ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್

ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಗಿ

ಭಾರತದಲ್ಲಿನ ಪೋಷಕರ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಮಾಹಿತಿ .

ವಯಸ್ಸಾದ ಜನರಿಗೆ, ಆರೋಗ್ಯ ಸೌಲಭ್ಯಗಳಿಗಾಗಿ ಗಣನೀಯ ವೆಚ್ಚಗಳ ಅವಶ್ಯಕತೆಯಿರುತ್ತದೆ. ಹಾಗಾಗಿ ಇದು  ಕುಟುಂಬಕ್ಕಾಗಿ ದುಡಿಯುವ ಮನೆ ಯಜಮಾನನ ಮೇಲೆ ಸತತ ಹೊರೆಯನ್ನು ಉಂಟುಮಾಡುತ್ತದೆ.

ಆರೋಗ್ಯ ರಕ್ಷಣೆಗೆ ಸಬ್ಸಿಡಿ ನೀಡಲು, ಸರ್ಕಾರವು ದೇಶದ ಆರೋಗ್ಯ ಕ್ಷೇತ್ರಕ್ಕೆ ಸರಿಸುಮಾರು 1.58 ಟ್ರಿಲಿಯನ್‌ ರೂಗಳನ್ನು ನಿಗದಿಪಡಿಸಿದ್ದರೂ, ಗುಣಮಟ್ಟದ ಚಿಕಿತ್ಸೆಯು ಹೆಚ್ಚಿನ ವೆಚ್ಚಗಳಿಗೆ ಕಾರಣವಾಗುತ್ತದೆ.

ಭಾರತದಲ್ಲಿ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳುವುದು, ಅನಗತ್ಯ ವೆಚ್ಚಗಳನ್ನು ನಿಭಾಯಿಸುವ ಸುರಕ್ಷಿತ ಮಾರ್ಗವಾಗಿದೆ. ಏಕೆಂದರೆ ಇದು ವೃದ್ಧಾಪ್ಯದ ಕಾರಣದಿಂದ ಉಂಟಾಗುವ ಎಲ್ಲಾ ವೈದ್ಯಕೀಯ ಕಾಯಿಲೆಗಳನ್ನು ಸರಿದೂಗಿಸಲು ಸಮಗ್ರ ಪ್ರಯೋಜನಗಳನ್ನು ವಿಸ್ತರಿಸುತ್ತದೆ.

ಹೆಲ್ತ್ ಇನ್ಶೂರೆನ್ಸ್ ಕವರ್ ಎನ್ನುವುದು ನಮ್ಮ ಅಗತ್ಯತೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಯಾರಾದರೂ ಅವರ ವಯಸ್ಸಾದ ಪೋಷಕರ ಆರೋಗ್ಯ ರಕ್ಷಣೆಗೆ ಹಣಕಾಸು ಒದಗಿಸಬೇಕಾದರೆ ಹೆಲ್ತ್ ಇನ್ಶೂರೆನ್ಸ್ ಕವರ್ ಮುಖ್ಯ.

ಪೋಷಕರ ಹೆಲ್ತ್ ಇನ್ಶೂರೆನ್ಸಿನ ವಿಧಗಳು

ಹೆಲ್ತ್ ಇನ್ಶೂರೆನ್ಸ್ ವಿಷಯಕ್ಕೆ ಬಂದರೆ, ಪೋಷಕರು ಸೇರಿದಂತೆ ನಿಮ್ಮ ಕುಟುಂಬದ ಚಿಕಿತ್ಸಾ ವೆಚ್ಚವನ್ನು ಭರಿಸುವ ಮೂರು ವಿಧದ ಕವರ್‌ಗಳನ್ನು ನೀವು ಪಡೆದುಕೊಳ್ಳಬಹುದು. ಇವು:

1. ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್

ಈ ರೀತಿಯ ಇನ್ಶೂರೆನ್ಸ್ ಪಾಲಿಸಿಯು ಇನ್ಶೂರೆನ್ಸ್ ಪಡೆದುಕೊಂಡವರಿಗೆ ಮಾತ್ರ ರಕ್ಷಣೆ ನೀಡುತ್ತದೆ. ಈ ಯೋಜನೆಯು, ಪೋಷಕರನ್ನು ಅಂದರೆ ನಿಮ್ಮ ಕುಟುಂಬದ ಮೊದಲ ಸದಸ್ಯರನ್ನು ಒಳಗೊಂಡಿರಬಹುದು,

ಇಲ್ಲಿ, ಇನ್ಶೂರೆನ್ಸ್ ಪಡೆದವರು ಫ್ಲೋಟಿಂಗ್ ಮೊತ್ತದ ಬದಲಿಗೆ ಸ್ಥಿರವಾದ ಇನ್ಶೂರೆನ್ಸ್ ಮೊತ್ತದ ಪ್ರಯೋಜನವನ್ನು ಆನಂದಿಸಬಹುದು. ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಪೋಷಕರನ್ನು ಒಳಗೊಂಡಿದ್ದರೆ, ಅದು ಹೆಚ್ಚು ಅನುಕೂಲಕರವಾಗಿರುತ್ತದೆ.

