ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ

Zero Paperwork. Quick Process.

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಎಂದರೇನು?

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು, ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಅಪಘಾತವನ್ನು ಎದುರಿಸಬಹುದಾದ, ಅದು ಗಾಯಕ್ಕೆ ಕಾರಣವಾಗಬಹುದಾದ ಅಥವಾ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಸಾವಿಗೆ ಕಾರಣವಾಗಬಹುದಾದಂತಹ ದುರದೃಷ್ಟಕರ ಸಂದರ್ಭಗಳಲ್ಲಿ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಇರುವ ಹೆಚ್ಚುವರಿ ಹೆಲ್ತ್ ಇನ್ಶೂರೆನ್ಸ್‌ನ ಒಂದು ವಿಧ.

ಅಪಘಾತಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ನಿಮ್ಮ ಜೀವನದ ಲೆಕ್ಕಾಚಾರವನ್ನು ತಲೆಕೆಳಗಾಗಿಸಬಹುದು - ಇವು ನಿಮ್ಮ ಮೇಲೆ ಕೇವಲ ದೈಹಿಕವಾಗಿಯಷ್ಟೇ ಪರಿಣಾಮ ಬೀರದೆ, ಸಹಜವಾಗಿ ಭಾವನಾತ್ಮಕವಾಗಿಯೂ ಪರಿಣಾಮ ಬೀರುತ್ತವೆ. ಅಲ್ಲದೇ, ಇದು ಆರ್ಥಿಕ ಹೊರೆಯಾಗಿಯೂ ಪರಿಣಮಿಸಬಹುದು. ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಆಗುವ ಅದೃಷ್ಟವನ್ನು ನೀವು ಹೊಂದಿದ್ದರೆ, ಇದು ಆಸ್ಪತ್ರೆಯ ಶುಲ್ಕಗಳಂತಹ ಪ್ರಮಾಣಿತ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತದೆ.

ಉದಾಹರಣೆಗೆ, ನೀವು ಮೆಟ್ಟಿಲುಗಳಿಂದ ಬಿದ್ದು ಸ್ಲಿಪ್ಡ್ ಡಿಸ್ಕ್ ಅಥವಾ ಮುರಿತಕ್ಕೊಳಗಾದರೆ, ನೀವು ಬಹಳಷ್ಟು ಇತರ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ. ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ಯಾವುದೇ ಮೆಡಿಕಲ್ ಮತ್ತು ಸಂಬಂಧಿತ ವೆಚ್ಚಗಳನ್ನು ಸರಿದೂಗಿಸಲು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ನೀವು ಈ ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗ ಕಳೆದುಹೋಗಿರುವ ಯಾವುದೇ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಹಣಕಾಸಿನ ಸ್ಥಿರತೆಯ ಬಗ್ಗೆ ನೀವು ಖಚಿತರಾಗಿರಬಹುದು. 

ನಿಮಗೆ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಏಕೆ ಬೇಕು?

ಯಾವುದೇ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸುತ್ತದೆ. ಹಾಗಿದ್ದರೆ, ನಿಮಗೆ ನಿಜವಾಗಿಯೂ ಈ ಪಾಲಿಸಿ ಏಕೆ ಬೇಕು?

ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚುವರಿ ಆರ್ಥಿಕ ಸುರಕ್ಷಾ ಕವಚವಾಗಿದೆ.

ಯಾವುದೇ ದುರದೃಷ್ಟಕರ ಅಪಘಾತದ ಸಂದರ್ಭದಲ್ಲಿ ನೀವು ನಿಶ್ಚಿತ ಪ್ರಯೋಜನವನ್ನು ಪಡೆಯುತ್ತೀರಿ.

ನೀವು ಕೆಲಸ ಮಾಡಲು ಸಾಧ್ಯವಾಗದ ಅಂಗವೈಕಲ್ಯವಿರುವ ಸಂದರ್ಭದಲ್ಲಿ, ನೀವು ಸ್ವಲ್ಪ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ.

ಡಿಜಿಟ್‌ನಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್‌ನ ಬಗ್ಗೆ ಯಾವ ಅಂಶಗಳು ಉತ್ತಮವಾಗಿವೆ?

