ನೌಕರರಿಗಾಗಿ ಗ್ರೂಪ್ ಹೆಲ್ತ್ ಇನ್ಶೂರೆನ್ಸ್

26,000+

ಕಾರ್ಪೋರೇಟ್ ಗಳು ಕವರ್ ಆಗಿವೆ

45 Lakh+

ಜೀವಗಳು ಇನ್ಶೂರ್ ಆಗಿವೆ

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?

ಗ್ರೂಪ್ ಹೆಲ್ತ್   ಇನ್ಶೂರೆನ್ಸ್, ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಜನರ ಒಂದು ಗುಂಪನ್ನು ಕವರ್ ಮಾಡುವ ಒಂದು ರೀತಿಯ  ಹೆಲ್ತ್   ಇನ್ಶೂರೆನ್ಸ್ ಯೋಜನೆಯಾಗಿದೆ.ಇದನ್ನು ಹೆಚ್ಚಾಗಿ ನೌಕರರಿಗೆ ಒಂದು ಬೆಲೆಬಾಳುವ ಲಾಭದ ಕೊಡುಗೆಯಾಗಿ ನೀಡಲಾಗುತ್ತದೆ ಹಾಗೂ ಇದರ ಪ್ರೀಮಿಯಂ ಅನ್ನು ಉದ್ಯೋಗದಾತರಿಂದ ಭರಿಸಲಾಗುತ್ತದೆ.ಗ್ರೂಪ್ ಹೆಲ್ತ್  ಇನ್ಶೂರೆನ್ಸ್  ಕವರೇಜ್  ಕೆಲವು ಸಂದರ್ಭಗಳಲ್ಲಿ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ವಿಸ್ತರಿಸಬಹುದು. ಈ ಇನ್ಶೂರೆನ್ಸ್  ಯೋಜನೆಯನ್ನು ಕಾರ್ಪೊರೇಟ್ ಆರೋಗ್ಯ ಇನ್ಶೂರೆನ್ಸ್  ಅಥವಾ ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್  ಎಂದೂ ಕರೆಯಲಾಗುತ್ತದೆ.

ಆದರೆ, ವೈಯಕ್ತಿಕ  ಹೆಲ್ತ್   ಇನ್ಶೂರೆನ್ಸ್ ಗೆ ಹೋಲಿಸಿದರೆ ಇದರ ಬೆಲೆಯು ಬಹಳ ಕಡಿಮೆ ಇದ್ದು, ಉದ್ಯೋಗದಾತರಿಗೆ ತನ್ನ ತೆರಿಗೆ ಕಡಿತಗಳಲ್ಲೂ ಲಾಭ ನೀಡುತ್ತದೆ, ಹೀಗಾಗಿ ಇದು ನೌಕರ ಹಾಗೂ ಉದ್ಯೋಗ್ಯದಾತ ಇಬ್ಬರಿಗೂ ಲಾಭದಾಯಕವಾಗಿರುತ್ತದೆ.

ಡಿಜಿಟ್ ನಲ್ಲಿ ನಾವು, ನೌಕರರನ್ನು ಎಲ್ಲಾ ರೀತಿಯ ಅನಾರೋಗ್ಯ ಹಾಗೂ ಖಾಯಿಲೆಗಳಿಂದ ಕವರ್ ಮಾಡಲು ಕಾಂಪ್ರೆಹೆನ್ಸಿವ್  ಹೆಲ್ತ್   ಇನ್ಶೂರೆನ್ಸ್ ಯೋಜನೆ, ಹಾಗೂ ಈ ಗಂಭೀರ ಪಿಡುಗಿನಿಂದ ನಿಮ್ಮ ಎಲ್ಲಾ ನೌಕರರು ಸುರಕ್ಷಿತವಾಗಿದ್ದಾರೆ ಎಂದು ಖಚಿತ ಪಡಿಸಲು ಒಂದು ನಿರ್ದಿಷ್ಟ ಕೋವಿಡ್ - 19 ಗ್ರೂಪ್ ಕವರ್, ಎರಡನ್ನೂ ಒದಗಿಸುತ್ತೇವೆ

ಡಿಜಿಟ್ ಹೆಲ್ತ್  ಪ್ಲಸ್ ಪಾಲಿಸಿ (ಪರಿಷ್ಕರಣೆ) - ಜಿ ಒಡಿ ಎಚ್ ಎಲ್ ಜಿ ಪಿ 21487ವಿ032021

ಗ್ರೂಪ್ ಹೆಲ್ತ್ ಪಾಲಿಸಿಯಿಂದ ನಿಮ್ಮ ನೌಕರರ ಆರೋಗ್ಯವನ್ನು ಏಕೆ ಕಾಪಾಡಬೇಕು?

ನೌಕರರನ್ನು  ತಮ್ಮಲ್ಲೇ ಉಳಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು: ಜನರು ತಮಗೆ ಭದ್ರತಾ ಭಾವನೆಯನ್ನು ನೀಡುವ ನೌಕರಿಗೆ ಮಹತ್ವ ನೀಡುತ್ತಾರೆ. ಒಂದು ಗ್ರೂಪ್ ಹೆಲ್ತ್   ವಿಮೆ ನಿಮ್ಮ ನೌಕರರಿಗೆ ಹಾಗೂ ಅವರ ಕುಟುಂಬಕ್ಕೆ ಬೇಕಾದ ಆರ್ಥಿಕ ಭದ್ರತೆಯನ್ನು ಒದಗಿಸುವುದಲ್ಲದೆ, ಅವರ ಉದ್ಯೋಗದಾತ ವಾಸ್ತವದಲ್ಲಿ ಅವರ ಒಳಿತನ್ನು ಬಯಸುತ್ತಾರೆಂಬ ಒಟ್ಟಾರೆ ಸಂತುಷ್ಟಿಯನ್ನು ಅವರಿಗೆ ನೀಡುತ್ತದೆ.

ಕೋವಿಡ್- 19 ಪಿಡುಗಿನ ಸಮಯದಲ್ಲಿ ಅವರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ: ಪಿಡುಗಿನ ಸಮಯದಲ್ಲಿ, ಆರ್ಥಿಕ ಕುಸಿತ ಹಾಗೂ ಎಲ್ಲಾ ವಿಭಾಗಗಳಲ್ಲಿ ಆಗುತ್ತಿರುವ ಆದಾಯ ಕಡಿತಗಳಿಂದಾಗಿ, ಆರ್ಥಿಕ ಭದ್ರತೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ನಿಮ್ಮ ನೌಕರರು ಆರ್ಥಿಕವಾಗಿ ಹಾಗೂ ವೈದ್ಯಕೀಯವಾಗಿ ಭದ್ರವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ವೈರಸ್ ನಿಂದ ಉಂಟಾಗಬಹುದಾದ ಚಿಕಿತ್ಸೆಯ ಖರ್ಚುಗಳಿಂದ ಅವರನ್ನು ರಕ್ಷಿಸುವುದು ನೀವು ಅವರಿಗೆ ಮಾಡಬಹುದಾದ ಕನಿಷ್ಟ ಸಹಾಯ ಎನ್ನಬಹುದು.

ನೌಕರರ ಪ್ರೋತ್ಸಾಹವನ್ನು ಬಲಪಡಿಸುವುದು: ಸಂತೃಪ್ತ ನೌಕರರು ಕೆಲಸದ ಸ್ಥಳವನ್ನು ಉಲ್ಲಾಸಭರಿತವಾಗಿಸುತ್ತಾರೆ ಹಾಗೂ ಖಂಡಿತವಾಗಿಯೂ ಯಶಸ್ವೀ ಸಂಸ್ಥೆಗಳನ್ನೂ ಕೂಡಾ ರಚಿಸುತ್ತಾರೆ! ನೌಕರರು ಎಷ್ಟು ಭದ್ರತೆ ಹಾಗೂ ತೃಪ್ತಿಯನ್ನು ಅನುಭವಿಸುತ್ತಾರೋ, ಅವರು ಆನಂದಿತ ಹಾಗೂ ಪ್ರೋತ್ಸಾಹಿತರಾಗಿರುವ ಸಾಧ್ಯತೆ ಅಷ್ಟೇ ಹೆಚ್ಚು ಆಗಿರುತ್ತದೆ ಎನ್ನುವುದು ಆಶ್ಚರ್ಯದ ವಿಷಯವೇನಲ್ಲ!

