ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪೋರ್ಟ್ ಮಾಡಿಸಲು ನೀವು ಪರಿಗಣಿಸಬೇಕಾದ 9 ಕಾರಣಗಳು ಇಲ್ಲಿವೆ:
1. ಉತ್ತಮ ಇನ್ಶೂರೆನ್ಸ್ ಪೂರೈಕೆದಾರರನ್ನು ಪಡೆಯಿರಿ
ಅನೇಕ ಬಾರಿ, ಪೋರ್ಟಿಂಗ್ಗೆ ಕಾರಣವೆಂದರೆ ಇನ್ಶೂರೆನ್ಸ್ ಪೂರೈಕೆದಾರರ ಕಳಪೆ ಸೇವೆ ಅಥವಾ ಅವರ ಉತ್ಪನ್ನದ ಬಗ್ಗೆ ಗ್ರಾಹಕರಿಗಿರುವ ಅತೃಪ್ತಿ. ಪೋರ್ಟೆಬಿಲಿಟಿ ನಿಮಗೆ ಉತ್ತಮ ಸೇವೆ ಮತ್ತು ಪ್ಲ್ಯಾನ್ನೊಂದಿಗೆ ಉತ್ತಮ ಇನ್ಶೂರರ್ ಅನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತದೆ.
ನೀವು ಯಾಕೆ ಅತೃಪ್ತರಾಗಿದ್ದೀರಿ ಎಂಬುದು ನಿಮಗೀಗ ತಿಳಿದಿದೆ. ಅದಕ್ಕಾಗಿ ತನ್ನ ಅತ್ಯುತ್ತಮ ಸೇವೆಗಳಿಂದಲೇ ಗುರುತಿಸಲ್ಪಟ್ಟ, ಇಂಡಸ್ಟ್ರಿಯ ಅತ್ಯುತ್ತಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡಿ. ಅವರ ಉತ್ಪನ್ನವನ್ನು ಸಂಪೂರ್ಣವಾಗಿ ಚೆಕ್ ಮಾಡುವಿರಿ ಎಂದು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ, ಇನ್ಶೂರೆನ್ಸ್ ಕಂಪನಿಯಿಂದ ಉಂಟಾದ ಅಸಮಾಧಾನವು ಅವರ ನಿಧಾನವಾದ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯ ಕಾರಣದಿಂದಾಗಿರುತ್ತದೆ. ಆದ್ದರಿಂದ, ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಚೆಕ್ ಮಾಡಿ.
2. ಹೆಚ್ಚು ಸ್ಪರ್ಧಾತ್ಮಕವಾದ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಡೆಯಿರಿ
ಕೋವಿಡ್ ನಂತರ, ಅನೇಕ ಇನ್ಶೂರೆನ್ಸ್ ಕಂಪನಿಗಳು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ದರಗಳನ್ನು ಹೆಚ್ಚಿಸಿದ್ದಾರೆ. ಆದ್ದರಿಂದ, ಕಳೆದ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೂ ಸಹ, ರಿನೀವಲ್ ಸಮಯದಲ್ಲಿ ನಿಮ್ಮ ಪ್ರೀಮಿಯಂ ಏರಿರುವುದನ್ನು ನೀವು ನೋಡಿದ್ದೀರಿ. ಪೋರ್ಟೆಬಿಲಿಟಿ ಆಯ್ಕೆಗೆ ಧನ್ಯವಾದಗಳು. ಏಕೆಂದರೆ ನೀವು ಈಗ ಈ ಹೆಚ್ಚಾದ ಮೊತ್ತವನ್ನು ಪಾವತಿಸಲು ಬದ್ಧರಾಗಿಲ್ಲ.