ಸ್ಥಿರ ಪ್ರಯೋಜನಗಳು - ಅಪಘಾತಗಳು ಯಾವುದೇ ಎಚ್ಚರಿಕೆ ನೀಡದೆ, ಯಾವುದೇ ಸಮಯದಲ್ಲಾದರೂ ಹಾಗೂ ಎಲ್ಲಿಯಾದರೂ ಸಂಭವಿಸುತ್ತವೆ. ಅಂತಹ ಸಂದರ್ಭದಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯೊಂದಿಗೆ, ನೀವು ನಿಶ್ಚಿತ ಪ್ರಯೋಜನವನ್ನು ಪಡೆಯುತ್ತೀರಿ.

ಯಾವುದೇ ಮೆಡಿಕಲ್ ಪರೀಕ್ಷೆಗಳ ಅಗತ್ಯವಿಲ್ಲ - ನಮ್ಮ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯೊಂದಿಗೆ, ನೀವು ಯಾವುದೇ ಮೆಡಿಕಲ್ ಪರೀಕ್ಷೆಗಳನ್ನು ಮಾಡಿಸಬೇಕಿಲ್ಲ. ಕೇವಲ ಆನ್‌ಲೈನ್‌ಗೆ ಹೋಗಿ ಮತ್ತು ಕೆಲವೇ ಕೆಲವು ಸರಳ ಹಂತಗಳಲ್ಲಿ ರಕ್ಷಣೆ ಪಡೆಯಿರಿ.

ವ್ಯಾಪಕ ಶ್ರೇಣಿಯ ಕವರೇಜ್ ಪಡೆಯಿರಿ - ಈ ಪಾಲಿಸಿಯು ಎಲ್ಲಾ ರೀತಿಯ ದುರದೃಷ್ಟಕರ ಘಟನೆಗಳ ಚಿಕ್ಕ ಮತ್ತು ಪ್ರಮುಖ ಗಾಯಗಳಿಂದಾದ ಆದಾಯದ ನಷ್ಟ ಮತ್ತು ಹೆಚ್ಚಿನವುಗಳಿಗಾಗಿ ನಿಮ್ಮನ್ನು ಕವರ್ ಮಾಡುತ್ತದೆ!

  • ನಾವು ಮನೆಯಲ್ಲಿನ ಚಿಕಿತ್ಸೆಯನ್ನು ಕವರ್ ಮಾಡುತ್ತೇವೆ - ಒಂದು ವೇಳೆ ನಿಮಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ನೀವು ಮನೆಯಲ್ಲಿಯೇ ನಿಮ್ಮ ಮೆಡಿಕಲ್ ಚಿಕಿತ್ಸೆಯನ್ನು ಪಡೆದರೆ, ನಾವು ಅದನ್ನು ಸಹ ಕವರ್ ಮಾಡುತ್ತೇವೆ.

ಉತ್ತಮ ಮೌಲ್ಯ - ಡಿಜಿಟ್‌ನ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಕಡಿಮೆ-ವೆಚ್ಚದ ಪ್ರೀಮಿಯಂಗಳೊಂದಿಗೆ ಬರುತ್ತದೆ. ಹಾಗಾಗಿ ಅದು ನಿಮ್ಮ ಬಜೆಟ್‌ಗೆ ಹೊರೆಯಾಗುವುದಿಲ್ಲ.

ಕ್ಯುಮುಲೇಟಿವ್ ಬೋನಸ್ - ಒಂದು ಪಾಲಿಸಿ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನಾವು ನಿಮಗೆ ಒಂದು ರೀತಿಯ ರಿವಾರ್ಡ್ ಅನ್ನು ನೀಡುತ್ತೇವೆ - ಅದೇನೆಂದರೆ ನಿಮ್ಮ ಇನ್ಶೂರೆನ್ಸ್ ಮೊತ್ತದಲ್ಲಿ ಹೆಚ್ಚಳ, ಪ್ರತಿ ಕ್ಲೈಮ್-ಫ್ರೀ ವರ್ಷಕ್ಕೆ 10% ರಿಂದ ಪ್ರಾರಂಭವಾಗುತ್ತದೆ.

ಡಿಜಿಟಲ್ ಸ್ನೇಹಿ ಪ್ರೊಸೆಸ್ - ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದರಿಂದ ಹಿಡಿದು ಕ್ಲೈಮ್‌ಗಳವರೆಗೆ, ಯಾವುದೇ ದಾಖಲೆಗಳು ಬೇಕಿಲ್ಲ ಅಥವಾ ನಮ್ಮೊಂದಿಗೆ ಯಾವುದೇ ಓಡಾಟದ ಅಗತ್ಯವಿಲ್ಲ, ಎಲ್ಲವನ್ನೂ ಆನ್‌ಲೈನ್‌ನಲ್ಲಿಯೇ ಮಾಡಬಹುದು! 