ಗಂಭೀರ  ಅನಾರೋಗ್ಯ   ಸ್ಥಿತಿಗಳಿಂದ ಅವರನ್ನು ಸಂರಕ್ಷಿಸಿ: ಭಾರತದಲ್ಲಿ 61% ಕ್ಕಿಂತ ಹೆಚ್ಚು ಅನಾರೋಗ್ಯದಿಂದ ಆಸ್ಪತ್ರೆ ದಾಖಲಾತಿ ಹಾಗೂ ಸಾವುಗಳು ಜೀವನಶೈಲಿ-ಸಂಬಂಧಿತ ಖಾಯಿಲೆಗಳಿಂದ ಆಗುತ್ತದೆ. ಇತರ ಖಾಯಿಲೆಗಳ ಜೊತೆ ಇದರಿಂದಲೂ ನಿಮ್ಮ ನೌಕರರನ್ನು ಸಂರಕ್ಷಿಸಿ; ಇಂತಹ ಸಮಸ್ಯೆಗಳು ಎಷ್ಟು ಬೇಗ ಪತ್ತೆ ಹಚ್ಚಲಾಗುತ್ತವೆಯೋ ಅಷ್ಟೇ ಬೇಗ ಇದರ ಚಿಕಿತ್ಸೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.

ಅವರ ಮಾನಸಿಕ ನೆಮ್ಮದಿಯನ್ನು ವೃದ್ಧಿಸಿ: ಹಲವು ನೌಕರರು ತಮ್ಮ ಆರ್ಥಿಕ ಅಥವಾ ವೈಯಕ್ತಿಕ ಸ್ಥಿತಿಯಿಂದಾಗಿ ಒತ್ತಡಕ್ಕೆ ಸಿಲುಕುತ್ತಾರೆ, ಇದರಿಂದ ಅವರ ಕೆಲಸ ಮಾಡುವ ಸಾಮರ್ಥ್ಯವೂ ಕುಗ್ಗಬಹುದು. ನಮ್ಮ ಗ್ರೂಪ್ ಹೆಲ್ತ್  ಇನ್ಶೂರೆನ್ಸ್ ಯೋಜನೆ ಅವರ ಉಳಿತಾಯದ ಸಂರಕ್ಷಣೆ ಮಾಡುವುದಲ್ಲದೆ, ಸೂಕ್ತ ಬೆಂಬಲದೊಂದಿಗೆ ಅವರ ಒಟ್ಟಾರೆ ಮಾನಸಿಕ ನೆಮ್ಮದಿಯನ್ನೂ ಹೆಚ್ಚಿಸುತ್ತದೆ.

ಡಿಜಿಟ್ ನ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನ ವಿಶೇಷತೆ ಏನು?

ಡಿಜಿಟ್ ನ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?

ಏನೆಲ್ಲಾ ಕವರ್ ಆಗಿರುವುದಿಲ್ಲ?

ಪ್ರಸವ-ಪೂರ್ವ ಹಾಗೂ ಪ್ರಸವನಂತರದ ವೆಚ್ಚಗಳು

ಪ್ರಸವ-ಪೂರ್ವ ಹಾಗೂ ಪ್ರಸವನಂತರದ ವೈದ್ಯಕೀಯ ವೆಚ್ಚಗಳು, ನೌಕರ ಅಥವಾ ಅವರ ಸಂಗಾತಿಯ ಆಸ್ಪತ್ರೆ ದಾಖಲಾತಿಗೆ ಕಾರಣವಾಗಿದ್ದನ್ನು ಹೊರತುಪಡಿಸಿ.

ಮೊದಲೇ ಇರುವ ರೋಗಗಳಿಗಾಗಿ ಕಾಯುವಿಕೆ ಅವಧಿ

ಮೊದಲೇ ಇರುವ ರೋಗದ ಸಂದರ್ಭದಲ್ಲಿ, ಕಾಯುವಿಕೆಯ ಅವಧಿ ಪೂರ್ತಿಯಾಗಿರುವ ಸಂದರ್ಭಗಳನ್ನು ಹೊರತುಪಡಿಸಿದರೆ, ಆ ಅನಾರೋಗ್ಯ ಅಥವಾ ಖಾಯಿಲೆಗಳಿಗೆ ಕ್ಲೈಮ್ ಮಾಡಲಾಗುವುದಿಲ್ಲ. ಆದರೆ, ನೀವು 50ಕ್ಕಿಂತ ಹೆಚ್ಚು ಸದಸ್ಯರನ್ನು ಕವರ್ ಮಾಡಲು ಬಯಸುವ ಸಂದರ್ಭದಲ್ಲಿ, ಒಂದು ಪಿ ಇ ಡಿ ಕಾಯುವಿಕೆ ಅವಧಿಯ ಮನ್ನಾ ಸೌಲಭ್ಯ ಲಭ್ಯವಿದೆ.

ವೈದ್ಯರ ಶಿಫಾರಸು ಇಲ್ಲದೆಯೇ ಆಸ್ಪತ್ರೆ ದಾಖಲಾತಿ

ನೀವು ಕೇವಲ ಕೋವಿಡ್ ಕವರ್ ಅನ್ನು ಆಯ್ಕೆ ಮಾಡಿದರೆ, ಅಂತಹ ಸಂದರ್ಭದಲ್ಲಿ ಇನ್ಶೂರ್ಡ್ ವ್ಯಕ್ತಿಯು ಸರಕಾರದ ಅಧಿಕೃತವಾದ ತಪಾಸಣಾ ಕೇಂದ್ರದಿಂದ ಪಾಸಿಟಿವ್ ವರದಿ ಪಡೆದಿದ್ದರೆ ಮಾತ್ರ ಅವನು ಚಿಕಿತ್ಸೆಗೆ ಅರ್ಹನಾಗಿರುತ್ತಾನೆ.

ಒಂದು ಕವರ್‌ಗೆ ಮಾತ್ರ ಕೋವಿಡ್ ಚಿಕಿತ್ಸೆ

ನೀವು ಕೋವಿಡ್ ಕವರ್ ಅನ್ನು ಮಾತ್ರ ಆರಿಸಿಕೊಂಡರೆ, ಇನ್ಸೂರ್ಡ್ ವ್ಯಕ್ತಿ  ಸರ್ಕಾರಿ ಅಧಿಕೃತ ಪರೀಕ್ಷಾ ಕೇಂದ್ರದಿಂದ ಪಾಸಿಟಿವ್ ಎಂದು ಪರೀಕ್ಷೆಗೊಂಡ  ನಂತರ ಮಾತ್ರ ಚಿಕಿತ್ಸೆಯು ಅನ್ವಯಿಸುತ್ತದೆ.

ಆರಂಭಿಕ ಕಾಯುವಿಕೆ ಅವಧಿಗೆ ಮುಂಚೆ ಮಾಡಿದ ಕ್ಲೈಮ್ ಗಳು

ಕೋವಿಡ್ ಸಂಬಂಧಿ ಕ್ಲೈಮ್ ಗಳಿಗೆ, 15-ದಿನಗಳ ಆರಂಭಿಕ ಕಾಯುವಿಕೆಯ ಅವಧಿ ಇರುತ್ತದೆ. ಈ ಅವಧಿ ಮುಗಿಯುವ ಮುಂಚೆ ಮಾಡಿದ ಕ್ಲೈಮ್ ಗಳನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್ ನ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಟ್ಯಗಳು

ಪ್ರೀಮಿಯಂ ರೂ 1302 ಪ್ರತೀ ನೌಕರನಿಂದ ಆರಂಭ
ಸಹಪಾವತಿ ವಯಸ್ಸು ಆಧಾರಿತ ಸಹಪಾವತಿ ಇಲ್ಲ
ನಗದುರಹಿತ ಆಸ್ಪತ್ರೆಗಳು ಭಾರತದಾದ್ಯಂತ 10500+ ನಗದುರಹಿತ ಆಸ್ಪತ್ರೆಗಳು
ಖರೀದಿ ಹಾಗೂ ಕ್ಲೈಮ್ ಪ್ರಕ್ರಿಯೆ ಕಾಗದರಹಿತ ಪ್ರಕ್ರಿಯೆ, ಡಿಜಿಟಲ್ ಸ್ನೇಹಿ
ಸಂಪರ್ಕ ಬಿಂದು ಏಕೈಕ ಸಂಪರ್ಕ ಬಿಂದು
ಕೋರೋನಾವೈರಸ್ ನ ಚಿಕಿತ್ಸೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕವರ್ ಆಗಿದ್ದು, ಪ್ರತ್ಯೇಕ ಗ್ರೂಪ್ಕವರ್ ಆಗಿಯೂ ಲಭ್ಯವಿದೆ

ಕ್ಲೈಮ್ ಮಾಡುವುದು ಹೇಗೆ?