ಪ್ರತಿ ದಿನ ಬೆಳೆಯುತ್ತಿರುವ ಇನ್ಶೂರೆನ್ಸ್ ಪೂರೈಕೆದಾರರ ಸಂಖ್ಯೆ ಮತ್ತು ಮಾರ್ಕೆಟ್ನಲ್ಲಿ ಹೆಚ್ಚಿದ ಸ್ಪರ್ಧೆಯೊಂದಿಗೆ, ಇನ್ಶೂರೆನ್ಸ್ ಕಂಪನಿಗಳ ಗ್ರಾಹಕರನ್ನು ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಆದ್ದರಿಂದ, ಅವರು ಡಿಸ್ಕೌಂಟ್ಗಳು ಮತ್ತು ಹಲವಾರು ಇತರ ಪ್ರಯೋಜನಗಳನ್ನು ನೀಡುತ್ತಲೇ ಇರುತ್ತಾರೆ.
ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಪೋರ್ಟ್ ಮಾಡಿದಾಗ, ನಿಮ್ಮ ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಕಂಪನಿಗಿಂತ ಕಡಿಮೆ ಪ್ರೀಮಿಯಂನಲ್ಲಿ ನೀವು ಬಯಸಿದ ಪ್ರಯೋಜನಗಳನ್ನು ಪಡೆಯುವ ಅವಕಾಶಗಳು ಹೆಚ್ಚಿವೆ.
3. ಆಸ್ಪತ್ರೆಗಳ ವ್ಯಾಪಕ ನೆಟ್ವರ್ಕ್ ಹೊಂದಿರುವ ಇನ್ಶೂರರ್ಗೆ ಬದಲಾಗಿ
ಎಂಪನೆಲ್ಡ್ ಆಸ್ಪತ್ರೆಗಳ ವ್ಯಾಪಕ ನೆಟ್ವರ್ಕ್ ಎಂದರೆ ನಾವು ಯಾವುದೇ ಹೆಲ್ತ್ ಎಮರ್ಜೆನ್ಸಿಗಾಗಿ ಆಸ್ಪತ್ರೆಯನ್ನು ಪ್ರವೇಶಿಸಿದಾಗ ಕ್ಯಾಶ್ಲೆಸ್ ಸೇವೆಯ ಉತ್ತಮ ಲಭ್ಯತೆಯಿದೆ ಎಂದರ್ಥ.
ರಿಇಂಬರ್ಸ್ಮೆಂಟ್ ಕ್ಲೈಮ್ಗಳಲ್ಲಿ ಅಗತ್ಯವಿರುವಂತೆ ಮೆಡಿಕಲ್ ಎಮರ್ಜೆನ್ಸಿಯನ್ನು ನಿಭಾಯಿಸಲು ಮತ್ತು ಆನಂತರ ಅದನ್ನು ಕ್ಲೈಮ್ ಮಾಡಲು ಜನರಿಗೆ ಯಾವಾಗಲೂ ಹಣಕಾಸಿನ ಲಭ್ಯತೆಯಿರುವುದಿಲ್ಲ. ಆದಾಗ್ಯೂ, ಮೆಡಿಕಲ್ ಎಮರ್ಜೆನ್ಸಿಯು ಸದ್ಯಕ್ಕೆ ನಮ್ಮ ಜೇಬಿಗೆ ಕತ್ತರಿ ಹಾಕುವುದಿಲ್ಲ ಎಂಬುದನ್ನು ಕ್ಯಾಶ್ಲೆಸ್ ಕ್ಲೈಮ್ನ ಲಭ್ಯತೆಯು ಖಚಿತಪಡಿಸುತ್ತದೆ. ಹೀಗಾಗಿ, ಹಣಕಾಸನ್ನು ವ್ಯವಸ್ಥೆ ಮಾಡುವುದರ ಬಗ್ಗೆ ಚಿಂತಿಸುವುದಕ್ಕಿಂತಲೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಮೇಲೆ ನಾವು ಗಮನ ಹರಿಸಬಹುದು.
