ಹಳೆಯ ಬೈಕ್ ಇನ್ಶೂರೆನ್ಸ್

ಹಳೆಯ ಬೈಕ್‌ಗಾಗಿ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ

Third-party premium has changed from 1st June. Renew now

ಹಳೆಯ ಟು ವೀಲರ್ ಇನ್ಶೂರೆನ್ಸ್ ಕುರಿತು ವಿವರಿಸಲಾಗಿದೆ

ನಾವು ಎಷ್ಟೇ ಬೆಳೆದರೂ ಗತಕಾಲದ ಕೆಲವು ಕುರುಹುಗಳನ್ನು ನಾವು ಯಾವಾಗಲೂ ಪರಿಗಣಿಸುತ್ತೇವೆ. ನಮ್ಮ ಮನಸ್ಸು ಮತ್ತು ಹೃದಯದಲ್ಲಿ ಆಳವಾದ ಬ್ರ್ಯಾಂಡ್, ಕೆಲವು ಬೆಲೆಬಾಳುವ ವಸ್ತುಗಳು ತಮ್ಮ ಸ್ಥಾನವನ್ನು ಎಂದಿಗೂ ಕಳೆದು ಕೊಳ್ಳುವುದಿಲ್ಲ. ನೀವು ಖರೀದಿಸಿದ ಮೊದಲ ಬೈಕ್‌ ಕಂಡರೆ ನಿಮಗೆ ಯಾವಾಗಲೂ ಪ್ರೀತಿ. ನಿಮಗೆ ವಯಸ್ಸಾಗಿದೆ ಅಂತಲೋ ಅಥವಾ ಜೀವನಶೈಲಿಯಲ್ಲಿ ಬದಲಾಗಿದೆ ಎಂದೋ ನಿಮ್ಮ ಹಳೆಯ ಬೈಕ್ ಓಡಿಸುವುದನ್ನು ನಿಲ್ಲಿಸಿರಬಹುದು, ಹಾಗಂತ ನೀವದನ್ನು ಎಂದಿಗೂ ಮಾರಾಟ ಮಾಡಲು ಬಯಸುವುದಿಲ್ಲ.

ಬೈಕ್ ಹಳೆಯದಾಗಿದ್ದರೂ, ನೀವು  bike insurance ಅನ್ನು ಪಡೆಯಬಹುದು, ಏಕೆಂದರೆ ಯಾವುದಾದರೊಂದು ದಿನ ಆ ಹಳೆಯ ಬೈಕ್ ಅನ್ನು ಬಳಸಲು ನೀವು ಬಯಸಬಹುದು. ಹಾಗೇ ಇತ್ತೀಚಿನ ದಿನಗಳಲ್ಲಿ ಇನ್ಶೂರೆನ್ಸ್ ಸುಲಭವಾಗಿ ಲಭ್ಯವಿರುವಾಗ ಅನಗತ್ಯ ಚಿಂತೆ ಬೇಡಿ.

ಹಳೆಯ ಬೈಕ್ ಇನ್ಶೂರೆನ್ಸ್ ಎಂದರೇನು?

ಸರಿಯಾದ ರಿಪೇರಿ ಮಾಡದ ಹೊರತು ಹಳೆಯ ಟು ವೀಲರನ್ನು ಸುರಕ್ಷಿತವಾಗಿ ಓಡಿಸಲು ಸಾಧ್ಯವಿಲ್ಲ. ನಿಮ್ಮ ಬೈಕ್ 10 ವರ್ಷಗಳಿಗಿಂತ ಹಳೆಯದಾಗಿದ್ದರೆ, ಆಗ ನೀವು ಆ ಬೈಕ್ ಅನ್ನು ತುಂಬಾ ಹಳೆಯ ಬೈಕ್ ಎಂದು ಭಾವಿಸಬಹುದು. ನೀವು ಖರೀದಿಸಿದಾಗ ಕ್ಷಣದಿಂದ ಟು ವೀಲರ್ depreciation ಪ್ರಾರಂಭವಾಗುತ್ತದೆ.

