ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ

Digit

No Capping

on Room Rent

24/7

Customer Support

Zero

Co-payment

Zero Paperwork. Quick Process.
Your Name
Mobile Number

No Capping

on Room Rent

24/7

Customer Support

Zero

Co-payment

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಎಂದರೇನು?

ನಿಮಗೆ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಏಕೆ ಬೇಕು?

ಯಾವುದೇ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸುತ್ತದೆ. ಹಾಗಿದ್ದರೆ, ನಿಮಗೆ ನಿಜವಾಗಿಯೂ ಈ ಪಾಲಿಸಿ ಏಕೆ ಬೇಕು?

Financial safety
ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚುವರಿ ಆರ್ಥಿಕ ಸುರಕ್ಷಾ ಕವಚವಾಗಿದೆ.
Fixed Benefits
ಯಾವುದೇ ದುರದೃಷ್ಟಕರ ಅಪಘಾತದ ಸಂದರ್ಭದಲ್ಲಿ ನೀವು ನಿಶ್ಚಿತ ಪ್ರಯೋಜನವನ್ನು ಪಡೆಯುತ್ತೀರಿ.
Financial help
ನೀವು ಕೆಲಸ ಮಾಡಲು ಸಾಧ್ಯವಾಗದ ಅಂಗವೈಕಲ್ಯವಿರುವ ಸಂದರ್ಭದಲ್ಲಿ, ನೀವು ಸ್ವಲ್ಪ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ.

ಡಿಜಿಟ್‌ನಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್‌ನ ಬಗ್ಗೆ ಯಾವ ಅಂಶಗಳು ಉತ್ತಮವಾಗಿವೆ?

  • ಸ್ಥಿರ ಪ್ರಯೋಜನಗಳು - ಅಪಘಾತಗಳು ಯಾವುದೇ ಎಚ್ಚರಿಕೆ ನೀಡದೆ, ಯಾವುದೇ ಸಮಯದಲ್ಲಾದರೂ ಹಾಗೂ ಎಲ್ಲಿಯಾದರೂ ಸಂಭವಿಸುತ್ತವೆ. ಅಂತಹ ಸಂದರ್ಭದಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯೊಂದಿಗೆ, ನೀವು ನಿಶ್ಚಿತ ಪ್ರಯೋಜನವನ್ನು ಪಡೆಯುತ್ತೀರಿ.
  • ಯಾವುದೇ ಮೆಡಿಕಲ್ ಪರೀಕ್ಷೆಗಳ ಅಗತ್ಯವಿಲ್ಲ - ನಮ್ಮ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯೊಂದಿಗೆ, ನೀವು ಯಾವುದೇ ಮೆಡಿಕಲ್ ಪರೀಕ್ಷೆಗಳನ್ನು ಮಾಡಿಸಬೇಕಿಲ್ಲ. ಕೇವಲ ಆನ್‌ಲೈನ್‌ಗೆ ಹೋಗಿ ಮತ್ತು ಕೆಲವೇ ಕೆಲವು ಸರಳ ಹಂತಗಳಲ್ಲಿ ರಕ್ಷಣೆ ಪಡೆಯಿರಿ.
  • ವ್ಯಾಪಕ ಶ್ರೇಣಿಯ ಕವರೇಜ್ ಪಡೆಯಿರಿ - ಈ ಪಾಲಿಸಿಯು ಎಲ್ಲಾ ರೀತಿಯ ದುರದೃಷ್ಟಕರ ಘಟನೆಗಳ ಚಿಕ್ಕ ಮತ್ತು ಪ್ರಮುಖ ಗಾಯಗಳಿಂದಾದ ಆದಾಯದ ನಷ್ಟ ಮತ್ತು ಹೆಚ್ಚಿನವುಗಳಿಗಾಗಿ ನಿಮ್ಮನ್ನು ಕವರ್ ಮಾಡುತ್ತದೆ!
    • ನಾವು ಮನೆಯಲ್ಲಿನ ಚಿಕಿತ್ಸೆಯನ್ನು ಕವರ್ ಮಾಡುತ್ತೇವೆ - ಒಂದು ವೇಳೆ ನಿಮಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ನೀವು ಮನೆಯಲ್ಲಿಯೇ ನಿಮ್ಮ ಮೆಡಿಕಲ್ ಚಿಕಿತ್ಸೆಯನ್ನು ಪಡೆದರೆ, ನಾವು ಅದನ್ನು ಸಹ ಕವರ್ ಮಾಡುತ್ತೇವೆ.

  • ಉತ್ತಮ ಮೌಲ್ಯ - ಡಿಜಿಟ್‌ನ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಕಡಿಮೆ-ವೆಚ್ಚದ ಪ್ರೀಮಿಯಂಗಳೊಂದಿಗೆ ಬರುತ್ತದೆ. ಹಾಗಾಗಿ ಅದು ನಿಮ್ಮ ಬಜೆಟ್‌ಗೆ ಹೊರೆಯಾಗುವುದಿಲ್ಲ.
  • ಕ್ಯುಮುಲೇಟಿವ್ ಬೋನಸ್ - ಒಂದು ಪಾಲಿಸಿ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನಾವು ನಿಮಗೆ ಒಂದು ರೀತಿಯ ರಿವಾರ್ಡ್ ಅನ್ನು ನೀಡುತ್ತೇವೆ - ಅದೇನೆಂದರೆ ನಿಮ್ಮ ಇನ್ಶೂರೆನ್ಸ್ ಮೊತ್ತದಲ್ಲಿ ಹೆಚ್ಚಳ, ಪ್ರತಿ ಕ್ಲೈಮ್-ಫ್ರೀ ವರ್ಷಕ್ಕೆ 10% ರಿಂದ ಪ್ರಾರಂಭವಾಗುತ್ತದೆ.
  • ಡಿಜಿಟಲ್ ಸ್ನೇಹಿ ಪ್ರೊಸೆಸ್ - ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದರಿಂದ ಹಿಡಿದು ಕ್ಲೈಮ್‌ಗಳವರೆಗೆ, ಯಾವುದೇ ದಾಖಲೆಗಳು ಬೇಕಿಲ್ಲ ಅಥವಾ ನಮ್ಮೊಂದಿಗೆ ಯಾವುದೇ ಓಡಾಟದ ಅಗತ್ಯವಿಲ್ಲ, ಎಲ್ಲವನ್ನೂ ಆನ್‌ಲೈನ್‌ನಲ್ಲಿಯೇ ಮಾಡಬಹುದು! 

ಡಿಜಿಟ್‌ನ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?

ನೀವು ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯನ್ನು ಪಡೆದಾಗ, ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಈ ಕೆಳಗಿನ ಸಂದರ್ಭಗಳಲ್ಲಿ ರಕ್ಷಿಸಲಾಗುತ್ತದೆ... (*ನೀವು ಆಯ್ಕೆ ಮಾಡಿದ ಆಯ್ಕೆಯನ್ನು ಆಧರಿಸಿ)

Disablement

ಅಂಗವಿಕಲತೆ

ಅಪಘಾತವು, ಸಂಪೂರ್ಣ ಅಥವಾ ಭಾಗಶಃ ಅಂಗವೈಕಲ್ಯವನ್ನು ಉಂಟುಮಾಡಿದರೆ (ದೃಷ್ಟಿ ಅಥವಾ ಕೈಕಾಲುಗಳ ನಷ್ಟದಂತಹ) ಈ ಇನ್ಶೂರೆನ್ಸ್ ನಿಮಗೆ ಆರ್ಥಿಕವಾಗಿ ರಕ್ಷಣೆ ನೀಡುತ್ತದೆ.

Accidental Death

ಅಪಘಾತದಿಂದಾದ ಮರಣ

ಅಪಘಾತವು ಸಾವಿಗೆ ಕಾರಣವಾಗುವ ದುರದೃಷ್ಟಕರ ಘಟನೆಯಲ್ಲಿ (ಮತ್ತು ಅದೆಂದಿಗೂ ಸಂಭವಿಸದಿರಲಿ ಎಂದು ನಾವು ಆಶಿಸುತ್ತೇವೆ), ನಿಮ್ಮ ಅವಲಂಬಿತರು ಹಣಕಾಸಿನ ರಕ್ಷಣೆಯನ್ನು ಪಡೆಯುತ್ತಾರೆ. ಅಲ್ಲದೇ ಅಂತ್ಯಕ್ರಿಯೆ ಮತ್ತು ಸಾರಿಗೆ ವೆಚ್ಚಗಳಿಗೆ ಸಹಾಯ ಪಡೆಯುತ್ತಾರೆ.

Hospitalization expenses

ಹಾಸ್ಪಿಟಲೈಸೇಷನ್ ವೆಚ್ಚಗಳು*

ನೀವು ಅಪಘಾತಕ್ಕೀಡಾದರೆ, ಕೊಠಡಿ ಬಾಡಿಗೆ, ಡಯಾಗ್ನೋಸಿಸ್ ಮತ್ತು ಡೇಕೇರ್ ಪ್ರಕ್ರಿಯೆಗಳು ಹಾಗೂ ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳಂತಹ ಪೂರ್ವ ಮತ್ತು ನಂತರದ ಹಾಸ್ಪಿಟಲೈಸೇಷನ್ ವೆಚ್ಚಗಳಿಗೆ ರಕ್ಷಣೆ ಪಡೆಯಿರಿ.

Loss of Income

ಆದಾಯದ ನಷ್ಟ*

ನೀವು ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯ (ಟೆಂಪ್ರರಿ ಟೋಟಲ್ ಡಿಸೇಬಲ್‌ಮೆಂಟ್) ನಿಂದ ಬಳಲುತ್ತಿದ್ದರೆ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ಕೆಲಸವನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗದಿದ್ದರೆ, ನಾವು ಸಾಪ್ತಾಹಿಕ ಲಾಭದ ಮೊತ್ತವನ್ನು ಪಾವತಿಸುತ್ತೇವೆ.

Benefits for Children

ಮಕ್ಕಳಿಗೆ ಪ್ರಯೋಜನಗಳು*

ಈ ಪಾಲಿಸಿಯು ನಿಮಗೆ ಸಹಾಯ ಮಾಡುವುದರ ಜೊತೆಜೊತೆಗೆ ನಿಮ್ಮ ಅವಲಂಬಿತ ಮಕ್ಕಳಿಗೂ ಸಹಾಯ ಮಾಡುತ್ತದೆ. ಕೆಟ್ಟದ್ದೇನಾದರೂ ಸಂಭವಿಸಿದಲ್ಲಿ ಮತ್ತು ಅಪಘಾತದ ನಂತರ ನೀವು ಶಾಶ್ವತ ಸಂಪೂರ್ಣ ಅಂಗವೈಕಲ್ಯ ಅಥವಾ ಮರಣ ಹೊಂದಿದರೆ ನಿಮ್ಮ ಮಕ್ಕಳ ಶಿಕ್ಷಣದ ವೆಚ್ಚಗಳು ಅಥವಾ ಮದುವೆಯ ವೆಚ್ಚಗಳಂತಹ ಕೆಲವು ಪ್ರಯೋಜನಗಳನ್ನು ಸಹ ಪಾಲಿಸಿಯು ಕವರ್ ಮಾಡುತ್ತದೆ.

Adventure Sports

ಸಾಹಸ ಕ್ರೀಡೆ* (ಅಡ್ವೆಂಚರ್ ಸ್ಪೋರ್ಟ್ಸ್)

ಸ್ಕೂಬಾ ಡೈವಿಂಗ್, ಬಂಗೀ ಜಂಪಿಂಗ್ ಅಥವಾ ಸ್ಕೈ ಡೈವಿಂಗ್ (ವೃತ್ತಿಪರ ಪರಿಣಿತರ ಮೇಲ್ವಿಚಾರಣೆಯಲ್ಲಿ) ನಂತಹ ಸಾಹಸ ಚಟುವಟಿಕೆಗಳನ್ನು ಮಾಡುವಾಗ ನೀವು ಆಕಸ್ಮಿಕವಾಗಿ ಗಾಯಗೊಂಡರೆ, ನೀವು ರಕ್ಷಣೆ ಪಡೆಯುತ್ತೀರಿ.