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

2. ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಗಿಂತ ಭಿನ್ನವಾಗಿ, ಈ ಯೋಜನೆಯಡಿಯಲ್ಲಿ ಸಂಪೂರ್ಣ ಇನ್ಶೂರೆನ್ಸ್ ಮೊತ್ತವು, ಯೋಜನೆಯ ಅಡಿಯಲ್ಲಿ ಇನ್ಶೂರೆನ್ಸ್ ಪಡೆಯುವ ಪ್ರತಿಯೊಬ್ಬ ಸದಸ್ಯರಿಗೂ ವಿಸ್ತರಿಸುತ್ತದೆ . ನಿಮ್ಮ ಪೋಷಕರಿಗಾಗಿ, ನೀವು ಫ್ಯಾಮಿಲಿ ಫ್ಲೋಟರ್ ಕವರ್ ಅನ್ನು ಹುಡುಕುತ್ತಿದ್ದರೆ, ಅದು ಬಹುಶಃ ಒಳ್ಳೆಯ ಉಪಾಯ ಅಲ್ಲ. ಏಕೆಂದರೆ, ಒಂದು ವರ್ಷದಲ್ಲಿ ಈ ಕವರ್‌ನ ಅಡಿಯಲ್ಲಿ ಮಲ್ಟಿಪಲ್ ಕ್ಲೇಮ್‌ಗಳನ್ನು ಮಾಡಿದಾಗ, ಮುಂದಿನ ಕ್ಲೇಮ್‌ಗಳನ್ನು ಮಾಡುವ ಇನ್ಶೂರೆನ್ಸ್ ಹೋಲ್ಡರ್ ಈ ಕವರ್‌ನ ಅಡಿಯಲ್ಲಿ ಚಿಕ್ಕ ಇನ್ಶೂರೆನ್ಸ್ ಮೊತ್ತದೊಂದಿಗೆ ಕ್ಲೇಮ್ ಮಾಡಬೇಕು.

ಇದಲ್ಲದೆ, ಭಾರತದಲ್ಲಿ ಪೋಷಕರಿಗಾಗಿ ಹಲವಾರು ರೀತಿಯ ಇತರ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಿವೆ, ಇದು ಪ್ರಾಥಮಿಕವಾಗಿ, 50 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕಾಡುವ ಹಲವಾರು ಖಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಆದ್ದರಿಂದ, ಚಿಕಿತ್ಸೆಯ ವಿಷಯ ಬಂದರೆ, ನಿಮ್ಮ ಪೋಷಕರು ಸರಿಯಾದ ಆಯ್ಕೆ ಆಗಿದ್ದಾರೆ.

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

ನಿರೀಕ್ಷಿಸಿ! ನಿಮ್ಮ ಪೋಷಕರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಅವರಿಗಾಗಿ ನೀವು ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಸಹ ಪಡೆಯಬಹುದು.

ಇದು ಏನನ್ನು ಒಳಗೊಳ್ಳುತ್ತದೆ?

3. ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್

ಇಂತಹ ಇನ್ಶೂರೆನ್ಸ್ ಪಾಲಿಸಿಯನ್ನು ವಯಸ್ಸಾದ ವ್ಯಕ್ತಿಗಳ ಎಲ್ಲಾ ವೈದ್ಯಕೀಯ ಅವಶ್ಯಕತೆಗಳಿಗೆ ಸರಿಹೊಂದುವಂತೆ, ಬೇರೆ ಖಾಯಿಲೆಗಳನ್ನು ಒಳಗೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಗಣನೀಯವಾದ ಕ್ಲೇಮ್ ವಿತರಣೆಯ ಮೂಲಕ, ಈ ವರ್ಗದ ಅಡಿಯಲ್ಲಿ ಬರುವ ಎಲ್ಲಾ ವ್ಯಕ್ತಿಗಳ ಅವಶ್ಯಕತೆಗಳಿಗೆ ಸರಿಹೊಂದುವಂತೆ ಇದು ಪ್ರಯೋಜನಕಾರಿಯಾಗಿದೆ.

ಇದಲ್ಲದೆ, ಹೋಮ್ ಹಾಸ್ಪಿಟಲೈಸೆಷನ್, ಆಯುಷ್ ಕವರೇಜ್ ಇತ್ಯಾದಿ ಪ್ರಯೋಜನಗಳೊಂದಿಗೆ ಈ ಇನ್ಶೂರೆನ್ಸ್ ಪಾಲಿಸಿಯು, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಚಿಕಿತ್ಸಾ ವೆಚ್ಚವನ್ನು ಸರಿದೂಗಿಸಲು ಸರಿಯಾದ ಆಯ್ಕೆಯಾಗಿದೆ.

ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ಭಾರತದಲ್ಲಿ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ಗಮನಿಸಬೇಕಾದ ವಿಷಯಗಳು

ದೇಶಾದ್ಯಂತ ಇನ್ಶೂರೆನ್ಸ್ ಪೂರೈಕೆದಾರರು ವಿವಿಧ ಪ್ರಯೋಜನಗಳನ್ನು ಒದಗಿಸುತ್ತಾರೆ. ಅದು ನಿಮ್ಮ ಪೋಷಕರಿಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಪಡೆಯಲು ಇರುವ ಆರ್ಥಿಕ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದಕ್ಕಾಗಿ, ನಿಮಗೆ ಸಮಗ್ರ ಕವರೇಜ್ ಪಡೆಯಲು ಅನುವು ಮಾಡಿಕೊಡುತ್ತದೆ.

ನಿಮ್ಮ ಹೆಲ್ತ್‌ಕೇರ್ ಯೋಜನೆಯಿಂದ ನಿಮ್ಮ ಪ್ರಯೋಜನಗಳನ್ನು ನೀವು ಗರಿಷ್ಠಗೊಳಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಲು, ಅದು ಈ ಕೆಳಗಿನ ವೆಚ್ಚಗಳನ್ನು ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸುವುದು ನಿಮಗೆ ಮುಖ್ಯವಾಗಿದೆ.

