ವಿಶ್ವಾದ್ಯಂತ ಹೆಲ್ತ್ಕೇರ್ ಬೆಲೆಗಳು ಗಗನಕ್ಕೇರುತ್ತಿರುವುದನ್ನು ಗಮನಿಸಿದರೆ, ಅನಾರೋಗ್ಯ ಎನ್ನುವುದು ನೀವು ಬಯಸುವ ಕಟ್ಟಕಡೆಯ ವಿಷಯವಾಗಿದೆ. ಆದರೆ ಅದೇ ತಾನೇ ಅದರ ಸ್ವಭಾವ! ನಿಮಗೆ ಯಾವಾಗ ಹೆಲ್ತ್ ಅಸಿಸ್ಟೆನ್ಸ್ ಬೇಕಾಗುತ್ತದೆ ಎಂಬುದು ಸ್ವತಃ ನಿಮಗೂ ತಿಳಿದಿಲ್ಲ. ಅಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ, ಕಳಪೆ ಆರೋಗ್ಯದ ಮೇಲೆ ತೆರಬೇಕಾದ ಆಸ್ಪತ್ರೆಯ ಬಿಲ್ಗಳು, ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
ಅಂತಹ ಸಂದರ್ಭಗಳಲ್ಲಿ, ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಅದು ನಿಮ್ಮನ್ನು ಆರ್ಥಿಕ ಆಘಾತದಿಂದ ಮಾತ್ರವಲ್ಲದೆ, ಅಂತಹ ಸಮಯಗಳು ನೀಡಬಹುದಾದ ಎಲ್ಲಾ ಮಾನಸಿಕ ಒತ್ತಡದಿಂದಲೂ ಸಹ ನಿಮ್ಮನ್ನು ರಕ್ಷಿಸುತ್ತದೆ.
"ಹೆಲ್ತ್ ಇನ್ಶೂರೆನ್ಸ್ನಲ್ಲಿ ಮೊರಟೋರಿಯಂ ಎಂದರೇನು" ಎಂಬುದರ ಕುರಿತು ಮಾತನಾಡುವ ಮೊದಲು, "ಈ ಮೊದಲೇ-ಅಸ್ತಿತ್ವದಲ್ಲಿರುವ ಕಂಡೀಶನ್ ಎಂದರೇನು" ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ವ್ಯಾಖ್ಯಾನದ ಪ್ರಕಾರ, ಪ್ರಿ-ಎಕ್ಸಿಸ್ಟಿಂಗ್ ಡಿಸೀಸ್ (ಪಿಇಡಿ) ಎಂದರೆ ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲ 48 ತಿಂಗಳುಗಳಿಂದ ಅಥವಾ ಅದಕ್ಕಿಂತ ಕಡಿಮೆ ಅವಧಿಯಿಂದ ನೀವು ಬಳಲುತ್ತಿರುವ ಮತ್ತು ಡಯಾಗ್ನೋಸ್ ಮಾಡಿದ ಕಾಯಿಲೆಯಾಗಿದೆ.
ಹೆಚ್ಚಿನ ಪಾಲಿಸಿಗಳು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಕವರ್ ಮಾಡುತ್ತವೆಯಾದರೂ, ಅವು ಅದನ್ನೊಂದು ನಿರ್ದಿಷ್ಟ ಕಾಯುವ ಅವಧಿಯ ನಂತರ ಮಾತ್ರ ಮಾಡುತ್ತವೆ.
ಮೊರಟೋರಿಯಂ ಅಂಡರ್ರೈಟಿಂಗ್ ಒಂದು ಇನ್ಶೂರೆನ್ಸ್ ವಿಧವಾಗಿದ್ದು, ಇದರಲ್ಲಿ ಇನ್ಶೂರರ್ರಗಳು ಕಳೆದ ಐದು ವರ್ಷಗಳಿಂದ 'ಮೊದಲೇ ಅಸ್ತಿತ್ವದಲ್ಲಿರುವ' ಎಲ್ಲಾ ಕಂಡೀಶನ್ಗಳನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಹೊರತುಪಡಿಸುತ್ತಾರೆ. ಇದು ಕಾಯುವ ಅವಧಿಯಂತೆಯೇ ಇದ್ದು, ಆ ಅವಧಿಯ ನಂತರ ಅವುಗಳನ್ನು ಕವರ್ ಮಾಡುತ್ತಾರೆ.