ಕ್ಲೈಮ್ ಇರುವಾಗಲೆಲ್ಲಾ, ನಮಗೆ ತಿಳಿಸಿ! ನಮಗೆ 1800-258-4242 ಗೆ ಕರೆ ನೀಡಿ ಅಥವಾ ·         healthclaims@godigit.com ಗೆ ಇ-ಮೇಲ್ ಕಳಿಸಿ.Whenever there’s a claim, let us know! Give us a call at 1800-258-4242 or email us at healthclaims@godigit.com

ನಗದುರಹಿತ ಕ್ಲೈಮ್ ಸಂದರ್ಭದಲ್ಲಿ, ನಿಮ್ಮ ನೌಕರ ಮಾಡಬೇಕಾಗಿರುವುದು ಇಷ್ಟೇ; ಅವರು ಬಯಸಿದ ನೆಟ್ವರ್ಕ್ ಅನ್ನು ಆಯ್ಕೆ ಮಾಡಿ ತಮ್ಮ ಇ-ಹೆಲ್ತ್ ಕಾರ್ಡ್ ಅನ್ನು ಪ್ರದರ್ಶಿಸಬೇಕು, ಮುಂದಿನದ್ದನ್ನು ನಾವು ನೋಡಿಕೊಳ್ಳುತ್ತೇವೆ. ನಿಮ್ಮ ನೌಕರರ ಅಂದಾಜಿನ ವೈದ್ಯಕೀಯ ವೆಚ್ಚಗಳನ್ನು ಒದಗಿಸಿ, 50% ವರೆಗಿನ ಮುಂಗಡ ನಗದು ಲಾಭವನ್ನೂ ಆಯ್ಕೆ ಮಾಡಬಹುದು.

ನೌಕರ ನಮ್ಮ ಆಸ್ಪತ್ರೆ ನೆಟ್ವರ್ಕಿನ ಹೊರಗಿರುವ ಆಸ್ಪತ್ರೆಯನ್ನು ಆಯ್ಕೆ ಮಾಡಲು ಬಯಸಿದರೆ, ಅವರು ಸೂಕ್ತ ದಾಖಲೆಗಳಾದ ವೈದ್ಯಕೀಯ ಬಿಲ್ ಗಳು, ತಪಾಸಣಾ ವರದಿಗಳು, ಸಮಾಲೋಚನೆಯ ಸಾರಾಂಶ ಇತ್ಯಾದಿಗಳನ್ನು ಸಲ್ಲಿಸಿ ಮರುಪಾವತಿಯ ಆಯ್ಕೆಯನ್ನು ಮಾಡಬಹುದು.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ ಹೇಗೆ ಕೆಲಸ ಮಾಡುತ್ತದೆ?

  • ಒಂದು ಕಂಪನಿಯು ಸಾಮಾನ್ಯವಾಗಿ, ಒಂದು ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಯೋಜನೆಯಿಂದ ತನ್ನ ನೌಕರರನ್ನು ಕವರ್ ಮಾಡಬಲ್ಲಂತಹ  ಹೆಲ್ತ್   ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಆಯ್ಕೆ ಮಾಡುತ್ತದೆ, ಹಾಗೂ ಇದರ ಪ್ರೀಮಿಯಂ ವೆಚ್ಚವನ್ನು ಕಂಪನಿಯೇ ಭರಿಸಿ ತನ್ನ ನೌಕರರಿಗೆ ಹೆಲ್ಥ್ ಕೇರ್ ಬೆನಿಫಿಟ್ ರೂಪದಲ್ಲಿ ಕೊಡುಗೆ ನೀಡುತ್ತದೆ.
  • ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಅನ್ನು ಕಂಪನಿಯ ಎಲ್ಲಾ ನೌಕರರಿಗಾಗಿ ತೆಗೆದುಕೊಳ್ಳುವ ಕಾರಣ, ಎಲ್ಲಾ ನೌಕರರ ಮೂಲ ಯೋಜನೆ ಹಾಗೂ ಇನ್ಶೂರ್ಡ್ ಮೊತ್ತವೂ ಒಂದೇ ಆಗಿರುತ್ತದೆ. ಆದರೆ, ಕೆಲವು ನೌಕರರು, ಹೆಚ್ಚುವರಿ ಪ್ರೀಮಿಯಂ ಪಾವತಿ ಜೊತೆ, ತನ್ನ ಅವಲಂಬಿತರಾದ ಸಂಗಾತಿ ಮತ್ತು ಮಕ್ಕಳು ಹಾಗೂ ಕೆಲವು ಸಂದರ್ಭದಲ್ಲಿ ತನ್ನ ವಯಸ್ಸಾದ ಹೆತ್ತವರನ್ನೂ ಈ ಯೋಜನೆಯಲ್ಲಿ ಸೇರಿಸುವ ಆಯ್ಕೆಯನ್ನು ಮಾಡಬಹುದು.

ನೌಕರರಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಇರುವ ಉದ್ದೇಶವೇನು?

ತಮ್ಮ ನೌಕರರ ಬಗ್ಗೆ ನಿಜವಾದ ಕಾಳಜಿ ಇರುವ ಉದ್ಯೋಗದಾತರಾಗಿ. ಹೆಸರೇ ಸೂಚಿಸುವಂತೆ, ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಎಂದರೆ, ಒಂದೇ ಛತ್ರಿಯ ಅಡಿಯಲ್ಲಿ ಕೆಲಸ ಮಾಡುವ ಜನರ ಒಂದು ಗುಂಪಿಗೆ ಮೀಸಲಾಗಿರುವ  ಹೆಲ್ತ್  ಇನ್ಶೂರೆನ್ಸ್ ನ ಒಂದು ಪ್ರಕಾರ.

ಸಾಮಾನ್ಯವಾಗಿ ಸ್ಟಾರ್ಟ್ ಅಪ್ಸ್ ಹಾಗೂ ದೊಡ್ಡ ಸಂಸ್ಥೆಗಳೆರಡರ ನೌಕರರಿಗೂ ಖರೀದಿಸಲಾಗುವ ಗ್ರೂಪ್ಇನ್ಶೂರೆನ್ಸ್ ಯೋಜನೆಯು, ನೌಕರರಿಗೆ ಮಾತ್ರವಲ್ಲದೆ, ಇಂದಿನ ಕಾಲದಲ್ಲಿ ಜನರು ತಮಗೆ  ಹೆಲ್ತ್   ಇನ್ಶೂರೆನ್ಸ್ ನಂತಹ ಅಗತ್ಯ ಕೊಡುಗೆಗಳನ್ನು ನೀಡುವ ಸಂಸ್ಥೆಗಳಿಗೆ ಪ್ರಾಶಸ್ತ್ಯ ನೀಡಿ ಅಲ್ಲೇ ಉಳಿದುಕೊಳ್ಳಲು ಇಷ್ಟಪಡುವುದರಿಂದ, ಉದ್ಯೋಗದಾತರಿಗೂ ಲಾಭದಾಯಕವಾಗಿ ಪರಿಣಮಿಸುತ್ತದೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಯಾರು ಖರೀದಿಸಬೇಕು?

ಸಾಮಾನ್ಯವಾಗಿ, 10ಕ್ಕಿಂತ ಹೆಚ್ಚು ನೌಕರರಿರುವ ಸಂಸ್ಥೆಯು  ಹೆಲ್ತ್   ಇನ್ಶೂರೆನ್ಸ್ ನಿಂದ ತಮ್ಮ ನೌಕರರನ್ನು ಸಂರಕ್ಷಿಸಬೇಕು. ನಿಮಗೆ ಇದು ಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದರೆ, ನಾವು ನಿಮಗಾಗಿ ಇದನ್ನು ಸರಳಗೊಳಿಸುತ್ತೇವೆ.

ಸಣ್ಣ ಸಂಸ್ಥೆಗಳು ಹಾಗೂ ಎಳೆ ಸ್ಟಾರ್ಟ್ಅಪ್ ಗಳು

ನೀವು ಈಗಷ್ಟೇ ನಿಮ್ಮದೇ ಆದ ಒಂದು ಹೊಸ ಸ್ಟಾರ್ಟಪ್ ಅನ್ನು ಆರಂಭಿಸಿದ್ದು, ಅದರಲ್ಲಿ ಕನಿಷ್ಟ15 ತಂಡ ಸದಸ್ಯರಿದ್ದರೆ, ನೀವು ನಿಮ್ಮ ತಂಡ ಸದಸ್ಯರನ್ನು ಸಂರಕ್ಷಿಸುವ ಹಾಗೂ ನಿಮಗೆ ತೆರಿಗೆ ಉಳಿತಾಯದಲ್ಲೂ ಸಹಾಯ ಮಾಡುವ ಗ್ರೂಪ್ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡಬಹುದು. ನೀವು ಇದರ ವೆಚ್ಚಗಳ ಬಗ್ಗೆ ತುಂಬಾ ಯೋಚಿಸುತ್ತಿದ್ದರೆ, ಚಿಂತೆ ಬೇಡ - ಗ್ರೂಪ್ಇನ್ಶೂರೆನ್ಸ್ ಯೋಜನೆಗಳನ್ನು ನಿಮ್ಮ ಕಂಪನಿಯ ನೌಕರರ ಹಾಗೂ ಆರ್ಥಿಕ ಸಾಮರ್ಥ್ಯದ ಪ್ರಕಾರ ಕಸ್ಟಮೈಜ್ ಮಾಡಲಾಗುತ್ತದೆ.