1. ವ್ಯಾಪ್ತಿ

  • ಅಪಘಾತ ಮತ್ತು ಅನಾರೋಗ್ಯದ ಚಿಕಿತ್ಸಾ ವೆಚ್ಚಗಳು ( Accidental & illness Hospitalization Expenses) -

ಅಪಘಾತಗಳು ಅಥವಾ ಅನಾರೋಗ್ಯಗಳು ಅನಿರೀಕ್ಷಿತ ಘಟನೆಗಳಾಗಿದ್ದು, ನೀವು ಕಾಂಪ್ರೆಹೆನ್ಸಿವ್ ಹೆಲ್ತ್   ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿಲ್ಲದಿದ್ದರೆ ಇಂತಹ ಘಟನೆಗಳು ದೊಡ್ಡ ಹಣಕಾಸಿನ ಹೊಣೆಗಾರಿಕೆಗಳೊಂದಿಗೆ ಬರಬಹುದು. ಅಪಘಾತ ಅಥವಾ ಅನಾರೋಗ್ಯದ ಪರಿಣಾಮವಾಗಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವ ಇನ್ಶೂರೆನ್ಸ್ ಪೂರೈಕೆದಾರರನ್ನು ನೋಡಿ.

  • ಚಿಕಿತ್ಸಾ ಪೂರ್ವ ಮತ್ತು ನಂತರದ ವೆಚ್ಚಗಳು - ನಿಮ್ಮ ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ವೆಚ್ಚಗಳ ಜೊತೆಗೆ, ಆಸ್ಪತ್ರೆಗೆ ಸೇರಿಸುವ ಪೂರ್ವದ ಮತ್ತು ನಂತರದ ವೆಚ್ಚಗಳನ್ನು ಒಳಗೊಳ್ಳುವ ಪಾಲಿಸಿಯನ್ನು ನೋಡಿ.

ಉದಾಹರಣೆಗೆ,  ಡೈಗ್ನೋಸ್ಟಿಕ್ ಪರೀಕ್ಷೆಗಳು, ವೈದ್ಯರ ಶುಲ್ಕಗಳು, ಶಸ್ತ್ರಚಿಕಿತ್ಸಾ ಅನುಸರಣೆಗಳು, ಒಪಿಡಿ(OPD) ಭೇಟಿಗಳು ಇತ್ಯಾದಿಗಳಿಗೆ ತಗಲುವ ವೆಚ್ಚಗಳನ್ನು ಸಮಗ್ರ ಪಾಲಿಸಿಯು ಒಳಗೊಂಡಿರಬೇಕು.

  • ವಾರ್ಷಿಕ ಆರೋಗ್ಯ ತಪಾಸಣಾ ವೆಚ್ಚಗಳು -ವಯಸ್ಸಾದವರ ವಾರ್ಷಿಕ ಆರೋಗ್ಯ ತಪಾಸಣೆಗಳು, ಆದರ್ಶ ಆರೋಗ್ಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾಗಿವೆ. ಏಕೆಂದರೆ ಇದು ಮಾರಣಾಂತಿಕ ಅಸ್ವಸ್ಥತೆಯೊಂದಿಗೆ ರೋಗನಿರ್ಣಯ ಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿ ಭರಿಸಲಾದ ಎಲ್ಲಾ ವೆಚ್ಚಗಳನ್ನು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಬಹುದೇ ಎಂದು ಪರಿಶೀಲಿಸಿ.
  • ಪ್ರಮುಖ ಶಸ್ತ್ರಚಿಕಿತ್ಸೆಗಳು -ಬ್ಯಾರಿಯಾಟ್ರಿಕ್ ಆಪರೇಷನ್ ಸೇರಿದಂತೆ ಯಾವುದೇ ಪ್ರಮುಖ ಶಸ್ತ್ರಚಿಕಿತ್ಸೆಗಳು ಹೆಚ್ಚಿನ ಮೌಲ್ಯದ ವೆಚ್ಚಗಳನ್ನು ಹೊಂದಿವೆ. ಅಂತಹ ಶುಲ್ಕಗಳು ನಿಮ್ಮ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೂಲಕ ಕವರ್ ಆಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಅಂತಹ ಚಿಕಿತ್ಸೆಗೆ ಬಂದಾಗ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ನೀವು ನಿಮ್ಮ ಪೋಷಕರನ್ನು ದೇಶದ ಪ್ರೀಮಿಯಂ ಆಸ್ಪತ್ರೆಗಳಲ್ಲಿ ಸೇರಿಸಬಹುದು ಮತ್ತು ಪ್ರಖ್ಯಾತ ಶಸ್ತ್ರಚಿಕಿತ್ಸಕರು ಕೇಸನ್ನು ನಿಭಾಯಿಸಬಹುದು.
  • ಮನೋವೈದ್ಯಕೀಯ ಖಾಯಿಲೆಯ ಚಿಕಿತ್ಸೆ- ಮನೋವೈದ್ಯಕೀಯ ಚಿಕಿತ್ಸೆಯು ನಿಧಾನವಾಗಿ ಸಾಮಾಜಿಕ ಕಳಂಕಗಳನ್ನು ನಿವಾರಿಸುತ್ತಿದೆ ಮತ್ತು ದೇಶದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಹಾಗೂ ಪ್ರಮುಖ ಇನ್ಶೂರೆನ್ಸ್ ಕಂಪನಿಗಳು ತಮ್ಮ ಪಾಲಿಸಿಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿವೆ. ಆದ್ದರಿಂದ, ನೀವು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ ವೆಚ್ಚವನ್ನು ಕವರ್ ಮಾಡುವ ಪಾಲಿಸಿಯನ್ನು ಆಯ್ದುಕೊಳ್ಳಿ.
  • ರೂಮ್ ಬಾಡಿಗೆಗೆ ಮಿತಿ ಇಲ್ಲ - ದೇಶಾದ್ಯಂತ ಪ್ರೀಮಿಯಂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕೆಂದು ಬಯಸಿದರೆ, ಕೊಠಡಿ ಬಾಡಿಗೆಯು ಚಿಂತೆಗೆ ಕಾರಣವಾಗಬಹುದು. ಕೊಠಡಿ ಬಾಡಿಗೆಗೆ ಯಾವುದೇ ಮಿತಿಯಿಲ್ಲದಿದ್ದರೆ, ನಿಮ್ಮ ಪೋಷಕರು ದೀರ್ಘಾವಧಿಯವರೆಗೆ ಆಸ್ಪತ್ರೆಗೆ ದಾಖಲಾಗಬೇಕಾದರೆ ನೀವು ಸುಲಭವಾಗಿ ಖಾಸಗಿ ಕೊಠಡಿಯನ್ನು ಖರೀದಿಸಬಹುದು. ಆದ್ದರಿಂದ, ಆಸ್ಪತ್ರೆಯ ಕೊಠಡಿ ಬಾಡಿಗೆಗೆ ಮಿತಿಯಿಲ್ಲದ  ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಪಡೆದುಕೊಳ್ಳುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