ಹಳೆಯ ಬೈಕ್‌ಗೆ ಇನ್ಶೂರೆನ್ಸ್ ಖರೀದಿಸುವುದರಿಂದ, ಮೌಲ್ಯ ಕಳೆದುಕೊಂಡದಕ್ಕೆ ಮತ್ತೆ ಮೌಲ್ಯ ತಂದುಕೊಟ್ಟಂತಾಗುತ್ತದೆ. ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ Comprehensive bike insurance ಅಥವಾ Third-Party bike insurance ಆಗಿರಬಹುದು.

ಹಳೆಯ ಬೈಕ್‌ಗೆ ಇನ್ಶೂರೆನ್ಸ್ ಮಾಡಿಸುವುದು ಏಕೆ ಮುಖ್ಯ?

ನಿಮ್ಮ ಹಳೆಯ ವಾಹನವನ್ನು ಅಪಾಯದಿಂದ ರಕ್ಷಿಸಲು ನೀವು ಬೈಕ್‌ ಇನ್ಶೂರೆನ್ಸ್ ಖರೀದಿಸಬೇಕು:

  • ಬೆಂಕಿ ಅಥವಾ ಕೈ ಮೀರಿದ ಯಾವುದೇ ಘಟನೆಯಿಂದ ಹಾನಿ
  • ಕಳ್ಳತನ
  • ಒಂದು ವೇಳೆ ನಿಮ್ಮ ಬೈಕ್‌ ಅಪಘಾತ ಒಳಗೊಂಡಿದ್ದು ಇದರಿಂದ ಮೂರನೇ ವ್ಯಕ್ತಿಯ ಆಸ್ತಿಗೆ ಹಾನಿಯಾಗುತ್ತದೆ. ಇದರಿಂದ ಉಂಟಾಗುವ ತಲೆ ದಂಡ ತಪ್ಪಿಸುವ ಸಲುವಾಗಿ
  • ನಿಮ್ಮ ಬೈಕ್‌ ಒಳಗೊಂಡ ಅಪಘಾತದ ಪರಿಣಾಮವಾಗಿ ಯಾವುದೇ ಮೂರನೇ ವ್ಯಕ್ತಿಗೆ ಆದ ದೈಹಿಕ ಗಾಯದಿಂದಾಗಿ ಉದ್ಭವಿಸಬಹುದಾದ ಹೊಣೆಗಾರಿಕೆ

ಹಳೆಯ ಬೈಕ್‌ ಇನ್ಶೂರೆನ್ಸ್ ಮಾಡಿಸುವಾಗ ಯಾವುದರ ಕಡೆ ಗಮನ ಕೊಡಬೇಕು?

ನೀವು ಉತ್ತಮ ಮೊಬೈಲ್ ಫೋನ್ ಖರೀದಿಸಲು ಮಾರುಕಟ್ಟೆಯಲ್ಲಿದ್ದೀರಿ. ನೀವು ಇತ್ತೀಚಿನ ತಂತ್ರಜ್ಞಾನ, ಸ್ಟೊರೇಜ್ ಕೆಪಾಸಿಟಿ, ಕ್ಯಾಮೆರಾ ಕ್ವಾಲಿಟಿ ಮತ್ತು ಈ ರೀತಿಯ ಇತರ ವೈಶಿಷ್ಟ್ಯಗಳಿಗಾಗಿ ನೋಡುತ್ತೀರಿ. ಈಗ ನಿಮ್ಮ ಹಳೆಯ ಲ್ಯಾಪ್‌ಟಾಪ್ ಅನ್ನು ಹೊಸದಾಗಿ ರನ್ ಮಾಡಲು ನೀವು ಬಯಸುತ್ತೀರಿ ಎಂದಿಟ್ಟುಕೊಳ್ಳಿ. ಅದಕ್ಕೆ, ನೀವು ಏನು ಮಾಡುವಿರಿ? ಅದರ ಕೆಪಾಸಿಟಿಯನ್ನು ಹೆಚ್ಚಿಸಲು ಮತ್ತು ಅದರ ಪರ್ಫಾರ್ಮೆನ್ಸ್ ನ್ನು ಸುಧಾರಿಸಲು, ನೀವು ಅದರಲ್ಲಿ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಇನ್ಟಾಲ್ ಮಾಡಿಸುತ್ತೀರಿ.

ಮೇಲಿನವನ್ನು ನಾವು ಪರಿಗರಿಸಿದಂತೆಯೇ, ನೀವು ಹಳೆಯ ಬೈಕು ಖರೀದಿಸುವ ಮೊದಲು ಕೆಲವು ವಿಷಯಗಳನ್ನು ಗಮನಿಸಬೇಕು. ಅದರಂತೆ ನೀವು ಗಮನಿಸಬೇಕಾದ ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • ಕವರೇಜ್ ನೀಡಲಾಗಿದೆ: ಮಾರುಕಟ್ಟೆಯಲ್ಲಿ ಹಲವಾರು ಇನ್ಶೂರೆನ್ಸ್ ಕಂಪನಿಗಳಿವೆ. ನಿಮಗೆ ಯಾವ ಕವರ್ ಬೇಕು ಎಂದು ನೀವು ನಿರ್ಧರಿಸಿ ಅದಕ್ಕಾಗಿ ಹುಡುಕಬೇಕು. ಆನ್‌ಲೈನ್ ಸೌಲಭ್ಯದೊಂದಿಗೆ ಈಗ ಇನ್ಶೂರೆನ್ಸ್ ಹುಡುಕುವುದು ಬಲು ಸುಲಭ. ಇದರಿಂದ ಕೋಟ್ಸ್ ಮತ್ತು ಆಫರ್ ಗಳನ್ನು ಕಂಪೇರ್ ಮಾಡುವುದು ಸುಲಭ. ಇಡೀ ಜಗತ್ತೆ ನಮ್ಮ ಕೈಯಲ್ಲಿರುವಾಗ ನೀವು ಉತ್ತಮವಾದದನ್ನು ಅನ್ವೇಷಿ.
  • ಇನ್ಶೂರೆನ್ಸ್ ಕಂಪನಿಯ ಘೋಷಿತ ಮೌಲ್ಯ: ಪ್ರಸ್ತುತ ಪಾಲಿಸಿ ವರ್ಷಕ್ಕೆ IDV of your bike ನೀವು ಯಾವಾಗಲೂ ತಿಳಿದಿರಬೇಕು. ಅಲ್ಲದೆ, ಇನ್ಶೂರೆನ್ಸ್‌ಗಾಗಿ ನೀವು ಪಾವತಿಸುವ ಪ್ರೀಮಿಯಂ ಅನ್ನು ಅರ್ಥಮಾಡಿಕೊಳ್ಳಿ.
  • ಪಾಲಿಸಿ ಷರತ್ತುಗಳು: ನೀವು ಇನ್ಶೂರೆನ್ಸ್ ಕಂಪನಿಯನ್ನು ನಿರ್ಧರಿಸಿದಾಗ, ನೀವು ಅದರ ಪಾಲಿಸಿ ಷರತ್ತುಗಳನ್ನು ಓದಬೇಕು. ಏಕೆಂದರೆ ಷರತ್ತುಗಳಲ್ಲಿ ಎಲ್ಲೋ ಒಂದು ಕಡೆ ನಿಮಗೆ ತಿಯದಂತೆ ಕಡಿತಗಳನ್ನು ನಮೂದಿಸಬಹುದು.

ಹಳೆಯ ಬೈಕ್‌ಗೆ ಇನ್ಶೂರೆನ್ಸ್ ಮಾಡುವಾಗ ನೆನಪಿಡಬೇಕಾದ ವಿಷಯಗಳು

ಇನ್ಶೂರೆನ್ಸ್ ಖರೀದಿಸುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಈ ಚೆಕ್ ಲೀಸ್ಟ್ ಅನ್ನು ಗಮನಿಸಿ:

 

