ಹೊಸ ಬೈಕ್ ಇನ್ಸೂರೆನ್ಸ್

ಆನ್ಲೈನ್ ನಲ್ಲಿ ಹೊಸ ಬೈಕ್ ಇನ್ಶೂರೆನ್ಸ್ ಕೊಟೇಶನ್ ಪಡೆಯಿರಿ

Third-party premium has changed from 1st June. Renew now

ಹೊಸ ಬೈಕ್ ಇನ್ಶೂರೆನ್ಸ್ ಬಗ್ಗೆ ಎಲ್ಲವನ್ನೂ ವಿವರಿಸಲಾಗಿದೆ

ಕೊನೆಗೂ ನಿಮಗೆ ಇಷ್ಟವಾದ ಟು ವೀಲರ್  ವಾಹನ ಸಿಕ್ಕಿತೇ? ನಮಗೆ ಇದರಿಂದ ಹೆಚ್ಚು ಸಂತೋಷವಾಗಿದೆ! ಆದರೆ ಒಬ್ಪ ಅನುಭವಿ ಪರಿಣಿತರಾಗಿ, ನೀವು ಬೈಕ್ ರಕ್ಷಣೆಯ ಬಗ್ಗೆ ಯೋಚಿಸಬೇಕೆಂದು ನಾವು ಬಯಸುತ್ತೇವೆ. ಅದನ್ನು ಇನ್ಶೂರೆನ್ಸ್ ಮಾಡುವುದರ ಮೂಲಕ ನೀವು ರಕ್ಷಿಸಬಹುದು. ಇದೊಂದು ಸರಳ ಪ್ರಕ್ರಿಯೆಯಾಗಿದೆ. ಚಿಂತಿಸಬೇಡಿ. ಅದರ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ನಾವು ಇಲ್ಲಿದ್ದೇವೆ.

ಮೊದಲನೆಯದಾಗಿ, ಪ್ರಸ್ತುತ ಎರಡು ಬಗೆಯ ಬೈಕ್ ಇನ್ಶೂರೆನ್ಸ್ ಗಳಿವೆ, ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್

ಭಾರತದಲ್ಲಿ ಹೊಸ ಬೈಕ್ ಇನ್ಶೂರೆನ್ಸ್ ಪ್ಲಾನ್ ಗಳು

ಬೈಕ್ ಇನ್ಸೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಐಡಿವಿ(IDV) ಮಹತ್ವ

ಐಡಿವಿ - ಇನ್ಶೂರೆನ್ಸ್ ಕಂಪನಿಯ ಘೋಷಿತ ಮೌಲ್ಯ, ಇದು ನಿಮ್ಮ ಬೈಕು ಸಂಪೂರ್ಣವಾಗಿ ಹಾನಿಗೊಳಗಾದರೆ ಅಥವಾ ಅಕಸ್ಮಾತ್ ಕಳ್ಳತನವಾದರೆ ನಿಮ್ಮ ಇನ್ಶೂರೆನ್ಸ್ ಕಂಪನಿಯವರು ನಿಮಗೆ ಕೊಡುವ ಗರಿಷ್ಠ ಮೊತ್ತವಾಗಿದೆ. ಕಡಿಮೆ ಪ್ರೀಮಿಯಂಗಳು ನಿಮ್ಮನ್ನು ಆಕರ್ಷಣೆಪಡಿಸುತ್ತವೆ ನಿಜ. ಅದು ನಮಗೂ ಗೊತ್ತಿದೆ, ಆದರೆ ಅದು ನಿಮಗೆ ಗರಿಷ್ಠ ಆರ್ಥಿಕ ಲಾಭವನ್ನು ನೀಡುವುದಿಲ್ಲ. ಅದಕ್ಕಾಗಿಯೇ ನಾವು ಹೇಳುವುದೇನೆಂದರೆ, ನೀವು ಕೇವಲ ಪ್ರೀಮಿಯಂ ಮಾತ್ರವಲ್ಲ ಯಾವಾಗಲೂ ನಿಮಗೆ ನೀಡುತ್ತಿರುವ ಐಡಿವಿ  ಅನ್ನು ಸಹ ಪರಿಶೀಲಿಸಬೇಕು.

ಇನ್ಶೂರೆನ್ಸ್ ಮಾಡಿಸುವಾಗ ಹೆಚ್ಚಿನ ಐಡಿವಿ  ಅನ್ನು ಆಯ್ಕೆ ಮಾಡಲು ನಾವು ನಿಮಗೆ ಸಲಹೆ ನೀಡುತ್ತೇವೆ, ಏಕೆ ಗೊತ್ತೇ? ನಿಮ್ಮ ಬೈಕ್‌ ಒಂದು ವೇಳೆ ಸಂಪೂರ್ಣವಾಗಿ ಹಾಳಾದರೆ, ನಿಮಗೆ ಅತಿ ಹೆಚ್ಚು ನಷ್ಟ ಉಂಟಾದರೆ, ಹೆಚ್ಚಿನ IDV ಹೆಚ್ಚಿನ ಮರುಪಾವತಿಗೆ ಕಾರಣವಾಗುತ್ತದೆ.

ಡಿಜಿಟ್‌ನಲ್ಲಿ, ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಲು ನಾವು ನಿಮಗೆ ಅವಕಾಶ ನೀಡುತ್ತೇವೆ ಏಕೆಂದರೆ ನೀವು ಯಾವುದೇ ಒತ್ತಡಕ್ಕೆ ಒಳಗಾಗದೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ.

ಹೊಸ ಬೈಕ್ ಇನ್ಶೂರೆನ್ಸ್ ಖರೀದಿಸುವಾಗ ಈ ವಿಷಯಗಳು ನೆನಪಿರಲಿ

ನಿಮ್ಮ ಹೊಸ ಬೈಕ್‌ಗಾಗಿ ಬೈಕ್ ಇನ್ಶೂರೆನ್ಸ್ ಖರೀದಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಹಲವಾರು ಅಂಶಗಳಿವೆ. ಅವುಗಳಿಗೆ ಗಮನ ಕೊಡುವುದರಿಂದ ನೀವು ಆದರ್ಶ ಮಟ್ಟದ ರಕ್ಷಣೆ ಪಡೆಯುತ್ತೀರಿ ಎಂಬುದು ಖಚಿತವಾಗುತ್ತದೆ. ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:

# ಕ್ಲೈಮ್ ಪ್ರಕ್ರಿಯೆ- ಇದು ಬಹಳ ಮುಖ್ಯ; ಈ ಪ್ರಕ್ರಿಯೆಯು ಅತ್ಯಂತ ವೇಗವಾಗಿರಬೇಕು ಮತ್ತು ತೊಂದರೆ-ಮುಕ್ತವಾಗಿರಬೇಕು. ಇನ್ಶೂರೆನ್ಸ್ ಕಂಪನಿಯವರ ಸಾಮಾಜಿಕ ಮಾಧ್ಯಮ ಚಾನಲ್‌ಗಳು, ಅಧಿಕೃತ ವೆಬ್‌ಸೈಟ್ ಮತ್ತು ಗ್ರಾಹಕರ ವಿಮರ್ಶೆಗಳಂತಹ ಮೂಲಗಳಿಂದ ಅವರ ಕ್ಲೈಮ್ ಇತಿಹಾಸವನ್ನು ಪರಿಶೀಲಿಸಿ.

# ಪಾಲಿಸಿ ಪ್ರಕಾರ- ಪಾಲಿಸಿ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳಿ, ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ನೀವು ಹೊಂದಿರುವ ಆಯ್ಕೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ನಿಮ್ಮ ಇನ್ಶೂರೆನ್ಸ್ ಅಗತ್ಯಗಳಿಗೆ ಅನುಗುಣವಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಥವಾ ಕಾಂಪ್ರೆಹೆನ್ಸಿವ್ ಯೋಜನೆಯನ್ನು ಆಯ್ಕೆ ಮಾಡಿ.

# ಆಡ್-ಆನ್‌ಗಳು- ನಿಮ್ಮ ಪಾಲಿಸಿ ಜೊತೆಗೆ ಸರಿಯಾದ ಆಡ್-ಆನ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನೀವು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು. ಇವುಗಳಲ್ಲಿ ಕೆಲವು ಎಂದರೆ ಝೀರೋ ಡೆಪ್ರಿಸಿಯೇಷನ್ ರಕ್ಷಣೆ, ಎನ್‌.ಸಿ.ಬಿ(NCB) ರಕ್ಷಣೆ, ಇನ್‌ವಾಯ್ಸ್ ಪ್ರೊಟೆಕ್ಷನ್ ರಕ್ಷಣೆ ಮತ್ತು ಇಂಜಿನ್ ಪ್ರೊಟೆಕ್ಟ್ ರಕ್ಷಣೆ. ಇಂತಹ ಆಡ್-ಆನ್‌ಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಸರಿಯಾದದನ್ನು ಆಯ್ಕೆಮಾಡಿ.

# ಸರಿಯಾದ ಐಡಿವಿ- ನಿಮ್ಮ ಬೈಕ್ ಪಾಲಿಸಿಯನ್ನು ಆಯ್ಕೆ ಮಾಡುವಲ್ಲಿ ಅಥವಾ ರಿನ್ಯೂ ಮಾಡುವಲ್ಲಿ ಐಡಿವಿ(IDV) ಪ್ರಮುಖ ಪಾತ್ರ ವಹಿಸುತ್ತದೆ. ಐಡಿವಿ(IDV) ಹೆಚ್ಚಿದ್ದಷ್ಟು, ಅನಿರೀಕ್ಷಿತ ಸನ್ನಿವೇಶಗಳ ಸಮಯದಲ್ಲಿ ಪರಿಹಾರ ಹೆಚ್ಚು ಸಿಗುತ್ತದೆ. ಡಿಜಿಟ್ ನಲ್ಲಿ, ನಾವು ಸಂಪೂರ್ಣ ಪಾರದರ್ಶಕತೆಯನ್ನು ನಂಬುತ್ತೇವೆ ಮತ್ತು ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತೇವೆ.

# ಆನ್‌ಲೈನ್ ದರಗಳನ್ನು ಹೋಲಿಕೆ ಮಾಡಿ- ಇನ್ಶೂರೆನ್ಸ್ ಪ್ರೀಮಿಯಂ ದರಗಳನ್ನು ಹೋಲಿಸಲು ಆನ್‌ಲೈನ್‌ಗೆ ಹೋಗಿ, ನಿಮ್ಮ ಆಯ್ಕೆಯ ಪಾಲಿಸಿಯನ್ನು ಆನ್‌ಲೈನ್‌ನಲ್ಲಿಯೂ ಸಹ ಖರೀದಿಸಬಹುದು, ವಿವಿಧ ಆಯ್ಕೆಗಳು ಲಭ್ಯವಿವೆ. ವಿಶೇಷವಾಗಿ ನಮ್ಮೊಂದಿಗೆ ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸುವುದರ ಉತ್ತಮ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ಪೇಪರ್ ವರ್ಕ್ ಇರುವುದಿಲ್ಲ. ನಿಮ್ಮ ವಿವರಗಳನ್ನು ಆನ್‌ಲೈನ್‌ ನಲ್ಲಿ ಹಾಕಿದರೆ ಸಾಕು, ನಿಮ್ಮನ್ನು ನಾವು ಪರಿಗಣಿಸುತ್ತೇವೆ. ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು ಮತ್ತು ಹೋಲಿಕೆ ಮಾಡಲು ನೀವು ನಮ್ಮ ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.

ಡೀಲರ್ ನಿಂದ ಹೊಸ ಬೈಕ್ ಇನ್ಶೂರೆನ್ಸ್ ಖರೀದಿಸಬೇಕು ಎಂದುಕೊಳ್ಳುವುದು ಒಳ್ಳೆಯ ಆಲೋಚನೆಯೇ?

ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಸರಿಯಾದ ಇನ್ಶೂರೆನ್ಸ್ ಕಂಪನಿಯನ್ನು ಹುಡುಕುವ ನಿಟ್ಟಿನಲ್ಲಿ ಜನರು ತಮ್ಮ ಎಲ್ಲಾ ಶಕ್ತಿ ಮತ್ತು ಸಮಯವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಹೆಚ್ಚಿನ ಮಾಲೀಕರು ತಮ್ಮ ಬೈಕ್ ಡೀಲರ್‌ಗಳು ನೀಡುವ ಇನ್ಶೂರೆನ್ಸ್ ಪಾಲಿಸಿಯನ್ನೇ ತೆಗೆದುಕೊಳ್ಳುತ್ತಾರೆ. ಇದು ಸಮಯ ಉಳಿಸುತ್ತದೆ ನಿಜ, ಜೊತೆಗೆ ಅನುಕೂಲಕರವಾಗಿಯೂ ಇದೆ! ಆದರೆ ನೀವು ಹೀಗೆ ಮಾಡುವುದು ಸರಿಯಾದ ಕೆಲಸವೇ? ನಿಮ್ಮ ಡೀಲರ್‌ನಿಂದ ನೀವು ಪಾಲಿಸಿಯನ್ನು ಖರೀದಿ ಮಾಡಬೇಕು ಎಂದು ಆಲೋಚಿಸಿದರೆ ಏನು ತಪ್ಪಾಗಬಹುದು ಎಂಬುದನ್ನು ನೋಡೋಣ.

# ನಿಮಗೆ ಸೀಮಿತ ಆಯ್ಕೆಗಳು ಸಿಗುತ್ತವೆ- ಒಮ್ಮೆ ನೀವು ನಿಮ್ಮ ಟು ವೀಲರ್  ವಾಹನವನ್ನು ನಿಮ್ಮ ಡೀಲರ್‌ನಿಂದ ಖರೀದಿಸಿದ ನಂತರ, ಅವರು ನಿಮಗೆ ಮಾರಾಟ ಮಾಡುವ ಸಾಧ್ಯತೆಯಿರುವ ಎರಡನೆಯ ವಸ್ತು ಎಂದರೆ ಅದು ಬೈಕ್ ಇನ್ಶೂರೆನ್ಸ್ ಪಾಲಿಸಿ. ಇದು ಒಂದು ರೀತಿ ಅನುಕೂಲಕರವಾಗಿದ್ದರೂ ಕೂಡ, ಆನ್‌ಲೈನ್ ಆಯ್ಕೆಗಳಿಗೆ ಹೋಲಿಸಿದರೆ, ಇದು ಬಹಳ ಸೀಮಿತ ಆಯ್ಕೆಗಳ ಅನಾನುಕೂಲತೆಯೊಂದಿಗೆ ಬರುತ್ತದೆ. ಇಷ್ಟೇ ಅಲ್ಲದೇ, ನಿಮ್ಮ ಡೀಲರ್ ಬಹುಶಃ ಕೆಲವೊಂದು ನಿರ್ದಿಷ್ಟ ವಿಮಾ ಕಂಪನಿಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿರುತ್ತಾರೆ ಮತ್ತು ಈ ಕಂಪನಿಗಳು ಒದಗಿಸುವ ಇನ್ಶೂರೆನ್ಸ್ ಪರಿಹಾರಗಳನ್ನು ಮಾತ್ರ ಅವರು ನಿಮಗೆ ನೀಡುತ್ತಾರೆ.

# ಅತ್ಯುತ್ತಮ ಆಡ್-ಆನ್‌ಗಳು- ನಿಮ್ಮ ಬೈಕ್‌ಗೆ ಉತ್ತಮ ರಕ್ಷಣೆ ನೀಡಬಹುದಾದ ವ್ಯಾಪಕ ಶ್ರೇಣಿಯ ಆಡ್-ಆನ್‌ಗಳಿಂದ ಆಯ್ಕೆ ಮಾಡುವ ಸ್ವಾತಂತ್ರ್ಯ ನಿಮಗೆ ಇರುವುದಿಲ್ಲ. ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸುವುದು ನಿಮ್ಮ ಪ್ಲಾನ್ ಅನ್ನು ಆಯ್ಕೆ ಮಾಡಲು ವಿಭಿನ್ನ ಆಡ್-ಆನ್‌ಗಳೊಂದಿಗೆ ಕಸ್ಟಮೈಸ್ ಮಾಡುವ ಪ್ರಯೋಜನವನ್ನು ಸಹ ನೀಡುತ್ತದೆ.

# ದರಗಳನ್ನು ಹೋಲಿಸಲಾಗುವುದಿಲ್ಲ- ಇನ್ಶೂರೆನ್ಸ್ ದರಗಳನ್ನು ಹೋಲಿಸುವುದು ಬಹಳ ಮುಖ್ಯ. ಆದರೆ ನೀವು ಡೀಲರ್ ರಿಂದ ಇನ್ಶೂರೆನ್ಸ್ ಖರೀದಿಸಲು ಹೋದಾಗ ನಿಮಗೆ ಈ ಅವಕಾಶ ಸಿಗುವುದಿಲ್ಲ.

ಆನ್‌ಲೈನ್‌ಗೆ ಹೋಗಿ, ಅಲ್ಲಿ ಸ್ವಲ್ಪ ಸಂಶೋಧನೆ ಮಾಡಿ ಅಥವಾ ಉತ್ತಮವಾಗಿ ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ನೇರವಾಗಿ ಖರೀದಿಸಲು ಮುಂದಾಗಿ ಎಂದು ನಾವು ಶಿಫಾರಸು ಮಾಡುತ್ತೇವೆ. ಈ ಪ್ರಕ್ರಿಯೆಯು ತುಂಬಾ ವೇಗವಾಗಿದೆ, ಇಲ್ಲಿ ಯಾವುದೇ ಪೇಪರ್ವರ್ಕ್ ಇಲ್ಲ ಮತ್ತು ಉತ್ತಮ ವಿಚಾರ ಎಂದರೆ, ನಿಮ್ಮ ಬೈಕ್ ಇನ್ಶೂರೆನ್ಸ್ ನಿಂದ ಏನನ್ನು ನಿರೀಕ್ಷಿಸಬಹುದು ಎಂದು ನಿಮಗೆ ತಿಳಿದಿದೆ, ಏಕೆಂದರೆ ಇದನ್ನು ಆಯ್ಕೆ ಮಾಡುತ್ತಿರುವವರಲ್ಲಿ ನೀವು ಕೂಡ ಒಬ್ಬರು!

ಆನ್ಲೈನ್ ನಲ್ಲಿ ಹೊಸ ಬೈಕ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ?

ಹಂತ 1- ಬೈಕ್ ಇನ್ಶೂರೆನ್ಸ್ ಪುಟಕ್ಕೆ ಹೋಗಿ, ನಿಮ್ಮ ವಾಹನದ ತಯಾರಿಕೆ, ಮಾಡೆಲ್, ವೇರಿಯೆಂಟ್, ನೋಂದಣಿ ದಿನಾಂಕವನ್ನು ಭರ್ತಿ ಮಾಡಿ (ಹೊಸ ಬೈಕು ಆಯ್ಕೆಮಾಡಿ). 'ಕೊಟೇಶನ್ ಪಡೆಯಿರಿ' ಅನ್ನು ಒತ್ತಿ ಮತ್ತು ನಿಮ್ಮ ಆಯ್ಕೆಯ ಪ್ಲಾನ್ ಅನ್ನು ಆರಿಸಿ.

ಹಂತ 2- ಕೇವಲ ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರ ಅಥವಾ ಪ್ರಮಾಣಿತ ಪ್ಯಾಕೇಜ್ (ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್) ನಡುವೆ ಆಯ್ಕೆಮಾಡಿ.

ಹಂತ 3 – ನೀವು ಹಿಂದಿನ ನೋ ಕ್ಲೈಮ್ ಬೋನಸ್ ಗಳಿಸಿದ ಬಗ್ಗೆ ನಮಗೆ ವಿವರ ನೀಡಿ.

ಹಂತ 4 - ನಿಮ್ಮ ಪ್ರೀಮಿಯಂಗೆ ನೀವು ಕೊಟೇಶನ್ ಪಡೆಯುತ್ತೀರಿ. ನೀವು ಸ್ಟ್ಯಾಂಡರ್ಡ್ ಪ್ಲಾನ್ ಆರಿಸಿದ್ದರೆ, ಐಡಿವಿ(IDV) ಅನ್ನು ಹೊಂದಿಸಿ, ಆಡ್-ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಅದನ್ನು ಮತ್ತಷ್ಟು ಕಸ್ಟಮೈಸ್ ಮಾಡಬಹುದು. ಮುಂದಿನ ಪುಟದಲ್ಲಿ ನೀವು ಅಂತಿಮ ಪ್ರೀಮಿಯಂ ಅನ್ನು ನೋಡುತ್ತೀರಿ.