2. ಗಂಭೀರ ಅನಾರೋಗ್ಯದ ಪ್ರಯೋಜನಗಳು

ತೀವ್ರತರದ ಹೃದಯದ ತೊಂದರೆಗಳು, ಕ್ಯಾನ್ಸರ್, ಕೊನೆಯ ಹಂತದ ಲಂಗ್ಸ್ ಮತ್ತು ಲಿವರ್ ವೈಫಲ್ಯ, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿಗಳು ಗಂಭೀರ ಖಾಯಿಲೆಗಳೆಂದು ಪರಿಗಣಿಸಲ್ಪಟ್ಟಿವೆ. ಅಂತಹ ವೈದ್ಯಕೀಯ ಪರಿಸ್ಥಿತಿಗಳ, ಚಿಕಿತ್ಸೆಯು ಸರಾಸರಿ 1 ಲಕ್ಷ ರೂಗಳಿಂದ ಪ್ರಾರಂಭವಾಗುತ್ತದೆ ಮತ್ತು 10 ಲಕ್ಷ ರೂಗಳು ಅಥವಾ ಇನ್ನೂ ಹೆಚ್ಚು ಹಣ ಬೇಕಾಗುತ್ತದೆ. 

ಹೆಚ್ಚಿನ ಇನ್ಶೂರೆನ್ಸ್ ಮೊತ್ತದ ಖಾತರಿಯೊಂದಿಗೆ ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ವಿಸ್ತರಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗಂಭೀರ ಅನಾರೋಗ್ಯದ ಕವರ್ ಅನ್ನು ಆರಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಇಂತಹ ಸನ್ನಿವೇಶಗಳಲ್ಲಿ ಆಸ್ಪತ್ರೆಯ ಎಲ್ಲ ವೆಚ್ಚಗಳು ಮತ್ತು ಬಿಡುಗಡೆಯ ನಂತರದ ವೆಚ್ಚಗಳು ಶಸ್ತ್ರಚಿಕಿತ್ಸಾ ಶುಲ್ಕಗಳೊಂದಿಗೆ ಕವರ್ ಆಗುತ್ತವೆ. 

ಇಂತಹ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ 30 ದಿನಗಳ ಲಾಕ್-ಇನ್ ಅವಧಿಯು ಆಕ್ಟಿವೇಶನ್'ಗೆ ಸಂಬಂಧಿಸಿದೆ. ಈ ಸಮಯದಲ್ಲಿ ಯಾವುದೇ ಕ್ಲೇಮ್‌ಗಳನ್ನು ಮಾಡಲಾಗುವುದಿಲ್ಲ.

3. ಕೈಗೆಟುಕುವಿಕೆ

ನಿಮ್ಮ ಪೋಷಕರಿಗಾಗಿ ನೀವು ಆಯ್ಕೆ ಮಾಡುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಪಾವತಿಸುವ ಪ್ರೀಮಿಯಂಗಳು, ಕೈಗೆಟುಕುವಂತಹವು ಮತ್ತು ನಿಮ್ಮ ಹಣಕಾಸಿನ ಮೇಲೆ ಹೊರೆಯಾಗದಂತಹವು ಎಂಬುದನ್ನು ಖಚಿತಪಡಿಸಿಕೊಳ್ಳಿ.

ವಿವಿಧ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಗಳು ನೀಡುವ ಕವರೇಜ್, ಇನ್ಶೂರೆನ್ಸ್ ಮೊತ್ತ ಮತ್ತು ಪ್ರೀಮಿಯಂ ಅನ್ನು ಹೋಲಿಕೆ ಮಾಡಿ ಮತ್ತು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಿ.

ಹೆಲ್ತ್ ಇನ್ಶೂರೆನ್ಸ್ ಹೋಲಿಕೆ ಬಗ್ಗೆ ಇನ್ನಷ್ಟು ತಿಳಿಯಿರಿ.

4. ಆದಾಯ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡಿ

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒದಗಿಸಲಾದ ಪ್ರಮುಖ ಪ್ರಯೋಜನಗಳಲ್ಲಿ, ನಗದು ರಹಿತ ಚಿಕಿತ್ಸೆಯು ಒಂದು.