  • ಬೈಕ್‌ನ ಉಪಯುಕ್ತತೆ: ನಿಮ್ಮ ಬಳಿ ಹಳೆಯ ಬೈಕ ಇರಬಹುದು, ಆದರೆ ಆ ಬೈಕ್ ನ ಬಳಕೆ ಎಷ್ಟು ಮತ್ತು ಅದರ ಪ್ರಯೋಜನ ಏನು ಎಂಬುದನ್ನು ನಿಮಗೆ ಮಾತ್ರ ಚೆನ್ನಾಗಿ ತಿಳಿದಿಲುತ್ತದೆ. ಪ್ರತಿ ವರ್ಷ ಕಳೆದಂತೆ ಬೈಕ್‌ನ ಮೌಲ್ಯ ಕುಸಿಯುತ್ತಿದೆ. IDV ಕುರಿತು ಯೋಚಿಸಿ ಮತ್ತು ಅದನ್ನು ಯುಟಿಲಿಟಿಯೊಂದಿಗೆ ಹೊಂದಾಣಿಕೆ ಮಾಡಿ ಇದರಿಂದ ನೀವು ಯಾವ ಪ್ರಕಾರದ ಕವರ್ ಖರೀದಿಸಬೇಕು ಎಂದು ನಿರ್ಧರಿಸಬಹುದು. Comprehensive Insurance ಅನ್ನು ಖರೀದಿಸುವುದರಿಂದ ಸಿಗುವ ಪ್ರಯೋಜನಗಳನ್ನು ನೀವು ತಿಳಿದಿರಬೇಕು ಏಕೆಂದರೆ ಯಾವುದೇ ಸಂದರ್ಭದಲ್ಲಿ, ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಅತ್ಯಗತ್ಯವಾಗಿರುತ್ತದೆ.
  • ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ತಿಳಿಯಿರಿ: 25 ಕ್ಕೂ ಹೆಚ್ಚು general insurance companies in India. ಇವೆಲ್ಲವೂ ವಿಭಿನ್ನ ಕವರೇಜ್ ಮಿತಿಗಳು ಮತ್ತು ಷರತ್ತುಗಳೊಂದಿಗೆ ಮೋಟಾರ್ ಪಾಲಿಸಿಗಳನ್ನು ನೀಡುತ್ತವೆ. ನಿಮ್ಮ ಅವಶ್ಯಕತೆ ಏನೆಂದು ನೀವು ಎಚ್ಚರಿಕೆಯಿಂದ ದೃಶ್ಯೀಕರಿಸಬೇಕು ಮತ್ತು ಯಾರು ನಿಮಗೆ ಉತ್ತಮ ಪರಿಹಾರ ನೀಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.
  • ಹೋಲಿಕೆ ಕೇಳಿ: Motor insurance ಪಾಲಿಸಿಗಳನ್ನು ಇನ್ಶೂರೆನ್ಸ್ ಕಂಪನಿಗಳ ಏಜೆಂಟ್‌ಗಳ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಸರಿಯಾಗಿ ಉಲ್ಲೇಖಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಓದಿ ಅರ್ಥಮಾಡಿಕೊಳ್ಳಿ. ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಹೀಗೆ ಮಾಡುವುದು ಬುದ್ಧಿವಂತರ ಕೆಲಸ.
  • ಟು ವೀಲರ್ IDV: ಭಾರತದಲ್ಲಿ, ನೀವು ಒಂದು ವರ್ಷದ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪಡೆಯುತ್ತೀರಿ. ಪ್ರತಿ ವರ್ಷ, ವಾಹನದ IDV ಶೇಕಡಾವಾರು ಕಡಿಮೆಯಾಗುತ್ತದೆ. ನಿಮ್ಮ ವಾಹನವು ಹಳೆಯದಾದಾಗ, ನೀವು ಕಡಿಮೆ IDV ಮತ್ತು ಕಡಿಮೆ ಪ್ರೀಮಿಯಂ ಅನ್ನು ಹೊಂದಿರುತ್ತೀರಿ. ಇದು ಆ ನಿರ್ದಿಷ್ಟ ವರ್ಷಕ್ಕೆ ಪರಿಗಣಿಸಲಾಗುವ ಬೈಕಿನ ಮೌಲ್ಯವನ್ನು ಸರಳವಾಗಿ ಸೂಚಿಸುತ್ತದೆ.
  • ಡೆಪ್ರಿಸಿಯೇಷನ್ (ಮೌಲ್ಯ ಕಡಿಮೆಯಾಗುವುದು): ಆದ್ದರಿಂದ ನಿಮ್ಮ ಹಳೆಯ ಬೈಕ್‌ಗೆ ಪಾಲಿಸಿಯನ್ನು ಖರೀದಿಸುವ ಮೊದಲು, ಮೌಲ್ಯಕ್ಕೆ ಅನ್ವಯವಾಗುವ ಡೆಪ್ರಿಸಿಯೇಷನ್ ಏನೆಂದು ನಿರ್ಧರಿಸಿ ಅಥವಾ ತಿಳಿದುಕೊಳ್ಳಿ. ಯಾವುದೇ ಅಪಘಾತದ ಸಂದರ್ಭದಲ್ಲಿ, ಮರುಪಾವತಿಯು ವಾಹನಕ್ಕೆ ಅನ್ವಯವಾಗುವ ಡೆಪ್ರಿಸಿಯೇಷನ್ ಅನ್ನು ಆಧರಿಸಿರುತ್ತದೆ. ಬೈಕಿನ ವಯಸ್ಸು ಹೆಚ್ಚಾದಂತೆ ಅದು ಹಳೆಯದಾಗುತ್ತದೆ ಎಂದರ್ಥ, ಹಾಗೇ ಡೆಪ್ರಿಸಿಯೇಷನ್ ಕೂಡ ಶೇಕಡಾವಾರು ಹೆಚ್ಚಾಗುತ್ತದೆ.