ಡಿಜಿಟ್‌ನ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?

ಏನನ್ನು ಕವರ್ ಮಾಡುವುದಿಲ್ಲ?

ಪರ್ಸನಲ್ ಆ್ಯಕ್ಸಿಡೆಂಟ್ಡ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡದ ಕೆಲವು ಸಂದರ್ಭಗಳಿವೆ, ಉದಾಹರಣೆಗೆ

ನಿಮ್ಮ ಅಪಘಾತದ ಗಾಯವು ಯುದ್ಧ ಅಥವಾ ಭಯೋತ್ಪಾದನೆಯಿಂದ ಉಂಟಾದರೆ, ದುರದೃಷ್ಟವಶಾತ್ ಅದನ್ನು ಪಾಲಿಸಿಯ ಕವರ್ ಮಾಡುವುದಿಲ್ಲ. 

ನೀವು ಡ್ರಗ್ಸ್ ಅಥವಾ ಆಲ್ಕೋಹಾಲ್‌ನ ಪ್ರಭಾವದಲ್ಲಿರುವಾಗ ಗಾಯಗಳು ಸಂಭವಿಸಿದಲ್ಲಿ ಅದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ನೀವು ಕೆಲವು ಅಪರಾಧ ಚಟುವಟಿಕೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಅಪಘಾತದಿಂದ ಗಾಯಗೊಂಡರೆ ಅದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚವಾಗುತ್ತದೆ?

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಪ್ರೀಮಿಯಂಗಳನ್ನು ಲೆಕ್ಕಾಚಾರ ಮಾಡಲು ಸಾಕಷ್ಟು ಅವಶ್ಯಕ ಅಂಶಗಳಿವೆ. ಅವುಗಳೆಂದರೆ:

  • ನಿಮ್ಮ ವಯಸ್ಸು
  • ನಿಮ್ಮ ಉದ್ಯೋಗದ ಸ್ವರೂಪ
  • ನಿಮ್ಮ ಆದಾಯ
  • ಯಾವುದೇ ಹೆಚ್ಚುವರಿ ಸದಸ್ಯರ ಸಂಖ್ಯೆ ಮತ್ತು ವಯಸ್ಸು (ಅಂದರೆ ಪೋಷಕರು, ಸಂಗಾತಿ ಅಥವಾ ಮಕ್ಕಳು)
  • ನಿಮ್ಮ ಭೌಗೋಳಿಕ ಸ್ಥಳ
  • ನೀವು ಎಷ್ಟು ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿಕೊಂಡಿದ್ದೀರಿ

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳು

ಕವರೇಜ್‌ಗಳು

ಮೂಲಭೂತ ಆಯ್ಕೆ

ಬೆಂಬಲ ಆಯ್ಕೆ

ಆಲ್ ರೌಂಡರ್ ಆಯ್ಕೆ

ಪ್ರಮುಖ ವೈಶಿಷ್ಟ್ಯಗಳು

ಆಕಸ್ಮಿಕ ಸಾವು

ಶಾಶ್ವತ ಸಂಪೂರ್ಣ ಅಂಗವೈಕಲ್ಯ

ಶಾಶ್ವತ ಭಾಗಶಃ ಅಂಗವೈಕಲ್ಯ

×

ಎಲ್ಲಾ ಚಿಕಿತ್ಸೆಗಳು

×

ಡೇಕೇರ್ ಪ್ರಕ್ರಿಯೆಗಳು

×

ಕ್ಯುಮುಲೇಟಿವ್ ಬೋನಸ್

×

ಪ್ರಮಾಣಿತ ಪಾಲಿಸಿ ವೈಶಿಷ್ಟ್ಯಗಳು

ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳು

×

ಆಸ್ಪತ್ರೆ ನಗದು

×

ಮಗುವಿನ ಶಿಕ್ಷಣದ ಪ್ರಯೋಜನ

×

ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್

×

ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್

×

ಅಂತ್ಯಕ್ರಿಯೆ ಮತ್ತು ಸಾರಿಗೆ ವೆಚ್ಚಗಳು

×

ಆಮದು ಮಾಡಿದ ಔಷಧಿಗಳ ಸಾಗಣೆ

×

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಯಾರು ಪಡೆಯಬೇಕು?