ಈ ಪ್ರಯೋಜನದೊಂದಿಗೆ, ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಚಿಕಿತ್ಸಾ ಶುಲ್ಕವನ್ನು ನೇರವಾಗಿ ನಿಮ್ಮ ಪೋಷಕರು ದಾಖಲಾದ ನೆಟ್‌ವರ್ಕ್ ಆಸ್ಪತ್ರೆಗೆ ಪಾವತಿಸುತ್ತಾರೆ. ಆದ್ದರಿಂದ, ಯೋಜನೆಯ ಅಡಿಯಲ್ಲಿ ಗರಿಷ್ಠ ನೆಟ್‌ವರ್ಕ್ ಆಸ್ಪತ್ರೆಗಳನ್ನು ಹೊಂದಿರುವ ಪಾಲಿಸಿಗಾಗಿ ನೋಡಿ.

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:

5. 0% ಸಹ-ಪಾವತಿ ಆಯ್ಕೆ

ನಿಮ್ಮ ಚಿಕಿತ್ಸೆಯ ವೆಚ್ಚದ ಶೇಕಡಾವಾರು ಮೊತ್ತವನ್ನು ನೀವು ಪಾವತಿಸುವಂತಹ ಇನ್ಶೂರೆನ್ಸ್ ಪಾಲಿಸಿಗಳು ಇವೆ.  ಉಳಿದ ವೆಚ್ಚವನ್ನು ಇನ್ಶೂರೆನ್ಸ್ ಪೂರೈಕೆದಾರರು ಕವರ್ ಮಾಡುತ್ತಾರೆ. ನಿಮ್ಮ ಪೋಷಕರಿಗೆ ಮಾಡಲಾದ ಚಿಕಿತ್ಸಾ ವೆಚ್ಚಗಳು ಸಾಕಷ್ಟು ಹೆಚ್ಚಾಗಿರುವುದರಿಂದ, ಸಹ-ಪಾವತಿಯ ಷರತ್ತು ಇಲ್ಲದ ಪಾಲಿಸಿಯನ್ನು ಹುಡುಕುವುದು ಉತ್ತಮ.

0% ಸಹ-ಪಾವತಿಯೊಂದಿಗೆ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ಹುಡುಕುತ್ತಿರುವಿರಾ? ಡಿಜಿಟ್ ಇನ್ಶೂರೆನ್ಸ್ ನೀಡುವ ಯೋಜನೆಗಳನ್ನು ಪರಿಶೀಲಿಸಿ.

6. ಕ್ಲೇಮ್ ಸೆಟ್ಲ್‌ಮೆಂಟ್ ಅನುಪಾತ

ಕ್ಲೇಮ್ ಸೆಟ್ಲ್‌ಮೆಂಟ್ ಅನುಪಾತವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ಒಟ್ಟು ಕ್ಲೇಮ್‌ಗಳ ಸಂಖ್ಯೆಗೆ ವಿರುದ್ಧವಾಗಿ ಇತ್ಯರ್ಥಪಡಿಸಿದ ಕ್ಲೇಮ್‌ಗಳ ಸಂಖ್ಯೆಯನ್ನು ಸೂಚಿಸುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಕ್ಲೇಮ್ ಅನ್ನು ತಿರಸ್ಕರಿಸಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೈ ಕ್ಲೇಮ್ ಸೆಟ್ಲ್‌ಮೆಂಟ್ ಒಂದು ಪ್ರಮುಖ ನಿಗಾವಹಿಸುವ ಅಂಶವಾಗಿದೆ.

7. ಸಮಗ್ರ ಪೂರ್ವ ಅಸ್ತಿತ್ವದಲ್ಲಿರುವ ಅನಾರೋಗ್ಯದ ಕವರೇಜ್

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ನೀಡುವ ಹೆಚ್ಚಿನ 'ಪೂರ್ವ ಅಸ್ತಿತ್ವದಲ್ಲಿರುವ ಅನಾರೋಗ್ಯದ' ಕವರೇಜ್ ಪ್ರಯೋಜನಗಳೊಂದಿಗೆ, ನೀವು ಕ್ಲೇಮ್ ಮಾಡುವ ಮೊದಲು ನೀವು ವೇಟಿಂಗ್ ಪೀರಿಡ್ ಅನ್ನು ಪೂರೈಸಬೇಕು. ಆದ್ದರಿಂದ ಪೂರ್ವ ಅಸ್ತಿತ್ವದಲ್ಲಿರುವ ಅನಾರೋಗ್ಯದ ಕವರೇಜ್‌ಗಾಗಿ ಕನಿಷ್ಠ ವೇಟಿಂಗ್ ಪೀರಿಡ್ ಅನ್ನು ಹೊಂದಿರುವ ಪಾಲಿಸಿಗಳನ್ನು ಹುಡುಕುವುದು ಸೂಕ್ತವಾಗಿದೆ.

ನಿಮ್ಮ ಪಾಲಿಸಿಯು ನಿಮಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮನ್ನು ಕವರ್ ಮಾಡುವ ಖಾಯಿಲೆಗಳ ಸಂಖ್ಯೆಯನ್ನು ಸಹ ನೋಡಬೇಕು.

