ಟು ವೀಲರ್ ಇನ್ಶೂರೆನ್ಸ್
ಡಿಜಿಟ್‌ನ ಟು ವೀಲರ್ ಇನ್ಶೂರೆನ್ಸ್‌ಗೆ ಬದಲಾಗಿ.

Third-party premium has changed from 1st June. Renew now

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ಕನ್ಸ್ಯೂಮೆಬಲ್ ಕವರ್ ಆ್ಯಡ್-ಆನ್

ಬೈಕ್ ಇನ್ಶೂರೆನ್ಸ್‌ನಲ್ಲಿ ಕನ್ಸ್ಯೂಮೆಬಲ್ ಕವರ್ ಸೂಕ್ತವಾಗಿ ಕಾಣುತ್ತದೆ. ಏಕೆಂದರೆ ಇನ್ಶೂರೆನ್ಸ್ ಪೂರೈಕೆದಾರರು ಹೊಸದರೊಂದಿಗೆ ಕನ್ಸ್ಯೂಮೆಬಲ್ ವಸ್ತುಗಳ ರಿಪ್ಲೇಸ್‌ಮೆಂಟ್/ಮರುಪೂರಣ ವೆಚ್ಚವನ್ನು ಭರಿಸುತ್ತಾರೆ. ಪ್ರೈಮರಿ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುವ ಯಾವುದೇ ಅಪಾಯಗಳಿಂದಾಗಿ ನಿಮ್ಮ ಇನ್ಶೂರೆನ್ಸ್ ಮಾಡಲಾದ ವೆಹಿಕಲ್‌ಗೆ ಅಥವಾ ಅದರ ಬಿಡಿಭಾಗಗಳಿಗೆ ಭಾಗಶಃ ನಷ್ಟವಾದಾಗ ಇದನ್ನು ಮಾಡಲಾಗುತ್ತದೆ. ಇದು ಆ್ಯಡ್-ಆನ್ ಕವರ್ ಆಗಿದ್ದು, ಇದನ್ನು ಬೇಸ್ ಟು ವೀಲರ್ ಪಾಲಿಸಿಯ ಜೊತೆಗೆ ಪಡೆಯಬಹುದಾಗಿದೆ.   

ಕನ್ಸ್ಯೂಮೆಬಲ್ ಎನ್ನುವುದು ಅಪಘಾತದಲ್ಲಿ ಹಾನಿಗೊಳಗಾಗದ ಇನ್ಶೂರ್ಡ್ ವೆಹಿಕಲ್‌ನ ಐಟಂ ಅಥವಾ ವಸ್ತುವಾಗಿದ್ದು, ಅವು ಸೀಮಿತ ಅವಧಿಯೊಂದಿಗೆ ಬರುತ್ತವೆ ಅಥವಾ ವೆಹಿಕಲ್‌ನ ರಿಪೇರಿಯನ್ನು ಪೂರ್ಣಗೊಳಿಸಲು ಅವನ್ನು ಸಂಪೂರ್ಣವಾಗಿ/ಭಾಗಶಃ ಕನ್ಸ್ಯೂಮ್ ಮಾಡಿರುವುದರಿಂದ, ಅವುಗಳಿಗೆ ರಿಪ್ಲೇಸ್‌ಮೆಂಟ್‌ನ ಅಗತ್ಯವಿರುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. 

ಸೂಚನೆ: ಬೈಕ್ ಇನ್ಶೂರೆನ್ಸ್‌ನಲ್ಲಿನ ಕನ್ಸ್ಯೂಮೆಬಲ್ ಕವರ್ ಅನ್ನು ಡಿಜಿಟ್‌ನ ಟು ವೀಲರ್ ಪ್ಯಾಕೇಜ್ ಪಾಲಿಸಿ - ಭಾರತೀಯ ಇನ್ಶೂರೆನ್ಸ್ ರೆಗ್ಯುಲೆಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ (ಐ.ಆರ್.ಡಿ.ಎ.ಐ) ಯೊಂದಿಗೆ ಯುಐಎನ್ ನಂಬರ್ IRDAN158RP0006V01201718/A0019V01201718 ನೊಂದಿಗೆ ಕನ್ಸ್ಯೂಮೆಬಲ್ ಕವರ್ ಎಂದು ಸಲ್ಲಿಸಲಾಗಿದೆ.

