ನಿಮ್ಮ ಹೆಲ್ತ್ ಇನ್ಶೂರೆನ್ಸ್ನ ವಿಷಯ ಬಂದಾಗ ನೀವು ತಿಳಿದುಕೊಳ್ಳಬೇಕಾದ ಹಲವು ಪ್ರಮುಖ ಪದಗಳಿವೆ. ಮತ್ತು, ಪಾಲಿಸಿಯನ್ನು ಖರೀದಿಸುವ ಮೊದಲು, ನೀವು ಈ ಪದಗಳನ್ನು ಮತ್ತು ಇವುಗಳು ನಿಮಗೆ ಮತ್ತು ನಿಮ್ಮ ಆರೋಗ್ಯದ ಅಗತ್ಯತೆಗಳಿಗೆ ಎಷ್ಟು ಮಹತ್ವದ್ದಾಗಿವೆ ಎಂದು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕಾಗಿದೆ.
ಹೆಲ್ತ್ ಇನ್ಶೂರೆನ್ಸ್ ನ ವಿಷಯ ಬಂದಾಗ, ನೀವು "ವೇಟಿಂಗ್ ಪೀರಿಯಡ್" ಅಥವಾ "ಸರ್ವೈವಲ್ ಪೀರಿಯಡ್" ಪದಗಳನ್ನು ಕೇಳಬಹುದು. ಇವುಗಳಿಂದ ನೀವು ಗೊಂದಲಕ್ಕೊಳಗಾಗಿದ್ದರೆ ಚಿಂತಿಸಬೇಡಿ, ನೀವು ಒಬ್ಬಂಟಿಯಾಗಿಲ್ಲ. ಈ ಪದಗಳನ್ನು ಮತ್ತು ಅವು ಹೇಗೆ ಪರಸ್ಪರ ಭಿನ್ನವಾಗಿವೆ ಎಂಬುದನ್ನು ನೋಡೋಣ.
ವೇಟಿಂಗ್ ಪೀರಿಯಡ್ ನಿಮ್ಮ ಪಾಲಿಸಿಯ ಪ್ರಾರಂಭದಿಂದ, ಅದರ ಕೆಲವು ಪ್ರಯೋಜನಗಳನ್ನು ಬಳಸಲು ನೀವು ಕಾಯಬೇಕಾದ ಸಮಯವಾಗಿದೆ. ಇದು ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಿಗೆ ಅನ್ವಯಿಸುತ್ತದೆ ಮತ್ತು ಹಲವಾರು ವಿಭಿನ್ನ ವೇಟಿಂಗ್ ಪೀರಿಯಡ್ ಗಳಿವೆ:
ಈ ವೇಟಿಂಗ್ ಪೀರಿಯಡ್ ಗಳು ಒಂದು ಇನ್ಶೂರೆನ್ಸ್ ಕಂಪೆನಿಯಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತವೆ. ಅಲ್ಲದೆ, ಅಪಘಾತಗಳು ಸ್ವಾಭಾವಿಕವಾಗಿ ಅನಿರೀಕ್ಷಿತವಾಗಿರುವುದರಿಂದ, ಹೆಲ್ತ್ ಇನ್ಶೂರರ್ ಗಳು ಅಪಘಾತದಿಂದಾಗಿ ಆಸ್ಪತ್ರೆ ದಾಖಲಾತಿಗೆ ಬಂದಾಗ ಯಾವುದೇ ವೇಟಿಂಗ್ ಪೀರಿಯಡ್ ಅನ್ನು ಲೆಕ್ಕಿಸಲಾಗುವುದಿಲ್ಲ.
ಕಾಯುವ ಅವಧಿಗಿಂತ ಭಿನ್ನವಾಗಿ, ಸರ್ವೈವಲ್ ಪೀರಿಯಡ್ ಕೇವಲ ಕ್ರಿಟಿಕಲ್ ಇಲ್ನೆಸ್ ಪ್ಲಾನ್ಗಳ ಒಂದು ಭಾಗವಾಗಿದೆ. ಇದು ಕ್ರಿಟಿಕಲ್ ಇಲ್ನೆಸ್ ರೋಗನಿರ್ಣಯದ ನಂತರ ನೀವು ಬದುಕುಳಿಯಲು ಅಗತ್ಯವಿರುವ ಅವಧಿಯನ್ನು ಸೂಚಿಸುತ್ತದೆ (ಉದಾಹರಣೆಗೆ ಮೂತ್ರಪಿಂಡ ಅಥವಾ ಹೃದಯ ವೈಫಲ್ಯ, ಕ್ಯಾನ್ಸರ್, ಇತ್ಯಾದಿ). ಅನಾರೋಗ್ಯ ಮತ್ತು ಇನ್ಶೂರರ್ ಅನ್ನು ಅವಲಂಬಿಸಿ ಈ ಅವಧಿಯು 14 ರಿಂದ 90 ದಿನಗಳ ಮಧ್ಯ ಎಷ್ಟು ದಿನ ಬೇಕಾದರೂ ಇರುತ್ತದೆ.
ಈ ಅವಧಿಯ ನಂತರ ಮಾತ್ರ ನೀವು ಕ್ರಿಟಿಕಲ್ ಇಲ್ನೆಸ್ ಕವರ್ನಲ್ಲಿ ಉಲ್ಲೇಖಿಸಿರುವಂತೆ ನಿಮ್ಮ ಇನ್ಶೂರರ್ ನಿಂದ ಒಟ್ಟು ಮೊತ್ತ ಅಥವಾ ಲಂಪ್ಸಮ್ ಅನ್ನು ಪಡೆಯಬಹುದು. ತೀವ್ರ ಅನಾರೋಗ್ಯದ ಮೊದಲ ರೋಗನಿರ್ಣಯದ ಆಧಾರದ ಮೇಲೆ ಈ ಅವಧಿಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಇದು ನಿಯಮಿತ ವೇಟಿಂಗ್ ಪೀರಿಯಡ್ ಜೊತೆಗೆ ಇರುತ್ತದೆ.
ಸರ್ವೈವಲ್ ಪೀರಿಯಡ್ ಅ ನಂತರ ಪಡೆದ ಒಟ್ಟು ಮೊತ್ತವನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು, ವೈದ್ಯಕೀಯ ಚಿಕಿತ್ಸೆಗೆ ಅಥವಾ ವೈಯಕ್ತಿಕ ವೆಚ್ಚಗಳಿಗೆ.
ಏಕೆಂದರೆ ಹೆಲ್ತ್ ಇನ್ಶೂರರ್ ಗಳು ಮರಣದ ಪ್ರಯೋಜನವನ್ನು ಒದಗಿಸುವುದಿಲ್ಲ, ಅಂದರೆ ಪಾಲಿಸಿದಾರ ವ್ಯಕ್ತಿಯು ಸರ್ವೈವಲ್ ಪೀರಿಯಡ್ ಅ ಮೊದಲು ತೀವ್ರ ಅನಾರೋಗ್ಯದ ಕಾರಣದಿಂದಾಗಿ ಮರಣಹೊಂದಿದರೆ, ಇನ್ಶೂರೆನ್ಸ್ ಕಂಪನಿಯು ಯಾವುದೇ ಪಾವತಿಗಳನ್ನು ಮಾಡಬೇಕಾಗಿರುವುದಿಲ್ಲ.
ಮಾನದಂಡಗಳು |
ಸರ್ವೈವಲ್ ಪೀರಿಯಡ್ |
ವೇಟಿಂಗ್ ಪೀರಿಯಡ್ |
ಇದು ಯಾವುದಕ್ಕೆ ಅನ್ವಯಿಸುತ್ತದೆ? |
ಕ್ರಿಟಿಕಲ್ ಇಲ್ನೆಸ್ ಪಾಲಿಸಿಗಳಿಗೆ ಅನ್ವಯಿಸುತ್ತದೆ |
ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಅನ್ವಯಿಸುತ್ತದೆ (ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಯೋಜನೆಗಳು ಸೇರಿದಂತೆ) |
ಏನಿದು? |
ನೀವು ನಿರ್ಣಾಯಕ ಕಾಯಿಲೆಯಿಂದ ಬಳಲುತ್ತಿರುವುದರ ರೋಗನಿರ್ಣಯವಾದ ನಂತರ ನೀವು ವಿತ್ತೀಯ ಪ್ರಯೋಜನವನ್ನು ಪಡೆಯುವ ಮೊದಲು ನೀವು ಬದುಕುಳಿಯಬೇಕಾದ ಅವಧಿ ಇದಾಗಿದೆ |
ಇದು ಇನ್ಶೂರೆನ್ಸ್ ಪಾಲಿಸಿಯ ಕೆಲವು ಅಥವಾ ಎಲ್ಲಾ ಪ್ರಯೋಜನಗಳಿಗಾಗಿ ಕ್ಲೈಮ್ ಮಾಡುವ ಮೊದಲು ನೀವು ಕಾಯಬೇಕಾದ ಸಮಯವಾಗಿದೆ. |