8. ಆಡ್-ಆನ್ ಪ್ರಯೋಜನಗಳು

  • ಝೋನ್ ಅಪ್‌ಗ್ರೇಡ್ ಆಡ್-ಆನ್
  • ಡೈಲಿ ಹಾಸ್ಪಿಟಲ್ ಕ್ಯಾಶ್  ಆಡ್-ಆನ್ ಕವರ್
  • ಆಯುರ್ವೇದ, ಯೋಗ, ಯುನಾನಿ, ನ್ಯಾಚುರೋಪತಿ ಚಿಕಿತ್ಸೆ ಇತ್ಯಾದಿಗಳಿಗೆ ತಗಲುವ ವೆಚ್ಚಗಳನ್ನು ಒಳಗೊಂಡಿರುವ ಪರ್ಯಾಯ ಚಿಕಿತ್ಸಾ ಆರೈಕೆ ಕವರ್ (ಆಯುಷ್).

ಡಿಸ್ಕ್ಲೈಮರ್: ಪ್ರಸ್ತುತ,  ಡಿಜಿಟ್‌ನಲ್ಲಿ ನಾವು ನಮ್ಮ ಹೆಲ್ತ್  ಪ್ಲ್ಯಾನ್ ಜೊತೆ  ಆಯುಷ್ ಪ್ರಯೋಜನವನ್ನು ನೀಡುತ್ತಿಲ್ಲ.

 

9. ಸುಲಭ ಕ್ಲೇಮ್ ಪ್ರಕ್ರಿಯೆ

ಸಾಮಾನ್ಯವಾಗಿ, ಕ್ಲೇಮ್‌ಗಳನ್ನು ಇತ್ಯರ್ಥಪಡಿಸಲು ಇನ್ಶೂರೆನ್ಸ್ ಪೂರೈಕೆದಾರರು ಎರಡು ಆಯ್ಕೆಗಳನ್ನು ನೀಡುತ್ತಾರೆ. ಅವುಗಳೆಂದರೆ :

  • ನಗದು ರಹಿತ ಕ್ಲೇಮ್‌ಗಳಿಗೆ ಪರಿಹಾರ
  • ಮಾಡಲಾದ ಕ್ಲೇಮ್‌ಗಳಿಗೆ ಮರುಪಾವತಿ

ನೀವು ಆಯ್ಕೆ ಮಾಡಿದ ಆಯ್ಕೆಗಳ ಹೊರತಾಗಿಯೂ, ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯು ಕಷ್ಟಕರವಲ್ಲ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಕ್ಲೇಮ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುವುದರಿಂದ, ಕ್ಲೇಮ್‌ ಮಾಡುವುದು ಮೊದಲಿಗಿಂತ ಹೆಚ್ಚು ಸುಲಭವಾಗಿದೆ.

10. ಕಂಪನಿಯ ಖ್ಯಾತಿಯನ್ನು ಪರಿಶೀಲಿಸಿ

ಅಂತಿಮವಾಗಿ, ನಿಮ್ಮ ಹೆಲ್ತ್ ಕೇರ್ ಯೋಜನೆಗಾಗಿ ನೀವು ಉತ್ತಮ ಸೇವೆಗಳನ್ನು ಪಡೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಸೈಟ್‌ಗಳು, Google ವಿಮರ್ಶೆಗಳು ಇತ್ಯಾದಿಗಳ ಮೂಲಕ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರರಿಗೆ ಬಂದಿರುವ ಗ್ರಾಹಕರ ವಿಮರ್ಶೆಗಳು ಮತ್ತು ಪ್ರಶಂಸಾಪತ್ರಗಳನ್ನು ಪರಿಶೀಲಿಸಲು ಮರೆಯಬೇಡಿ.

ಪೋಷಕರ ಹೆಲ್ತ್ ಇನ್ಶೂರೆನ್ಸ್ ಯಾವುದನ್ನು ಒಳಗೊಂಡಿರುವುದಿಲ್ಲ?

ನಿಮ್ಮ ಇನ್ಶೂರೆನ್ಸ್ ಕವರ್ ಮೂಲಕ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ನೀವು ಸಾಕಷ್ಟು ಜ್ಞಾನ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ನಿಮ್ಮ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು  ಸಾಮಾನ್ಯವಾಗಿ ಒಳಗೊಂಡಿರದ ಕೆಲವು ವಿಷಯಗಳು ಇಲ್ಲಿವೆ -

  • ಅಸ್ತಿತ್ವದಲ್ಲಿರುವ ಖಾಯಿಲೆಗಳ  ವೈದ್ಯಕೀಯ ಶುಲ್ಕಗಳು ಬಾಕಿಯಿದ್ದರೆ, ವೈಟಿಂಗ್ ಪಿರೇಡ್ ಮುಗಿಯುವವರೆಗೆ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಚಿಕಿತ್ಸೆ ನೀಡಲಾಗುವುದಿಲ್ಲ.
  • ವೈದ್ಯರ ಶಿಫಾರಸು/ಸೂಚನೆಯಿಲ್ಲದೆ ನಿಮ್ಮ ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರೆ, ನಿಮ್ಮ ಇನ್ಶೂರೆನ್ಸ್ ಕವರ್'ನ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳನ್ನು ಪಡೆಯಲು ನೀವು ಅರ್ಹರಾಗಿರುವುದಿಲ್ಲ.

ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ನಿಮಗೇಕೆ ಬೇಕು?

