀರಿ. ಇದರಿಂದ ನೀವು ನಿಜವಾದ ಕ್ಲೈಮ್‌ಗಳನ್ನು ಮಾತ್ರ ಮಾಡಲಿದ್ದೀರಿ ಎಂಬುದನ್ನು ಅವರು ಖಚಿತಪಡಿಸಿಕೊಳ್ಳಬಹುದು. 

ಆದ್ದರಿಂದ, ನೀವು ₹15,000 ಮೌಲ್ಯದ ಹಾನಿಗಾಗಿ ಕ್ಲೈಮ್ ಮಾಡಿದರೆ ಹಾಗೂ ನಿಮ್ಮ ಡಿಡಕ್ಟಿಬಲ್ ಮೊತ್ತವು ₹1,000 ಆಗಿದ್ದರೆ - ಇನ್ಶೂರೆನ್ಸ್ ಪೂರೈಕೆದಾರರು ಆ ಮೊತ್ತವನ್ನು "ಡಿಡಕ್ಟ್" ಮಾಡುತ್ತಾರೆ. ಮತ್ತು ನಿಮ್ಮ ಕಾರಿನ ರಿಪೇರಿಗೆ ₹14,000 ಗಳನ್ನು ಪಾವತಿಸುತ್ತಾರೆ.  

ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ನೀವು ಇದಕ್ಕಾಗಿ ಎಷ್ಟು ಪಾವತಿಸಲು ಸಿದ್ಧರಿದ್ದೀರಿ ಎಂಬುದನ್ನು ನೀವು ನಿರ್ಧರಿಸಬಹುದು ಹಾಗೂ ನಂತರದಲ್ಲಿ ಇದನ್ನು ಪ್ರತಿ ಕ್ಲೈಮ್‌ಗೂ ಅನ್ವಯಿಸಲಾಗುತ್ತದೆ.

ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಒಟ್ಟು ವಾಲಂಟರಿ ಮತ್ತು ಕಡ್ಡಾಯ ಡಿಡಕ್ಟಿಬಲ್‌ಗಿಂತ ಹೆಚ್ಚಿನ ಕ್ಲೈಮ್ ಮೊತ್ತದ ಭಾಗವನ್ನು ಮಾತ್ರ ಪಾವತಿಸುತ್ತಾರೆ. ಡಿಡಕ್ಟಿಬಲ್‌ಗಳಲ್ಲಿ ಎರಡು ವಿಧಗಳಿವೆ - ಕಡ್ಡಾಯ ಮತ್ತು ಸ್ವಯಂಪ್ರೇರಿತ (ವಾಲಂಟರಿ). 

ಇನ್ನಷ್ಟು ಓದಿ:

ಡಿಡಕ್ಟಿಬಲ್‌ಗಳ ವಿಧಗಳು ಯಾವುವು?

ಎರಡು ಮುಖ್ಯ ವಿಧದ ಡಿಡಕ್ಟಿಬಲ್‌ಗಳಿವೆ, ಒಂದನ್ನು ಇನ್ಶೂರೆನ್ಸ್ ಕಂಪನಿಯಿಂದ ನಿಗದಿಪಡಿಸಲಾಗಿದೆ ಮತ್ತು ಕಡ್ಡಾಯವಾಗಿದೆ. ಹಾಗೂ ಎರಡನೇಯದನ್ನು ನೀವು ಸ್ವಯಂಪ್ರೇರಣೆಯಿಂದ ನಿಮಗಾಗಿ ನಿಗದಿಪಡಿಸಬಹುದು.  