4. ಉತ್ತಮ ಕ್ಲೈಮ್ ಸೆಟಲ್ಮೆಂಟ್ ಅನುಪಾತ ಹೊಂದಿರುವ ಇನ್ಶೂರರ್ಗೆ ಬದಲಾಗುವ ಆಯ್ಕೆ
ಈಗ ನೀವು ನಿಮ್ಮ ಪಾಲಿಸಿಯನ್ನು ಉತ್ತಮ ಇನ್ಶೂರೆನ್ಸ್ ಪೂರೈಕೆದಾರರಿಗೆ ಪೋರ್ಟ್ ಮಾಡುತ್ತಿದ್ದೀರಿ, ಹಾಗಾಗಿ ಅವರ ಕ್ಲೈಮ್ ಅನುಪಾತವನ್ನು ಚೆಕ್ ಮಾಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕ್ಲೈಮ್ ಸೆಟಲ್ಮೆಂಟ್ ಅನುಪಾತವು ಒಂದು ನಿರ್ದಿಷ್ಟ ಅವಧಿಯಲ್ಲಿ ಸ್ವೀಕರಿಸಿದ ಒಟ್ಟು ಕ್ಲೈಮ್ಗಳಲ್ಲಿ, ಇನ್ಶೂರೆನ್ಸ್ ಕಂಪನಿಯು ಇತ್ಯರ್ಥಪಡಿಸಿದ ಕ್ಲೈಮ್ಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ. ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವು, ಕ್ಲೈಮ್ಗಳನ್ನು ಇತ್ಯರ್ಥಪಡಿಸುವ ವಿಷಯದಲ್ಲಿ ಕಂಪನಿಯು ವಿಶ್ವಾಸಾರ್ಹವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಇದು ಇನ್ಶೂರರ್ಗಳ ವಿಶ್ವಾಸಾರ್ಹತೆಯ ಮಾನದಂಡವಾಗಿದೆ ಮತ್ತು ಗ್ರಾಹಕರತ್ತ ಅವರಿಗಿರುವ ಕಾಳಜಿಯನ್ನು ಸೂಚಿಸುತ್ತದೆ.
ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವಿರುವ ಇನ್ಶೂರರ್ಗಳನ್ನು ಆಯ್ಕೆ ಮಾಡುವ ಮೂಲಕ, ಅಗತ್ಯವಿರುವ ಸಮಯದಲ್ಲಿ ತ್ವರಿತ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯ ಬಗ್ಗೆ ನಿಮಗೆ ಭರವಸೆ ನೀಡಬಹುದು.
5. ನಿಮ್ಮ ಕ್ಯುಮುಲೇಟಿವ್ ಬೋನಸ್ ಅನ್ನು ಮುಂದಕ್ಕೆ ಕೊಂಡೊಯ್ಯಿರಿ
ನೀವು ಆರೋಗ್ಯವಂತರಾಗಿರುವುದಕ್ಕೆ ರಿವಾರ್ಡ್ ನೀಡಲಾಗುತ್ತದೆ, ಅದೇ ಕ್ಯುಮುಲೇಟಿವ್ ಬೋನಸ್. ಮತ್ತು ಪೋರ್ಟಿಂಗ್ ಸಮಯದಲ್ಲಿ ನೀವು ಆ ರಿವಾರ್ಡ್ ಅನ್ನು ಬಿಟ್ಟುಕೊಡುವ ಅಗತ್ಯವಿಲ್ಲ. ಈ ಫೀಚರ್ ಪೋರ್ಟಿಂಗ್ನ ಪ್ರಮುಖ ಫೀಚರ್ಗಳಲ್ಲಿ ಒಂದಾಗಿದ್ದು, ನಿಮ್ಮ ಹೊಸ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ನಿಮ್ಮ ಕ್ಯುಮುಲೇಟಿವ್ ಬೋನಸ್ ಅನ್ನು ಸೇರಿಸಲಾಗುತ್ತದೆ.
6. ನಿಮ್ಮ ಕಾಯುವ ಅವಧಿಯಲ್ಲಿ ನಿರಂತರತೆಯ ಪ್ರಯೋಜನವನ್ನು ಆನಂದಿಸಿ
ಕೆಲವು ನಿರ್ದಿಷ್ಟ ಕಾಯಿಲೆಗಳು ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ವ್ಯಕ್ತಿಯೊಬ್ಬನು ಹೆಲ್ತ್ ಇನ್ಶೂರೆನ್ಸ್ ಕವರೇಜಿನ ಪ್ರಯೋಜನಗಳನ್ನು ಪಡೆಯುವ ಮೊದಲು ನಿಗದಿತ ಕಾಯುವ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಪೋರ್ಟಿಂಗ್ನ ಒಂದು ದೊಡ್ಡ ಪ್ರಯೋಜನವೆಂದರೆ ನಿಮ್ಮ ಕಾಯುವ ಅವಧಿಯನ್ನು ಕೂಡ ಬಾಧಿಸದೆ, ನೀವು ಉತ್ತಮ ಪಾಲಿಸಿಯನ್ನು ಪಡೆಯಬಹುದು. ಉದಾಹರಣೆಗೆ, ನಿಮ್ಮ ಪ್ರಸ್ತುತ ಪಾಲಿಸಿಯಲ್ಲಿ ನಿರ್ದಿಷ್ಟ ಕಾಯಿಲೆಗಾಗಿ ಕಾಯುವ ಅವಧಿಯು 4 ವರ್ಷಗಳು ಇದ್ದು, ಮತ್ತು ನೀವು 3 ವರ್ಷಗಳನ್ನು ಪೂರ್ಣಗೊಳಿಸಿದ್ದೀರಿ. ಈಗ, ನಿಮ್ಮ ಪಾಲಿಸಿಯನ್ನು ನೀವು ಪೋರ್ಟ್ ಮಾಡಿದಾಗ, ಹೊಸ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ನೀವು ಕೇವಲ ಒಂದು ವರ್ಷದ ಕಾಯುವ ಅವಧಿಯನ್ನು ಮಾತ್ರ ಪೂರ್ಣಗೊಳಿಸಬೇಕಾಗುತ್ತದೆ.
7. ನಿಮ್ಮ ಪಾಲಿಸಿಯನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯ
ಪೋರ್ಟೆಬಿಲಿಟಿಯೊಂದಿಗೆ, ನಿಮ್ಮ ಅಗತ್ಯಗಳಿಗೆ ತಕ್ಕಂತೆ ನಿಮ್ಮ ಹೊಸ ಪಾಲಿಸಿಯನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ಆದ್ದರಿಂದ ಈಗ ನೀವು ನಾಮಿನಿಯನ್ನು ಬದಲಾಯಿಸಬಹುದು, ಸಮ್ ಇನ್ಶೂರ್ಡ್ ಅನ್ನು ಹೆಚ್ಚಿಸಬಹುದು ಮತ್ತು ಅಗತ್ಯವಿದ್ದರೆ ನಿರ್ದಿಷ್ಟ ಕಾಯಿಲೆಯ ಮೇಲೆ ಗಮನಹರಿಸಲು ನಿಮ್ಮ ಪ್ಲ್ಯಾನ್ ಅನ್ನು ಬದಲಾಯಿಸಬಹುದು. ನಿಮ್ಮ ಪಾಲಿಸಿಯನ್ನು ಒಂದು ಇನ್ಶೂರೆನ್ಸ್ ಕಂಪನಿಯಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಈ ಯಾವುದೇ ಕಸ್ಟಮೈಸೇಶನ್ಗಳನ್ನು ಮಾಡಬಹುದು. ಆದಾಗ್ಯೂ, ಈ ಫೀಚರ್ ಹೆಚ್ಚಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಅವಲಂಬಿತಸಿರುತ್ತದೆ.
8. ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾದ ಉತ್ತಮ ಫೀಚರ್ಗಳನ್ನು ಪಡೆಯಿರಿ
ವಿಭಿನ್ನ ಇನ್ಶೂರೆನ್ಸ್ ಕಂಪನಿಗಳು ನೀಡುವ ಒಂದೇ ರೀತಿಯ ಪ್ಲ್ಯಾನ್ಗಳು ಅವರು ನೀಡುವ ಫೀಚರ್ಗಳಲ್ಲಿ ಭಿನ್ನವಾಗಿರಬಹುದು. ಕೆಲವರು ನೋ ರೂಮ್ ರೆಂಟ್ ಕ್ಯಾಪಿಂಗ್, ರೋಡ್ ಆಂಬ್ಯುಲೆನ್ಸ್ ಕವರ್ನಂತಹ ನಿರ್ದಿಷ್ಟ ಫೀಚರ್ಗಳನ್ನು ನೀಡಬಹುದು ಮತ್ತು ಇತರರು ಏರ್ ಆಂಬ್ಯುಲೆನ್ಸ್ ಕವರ್ ಅಥವಾ ರಿಸ್ಟೋರೇಶನ್ ಬೆನಿಫಿಟ್ನಂತಹ ಇತರ ಫೀಚರ್ಗಳನ್ನು ನೀಡಬಹುದು. ಪೋರ್ಟೆಬಿಲಿಟಿಯು ನಿಮ್ಮ ಆಯ್ಕೆಗಳನ್ನು ಎಚ್ಚರಿಕೆಯಿಂದ ನೋಡಲು ಅವಕಾಶ ಮಾಡಿಕೊಡುತ್ತದೆ ಮತ್ತು ನಂತರ ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾದ ಪ್ಲ್ಯಾನ್ಗಳನ್ನು ಅಂತಿಮಗೊಳಿಸುತ್ತದೆ.
9. ಹೆಚ್ಚು ಪಾರದರ್ಶಕ ಸರ್ವೀಸ್ ಪ್ರೊವೈಡರ್ಗಳನ್ನು ಪಡೆಯಲು ನಿಮಗೆ ಅವಕಾಶ
ಇನ್ಶೂರೆನ್ಸ್ ಖರೀದಿಸಲು ಬಯಸುವವರಿಗೆ ಆಗಾಗ ಅಸಮಾಧಾನವನ್ನು ಉಂಟುಮಾಡುವ ಅಂಶವೆಂದರೆ, ಇನ್ಶೂರೆನ್ಸ್ ಕಂಪನಿಗಳು ತಮ್ಮ ನಿಬಂಧನೆಗಳು ಮತ್ತು ಷರತ್ತುಗಳನ್ನು ಮರೆಮಾಡಿದ್ದಾರೆ ಎಂದು ಅವರು ಭಾವಿಸುತ್ತಾರೆ, ನೀವು ಅವರೊಂದಿಗೆ ಕೆಲವು ಕ್ಲೈಮ್ ಉದಾಹರಣೆಗಳನ್ನು ಹೊಂದಿರುವಾಗ ಹೀಗನ್ನಿಸಬಹುದು. ಈಗ ನೀವು ಪೋರ್ಟ್ ಮಾಡುತ್ತಿದ್ದೀರಿ, ಪಾರದರ್ಶಕ ಅಭ್ಯಾಸಗಳು ಮತ್ತು ಷರತ್ತುಗಳನ್ನು ಹೊಂದಿರುವ ಇನ್ಶೂರೆನ್ಸ್ ಕಂಪನಿಯ ಬಗ್ಗೆ ರಿಸರ್ಚ್ ಮಾಡಲು ಮತ್ತು ಆಯ್ಕೆ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಅವರ ಇನ್ಶೂರೆನ್ಸ್ ವಿಧಾನದಲ್ಲಿ ಹೆಚ್ಚು ಡಿಜಿಟಲ್ ಆಗಿರುವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡಿ. ಇದು ಉತ್ತಮ ಪಾರದರ್ಶಕತೆ ಮತ್ತು ಸುಗಮ ಸರ್ವೀಸ್ ಅನುಭವವನ್ನು ಖಾತ್ರಿಗೊಳಿಸುತ್ತದೆ.
ಹೀಗಾಗಿ, ಪೋರ್ಟೆಬಿಲಿಟಿ ಎನ್ನುವುದು ಒಂದು ಉತ್ತಮ ಫೀಚರ್ ಆಗಿದ್ದು ಅದು ನಿಮ್ಮ ಆರೋಗ್ಯದ ಅಗತ್ಯತೆಗಳಿಗೆ ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೆಲ್ತ್ ಕವರೇಜನ್ನು ಅಡೆತಡೆಯಿಲ್ಲದೆ ನಡೆಯುವಂತೆ ಮಾಡುತ್ತದೆ.