ಟು ವೀಲರ್ ಇನ್ಶೂರೆನ್ಸ್‌ನಲ್ಲಿ ಕನ್ಸ್ಯೂಮೆಬಲ್ ಕವರ್‌ನ ಆ್ಯಡ್-ಆನ್ ಏನನ್ನು ಕವರ್ ಮಾಡುತ್ತದೆ

ಕನ್ಸ್ಯೂಮೆಬಲ್ ಕವರ್‌ನ ಆ್ಯಡ್-ಆನ್ ಈ ಕೆಳಗಿನವುಗಳ ಬಗ್ಗೆ ಕವರೇಜ್ ಅನ್ನು ನೀಡುತ್ತದೆ:

ಮರುಬಳಕೆಗೆ ಅನರ್ಹವೆಂದು ಪರಿಗಣಿಸಲಾದ ಎಲ್ಲ ರೀತಿಯ ಕನ್ಸ್ಯೂಮೆಬಲ್ ವಸ್ತುಗಳಿಗೆ, ಹೊಸ ಕನ್ಸ್ಯೂಮೆಬಲ್ ವಸ್ತುಗಳ ರಿಪ್ಲೇಸ್‌ಮೆಂಟ್‌/ಮರುಪೂರಣ ವೆಚ್ಚಗಳು.

ಇನ್ಶೂರ್ಡ್ ವೆಹಿಕಲ್‌ನ ರಿಪೇರಿಯನ್ನು ಪೂರ್ಣಗೊಳಿಸಲು, ರಿಪ್ಲೇಸ್‌ಮೆಂಟ್‌ನ ಅಗತ್ಯವಿರುವ ಕನ್ಸ್ಯೂಮೆಬಲ್ ವಸ್ತುಗಳು.

ಏನನ್ನು ಕವರ್ ಮಾಡುವುದಿಲ್ಲ?

  • ಪ್ರೈಮರಿ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪಟ್ಟಿ ಮಾಡಲಾದವುಗಳ ಜೊತೆಗೆ ಕನ್ಸ್ಯೂಮೆಬಲ್ ಕವರ್ ಈ ಕೆಳಗಿನ ವಿನಾಯಿತಿಗಳೊಂದಿಗೆ ಬರುತ್ತದೆ: 

  • ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು ವ್ಯಾಲಿಡ್ ಆಗಿಲ್ಲದಿದ್ದರೆ ಇನ್ಶೂರೆನ್ಸ್ ಪೂರೈಕೆದಾರರು ಕ್ಲೈಮ್ ಅನ್ನು ಸ್ವೀಕರಿಸುವುದಿಲ್ಲ. 

  • ವೆಹಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಮಾಡಿದ ಓನ್ ಡ್ಯಾಮೇಜ್ ಕ್ಲೈಮ್ ಅನ್ನು ಪಾವತಿಸಲು/ಅಡ್ಮಿಟ್ ಮಾಡದಿರುವಲ್ಲಿ ಯಾವುದೇ ಕ್ಲೈಮ್ ಅನ್ನು ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.

  • ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಭಾಗ/ಆ್ಯಕ್ಸೆಸರಿಗಳಿಗೆ ಸಂಬಂಧಿಸಿದ ಕನ್ಸ್ಯೂಮೆಬಲ್‌ಗಳು ನಮ್ಮಿಂದ ರಿಪ್ಲೇಸ್‌ಮೆಂಟ್‌ಗಾಗಿ ಅನುಮೋದಿಸದಿದ್ದರೆ, ಕ್ಲೈಮ್ ರಿಜಿಸ್ಟರ್ ಮಾಡಲು ಸಾಧ್ಯವಾಗುವುದಿಲ್ಲ. 

  • ಡಿಜಿಟ್‌ನ ಅಧಿಕೃತ ರಿಪೇರಿ ಶಾಪ್‌ನಲ್ಲಿ ನಿಮ್ಮ ವೆಹಿಕಲ್ ಅನ್ನು ರಿಪೇರಿ ಮಾಡಿಸದಿದ್ದಲ್ಲಿ, ಕ್ಲೈಮ್‌ಗಾಗಿ ಪಾವತಿಸಲು ಇನ್ಸೂರೆನ್ಸ್ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ.

  • ನೀವು ಯಾವ ನಷ್ಟಕ್ಕಾಗಿ ಕ್ಲೈಮ್ ಮಾಡುತ್ತೀರೋ, ಆ ನಷ್ಟವು ಬೇರೆ ಯಾವುದೇ ರೀತಿಯ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗಿದ್ದರೆ.

  • ರಚನಾತ್ಮಕ ಒಟ್ಟು ನಷ್ಟ/ವೆಹಿಕಲ್‌ನ ಒಟ್ಟು ನಷ್ಟದ ಸಂದರ್ಭದಲ್ಲಿ, ಕ್ಲೈಮ್ ಅನ್ನು ರಿಜಿಸ್ಟರ್ ಮಾಡಲಾಗುವುದಿಲ್ಲ. 