ಕಡ್ಡಾಯ ಡಿಡಕ್ಟಿಬಲ್‌ ವಾಲಂಟರಿ ಡಿಡಕ್ಟಿಬಲ್‌
ಏನಿದು? ಪಾಲಿಸಿ ಖರೀದಿಯ ಸಮಯದಲ್ಲಿ ಇನ್ಶೂರೆನ್ಸ್ ಕಂಪನಿಯು ಕಡ್ಡಾಯ ಡಿಡಕ್ಟಿಬಲ್ ಮೊತ್ತವನ್ನು ನಿಗದಿಪಡಿಸುತ್ತದೆ. ಈ ರೀತಿಯ ಡಿಡಕ್ಟಿಬಲ್‌ಗಳಲ್ಲಿ, ಮೋಟಾರ್ ಇನ್ಶೂರೆನ್ಸ್ ಕ್ಲೈಮ್‌ನ ಭಾಗವಾಗಿ ನಿಗದಿತ ಮೊತ್ತವನ್ನು ಪಾವತಿಸುವುದನ್ನು ಬಿಟ್ಟು ನಿಮಗೆ (ಪಾಲಿಸಿದಾರರಾಗಿ) ಬೇರೆ ಯಾವುದೇ ಆಯ್ಕೆಗಳಿಲ್ಲ. ವಾಲಂಟರಿ ಡಿಡಕ್ಟಿಬಲ್‌ ಅನ್ನು ನೀವೇ ಆಯ್ಕೆ ಮಾಡಿಕೊಳ್ಳುತ್ತೀರಿ. ಮೂಲಭೂತವಾಗಿ, ಇನ್ಶೂರೆನ್ಸ್ ಪೂರೈಕೆದಾರರು ಸಾಮಾನ್ಯವಾಗಿ ನಿಮ್ಮ ಜೇಬಿನಿಂದ ಪಾವತಿಸಬಹುದಾದ ಹೆಚ್ಚುವರಿ ಮೊತ್ತವನ್ನು (ಕಡ್ಡಾಯ ಡಿಡಕ್ಟಿಬಲ್‌ ಜೊತೆಗೆ) ಪಾವತಿಸಲು ನೀವು ಒಪ್ಪುತ್ತೀರಿ. ಆದ್ದರಿಂದ, ನಿಮ್ಮ ಇನ್ಶೂರೆನ್ಸ್ ಪಾಲಿಸಿಗೆ ಈ ವಾಲಂಟರಿ ಡಿಡಕ್ಟಿಬಲ್‌ಗಳನ್ನು ನೀವು ಸೇರಿಸಿದಾಗ, ಇನ್ಶೂರೆನ್ಸ್ ಪೂರೈಕೆದಾರರ ಕಡೆಯಿಂದ ಅಪಾಯವು ಕಡಿಮೆಯಾಗುವುದರಿಂದ, ಅದು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ. 😊
ಇದು ನಿಮ್ಮ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆಯೇ? ಈ ಕಡ್ಡಾಯ ಡಿಡಕ್ಟಿಬಲ್‌, ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಮತ್ತು ಇದು ಕೇವಲ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್‌ಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಥರ್ಡ್ ಪಾರ್ಟಿ ಲೈಬಿಲಿಟಿ ಓನ್ಲಿ ಪಾಲಿಸಿಗಳಿಗೆ ಅನ್ವಯಿಸುವುದಿಲ್ಲ. ಸಾಮಾನ್ಯವಾಗಿ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳು ಎಂದರೆ ಕಡಿಮೆ ಪ್ರೀಮಿಯಂ ಮೊತ್ತವಾಗಿರುತ್ತದೆ. ಆದರೆ ನಿಮ್ಮ ಕಾರಿಗೆ ಯಾವುದೇ ಹಾನಿಯ ಸಂದರ್ಭದಲ್ಲಿ ನೀವೇ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ (ಮತ್ತು ಇದು ನಿಮ್ಮ ಇತರ ವೆಚ್ಚಗಳ ಮೇಲೆ ಪರಿಣಾಮ ಬೀರಬಹುದು) ಆದ್ದರಿಂದ ಇದನ್ನು ಮುಖ್ಯವಾಗಿ ಪರಿಗಣಿಸಲು ಮರೆಯದಿರಿ.
ನೀವು ಎಷ್ಟು ಪಾವತಿಸುವಿರಿ? ಐ.ಆರ್.ಡಿ.ಎ.ಐ ನಿಯಮಗಳ ಪ್ರಕಾರ, ಕಾರ್ ಇನ್ಶೂರೆನ್ಸ್‌ನಲ್ಲಿ ಈ ಕಡ್ಡಾಯ ಡಿಡಕ್ಟಿಬಲ್‌ನ ಮೊತ್ತವು ನಿಮ್ಮ ಕಾರ್ ಎಂಜಿನ್‌ನ ಕ್ಯೂಬಿಕ್ ಕೆಪ್ಯಾಸಿಟಿಯನ್ನು ಅವಲಂಬಿಸಿರುತ್ತದೆ. ಈಗ ಇದನ್ನು, ಟೇಬಲ್ #1 ರಲ್ಲಿ ಈ ಕೆಳಗಿನಂತೆ ಸೆಟ್ ಮಾಡಲಾಗಿದೆ. ನಿಮ್ಮ ವಾಲಂಟರಿ ಡಿಡಕ್ಟಿಬಲ್‌ಗಳು ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಟೇಬಲ್ #2 ರಲ್ಲಿ ನೋಡಿ

ಕಾರ್ ಇನ್ಶೂರೆನ್ಸ್‌ನಲ್ಲಿ ಕಡ್ಡಾಯ ಡಿಡಕ್ಟಿಬಲ್‌

ಎಂಜಿನ್ ಕೆಪ್ಯಾಸಿಟಿ ಕಡ್ಡಾಯ ಡಿಡಕ್ಟಿಬಲ್‌
1,500 ಸಿಸಿ ವರೆಗೆ ₹1,000
1,500 ಸಿಸಿ ಮೇಲೆ ₹2,000

ಕಾರ್ ಇನ್ಶೂರೆನ್ಸ್‌ನಲ್ಲಿ ವಾಲಂಟರಿ ಡಿಡಕ್ಟಿಬಲ್‌ಗಳು

ವಾಲಂಟರಿ ಡಿಡಕ್ಟಿಬಲ್‌ಗಳು ಡಿಸ್ಕೌಂಟ್
₹2,500 ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 20%, ಗರಿಷ್ಠ ₹750 ಕ್ಕೆ ಒಳಪಟ್ಟಿರುತ್ತದೆ
₹5,000 ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 25%, ಗರಿಷ್ಠ ₹1,500 ಕ್ಕೆ ಒಳಪಟ್ಟಿರುತ್ತದೆ
₹7,500 ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 30%, ಗರಿಷ್ಠ ₹2,000 ಕ್ಕೆ ಒಳಪಟ್ಟಿರುತ್ತದೆ
₹15,000 ವೆಹಿಕಲ್‌ನ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ 35%, ಗರಿಷ್ಠ ₹2,500 ಕ್ಕೆ ಒಳಪಟ್ಟಿರುತ್ತದೆ

ಮೇಲೆ ತಿಳಿಸಿದ ಡಿಸ್ಕೌಂಟ್ ಕೇವಲ ಒಂದು ಉದಾಹರಣೆಯಾಗಿದೆ. ಯಾವುದೇ ವಾಲಂಟರಿ ಡಿಡಕ್ಟಿಬಲ್‌ಗಳು ಆಯ್ಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಪರಿಶೀಲಿಸಿ.

ನೀವು ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಏಕೆ ಬಯಸುತ್ತೀರಿ?

ನಿಮ್ಮ ವಾಲಂಟರಿ ಡಿಡಕ್ಟಿಬಲ್‌ ಮೊತ್ತವನ್ನು ಆಯ್ಕೆ ಮಾಡುವುದರಿಂದ, ಅದು ನಿಮ್ಮ ಪ್ರೀಮಿಯಂಗೆ ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಆಯ್ಕೆ ಮಾಡುವ ಕೆಲವು ಅರ್ಥಪೂರ್ಣವಾದ ಸಂದರ್ಭಗಳು ಹೀಗಿವೆ:

  • ನಿಮ್ಮ ಡ್ರೈವಿಂಗ್ ಸ್ಕಿಲ್ಸ್ ಬಗ್ಗೆ ನಿಮಗೆ ವಿಶ್ವಾಸವಿದ್ದರೆ - ನೀವು ಎಚ್ಚರಿಕೆಯ, ಸುರಕ್ಷಿತ ಮತ್ತು ನುರಿತ ಅತ್ಯುತ್ತಮ ಚಾಲಕರಾಗಿದ್ದರೆ, ನಿಮ್ಮ ಇನ್ಶೂರೆನ್ಸ್‌ನ ವಿರುದ್ಧ ನೀವು ಕ್ಲೈಮ್ ಮಾಡುವ ಸಾಧ್ಯತೆಗಳು ತುಂಬಾ ಕಡಿಮೆಯೆಂದು ನೀವು ಖಚಿತವಾಗಿ ಹೇಳಬಹುದು. ಈ ರೀತಿಯಾಗಿ ನೀವು ನಿಮ್ಮ ಪ್ರೀಮಿಯಂನಲ್ಲಿ ಬಹಳಷ್ಟು ಹಣವನ್ನು ಉಳಿಸಲು, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಉತ್ತಮ ಮಾರ್ಗವಾಗಿ ಬಳಸಬಹುದು. 

  • ನೀವು ಹೆಚ್ಚು ಸುರಕ್ಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ - ನೀವು ನಂಬಲಾಗದಷ್ಟು ಸುರಕ್ಷಿತ ಸ್ಥಳದಲ್ಲಿ ವಾಸಿಸುತ್ತಿದ್ದರೆ (ಮತ್ತು ಚಾಲನೆ ಮಾಡುತ್ತಿದ್ದರೆ) ಹಾಗೂ ಅದು ಯಾವುದೇ ಅಪಘಾತ ಪೀಡಿತ ಪ್ರದೇಶವಾಗಿಲ್ಲದಿದ್ದರೆ, ಅಪಘಾತದ ಸಂದರ್ಭದಲ್ಲಿ ಮೊತ್ತ ಪಾವತಿಸುವ ಬಗ್ಗೆ ಹೆಚ್ಚು ಚಿಂತಿಸದೆಯೇ, ನೀವು ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ವಾಲಂಟರಿ ಡಿಡಕ್ಟಿಬಲ್‌ಗಳು ಯಾವಾಗ ಅರ್ಥಪೂರ್ಣವೆನಿಸುವುದಿಲ್ಲ?

ಅಂದಹಾಗೆ, ನೀವು ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲದ ಕೆಲವು ಸಂದರ್ಭಗಳು ಇರಬಹುದು. ವಾಲಂಟರಿ ಡಿಡಕ್ಟಿಬಲ್‌ಗಳು ಅರ್ಥಪೂರ್ಣವೆನಿಸದ ಕೆಲವು ಸಂದರ್ಭಗಳು ಇಲ್ಲಿವೆ: 

  • ಮೊತ್ತವನ್ನು ಪಾವತಿಸಲು ನಿಮಗೆ ಸಾಧ್ಯವಾಗದಿದ್ದರೆ - ಕ್ಲೈಮ್‌ನ ಸಮಯದಲ್ಲಿ ನೀವು ಪಾವತಿಸಬಹುದಾದ ಮೊತ್ತವನ್ನು ಮಾತ್ರ ಆಧರಿಸಿ ನಿಮ್ಮ ವಾಲಂಟರಿ ಡಿಡಕ್ಟಿಬಲ್‌ಗಳ ಮೊತ್ತವನ್ನು ಆಯ್ಕೆಮಾಡಿ. ನಿಮ್ಮ ಪ್ರೀಮಿಯಂನಲ್ಲಿ ನೀವು ಪಡೆಯುವ ಡಿಸ್ಕೌಂಟ್‌ನ ಹೊರತಾಗಿಯೂ, ನಿಮ್ಮ ಸ್ವಂತ ಜೇಬಿನಿಂದ ನೀವು ಈ ಮೊತ್ತವನ್ನು ಪಾವತಿಸಬೇಕಾಗಬಹುದು ಎಂಬುದನ್ನು ಯಾವಾಗಲೂ ನೆನಪಿಡಿ. ಆದ್ದರಿಂದ, ನಿಮಗಿದು ಸಾಧ್ಯವಾಗುವುದಿಲ್ಲವೆಂದು ಖಚಿತವಾಗಿ ಅನಿಸಿದರೆ, ಕಡಿಮೆ ವಾಲಂಟರಿ ಡಿಡಕ್ಟಿಬಲ್‌ಗಳನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ಅದಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದನ್ನು ಬಿಡಿ. ಇದು ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಬೇರೆನೂ ಅಲ್ಲ!

