ಟು ವೀಲರ್ ಇನ್ಶೂರೆನ್ಸ್
ಟು ವೀಲರ್ ವೆಹಿಕಲ್ ಇನ್ಶೂರೆನ್ಸ್‌ಗೆ ಬದಲಾಗಿ.

Third-party premium has changed from 1st June. Renew now

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್‌ನಲ್ಲಿ ಟೈರ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್‌ನಲ್ಲಿ ಟೈರ್ ಪ್ರೊಟೆಕ್ಟ್‌ನ ಆ್ಯಡ್-ಆನ್ ಕವರ್, ನಿಮ್ಮ ಇನ್ಶೂರೆನ್ಸ್ ಮಾಡಲಾದ ವೆಹಿಕಲ್‌ನ ಹಾನಿಗೊಳಗಾದ ಟೈರ್(ಗಳನ್ನು) ರಿಪ್ಲೇಸ್ ಮಾಡುವ ವೆಚ್ಚವನ್ನು ಕವರ್ ಮಾಡುತ್ತದೆ. ಈ ಆ್ಯಡ್-ಆನ್ ಕವರ್ ಅಡಿಯಲ್ಲಿ, ಟೈರ್ ಅನ್ನು ತೆಗೆದುಹಾಕಲು ಮತ್ತು ರಿಫಿಟ್ಟಿಂಗ್ ಮಾಡುವ ಕಾರ್ಮಿಕ ಶುಲ್ಕಗಳನ್ನು ಮತ್ತು ವೀಲ್ ಬ್ಯಾಲೆನ್ಸ್ ಮಾಡಲು ತಗಲುವ ವೆಚ್ಚ ಎರಡನ್ನೂ ಕವರ್ ಮಾಡುತ್ತದೆ. ಟೈರ್ ಪ್ರೊಟೆಕ್ಟ್ ಅಡಿಯಲ್ಲಿನ ಪ್ರಯೋಜನಗಳನ್ನು, ಪಾಲಿಸಿ ಅವಧಿಯ ಪ್ರತಿ ವರ್ಷದಲ್ಲಿ ಇನ್ಶೂರೆನ್ಸ್ ಮಾಡಿದ ವೆಹಿಕಲ್‌ನ, ಗರಿಷ್ಠ ಎರಡು ಟೈರ್‌ಗಳಿಗೆ ಮಾತ್ರ ಬಳಸಿಕೊಳ್ಳಬಹುದು. 

ಸೂಚನೆ: ಟು-ವೀಲರ್ ಇನ್ಶೂರೆನ್ಸ್‌ನಲ್ಲಿನ ಟೈರ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್ ಅನ್ನು ಡಿಜಿಟ್‌ನ ಟು ಪ್ರೈವೇಟ್ ಪ್ಯಾಕೇಜ್ ಪಾಲಿಸಿ - ಭಾರತೀಯ ಇನ್ಶೂರೆನ್ಸ್ ರೆಗ್ಯುಲೆಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ (ಐ.ಆರ್.ಡಿ.ಎ.ಐ) ಯೊಂದಿಗೆ ಯುಐಎನ್ ನಂಬರ್ IRDAN158RP0006V01201718/A0019V01201718 ನೊಂದಿಗೆ ಟೈರ್ ಪ್ರೊಟೆಕ್ಟ್ ಎಂದು ಸಲ್ಲಿಸಲಾಗಿದೆ.

ಟು-ವೀಲರ್ ಇನ್ಶೂರೆನ್ಸ್‌ನಲ್ಲಿ ಟೈರ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್ ಏನನ್ನು ಕವರ್ ಮಾಡುತ್ತದೆ

ಟೈರ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್‌ನ ಅಡಿಯಲ್ಲಿ ನೀಡಲಾಗುವ ಕವರೇಜ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

ಆ್ಯಡ್-ಆನ್ ಕವರ್, ಹಾನಿಗೊಳಗಾದ ಟೈರ್(ಗಳು) ಅನ್ನು ಹೊಸದಕ್ಕೆ ಸಮಾನವಾದ ಅಥವಾ ಅದೇ ರೀತಿಯಲ್ಲಿ ಕಾಣುವಂತಹ ಟೈರ್(ಗಳು) ನ ಮಾಡೆಲ್ ಮತ್ತು ಸ್ಪೆಸಿಫಿಕೇಶನ್‌ನೊಂದಿಗೆ ರಿಪ್ಲೇಸ್ ಮಾಡುವ ವೆಚ್ಚವನ್ನು ಮರುಪಾವತಿಸುತ್ತದೆ.

ಹೊಸ ಟೈರ್(ಗಳನ್ನು) ತೆಗೆಯಲು ಮತ್ತು ರಿಫಿಟ್ಟಿಂಗ್ ಮಾಡುವ ಕಾರ್ಮಿಕ ಶುಲ್ಕಗಳನ್ನು ಕವರ್ ಮಾಡುತ್ತದೆ

ವೀಲ್ ಬ್ಯಾಲೆನ್ಸ್ ಮಾಡಲು ತಗಲುವ ವೆಚ್ಚವನ್ನು ಕವರ್ ಮಾಡುತ್ತದೆ.

ಏನನ್ನು ಕವರ್ ಮಾಡುವುದಿಲ್ಲ?

ಟೈರ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್, ಬೇಸ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪಟ್ಟಿ ಮಾಡಲಾದ ಹೊರಗಿಡುವಿಕೆಗಳ ಜೊತೆಗೆ, ಈ ಕೆಳಗಿನವುಗಳಿಗೆ ಕವರೇಜ್ ನೀಡುವುದಿಲ್ಲ:

  • ಪಂಕ್ಚರ್/ಟೈರ್ ರಿಪೇರಿಗೆ ತಗಲುವ ವೆಚ್ಚ. 

  • ಅನಧಿಕೃತ ದುರಸ್ತಿಯಿಂದಾಗಿ ಅಥವಾ ಉತ್ಪಾದನೆ/ಜೋಡಣೆ ಸಮಯದಲ್ಲಿ ಅಥವಾ ದುರಸ್ತಿ ಕೈಗೊಳ್ಳುವ ಸಮಯದಲ್ಲಿ ಕಳಪೆ ಕಾಮಗಾರಿಯಿಂದಾಗಿ ಉಂಟಾಗುವ ಹಾನಿ. 

  • ಅಸಮರ್ಪಕ ಸ್ಟೋರೇಜ್ ಅಥವಾ ಸಾಗಣೆಯಿಂದಾಗಿ ಇನ್ಶೂರೆನ್ಸ ಮಾಡಲಾದ ವೆಹಿಕಲ್‌ನ ಹಾನಿ.

  • ಇನ್ಶೂರೆನ್ಸ್ ಮಾಡಲಾದ ವೆಹಿಕಲ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರದ ಹಾನಿಗಳು. 

  • ಟೈರ್ (ಗಳ) ಕಳ್ಳತನ

  • ವೀಲ್ ಆ್ಯಕ್ಸೆಸರಿಗಳು, ರಿಮ್‌ಗಳು, ಸಸ್ಪೆನ್ಷನ್‌ ಅಥವಾ ಟೈರ್‌ಗಳ ಹಾನಿಯ ಪರಿಣಾಮವಾಗಿ ಯಾವುದೇ ಇತರ ಭಾಗ/ಆ್ಯಕ್ಸೆಸರಿಗಳ ನಷ್ಟ ಅಥವಾ ಹಾನಿ.

  • ವೀಲ್‌ಗಳು/ಟೈರ್‌ಗಳು/ಟ್ಯೂಬ್‌ಗಳ ದಿನನಿತ್ಯದ ನಿರ್ವಹಣೆ ಮತ್ತು ಹೊಂದಾಣಿಕೆಗಳಿಗೆ ತಗಲುವ ವೆಚ್ಚ. 

  • ವೀಲ್ ಬ್ಯಾಲೆನ್ಸಿಂಗ್‌ಗಾಗಿ ಮಾಡಲಾದ ಕ್ಲೈಮ್ ಅಥವಾ ಇನ್ಶೂರೆನ್ಸ್ ಮಾಡಲಾದ ವೆಹಿಕಲ್ ಅನ್ನು ಡಿಜಿಟ್‌ನ ಅಧಿಕೃತ ರಿಪೇರಿ ಶಾಪ್‌ನಲ್ಲಿ ರಿಪೇರಿ ಮಾಡದಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. 

  • ರಿಪೇರಿ ಪ್ರಾರಂಭವಾಗುವ ಮೊದಲು, ಉಂಟಾಗಿರುವ ಹಾನಿ/ನಷ್ಟವನ್ನು ಪರಿಶೀಲಿಸುವ ಅವಕಾಶವನ್ನು ನೀಡದ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ.

  • ತಯಾರಕರ ವಾರಂಟಿ/ಮರುಸ್ಥಾಪನೆಯ ಕ್ಯಾಂಪೇನ್/ಇತರ ಯಾವುದೇ ಪ್ಯಾಕೇಜುಗಳ ಅಡಿಯಲ್ಲಿ ನಷ್ಟವನ್ನು ಕವರ್ ಮಾಡಿದ್ದರೆ.

