ಒಂದು ಆ್ಯಂಬುಲೆನ್ಸ್ ಇನ್ಶೂರೆನ್ಸ್ ಕವರ್, ಪಾಲಿಸಿದಾರರ ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಉಂಟಾಗುವ ಆ್ಯಂಬುಲೆನ್ಸ್ ವೆಚ್ಚಗಳ ವಿರುದ್ಧ ಹಣಕಾಸಿನ ಪರಿಹಾರವನ್ನು ಒದಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಹೆಲ್ತ್ ಇನ್ಶೂರರ್ ಗಳು ತಮ್ಮ ನಿಯಮಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಆ್ಯಂಬುಲೆನ್ಸ್ ಕವರೇಜ್ ಅನ್ನು ಒಂದು ಅಪ್ಪರ್ ಕ್ಯಾಪ್ ನೊಂದಿಗೆ ಒದಗಿಸುತ್ತಾರೆ. ಈ ಮೇಲಿನ ಕ್ಯಾಪ್ ಹೆಚ್ಚಾಗಿ ಸಮ್ ಇನ್ಶೂರ್ಡ್ನ ಒಂದು ನಿರ್ದಿಷ್ಟ ಶೇಕಡಾವಾರು ಆಗಿರುತ್ತದೆ.
ಸ್ಪಷ್ಟ ತಿಳುವಳಿಕೆಗಾಗಿ ನಾವು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ:
ನೀವು 5 ಲಕ್ಷಗಳ ಸಮ್ ಇನ್ಶೂರ್ಡ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದೀರಿ ಎಂದು ಭಾವಿಸೋಣ. ಇದು ಸಮ್ ಇನ್ಶೂರ್ಡ್ ನ 1% ಆ್ಯಂಬುಲೆನ್ಸ್ ಕವರ್ ಅನ್ನು ಒದಗಿಸುತ್ತದೆ, ಅಂದರೆ, ರೂ. 5000. ಈಗ, ಒಂದು ದುರದೃಷ್ಟಕರ ಘಟನೆಯಲ್ಲಿ, ನೀವು ಆ್ಯಂಬುಲೆನ್ಸ್ ಅನ್ನು ಬುಕ್ ಮಾಡಬೇಕಾಗಿತ್ತು, ಹಾಗೂ ಅದಕ್ಕಾಗಿ ನಿಮಗೆ ರೂ. 6000 ಖರ್ಚಾಯಿತು. ಈ ಸಂದರ್ಭದಲ್ಲಿ, ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಆ್ಯಂಬುಲೆನ್ಸ್ ವೆಚ್ಚದಲ್ಲಿ ರೂ. 5000 ಕವರ್ ಮಾಡುತ್ತಾರೆ ಮತ್ತು ಉಳಿದ ರೂ.1000 ನಿಮ್ಮ ಕಡೆಯಿಂದ ನೀವು ಪಾವತಿಸಬೇಕಾಗುತ್ತದೆ.
ಕೆಲವು ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಪಾಲಿಸಿಯ ಭಾಗವಾಗಿ ಆ್ಯಂಬುಲೆನ್ಸ್ ಕವರ್ ಅನ್ನು ಒದಗಿಸುವುದಿಲ್ಲ ಆದರೆ ಪ್ರತ್ಯೇಕವಾಗಿ ಖರೀದಿಸಬಹುದಾದ ಮತ್ತು ಅದಕ್ಕೆ ಅನುಗುಣವಾಗಿ ಪಾವತಿಸಬಹುದಾದ ಒಂದು ಆಡ್-ಆನ್ ಅಡಿಯಲ್ಲಿ ಇದನ್ನು ಕವರ್ ಮಾಡುತ್ತಾರೆ.
ಡಿಜಿಟ್ನಲ್ಲಿ, ನಮ್ಮ ಹೆಲ್ತ್ ಯೋಜನೆಗಳ ಅಡಿಯಲ್ಲಿ ನಾವು ರೋಡ್ ಆ್ಯಂಬುಲೆನ್ಸ್ ವೆಚ್ಚಗಳನ್ನು ಒಂದು ಪಾಲಿಸಿ ವೈಶಿಷ್ಟ್ಯವಾಗಿ ಭರಿಸುತ್ತೇವೆ. ಕವರೇಜ್ ಸಾಮಾನ್ಯವಾಗಿ ಸಮ್ ಇನ್ಶೂರ್ಡ್ ನ 1% ಆಗಿರುತ್ತದೆ, ನಿಮ್ಮ ಪಾಲಿಸಿಯನ್ನು ಅವಲಂಬಿಸಿ, ಒಂದು ಅಪ್ಪರ್ ಕ್ಯಾಪಿನ ಜೊತೆ.