  • ರಿಪೇರಿ ಪ್ರಾರಂಭಿಸುವ ಮೊದಲು ಹಾನಿ/ನಷ್ಟವನ್ನು ಪರಿಶೀಲಿಸುವ ಮತ್ತು ನಿರ್ಣಯಿಸುವ ಅವಕಾಶವನ್ನು ನಮಗೆ ನೀಡದಿದ್ದರೆ, ಕ್ಲೈಮ್ ಅನ್ನು ರಿಜಿಸ್ಟರ್ ಮಾಡಲಾಗುವುದಿಲ್ಲ.  

  • ನಷ್ಟ ಸಂಭವಿಸಿದ 30 ದಿನಗಳ ನಂತರ ನಮಗೆ ತಿಳಿಸಿದರೆ, ಕ್ಲೈಮ್‌ಗಾಗಿ ಪಾವತಿಸಲು ನಾವು ಜವಾಬ್ದಾರರಾಗಿರುವುದಿಲ್ಲ. ಆದಾಗ್ಯೂ, ನೀವು ನಮಗೆ ಲಿಖಿತವಾಗಿ ಒದಗಿಸಿದ ವಿಳಂಬದ ಕಾರಣವನ್ನು ಆಧರಿಸಿ, ಅರ್ಹತೆಯ ಮೇಲೆ ಕ್ಲೈಮ್‌ ನೋಟಿಫಿಕೇಶನ್ ವಿಳಂಬವನ್ನು ನಾವು ನಮ್ಮ ವಿವೇಚನೆಯಿಂದ ಕ್ಷಮಿಸಬಹುದು.

ಕನ್ಸ್ಯೂಮೆಬಲ್ ಕವರ್ ಆ್ಯಡ್-ಆನ್ ಅನ್ನು ಪಡೆದುಕೊಳ್ಳುವುದರ ಪ್ರಯೋಜನಗಳು

ಕನ್ಸ್ಯೂಮೆಬಲ್ ಕವರ್‌ನ ಆ್ಯಡ್-ಆನ್ ಅನ್ನು ಖರೀದಿಸುವ ಮೂಲಕ, ನೀವು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು:

ವಿಶಾಲ ಕವರೇಜನ್ನು ಪಡೆಯಿರಿ

ಆ್ಯಡ್-ಆನ್ ಕವರ್, ಟು ವೀಲರ್ ವೆಹಿಕಲ್ ಅನ್ನು ನಿರ್ದಿಷ್ಟ ಹಾನಿಗಳಿಂದ ರಕ್ಷಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ

ಕನ್ಸ್ಯೂಮೆಬಲ್ ವಸ್ತುಗಳನ್ನು ದುರಸ್ತಿ ಮಾಡುವುದು ಸಾಕಷ್ಟು ದುಬಾರಿಯಲ್ಲದಿದ್ದರೂ, ಅದು ಖಂಡಿತವಾಗಿಯೂ ಬ್ಯಾಂಕ್ ಬ್ಯಾಲೆನ್ಸ್ ಕಡಿಮೆ ಮಾಡುತ್ತದೆ. ಆ್ಯಡ್-ಆನ್ ಅನ್ನು ಹೊಂದಿರುವುದು ಖಂಡಿತವಾಗಿಯೂ ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಬಹುದು.

ಮನಃಶಾಂತಿ

ಕನ್ಸ್ಯೂಮೆಬಲ್ ವಸ್ತುಗಳನ್ನು ರಿಪ್ಲೇಸ್ ಮಾಡುವಾಗ ಇನ್ಶೂರೆನ್ಸ್ ಪೂರೈಕೆದಾರರು ಖರ್ಚುಗಳನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿದಿರುವುದರಿಂದ, ಇದು ನಿಮ್ಮ ಮನಃಶಾಂತಿಯನ್ನು ಖಚಿತಪಡಿಸುತ್ತದೆ.

ಡಿಸ್‌ಕ್ಲೈಮರ್ - ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ, ಇಂಟರ್ನೆಟ್‌ನಾದ್ಯಂತ ಮತ್ತು ಡಿಜಿಟ್‌ನ ಪಾಲಿಸಿ ಪದಗಳ ಡಾಕ್ಯುಮೆಂಟ್‌ಗೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿದೆ. ಡಿಜಿಟ್ ಟು ವೀಲರ್ ಪ್ಯಾಕೇಜ್ ಪಾಲಿಸಿಯ ವಿವರವಾದ ಕವರೇಜ್, ಹೊರಗಿಡುವಿಕೆಗಳು ಮತ್ತು ಷರತ್ತುಗಳಿಗಾಗಿ - ಕನ್ಸ್ಯೂಮೆಬಲ್ ಕವರ್ (UIN: IRDAN158RP0006V01201718/A0015V01201718) ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ನೋಡಿ.