ಈ ಅವಧಿ ಎಷ್ಟು ದೀರ್ಘವಾಗಿರುತ್ತದೆ? |
ಸರ್ವೈವಲ್ ಪೀರಿಯಡ್ 14 ರಿಂದ 90 ದಿನಗಳ ಮಧ್ಯ ಎಷ್ಟು ದಿನ ಬೇಕಾದರೂ ಇರಬಹುದು. |
30 ದಿನಗಳ ಆರಂಭಿಕ ಕಾಯುವ ಅವಧಿ ಮತ್ತು ಪೂರ್ವ ಅಸ್ತಿತ್ವದಲ್ಲಿರುವ ಅಥವಾ ನಿರ್ದಿಷ್ಟ ಪರಿಸ್ಥಿತಿಗಳಿಗಾಗಿ 2 ರಿಂದ 4 ವರ್ಷಗಳ ವೇಟಿಂಗ್ ಪೀರಿಯಡ್ ಗಳಿವೆ. |
ಈ ಅವಧಿಯು ಏನನ್ನು ಅವಲಂಬಿಸಿರುತ್ತದೆ? |
ಸರ್ವೈವಲ್ ಪೀರಿಯಡ್ ತೀವ್ರ ಅನಾರೋಗ್ಯ ಮತ್ತು ಇನ್ಶೂರರ್ ಅನ್ನು ಅವಲಂಬಿಸಿರುತ್ತದೆ. |
ವೇಟಿಂಗ್ ಪೀರಿಯಡ್ ಕಾಯಿಲೆ ಮತ್ತು ಇನ್ಶೂರರ್ ಅನ್ನು ಅವಲಂಬಿಸಿರುತ್ತದೆ |
ಕೊನೆಯಲ್ಲಿ, ವೇಟಿಂಗ್ ಪೀರಿಯಡ್ ಮತ್ತು ಸರ್ವೈವಲ್ ಪೀರಿಯಡ್ ಗಳೆರಡೂ ಇನ್ಶೂರೆನ್ಸ್ ಕಂಪೆನಿಯನ್ನು ಅನಗತ್ಯ ಅಪಾಯಗಳಿಂದ ಸುರಕ್ಷಿತವಾಗಿಡಲು ಇವೆಯಾದರೂ, ಅವುಗಳು ಒಂದೇ ರೀತಿ ಇಲ್ಲ.
ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ವೇಟಿಂಗ್ ಪೀರಿಯಡ್ ಅನ್ನು ಹೊಂದಿದ್ದರೂ, ಸರ್ವೈವಲ್ ಪೀರಿಯಡ್ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಇದರೊಂದಿಗೆ, ವೇಟಿಂಗ್ ಪೀರಿಯಡ್ ಗಳು ಸಾಮಾನ್ಯವಾಗಿ ಸರ್ವೈವಲ್ ಪೀರಿಯಡ್ ಗಳಿಗಿಂತ ದೀರ್ಘವಾಗಿರುತ್ತವೆ.
ಹೆಲ್ತ್ ಇನ್ಶೂರೆನ್ಸ್ ಅಥವಾ ಕ್ರಿಟಿಕಲ್ ಇಲ್ನೆಸ್ ಪ್ಲಾನ್ಗಳನ್ನು ಖರೀದಿಸುವಾಗ ನೀವು ಸರಿಯಾದ ಆಯ್ಕೆಯನ್ನು ಮಾಡಲು ಈ ಎರಡೂ ಏನೆಂದು ತಿಳಿಯುವುದು ಮುಖ್ಯವಾಗಿದೆ. ಈ ರೀತಿಯಾಗಿ, ನೀವು ಕಡಿಮೆ ಸರ್ವೈವಲ್ ಪೀರಿಯಡ್ ಅಥವಾ ವೇಟಿಂಗ್ ಪೀರಿಯಡ್ ಅನ್ನು ಹೊಂದಿರುವ ಯೋಜನೆಯನ್ನು ಆಯ್ಕೆ ಮಾಡಬಹುದು ಮತ್ತು ಇದರಿಂದ ನೀವು ಪಾಲಿಸಿಯ ಕವರೇಜ್ ಅನ್ನು ಬೇಗನೇ ಪಡೆಯಬಹುದು.