ಮಧ್ಯಮ ಗಾತ್ರದ ಕಂಪನಿಗಳು ಹಾಗೂ ಬೆಳೆಯುತ್ತಿರುವ ಸ್ಟಾರ್ಟಪ್ ಗಳು

ಸರಿ, ಈಗ ನಿಮ್ಮ ಕಂಪನಿ ಎಳೆಯದಾಗಿದೆ ಆದರೆ ಕೆಲ ಸಮಯಗಳಿಂದ ಕಾರ್ಯನಿರ್ವಹಿಸುತ್ತಿದೆ. ನೀವು  ನಿಮ್ಮ ನೌಕರರನ್ನು ಗ್ರೂಪ್ಇನ್ಶೂರೆನ್ಸ್ ಯೋಜನೆಯೊಂದಿಗೆ ಸಂರಕ್ಷಿಸುವ ಆಯ್ಕೆಯನ್ನು ಮಾಡಬಹುದು. ಇದು ನಿಮ್ಮ ನೌಕರರ ಆನಂದ ಹಾಗೂ ಪ್ರೋತ್ಸಾಹವನ್ನು ಹೆಚ್ಚಿಸುವುದಲ್ಲದೆ ಅವರು ಹೆಚ್ಚು ಸಮಯ ನಿಮ್ಮೊಂದಿಗೆ ಇರುವಂತೆಯೂ ಮಾಡುತ್ತದೆ.

ದೊಡ್ಡ ಸಂಸ್ಥೆಗಳು ಹಾಗೂ ಪ್ರತಿಷ್ಠಿತ ಸ್ಟಾರ್ಟಪ್ ಗಳು

ನೀವು ದೊಡ್ಡ ಹಾಗೂ ಪ್ರತಿಷ್ಠಿತ ಸ್ಟಾರ್ಟಪ್, ಸಂಸ್ಥೆಯಾಗಿದ್ದರೆ - ನೌಕರರು ಅವರ ಪ್ಯಾಕೇಜ್ ನ ಭಾಗವಾಗಿ  ಹೆಲ್ತ್   ಇನ್ಶೂರೆನ್ಸ್ ನಂತಹ ಲಾಭವನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ, ನೀವು 1000 ಅಥವಾ ಅದಕ್ಕಿಂತ ಕಡಿಮೆ ಸದಸ್ಯರಿರುವ ಸಂಸ್ಥೆಯನ್ನು ಹೊಂದಿದ್ದರೆ, ನೀವು ಅವರನ್ನು ಹಾಗೂ ಅವರ ಅವಲಂಬಿತರನ್ನು ಕಾರ್ಪೋರೇಟ್  ಹೆಲ್ತ್   ಇನ್ಶೂರೆನ್ಸ್ ಯೋಜನೆ ಜೊತೆ ಕವರ್ ಮಾಡಬೇಕು. ಇದು ಅವರಲ್ಲಿ ಒಂದು ಭದ್ರತಾ ಭಾವನೆ ಮೂಡಿಸುವುದಲ್ಲದೆ, ನಿಮ್ಮ ಸಂಸ್ಥೆಯ ಬಗೆಗಿನ ಸದ್ಭಾವನೆಯನ್ನೂ ಹೆಚ್ಚಿಸುತ್ತದೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸಿನ ಲಾಭಗಳು

ಕಡಿಮೆ ದರದ ಪ್ರೀಮಿಯಂ

ಒಂದು ಗ್ರೂಪ್ಇನ್ಶೂರೆನ್ಸ್ ಪಾಲಿಸಿಯು ಜನರ ಗುಂಪಿನ ನಡುವೆ ಹಂಚಿಕೆಯಾಗುವುದರಿಂದ, ಇತರ  ಹೆಲ್ತ್  ಪಾಲಿಸಿಗಳಿಗೆ ಹೋಲಿಸಿದರೆ ಇದರ ಪ್ರೀಮಿಯಂ ದರ ಬಹಳ ಕಡಿಮೆ ಇರುತ್ತದೆ.

ತೆರಿಗೆ ಲಾಭಗಳು

ಭಾರತದ ಆದಾಯ ತೆರಿಗೆ ಇಲಾಖೆ ಪ್ರಕಾರ, ತಮ್ಮ ನೌಕರರಿಗೆ ಕಾರ್ಪೋರೇಟ್  ಹೆಲ್ತ್   ಇನ್ಶೂರೆನ್ಸ್ ನೀಡುವ ಕಂಪನಿಗಳು, ಸ್ವಲ್ಪ ತೆರಿಗೆ ಉಳಿತಾಯಗಳನ್ನು ಮಾಡಬಹುದು!

ಕಂಪನಿ ಮೇಲಿನ ಸದ್ಭಾವನೆ

ತಮ್ಮ ನೌಕರರಿಗೆ ಅಮೂಲ್ಯ ಲಾಭಗಳನ್ನು ನೀಡುವ ಸಂಸ್ಥೆಗಳು, ಸಂತೃಪ್ತ ನೌಕರರನ್ನು ಹಾಗೂ ಸಂತುಷ್ಟವಾದ ಕೆಲಸದ ಸ್ಥಳವನ್ನು ಕಾಣುತ್ತವೆ. ಕೊನೆಯಲ್ಲಿ ಇದು ಕಂಪನಿ ಮೇಲಿನ ಸದ್ಭಾವನೆಯನ್ನು ಹೆಚ್ಚಿಸುತ್ತದೆ, ಅದು ಸಣ್ಣದಿರಲಿ ಅಥವಾ ದೊಡ್ಡದಿರಲಿ. ಎಷ್ಟಾದರೂ ತಮ್ಮ ಜನರ ಮೇಲೆ ಕಾಳಜಿ ಇರಿಸುವ ಒಳ್ಳೆಯ ಸಂಸ್ಥೆಯನ್ನು ಎಲ್ಲರೂ ಪ್ರೀತಿಸುತ್ತಾರೆ!

ಭಾರತದಲ್ಲಿ ಗ್ರೂಪ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ ಉದ್ಯೋಗದಾತರು ಏನನ್ನು ನಿರೀಕ್ಷಿಸಬೇಕು?

ಅರ್ಥಪೂರ್ಣ ಲಾಭಗಳು

ನೌಕರರಿಗೆ ಹೆಲ್ತ್ ಕೇರ್ ಲಾಭಗಳನ್ನು ನೀಡುವುದೇ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ನ ಪ್ರಾಥಮಿಕ ಉದ್ದೇಶವಾಗಿದೆ ಮತ್ತು ಈ ಲಾಭಗಳು ನೌಕರರಿಗೆ ಅಮೂಲ್ಯವೆಂದೆನಿಸಿದರೆ ಮಾತ್ರ ಇದಕ್ಕೊಂದು ಅರ್ಥ ಸಿಗುತ್ತದೆ. ಆದ್ದರಿಂದ ನಿಮ್ಮ ನೌಕರರಿಗಾಗಿ ಉತ್ತಮ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ ಆ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ನೀಡುವ ಲಾಭಗಳನ್ನು ತಿಳಿದುಕೊಳ್ಳುವುದು ನಿಮ್ಮ ಸರ್ವೋಚ್ಛ  ಆದ್ಯತೆ ಅಗಿರಬೇಕು. ಉದಾಹರಣೆಗೆ : ಕೋವಿಡ್-19 ಪಿಡುಗು ಭಾರತದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದು ನಿಮಗೆ ಗೊತ್ತೇ ಇದೆ. ನಿಮ್ಮ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಇದನ್ನೂ ಕವರ್ ಮಾಡುತ್ತದೆ ಎಂಬುವುದನ್ನು ಖಚಿತಪಡಿಸಿಕೊಳ್ಳಿ.