ಸರಿ! ಮೊರಟೋರಿಯಂನಲ್ಲಿ, ನಿಮ್ಮ ಯಾವುದೇ 'ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳ' ಬಗ್ಗೆ ಯಾವುದೇ ವಿವರಗಳನ್ನು ಕೇಳಲಾಗುವುದಿಲ್ಲ, ಆದರೆ ಸಾಮಾನ್ಯವಾಗಿ, ಹಿಂದಿನ ಐದು ವರ್ಷಗಳಿಂದ ಇರುವ ಎಲ್ಲಾ ಹೆಲ್ತ್ ಕಂಡೀಶನ್ಗಳನ್ನು ಹೊರಗಿಡಲಾಗುತ್ತದೆ. ಪ್ರತಿ ಇನ್ಶೂರೆನ್ಸ್ ಪೂರೈಕೆದಾರರು ಮೊರಟೋರಿಯಂನ ಬಗ್ಗೆ ತಮ್ಮದೇಯಾದ ವ್ಯಾಖ್ಯಾನವನ್ನು ಹೊಂದಿದ್ದಾರೆ ಮತ್ತು ಇದು ಒಂದರಿಂದ ಒಬ್ಬರಿಗೆ ಭಿನ್ನವಾಗಿರುತ್ತವೆ ಎಂಬುದನ್ನು ನೆನಪಿಡಿ.
ಫುಲ್ ಮೆಡಿಕಲ್ ಅಂಡರ್ರೈಟಿಂಗ್ ಅಡಿಯಲ್ಲಿ, ಅರ್ಜಿದಾರರು ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಇನ್ಶೂರೆನ್ಸ್ ಪೂರೈಕೆದಾರರ ಎದುರು ಬಹಿರಂಗಪಡಿಸುವ ಅಗತ್ಯವಿದೆ. ಅದರ ಆಧಾರದ ಮೇಲೆ ಇನ್ಶೂರೆನ್ಸ್ ಕಂಪನಿಯು ಅರ್ಜಿದಾರರಿಗೆ ಕಾಂಪ್ರೆಹೆನ್ಸಿವ್ ಹೆಲ್ತ್ ಕವರೇಜ್ ಅಥವಾ ಈ ಕೆಳಗಿನ ಯಾವುದನ್ನಾದರೂ ನೀಡಲು ನಿರ್ಧರಿಸುತ್ತದೆ:
ನಾವೀಗ ಮೊರಟೋರಿಯಂ ಮತ್ತು ಫುಲ್ ಮೆಡಿಕಲ್ ಅಂಡರ್ರೈಟಿಂಗ್ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ನೋಡೋಣ
ವ್ಯತ್ಯಾಸದ ಅಂಶಗಳು |
ಮೊರಟೋರಿಯಂ |
ಫುಲ್ ಮೆಡಿಕಲ್ ಅಂಡರ್ರೈಟಿಂಗ್ |
ವೈದ್ಯಕೀಯ ಇತಿಹಾಸ |
ಅರ್ಜಿ ಸಲ್ಲಿಸುವಾಗ ನೀವು ಯಾವುದೇ ರೀತಿಯ 'ಮೊದಲೇ ಅಸ್ತಿತ್ವದಲ್ಲಿರುವ ಕಂಡೀಶನ್'ಗಳನ್ನು ಘೋಷಿಸುವ ಅಗತ್ಯವಿಲ್ಲ. |
ನಿಮಗೆ 'ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು' ಯಾವುದಾದರೂ ಇದ್ದರೆ, ನೀವು ಖಂಡಿತವಾಗಿ ಕಾಂಪ್ರೆಹೆನ್ಸಿವ್ ಪ್ರಶ್ನಾವಳಿಯನ್ನು ಪೂರ್ಣಗೊಳಿಸಬೇಕು. |
ಕಾಯುವ ಅವಧಿ |
ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು 5 ವರ್ಷಗಳಿಂದ ನೀವು ಬಳಲುತ್ತಿದ್ದ ಯಾವುದೇ ರೀತಿಯ 'ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆ'ಗಳಿಗೆ, ನೀವು ಎರಡು ವರ್ಷಗಳವರೆಗೆ ಕವರ್ ಆಗುವುದಿಲ್ಲ. |
ಮೊದಲೇ ಅಸ್ತಿತ್ವದಲ್ಲಿರುವ ಕಂಡೀಶನ್ಗಳು ಹೆಚ್ಚಾಗಿ ಒಂದು ನಿರ್ದಿಷ್ಟ ಕಾಯುವ ಅವಧಿಯವರೆಗೆ ಕವರ್ ಆಗುವುದಿಲ್ಲ. ಆದಾಗ್ಯೂ, ಇದು ಒಂದು ಕಂಪನಿಯಿಂದ ಬೇರೊಂದು ಕಂಪನಿಗಳ ನಡುವೆ ಭಿನ್ನವಾಗಿರುತ್ತದೆ ಮತ್ತು ಕವರೇಜಿನ ವ್ಯಾಪ್ತಿಯು ಅಥವಾ ಸನ್ನಿವೇಶಗಳು ಬದಲಾಗಬಹುದು. |
ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ |
ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಹಿಂದಿನ ವೈದ್ಯಕೀಯ ಇತಿಹಾಸವನ್ನು ಎಂದಿಗೂ ಕೇಳಿಲ್ಲವಾದ್ದರಿಂದ, ಪ್ರತಿ ಬಾರಿ ನೀವು ಕ್ಲೈಮ್ ಮಾಡಿದಾಗ, ಕಂಪನಿಯು ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯಕೀಯ ಇತಿಹಾಸವನ್ನು ನಿರ್ಣಯಿಸುತ್ತದೆ. ಆದ್ದರಿಂದ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. |
ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಅಪ್ಲಿಕೇಶನ್ನ ಸಮಯದಲ್ಲಿ, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಯ ಸಂಪೂರ್ಣ ಮೌಲ್ಯಮಾಪನದ ಕೆಲಸವನ್ನು ಈಗಾಗಲೇ ಮಾಡಿದ್ದಾರೆ. ಆದ್ದರಿಂದ ಮೊರಟೋರಿಯಂ ಪ್ರಕ್ರಿಯೆಗೆ ಹೋಲಿಸಿದರೆ, ಇಲ್ಲಿ ಕ್ಲೈಮ್ ಪ್ರಕ್ರಿಯೆಯು ಹೆಚ್ಚು ಸುಗಮವಾಗಿರುತ್ತದೆ ಮತ್ತು ವೇಗವಾಗಿರುತ್ತದೆ |
ಎರಡೂ ವಿಧಾನಗಳು ತಮ್ಮದೇ ಆದ ಫೀಚರ್ಗಳು, ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಇಲ್ಲಿ ಇವೆರಡೂ ಸಮಂಜಸವೆನಿಸುತ್ತಿದ್ದು, ಇವುಗಳ ಹೋಲಿಕೆ ಮಾಡುವುದು ಕಷ್ಟ ಮತ್ತು ಅದರ ಬದಲಾಗಿ, ಇವೆರಡರಲ್ಲಿ ನಿಮಗೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದರ ಆಧಾರದ ಮೇಲೆ ಅವುಗಳನ್ನು ನಿರ್ಣಯಿಸಬೇಕಾಗಿದೆ.
ಯಾವುದೇ ರೀತಿಯ 'ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆ'ಗಳಿಲ್ಲದ ಸಧೃಡ ಮತ್ತು ಆರೋಗ್ಯಕರ ವ್ಯಕ್ತಿಗೆ, ಫುಲ್ ಮೆಡಿಕಲ್ ಅಂಡರ್ರೈಟಿಂಗ್ ಹೆಚ್ಚು ಸೂಕ್ತವಾಗಿದೆ. ಆದರೆ ಅನಾರೋಗ್ಯದ ಇತಿಹಾಸ ಹೊಂದಿರುವ ಯಾವುದೇ ವ್ಯಕ್ತಿ ಮೊರಟೋರಿಯಂ ವಿಧಾನವನ್ನು ಪಡೆದುಕೊಳ್ಳಬೇಕು. ಆದಾಗ್ಯೂ, ಈಗಾಗಲೇ ಹೇಳಿದಂತೆ, ಪ್ರತಿಯೊಂದೂ ಸಹ ತನ್ನದೇ ಆದ ಫೀಚರ್ಗಳನ್ನು ಹೊಂದಿದೆ. ಹಾಗೂ ನಿರ್ಧಾರವು ಸಂಪೂರ್ಣವಾಗಿ ಇನ್ಶೂರ್ಡ್ನ ಆರೋಗ್ಯ ಮತ್ತು ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ.