ಆಗಿನ ದಿನದಲ್ಲಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು 24-ಗಂಟೆಗಳನ್ನು ಮೀರಿದ ಚಿಕಿತ್ಸೆ ಮತ್ತು ಹಾಸ್ಪಿಟಲೈಸೇಷನ್ ಗಳನ್ನು ಮಾತ್ರ ಕವರ್ ಮಾಡುತ್ತಿದ್ದವು. ಆದರೆ, ಮೆಡಿಕಲ್ ಪ್ರಗತಿ ಮತ್ತು ತಂತ್ರಜ್ಞಾನಕ್ಕೆ ಧನ್ಯವಾದಗಳು. ಇವುಗಳ ಕಾರಣದಿಂದಬಇಂದು ಅನೇಕ ಚಿಕಿತ್ಸೆಗಳನ್ನು ಮೊದಲಿಗಿಂತ ಕಡಿಮೆ ಸಮಯದಲ್ಲಿ ಮಾಡಬಹುದು.
ಇವುಗಳಲ್ಲಿ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ವಿಕಿರಣ (ರೇಡಿಯೇಶನ್) ಚಿಕಿತ್ಸೆ, ಡಯಾಲಿಸಿಸ್, ಹೈಮೆನೆಕ್ಟಮಿ ಮತ್ತು ಆರ್ತ್ರೋಸ್ಕೊಪಿಕ್ ಮೊಣಕಾಲಿನ ಆಸ್ಪಿರೇಷನ್ ಮುಂತಾದ ಚಿಕಿತ್ಸೆಗಳು ಸೇರಿವೆ.
ಇಂತಹ ಅನೇಕ ಚಿಕಿತ್ಸೆಗಳನ್ನು 24-ಗಂಟೆಗಳ ಒಳಗೆ ಮಾಡಿ ಮುಗಿಸಬಹುದಾಗಿದೆ ಮತ್ತು ಇದರ ಅಗತ್ಯ ಕೇವಲ ಹೆಚ್ಚಿನ ರೋಗಿಗಳಿಗೆ ಮಾತ್ರವಲ್ಲದೆ, ಇದು ಅಧಿಕ ಆರೋಗ್ಯ ವೆಚ್ಚವನ್ನು ಕವರ್ ಮಾಡುವುದರಿಂದ, ಐ.ಆರ್.ಡಿ.ಎ.ಐ (ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ) ಸಹ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಇದನ್ನು ಪರಿಚಯಿಸಿದೆ.
ಅದಕ್ಕಾಗಿ ದೇವರಿಗೆ ಧನ್ಯವಾದಗಳು! ಆ ಮೂಲಕ, ಡೇಕೇರ್ ಪ್ರೊಸೀಜರ್ ಗಳು ಮೆಡಿಕಲ್ ಪ್ರಗತಿಯಿಂದಾಗಿ 24-ಗಂಟೆಗಳಿಗಿಂತ ಕಡಿಮೆ ಅವಧಿಯ ಹಾಸ್ಪಿಟಲೈಸೇಷನ್ ಅಗತ್ಯವಿರುವ ಚಿಕಿತ್ಸೆಗಳನ್ನು ಸೂಚಿಸುತ್ತವೆ.
ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಯಾರಾದರೂ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾದರೆ, ಅವರು ಆಸ್ಪತ್ರೆಯಲ್ಲಿ ಆರೈಕೆಯನ್ನು ಪಡೆಯುತ್ತಾರೆ ಮತ್ತು ನಂತರ ಅದೇ ದಿನದೊಳಗೆ ಡಿಸ್ಚಾರ್ಜ್ ಆಗುತ್ತಾರೆ.