ಏನನ್ನು ಕವರ್ ಮಾಡುವುದಿಲ್ಲ?

ಪರ್ಸನಲ್ ಆ್ಯಕ್ಸಿಡೆಂಟ್ಡ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡದ ಕೆಲವು ಸಂದರ್ಭಗಳಿವೆ, ಉದಾಹರಣೆಗೆ

ನಿಮ್ಮ ಅಪಘಾತದ ಗಾಯವು ಯುದ್ಧ ಅಥವಾ ಭಯೋತ್ಪಾದನೆಯಿಂದ ಉಂಟಾದರೆ, ದುರದೃಷ್ಟವಶಾತ್ ಅದನ್ನು ಪಾಲಿಸಿಯ ಕವರ್ ಮಾಡುವುದಿಲ್ಲ. 

ನೀವು ಡ್ರಗ್ಸ್ ಅಥವಾ ಆಲ್ಕೋಹಾಲ್‌ನ ಪ್ರಭಾವದಲ್ಲಿರುವಾಗ ಗಾಯಗಳು ಸಂಭವಿಸಿದಲ್ಲಿ ಅದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ನೀವು ಕೆಲವು ಅಪರಾಧ ಚಟುವಟಿಕೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ ಅಪಘಾತದಿಂದ ಗಾಯಗೊಂಡರೆ ಅದನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚವಾಗುತ್ತದೆ?

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳು

ಕವರೇಜ್‌ಗಳು

ಮೂಲಭೂತ ಆಯ್ಕೆ

ಬೆಂಬಲ ಆಯ್ಕೆ

ಆಲ್ ರೌಂಡರ್ ಆಯ್ಕೆ

ಪ್ರಮುಖ ವೈಶಿಷ್ಟ್ಯಗಳು

ಆಕಸ್ಮಿಕ ಸಾವು

ಶಾಶ್ವತ ಸಂಪೂರ್ಣ ಅಂಗವೈಕಲ್ಯ

ಶಾಶ್ವತ ಭಾಗಶಃ ಅಂಗವೈಕಲ್ಯ

×
ಎಲ್ಲಾ ಚಿಕಿತ್ಸೆಗಳು

×
ಡೇಕೇರ್ ಪ್ರಕ್ರಿಯೆಗಳು

×
ಕ್ಯುಮುಲೇಟಿವ್ ಬೋನಸ್

×

ಪ್ರಮಾಣಿತ ಪಾಲಿಸಿ ವೈಶಿಷ್ಟ್ಯಗಳು

ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳು

×
ಆಸ್ಪತ್ರೆ ನಗದು

×
ಮಗುವಿನ ಶಿಕ್ಷಣದ ಪ್ರಯೋಜನ

×
ಡೊಮಿಸಿಲಿಯರಿ ಹಾಸ್ಪಿಟಲೈಸೇಷನ್

×
ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್

×
ಅಂತ್ಯಕ್ರಿಯೆ ಮತ್ತು ಸಾರಿಗೆ ವೆಚ್ಚಗಳು

×
ಆಮದು ಮಾಡಿದ ಔಷಧಿಗಳ ಸಾಗಣೆ

×

ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಯಾರು ಪಡೆಯಬೇಕು?

ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

  • ವಿಭಿನ್ನ ಪಾಲಿಸಿಗಳನ್ನು ನೋಡಿ - ಹಣ ಉಳಿಸುವುದು ಉತ್ತಮ ವಿಚಾರ, ಆದರೆ ಕೆಲವೊಮ್ಮೆ ಕಡಿಮೆ ಪ್ರೀಮಿಯಂ ಹೊಂದಿರುವ ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು ಉತ್ತಮ ಯೋಜನೆಗಳನ್ನು ಹೊಂದಿಲ್ಲದಿರಬಹುದು; ಆದ್ದರಿಂದ, ಕೈಗೆಟುಕುವ ಬೆಲೆಯಲ್ಲಿ ನಿಮಗೆ ಉತ್ತಮವೆನಿಸುವ ಪಾಲಿಸಿಯನ್ನು ಹುಡುಕಲು, ವಿಭಿನ್ನ ಪಾಲಿಸಿಗಳ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.
  • ಸರಿಯಾದ ಕವರೇಜ್ ಪಡೆಯಿರಿ - ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಉತ್ತಮ ಕವರೇಜನ್ನು ನೀಡಬೇಕು.
  • ಸರಿಯಾದ ಸಮ್ ಇನ್ಶೂರ್ಡ್ ಆಯ್ಕೆಮಾಡಿ - ನಿಮ್ಮ ಕೆಲಸದ ಸ್ವರೂಪ ಮತ್ತು ನೀವು ಎದುರಿಸುವ ಅಪಾಯದ ಆಧಾರದ ಮೇಲೆ, ನಿಮ್ಮ ಸಮ್ ಇನ್ಶೂರ್ಡ್ ಅನ್ನು ಕಸ್ಟಮೈಸ್ ಮಾಡಲು ನಿಮ್ಮನ್ನು ಅನುಮತಿಸುವ ಪಾಲಿಸಿಯನ್ನು ನೀವು ನೋಡಬಹುದು.
  • ಕ್ಲೈಮ್‌ಗಳ ಪ್ರಕ್ರಿಯೆ - ಇದು ಯಾವುದೇ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಕೇವಲ ಕ್ಲೈಮ್‌ಗಳನ್ನು ಮಾಡುವುದಷ್ಟೇ ಸುಲಭವಾಗಿರದೆ, ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದು ಸಹ ಸುಲಭವಾಗಿರುವ ಇನ್ಶೂರೆನ್ಸ್ ಕಂಪನಿಯನ್ನು ನೋಡಿ. ಅದು ನಿಮ್ಮನ್ನು ಬಹಳಷ್ಟು ತೊಂದರೆಗಳಿಂದ ಕಾಪಾಡುತ್ತದೆ. 
  • ಸೇವಾ ಪ್ರಯೋಜನಗಳು - ನಿಮಗೆ, 24X7 ಕಸ್ಟಮರ್ ಸಪೋರ್ಟ್ ಅಥವಾ ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ನಂತಹ ಮುಂತಾದ ಹೆಚ್ಚುವರಿ ಪ್ರಯೋಜನಗಳನ್ನು ನೀಡಬಲ್ಲ ಇನ್ಶೂರೆನ್ಸ್ ಕಂಪನಿಯನ್ನು ನೀವು ಆಯ್ಕೆಮಾಡಿ.    

ಸಾಮಾನ್ಯ ಪರ್ಸನಲ್ ಆ್ಯಕ್ಸಿಡೆಂಟ್ ನಿಯಮಗಳನ್ನು ನಿಮಗಾಗಿ ಸರಳಗೊಳಿಸಲಾಗಿದೆ

ಅಪಘಾತ

ಯಾವುದೇ ಹಠಾತ್, ಅನಿರೀಕ್ಷಿತ ಸನ್ನಿವೇಶವು, ಅದಕ್ಕೆ ಒಳಗಾದ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಗಾಯಗಳನ್ನು ಉಂಟುಮಾಡಬಹುದು ಅಥವಾ ಉಂಟುಮಾಡದಿರಬಹುದು.

ನಿಕಟ ಕುಟುಂಬ

ನಿಕಟ ಕುಟುಂಬ ನಿಮ್ಮ ನಿಕಟ ಕುಟುಂಬವು ನಿಮ್ಮ ಸಂಗಾತಿ, ಮಗು, ಪೋಷಕರು ಅಥವಾ ಒಡಹುಟ್ಟಿದ ಯಾವುದೇ ವ್ಯಕ್ತಿಯನ್ನು ಸೂಚಿಸುತ್ತದೆ.