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ

ದಿನದ ಕೊನೆಯಲ್ಲಿ, ದುಡ್ಡೇ ದೊಡ್ಡಪ್ಪ! ಆದ್ದರಿಂದಲೇ, ನಿಮ್ಮ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ನ ದರ ಎಷ್ಟಾಗುತ್ತದೆ ಹಾಗೂ ಅದು ನೀಡುವ ಲಾಭಗಳನ್ನು ಪರಿಗಣಿಸಿ ಇಷ್ಟು ಖರ್ಚು ಮಾಡುವುದು ಒಳ್ಳೆಯದೇ ಎಂದು ಲೆಕ್ಕ ಹಾಕುವುದು ಬಹಳ ಮುಖ್ಯವಾಗುತ್ತದೆ. ಯೋಚನೆ ಮಾಡದೆ ಕಡಿಮೆ ಪ್ರೀಮಿಯಂ ಇದ್ದ ಕಡೆ ಹೋಗಬೇಡಿ, ಅದು ನೀಡುವ ಲಾಭಗಳನ್ನು ತೂಗಿ ಅಳೆದು ನಿರ್ಧರಿಸಿ.

ಸಂಭಾಷಣೆಯ ಪ್ರಭಾವ

ನೀವು ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಕೊಳ್ಳುವಾಗ, ನಿಮ್ಮ ಯೋಜನೆಯ ಲಾಭಗಳು ಮಾತ್ರವಲ್ಲ, ನಿಮ್ಮ ಇನ್ಶೂರರ್ ಎಷ್ಟು ಪ್ರಭಾವಕಾರಿ ಹಾಗೂ ಜವಾಬ್ದಾರಿಯುತರು ಎನ್ನುವುದೂ ಅಷ್ಟೇ ಮುಖ್ಯ. ಅಗತ್ಯದ ಸಮಯದಲ್ಲಿ, ನಿಮ್ಮ ನೌಕರರು ಅವರ ನಿಗದಿತ ಇನ್ಶೂರರ್ ಜೊತೆ ಮಾತನಾಡುವಾಗ ಹಾಗೂ ವ್ಯವಹರಿಸುವಾಗ ಅವರ ಅನುಭವ ತೃಪ್ತಿಕರವಾಗಿರಬೇಕು. ಹಲವು ಬಾರಿ, ಇನ್ಶೂರೆನ್ಸ್ ಪ್ರೋವೈಡರ್ ಗಳು, ಥರ್ಡ್ ಪಾರ್ಟೀ ಗಳನ್ನು ಮಧ್ಯವರ್ತಿಯಾಗಿ ಬಳಸುತ್ತಾರೆ. ಇಂತಹ ಸಂದರ್ಭದಲ್ಲಿ, ನಿಮ್ಮ ನಿಗದಿತ ಥರ್ಡ್ ಪಾರ್ಟೀ ಕಾರ್ಯನಿರ್ವಾಹಕರು ಯೋಗ್ಯರೇ ಅಲ್ಲವೇ ಎಂದು ನೀವು .

ಸೇವಾ ಲಾಭಗಳು

ಹೆಲ್ತ್   ಇನ್ಶೂರೆನ್ಸ್ ನ ವಿಷಯ ಬಂದಾಗ, ಎಲ್ಲಕ್ಕಿಂತಲೂ ಮಿಗಿಲಾಗಿ ಸೇವೆಯನ್ನು ಪರಿಗಣಿಸಲಾಗುತ್ತದೆ. ಆದ್ದರಿಂದ, ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವಾಗ ನೀವು ಪರಿಶೀಲಸಬೇಕಾದ ಒಂದು ವಿಚಾರವೇನೆಂದರೆ ಇದು ಸಂಪೂರ್ಣ ದೇಶವನ್ನು ಕವರ್ ಮಾಡುತ್ತದೆಯೇ, ಹೌದೆಂದಾದರೆ, ದೇಷದಾದ್ಯಂತ ಎಷ್ಟು ನೆಟ್ವರ್ಕ್ ಆಸ್ಪತ್ರೆಗಳು ಹರಡಿವೆ ಇತ್ಯಾದಿ.

ಭೌಗೋಳಿಕ ಕವರೇಜ್

ಆಕ್ಸಿಡೆಂಟುಗಳು  ಮತ್ತು ಅನಾರೋಗ್ಯಗಳು ಎಲ್ಲಿಯೂ ಸಂಭವಿಸಬಹುದು! ಆದ್ದರಿಂದ, ಗ್ರೂಪ್ ಹೆಲ್ತ್ ಇನ್ಶೂರೆನ್ಸ್  ಯೋಜನೆಯನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ವಿಷಯವೆಂದರೆ ಅದು ಇಡೀ ದೇಶವನ್ನು ಆವರಿಸುತ್ತದೆಯೇ ಅಥವಾ ಇಲ್ಲವೇ, ಮತ್ತು ಹಾಗೆ ಮಾಡಿದರೆ ದೇಶಾದ್ಯಂತ ಎಷ್ಟು ನೆಟ್‌ವರ್ಕ್ ಆಸ್ಪತ್ರೆಗಳು ಹರಡಿವೆ, ಇತ್ಯಾದಿ.

ನೌಕರರಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನ ಲಾಭಗಳು

ಪೂರ್ವನಿಯೋಜಿತ ಹೆಲ್ತ್ ಕೇರ್ ಲಾಭಗಳು

ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಅನ್ನು ನೀಡುವ ಹೆಚ್ಚಿನ ಕಂಪನಿಗಳು ಅದನ್ನು ತಮ್ಮ ನೌಕರರ ವಾರ್ಷಿಕ ಲಾಭಗಳ ಭಾಗವನ್ನಾಗಿ ಸೇರಿಸುತ್ತಾರೆ;ಎಂದರೆ, ನೀವು ಇದನ್ನು ಆಯ್ದುಕೋಳ್ಳುತ್ತೀರೋ ಇಲ್ಲವೋ, ನಿಮ್ಮ ಕಂಪನಿ ಗ್ರೂಪ್ಇನ್ಶೂರೆನ್ಸ್ ಯೋಜನೆಯನ್ನು ಹೊಂದಿದ್ದರೆ- ನೀವು ಅದರಲ್ಲಿ ಕವರ್ ಆಗೇ ಆಗುತ್ತೀರಿ, ಅದೂ ಪ್ರೀಮಿಯಂ ಅನ್ನು ನಿಮ್ಮ ಜೇಬಿನಿಂದ ನೀಡದೆ.

ಪೂರ್ವ ವೈದ್ಯಕೀಯ ತಪಾಸಣೆಗಳ ಅಗತ್ಯವಿಲ್ಲ

ಸಾಮಾನ್ಯವಾಗಿ, ನೀವು  ಹೆಲ್ತ್  ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ನಿಮ್ಮ  ಹೆಲ್ತ್  ಇನ್ಶೂರೆನ್ಸ್ ಅನ್ನು ಖಚಿತಪಡಿಸಿ ನಿಮಗೆ ನೀಡುವ ಮೊದಲು, ನಿಮ್ಮ ಇನ್ಶೂರರ್ ಬಹುತೇಕವಾಗಿ ನಿಮ್ಮ ಪೂರ್ವ ವೈದ್ಯಕೀಯ ತಪಾಸಣೆಗಳನ್ನು ಮಾಡಿಸುತ್ತಾರೆ. ಆದರೆ, ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಯೋಜನೆಯ ಅಡಿಯಲ್ಲಿ ಇದರ ಅಗತ್ಯವಿರುವುದಿಲ್ಲ. ಯಾವ ವೈದ್ಯಕೀಯ ತಪಾಸಣೆಗೆ ಒಳಗಾಗದೆಯೇ ನಿಮ್ಮ ಪಾಲಿಸಿ ಮಾನ್ಯವಾಗಿರುತ್ತದೆ.

ಪ್ರೀಮಿಯಂ ಇಲ್ಲ

ಮೇಲೆ ಉಲ್ಲೇಖಿಸಿದಂತೆ, ಹೆಚ್ಚಿನ ಉದ್ಯೋಗದಾತರು ನಿಮ್ಮ  ಹೆಲ್ತ್   ಇನ್ಶೂರೆನ್ಸ್ ಯೋಜನೆಯನ್ನು ಕಂಪನಿ ನಿಮಗೆ ನೀಡುವ ವಾರ್ಷಿಕ ಲಾಭಗಳಲ್ಲಿ ಸೇರಿಸಿರುತ್ತಾರೆ. ಇದರರ್ಥ, ನೀವು ಇದರ ಪ್ರೀಮಿಯಂ ಕಟ್ಟಬೇಕಾಗಿಲ್ಲ, ಇದನ್ನು ನಿಮ್ಮ ಕಂಪನಿಯೇ ಮಾಡುತ್ತದೆ. ಆದರೆ, ಇದು ಉದ್ಯೋಗದಾತರ ಮೇಲೆ ಅವಲಂಬಿಸಿದೆ. ಆದಾಗ್ಯೂ, ನಿಮ್ಮ ಉದ್ಯೋಗದಾತರು ನಿಮ್ಮಿಂದ ಇದರ ಶುಲ್ಕ ಪಡೆದುಕೊಂಡರೂ, ವೈಯಕ್ತಿಕ  ಹೆಲ್ತ್   ಇನ್ಶೂರೆನ್ಸ್ ಗೆ ಹೋಲಿಸಿದರೆ ಇದರ ಪ್ರೀಮಿಯಂ ಬಹಳ ಕಡಿಮೆ ಇರುತ್ತದೆ.

ಸರಳ ಕ್ಲೈಮ್ ಪ್ರಕ್ರಿಯೆ

ನಿಮ್ಮ ಉದ್ಯೋಗದಾತರೇ ಈ ಗ್ರೂಪ್ಇನ್ಶೂರೆನ್ಸ್ ಯೋಜನೆಯ ಆಯ್ಕೆ ಮಾಡಿರುವ ಕಾರಣ,ಥರ್ಡ್ ಪಾರ್ಟೀ ಎಡ್ಮಿನಿಸ್ಟ್ರೇಟರ್ ಅಥವಾ ಇನ್ಶೂರರ್ ಜೊತೆ ಇದಕ್ಕೆ ಸಂಬಂಧಪಟ್ಟ ಮಾತುಕತೆಯನ್ನು ಅವರೇ ನಡೆಸುತ್ತಾರೆ. ಆದ್ದರಿಂದ,ನಿಮಗೆ ಹಿಂದು ಮುಂದು ಮಾತುಕತೆಯ ಗೊಂದಲ ತಪ್ಪುತ್ತದೆ, ಹೀಗಾಗಿ ನಿಮ್ಮ ಕ್ಲೈಮ್ ಪ್ರಕ್ರಿಯೆ ಅತೀ ಸರಳವಾಗುತ್ತದೆ.

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಕ್ಕಿಂತ ಭಿನ್ನವಾದ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೇಗೆ ಪಡೆಯುವುದು?

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್
ಇದರಲ್ಲಿ, ಪ್ರತೀ ವ್ಯಕ್ತಿಯು ತನ್ನ ನಿಗದಿತ ಇನ್ಶೂರರ್ ನ ನೇರ ಸಂಪರ್ಕದಲ್ಲಿರುತ್ತಾರೆ ಇಲ್ಲಿ, ಕಂಪನಿಯೇ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ರೊವೈಡರ್ ನ ಜೊತೆ ನೇರ ಸಂಪರ್ಕದಲ್ಲಿರುತ್ತದೆ
ಪ್ರತೀ ವ್ಯಕ್ತಿಗೂ ಬೇಕಾದ ಸಮಯದಲ್ಲಿ ತಮ್ಮ ಪಾಲಿಸಿಯನ್ನು ರದ್ದುಗೊಳಿಸುವ ಹಕ್ಕಿರುತ್ತದೆ. ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಸಂದರ್ಭದಲ್ಲಿ, ಪಾಲಿಸಿ ರದ್ದುಗೊಳಿಸುವ ಹಕ್ಕು ಕೇವಲ ಉದ್ಯೋಗದಾತರಿಗಿರುತ್ತದೆ
ವ್ಯಕ್ತಿಯು ತನ್ನ ವಾರ್ಷಿಕ ಪ್ರೀಮಿಯಂ ಅನ್ನು ಕಟ್ಟುತ್ತಾ ಇರುವಷ್ಟು ಸಮಯ ಅವರ ಪಾಲಿಸಿ ಮಾನ್ಯವಾಗಿರುತ್ತದೆ ನೌಕರರು ನಿಗದಿತ ಸಂಸ್ಥೆಯ ಭಾಗವಾಗಿದ್ದಷ್ಟು ಸಮಯ ಗ್ರೂಪ್ ಹೆಲ್ತ್ ಪಾಲಿಸಿ ಮಾನ್ಯವಾಗಿರುತ್ತದೆ
ವ್ಯಕ್ತಿಯ ಹೆಲ್ತ್ ಪಾಲಿಸಿಯು ಅವರ ವಯಸ್ಸು, ವೈದ್ಯಕೀಯ ಇತಿಹಾಸ, ಹೆಲ್ತ್ ಸ್ಥಿತಿ ಇತ್ಯಾದಿಗಳ ಮೇಲೆ ಅವಲಂಬಿಸುತ್ತದೆ. ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಪ್ರಾಥಮಿಕವಾಗಿ ಸಂಸ್ಥೆಯ ಸಾಮರ್ಥ್ಯವನ್ನು ಅವಲಂಬಿಸುತ್ತದೆ; ಸಂಸ್ಥೆಯ ಆರ್ಥಿಕ ಹಾಗೂ ನೌಕರರ ಸಾಮರ್ಥ್ಯ.
ಸಾಮಾನ್ಯವಾಗಿ, ಯಾವುದೇ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ನಲ್ಲಿ, ಇನ್ಶೂರರ್ ಪೂರ್ವ ವೈದ್ಯಕೀಯ ತಪಾಸಣೆಗಳನ್ನು ನಡೆಸುತ್ತಾರೆ ಹಾಗೂ ಇದನ್ನು ಆಧರಿಸಿ ಪಾಲಿಸಿಯನ್ನು ನೀಡಲಾಗುತ್ತದೆ. ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಲ್ಲಿ, ಇನ್ಶೂರರ್ ಪೂರ್ವ ವೈದ್ಯಕೀಯ ತಪಾಸಣೆಗಳನ್ನು ನಡೆಸುವುದಿಲ್ಲ, ಆದ್ದರಿಂದ ಪಾಲಿಸಿ ತಿರಸ್ಕಾರವಾಗುವ ಭಯ ಇರುವುದಿಲ್ಲ.

ಡಿಜಿಟ್ ನ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಹಾಗೂ ಗ್ರೂಪ್ ಕೊರೊನಾವೈರಸ್ ಕವರ್ ನಡುವಿನ ವ್ಯತ್ಯಾಸ

ಡಿಜಿಟ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಡಿಜಿಟ್ ಅನಾರೋಗ್ಯ ಗ್ರೂಪ್ಇನ್ಶೂರೆನ್ಸ್
ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಒಂದು ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯಾಗಿದ್ದು ಒಂದು ಸಂಸ್ಥೆಯ ಎಲ್ಲಾ ನೌಕರರನ್ನು ಅನಾರೋಗ್ಯ, ಖಾಯಿಲೆ ಹಾಗೂ ಅಪಘಾತದಿಂದ ಉಂಟಾಗುವ ಅಸ್ಪತ್ರೆ ದಾಖಲಾತಿಗಳ ಖರ್ಚನ್ನು ಕವರ್ ಮಾಡುತ್ತದೆ. ಇದರ ಜೊತೆ, ಡಿಜಿಟ್ ನ ಗ್ರೂಪ್ ಹೆಲ್ತ್ ಇನ್ಶೂರೆನ್ಸ್, ಅದು ಒಂದು ಪಿಡುಗು ಆಗಿದ್ದರೂ ಕೋವಿಡ್ - 19 ಅನ್ನು ಕವರ್ ಮಾಡುತ್ತದೆ. ಪ್ರಸ್ತುತ ಸಮಯದಲ್ಲಿ, ಪ್ರೀಮಿಯಂ ವೆಚ್ಚಗಳು ಹಾಗೂ ಪ್ರಸ್ತುತ ಆರ್ಥಿಕ ಅಸ್ಥಿರತೆಯನು ಗಮನಿಸಿದಾಗ ಹಲವು ಉದ್ಯಮಗಳು ಸಂಪೂರ್ಣ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸಲು ಬಯಸದೇ ಇರುವುದು ನಮಗೆ ಅರ್ಥವಾಗುತ್ತದೆ. ಆದರೆ ಉದ್ಯೋಗದಾತರು ತಮ್ಮ ನೌಕರರಿಗೆ ಕನಿಷ್ಠ ಪಕ್ಷ ಕೋವಿಡ್ - 19 ನಿಂದಲಾದರೂ ಕವರ್ ನೀಡಬೇಕೆಂಬ ಶಿಫಾರಸ್ಸನ್ನು ನಾವು ಮಾಡುತ್ತೇವೆ. ಇದಕ್ಕಾಗಿಯೇ ನಾವು ಕೋವಿಡ್ - 19 ನಿಂದ ಎಲ್ಲಾ ನೌಕರರನ್ನು, ಕೈಗೆಟಕುವ ಪ್ರೀಮಿಯಂ ದರದಲ್ಲಿ, ಕವರ್ ಮಾಡಲು ಕಸ್ಟಮೈಜ್ಡ್ ಕೋವಿಡ್ ಕವರ್ ಅನ್ನು ತಯಾರಿಸಿದ್ದೇವೆ.