ವಾಹನದ ವಯಸ್ಸು ಸವಕಳಿ
1 ವರ್ಷ < ವಯಸ್ಸು < 2 ವರ್ಷಗಳು 10%
2 ವರ್ಷ < ವಯಸ್ಸು < 3 ವರ್ಷಗಳು 15%
3 ವರ್ಷ < ವಯಸ್ಸು < 4 ವರ್ಷಗಳು 25%
4 ವರ್ಷ < ವಯಸ್ಸು < 5 ವರ್ಷಗಳು 35%
5 ವರ್ಷ < ವಯಸ್ಸು < 10 ವರ್ಷಗಳು 40%
10 ವರ್ಷ < ವಯಸ್ಸು 50%

  • ಆಡ್-ಆನ್‌ಗಳನ್ನು ಪರಿಶೀಲಿಸಿ: ಯಾವುದೇ ಟು ವೀಲರ್ ವಾಹನದ ಮಾಲೀಕರು get some add-on covers ಆಯ್ಕೆಗಳನ್ನು ಹೊಂದಿರಬಹುದು. ಆದರೆ ಆಡ್-ಆನ್ ಕವರ್‌ಗಳನ್ನು 15 ವರ್ಷಗಳವರೆಗೆ ವಾಹನಕ್ಕೆ ಸೇರಿಸಬಹುದು. ನೀವು ಪ್ಯಾಸೆಂಜರ್ ಕವರ್, Zero Dep Cover, ಮೆಡಿಕಲ್ ಕವರ್ ಮತ್ತು ಆಕ್ಸೆಸರೀಸ್ ಕವರ್‌ನಂತಹ ಆಡ್-ಆನ್‌ಗಳನ್ನು ಆಯ್ಕೆ ಮಾಡಬಹುದು.

 ಈ ಕವರ್‌ಗಳನ್ನು ಪಡೆಯಲು ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ನಿಮ್ಮಿಂದ ಪಾವತಿಸಲು ಸಾಧ್ಯವಾಗುವಂತಹ ಸಣ್ಣ ಪ್ರಮಾಣದ ಕ್ಲೈಮ್ ಗಳನ್ನು ಆದಷ್ಟು ನೀವು ಅವೈಡ್ ಮಾಡಬೇಕು. ನಿಮ್ಮ ಹಳೆ ಬೈಕ್ ನ ಮೌಲ್ಯವು ಈಗಾಗಲೇ ಕಡಿಮೆ ಇರುವುದರಿಂದ ಕಡಿಮೆ ಪ್ರೀಮಿಯಂನಲ್ಲಿ ನಿಮ್ಮ ಹಳೆಯ ಬೈಕಿಗೆ ಇನ್ಶೂರೆನ್ಸ್ ಸಿಗುತ್ತದೆ.