ಸಮಗ್ರ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸಬಹುದು:

  • ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಕಡಿಮೆ ಮೆಟಬಾಲಿಸಮ್ ದರದಿಂದಾಗಿ, ವಯಸ್ಸಾದವರು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ ಮತ್ತು ಆಗಾಗ ಅಸಮರ್ಪಕ ಅಂಗಗಳ ಕಾರ್ಯನಿರ್ವಹಣೆಗೆ ಕಾರಣವಾಗುತ್ತಾರೆ. ಈ ನಿಟ್ಟಿನಲ್ಲಿ ಹಣಕಾಸಿನ ವೆಚ್ಚಗಳನ್ನು ತಗ್ಗಿಸಲು, ನಿಮ್ಮ ಪೋಷಕರಿಗೆ ನೀವು ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಪಡೆದುಕೊಳ್ಳಬೇಕು
  • ಇನ್ಶೂರೆನ್ಸ್ ಮೊತ್ತವನ್ನು ಬಳಸಿಕೊಂಡು ನಿಮ್ಮ ಪೋಷಕರ ಯಾವುದೇ ವೈದ್ಯಕೀಯ ಸ್ಥಿತಿಯ ಚಿಕಿತ್ಸೆಗಾಗಿ, ಗುಣಮಟ್ಟದ ಚಿಕಿತ್ಸೆಯನ್ನು ವಿತರಿಸಲಾಗಿದೆ ಎಂದು ಖಚಿತಪಡಿಸಿಕೊಳುತ್ತೀರಿ.
  • ಅನೇಕ ಸಂಸ್ಥೆಗಳು ಇನ್ಶೂರೆನ್ಸ್ ಮೊತ್ತವನ್ನು ರೀಫಿಲ್ ಮಾಡುವ ಆಫರ್ ನೀಡುತ್ತವೆ. ಅದರಲ್ಲಿ ಖಾಲಿಯಾದ ಮೊತ್ತವನ್ನು ವರ್ಷಕ್ಕೊಮ್ಮೆ ಮರುಪೂರಣಗೊಳಿಸಬಹುದು. ಇದು ನಿಮಗೆ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.
  • ಹಣಕಾಸಿನ ಹೊರೆಯಿಲ್ಲದ ಕಾರಣದಿಂದ ಮಾನಸಿಕ ಒತ್ತಡವು ಕಡಿಮೆಯಾಗಿ, ಚೇತರಿಕೆಯ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಸರಾಗಗೊಳಿಸುತ್ತದೆ.

ಪೋಷಕರ ಹೆಲ್ತ್ ಇನ್ಶೂರೆನ್ಸ್ ನಿಮಗೆ ಹೇಗೆ ಪ್ರಯೋಜನವಾಗುತ್ತದೆ?

ನಿಮ್ಮ ಪೋಷಕರು ಎದುರಿಸುತ್ತಿರುವ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸುತ್ತದೆ. ನೀವೀಗ ವಿಧಿಸಲಾಗುವ ವೆಚ್ಚಗಳ ಬಗ್ಗೆ ಯೋಚಿಸದೆ, ನಿಮ್ಮ ಪ್ರೀತಿಪಾತ್ರರ ಚೇತರಿಕೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಬಹುದು.

ಅಲ್ಲದೆ, ಇಂತಹ ಇನ್ಶೂರೆನ್ಸ್ ಪಾಲಿಸಿಗಳ ಪ್ರೀಮಿಯಂ ಪಾವತಿಗಾಗಿ ನಿಗದಿಪಡಿಸಿದ ಒಟ್ಟು ಆದಾಯದ ಮೇಲೆ, ನೀವು ತೆರಿಗೆ ವಿನಾಯಿತಿಯನ್ನು ಸಹ ಆನಂದಿಸಬಹುದು. ನಿಮ್ಮ ಪೋಷಕರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಒಟ್ಟು ತೆರಿಗೆಯ ಆದಾಯದ ಮೇಲೆ 50,000 ರೂಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪೋಷಕರಿಗೆ, ನೀವು 25,000 ರೂಗಳವರೆಗೆ ರಿಯಾಯಿತಿ ಪಡೆಯಬಹುದು. 

ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವುದು ಹೇಗೆ ?

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳುವುದರಿಂದ, ವೈದ್ಯಕೀಯ ಆಸ್ಥಿರತೆಯ ಸಂದರ್ಭದಲ್ಲಿ ಆರ್ಥಿಕವಾಗಿ ಸುರಕ್ಷಿತವಾಗಿರಲು ಇದು ನಿಮಗೆ ಸಹಾಯ ಮಾಡುತ್ತದೆ. ಹೆಚ್ಚಿನ ಇನ್ಶೂರೆನ್ಸ್ ಪೂರೈಕೆದಾರರು ಪರಿಶೀಲನೆ ಮತ್ತು ಪ್ರೀಮಿಯಂ ಪಾವತಿಗಳಿಗೆ ಒಳಪಟ್ಟು ಆನ್‌ಲೈನ್‌ನಲ್ಲಿ ಇಂತಹ ಪಾಲಿಸಿಗಳನ್ನು ನೀಡುತ್ತಾರೆ.

ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಅರ್ಜಿ ಸಲ್ಲಿಸಲು ನೀವು ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಬಹುದು. ಮೊದಲಿಗೆ, ಮೇಲಿನ ಅಂಶಗಳನ್ನು ಗಮನಿಸಿ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡಿ.