  • ನಿಯಮಿತ ನಿರ್ವಹಣೆಯ ನಿರ್ಲಕ್ಷ್ಯದಿಂದ ಉಂಟಾಗುವ ಹಾನಿ.

 

ಡಿಸ್‌ಕ್ಲೈಮರ್ - ಲೇಖನವು ಮಾಹಿತಿ ಉದ್ದೇಶಗಳಿಗಾಗಿ, ಇಂಟರ್ನೆಟ್‌ನಾದ್ಯಂತ ಮತ್ತು ಡಿಜಿಟ್‌ನ ಪಾಲಿಸಿ ಪದಗಳ ಡಾಕ್ಯುಮೆಂಟ್‌ಗೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿದೆ. ಡಿಜಿಟ್ ಟು ವೀಲರ್ ಪ್ಯಾಕೇಜ್ ಪಾಲಿಸಿ - ಟೈರ್ ಪ್ರೊಟೆಕ್ಟ್ (UIN: IRDAN158RP0006V01201718/A0019V01201718), ಇದರ ಬಗ್ಗೆ ವಿವರವಾದ ಕವರೇಜ್, ಹೊರಗಿಡುವಿಕೆಗಳು ಮತ್ತು ಷರತ್ತುಗಳಿಗಾಗಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ನೋಡಿ.

 

ಟೈರ್ ಪ್ರೊಟೆಕ್ಟ್ ಆ್ಯಡ್-ಆನ್ ಕವರ್‌ನ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು.

ಹೊಸ ಟೈರ್(ಗಳ) ಇನ್‌ವಾಯ್ಸ್ ಕಾಪಿ ಇಲ್ಲದಿದ್ದಲ್ಲಿ ಇನ್ಶೂರೆನ್ಸ್ ಪೂರೈಕೆದಾರರು, ಟೈರ್(ಗಳ) ರಿಪ್ಲೇಸ್‌ಮೆಂಟ್ ಕ್ಲೈಮ್ ಅನ್ನು ಇತ್ಯರ್ಥಪಡಿಸುತ್ತಾರೆಯೇ?

ಇಲ್ಲ, ಟೈರ್ ಮೇಕ್, ಮಾಡೆಲ್, ಸೀರೀಸ್ ನಂಬರ್ ಇತ್ಯಾದಿ ವಿವರಗಳೊಂದಿಗೆ ಇನ್‌ವಾಯ್ಸ್ ಕಾಪಿ ಇಲ್ಲದಿದ್ದಲ್ಲಿ ಕ್ಲೈಮ್‌ ಅನ್ನು ಪಾವತಿಸಲು ಇನ್ಸೂರೆನ್ಸ್ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ.

ನಷ್ಟದ ಸಮಯದಲ್ಲಿ ಟೈರ್(ಗಳ) ಬಳಕೆಯಾಗದ ಟ್ರೆಡ್ ಡೆಪ್ತ್ >=7ಮಿಮೀ ಆಗಿದ್ದರೆ, ಪಡೆಯಬಹುದಾದ ಕ್ಲೈಮ್ ಮೊತ್ತ ಎಷ್ಟು?

ನಷ್ಟದ ಸಮಯದಲ್ಲಿ ಬಳಕೆಯಾಗದ ಟೈರ್ (ಗಳ) ಟ್ರೆಡ್ ಡೆಪ್ತ್ >=7 ಮಿಮೀ ಆಗಿದ್ದರೆ ಅದು ಹೊಸ ಟೈರ್(ಗಳ) ಬೆಲೆಯ 100 ಪ್ರತಿಶತವಾಗಿರುತ್ತದೆ.

ಅಪಘಾತದ ನಷ್ಟ ಅಥವಾ ಹಾನಿಯ ಕಾರಣದಿಂದಾಗಿ ಉಂಟಾಗಿದ್ದರೆ, ಈ ಆ್ಯಡ್-ಆನ್ ಕವರ್‌ನ ಅಡಿಯಲ್ಲಿ ನಷ್ಟ/ಹಾನಿಯು ಕವರ್ ಆಗುತ್ತದೆಯೇ?

ಹೌದು, ಅಪಘಾತದ ನಷ್ಟ ಅಥವಾ ಹಾನಿಯಿಂದ ಉಂಟಾದ ನಷ್ಟ/ಹಾನಿಗಾಗಿ ಇನ್ಶೂರೆನ್ಸ್ ಕಂಪನಿಯು ಮರುಪಾವತಿ ಮಾಡುತ್ತದೆ.