ಫಲಾನುಭವಿಗಳು

ನಿಮ್ಮ ಮರಣದ ನಂತರ ನಿಮ್ಮ ಇನ್ಶೂರೆನ್ಸ್ ಪ್ರಯೋಜನವನ್ನು ಸ್ವೀಕರಿಸುವವರು ಎಂದು ನಿಮ್ಮ ಪಾಲಿಸಿಯಲ್ಲಿ ನೀವು ಹೆಸರಿಸಿದ ವ್ಯಕ್ತಿ (ಗಳು).

ಶಾಶ್ವತ ಸಂಪೂರ್ಣ ಅಂಗವೈಕಲ್ಯ

ಯಾವುದೇ ಗಾಯವು ಶಾಶ್ವತವಾಗಿದ್ದು ಮತ್ತು ನೀವು ಕೆಲಸ ಮಾಡಲು ಸಾಧ್ಯವಾಗದಂತೆ ತಡೆಯುವುದು. ಇದು ಕುರುಡುತನ, ಪಾರ್ಶ್ವವಾಯು ಅಥವಾ ಎರಡೂ ಕಾಲುಗಳ ನಷ್ಟವನ್ನು ಒಳಗೊಂಡಿರಬಹುದು. 

ಶಾಶ್ವತ ಭಾಗಶಃ ಅಂಗವೈಕಲ್ಯ

ಗಾಯವು ಕಾಲಾನಂತರದಲ್ಲಿ ಸುಧಾರಿಸದಿದ್ದರೆ ಮತ್ತು ಅದು ನಿಮ್ಮನ್ನು ಭಾಗಶಃ ನಿಷ್ಕ್ರಿಯಗೊಳಿಸಿದರೆ. ಉದಾಹರಣೆಗೆ, ಒಂದು ಕಾಲಿನ ನಷ್ಟ, ಒಂದು ಕಣ್ಣಿನ ಕುರುಡುತನ ಅಥವಾ ಒಂದು ಕಿವಿಯು ಕೇಳುವುದನ್ನು ಕಳೆದುಕೊಳ್ಳುವುದು.

ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯ

ಅಂಗವೈಕಲ್ಯವನ್ನು ಉಂಟುಮಾಡುವ ಒಂದು ಗಾಯವು, ನೀವು ಚೇತರಿಸಿಕೊಳ್ಳುವಾಗ ನಿಮ್ಮನ್ನು ತಾತ್ಕಾಲಿಕ ಸಮಯದವರೆಗೆ ಕೆಲಸ ಮಾಡದಂತೆ ತಡೆಯುತ್ತದೆ. ಉದಾಹರಣೆಗೆ ಕೈ ಅಥವಾ ಕಾಲು ಮುರಿದಿರುವುದು.

ಸಂಚಿತ ಬೋನಸ್

ಕ್ಲೈಮ್-ಫ್ರೀ ವರ್ಷಕ್ಕಾಗಿ ನೀವು ಪಡೆಯುವ ಒಂದು ರೀತಿಯ ರಿವಾರ್ಡ್. ಇಲ್ಲಿ ನೀವು ಅದೇ ಪ್ರೀಮಿಯಂ ಅನ್ನು ಪಾವತಿಸುವಾಗ, ನಿಮ್ಮ ಕವರೇಜ್‌ನ ಹೆಚ್ಚುವರಿ ಶೇಕಡಾವಾರು ಮೊತ್ತವನ್ನು ನೀವು ಪಡೆಯುತ್ತೀರಿ.

ಸಮ್ ಇನ್ಶೂರ್ಡ್

ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪಾವತಿಸುವ ಗರಿಷ್ಠ ಅಮೌಂಟ್ ಆಗಿದೆ. 

ಡಿಡಕ್ಟಿಬಲ್

ಇದು ಇನ್ಶೂರೆನ್ಸ್ ಕಂಪನಿಯು ನಿಮ್ಮ ಕ್ಲೈಮ್ ಅನ್ನು ಕವರ್ ಮಾಡುವ ಮೊದಲು, ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾದ ಸಣ್ಣ ಮೊತ್ತವಾಗಿದೆ.  

ಪದೇ ಪದೇ ಕೇಳಲಾದ ಪ್ರಶ್ನೆಗಳು