ಭಾರತದ ಕಾರ್ಪೋರೇಟ್ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಡಿಜಿಟ್ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕೊರೊನಾವೈರಸ್ ಕವರ್ ಆಗುತ್ತದೆಯೇ?

ಹೌದು, ಡಿಜಿಟ್ ನ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಪಾಲಿಸಿಯಲ್ಲಿ ಕೊರೊನಾವೈರಸ್ ಕವರ್ ಆಗಿದೆ ಹಾಗೂ ಇದನ್ನುಒಂದು ಪ್ರತ್ಯೇಕ ಕವರ್ ಆಗಿಯೂ ಕೂಡಾ ಒದಗಿಸಲಾಗುತ್ತದೆ.

ಡಿಜಿಟ್ ನ ಕಾರ್ಪೋರೇಟ್ ಹೆಲ್ತ್ ಇನ್ಶೂರೆನ್ಸ್ ನ ಆರಂಭಿಕ ಕಾಯುವಿಕೆ ಅವಧಿ ಎಷ್ಟು?

ನಮ್ಮ ಕಾರ್ಪೋರೇಟ್  ಹೆಲ್ತ್   ಇನ್ಶೂರೆನ್ಸ್ ನ ಆರಂಭಿಕ ಕಾಯುವಿಕೆಯ ಅವಧಿ ಕೇವಲ 15 ದಿನಗಳು ಆಗಿವೆ. ಆದರೆ 50+ ನೌಕರರನ್ನು ಹೊಂದಿರುವ ಸಂಸ್ಥೆಗಳಿಗೆ ಇದನ್ನು ಮನ್ನಾ ಮಾಡಬಹುದು.

ಕಾಯುವಿಕೆ ಅವಧಿ ಎಂದರೇನು?

ಕಾಯುವಿಕೆ ಅವಧಿ ಎಂದರೆ, ನಿರ್ದಿಷ್ಟ ಲಾಭಗಳಿಗಾಗಿ ಕ್ಲೈಮ್ ಮಾಡುವ ಮುಂಚೆ ಒಬ್ಬರು ಕಾಯಬೇಕಾದ ಸಮಯಾವಧಿಯಾಗಿದೆ.

ನಾನು ನನ್ನ ನೌಕರರಿಗಾಗಿ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಯಾವಾಗ ಪಡೆಯಬೇಕು?

ಎಲ್ಲಾ ಸಂಸ್ಥೆಗಳು ತಮ್ಮ ನೌಕರರಿಗಾಗಿ ಕನಿಷ್ಟ ಪಕ್ಷ ಒಂದು ಮೂಲಭೂತ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಅನ್ನಾದರೂ ನೀಡಬೇಕು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸಂಸ್ಥೆಯಲ್ಲಿ ಕನಿಷ್ಟ 10 ತಂಡ ಸದಸ್ಯರಿದ್ದರೆ, ನೀವು ಅವರೆಲ್ಲರನ್ನು ಸಂರಕ್ಷಿಸಲು ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಖರೀದಿಸುವ ಬಗ್ಗೆ ಯೋಚಿಸಬೇಕು.

ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ನಿಮಗಿದನ್ನು ಮಾಡಲು ಸಾಧ್ಯವಾಗದೇ ಇದ್ದರೆ, ನೀವು ನಿಮ್ಮ ನೌಕರರನ್ನು ಕೊರೊನಾವೈರಸ್ ನಿಂದ ಕವರ್ ಮಾಡಲು ಕೇವಲ ಕೊರೊನಾವೈರಸ್ ಗ್ರೂಪ್ಕವರ್ ಅನ್ನು ಕೈಗೆಟಕುವ ದರದಲ್ಲಿ ಆಯ್ಕೆ ಮಾಡಬಹುದು.

ನಮ್ಮ ಕೆಲಸದ ಸ್ಥಳದಲ್ಲಿ ಕೇವಲ 10 ರಿಂದ 15 ಸದಸ್ಯರಿದ್ದಾರೆ. ಆದರೂ ನಾನು ಅವರಿಗಾಗಿ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದೇ?

ಹೌದು, ನೀವಿದನ್ನು ಮಾಡಬಹುದು, ಉಳಿದ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಗಿಂತ ಭಿನ್ನವಾಗಿ, 10ರಷ್ಟು ಕಡಿಮೆ ನೌಕರರಿರುವ ಸಂಸ್ಥೆಗಳಿಗೂ ನಮ್ಮ ಗ್ರೂಪ್ ಹೆಲ್ತ್  ಇನ್ಶೂರೆನ್ಸ್ ಯೋಜನೆ ಅನ್ವಯಿಸುತ್ತದೆ.

ಮುಂಗಡ ನಗದು ಲಾಭ ಎಂದರೇನು?

ಮುಂಗಡ ನಗದು ಲಾಭ ಎಂದರೆ ಇನ್ಶೂರ್ಡ್ ವ್ಯಕ್ತಿಯ ಚಿಕಿತ್ಸಾ ವೆಚ್ಚ ಹಾಗೂ ಅಂದಾಜುಗಳ ಆಧಾರದ ಮೇಲೆ, ನಿಮ್ಮ ಇನ್ಶೂರರ್ ( ಎಂದರೆ ನಾವು) ಅಂದಾಜು ವೆಚ್ಚದ 50% ಅನ್ನು ನಗದು ರೂಪದಲ್ಲಿ ನೀಡುತ್ತಾರೆ. ಇದರಿಂದ ಅವರು ಎಂದಿಗೂ ಕವರ್ ಆಗಿರುತ್ತಾರೆಂದು ಅವರಿಗೆ ಖಾತ್ರಿಯಾಗುತ್ತದೆ, ಹಾಗೂ ಅವರು ಚಿಕಿತ್ಸೆ ಮುಗಿಯುವ ತನಕ ಅವರು ಕಾಯಬೇಕಾಗಿಲ್ಲ. ಉಳಿದ 50% ಅಂದಾಜು ವೆಚ್ಚವನ್ನು ಚಿಕಿತ್ಸೆಯ ನಂತರ ಮರುಪಾವತಿಸಲಾಗುವುದು.

ಗ್ರೂಪ್ ಹೆಲ್ತ್ ಪಾಲಿಸಿಯಲ್ಲಿ ಯಾರನ್ನು ಕವರ್ ಮಾಡಬಹುದು?

18 ವರ್ಷ ಮೇಲ್ಪಟ್ಟ ಹಾಗೂ 70 ವರ್ಷಕ್ಕಿಂತ ಕೆಳಗಿರುವ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಸಂಸ್ಥೆಯ ಗ್ರೂಪ್ ಹೆಲ್ತ್   ಪಾಲಿಸಿಯಡಿಯಲ್ಲಿ ಕವರ್ ಆಗಲು ಅರ್ಹರು. ಇದರ ಜೊತೆ, ಅವರು ತಮ್ಮ ಸಂಗಾತಿ ಹಾಗೂ,3 ತಿಂಗಳಿನಿಂದ 25 ವರ್ಷದ ನಡುವಿನ, ಗರಿಷ್ಟ ಮೂರು ಮಕ್ಕಳನ್ನು ಇದರಲ್ಲಿ ಸೇರಿಸಬಹುದು.

ಕಾರ್ಪೋರೇಟ್ ಹೆಲ್ತ್ ಇನ್ಶೂರೆನ್ಸ್ ನ ಬೆಲೆ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಿಂತ ಕಡಿಮೆಯೇ?

ಹೌದು, ಜನರ ಎಂದರೆ ನೌಕರರ ಒಂದು ದೊಡ್ಡ ಗುಂಪಿನಲ್ಲಿ ಹರಡಿರುವುದರಿಂದ ಇದರ ಬೆಲೆಯು ವೈಯಕ್ತಿಕ  ಹೆಲ್ತ್   ಇನ್ಶೂರೆನ್ಸ್ ಪಾಲಿಸಿಗಿಂತ ಕಡಿಮೆ ಇರುತ್ತದೆ.

ನನ್ನ ಸಣ್ಣ ಉದ್ಯಮಕ್ಕಾಗಿ ನೌಕರರ ವೈದ್ಯಕೀಯ ಇನ್ಶೂರೆನ್ಸ್ ಅನು ಹೇಗೆ ಪಡೆಯುವುದು?