ಹಳೆಯ ಬೈಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು/ನವೀಕರಿಸುವುದು ಹೇಗೆ?

ನೀವು 10 ವರ್ಷಕ್ಕಿಂತ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ನಿಮ್ಮ ಆಪ್ತ ಸ್ನೇಹಿತರಿಂದ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಬೈಕ್ ಸವಾರಿ ಮಾಡುವ ಉತ್ಸಾಹದಲ್ಲಿದ್ದೀರಿ ಆದರೆ ನೀವು ಅದರ ಮೇಲೆ ಸವಾರಿ ಪ್ರಾರಂಭಿಸುವ ಮೊದಲು, ಇನ್ಶೂರೆನ್ಸ್ ಪೆಡಯಲು ಬಯಸುತ್ತೀರಿ.

ಸವಾಲುಗಳನ್ನು ಎದುರಿಸಲು ನೀವು ಬುದ್ಧಿವಂತಿಕೆ ಮತ್ತು ಸುರಕ್ಷತೆಯನ್ನು ಆರಿಸಿಕೊಳ್ಳುವುದು ಉತ್ತಮ. ಆದರೆ ನೀವು ಹಳೆಯ ಬೈಕು ಖರೀದಿಸುವಾಗ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ವಿಧಾನ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಇದಕ್ಕಾಗಿ ನೀವು ಈ ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು:

  • ನೀವು ಈಗಾಗಲೇ ಇರುವ ಇನ್ಶೂರೆನ್ಸ್ ಜೊತೆಗೆ ಮುಂದುವರಿಯಬಹುದು ಆದರೆ ಪಾಲಿಸಿಯಲ್ಲಿ ಹೆಸರಿನ ಬದಲಾವಣೆಗಾಗಿ ವಿನಂತಿಯನ್ನು ಮಾಡಬೇಕು. ಇನ್ಶೂರೆನ್ಸ್ ಕಂಪನಿಯು ನಿಮಗೆ ಅನುಮೋದನೆಯನ್ನು ನೀಡುತ್ತದೆ. ಇದಕ್ಕೆ ನೀವು ಮಾಲೀಕತ್ವದ ವರ್ಗಾವಣೆಯ ಪುರಾವೆಯನ್ನು ನೀವು ಸಲ್ಲಿಸಬೇಕಾಗುತ್ತದೆ.
  • ಮತ್ತು ಎರಡನೇ ಆಯ್ಕೆ, ನಿಮ್ಮ ಸ್ವಂತ ಆಯ್ಕೆಯ ಇನ್ಶೂರೆನ್ಸ್ ಮಾಡಿಸಿರುವವರಿಂದ ನೀವು ಹೊಸ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಈ ಸಂದರ್ಭದಲ್ಲಿ, ಪಾಲಿಸಿ ನೀಡಲಾಗುವ ಬೈಕ್ ಪೋಸ್ಟ್‌ಗೆ ಸರ್ವೆ ಏರ್ಪಡಿಸಲಾಗುತ್ತದೆ.

4 ಸರಳ ಹಂತಗಳಲ್ಲಿ ಹಳೆಯ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿ/ನವೀಕರಿಸಿ