  • ನೀವು ಅಜಾಗರೂಕ ಚಾಲಕರಾಗಿದ್ದರೆ - ನೀವು ಅಜಾಗರೂಕ ಚಾಲಕರಾಗಿದ್ದರೆ, ನೀವು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ನೆನಪಿಡಿ. ಇದರರ್ಥ ನೀವು ವಾಲಂಟರಿ ಡಿಡಕ್ಟಿಬಲ್‌ ಮೊತ್ತವನ್ನು ಪಾವತಿಸುವ ಸಾಧ್ಯತೆಗಳು ಹೆಚ್ಚು.  

  • ನೀವು ಅಪಘಾತ ಪೀಡಿತ ಪ್ರದೇಶದಲ್ಲಿ ವೆಹಿಕಲ್ ಚಾಲನೆ ಮಾಡುತ್ತಿದ್ದರೆ ಮತ್ತು ವಾಸಿಸುತ್ತಿದ್ದರೆ - ನೀವು ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಹೆಸರುವಾಸಿಯಾದ ಸ್ಥಳದಲ್ಲಿ ವಾಸಿಸುತ್ತಿದ್ದರೆ (ನಗರದ ಮಧ್ಯಭಾಗದಲ್ಲಿ ಅಥವಾ ಪ್ರಮುಖ ಹೆದ್ದಾರಿಯಲ್ಲಿ) ನಿಮ್ಮ ವೆಹಿಕಲ್‌ಗೆ, ಅಪಘಾತದಲ್ಲಿ ಭಾಗಿಯಾಗುವ ಅವಕಾಶಗಳು ಹೆಚ್ಚಿರುತ್ತವೆ. ಇದರರ್ಥ ನಿಮ್ಮ ಪ್ರೀಮಿಯಂ ಈಗಾಗಲೇ ಸಾಕಷ್ಟು ಹೆಚ್ಚಾಗಿರುತ್ತದೆ ಮತ್ತು ನಿಮ್ಮ ವಾಲಂಟರಿ ಡಿಡಕ್ಟಿಬಲ್‌ ಮೊತ್ತ ಪಾವತಿಸುವುದನ್ನು ನಿಲ್ಲಿಸಲು ನೀವು ಹೆಚ್ಚಿನ ಕಾರಣವನ್ನು ಹೊಂದಿರಬಹುದು.

  • ನಿಮ್ಮ ವೆಹಿಕಲ್ ಸಾಕಷ್ಟು ಹಳೆಯದಾಗಿದ್ದರೆ - ನಿಮ್ಮ ವೆಹಿಕಲ್ ತುಂಬಾ ಹಳೆಯದಾಗಿದ್ದರೆ, ನಿಮ್ಮ ಪ್ರೀಮಿಯಂ ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಮತ್ತು ವಾಲಂಟರಿ ಡಿಡಕ್ಟಿಬಲ್‌ ನಿಮ್ಮ ಪ್ರೀಮಿಯಂನ ಶೇಕಡಾವಾರು ಭಾಗ ಆಗಿರುವುದರಿಂದ, ಅದು ಸಹ ಹೆಚ್ಚಾಗುತ್ತದೆ.  

ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನಾವು ಈಗಾಗಲೇ ನೋಡಿದಂತೆ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳು ನಿಮಗಾಗಿ ಒಂದು ಪ್ರಮುಖ ಪ್ರಯೋಜನದೊಂದಿಗೆ ಬರುತ್ತದೆ - ನಿಮ್ಮ ಪ್ರೀಮಿಯಂ ಮೊತ್ತವು ಕಡಿಮೆ ಇರುತ್ತದೆ.

ಆದಾಗ್ಯೂ, ನೀವು ಇದನ್ನು ಆಯ್ಕೆ ಮಾಡಿಕೊಂಡರೆ, ದುರದೃಷ್ಟಕರ ಅಪಘಾತಕ್ಕೆ ನೀವು ಸಿಲುಕಿದರೆ, ದುರಸ್ತಿ ವೆಚ್ಚಕ್ಕಾಗಿ ದೊಡ್ಡ ಮೊತ್ತವನ್ನು ಪಾವತಿಸಲು ನೀವು ಸಿದ್ಧರಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ನೆನಪಿನಲ್ಲಿಡಬೇಕು. 