ಬೈಕ್ ಇನ್ಶೂರೆನ್ಸ್‌ನಲ್ಲಿ ಕನ್ಸ್ಯೂಮೆಬಲ್ ಕವರ್ ಆ್ಯಡ್-ಆನ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಈ ಆ್ಯಡ್-ಆನ್ ಕವರ್ ಅಡಿಯಲ್ಲಿ, ಕ್ಲೈಮ್‌ಗಾಗಿ ಅರ್ಹತೆ ಪಡೆಯಲು, ಡಿಜಿಟ್‌ನ ಅಧಿಕೃತ ರಿಪೇರಿ ಶಾಪ್‌ನಲ್ಲಿ ಹಾನಿಯನ್ನು ರಿಪೇರಿ ಮಾಡಿಸುವುದು ಅಗತ್ಯವೇ?

ಹೌದು, ಈ ಆ್ಯಡ್-ಆನ್ ಕವರ್ ಅಡಿಯಲ್ಲಿ ನಿಮ್ಮ ಕ್ಲೈಮ್ ಇತ್ಯರ್ಥವಾಗಲು, ನೀವು ಡಿಜಿಟ್‌ನ ಅಧಿಕೃತ ರಿಪೇರಿ ಶಾಪ್‌ನಲ್ಲಿ ಹಾನಿಯನ್ನು ರಿಪೇರಿ ಮಾಡಿಸಬೇಕಾಗುತ್ತದೆ. 

ಫ್ಯೂಯೆಲ್ ಅನ್ನು ಕನ್ಸ್ಯೂಮೆಬಲ್ ವಸ್ತುಗಳ ಅಡಿಯಲ್ಲಿ ಸೇರಿಸಲಾಗಿದೆಯೇ?

ಇಲ್ಲ, ಇದರಲ್ಲಿ ಫ್ಯೂಯೆಲ್ ಅನ್ನು ಸೇರಿಸಿಲ್ಲ. ಎಂಜಿನ್ ಆಯಿಲ್ ಮತ್ತು ಬ್ರೇಕ್ ಆಯಿಲ್ ಅನ್ನು ಕನ್ಸ್ಯೂಮೆಬಲ್ ವಸ್ತುಗಳ ಅಡಿಯಲ್ಲಿ ಸೇರಿಸಲಾಗಿದೆ.

ನಾನು ವ್ಯಾಲಿಡ್ ಆಗಿರುವ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುತ್ತಿದ್ದರೆ, ವೆಹಿಕಲ್‌ಗೆ ಉಂಟಾದ ಹಾನಿಗಾಗಿ ನಾನು ಕ್ಲೈಮ್ ಅನ್ನು ಸಲ್ಲಿಸಬಹುದೇ?

ಇಲ್ಲ, ಹಾನಿಯುಂಟಾದ ಸಮಯದಲ್ಲಿ ನೀವು ವ್ಯಾಲಿಡ್ ಆಗಿರುವ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುತ್ತಿದ್ದರೆ, ಇನ್ಶೂರೆನ್ಸ್ ಪೂರೈಕೆದಾರರಿಂದ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ.

ಕನ್ಸ್ಯೂಮೆಬಲ್ ಕವರ್‌ನ ಆ್ಯಡ್-ಆನ್ ಪಡೆಯಲು ನಾನು ಪ್ರತ್ಯೇಕ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕೇ?

ಇಲ್ಲ, ಪ್ರತ್ಯೇಕ ಡಾಕ್ಯುಮೆಂಟುಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಬೇಸ್ ಪಾಲಿಸಿಯೊಂದಿಗೆ ಆ್ಯಡ್ ಆನ್ ಅನ್ನು ಪಡೆಯಬಹುದು.

ನಾನು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಹೊಂದಿದ್ದೇನೆ; ನಾನು ಕನ್ಸ್ಯೂಮೆಬಲ್ ಕವರ್ ಆ್ಯಡ್-ಆನ್ ಅನ್ನು ಪಡೆಯಬಹುದೇ?

ಆ್ಯಡ್-ಆನ್ ಕವರ್‌ಗಳನ್ನು ಓನ್ ಡ್ಯಾಮೇಜ್ ವಿಭಾಗದ ಜೊತೆಗೆ ಮಾತ್ರ ಖರೀದಿಸಬಹುದು. ಆದ್ದರಿಂದ, ನೀವು ಕೇವಲ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಆ್ಯಡ್-ಆನ್ ಕವರ್‌ಗಳನ್ನು ಪಡೆಯಲು ಸಾಧ್ಯವಿಲ್ಲ.