ಅಪಘಾತದ ಸಂದರ್ಭದಲ್ಲಿ ಈ ಪಾಲಿಸಿಯೊಂದಿಗೆ ನೀವು ನಿಶ್ಚಿತ ಪ್ರಯೋಜನವನ್ನು ಪಡೆಯುವುದರಿಂದ ತಮ್ಮ ಜೀವನೋಪಾಯ ಅಥವಾ ಕೆಲಸವು, ತಮಗೆ ಅಪಘಾತದ ಅಪಾಯವನ್ನು ಉಂಟುಮಾಡಬಹುದೆಂದು ಭಾವಿಸುವ ಯಾರಾದರೂ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಪಡೆಯಲು ಪ್ರಮುಖವಾಗಿ ಪರಿಗಣಿಸಬಹುದು. ಇದು ಇವುಗಳನ್ನು ಒಳಗೊಂಡಿರಬಹುದು:

ಕಡಿಮೆ ಅಪಾಯದ ಉದ್ಯೋಗ ಹೊಂದಿರುವ ಜನರು

  • ಕಚೇರಿ ಕೆಲಸಗಾರರು (ಅಂದರೆ ಕನ್ಸಲ್ಟೆಂಟ್‌ಗಳು, ಅಕೌಂಟೆಂಟ್‌ಗಳು ಮತ್ತು ಇಂಜಿನಿಯರ್‌ಗಳು)
  • ಹೆಲ್ತ್ ಕೇರ್ ಕಾರ್ಯಕರ್ತರು
  • ಕಾನೂನು ವೃತ್ತಿಪರರು
  • ಕಲಾವಿದರು, ಬರಹಗಾರರು ಮತ್ತು ಡಿಸೈನರ್‌ಗಳು
  • ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು
  • ನಾಗರಿಕ ಸೇವಕರು ಮತ್ತು ಅಧಿಕಾರಿಗಳು
  • ಬ್ಯಾಂಕರ್‌ಗಳು
  • ಶಾಪ್‌ಕೀಪರ್‌ಗಳು
  • ಗೃಹಿಣಿಯರು

ಹೆಚ್ಚಿನ ಅಪಾಯದ ಉದ್ಯೋಗ ಹೊಂದಿರುವ ಜನರು

  • ಕೈಗಾರಿಕಾ ಕೆಲಸಗಾರರು (ಅಪಾಯಕಾರಿಯಲ್ಲದ)
  • ಪಶುವೈದ್ಯರು
  • ಸೆಕ್ಯೂರಿಟಿ ಆಫೀಸರ್‌ಗಳು
  • ಫೋಟೋಗ್ರಾಫರ್‌ಗಳು ಮತ್ತು ಬಾಣಸಿಗರು
  • ಕಾಲೇಜು / ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು
  • ಬಿಲ್ಡರ್‌ಗಳು, ಕಾಂಟ್ರಾಕ್ಟರ್‌ಗಳು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು
  • ಆತಿಥ್ಯ ಮತ್ತು ಪ್ರವಾಸೋದ್ಯಮ ವಲಯದ ಕೆಲಸಗಾರರು
  • ಏರ್‌ಲೈನ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ
  • ವಿತರಣಾ ಸಿಬ್ಬಂದಿ

ಅತ್ಯಂತ ಹೆಚ್ಚಿನ ಅಪಾಯದ ಉದ್ಯೋಗ ಹೊಂದಿರುವ ಜನರು

  • ಕೈಗಾರಿಕಾ ಕೆಲಸಗಾರರು (ಅಪಾಯಕಾರಿ ಕೆಲಸಗಾರರು)
  • ವೃತ್ತಿಪರ ಕ್ರೀಡಾಪಟುಗಳು
  • ಪೊಲೀಸ್ ಮತ್ತು ಮಿಲಿಟರಿ ಸಶಸ್ತ್ರ ಪಡೆ
  • ಪರ್ವತಾರೋಹಿಗಳು
  • ಪತ್ರಕರ್ತರು
  • ರಾಜಕಾರಣಿಗಳು

ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ವಿಭಿನ್ನ ಪಾಲಿಸಿಗಳನ್ನು ನೋಡಿ - ಹಣ ಉಳಿಸುವುದು ಉತ್ತಮ ವಿಚಾರ, ಆದರೆ ಕೆಲವೊಮ್ಮೆ ಕಡಿಮೆ ಪ್ರೀಮಿಯಂ ಹೊಂದಿರುವ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು ಉತ್ತಮ ಯೋಜನೆಗಳನ್ನು ಹೊಂದಿಲ್ಲದಿರಬಹುದು; ಆದ್ದರಿಂದ, ಕೈಗೆಟುಕುವ ಬೆಲೆಯಲ್ಲಿ ನಿಮಗೆ ಉತ್ತಮವೆನಿಸುವ ಪಾಲಿಸಿಯನ್ನು ಹುಡುಕಲು, ವಿಭಿನ್ನ ಪಾಲಿಸಿಗಳ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.