ನೀವು ₹25,000 ಮೌಲ್ಯದ ಹಾನಿಗಾಗಿ ಕ್ಲೈಮ್ ಮಾಡುತ್ತಿದ್ದೀರಿ ಎಂದು ಹೇಳೋಣ (ಕಡ್ಡಾಯ ಡಿಡಕ್ಟಿಬಲ್‌ ಮೊತ್ತವನ್ನು ಕಳೆದ ನಂತರ). ನಿಮ್ಮ ವಾಲಂಟರಿ ಡಿಡಕ್ಟಿಬಲ್‌ ಅನ್ನು ₹10,000 ಕ್ಕೆ ನಿಗದಿಪಡಿಸಿದ್ದರೆ, ಇನ್ಶೂರೆನ್ಸ್ ಕಂಪನಿಯು ಕೇವಲ ₹15,000 ಮಾತ್ರ ಪಾವತಿಸುತ್ತದೆ ಮತ್ತು ನಿಮ್ಮ ಜೇಬಿನಿಂದ ನೀವು ಉಳಿದ ₹10,000 ಪಾವತಿಸಬೇಕಾಗುತ್ತದೆ. 

ಆದರೆ, ನಿಮ್ಮ ವಾಲಂಟರಿ ಡಿಡಕ್ಟಿಬಲ್‌ ಕೇವಲ ₹ 5,000 ಆಗಿದ್ದರೆ - ಇನ್ಶೂರೆನ್ಸ್ ಕಂಪನಿಯು ₹ 20,000 ಪಾವತಿಸುತ್ತಾರೆ ಮತ್ತು ನೀವು ಕೇವಲ ₹ 5,000 ಬಾಕಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಈ ಎರಡನೇ ಸಂದರ್ಭದಲ್ಲಿ, ನಿಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ.

 

ಇದು ನಿಮ್ಮ ಪ್ರೀಮಿಯಂನಲ್ಲಿ ನಿಮ್ಮ ಹಣವನ್ನು ಉಳಿಸಬಹುದಾದರೂ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್‌ಗಳನ್ನು ನೀವು ಆಯ್ಕೆ ಮಾಡುವುದು ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬೇಕು. 

ಸಾಮಾನ್ಯವಾಗಿ, ನೀವು ಯಾವುದೇ ಕ್ಲೈಮ್‌ಗಳನ್ನು ಮಾಡಲು ಕಡಿಮೆ ಅವಕಾಶವಿದೆ ಎಂದು ನಿಮಗೆ ಖಚಿತವಾಗಿದ್ದರೆ, ನಿಮ್ಮ ಪ್ರೀಮಿಯಂನಲ್ಲಿ ಹಣವನ್ನು ಉಳಿಸಲು ಇದು ಉತ್ತಮ ಮಾರ್ಗವಾಗಿದೆ (ಹಾಗೂ ನಂತರದಲ್ಲಿ ಈ ಮೊತ್ತವನ್ನು ನಿಮ್ಮ ಜೇಬಿನಿಂದ ಪಾವತಿಸಿ!)

ನೀವು ಕ್ಲೈಮ್ ಮಾಡಿದರೆ, ನೀವು ನಿಜವಾಗಿಯೂ ನಿಭಾಯಿಸಬಹುದಾದ ಮೊತ್ತಕ್ಕೆ ಮಾತ್ರ ನಿಮ್ಮ ವಾಲಂಟರಿ ಡಿಡಕ್ಟಿಬಲ್‌ ಮೊತ್ತವನ್ನು ಹೆಚ್ಚಿಸಬೇಕು ಎಂಬುದನ್ನು ಯಾವಾಗಲೂ ನೆನಪಿಡಿ. ಏಕೆಂದರೆ ಈ ಹಂತದಲ್ಲಿ ನೀವು ಹಿಂದೆ ಸರಿಯಲು ಸಾಧ್ಯವಿಲ್ಲ.