ಡಿಜಿಟ್ ನಲ್ಲಿ, ನಾವು ಸಣ್ಣ ಹಾಗೂ ದೊಡ್ಡ ಉದ್ಯಮ, ಎರಡಕ್ಕೂ ಬೇಕಾದ ಹಾಗೆ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಅನ್ನು ಕಸ್ಟಮೈಜ್ ಮಾಡುತ್ತೇವೆ. ನಿಮ್ಮ ಯೋಜನೆಯನ್ನು ಆರಂಭಿಸಲು, ನಿಮ್ಮ ವಿವರಗಳನ್ನು ಮೇಲೆ ತುಂಬಿಸಿರಿ, ಹಾಗೂ ನಾವು ನಿಮ್ಮ ಕಸ್ಟಮೈಜ್ಡ್  ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಉಲ್ಲೇಖದೊಂದಿಗೆ ನಿಮ್ಮನ್ನು ಸಂಪರ್ಕಿಸುತ್ತೇವೆ.

ನನ್ನ ಬಳಿ ಕಾರ್ಪೋರೇಟ್ ಹೆಲ್ತ್ ಯೋಜನೆಯಿದೆ. ಇದನ್ನು ಡಿಜಿಟ್ ನ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಆಗಿ ವರ್ಗಾಯಿಸಬಹುದೇ?

ಇದು ಪ್ರಾಥಮಿಕವಾಗಿ, ನಿಮ್ಮ ಬಳಿ ಯಾವ ರೀತಿಯ ಕಾರ್ಪೋರೇಟ್  ಹೆಲ್ತ್   ಇನ್ಶೂರೆನ್ಸ್ ಯೋಜನೆಯಿದೆ ಎನ್ನುವುದರ ಮೇಲೆ 

ಅವಲಂಬಿಸುತ್ತದೆ. ಸಾಮಾನ್ಯವಾಗಿ, ಕಾರ್ಪೋರೇಟ್  ಹೆಲ್ತ್   ಇನ್ಶೂರೆನ್ಸ್ ಯೋಜನೆಗಳ ವೆಚ್ಚವನ್ನು ನಿಮ್ಮ ಉದ್ಯೋಗದಾತರು ಭರಿಸುತ್ತಾರೆ ಹಾಗೂ ನೀವು ಕಂಪನಿಯನ್ನು ಬಿಡುವಾಗ ಇದು ರದ್ದಾಗುತ್ತದೆ.

 ಆದರೆ, ನೀವು ನಿಮಗೆ ನಿಮ್ಮ ವೈಯಕ್ತಿಕ ತೆರಿಗೆ ಉಳಿತಾಯಾಗಳಲ್ಲಿ ಸಹಾಯ ಮಾಡುವ ಹಾಗೂ  ಹೆಚ್ಚುವರಿ  ಹೆಲ್ತ್   ಆರೈಕೆ ಲಾಭಗಳನ್ನು ನೀಡುವ ವೈಯಕ್ತಿಕ  ಹೆಲ್ತ್   ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬಹುದು.

ನಾನು ಒಂದೇ ಸಮಯದಲ್ಲಿ ಕಾರ್ಪೋರೇಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಹಾಗೂ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಎರಡನ್ನೂ ಹೊಂದಬಹುದೇ?

ಹೌದು, ಈಗಾಗಲೇ ವಿವರಿಸಿದಂತೆ ನೀವು ಒಂದೇ ಸಮಯದಲ್ಲಿ ಖಂಡಿತವಾಗಿಯೂ ಕಾರ್ಪೋರೇಟ್  ಹೆಲ್ತ್   ಇನ್ಶೂರೆನ್ಸ್ ಪಾಲಿಸಿ ಹಾಗೂ ವೈಯಕ್ತಿಕ  ಹೆಲ್ತ್   ಇನ್ಶೂರೆನ್ಸ್ ಪಾಲಿಸಿ ಎರಡನ್ನೂ ಹೊಂದಬಹುದು.

ಬೆಲೆಗೆ ಸಂಬಂಧಿಸಿದಂತೆ ನೌಕರ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಹೇಗೆ ಲಾಭದಾಯಕವಾಗಿವೆ?

ನೌಕರ  ಹೆಲ್ತ್   ಇನ್ಶೂರೆನ್ಸ್ ಯೋಜನೆಗಳ ಬೆಲೆಯು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ ಯಾಕೆಂದರೆ ಪ್ರತೀ ಕಂಪನಿಯಲ್ಲೂ ನೌಕರರ ಸಂಖ್ಯೆ ಭಿನ್ನವಿರುತ್ತದೆ. ಒಂದು ನೌಕರ  ಹೆಲ್ತ್   ಇನ್ಶೂರೆನ್ಸ್ ಯೋಜನೆ

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನ ಪ್ರೀಮಿಯಂ ನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ಒಂದು ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ನ ಪ್ರೀಮಿಯಂ ಅನ್ನು ನೌಕರರ ಸಂಖ್ಯೆ, ಅವರ ವಯಸ್ಸುಗಳು, ಸ್ಥಳ ಹಾಗೂ, ನಿಮ್ಮ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಯೋಜನೆಯ ಪ್ರಕಾರ, ಅವರು ಎಷ್ಟು ಅವಲಂಬಿತರನ್ನು ಸೇರಿಸಲು ಬಯಸುತ್ತಾರೆ ಇದರ ಆಧಾರದ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನ ಇತಿಮಿತಿಗಳೇನು?

ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಉದ್ಯೋಗದಾತ ಹಾಗೂ ನೌಕರ, ಇಬ್ಬರಿಗೂ ಲಾಭದಾಯಕವಾಗಿದ್ದರೂ, ಇದರ ಇಂದು ದೊಡ್ಡ ಮಿತಿಯೇನೆಂದರೆ, ಒಬ್ಬ ನೌಕರನಿಗೆ ಸಂಬಂಧಿಸಿದಂತೆ ಅವನ ಎಲ್ಲಾ  ಹೆಲ್ತ್   ಆರೈಕೆಗಳ ಅಗತ್ಯಗಳನ್ನು ಕವರ್ ಮಾಡಲು ಈ ಕವರ್ ಸಾಕಾಗದೇ ಇರಬಹುದು, ಕಾರಣ ಎಲ್ಲಾ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಯೋಜನೆಗಳು ಸೀಮಿತ ಹಾಗು ಸಾರ್ವತ್ರಿಕ ಸ್ವಭಾವದ್ದಾಗಿರುತ್ತವೆ, ವೈಯಕ್ತಿಕ  ಹೆಲ್ತ್  ಆರೈಕೆಯ ಅಗತ್ಯಗಳ ಪ್ರಕಾರ ಕಸ್ಟಮೈಜ್ ಆಗಬಲ್ಲ ವೈಯಕ್ತಿಕ  ಹೆಲ್ತ್  ಇನ್ಶೂರೆನ್ಸ್ ಯೋಜನೆಗಳ ಹಾಗಲ್ಲ. 

 

ಆದರೆ, ಇದಕ್ಕೆ ಉತ್ತಮ ಪರಿಹಾರವೇನೆಂದರೆ ಗ್ರೂಪ್ ಹೆಲ್ತ್   ಇನ್ಶೂರೆನ್ಸ್ ಯೋಜನೆ ಹಾಗೂ ವೈಯಕ್ತಿಕ  ಹೆಲ್ತ್   ಇನ್ಶೂರೆನ್ಸ್ ಯೋಜನೆ ಎರಡನ್ನೂ ಹೊಂದಿರುವುದು, ಯಾಕೆಂದರೆ ಇದು ನಿಮ್ಮ  ಹೆಲ್ತ್ ಕೇರ್  ಅಗತ್ಯಗಳು ಹಾಗೂ ತೆರಿಗೆ ಉಳಿತಾಯ ಎರಡರಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

 

ಅಲ್ಲಗಳೆತ : ಈ ಮಾಹಿತಿಯು, ಡಿಜಿಟ್ ಹೆಲ್ಥ್ ಪ್ಲಸ್ ಪಾಲಿಸಿ(ಪರಿಷ್ಕರಣೆ) ಹಾಗೂ ಡಿಜಿಟ್ ಗ್ರೂಪ್ಇನ್ಶೂರೆನ್ಸ್ ಪಾಲಿಸಿ ಆರಂಭದಿಂದ 13 ಸೆಪ್ಟೆಂಬರ್ 2021 ವರೆಗೆ, ಇದರಡಿಯಲ್ಲಿ ಕವರ್ ಆದ ಸದಸ್ಯರನ್ನು ಒಳಗೊಂಡಿದೆ.