ಸರಿಯಾದ ಕವರೇಜ್ ಪಡೆಯಿರಿ - ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಉತ್ತಮ ಕವರೇಜನ್ನು ನೀಡಬೇಕು.

ಸರಿಯಾದ ಸಮ್ ಇನ್ಶೂರ್ಡ್ ಆಯ್ಕೆಮಾಡಿ - ನಿಮ್ಮ ಕೆಲಸದ ಸ್ವರೂಪ ಮತ್ತು ನೀವು ಎದುರಿಸುವ ಅಪಾಯದ ಆಧಾರದ ಮೇಲೆ, ನಿಮ್ಮ ಸಮ್ ಇನ್ಶೂರ್ಡ್ ಅನ್ನು ಕಸ್ಟಮೈಸ್ ಮಾಡಲು ನಿಮ್ಮನ್ನು ಅನುಮತಿಸುವ ಪಾಲಿಸಿಯನ್ನು ನೀವು ನೋಡಬಹುದು.

ಕ್ಲೈಮ್‌ಗಳ ಪ್ರಕ್ರಿಯೆ - ಇದು ಯಾವುದೇ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಕೇವಲ ಕ್ಲೈಮ್‌ಗಳನ್ನು ಮಾಡುವುದಷ್ಟೇ ಸುಲಭವಾಗಿರದೆ, ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದು ಸಹ ಸುಲಭವಾಗಿರುವ ಇನ್ಶೂರೆನ್ಸ್ ಕಂಪನಿಯನ್ನು ನೋಡಿ. ಅದು ನಿಮ್ಮನ್ನು ಬಹಳಷ್ಟು ತೊಂದರೆಗಳಿಂದ ಕಾಪಾಡುತ್ತದೆ. 

ಸೇವಾ ಪ್ರಯೋಜನಗಳು - ನಿಮಗೆ, 24X7 ಕಸ್ಟಮರ್ ಸಪೋರ್ಟ್ ಅಥವಾ ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ನಂತಹ ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ನೀಡಬಲ್ಲ ಇನ್ಶೂರೆನ್ಸ್ ಕಂಪನಿಯನ್ನು ನೀವು ಆಯ್ಕೆಮಾಡಿ.    

ಸಾಮಾನ್ಯ ಪರ್ಸನಲ್ ಆ್ಯಕ್ಸಿಡೆಂಟ್ ನಿಯಮಗಳನ್ನು ನಿಮಗಾಗಿ ಸರಳಗೊಳಿಸಲಾಗಿದೆ

ಅಪಘಾತ

ಯಾವುದೇ ಹಠಾತ್, ಅನಿರೀಕ್ಷಿತ ಸನ್ನಿವೇಶವು, ಅದಕ್ಕೆ ಒಳಗಾದ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಗಾಯಗಳನ್ನು ಉಂಟುಮಾಡಬಹುದು ಅಥವಾ ಉಂಟುಮಾಡದಿರಬಹುದು.

ನಿಕಟ ಕುಟುಂಬ

ನಿಕಟ ಕುಟುಂಬ ನಿಮ್ಮ ನಿಕಟ ಕುಟುಂಬವು ನಿಮ್ಮ ಸಂಗಾತಿ, ಮಗು, ಪೋಷಕರು ಅಥವಾ ಒಡಹುಟ್ಟಿದ ಯಾವುದೇ ವ್ಯಕ್ತಿಯನ್ನು ಸೂಚಿಸುತ್ತದೆ.

ಫಲಾನುಭವಿಗಳು

ನಿಮ್ಮ ಮರಣದ ನಂತರ ನಿಮ್ಮ ಇನ್ಶೂರೆನ್ಸ್ ಪ್ರಯೋಜನವನ್ನು ಸ್ವೀಕರಿಸುವವರು ಎಂದು ನಿಮ್ಮ ಪಾಲಿಸಿಯಲ್ಲಿ ನೀವು ಹೆಸರಿಸಿದ ವ್ಯಕ್ತಿ (ಗಳು).

ಶಾಶ್ವತ ಸಂಪೂರ್ಣ ಅಂಗವೈಕಲ್ಯ

ಯಾವುದೇ ಗಾಯವು ಶಾಶ್ವತವಾಗಿದ್ದು ಮತ್ತು ನೀವು ಕೆಲಸ ಮಾಡಲು ಸಾಧ್ಯವಾಗದಂತೆ ತಡೆಯುವುದು. ಇದು ಕುರುಡುತನ, ಪಾರ್ಶ್ವವಾಯು ಅಥವಾ ಎರಡೂ ಕಾಲುಗಳ ನಷ್ಟವನ್ನು ಒಳಗೊಂಡಿರಬಹುದು. 

ಶಾಶ್ವತ ಭಾಗಶಃ ಅಂಗವೈಕಲ್ಯ

ಗಾಯವು ಕಾಲಾನಂತರದಲ್ಲಿ ಸುಧಾರಿಸದಿದ್ದರೆ ಮತ್ತು ಅದು ನಿಮ್ಮನ್ನು ಭಾಗಶಃ ನಿಷ್ಕ್ರಿಯಗೊಳಿಸಿದರೆ. ಉದಾಹರಣೆಗೆ, ಒಂದು ಕಾಲಿನ ನಷ್ಟ, ಒಂದು ಕಣ್ಣಿನ ಕುರುಡುತನ ಅಥವಾ ಒಂದು ಕಿವಿಯು ಕೇಳುವುದನ್ನು ಕಳೆದುಕೊಳ್ಳುವುದು.

ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯ

ಅಂಗವೈಕಲ್ಯವನ್ನು ಉಂಟುಮಾಡುವ ಒಂದು ಗಾಯವು, ನೀವು ಚೇತರಿಸಿಕೊಳ್ಳುವಾಗ ನಿಮ್ಮನ್ನು ತಾತ್ಕಾಲಿಕ ಸಮಯದವರೆಗೆ ಕೆಲಸ ಮಾಡದಂತೆ ತಡೆಯುತ್ತದೆ. ಉದಾಹರಣೆಗೆ ಕೈ ಅಥವಾ ಕಾಲು ಮುರಿದಿರುವುದು.

ಸಂಚಿತ ಬೋನಸ್

ಕ್ಲೈಮ್-ಫ್ರೀ ವರ್ಷಕ್ಕಾಗಿ ನೀವು ಪಡೆಯುವ ಒಂದು ರೀತಿಯ ರಿವಾರ್ಡ್. ಇಲ್ಲಿ ನೀವು ಅದೇ ಪ್ರೀಮಿಯಂ ಅನ್ನು ಪಾವತಿಸುವಾಗ, ನಿಮ್ಮ ಕವರೇಜ್‌ನ ಹೆಚ್ಚುವರಿ ಶೇಕಡಾವಾರು ಮೊತ್ತವನ್ನು ನೀವು ಪಡೆಯುತ್ತೀರಿ.

ಸಮ್ ಇನ್ಶೂರ್ಡ್

ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪಾವತಿಸುವ ಗರಿಷ್ಠ ಅಮೌಂಟ್ ಆಗಿದೆ. 

ಡಿಡಕ್ಟಿಬಲ್

ಇದು ಇನ್ಶೂರೆನ್ಸ್ ಕಂಪನಿಯು ನಿಮ್ಮ ಕ್ಲೈಮ್ ಅನ್ನು ಕವರ್ ಮಾಡುವ ಮೊದಲು, ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾದ ಸಣ್ಣ ಮೊತ್ತವಾಗಿದೆ.  

ಪದೇ ಪದೇ ಕೇಳಲಾದ ಪ್ರಶ್ನೆಗಳು

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಎಂದರೇನು?

ನೀವು ಗಂಭೀರವಾದ ಗಾಯ ಅಥವಾ ಸಾವಿಗೆ ಕಾರಣವಾಗುವಂತಹ ಅಪಘಾತವನ್ನು ಅನುಭವಿಸಿದರೆ, ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ನಿಮಗೆ ಸಹಾಯ ಮಾಡುತ್ತದೆ. ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ಈ ಸಂದರ್ಭಗಳಲ್ಲಿ, ನೀವು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಪಡೆಯುತ್ತೀರಿ. ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದು ಅಪಘಾತದಿಂದ ಕಾರಣಕ್ಕೆ ನೀಡುವ ಚಿಕಿತ್ಸೆಯನ್ನು ಸಹ ಕವರ್ ಮಾಡುತ್ತದೆ.

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಪ್ರಯೋಜನಗಳೇನು?

ಅಪಘಾತದಿಂದಾದ ಸಾವು, ಶಾಶ್ವತ ಅಂಗವೈಕಲ್ಯ, ಭಾಗಶಃ ಅಂಗವೈಕಲ್ಯ ಹಾಗೂ ಆಂಬ್ಯುಲೆನ್ಸ್ ಮತ್ತು ಚಿಕಿತ್ಸಾ ವೆಚ್ಚಗಳಂತಹ ಇತರ ಅನೇಕ ಸಂದರ್ಭದಲ್ಲಿ, ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಕವರ್ ಮಾಡುತ್ತದೆ. ನೀವು ಪಾಲಿಸಿಯಡಿಯಲ್ಲಿ ನಿಮ್ಮ ಸಂಪೂರ್ಣ ಕುಟುಂಬವನ್ನು ಸೇರಿಸಬಹುದು ಮತ್ತು ಯಾವುದಾದರೂ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಅವರನ್ನು ರಕ್ಷಿಸಬಹುದು.

ನಾನು ಈ ಪಾಲಿಸಿಯಲ್ಲಿ ನನ್ನ ಪೋಷಕರನ್ನು ಸೇರಿಸಬಹುದೇ?

ಹೌದು, ಈ ಪಾಲಿಸಿಯಡಿಯಲ್ಲಿ ನೀವು ನಿಮ್ಮ ಪೋಷಕರನ್ನು, ಅವರಿಗೆ 70 ವರ್ಷಗಳಾಗುವವರೆಗೆ ಅವಲಂಬಿತರಾಗಿ ಸೇರಿಸಬಹುದು.

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಗೆ ಯಾವುದಾದರೂ ವಯಸ್ಸಿನ ಮಿತಿ ಇದೆಯೇ?

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯಡಿಯಲ್ಲಿ ಇನ್ಶೂರೆನ್ಸ್ ಪಡೆಯಲಿರುವ ಮುಖ್ಯ ವ್ಯಕ್ತಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಸಾಮಾನ್ಯವಾಗಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಪಾಲಿಸಿಯ ಅಡಿಯಲ್ಲಿ, ಅವಲಂಬಿತ ಮಕ್ಕಳನ್ನು ಸಹ 25 ವರ್ಷಗಳವರೆಗೆ ಕವರ್ ಮಾಡಬಹುದು.

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯಲ್ಲಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ನಿಮ್ಮ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸುವ ಹಲವು ಅಂಶಗಳಿವೆ. ಇವುಗಳಲ್ಲಿ ಕೆಲವು, ನಿಮ್ಮ ಉದ್ಯೋಗದ ಸ್ವರೂಪ, ನಿಮ್ಮ ಆದಾಯ, ವಯಸ್ಸು ಮತ್ತು ಪಾಲಿಸಿಯ ಅಡಿಯಲ್ಲಿ ಎಷ್ಟು ಜನರನ್ನು ಸೇರಿಸಲಾಗಿದೆ.

ಪರ್ಸನಲ್ ಆ್ಯಕ್ಸಿಡೆಂಟ್ ಗೆ ಪರಿಹಾರವನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀವು ಪಡೆಯುವ ಲಾಭದ ಮೊತ್ತವು, ಸಾಮಾನ್ಯವಾಗಿ ನಿಮ್ಮ ಇನ್ಶೂರೆನ್ಸ್ ಮೊತ್ತದ ಶೇಕಡಾವಾರು ಮೊತ್ತವಾಗಿದೆ. ಅಪಘಾತ ನಂತರದ ನಷ್ಟದ ಪ್ರಮಾಣವನ್ನು ಈ ಶೇಕಡಾವಾರು ಅವಲಂಬಿಸಿರುತ್ತದೆ ಮತ್ತು ನಿಮ್ಮ ಪಾಲಿಸಿಯ ಪದಗಳಲ್ಲಿ ಇದನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿರುವುದನ್ನು ನೀವು ಕಾಣಬಹುದು.

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು ಮರಣವನ್ನು ಕವರ್ ಮಾಡುತ್ತದೆಯೇ?

ಹೌದು, ಕವರ್ ಮಾಡುತ್ತದೆ. ನೀವು ಅಪಘಾತದಿಂದಾಗಿ ಮರಣ ಹೊಂದಿದರೆ, ನಿಮ್ಮ ಅವಲಂಬಿತರು ಇನ್ಶೂರೆನ್ಸ್ ಮೊತ್ತವನ್ನು ಪಡೆಯುತ್ತಾರೆ.

ನಾನು ಈಗಾಗಲೇ ಲೈಫ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದೇನೆ. ನಾನು ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯನ್ನು ಏಕೆ ಖರೀದಿಸಬೇಕು?

ಲೈಫ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಮರಣದ ಸಂದರ್ಭದಲ್ಲಿ ನಿಮ್ಮ ಅವಲಂಬಿತರಿಗೆ ಪ್ರಯೋಜನಗಳನ್ನು ನೀಡುತ್ತದೆ. ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು, ಅಪಘಾತಗಳಿಂದ ಉಂಟಾಗುವ ಯಾವುದೇ ಹಣಕಾಸಿನ ಅಪಾಯಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಉದಾಹರಣೆಗೆ ಆಸ್ಪತ್ರೆ ವೆಚ್ಚಗಳು, ಗಾಯದ ನಂತರ ಆದಾಯದ ನಷ್ಟ, ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯದ ಸಂದರ್ಭದಲ್ಲಿ ಭದ್ರತೆ. 

ಆದರೆ ನನಗೆ ಹೆಲ್ತ್ ಇನ್ಶೂರೆನ್ಸ್ ಇದೆ. ನನಗೆ ಈಗಲೂ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಅಗತ್ಯವಿದೆಯೇ?

ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಗಿಂತ ವಿಭಿನ್ನವಾಗಿದೆ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ಹೆಲ್ತ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುತ್ತದೆ ಮತ್ತು ಚಿಕಿತ್ಸೆಯ ವೆಚ್ಚಗಳು ಸಾಮಾನ್ಯವಾಗಿ ಕ್ಯಾಶ್ ಲೆಸ್ ಆಗಿರುತ್ತವೆ ಅಥವಾ ನಿಮಗೆ ರಿಇಂಬರ್ಸ್ ಮೆಂಟ್ ಆಗುತ್ತವೆ. ಆದರೆ, ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯೊಂದಿಗೆ, ಹಣಕಾಸು ನೆರವಿನ ಅಗತ್ಯವಿರುವಾಗ ನಿಮಗೆ ಸಹಾಯ ಮಾಡಲು ನೀವು ಒಂದು ದೊಡ್ಡ ಮೊತ್ತವನ್ನು ಪಡೆಯುತ್ತೀರಿ.

ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಗೆ ಯಾವ ಡಾಕ್ಯುಮೆಂಟುಗಳು ಬೇಕಾಗುತ್ತವೆ?

ಡಿಜಿಟ್‌ನ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಬೆಸ್ಟ್ ಪಾರ್ಟ್ ಏನು ಗೊತ್ತೇ, ಅದು ಸಂಪೂರ್ಣವಾಗಿ ಕಾಗದರಹಿತ ಅಂದರೆ ಪೇಪರ್‌ಲೆಸ್ ಪ್ರಕ್ರಿಯೆಯಾಗಿದೆ! ನೀವು ಮಾಡಬೇಕಾಗಿರುವುದು ಇಷ್ಟೇ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಪಾವತಿಯನ್ನು ಮಾಡಿ. ಅಷ್ಟೇ. ಈಗ ನಿಮ್ಮ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ ನೀವು ಕವರ್ ಆಗುವ ಹಂತದಲ್ಲಿರುತ್ತೀರಿ. 

ನನ್ನ ಕುಟುಂಬದ ಸದಸ್ಯರಿಗೆ ಪ್ರತ್ಯೇಕ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಅಗತ್ಯವಿದೆಯೇ?

ಇಲ್ಲ, ವಾಸ್ತವವಾಗಿ ನಿಮಗದರ ಅಗತ್ಯವಿಲ್ಲ! ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು ಫ್ಲೋಟರ್ ಪಾಲಿಸಿಯಾಗಿದೆ, ಇದರರ್ಥ ನೀವು ನಿಮ್ಮನ್ನು, ಹಾಗೆಯೇ ನಿಮ್ಮ ಸಂಗಾತಿ, ಅವಲಂಬಿತ ಮಕ್ಕಳು ಮತ್ತು ಪೋಷಕರನ್ನು ಒಂದೇ ಯೋಜನೆಯಡಿ ಸೇರಿಸಬಹುದು.