  • ಹಂತ 1 - ಬೈಕ್ ಇನ್ಶೂರೆನ್ಸ್ ಪೇಜ್ ಗೆ ಹೋಗಿ, ನಿಮ್ಮ ವಾಹನದ ತಯಾರಿಕೆ, ಮಾದರಿ, ವೆರಿಯಂಟ್, ರಿಜಿಸ್ಟ್ರೇಷನ್ ದಿನಾಂಕವನ್ನು ಭರ್ತಿ ಮಾಡಿ. 'ಗೆಟ್ ಕೋಟ್' ಅನ್ನು ಒತ್ತಿ ಮತ್ತು ನಿಮ್ಮ ಪ್ಲಾನ್ ಅನ್ನು ಆಯ್ಕೆ ಮಾಡಿ.
  • ಹಂತ 2 - ಥರ್ಡ್ ಪಾರ್ಟಿ ಲಯಬಿಲಿಟಿ ಮಾತ್ರ ಅಥವಾ ಸ್ಟ್ಯಾಂಡರ್ಡ್ ಪ್ಯಾಕೇಜ್ನ ಡುವೆ ಆಯ್ಕೆಮಾಡಿ.
  • ಹಂತ 3 - ನಿಮ್ಮ ಹಿಂದಿನ ಇನ್ಶೂರೆನ್ಸ್ ಪಾಲಿಸಿಯ ವಿವರಗಳನ್ನು ನಮಗೆ ನೀಡಿ - ಎಕ್ಸ್ ಪೈರಿ ಡೇಟ್, ಕಳೆದ ವರ್ಷದಲ್ಲಿ ಮಾಡಿದ ಕ್ಲೈಮ್, ಯಾವುದೇ ಕ್ಲೈಮ್ ಬೋನಸ್ ಗಳಿಸಿಲ್ಲ.
  • ಹಂತ 4 - ನಿಮ್ಮ ಪ್ರೀಮಿಯಂಗೆ ಕೋಟ್ ಅನ್ನು ಪಡೆಯುತ್ತೀರಿ. ಒಂದು ವೇಳೆ ನೀವು ಸ್ಟ್ಯಾಂಡರ್ಡ್ ಪ್ಲಾನ್ ಆಯ್ಕೆ ಮಾಡಿಕೊಂಡಿದ್ದಲ್ಲಿ IDV ಸೆಟ್ ಮಾಡುವ ಮೂಲಕ ಆಡ್-ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ಮತ್ತಷ್ಟು ಕಸ್ಟಮೈಸ್ ಮಾಡಬಹುದು. ಮುಂದಿನ ಪುಟದಲ್ಲಿ ನೀವು ಅಂತಿಮ ಪ್ರೀಮಿಯಂ ಅನ್ನು ನೋಡುತ್ತೀರಿ.

ಹಳೆಯ ಬೈಕ್ ಇನ್ಶೂರೆನ್ಸ್‌ಗಾಗಿ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಯಾವುದೇ ವಾಹನದ ಪ್ರೀಮಿಯಂ ಅನ್ನು ಅದರ IDV, ಹಿಂದಿನ ಕ್ಲೈಮ್, ಅಳವಡಿಸಲಾದ ಬಿಡಿಭಾಗಗಳು ಸೇರಿದಂತೆ ಇನ್ನಿತರೆ ಯಾವುದಾದರೂ ಅಂಶಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಹಳೆಯ ಬೈಕ್‌ ಇನ್ಶೂರೆನ್ಸ್ ಪ್ರೀಮಿಯಂ ಈ ಅಂಶಗಳನ್ನು ಆಧರಿಸಿರುತ್ತದೆ:

  • ಬೈಕ್‌ನ ಎಂಜಿನ್ ಸಾಮರ್ಥ್ಯ.
  • ನಿಮ್ಮ ಬೈಕ್‌ನ ವಯಸ್ಸು.
  • ಬೈಕ್‌ನ ಇನ್ಶೂರೆನ್ಸ್ ಒಂದಿರುವವ ಘೋಷಿಸಿದ ಮೌಲ್ಯ.
  • ಬೈಕ್‌ನ ನೋ ಕ್ಲೈಮ್ ಬೋನಸ್

 

ಪರಿಶೀಲಿಸಿ: ಆಡ್-ಆನ್‌ಗಳೊಂದಿಗೆ ಥರ್ಡ್ ಪಾರ್ಟಿ ಅಥವಾ ಸಮಗ್ರ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಲು Bike Insurance Calculator ಬಳಸಿ.

Digit ಮೂಲಕ ಹಳೆಯ ಟು ವೀಲರ್ ಇನ್ಶೂರೆನ್ಸ್ ಅನ್ನು ಏಕೆ ಆರಿಸಬೇಕು?