ಉದಾಹರಣೆಗೆ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ನೀವು ಡಿಜಿಟ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಬಹುದು:

  • ಹಂತ 1 – ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಿನ್ ಕೋಡ್ (ನಿಮ್ಮ ನಗರಕ್ಕೆ) ನಮೂದಿಸಿ ಮತ್ತು  ಇನ್ಶೂರೆನ್ಸ್ ಪಾಲಿಸಿ ಅಗತ್ಯವಿರುವ ನಿಮ್ಮ ಸದಸ್ಯರನ್ನು ಆಯ್ಕೆ ಮಾಡಿ. ಈ ಸಂದರ್ಭದಲ್ಲಿ, ನಿಮ್ಮ ಪೋಷಕರಿಗೆ ಅನ್ವಯವಾಗುವ ಆಯ್ಕೆಗಳನ್ನು ನೀವು ಆರಿಸಿಕೊಳ್ಳಬೇಕು.
  • ಹಂತ 2 - ಮುಂದೆ, ನಿಮ್ಮ ತಾಯಿ ಮತ್ತು ತಂದೆಯ ಜನ್ಮದಿನಗಳಂತಹ ವಿವರಗಳನ್ನು ನಮೂದಿಸಿ.
  • ಹಂತ 3 - ಸಂಪರ್ಕ ವಿವರಗಳನ್ನು ನಮೂದಿಸಿ.
  • ಹಂತ 4 - ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆಮಾಡಿ.
  • ಹಂತ 5 - ಅಗತ್ಯವಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ಹಂತ 6 – ಎಲ್ಲಾ ವಿವರಗಳನ್ನು ವಿಮರ್ಶಿಸಿ, ಪಾಲಿಸಿ ಬ್ರೇಕ್ ಅಪ್ ಅನ್ನು ಪರಿಶೀಲಿಸಿ, ಇತ್ಯಾದಿ.
  • ಹಂತ 7 - ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಪಾವತಿಸಿ.

ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಎಲ್ಲ ವಿವರ ಮತ್ತು ದಾಖಲೆಗಳ ಪೋಸ್ಟ್ ವೆರಿಫಿಕೇಷನ್ ಮುಗಿದ ಬಳಿಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಶೀಘ್ರದಲ್ಲೇ ಸಕ್ರಿಯಗೊಳಿಸಲಾಗುತ್ತದೆ.

ದೇಶದಲ್ಲಿ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಮತ್ತು ಚಿಲ್ಲರೆ ಹಣದುಬ್ಬರದೊಂದಿಗೆ, ನಿಮ್ಮ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆರಿಸಿಕೊಳ್ಳುವುದು ಮುಖ್ಯವಾಗಿದೆ. ನಿಗದಿತ ಪ್ರೀಮಿಯಂ ಶುಲ್ಕಗಳ ಮೇಲೆ ವಿಸ್ತರಿತ ಚಿಕಿತ್ಸಾ ಕೋರ್ಸ್ ಮತ್ತು ಅನೇಕ ಇತರ ಆಡ್-ಆನ್ ಪ್ರಯೋಜನಗಳ ಮೂಲಕ ನೀವು ನಿಮ್ಮ ಪೋಷಕರ ಆರೋಗ್ಯವನ್ನು ಪರಿಣಾಮಕಾರಿಯಾಗಿ ಸುರಕ್ಷಿತಗೊಳಿಸಬಹುದು.

ಭಾರತದಲ್ಲಿ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ನನ್ನ ಹಿರಿಯ ನಾಗರಿಕ ಪೋಷಕರನ್ನು ಫ್ಯಾಮಿಲಿ ಫ್ಲೋಟರ್ ಇನ್ಶೂರೆನ್ಸ್ ಯೋಜನೆಯಲ್ಲಿ ಸೇರಿಸಬಹುದೇ?

ಇಲ್ಲ, ಫ್ಯಾಮಿಲಿ ಫ್ಲೋಟರ್ ಇನ್ಶೂರೆನ್ಸ್ ಯೋಜನೆಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸದಸ್ಯರಿಗೆ ಮಾತ್ರ.

ನನ್ನ ಪೋಷಕರಿಗೆ ಮೊದಲೇ ಹೆಲ್ತ್ ಕೇರ್ ಆರಿಸಿಕೊಳ್ಳುವುದು ಏಕೆ ಉತ್ತಮ?

ಹಿರಿಯ ವಯಸ್ಸಿನ ವ್ಯಕ್ತಿಗಳ ಇನ್ಶೂರೆನ್ಸ್ ಪಾಲಿಸಿಗಳ ವಿಷಯಕ್ಕೆ ಬಂದರೆ, ಅನೇಕ ಇನ್ಶೂರೆನ್ಸ್ ಪೂರೈಕೆದಾರರು, ಖಡ್ಡಾಯ ಸಹ-ಪಾವತಿ ಷರತ್ತುಗಳನ್ನು ಹೊಂದಿದ್ದಾರೆ. ಅದಕ್ಕಾಗಿಯೇ ನಿಮ್ಮ ಪೋಷಕರಿಗೆ ಸಾಧ್ಯವಾದಷ್ಟು ಬೇಗ ಹೆಲ್ತ್ ಕೇರ್ ಪಾಲಿಸಿಗಳನ್ನು ಆರಿಸಿಕೊಳ್ಳುವುದು ಉತ್ತಮ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನನ್ನ ಪೋಷಕರ ಕವರೇಜ್ ಅನ್ನು ಹೇಗೆ ನಾನು ಹೆಚ್ಚಿಸಬಹುದು?

‌ಇಂಡಿಪೆಂಡೆಂಟ್ ಕವರ್ ಗಳನ್ನು ಆಯ್ಕೆ ಮಾಡುವ ಬದಲು, ನಿಮ್ಮ ಪೋಷಕರ ವ್ಯಾಪ್ತಿಯನ್ನು ಹೆಚ್ಚಿಸಲು, ನೀವು ಅನುಮತಿಸುವ ಟಾಪ್-ಅಪ್ ಕವರ್ ಗಳನ್ನು ನೀವು ನೋಡಬಹುದು.